ದಿನಾಂಕ 18.12.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 6 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-12-14 ರಂದು ಪಿರ್ಯಾದಿದಾರರಾದ ಶ್ರೀ ಪ್ರಮೋದ್ ಆಳ್ವ ರವರು ಸುರತ್ಕಲ್ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ವಾಪಾಸ್ಸು ಮನೆಯ ಕಡೆಗೆ ಹೋಗುತ್ತಾ ಬೆಳಿಗ್ಗೆ 7:00 ಗಣಟೆಗೆ ಸುರತ್ಕಲ್ ಜಂಕ್ಷನ್ ಬಳಿ ತಲುಪಿದಾಗ ಅವರ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಮೀನಿನ ಲಾರಿ ನಂಬ್ರ ಕೆಎ-20-ಡಿ-2842ನೇದನ್ನು ಅದರ ಚಾಲಕ ಸುಧೀರ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ಕಾರನ್ನು ಹಿಂದಿಕ್ಕಿ ಮುಂದೆ ಹೋಗುತ್ತಿದ್ದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ದ್ವಿ ಚಕ್ರ ವಾಹನ ನಂಬ್ರ ಕೆಎ-19-ಇಬಿ-1464ಗೆ ಡಿಕ್ಕಿ ಪಡಿಸಿದ ಪರಿಣಾಮ ಅದರ ಸವಾರರಾದ ಕ್ಷೇವಿಯರ್ ಎಂಬರವರು ವಾಹನ ಸಮೇತ ರಸ್ತೆಗೆ ಬಿದ್ದುದರಿಂದ ಅವರ ತಲೆಗೆ ಗಂಭೀರ ತರದ ಗಾಯವಾಗಿ ಕೈ ಕಾಲುಗಳಿಗೂ ಗಾಯವಾಗಿರುತ್ತದೆ, ಈ ಬಗ್ಗೆ ಚಿಕಿತ್ಸೆಗಾಗಿ ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಯುನಿಟಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-12-14ರಂದು 11:00 ಗಂಟೆ ಸಮಯಕ್ಕೆ ಪಿರ್ಯಾಧಿದಾರರಾದ ಶ್ರೀ ಮನೋಹರ ಜತನ್ನ ರವರು ತನ್ನ ಪತ್ನಿಯಾದ ಮರಿಯ ಜತ್ತನ್ನರವರೊಂದೊಗೆ ಮೂಲ್ಕಿ ಪುನರೂರು ಬಿಲ್ಡಿಂಗ್ ನಲ್ಲಿರುವ ಕಾರ್ಪೋರೇಶನ್ ಬ್ಯಾಂಕಿನ ಎ.ಟಿ.ಎಮ್ ನಿಂದ ಹಣ ತೆಗೆದು ಅಲ್ಲಿಂದ ಮನೆಯಾದ ಗೇರುಕಟ್ಟೆಗೆ ಹೋಗುಲು ರಿಕ್ಷಾ ಸ್ಟಾಂಡಿನ ಬಳಿ ರಾ.ಹೆ-66ನ್ನು ದಾಟುತ್ತಿದ್ದ ಸಮಯ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಒಮಿನಿ ಕಾರು ನಂಬ್ರ ಕೆಎ-19-ಎಮ್.