ದಿನಾಂಕ 05.12.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 5 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-11-14ರಂದು ಪಿರ್ಯಾಧಿದಾರರಾದ ಶ್ರೀ ಕೆ. ಮಯ್ಯದ್ದಿ ರವರು ಅವರ ತಮ್ಮ ಉಸ್ಮಾನ್ ರವರೊಂದಿಗೆ ಸ್ಕೂಟರ್ ನಂಬ್ರ ಸಿಕೆಡಬ್ಲ್ಯೂ 7112 ನೇದರಲ್ಲಿ ಎನ್.ಹೆಚ್-66ರಲ್ಲಿ ಉಸ್ಮಾನ್ ಸವಾರರಾಗಿಯೂ ಪಿರ್ಯಾಧಿದಾರರು ಸಹ ಸವಾರರಾಗಿಯೂ ಕಾವೂರು ಕಡೆಯಿಂದ ಸುರತ್ಕಲ್ ಕಡೆಗೆ ಹೋಗುತ್ತಾ ಬೆಳಿಗ್ಗೆ ಸುಮಾರು 11:00 ಗಂಟೆಗೆ ಕುಳಾಯಿ ಸಮೃದ್ದಿ ಬಾರಿನ ಬಳಿಗೆ ತಲುಪಿದಾಗ ಅವರ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆಎ-19-ಎಮ್.ಸಿ-6583 ನಂಬ್ರದ ಕಾರನ್ನು ಅದರ ಚಾಲಕ ರಾಜೇಂದ್ರ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರಿದ್ದ ಸ್ಕೂಟರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿನ ಬಲಗಡೆ ಹ್ಯಾಂಡಲ್ ಗೆ ತಾಗಿ ಇಬ್ಬರೂ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾಧಿಗೆ ಅಲ್ಪ ಗಾಯವಾಗಿ ಸವಾರರಾದ ಕೆ.ಉಸ್ಮಾನ್ ರವರ ತಲೆಗೆ ಗಂಭೀರ ತರದ ಗಾಯವಾಗಿ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಚಿಕತ್ಸೆಯಲ್ಲಿ ಇರುವುದಾಗಿಯೂ. ಕಾರು ಚಾಲಕನು ಆಸ್ಪತ್ರೆಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದವರು ಆಸ್ಪತ್ರೆಗೂ ಬಾರದೆ ಚಿಕಿತ್ಸಾ ವೆಚ್ಚವನ್ನು ನೀಡದೆ ತೊಂದರೆ ನೀಡಿರುವುದಾಗಿದೆ.
2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-12-14ರಂದು 09:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ರಮ್ಲತ್ ರವರು ಆಸಿಫ್ ಎಂಬವರೊಂದಿಗೆ ಸಹ ಸವಾರಳಾಗಿ ಮೋಟಾರು ಸೈಕಲು ನಂಬ್ರ ಕೆಎ-19-ಇಜೆ-4181ನೇದರಲ್ಲಿ ಜೋಕಟ್ಟೆಯಿಂದ ಮಂಗಳೂರಿಗೆ ಬರುತ್ತಾ ಅದಾನಿ ಕಂಪೆನಿಯ ಬಳಿಗೆ ತಲುಪಿದಾಗ ಸವಾರ ಆಸಿಫ್ ರವರು ತನ್ನ ಬಾಬ್ತು ಬೈಕನ್ನು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಆತನಿಗೆ ಬೈಕ್ ಮೇಲಿನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದ ಪರಿಣಾಮ ಹಿಂದುಗಡೆ ಕುಳಿತಿದ್ದ ಪಿರ್ಯಾಧಿದಾರರಿಗೆ ಬಲ ಕೆನ್ನಗೆ, ತಲೆಯ ಹಿಂದೆ ತೀವ್ರ ತರಹದ ರಕ್ತ ಗಾಯವಾಗಿರುತ್ತದೆ ಹಾಗು ಮೋಟಾರು ಸೈಕಲ್ ಕೂಡಾ ಜಖಂಗೊಂಡಿರುತ್ತದೆ. ಗಾಯಗೊಂಡು ಮಾತನಾಡಲಾಗದ ಸ್ಥಿತಿಯಲ್ಲಿದ್ದ ಪಿರ್ಯಾಧಿದಾರರು ಐ.ಸಿ.ಯು ನಲ್ಲಿ ಚಿಕಿತ್ಸೆಯಲ್ಲಿದ್ದುದರಿಂದ ದೂರು ಕೊಡಲು ತಡವಾಗಿರುತ್ತದೆ.
