Wednesday, December 24, 2014

Daily Crime Report : 24-12-2014

ದಿನಾಂಕ 24.12.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

2

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-12-2014 ರಂದು ಬೆಳಿಗ್ಗೆ 11-30 ಗಂಟೆಯ ಸಮಯ ಫಿರ್ಯಾದಿದಾರರಾದ ಶ್ರೀ ಅಬ್ದುಲ್ ಲತೀಫ್ ರವರ ಜೊತೆಯಲ್ಲಿ ಅಬ್ದುಲ್ ಹಮೀದ್ ಎಂಬವರು ನಡೆದುಕೊಂಡು ಹೋಗುತ್ತಾ ಕೂಳೂರು ರಾ.ಹೆ 66 ರಲ್ಲಿ ವ್ಹಿ ಆರ್ ಎಲ್ ಕಂಪನಿಯ ಎದುರುಗಡೆ ರಸ್ತೆ ದಾಟುತ್ತಿದ್ದಾಗ ಕಂಪನಿಂದ ಮಂಗಳೂರು ಕಡೆಗೆ ಏಕಮುಖ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಕೆ - 25 ಬಿ- 5318 ನೇ ಲಾರಿಯನ್ನು ಆಪಾದಿತ ಚಾಲಕ ಶಿವಪ್ಪ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದಿದ್ದು, ಪರಿಣಾಮ ಅಬ್ದುಲ್ ಹಮೀದ್ ರವರಿಗೆ ಮುಖಕ್ಕೆ, ಬೆನ್ನಿಗೆ ಗುದ್ದಿದ ರಕ್ತ ಗಾಯವಾಗಿದ್ದು, ಚಿಕಿತ್ಸೆಗಾಗಿ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-12-2014 ರಂದು ರಾತ್ರಿ 08-40 ಗಂಟೆಯ ಸಮಯ ಫಿರ್ಯಾದಿದಾರರಾದ ಶ್ರೀ ಸುಕೇಶ್ ಕುದ್ರೋಳಿ ರವರು ಪಣಂಬೂರು ಜಂಕ್ಷನ್ ನಲ್ಲಿ ಬಸ್ ಕಾಯುತ್ತಿರುವಾಗ ಅವರ ಮಾವ  ಗುರುವಪ್ಪ ಸಾಲ್ಯಾನ್ ರವರು ತನ್ನ ಮನೆಯಿರುವ ಕುಳಾಯಿಗೆ ಹೋಗಲು ಬಸ್ ನಿಲ್ದಾಣಕ್ಕೆ ರಸ್ತೆ ದಾಟುತ್ತಿದ್ದಾಗ  ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ನಂಬ್ರ ತಿಳಿಯಲಾಗದ ಕಾರೊಂದನ್ನು ಅದರ ಅಪರಿಚಿತ ಚಾಲಕ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದ ಪರಿಣಾಮ ಗುರುವಪ್ಪ ಸಾಲ್ಯಾನ್ ರವರಿಗೆ ಗಂಭೀರ ರೀತಿಯಲ್ಲಿ ತಲೆಗೆ, ಎಡಗಾಲಿಗೆ ಮೂಳೆಮುರಿತದ ರಕ್ತ ಗಾಯವಾಗಿದ್ದು, ಚಿಕಿತ್ಸೆಗಾಗಿ ಮಂಗಳೂರು ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಅಪಘಾತಪಡಿಸಿದ ಕಾರನ್ನು ಸ್ಥಳದಲ್ಲಿ ನಿಲ್ಲಿಸದೆ ಚಾಲಕನು ಪರಾರಿಯಾಗಿರುತ್ತಾನೆ.

