ದಿನಾಂಕ: 13.12.14 ರಂದು ಮೂಡಬಿದ್ರೆ ವಿಧ್ಯಾಗಿರಿ ಬಳಿ ಫಾರ್ಚೂನ್ ಮೊಬೈಲ್ ಅಂಗಡಿಗೆ ರಾತ್ರಿ 20.30 ಗಂಟೆಗೆ ಬೀಗ ಹಾಕಿ ಹೋಗಿದ್ದು, ದಿನಾಂಕ: 14.12.14 ರಂದು ಬೆಳಿಗ್ಗೆ 08.30 ಗಂಟೆಗೆ ಅಂಗಡಿಗೆ ಬಂದಾಗ ಬೀಗ ಹಾಕಿದ ಬೀಗವು ಇಲ್ಲದೆ ಇದ್ದು , ಶೆಟರ್ ತೆಗೆದು ನೋಡಿದಾಗ ಶೋಕೇಶ್ ನಲ್ಲಿಟ್ಟಿದ್ದ ಮೊಬೈಲ್ ಬಾಕ್ಸ್ ಗಳು ಅಸ್ತವ್ಯಸ್ತವಾಗಿದ್ದು, ಯಾರೋ ಕಳ್ಳರು ಸುಮಾರು 42,305/- ರೂಪಾಯಿ ಬೆಲೆ ಬಾಳುವ 6 ಮೊಬೈಲ್ ಸೆಟ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಪಿರ್ಯಾದಿ ಮೊಹಮ್ಮದ್ ಅಶ್ರಫ್ ದೂರು ನೀಡಿದಂತೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ದಿನ ದಿನಾಂಕ 15.12.2014 ರಂದು 08:30 ಗಂಟೆಗೆ ಮೂಡಬಿದ್ರೆ ಪೊಲೀಸ್ ನಿರೀಕ್ಷಕರಾದ ಅನಂತಪದ್ಮನಾಭ, ಮತ್ತು ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಮೂಡಬಿದ್ರೆ ಸ್ವರಾಜ್ ಮೈದಾನದ ಬಳಿಯ ಉಪಖಜಾನೆ ಬಳಿ ಒಬ್ಬ ವ್ಯಕ್ತಿ ಕಪ್ಪು ಬ್ಯಾಗ್ ಹಿಡಿದುಕೊಂಡು ನಿಂತಿದ್ದವನು, ಪೊಲೀಸ್ ವಾಹನ ಕಂಡು ಓಡಲೆತ್ನಿಸಿದವನನ್ನು ಸಂಶಯಗೊಂಡು ಬೆನ್ನಟ್ಟಿ ಹಿಡಿದು ವಿಚಾರಿಸಿ ದಾಗ ಆತನ ಸುನಿಲ್, ಪ್ರಾಯ: 21 ವರ್ಷ, ತಂದೆ: ಮರ್ಕುಧನ್ ವಾಸ: 50 ಕೊಯಲಸ್ವನ್ ಬುಜುರ್ಗ್, ಕನಿಯಾ ತಾಲೂಕು, ಕುಶಿನಗರ್ ಜಿಲ್ಲೆ, ಉತ್ತರ ಪ್ರದೇಶ ರಾಜ್ಯ ಎಂದು ತಿಳಿಸಿದ್ದು, ಬ್ಯಾಗ್ ಚೆಕ್ ಮಾಡಲಾಗಿ ಅದರಲ್ಲಿ 6 ಮೊಬೈಲ್ ಸೆಟ್ ಗಳು ಕಂಡುಬಂದಿದ್ದು, ವಿಚಾರಿಸಿದಾಗ ಅವುಗಳನ್ನು ವಿದ್ಯಾಗಿರಿಯ ಫಾರ್ಚುನ್ ಮೊಬೈಲ್ ಅಂಗಡಿಯಿಂದ 13.12.2014 ರಂದು ಕಳುವು ಮಾಡಿ ತಂದು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದು, ಆರೋಪಿತನನ್ನು ದಸ್ತಗಿರಿ ಮಾಡಿ ರೂ. 42,305/- ರೂಪಾಯಿ ಬೆಲೆ ಬಾಳುವ 6 ಮೊಬೈಲ್ ಸೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆ ಕಾರ್ಯಾಚರಣೆಯಲ್ಲಿ ಪಿ ಐ ಅನಂತಪದ್ಮನಾಭ, ಪಿಎಸ್ ಐ ರಮೇಶ್ ಕುಮಾರ್, ಎಎಸ್ ಐ ಐತಪ್ಪ, ಹೆಚ್ ಸಿ 1861 ರಾಮ, ಹೆಚ್ ಸಿ 748 ವಿನೋದ್, ಪಿಸಿ 436 ಪ್ರೇಮಾನಂದ್, ಪಿಸಿ 949 ಪ್ರಮೋದ್ ಹಾಗೂ ಪಿಸಿ 891 ಚಂದ್ರಹಾಸರವರು ಭಾಗವಹಿಸಿರುತ್ತಾರೆ.
No comments:
Post a Comment