3.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಘುಪತಿ ನಾಯ್ಕ್ ರವರು ತಾನು ನಿರ್ವಹಕರಾಗಿ ಕೆಲಸ ಮಾಡುತ್ತಿರುವ ಕೆ.ಎಸ್.ಅರ್ .ಟಿ ಸಿ ಬಸ್ ನಂ ಕೆಎ-01-ಎಫ್ .2123 ನೇದರಲ್ಲಿ ಬಸಯ್ಯ ಎಂಬ ಚಾಲಕರು ಸ್ಟೇಟ್ ಬ್ಯಾಂಕ್ ನಿಂದ ಮಣೆಪಾಲದ ವರೆಗೆ ಫಾರ್ಮಿಟ್ ಹೊಂದಿದ್ದು ದಿನಾಂಕ 04-12-2014 ರಂದು ಬೆಳಿಗ್ಗೆ 10.30 ಗಂಟೆಗೆ ಎನ್.ಎಂ.ಪಿ.ಟಿ ಮ್ಯೆನ್ ಗೇಟ್ ಬಳಿ ತಲುಪಿದಾಗ ಹಿಂದಿನಿಂದ ಕೆಎ.19-ಎಸಿ -4849 ನೇ ನಂಬ್ರದ ಬಸ್ಸ್ ನ್ನು ಅದರ ಚಾಲಕ ಮಹಮ್ಮದ್ ಇಸ್ಮಾಯಿಲ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಕೆ.ಎಸ್.ಆರ್.ಟಿಸಿ ಬಸ್ಸಿನ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮುಂಭಾಗ ಜಖಂಗೊಂಡಿದ್ದು ಆ ಬಸ್ಸಿನಲ್ಲಿ ಇದ್ದ ಮೊಹಮ್ಮ,ದ್ ಹಾಜಿ ಎಂಬವರ ಮುಖಕ್ಕೆ, ಗಂಗಯ್ಯ ಎಂಬವರ ಮುಖಕ್ಕೆ ಗಾಯವಾಗಿ ಹಲ್ಲು ಕಿತ್ತುಹೋಗಿದ್ದು, ಹರೀಶ್ ಎಂಬವರ ಮುಖಕ್ಕೆ ಮತ್ತು ಶುಭ ಎಂಬವರ ತುಟ್ಟಿಗೆ ಗಾಯವಾಗಿದ್ದು ಅವರುಗಳು ಮಂಗಳೂರು ಎಸ್.ಸಿ.ಎಸ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
4.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-12-2014 ರಂದು ಮದ್ಯಾಹ್ನ 12-00 ಗಂಟೆ ಸಮಯಕ್ಕೆ ಘನ ನ್ಯಾಯಾಲಯದ ಪರಿಮಿತಿಯ ಪಣಂಬೂರು ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಹಸನಾಜಿ ಗೋಡನ್ ನಂ 03 ರಲ್ಲಿ ಪಿರ್ಯಾದಿದಾರರಾದ ಶ್ರೀ ಚನ್ನಪ್ಪಾ ರವರ ಜೊತೆಯಲ್ಲಿ ಕೆ ಎ 02 ಎಬಿ-6688 ನೇ ಘನ ಲಾರಿಯಿಂದ ಮೆಕ್ಕೆ ಜೋಳವನ್ನು ಅನ್ ಲೋಡ್ ಮಾಡುವ ಕೆಲಸದಲ್ಲಿ ನಿರತನಾದ ಮಂಜುನಾಥನು ಮೆಕ್ಕಜೋಳ ಹೊತ್ತುಕೊಂಡು ಲಾರಿಯ ಪ್ಲಾಟ್ ಫಾರಂ ನಲ್ಲಿ ಬರುತ್ತಿದ್ದಂತೆ ಲಾರಿಯ ಪ್ಲಾಟ್ ಫಾರಂ ಮದ್ಯದ ಹಲಗೆ ತುಂಢಾಗಿ ಮೂಟೆ ಸಮೇತ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಮಂಜುನಾಥನನ್ನು ಎ. ಜೆ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಆ ಸಮಯ ಲಾರಿ ಚಾಲಕ ಗಾಯಳುವಿನ ಚಿಕಿತ್ಸ ವೆಚ್ಚ ನೀಡುವುದಾಗಿ ತಿಳಿಸಿ ಬಳಿಕ ಚಿಕಿತ್ಸಾ ವೆಚ್ಚ ನೀಡಲು ಹಿಂಜರಿದಾಗ ಪ್ರಕರಣ ದಾಖಲಿಸುವರೇ ತಡವಾಗಿ ಪಿರ್ಯಾದಿ ನೀಡಿರುವುದಾಗಿದೆ.