ಬಿ-4980ನೇದನ್ನು ಅದರ ಚಾಲಕ ಶಂಶುದ್ದೀನ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ಪತ್ನಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಬಲ ಕಾಲಿಗೆ , ಮಣಿ ಗಂಟಿಗೆ ಮೂಳೆ ಮುರಿತದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಿದ್ದರೂ ಪೊಲೀಸರಿಗೂ ಮಾಹಿತಿಯನ್ನು ನೀಡದೇ ಆರೋಫಿ ಶಂಶುದ್ದೀನನು ಚಿಕಿತ್ಸೆಯ ಹಣವನ್ನು ನೀಡುತ್ತೇನೆಂದು ಹೇಳಿದವನು ಈವರಗೆ ಬಾರದೇ ಇದ್ದುದರಿಂದ ಪಿರ್ಯಾಧಿ ನೀಡಲು ತಡವಾಗಿರುತ್ತದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16-12-2014 ರಂದು ರಾತ್ರಿ ಸುಮಾರು 7:10 ಗಂಟೆಗೆ ಮಂಗಳೂರು ನಗರದ ಪಿ.ಡಬ್ಲ್ಯೂ.ಡಿ. ಕಛೇರಿಯ ಎದುರುಗಡೆ ರಸ್ತೆಯ ಬದಿಯಲ್ಲಿ ಪಿರ್ಯಾದಿದಾರರಾದ ಶ್ರೀ ರೋಹಿದಾಸ್ ಬಾಳಿಗಾ ರವರು ನಡೆದುಕೊಂಡು ಹೋಗುತ್ತಿದ್ದಾಗ ಒಂದು ಆಟೋರಿಕ್ಷಾವನ್ನು ಅದರ ಚಾಲಕನು ಎ.ಬಿ.ಶೆಟ್ಟಿ ಕಡೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಕಾಂಕ್ರಿಟ್ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಗಾಯವಾಗಿದ್ದು, ಪಿರ್ಯಾದಿದಾರರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದು, ಆರೋಪಿಯು ಅಪಘಾತದ ಬಳಿಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16-12-2014 ರಂದು ರಾತ್ರಿ ಸುಮಾರು 11:00 ಗಂಟೆಗೆ ಮಂಗಳೂರು ನಗರದ ಬಲ್ಮಠ ಪೆಟ್ರೋಲ್ ಪಂಪ್‌ನ ಬಳಿ ಕೆಎ-19-ಇಎಂ-2567 ನಂಬ್ರದ ಅಕ್ಟಿವಾ ಸ್ಕೂಟರ್‌ನ್ನು ಆರೋಪಿಯು ಬಲ್ಮಠ ಶಾಂತಿ ಚರ್ಚ್ನ ಒಳರಸ್ತೆ ಕಡೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೆರೆದ ಡಿವೈಡರ್ ಜಾಗದಲ್ಲಿ ಒಮ್ಮೆಲೆ ಅಂಬೆಡ್ಕರ್ ವೃತ್ತದಿಂದ ಬಲ್ಮಠ ಕಡೆಗೆ ಹೋಗುವ ಏಕಮುಖ ರಸ್ತೆಗೆ ಮುನ್ನುಗ್ಗಿಸಿ ಬಲ್ಮಠ ವೃತ್ತದ ಕಡೆಗೆ ಶರತ್ರವರು ಸವಾರಿ ಮಾಡುತ್ತಿದ್ದ ಕೆಎ-19-ಇಇ-1258 ನಂಬ್ರದ ಅಕ್ಟಿವಾ ಹೋಂಡಾ ಸ್ಕೂಟರ್‌ಗೆ ಡಿಕ್ಕಿ ಪಡಿಸಿದ ಪರಿಣಾಮ ಕೆಎ-19-ಇಇ-1258 ನಂಬ್ರದ ಸ್ಕೂಟರ್‌ನ ಸವಾರ ಶರತ್‌ರವರ ಮುಖಕ್ಕೆ ತರಚಿದ ಗಾಯ, ಬಲಕಣ್ಣಿನ ಮೇಲೆ ರಕ್ತಗಾಯ, ಮುಖಕ್ಕೆ ಹಾಗೂ ಬಲಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿದ್ದು, ಸದ್ರಿ ಸ್ಕೂಟರ್ನ ಸಹಸವಾರ ಪಿರ್ಯಾದಿದಾರರ ಎಡಭುಜಕ್ಕೆ ತರಚಿದ ಗಾಯ, ಬಲಮೊಣಕಾಲು, ಎಡಮುಂಗೈಗೆ ರಕ್ತಗಾಯ, ತುಟಿಗೆ ಗುದ್ದಿದ ರಕ್ತಗಾಯವಾಗಿದ್ದು, ಮತ್ತೊರ್ವ ಸಹಸವಾರ ಪ್ರಮೋದ್ರವರ ಮುಖದ ಬಲಬದಿಗೆ , ಬಲಕಣ್ಣಿನ ಮೇಲ್ಬಾಗಕ್ಕೆ , ಗದ್ದಕ್ಕೆ ರಕ್ತ ಗಾಯ ಹಾಗೂ ಬಲಕಾಲಿನ ಮೊಣಗಂಟಿಗೆ ತರಚಿದ ಗಾಯವಾಗಿರುತ್ತದೆ. ಅಲ್ಲದೇ ಅಪಘಾತಪಡಿಸಿದ ಸ್ಕೂಟರ್ ಸವಾರ ವಿನಯ ರೈ ಎಂಬವರಿಗೂ ಗಾಯವಾಗಿದ್ದು, ಗಾಯಾಳುಗಳು ಎಸ್ಸಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-11-2014 ರಂದು ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಅಶ್ರಫ್ ರವರು ತನ್ನ ಅಂಕಲ್ ನ ಮನೆಯ ಬಳಿ ಸರ್ವೇ ಮಾಡುವಾಗ ಕಾಲು ಜಾರಿ ಬಿದ್ದ ಪರಿಣಾಮ ಎಡ ಕಾಲು ಮೂಳೆಮುರಿತವಾಗಿ 10 ದಿನಗಳ ಕಾಲ ಕೊಡಿಯಾಲ್ ಬೈಲ್ ಯೆನೆಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿ ಟಾಯ್ಲೇಟ್ ಸೌಕರ್ಯ ಇಲ್ಲದ ಕಾರಣ ಮಂಗಳೂರಿನ ಮಿಷನ್ ರಸ್ತೆಯಲ್ಲಿರುವ ನೌಫಾಲ್ ಹೊಟೇಲ್ ನಲ್ಲಿ ರೂಮ್ ಮಾಡಿ, ವಿಶ್ರಾಂತಿ ಪಡೆಯುತ್ತಿದ್ದು, ದಿನಾಂಕ 16-12-2014 ರಂದು ಬೆಳಿಗ್ಗೆ ಸುಮಾರು 07:15 ಗಂಟೆಗೆ ಪಿರ್ಯಾದಿದಾರರ ಅಣ್ಣನ ಮಕ್ಕಳಾದ ಆರೀಫ್, ಅಲ್ತಾಫ್, ಮತ್ತು ಹ್ಯಾರೀಸ್ ಎಂಬವರು ಪಿರ್ಯಾದಿಯ ರೂಮ್ ಗೆ ಅಕ್ರಮ ಪ್ರವೇಶ ಮಾಡಿ ನೀನು ಯಾಕೆ ನಮ್ಮ ತಂದೆಗೆ ಪದೇ ಪದೇ ಪೋನ್ ಮಾಡಿ ಹಣಕ್ಕಾಗಿ ಕಾಡುತ್ತೀಯಾ ಎಂಬುದಾಗಿ ಅವಾಚ್ಯ ಶಬ್ಧದಿಂದ ಬೈದು ಪಿರ್ಯಾದಿಯ ಅಂಗಿ ಮತ್ತು ಲುಂಗಿಯನ್ನು ಎಳೆದು ಹರಿದು ಹಾಕಿ ಅವಾಚ್ಯ ಶಬ್ಧದಿಂದ ಬೈದು ಕೈಯಿಂದ ಮುಖಕ್ಕೆ, ಕೈಗೆ ಹೊಡೆದು ಅಲ್ಲಿಯೇ ಇದ್ದ ಮರದ ಕುರ್ಚಿಯನ್ನು ಎತ್ತಿ ಹಾಕುವಾಗ ಪಿರ್ಯಾದಿಯ ಎಡಕೈ ಗೆ ಗುದ್ದಿದ ಗಾಯವಾಗಿದ್ದು, ಪಿರ್ಯಾದಿಗೆ ಜೀವ ಬೆದರಿಕೆ ಒಡ್ಡಿರುತ್ತಾರೆ.
