ನಂಬ್ರ: ಸಿ.ಆರ್.ಎಂ(ಸಂಚಾರ)/25 /ಮಂ.ನ/2014
ಪೊಲೀಸು ಆಯುಕ್ತರ ಕಚೇರಿ
ಮಂಗಳೂರು ನಗರ, ಮಂಗಳೂರು
ದಿನಾಂಕ: 12 -12-2014.
ಅಧಿಸೂಚನೆ
ದಿನಾಂಕ: 14-12-2014 ರಂದು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ದರಾಮಯ್ಯರವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಭೇಟಿ ನೀಡುವವರಿದ್ದು, ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಂಚಾರ ಸುವ್ಯವಸ್ಥೆ ಬಂದೋಬಸ್ತ್ ನಿರ್ವಹಣೆಯ ಬಗ್ಗೆ ವಾಹನ ಸಂಚಾರದಲ್ಲಿ ಮಾರ್ಪಾಡುಗಳನ್ನು ಮಾಡಬೇಕಾಗಿರುವುದರಿಂದ ವಿ.ಐ.ಪಿ ರವರು ಸಂಚರಿಸುವ ರಸ್ತೆಗಳಲ್ಲಿ ವಾಹನ ನಿಲುಗಡೆ ಮತ್ತು ಸಂಚಾರವನ್ನು ನಿರ್ಬಂಧಿಸಿ ವಾಹನಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಸೂಚಿಸಿ ಸೂಕ್ತ ಅಧಿಸೂಚನೆ ಹೊರಡಿಸುವಂತೆ ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಉಪ ವಿಭಾಗ, ಮಂಗಳೂರು ನಗರ ಇವರು ಕೋರಿರುತ್ತಾರೆ.
ಅಂತೆಯೇ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಮಾನ್ಯ ಮುಖ್ಯ ಮಂತ್ರಿಯವರ ಆಗಮನದ ವೇಳೆ ನಗರದಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಾಗೂ ವಾಹನಗಳ ಸುಗಮ ಸಂಚಾರದ ಹಿತದೃಷ್ಠಿಯಿಂದ, ವಾಹನ ಸಂಚಾರದಲ್ಲಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಆರ್. ಹಿತೇಂದ್ರ, ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್, ಮಂಗಳೂರು ನಗರ ಆದ ನಾನು ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ 14-12-2014 ರಂದು ಬೆಳಿಗ್ಗೆ 08-00 ಗಂಟೆಯಿಂದ ವಿ.ಐ.ಪಿ ರವರು ಕಾರ್ಯಕ್ರಮ ಮುಗಿಸಿ ವಾಪಸ್ಸು ತೆರಳುವ ತನಕ ಜ್ಯಾರಿಯಲ್ಲಿರುವಂತೆ ಈ ಕೆಳಗೆ ಸೂಚಿಸಿರುವಂತೆ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ಆದೇಶಿಸಿರುತ್ತೇನೆ.
1) ಮಾನ್ಯ ಮುಖ್ಯಮಂತ್ರಿಯವರು ಮಂಗಳೂರು ವಿಮಾನ ನಿಲ್ದಾಣದಿಂದ ಕಾವೂರು-ಬೊಂದೇಲ್-ಪದವಿನಂಗಡಿ-ಸರ್ಕ್ಯೂಟ್ ಹೌಸ್-ನಂತೂರು-ಬಿಕರ್ನಕಟ್ಟೆ-ಕೈಕಂಬ-ಪಡೀಲ್-ಆರ್ಕುಳದವರೆಗೆ ಬಂದು ಹೋಗುವ ಸಮಯದಲ್ಲಿ ಸಂಚರಿಸುವ ಮಾರ್ಗದಲ್ಲಿನ ಅಡ್ಡರಸ್ತೆಗಳಿಂದ ಹಾಗೂ ಎದುರಿನಿಂದ ಯಾವುದೇ ವಾಹನಗಳು ಬಾರದಂತೆ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಯಾವುದೇ ತರಹದ ವಾಹನಗಳ ಅನಾವಶ್ಯಕ ನಿಲುಗಡೆಯನ್ನು ನಿಷೇಧಿಸಲಾಗಿದೆ.
2) ದಿನಾಂಕ: 14-12-2014 ರಂದು ಬೆಳಿಗ್ಗೆ 8.00 ಗಂಟೆಯಿಂದ ವಿಐಪಿ ರವರು ನಿರ್ಗಮಿಸುವವರೆಗೆ ಸಕ್ಯೂರ್ಟ್ ಹೌಸ್ ಆವರಣದಲ್ಲಿ ಅನಾವಶ್ಯಕವಾದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
3) ರಾಷ್ಟ್ರೀಯ ಹೆದ್ಧಾರಿಯಲ್ಲಿಯೂ ಸಹ ವಿಐಪಿ ರವರು ಬಂದು ಹೋಗುವ ಸಮಯದಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
4) ದಿನಾಂಕ 13-12-2014 ಮತ್ತು 14-12-2014 ರಂದು ಪಂಪ್ವೆಲ್ ವೃತ್ತದಿಂದ ನಗರದ ಗಡಿ ಪ್ರದೇಶವಾದ ಅರ್ಕುಳದವರೆಗೆ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
''ಮೇಲಿನ ಈ ನಿರ್ಬಂದನೆಗಳು ವಿ.ಐ.ಪಿ ವಾಹನಗಳು, ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ.''
ಈ ಆದೇಶದನ್ವಯ ಸದ್ರಿ ರಸ್ತೆಯಲ್ಲಿ ಅವಶ್ಯವುಳ್ಳ ಸೂಕ್ತ ಮಾರ್ಕಿಂಗ್ ಮತ್ತು ಸೂಚನಾ ಫಲಕಗಳನ್ನು ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನೇಮಕಗೊಳಿಸಲು ಸಹಾಯಕ ಪೊಲೀಸು ಆಯುಕ್ತರು, ಮಂಗಳೂರು ಸಂಚಾರ ಉಪ ವಿಭಾಗ, ಮಂಗಳೂರು ನಗರ ಇವರು ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 166 ರ ಪ್ರಕಾರ ಅಧಿಕಾರವುಳ್ಳವರಾಗಿರುತ್ತಾರೆ.
ಈ ಅಧಿಸೂಚನೆಯನ್ನು ದಿನಾಂಕ: 12-12-2014 ರಂದು ನನ್ನ ಸ್ವ ಹಸ್ತ ಸಹಿ ಹಾಗೂ ಮುದ್ರೆಯೊಂದಿಗೆ ಹೊರಡಿಸಿರುತ್ತೇನೆ.
ಸಹಿ/-
(ಆರ್. ಹಿತೇಂದ್ರ.)
ಪೊಲೀಸು ಆಯುಕ್ತರು
ಮಂಗಳೂರು ನಗರ
No comments:
Post a Comment