ದಿನಾಂಕ 17.12.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 15.12.2014 ರಂದು ಸಂಜೆ 18.45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮನು ರವರು ನಗರದ ಉರ್ವಾಸ್ಟೋರ್ ಬಳಿ ಇರುವ ಕವಿತಾ ಬಾರ್ ಎದುರುಗಡೆ ರಸ್ತೆಯ ಬದಿಯಲ್ಲಿ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವ ಸಮಯ ಉರ್ವಾಸ್ಟೋರ್ ಕಡೆಯಿಂದ - ಕೋಡಿಕಲ್ ಕಡೆಗೆ ಟೆಂಪೋ ನಂಬ್ರ ಕೆಎ.19.ಸಿ.8377ನೇದನ್ನು ಅದರ ಚಾಲಕ ಸಾರ್ವಜನಿಕ ಕಾಂಕ್ರೀಟು ರಸ್ತೆಯಾದ ಉರ್ವಾಸ್ಟೋರ್ ಕಡೆಯಿಂದ ಕೋಡಿಕಲ್ ಕಡೆಗೆ ಅತೀವೇಗ ಮತ್ತು ತೀರಾನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ರಕ್ತಗಾಯುಂಟಾಗಿ ಚಿಕಿತ್ಸೆ ಬಗ್ಗೆ ನಗರದ ಸಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16-12-2014 ರಂದು ಬೆಳಿಗ್ಗೆ ಸುಮಾರು 10:10 ಗಂಟೆಗೆ ಮಂಗಳೂರು ನಗರದ ಯೆಯ್ಯಾಡಿ ಶರ್ಬತ್ಕಟ್ಟೆ ಎಂಬಲ್ಲಿ ಕೆಎ-19-ಎಸ್-6544 ನೇ ಅಕ್ಟಿವಾ ಹೋಂಡಾ ಸ್ಕೂಟರ್‌ನ್ನು ಅದರ ಸವಾರ ಆರೋಪಿ ಯಾಧವ ಎಂಬಾತನು ದಾಮೋಧರ ಕೊಟ್ಟಾರಿ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಮೇರಿಹಿಲ್‌ನಿಂದ ಕೆ.ಪಿ.ಟಿ, ಕಡೆಗೆ ಕಾಂಕ್ರಿಟ್ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾಂಕ್ರಿಟ್ ರಸ್ತೆಯ ನಡುವೆ ಸ್ಕಿಡ್ ಆಗಿ ಬಿದ್ದು, ಸ್ಕೂಟರ್ ಸಹಸವಾರ ದಾಮೋಧರ ಕೊಟ್ಟಾರಿ ಎಂಬವರಿಗೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಸಾಗಿಸಲ್ಪಟ್ಟವರು ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ದಾಮೋದರ ಕೊಟ್ಟಾರಿ (68) ರವರು ಸಂಜೆ 3:40 ಗಂಟೆಗೆ ಮೃತಪಟ್ಟಿರುತ್ತಾರೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿಕ್ರಮ್ ನಾರಾಯಣ ಸಿಂಗ್ ರವರು ಮೂಲತಃ ಮುಂಬೈ ಯವರಾಗಿದ್ದು, ಮಂಗಳೂರು ನಗರದ ಪ್ರಸ್ತುತ ಪದವಿನಂಗಡಿಯ ತೃಷ್ಣಾ ಹೊಟೇಲಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಯೆಯ್ಯಾಡಿಯಲ್ಲಿರುವ ಹರಿಪ್ರಸಾದ್ ಕಾಂಪ್ಲೆಕ್ಸ್ ನ ಹಿಂಬದಿ ಜಯರಾಮ್ ನಿಲಯದಲ್ಲಿ ವಾಸವಾಗಿದ್ದು, ಸಂಚಾರಕ್ಕಾಗಿ ತನ್ನ ತಮ್ಮನ ಆರ್.