5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04/12/2014 ರಂದು ಸಂಜೆ 3.45 ಗಂಟೆ ಸಮಯಕ್ಕೆ ಖಚಿತ ಮಾಹಿತಿಯಂತೆ ಪಿರ್ಯಾದಿದಾರರಾದ ಸಿಸಿಬಿ ಮಂಗಳೂರು ಘಟಕದ ಪೊಲೀಸ್ ನಿರೀಕ್ಷರಾದ ಶ್ರೀ ವೆಲೆಂಟೆನ್ ಡಿ'ಸೋಜಾರವರು ಸಿಬ್ಬಂದಿಗಳಾದ ಪಿ ಎಸ್ ಐ ಶ್ಯಾಮ್ ಸುಂದರ್ , ಹೆಚ್.ಸಿ. ಗಳಾ 1355, 1706, 1146, 1484, ಪಿಸಿ ಗಳಾದ 2202, 899, 611, 445, 450 ಮತ್ತು ಚಾಲಕ ಎ ಹೆಚ್ ಸಿ 83 ನೇಯವರೊಂದಿಗೆ ಇಲಾಖಾ ವಾಹನ ಕೆ ಎ 19 ಜಿ 641 ರಲ್ಲಿ ಮತ್ತು ಖಾಸಗಿ ವಾಹನದಲ್ಲಿ ಪಂಚರೊಂದಿಗೆ ಮಾನ್ಯ ನ್ಯಾಯಾಲಯದ ಪರಿಮಿತಿಯ ಪಣಂಬೂರು ಗ್ರಾಮದ ಜಿ ಎಮ್ ಆರ್ ಸಭಾಭವನದ ಎದುರು ಹೋಗುತ್ತಿದ್ದಂತೆ 7-8 ಯುವಕರು ಪಿರ್ಯಾದಿದಾರರನ್ನು ಕಂಡು ಓಡಲೆತ್ನಿಸಿದಾಗ ಸಿಬ್ಬಂದಿಯೊಂದಿಗೆ ಬೆನ್ನಟ್ಟಿ ಹಿಡಿದು ಅವರುಗಳ ಹೆಸರು ಕೇಳಲಾಗಿ 1 ಮನೋಜ್ 2 ರಾಘವೇಂದ್ರ ಯಾನೆ ರಾಘು 3 ಸಂತೋಷ ಪೂಜಾರಿ ಯಾನೆ ಪೋರ್ಲು ಸಂತು, 4 ಭರತೇಶ್ 5 ನವೀನ್ ಯಾನೆ ಮೈಕಲ್, 6 ಸಂದೇಶ್ ಕರ್ಕೇರಾ 7 ಚೇತನ್ ಯಾನೆ ಅನ್ನು ಮತ್ತು 8. ವರ್ಣಿತ್ ಶೆಟ್ಟಿ ಎಂಬುವರುಗಳಾಗಿದ್ದು ಅವರುಗಳನ್ನು ಕೂಲಂಕುಷ ವಿಚಾರಿಸಿದಲ್ಲಿ ಅವರುಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರನಾದ ವಿಜೇಂದ್ರ ಭಟ್ ಎಂಬುವರಿಗೆ ಶೂಟ್ ಔಟ್ ಮಾಡಿದ ಆರೋಪಿಗಳ ಪೈಕಿ ಸೂರಿಂಜೆಯ ಸತೀಶ್ ಯಾನೆ ಸಚ್ಚು ಎಂಬಾತನೊಂದಿಗೆ ಸೇರಿ ಒಳ ಸಂಚು ರೂಪಿಸಿ ಮಂಗಳೂರು ನಗರದ ಶ್ರೀಮಂತ ವ್ಯಕ್ತಿಯೊಬ್ಬರ ಸಂಪತ್ತ್ ನ್ನು ದರೋಡೆ ಮಾಡಿ ರವಿ ಪೂಜಾರಿಯ ಸಹಚರ ಭರತೇಶನನ್ನು ಕೊಲೆ ಮಾಡುವ ಸಂಚು ಹೊಂದಿರುವುದಾಗಿ ತಿಳಿಸಿದಂತೆ ಅವರುಗಳನ್ನು ಅಂಗ ಜಪ್ತಿ ಮಾಡಲಾಗಿ ಅವರುಗಳಲ್ಲಿ 4 ತಲವಾರು, 3 ಚೂರಿ, 1 ಕತ್ತಿ 1 ಪ್ಯಾಕೇಟ್ ಮೆಣಸಿನ ಪುಡಿ, 8 ಮೊಬೈಲ್ ಮತ್ತು 15.590/- ರೂಪಾಯಿ ನಗದನ್ನು ಮಹಜರು ಮೂಲಕ ಸ್ಥಳದಲ್ಲಿಯೇ ಸ್ವಾಧೀನ ಪಡಿಸಿ ಆರೋಪಿಗಳು ಸಮಾನ ಉದ್ದೇಶದಿಂದ ವ್ಯಕ್ತಿಯೊರ್ವನನ್ನು ದರೋಡೆ ಮಾಡಿ ನಂತರ ಭರತೇಶ ಎಂಬವನನ್ನು ಕೊಲೆ ಮಾಡುವ ಅಪಾಯಕರವಾದ ಆಯುಧಗಳನ್ನು ಇಟ್ಟುಕೊಂಡು ಅಪರಾಧಿಕ ಒಳಸಂಚು ನಡೆಸಿ ದೋಚುವ ಮತ್ತು ಕೊಲೆ ಮಾಡುವ ಸಿದ್ದತೆ ನಡೆಸಿದವರನ್ನು ಸ್ವತ್ತು ಸಮೇತ ಮಹಜರಿನೊಂದಿಗೆ ಪ್ರಕರಣ ದಾಖಲಿಸುವರೆ ಪಣಂಬೂರು ಠಾಣೆಗೆ ಪಿರ್ಯಾದಿ ನೀಡಿರುವುದಾಗಿದೆ.
6 ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-12-2014 ರಂದು ಪಿರ್ಯಾದಿದಾರರಾದ ಮುಲ್ಕಿ ಠಾಣಾ ಪಿ.ಎಸ್.ಐ ರವರು ಇಲಾಖಾ ಜೀಪು ಕೆಎ-19-ಜಿ-332 ನೇದರಲ್ಲಿ ತೆರಳಿ ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಕೊಲ್ನಾಡು ಪೆಟ್ರೋಲ್ ಪಂಪ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ ಬೆಳಗ್ಗೆ ಸಮಯ 10-00 ಗಂಟೆ ಸುಮಾರಿಗೆ ಹಳೆಯಂಗಡಿ ಕಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲನ್ನು ನಿಲ್ಲಿಸುವರೇ ಸೂಚನೆಯನ್ನು ನೀಡಿದಾಗ ಮೋಟಾರ್ ಸೈಕಲ್ ಸವಾರರಿಬ್ಬರು ಮೋಟಾರ್ ಸೈಕಲನ್ನು ಮೆಲ್ಲನೆ ನಿಲ್ಲಿಸಿದಂತೆ ಮಾಡಿ ನಂತರ ಒಮ್ಮೆಲೇ ಮುಂದೆ ಕೊಂಡು ಹೋದಾಗ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪಿನಲ್ಲಿ ಸುಮಾರು 100 ಅಡಿಯಷ್ಟು ಮುಂದಕ್ಕೆ ಬೆನ್ನಟ್ಟಿ ಹೋಗಿ ಮೋಟಾರ್ ಸೈಕಲ್ ಸವಾರರಿಬ್ಬರನ್ನು ಮೋಟಾರ್ ಸೈಕಲ್ ಸಮೇತ ನಿಲ್ಲಿಸಿ ಸದ್ರಿ ಇಬ್ಬರ ಹೆಸರು, ವಿಳಾಸ ಕೇಳಲಾಗಿ ಮೋಟಾರ್ ಸೈಕಲ್ ಸವಾರನ ಹೆಸರು ಸಂದೀಪ್, ಪ್ರಾಯ 29 ವರ್ಷ, ತಂದೆ: ಅಶೋಕ, ವಾಸ: ವಾಮನ್ ನಾಯ್ಕ್ ಕಂಪೆನಿಯ ಹಿಂಬದಿ, ಜೆಪ್ಪು, ಮಾರ್ನಮಿಕಟ್ಟೆ, ಮಂಗಳೂರು ಎಂದು ತಿಳಿಸಿರುತ್ತಾರೆ. ಸಹ ಸವಾರನ ಹೆಸರು ಕೇಳಲಾಗಿ ಶುಭನಾಥ, ಪ್ರಾ 29 ವರ್ಷ, ತಂದೆ: ಸಾಮ್ಯುವೆಲ್, ವಾಸ: ಕೇಂ/ಆಪ್. ಶಶಿ, ಶಶಿ ಕಂಪೌಂಡ್ , ಆನಂದನಗರ, ಆಕಾಶ ಭವನ, ಮಂಗಳೂರು ಎಂದು ತಿಳಿಸಿರುತ್ತಾನೆ. ಮೋಟಾರ್ ಸೈಕಲ್ ನ್ನು ಪರಿಶೀಲಿಸಿ ನೋಡಲಾಗಿ ಬಜಾಜ್ ಕಂಪೆನಿಯ ಪಲ್ಸರ್ ಮೋಟಾರ್ ಸೈಕಲ್ ಆಗಿದ್ದು ಇದರ ಎದುರಿನ ನಂಬರ್ ಪ್ಲೇಟ್ ತರಚಿ ಹೋಗಿದ್ದು, ಹಿಂಭಾಗದ ನಂಬರ್ ಪ್ಲೇಟನ್ನು ಪರಿಶೀಲಿಸಿದ್ದಲ್ಲಿ ಸದ್ರಿ ನಂಬರ್ ಪ್ಲೇಟ್ ಕೂಡಾ ಉಜ್ಜಿದಂತೆ ಕಂಡು ಬಂದಿದ್ದು ಸರಿಯಾಗಿ ಪರಿಶೀಲಿಸಿ ನೋಡಲಾಗಿ ಬಿಆರ್-2 ಹೆಚ್- 1776 ಎಂದು ಆಗಿರುತ್ತದೆ. ಇದರ ಇಂಜಿನ್ ನಂಬ್ರ ಪರಿಶೀಲಿಸಿ ನೋಡಲಾಗಿ DHGBPH08924 ಆಗಿದ್ದು, ಚಾಸಿಸ್ ನಂಬ್ರ MD2DHDHZZ PCH69669 ಆಗಿರುತ್ತದೆ. ಸದ್ರಿ ಮೋಟಾರ್ ಸೈಕಲ್ ನ ದಾಖಲಾತಿಯನ್ನು ಸವಾರನಲ್ಲಿ ಕೂಲಂಕುಷವಾಗಿ ವಿಚಾರಿಸಿದಾಗ ಸದ್ರಿ ಮೋಟಾರ್ ಸೈಕಲನ್ನು ಕಳೆದ 2013 ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ಮಂಗಳೂರು ಕರಾವಳಿ ಉತ್ಸವದ ಎದುರು ಭಾಗದಲ್ಲಿ ನಿಲ್ಲಿಸಿದ್ದನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ. ಸದ್ರಿ ಮೋಟಾರ್ ಸೈಕಲ್ ಅಲ್ಲದೇ ನಾವಿಬ್ಬರಲ್ಲದೇ ಇನ್ನೊರ್ವ ಪರಿಚಯದ ಬಂಟ್ವಾಳದ ಯತೀಶ್ ಎಂಬಾತನೊಂದಿಗೆ ಸೇರಿ ಕೊಂಡು ಕಳೆದ ಡಿಸೆಂಬರ್ ತಿಂಗಳಿನಿಂದ ಈ ವರ್ಷದ ಫೆಬ್ರವರಿ ತಿಂಗಳವರೆಗೆ ಮಂಗಳೂರಿನ ಸಿಟಿ ಸೆಂಟರ್ ಬಳಿ, ತೊಕ್ಕೊಟ್ಟಿನ ಮಾಯಾ ಬಾರ್ ನ ಬಳಿ, ಕುಲಶೇಖರದ ಬಾರ್ ಬಳಿ, ಕರಾವಳ ಉತ್ಸವದ ಮೈದಾನದಿಂದ ದ್ವಿಚಕ್ರ ವಾಹನವನ್ನು ಕಳವು ಮಾಡಿ ,ಮಾರಾಟದ ಬಗ್ಗೆ ಕಟೀಲಿನ ಧೀರಜ್ ಎಂಬಾತನಿಗೆ ಕೊಡುವುದಾಗಿ ತಿಳಿಸಿರುತ್ತಾರೆ.
