ದಿನಾಂಕ 27.12.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 6 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-12-2014 ರಂದು ಪಿರ್ಯಾಧಿದಾರರಾದ ಶ್ರೀಮತಿ ರೇಣುಕಾ ರವರು ಎಕ್ಕಾರಿನಿಂದ ಕೃಷ್ಣಪುರ ಕ್ಕೆ ಹೋಗುವರೇ ಕೆಎ 19-ಎಬಿ-3654 ನೇಯ ನಂಬ್ರದ ಪ್ರಗತಿ ಬಸ್ಸಿನ್ಲಲಿ ಹೋಗುತ್ತಾ ಸಂಜೆ ಸುಮಾರು 4-20 ಗಂಟೆಗೆ ಶಿವರೂರು ದೇವಸ್ಥಾನ ತಲುಪಿದಾಗ ಅದರ ಚಾಲಕ ಹನೀಫ್ ಎಂಬುವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ ಬಸ್ಸು ಬಲಗಡೆ ಹೊಂಡೆಕ್ಕೆ ಬಿದ್ದು ಅಲ್ಲಿಂದ ಮರ ಒಂದಕ್ಕೆ ತಾಗಿ ಬಸ್ಸಿನ ಗಾಜು ಪಿರ್ಯಾಧಿದಾರರ ಬಲ ಕೈಗೆ ತಾಗಿ ಪಿರ್ಯಾದಿದಾರರಿಗೆ ಗಂಭೀರ ಸ್ವರೂಪದ ರಕ್ತ ಗಾಯ ಹಾಗೂ ಮೂಳೆ ಮುರಿತ ಗಾಯವಾಗಿ ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆ ಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 25-12-2014 ರಂದು ಮದ್ಯಾಹ್ನ ಸುಮಾರು 3-00 ಗಂಟೆಗೆ ಮಂಗಳೂರು ನಗರದ ಬೆಂದೂರ್ವೆಲ್ ತೆರೆಸಾ ಸ್ಕೂಲ್ ಬಳಿ ಸರ್ಕಲ್ ನಲ್ಲಿ ಕೆಎ-19-ಎಂ.ಸಿ-6860 ನಂಬ್ರದ ಜೀಪನ್ನು ಅದರ ಚಾಲಕ ಪವೀನ್ ಎಂಬಾತನು ಹಾರ್ಟಿ ಕಲ್ಚರ್ ಕಡೆಯಿಂದ ಬೆಂದೂರ್ ವೆಲ್ ಕಡೆಗೆ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೆಂದೂರ್ವೆಲ್ ಕಡೆಯಿಂದ ಪಿರ್ಯಾದುದಾರರಾದ ಶ್ರೀಮತಿ ಮೆರ್ಲಿನ್ ಡಿ'ಸೋಜಾ ರವರು ತನ್ನ ಮಗ ಲ್ಯಾನ್ ಲಿನ್ ನನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ-19-ಇ.ಜಿ-0606 ನಂಬ್ರದ ಸ್ಕೂಟರ್ ಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರು ಮತ್ತು ಲ್ಯಾನ್ ಲಿನ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಲ್ಯಾನ್ ಲಿನ್ ನ ಎಡಕಾಲಿನ ಕೋಲುಕಾಲಿಗೆ ಗಂಭೀರ ಸ್ವರೂಪದ ಮೂಳೆ ಮುರಿತದ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಕೊಲಾಸೋ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪಿರ್ಯಾದುದಾರರು ಸಣ್ಣಪುಟ್ಟ ಗಾಯಗಳಾಗಿರುವುದರಿಂದ ಯಾವುದೇ ಚಿಕಿತ್ಸೆ ಪಡೆದುಕೊಂಡಿರುವುದಿಲ್ಲ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26/12/2014 ರಂದು 12:50 ಗಂಟೆಗೆ ಫಿರ್ಯಾದುದಾರರಾದ ಶ್ರೀ ಮೋಹನ ಪಿ. ರವರು ತನ್ನ ಗೆಳೆಯನ ಬಾಬ್ತು ಕಾರು ನಂಬ್ರ KA-20-P-734 ನೇ ದರಲ್ಲಿ ಚಾಲಕನಾಗಿ ಕುಲಶೇಖರ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬಿಕರ್ನಕಟ್ಟೆ ಹಳೆಯ ಪೊಲೀಸ್ ಠಾಣೆಯ ಎದುರು ತಲುಪಿದಾಗ ಹಿಂದುಗಡೆಯಿಂದ KA-20-A-7062 ನೇ ದರ ಬಸ್ಸನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಕಾರಿಗೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಬಲಭಾಗದ ಹಿಂಧಿನ ಬಾಗಿಲು ಲೈಟು ಜಖಂಗೊಡಿದ್ದು ಈ ಅಪಘಾತದಿಂದ ಯಾವುದೆ ಗಾಯಗಳಾಗಿರುವುದಿಲ್ಲ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26/12/2014 ರಂದು ಸಮಯ ಸುಮಾರು 20:00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಪ್ರವೀಣ್ ಜೊಡಳ್ಳಿ ರವರು ತಮ್ಮ ಬಾಬ್ತು ಕಾರು ನಂಭ್ರ KA-25-MA-2468 ನೇ ದರಲ್ಲಿ ಚಾಲಕನಾಗಿದ್ದುಕೊಂಡು ಮಂಗಳೂರು ನಗರದ NH-13 ನೇ ದರಲ್ಲಿ ಬಿಕರ್ನಕಟ್ಟೆ ಕಡೆಯಿಂದ ನಂತೂರು ಜಂಕ್ಷನ್ ತಲುಪಿದಾಗ ಪಿರ್ಯಾದುದಾರರ ಬಲಬದಿಯಿಂದ ಟ್ಯಾಂಕರ್ ನಂಬ್ರ KA-19-D-5693 ನೇ ದರ ಚಾಲಕರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಢು ಬಂದು ಫಿರ್ಯಾದುದಾರರ ಕಾರಿಗೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಬಲಬದಿಯ ಎರಡೂ ಬಾಗಿಲು ಜಖಂ ಗೊಂಡಿರುತ್ತದೆ ಈ ಅಪಘಾತದಿಂದ ಯಾವುದೇ ರಿತಿಯ ಗಾಯಗಳಾಗಿರುವುದಿಲ್ಲ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-12-2014 ರಂದು ಬೆಳ್ಳಿಗೆ 11:30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಎ.ಐ. ಶೇಖಬ್ಬ ರವರು ಮಂಗಳೂರು ತಾಲೂಕು ಬಜಪೆ ಗ್ರಾಮದ ಟ್ಯಾಕ್ಸಿ ಸ್ಟಾಂಡನ ಬಳಿ ನಿಂತಿದ್ದಾಗ ಮಂಗಳೂರು ಕಡೆಯಿಂದ ಕಟೀಲು ಕಡೆಗೆ ಒಂದು ಮೋಟಾರ ಸೈಕಲ್ ಕೆಎ-19-ಇಜೆ-5384 ನ್ನು ಅದರ ಸವಾರನು ಅತೀ ವೇಗ ಹಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಫಿರ್ಯಾದುದಾರರಿಗೆ ಹಿಂದಿನಿಂದ ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು ಹಣೆಗೆ,ಕೈಕಾಲು ಗಳಿಗೆ ಬೆನ್ನು, ತಲೆಗೆ ರಕ್ತ ಗಾಯ ಮಾಡಿದ್ದು, ಗಾಯಾಳು ಹೈಲ್ಯಾಂಡ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23.12.2014 ರಂದು ಪಿರ್ಯಾದುದಾರರಾದ ಶ್ರೀಮತಿ ಮಲ್ಲಿಕಾ ರವರು ಅವರ ಮಗ ನಿಹಾಲ್ ಮತ್ತು ಮಾಲತಿ ಅವರ ಮಗ ನಮನ್ ಎಂಬವರು ಸೈಂಟ್ ಜೋಸೆಫ್ ಶಾಲೆ ಬಜಾಲ್ ಇಲ್ಲಿ ನಡೆಯುವ ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮದ ಬಗ್ಗೆ KA-19-AA-4858ನೇ ನಂಬ್ರದ ಆಟೋರಿಕ್ಷಾದಲ್ಲಿ ಪ್ರಯಾಣಿಕರಾಗಿ ಕುಳಿತು, ಸದ್ರಿ ಆಟೋರಿಕ್ಷಾವನ್ನು ವಿಜಯ ಗಟ್ಟಿ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಬಜಾಲ್ ಜೆ.ಎಮ್ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಬೆಳಿಗ್ಗೆ 09:30 ಗಂಟೆ ಸಮಯಕ್ಕೆ ಪರಂಜ್ಯೋತಿ ಭಜನಾ ಮಂದಿರದ ಬಳಿ ಇರುವ ಇಳಿಜಾರು ರಸ್ತೆಯಲ್ಲಿ ಸದ್ರಿ ಚಾಲಕರು ಆಟೋರಿಕ್ಷಾದ ಮೇಲೆ ನಿಯಂತ್ರಣವನ್ನು ಕಳೆದುಕೊಂಡು ರಿಕ್ಷಾವು ರಸ್ತೆಯ ಬದಿಗೆ ಎಡಮಗ್ಗುಲಾಗಿ ಮಗುಚಿ ಬಿದ್ದ ಪರಿಣಾಮ ಪಿರ್ಯಾದುದಾರರ ಬಲಭುಜಕ್ಕೆ, ಎಡಕಣ್ಣಿನ ಬಳಿ ಹಾಗೂ ಎಡ ಮೊಣಕಾಲಿಗೆ ಗುದ್ದಿದ ರೀತಿಯ ಗಾಯ ಹಾಗೂ ಮಾಲತಿಯವರ ದವಡೆಗಳಿಗೆ, ಎಡಭುಜಕ್ಕೆ ಗುದ್ದಿದ ಗಾಯ ಮತ್ತು ಮಾಲತಿಯವರ ಮಗ ನಮನ್ ರವರ ಎಡಭುಜಕ್ಕೆ ಗುದ್ದಿದ ರೀತಿಯ ಗಾಯ ಅಲ್ಲದೇ ರಿಕ್ಷಾ ಚಾಲಕ ವಿಜಯ ಗಟ್ಟಿ ರವರ ಎಡಕಾಲು ಮತ್ತು ಎಡಭುಜಕ್ಕೆ ಗುದ್ದಿದ ಗಾಯಗೊಂಡವರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ.
No comments:
Post a Comment