ಸಿ ಮಾಲಕತ್ವದ MH 02 CU 5890 ನೇ ನೋಂದಣಿ ಸಂಖ್ಯೆಯ, ಚಾಸೀಸ್ ನಂಬ್ರ:MD2DSJZZZVWB30632, ಇಂಜಿನ್ ನಂಬ್ರ: JZMBVB17249 ರ 2012ನೇ ಮೊಡೆಲಿನ ಅಂದಾಜು ಮೌಲ್ಯ ರೂ.45,000/- ಬೆಲೆ ಬಾಳುವ ಕಪ್ಪು ಮರೂನ್ ಬಣ್ಣದ ಬಜಾಜ್ ಡಿಸ್ಕವರ್ ದ್ವಿ-ಚಕ್ರ ವಾಹನವನ್ನು ಉಪಯೋಗಿಸಿಕೊಂಡಿರುತ್ತಾರೆ. ದಿನಾಂಕ: 11-12-2014ರ ರಾತ್ರಿ 21-30 ಗಂಟೆಯಿಂದ ದಿನಾಂಕ: 12-12-2014ರಂದು ಬೆಳಿಗ್ಗೆ 08-30 ಗಂಟೆಯ ಮಧ್ಯೆ ಸದ್ರಿ ಹರಿಪ್ರಸಾದ್ ಕಾಂಪ್ಲೆಕ್ಸ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟಿದ್ದ ಸದ್ರಿ ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಸದ್ರಿ ಕಳವಾದ ದ್ವಿ-ಚಕ್ರ ವಾಹನವನ್ನು ಕಳವಾದ ದಿನದಿಂದ ಇಲ್ಲಿಯವರೆಗೆ ಸುತ್ತಮುತ್ತ ಹಾಗೂ ನಗರದ ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವುದಾಗಿದೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ನಿಡ್ಡೋಡಿ ಅಂಚೆ ಮತ್ತು ಗ್ರಾಮದ ರತನಗಿರಿ ಎಂಬಲ್ಲಿರುವ ಜ್ಞಾನರತ್ನ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ಇದರ ಇದರ ಮಾಲಿಕರಾದ ಆರೋಪಿ ಶ್ರೀ ಭಾಸ್ಕರ ಗೌಡ ಎಂಬವರು ತನ್ನ ಜ್ಞಾನ ರತ್ನ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ನೌಕರರಿಂದ 2013 ನೇ ಇಸವಿಯ 6 ನೇ ತಿಂಗಳಿನಿಂದ 2014ನೇ ಇಸವಿಯ 07ನೇ ತಿಂಗಳಿನ ವರೆಗೆ ಪ್ರತಿ ತಿಂಗಳಲ್ಲಿ ನೌಕರರ ಭವಿಷ್ಯ ನಿಧಿ ಫಂಡ್ಗೆಂದು ಒಟ್ಟು ರೂಪಾಯಿ 72,712./- ( ಎಪ್ಪತ್ತೆರಡು ಸಾವಿರ ರೂಪಾಯಿ) ಯನ್ನು ನೌಕರರಿಂದ ಕಡಿತಗೊಳಿಸಿದ್ದರೂ ಕೂಡಾ ಸದ್ರಿ ನಗದು ಹಣವನ್ನು ಭವಿಷ್ಯ ನಿಧಿ ಕಂತಿಗೆ ವ್ಯವಹಾರದ ಪ್ರತಿನಿಧಿಯಾಗಿ ಜಮಾ ಮಾಡದೆ, ಹಣವನ್ನು ದುರುಪಯೋಗಪಡಿಸಿ ಅಪರಾಧಿಕ ನಂಬಿಕೆ ದ್ರೋಹವನ್ನು ಎಸಗಿರುತ್ತಾರೆ.