6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-12-2014 ರಂದು ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಅಶ್ರಫ್ ಜಿ. ರವರ ಸಂಬಂಧಿಕರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿದ್ದವರನ್ನು ನೋಡಿಕೊಂಡು ಬರುವ ಸಲುವಾಗಿ ಫಿರ್ಯಾದಿದಾರರು ಕೆಎ.19ಎಎ.780 ನೇ ಅಟೋ ರಿಕ್ಷಾದಲ್ಲಿ ದೇರಳಕಟ್ಟೆ ರಿಕ್ಷಾ ಪಾರ್ಕ್ನಿಂದ ಕುಳಿತುಕೊಂಡು ಹೊರಟು ಬರುತ್ತಾ ಸಂಜೆ 3-25 ಗಂಟೆಯ ಸಮಯಕ್ಕೆ ರಿಕ್ಷಾವು ಕೋಟೆಕಾರು ಗ್ರಾಮದ ದೇರಳಕಟ್ಟೆ ಪನೀರ್ ಕ್ರಾಸ್ ಸಮೀಪ ತಲುಪುತ್ತಿದ್ದಂತೆ ಅವರ ಎದುರುನಿಂದ ಅಂದರೆ ಪನೀರ್ ಕಡೆಯಿಂದ ಆರೋಪಿಯು ಕೆಎ-19-ಎಎ-4914 ನೇ ಅಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಣಡು ಬಂದು ಫಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡು ರಿಕ್ಷಾಗಳ ಚಾಲಕರು ರಸ್ತೆಗೆ ಎಸೆಯಲ್ಪಟ್ಟು ಫಿರ್ಯಾದಿದಾರರು ರಿಕ್ಷಾದ ಒಳಗಡೆ ಕುಸಿದು ಬಿದ್ದಿದ್ದುದರಿಂದ ಮೈ ಕೈಗೆ ಗುದ್ದಿದ ಗಾಯವಾಗಿರುತ್ತದೆ. ಅಲ್ಲದೆ ಫಿರ್ಯದಿದಾರರು ಪ್ರಯಾಣಿಸುತ್ತಿದ್ದ ಅಟೋ ರಿಕ್ಷಾ ಚಾಲಕ ಮೊಯಿಧೀನ್ ಕುಂಞ ಎಂಬವರಿಗೆ ಎಡಕೈಗೆ ಮತ್ತು ಬೆನ್ನಿಗೆ ಗಾಯವಾಗಿರುತ್ತದೆ. ಮತ್ತು ಆರೋಪಿ ರಿಕ್ಷಾ ಚಾಲಕ ಅಬ್ಬಾಸ್ ಎಂಬವರಿಗೆ ಕೂಡಾ ಬಲಕೈಗೆ, ಬಲಕಾಲಿಗೆ ಗಾಯವಾಗಿರುತ್ತದೆ. ಗಾಯಾಳುಗಳು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ವೀಣಾ ಮೆನೆಜಸ್ ರವರು ತನ್ನ ಕೆಎ-19-ಇಎಮ್-6319 ನೇ ಯಮಹಾ ರೇಸ್ ಸ್ಕೂಟರನಲ್ಲಿ ಹಿಂದುಗಡೆ ಸಹಸವಾರರಾಗಿದ್ದು, ಸ್ಕೂಟರನ್ನು ಫಿರ್ಯಾದಿಯ ಸ್ನೇಹಿತ ಪ್ರದೀಪ ಜಾನ್ಸನ್ ಎಂಬುವರು ರಾಣಿಪುರದಿಂದ ವಾಮಂಜೂರು ಕಡೆಗೆ ಚಲಾಯಿಸುತ್ತಾ ಬರುತ್ತಿರುವಾಗ್ಗೆ ಗೋರಿಗುಡ್ಡೆ ಎಂಬಲ್ಲಿ ಬೆಳಿಗ್ಗೆ 07.30 ಗಂಟೆಗೆ ತಲುಪಿದಾಗ ಪಂಪವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಕೆಎ-19-ಇಡಿ-5574 ನೇ ಮೋಟಾರ ಬೈಕನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆಯಿಂದ ಚಲಾಯಿಸುತ್ತಾ, ಪಿರ್ಯಾದಿದಾರರು ಸಹಸವಾರರಾಗಿದ್ದ ಸ್ಕೂಟರಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾಧಿಯ ಎಡ ಕಾಲಿನ ತೋರು ಬೆರಳಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ.
No comments:
Post a Comment