7 ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04.12.2014 ರಂದು ಸುಮಾರು 9:20 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಸುರೇಶ್ ಆರ್. ದೇವಾಡಿಗ ರವರ ಬಾಬ್ತು KA 19 D 2425 ನೇ ಜಯರಾಜ್ ಬಸ್ಸನ್ನು ಮೂಡಬಿದ್ರೆಯಿಂದ - ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಮೂಡಬಿದ್ರೆ ಗಾಂಧಿನಗರ ತಲುಪುತ್ತಿದ್ದಂತೆ ಕೈಕಂಬ ಕಡೆಯಿಂದ ಮೂಡಬಿದ್ರೆ ಕಡೆಗೆ KA 25 C 9024 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಬದಿಗೆ ಬಂದು, ಪಿರ್ಯಾದಿದಾರರು ಚಲಾಯಿಸುತ್ತಿದ್ದ, KA 19 D 2425 ನೇ ಜಯರಾಜ್ ಬಸ್ಸಿಗೆ ಡಿಕ್ಕಿಹೊಡೆದ ಪರಿಣಾಮ ಬಸ್ಸಿನ ಬಲ ಬದಿಯ ಬಾಡಿಯು, ಬಂಪರ್ ಜಖಂಗೊಂಡಿರುತ್ತದೆ.
8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-12-14 ರಂದು ಪಿರ್ಯಾದಿದಾರರರಾದ ಶ್ರೀ ರತ್ನಾಕರ ಪೂಜಾರಿ ಎಂಬವರು ತನ್ನ ಮಿತ್ರ ಅಪಾದಿತ ಶ್ರೀ ಜಯ ಸಾಲ್ಯಾನ್ ಎಂಬವರ ಬೈಕ್ ನಂಬ್ರ KA 20 EB 8108 ನೇದರಲ್ಲಿ ಸಹ ಸವಾರನಾಗಿ ಕಡಂದಲೆ ಯಿಂದ ಮೂಡುಬಿದ್ರೆ ಕಡೆಗೆ ಕೆಲಸಕ್ಕೆಂದು ಸಂಚರಿಸಿಕೊಂಡು ಬರುತ್ತಾ ಮೂಡುಬಿದ್ರೆ ಠಾಣಾ ಸರಹದ್ದಿನ ಕೊಡ್ಯಡ್ಕ ದೇವಸ್ಥಾನದ ಸ್ವಲ್ಪ ಮುಂದೆ ತಿರುವುನಲ್ಲಿಗೆ ಬೆಳಿಗ್ಗೆ 6.00 ಗಂಟೆಗೆ ತಲುಪಿದಾಗ ಹಸು ಒಂದು ಎಕಾಎಕಿಯಾಗಿ ಓಮ್ಮಲೆ ಜಿಗುದುಕೊಂಡು ರಸ್ತೆಗೆ ಅಡ್ಡಲಾಗಿ ಬಂದ ಪರಿಣಾಮ ಬೈಕ್ ಸವಾರ ಅಪಾದಿತ ಜಯ ಸಾಲ್ಯಾನ್ ರವರ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಯ ಚರಂಡಿಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಕಾಲಿನ ಮೊಣ ಗಂಟಿಗೆ ತೀವ್ರ ಸ್ವರೂಪ ರಕ್ತ ಗಾಯ ಹಾಗೂ ಸವಾರ ಅಪಾದಿತರಿಗೆ ತರಚಿದ ಗಾಯವಾಗಿರುವುದಾಗಿ ಈ ಅಪಘಾತಕ್ಕೆ ಅಪಾದಿತರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.