5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15-12-2014 ರಂದು ಫಿರ್ಯಾದಿದಾರರಾದ ಶ್ರೀ ಚಂದ್ರಪ್ರಸಾದ್ ರವರು ಕೆಎ-19-ಸಿ-7519 ನೇ ಲಾರಿಯಲ್ಲಿ ನೀಲೇಶ್ವರದಿಂದ ಬಂಟ್ವಾಳ ಸಜೀಪ ಎಂಬಲ್ಲಿಗೆ ಲೋಡ್ ಮಾಡಿರುವ ವಿನಿಯರ್ ಶೀಟ್‌ಗಳೊಂದಿಗೆ ಲಾರಿಯನ್ನು ಚಲಾಯಿಸಿಕೊಂಡು ತಲಪಾಡಿ ಕೆಸಿರೋಡ್‌ನಿಂದ ನಾಟೆಕಲ್ ರಸ್ತೆಯಲ್ಲಿ ಹೋಗುತ್ತಾ ರಾತ್ರಿ ಸುಮಾರು 1-45 ಗಂಟೆಯ ಸಮಯಕ್ಕೆ ಕೋಟೆಕಾರು ಗ್ರಾಮದ ಕೊಂಡಾಣ ದೈವಸ್ಥಾನದ ದ್ವಾರದ ಬಳಿ ತಲುಪುತ್ತಿರುವಾಗ ಕೆಎ-19-ಆರ್-9574ನೇ ಮೋಟಾರು ಸೈಕಲಿನಲ್ಲಿ ಬಂದ ಮೂರು ಜನ ಆರೋಪಿಗಳು ಫಿರ್ಯಾದಿದಾರರ ಲಾರಿಯನ್ನು ಅಡ್ಡ ತಡೆದು ನಿಲ್ಲಿಸಿ ಫಿರ್ಯಾದಿದಾರರಲ್ಲಿ "ನಿನ್ನ ಲಾರಿಯ ಧನಿ ಯಾರು" ಎಂದು ಕೇಳಿದಾಗ ಫಿರ್ಯಾದಿದಾರರು ನಿಮಗೆ ಯಾಕೆ ನೀವು ಇಲ್ಲಿಂದ ಹೋಗಿ ಎಂದು ಹೇಳಿ ಲಾರಿಯನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋದಾಗ ಸುಮಾರು 100 ಮೀಟರ್ ಮುಂದಕ್ಕೆ ಹೋದಾಗ ಆರೋಪಿಗಳು ಅವರ ಮೋಟಾರು ಸೈಕಲನ್ನು ಫಿರ್ಯಾದಿದಾರರ ಲಾರಿಗೆ ಅಡ್ಡ ನಿಲ್ಲಿಸಿ ಲಾರಿಯನ್ನು ತಡೆದು ಒಬ್ಬನು ಲಾರಿ ಚಾಲಕನ ಕಡೆ ಮತ್ತು ಇನ್ನೊಬ್ಬನು ಲಾರಿಯ ಎಡಗಡೆ ಹತ್ತಿದ್ದು, ಫಿರ್ಯಾದಿಯ ಕಡೆಗೆ ಹತ್ತಿದ ವ್ಯಕ್ತಿಯು ಚೂರಿ ತೋರಿಸಿ ಫಿರ್ಯಾದಿಯನ್ನು ಉದ್ದೇಶಿಸಿ ನಿನ್ನಲ್ಲಿ ಹಣ ಎಷ್ಟು ಇದೆ ಬೇಗನೆ ತೆಗೆಯಬೇಕು, ಇಲ್ಲವಾದರೆ ಚೂರಿಯಲ್ಲಿ ತಿವಿಯುತ್ತೇನೆ ಎಂದು ಹೇಳಿದಾಗ ಫಿರ್ಯಾದಿದಾರರು ಲಾರಿಯನ್ನು ವೇಗವಾಗಿ ಮುಂದಕ್ಕೆ ಚಲಾಯಿಸಿಕೊಂಡು ಹೋದಾಗ ಆರೋಪಿಗಳು ಲಾರಿಯಿಂದ ಕೆಳಗೆ ಹಾರಿ ಹೋಗಿದ್ದು, ಆರೋಪಿಗಳು ಫಿರ್ಯಾಧಿದಾರರ ಲಾರಿಯನ್ನು ಅಡ್ಡ ತಡೆದು ದರೋಡೆ ಮಾಡಲು ಪ್ರಯತ್ನಿಸಿರುವುದಾಗಿದೆ.
