ದಿನಾಂಕ 12.12.2014 ರ 12:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-12-2014 ರಂದು ಸಂಜೆ 06-15 ಗಂಟೆ ಸಮಯ ಬಂಗ್ರ ಕೂಳೂರು ಎಂಬಲ್ಲಿ ಮೋಟಾರ ಸೈಕಲ್ ನಂಬ್ರ KA- 19 V- 3877 ನೇಯದನ್ನು ಅದರ ಸವಾರರಾದ ಯಾದವ್ ಎಂಬವರು ಕೊಟ್ಟಾರಚೌಕಿ ಕಡೆಯಿಂದ ಕೂಳೂರು ಕಡೆಗೆ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ ರಾ.ಹೆ 66 ರನ್ನು ಪೂರ್ವ ಬದಿಯಿಂದ ದಾಟಿ ಪಶ್ಚಿಮದ ಬದಿಗೆ ದಾಟಲು ಬರುತ್ತಿದ್ದ ಜೀಲಿಯಾ @ ಜೂಲಿಯಾನ್ ಡಿಸೋಜಾ ಎಂಬವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದ್ರಿ ಗಾಯಾಳು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಂಜೆ 06-48 ಗಂಟೆಯ ನಡುವೆ ಮೃತಪಟ್ಟಿರುವುದಾಗಿ, ಸವಾರರಾದ ಯಾದವ್ ರವರಿಗೂ ಗುದ್ದಿದ ಜಖಂವಾಗಿದ್ದು, ಎ ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ.
2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಕು. ನಿಶಾ ರವರು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ದಿನಾಂಕ 11-12-14 ರಂದು ಕಾಲೇಜಿಗೆ ಬರುತ್ತಾ ಬೆಳಿಗ್ಗೆ 9:00 ಗಂಟೆಗೆ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಎದುರು ಬಸ್ಸಿನಿಂದ ಇಳಿದು ರಸ್ತೆ ದಾಟುತಿದ್ದ ಸಮಯ ಸುರತ್ಕಲ್ ಠಾಣಾ ಕಡೆಯಿಂದ ಉಡುಪಿ ಕಡೆಗೆ ಎನ್.ಹೆಚ್-66 ರಲ್ಲಿ ಎಕ ಮುಖ ರಸ್ತೆಯಲ್ಲಿ ಪೊಲೀಸು ವಾಹನ ಕೆಎ-19-ಜಿ-8067ನೇದನ್ನು ಅದರ ಚಾಲಕ ಬಾಳ ಗಣಪತಿ ನಾಯಕ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ಚಲಾಯಿಸಿ ಪಿರ್ಯಾಧಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಎರಡು ದವಡೆಯ ಹಲ್ಲುಗಳು ಮುರಿದು ತುಟಿಗೂ ಗಾಯವಾಗಿದ್ದು, ಎರಡೂ ಕಾಲುಗಳಿಗೂ ಭುಜಕ್ಕೂ ಗಾಯವಾಗಿದ್ದು, ಈ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09.12.2014 ರಂದು ಸಂಜೆ ಸುಮಾರು 5.00 ಗಂಟೆಗೆ ಫಿರ್ಯಾದುದಾರರಾದ ಶ್ರೀ ಎಂ. ಶ್ರೀನಿವಾಸ ಆಚಾರಿ ರವರ ತಂದೆ ಶಿವಣ್ಣ ಆಚಾರಿ ಎಂಬುವರು ಬಿಕರ್ನಕಟ್ಟೆ ಯಿಂದ ನಂತೂರು ಕಡೆಗೆ ಬರುವ ಏಕಮುಖ ರಸ್ತೆ ದಾಟುತ್ತಾ, ರಸ್ತೆಯ ಇನ್ನೊಂದು ಬದಿಯ ಡಿವೈಡರ್ ಬಳಿ ತಲುಪುತ್ತಿದ್ದಂತೆ KA19-B-7225 ನಂಬ್ರದ ಮಿನಿ ಲಾರಿಯನ್ನು ಅದರ ಚಾಲಕ ಸುದರ್ಶನ ಎಂಬಾತನು ಮರೋಳಿ ಕಡೆಯಿಂದ ನಂತೂರು ಕಡೆಗೆ ರಾಷ್ಟೀಯ ಹೆದ್ದಾರಿ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ತಂದೆ ಶಿವಣ್ಣ ಆಚಾರಿಯವರಿಗೆ ಡಿಕ್ಕಿ ಮಾಡಿದ ಪರಿಣಾಮ ತಲೆಗೆ, ಎಡಕಣ್ಣಿನ ಹುಬ್ಬಿನ ಬಳಿ ಮತ್ತು ಎಡಕಿವಿಗೆ ರಕ್ತಗಾಯಾವಾಗಿ ವೆನ್ಲಾಕ್ ಆಸ್ಪತ್ತೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ವಿನಯಾ ಹೆಚ್. ನಾಯಕ್ ರವರು ಕೊಲಾಸೋ ಆಸ್ಪತ್ರೆಯಲ್ಲಿ ಸುಮಾರು 8 ವರ್ಷಗಳಿಂದ ಅಕೌಂಟ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 11-12-2014 ರಂದು ತನ್ನ ಮನೆಯಾದ ಬೋಳೂರುವಿನಿಂದ ಕೆಲಸಕ್ಕೆ ಹೊರಟು ಬಂದು ಬೆಂದೂರ್ ವೆಲ್ ಜಂಕ್ಷನ್ ನಲ್ಲಿ ಇಳಿದು ಕೊಲಾಸೋ ಆಸ್ಪತ್ರೆಗೆ ನಿರ್ಮಾಣ ಹಂತದ ಬೆಂದೂರ್ ವೆಲ್ ನ ಅಟ್ಲಾಂಟಿಸ್ ಕಟ್ಟಡದ ಪಕ್ಕದ ಸಿಮೆಂಟ್ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ ಬೆಳಿಗ್ಗೆ 9-20 ಗಂಟೆಗೆ ನಿರ್ಮಾಣ ಹಂತದ ಅಟ್ಲಾಂಟಿಸ್ ಕಟ್ಟಡದ ಮೇಲಿನಿಂದ ದಪ್ಪದ ಮರದ ರೀಪೊಂದು ಪಿರ್ಯಾದಿಯವರ ಎಡ ಕೈ ತೋಳಿಗೆ ಬಿದ್ದು ರಕ್ತ ಗಾಯವಾಗಿದ್ದು, ಅಟ್ಲಾಂಟಿಸ್ ಕಟ್ಟಡದ ಮ್ಯಾನೇಜರ್ ರವರು ಯಾವುದೇ ಸುರಕ್ಷತಾ ಕ್ರಮವನ್ನು ಕೈಗೊಳ್ಳದೆ ಅಜಾಗರೂಕತೆಯಿಂದ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದು, ಸದ್ರಿಯವರ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿರುವುದಾಗಿದೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಆಸೀಫ್ ಖಾನ್ ಎಂಬವರ ಅಕ್ಕನ ಮಗ ಅಪ್ಜಲ್ ಪ್ರಾಯ 18 ವರ್ಷ ಎಂಬಾತನು ದಿನಾಂಕಃ 05-12-2014 ರಂದು 12-30 ಗಂಟೆಗೆ ನೆಲ್ಲಿಕಾಯಿ ರಸ್ತೆಯಲ್ಲಿರುವ ಮಸೀದಿಗೆ ಪ್ರಾರ್ಥನೆಗೆಂದು ಹೋದವನು ಮನೆಗೆ ವಾಪಾಸು ಬಾರದೇ ಇದ್ದು. ಆತನನ್ನು ಈ ತನಕ ಸಂಬಂದಿಕರ ಮನೆ ಹಾಗೂ ಇತರ ಕಡೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಈತನು ಮಾನಸಿಕ ಅಸ್ವಸ್ಥನಾಗಿರುತ್ತಾರೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07-12-2014 ರಂದು ರಾತ್ರಿ 11-14 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಬೂಬಕ್ಕರ್ ಯ್ಯಾಯಾ ರವರ ಪರಿಚಯದ ಅಬ್ದುಲ್ಲ ಎಂಬವರ ಮೊಬೈಲ್ ಗೆ ಆರೋಪಿ ಕಿಶೋರ್ ಮಣಿಕಂಠ ಎಂಬಾತನು ತನ್ನ ಮೊಬೈಲ್ ಫೋನ್ ನಿಂದ ಕರೆ ಮಾಡಿ ನಿಮ್ಮ ಪರಿಚಯದವನಾದ ಅಬ್ದುಲ್ ಯಾಹ್ಯಾನನ್ನು ಕೊಲ್ಲದೇ ಬಿಡುವುದಿಲ್ಲ, ಅವನಿಗೆ ಇದು ಎಚ್ಚರಿಕೆ ಎಂದು ಕೊಲೆ ಬೆದರಿಕೆನ್ನೊಡ್ಡಿದ್ದು, ಈ ವಿಚಾರವನ್ನು ಅಬ್ದಲ್ಲ ರವರಿಂಧ ತಿಳಿದು ದೂರನ್ನು ಸಲ್ಲಿಸಿರುವುದಾಗಿದೆ.
No comments:
Post a Comment