9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-04-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಯಶೋಧಾ ರವರು ಕುಳಾಯಿ ಗ್ರಾಮದ ಕಾವಿನಕಲ್ಲು ನಿವಾಸಿ ಪ್ರವೀಣ್ ಎಂಬವರನ್ನು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದು, ಮದುವೆ ಬಳಿಕ ಆರೋಪಿಯು ಪಿರ್ಯಾದಿದಾರರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಪಿರ್ಯಾದಿದಾರರ ಬಳಿ ಮುಖ ನೋಡಿ ಮಾತನ್ನಾಡದೇ ಇದ್ದು, ಪಿರ್ಯಾದಿದಾರರು ಮನೆಯಲ್ಲಿ ಯಾವುದೇ ಕೆಲಸ ಮಾಡಿದರೂ ತಪ್ಪು ಎನ್ನುವ ರೀತಿಯಲ್ಲಿ ವರ್ತಸಿ, ಕೇಳಿದಲ್ಲಿ ಜಾತಕದಲ್ಲಿ ದೋಷವಿದೆ ಎಂಬುದಾಗಿ ಹೇಳಿ, ಮನೆ ಕೆಲಸದವಳಂತೆ ನೋಡಿಕೊಂಡು ಬಾಯಿಗೆ ಬಂದಂತೆ ಕೆಟ್ಟ ಪದಗಳಿಂದ ಬೈಯುವುದು, ಜೀವ ಬೆದರಿಕೆ ಹಾಕುವುದು ಅಲ್ಲದೇ ಹೊಡೆದಿದ್ದು ಈ ವಿಷಯವನ್ನು ಪಿರ್ಯಾದಿದಾರರು ತನ್ನ ತಾಯಿ ಮನೆಯವರಲ್ಲಿ ತಿಳಿಸಿ ಮನೆಯವರನ್ನು ಗಂಡನ ಮನೆಗೆ ಕರೆದುಕೊಂಡು ಬಂದಾಗ ಆರೋಪಿಯು ಅವರ ಬಳಿಯು ಸರಿಯಾಗಿ ಮಾತನಾಡದೇ ಪಿರ್ಯಾದಿದಾರರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುತ್ತಾರೆ.
10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿವೇಕ್ ಭಟ್ ರವರು ಮಂಗಳೂರು ಬಡಗಡಪದವು ಮಿಜಾರು ಗೋಪಾಲಕೃಷ್ಣ ದೇವಸ್ಥಾನದ ಬಳಿ ಇರುವ ತನ್ನ ಬಾಬ್ತು ತರಕಾರಿ ಅಂಗಡಿ ಎದುರು ದಿನಾಂಕ:04/12/2014 ರಂದು ಬೆಳಿಗ್ಗೆ ಸುಮಾರು 8-30 ಗಂಟೆಗೆ ಅಂಗಡಿಯನ್ನು ತೆರೆಯಲು ಬಂದಾಗ ಅಂಗಡಿಯ ಮುಂದೆ ಒಂದು ಪ್ಲಾಸ್ಟಿಕ ಚೀಲವು ಕಂಡು ಬಂತು, ಸದರಿ ಪ್ಲಾಸ್ಟಿಕ ಚೀಲವನ್ನು ತೆರೆದು ನೋಡಲಾಗಿ ಅದರೊಳಗೆ ಪ್ರಾಣಿಯ ಚರ್ಮ ಮತ್ತು ಎರಡು ಗಂಧದ ಸಣ್ಣ ತುಂಡುಗಳು ಹಾಗೂ ಬಿಳಿಹಾಳೆಯಲ್ಲಿ ಎಮ್.ವಿ ಭಟ್ ಮತ್ತು ಮಾದವ ಶೆಣೈ ಎಂಬುದಾಗಿ ಚೀಟಿ ಬರೆದು ಹಾಕಿದ್ದು ಹಾಳೆಯ ಹಿಂಬದಿಯಲ್ಲಿ ನಮ್ಮ ಬೊಲೇರೋ ವಾಹನ ಸಂಖ್ಯೆ ಕೆ.ಎ 19 ಎಮ್.ಸಿ 3246 ಎಂದು ಬರೆದಿದ್ದು ಈ ಕೃತ್ಯವನ್ನು ಯಾರೋ ಪಿರ್ಯಾದಿದಾರರಿಗಾಗದ ವ್ಯಕ್ತಿಗಳು ಅಂಗಡಿಯ ಮುಂದೆ ಬಂದು ಮಾಡಿ ಹೋಗಿರುತ್ತಾರೆ.
No comments:
Post a Comment