6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ಮರಿಯಮ್ಮ ತಾಹಿರಾ ರವರನ್ನು ಆರೋಪಿ ಮೊಹಮ್ಮದ್ ಬಶೀರ್ ಎಂಬವರು ಮದುವೆಯಾಗಿ ಸುಮಾರು 12 ವರ್ಷಗಳು ಆಗಿದ್ದು, ಇದೀಗ ಇವರಿಗೆ ನಾಲ್ಕು ಮಂದಿ ಮಕ್ಕಳಿರುತ್ತಾರೆ. ಫಿರ್ಯಾದಿದಾರರನ್ನು ಮದುವೆಯಾದ ಸುಮಾರು 3 ವರ್ಷಗಳ ತನಕ ಆರೋಪಿಯು ಅನೋನ್ಯತೆಯಲ್ಲಿ ನೋಡಿದ್ದು, ನಂತರ ಆರೋಪಿಯು ಫಿರ್ಯಾದಿದಾರರಿಗೆ ವಿನಾಃ ಕಾರಣ ಬೈದು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಅದರಂತೆ ದಿನಾಂಕ. 16-12-2014 ರಂದು ಮದ್ಯಾಹ್ನ 2-00 ಗಂಟೆಯ ಸಮಯಕ್ಕೆ ಫಿರ್ಯಾದಿದಾರರು ತನ್ನ ಮನೆಯಲ್ಲಿದ್ದ ಸಮಯ ಆರೋಪಿಯು ಕೆಲಸಕ್ಕೆ ಹೋದವರು ವಾಪಾಸು ಮನೆಗೆ ಬಂದು ಫಿರ್ಯಾದಿದಾರರಲ್ಲಿ ಊಟ ಬಡಿಸುವಂತೆ ಹೇಳಿ ಊಟಕ್ಕೆ ಕುಳಿತುಕೊಂಡು ಅವರ ಮೊಬೈಲ್ ಫೋನ್‌ನಿಂದ ಅವರ ಸಂಬಂಧಿಕರಿಗೆ ಅಸೌಖ್ಯದಲ್ಲಿದ್ದ ತನ್ನ ತಂದೆಯವರು ತೀರಿ ಹೋಗಿರುತ್ತಾರೆ ಬೇಗನೆ ಮನೆಗೆ ಬನ್ನಿ ಎಂದು ಸುಳ್ಳು ಮಾಹಿತಿ ಕೊಡುವುದನ್ನು ಆಕ್ಷೇಪಿಸಿ ಮೊಬೈಲ್ ಪೋನನ್ನು ತೆಗೆಯಲು ಪ್ರಯತ್ನಿಸಿದ ಆತನ ಹೆಂಡತಿ ಪ್ರಕರಣದ ಫಿರ್ಯಾದಿದಾರರಿಗೆ ಕಣ್ಣಿನ ಬಳಿಗೆ ಕೈಯಿಂದ ಗುದ್ದಿದಲ್ಲದೆ, ಫಿರ್ಯಾದಿದಾರರಿಗೆ ಅವಾಚ್ಯಶಬ್ದಗಳಿಂದ ಬೈದು, ಕುಕ್ಕರ್ನಿಂದ ತಲೆಗೆ, ಕುತ್ತಿಗೆಗೆ ಹೊಡೆದು ನೋವುಂಟು ಮಾಡಿರುತ್ತಾರೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16.12.2014 ರಂದು ಪಿರ್ಯಾದಿದಾರರಾದ ಶ್ರೀ ಎಂ. ಮೋಹನ್ ರವರು ಬೆಳಿಗ್ಗೆ 9.30 ಗಂಟೆಗೆ ಅಡು ಮರೋಳಿ ಮಾರಿಕಾಂಬ ದೇವಸ್ಥಾನದ ಎದುರು ಜಯನಗರದಿಂದ ತಾರೆತೋಟ ಎಂಬಲ್ಲಿಗೆ ಹೋಗುವ ಸಾರ್ವಜನಿಕ ತಿರುವು ರಸ್ತೆ ಬಲ ಬದಿಯಲ್ಲಿ ಅವರ ತಂಗಿ ಮಮತಾ ಎಂಬವರ ಜೊತೆಯಲ್ಲಿ ಮಾತಾಡಿಕೊಂಡಿರುವ ವೇಳೆ ಜಯನಗರದಿಂದ ತಾರೇತೋಟ ಕಡೆಗೆ ಹೋಗುವ ಕೆಎ-19-ಸಿ-1500 ನಂಬ್ರದ ಲಾರಿಯನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬಲ ಬದಿಗೆ ಬಂದು ಫಿರ್ಯಾದಿದಾರರ ಎಡ ಕಾಲಿಗೆ ತಾಗಿ ಪಾದದ ಚರ್ಮಕ್ಕೆ ರಕ್ತ ಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರನ್ನು ಅವರ ತಂಗಿ ಮಮತಾ ಎಂಬುವರು ಒಂದು ರಿಕ್ಷಾದಲ್ಲಿ ಕುಳ್ಳಿರಿಸಿ ಮಂಗಳೂರು ಎಸ್.ಸಿ.ಎಸ್. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.
No comments:
Post a Comment