 

3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಹರಿದಾಸ್ ಸಾಲ್ಯಾನ್ ರವರು ವಿದೇಶದಲ್ಲಿ ಸುಮಾರು 12 ವರ್ಷಗಳ ಕಾಲ ಫೈನಾನ್ಶಿಯಲ್ ಕಂಟ್ರೋಲರ್ ಆಗಿ ಕೆಲಸದಲ್ಲಿದ್ದು, ವೇಳೆ ಪರಿಚಯದ ಆರೋಪಿತರಾದ ದೇವಾನಂದ ಶೆಟ್ಟಿಯವರು ದುಬೈಗೆ ಬರುತ್ತಿದ್ದವರು ಫಿರ್ಯಾದುದಾರರನ್ನು ಭೇಟಿಯಾಗುತ್ತಿದ್ದು, ತನ್ನ ಮಂಗಳೂರಿನಲ್ಲಿರುವ ಡಿಕ್ಸ್ ಕಂಪೆನಿಯಲ್ಲಿ ಕನ್ಸಲ್ಟೆಂಟ್ ಆಗಿ ಬಂದಲ್ಲಿ ತಿಂಗಳಿಗೆ ರೂ. 3 ಲಕ್ಷ ಮತ್ತು ಕಮೀಷನ್ ನೀಡುವುದಾಗಿ ಭರವಸೆ ನೀಡಿ, ಊರಿಗೆ ಕರೆಸಿ ಕೆಲಸ ಮಾಡಿಸಿ ತನ್ನಿಂದ ಕಂಪೆನಿ ಲಾಭಗಳಿಸಿದ್ದು, ತನಗೆ ಸರಿಯಾಗಿ ಸಂಬಳ ನೀಡದೇ ಸುಮಾರು ರೂ 35 ಲಕ್ಷದ ವರೆಗೆ ಬಾಕಿ ಉಳಿಸಿ ನೀಡುವುದಾಗಿ ಭರವಸೆ ನೀಡಿ, ಪಾವತಿಸದೇ ತನ್ನ ವಿರುದ್ಧ ವೃತಾ ಆರೋಪ ಮಾಡಿ, ತನ್ನಿಂದ ಕಂಪೆನಿಗೆ ಪಡೆದ ಲಾಭಕ್ಕೆ ಸರಕಾರಕ್ಕೆ ತೆರಿಗೆ ಪಾವತಿಸದೇ ತಾನು ಕೆಲಸ ತ್ಯಜಿಸಿದ್ದಕ್ಕೆ ಕ್ರಿಮಿನಲ್ ಪ್ರಕರಣ ಹಾಕುವುದಾಗಿ ಬೆದರಿಸಿ, ತಾನು ಮುಂದಕ್ಕೆ ಸೇರಲು ನಿರ್ಧರಿಸಿರುವ ಕಂಪೆನಿಯಲ್ಲಿ ಕೆಲಸ ಮಾಡಲು ತೊಂದರೆ ನೀಡುವ ಸಾಧ್ಯತೆ ಇರುತ್ತದೆ.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23-12-2014 ರಂದು 13:45 ಗಂಟೆಗೆ ಮಂಗಳೂರು ನಗರದ ಬಿಕರ್ನಕಟ್ಟೆ ಕೈಕಂಬ ಪೆಟ್ರೋಲ್ ಪಂಪ್‌‌‌ ಬಳಿ ಕೆಎ-19-ಎಎ-998 ನಂಬ್ರದ ಪಿಕ್ಅಪ್ವಾಹನವನ್ನು ಅದರ ಚಾಲಕ ಮಯ್ಯದ್ದಿ ಎಂಬಾತನು ನಂತೂರಿನಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಿಕರ್ನಕಟ್ಟೆ ಕೈಕಂಬ ಕಡೆಯಿಂದ  ಪಿರ್ಯಾದಿದಾರರಾದ ಕ್ಲೆನ್ತ್ ಆಸಿತ್ ಪಿಂಟೋ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಕೆಎ-19-ಎಕ್ಸ್‌‌‌‌-9480 ನಂಬ್ರದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಬಲಕೈ ಕೋಲು ಕೈಗೆ ಮೂಳೆ ಮುರಿತದ ಗಾಯವಾಗಿದ್ದು, ಬಲಕೈ ಭುಜಕ್ಕೆ, ಮುಖಕ್ಕೆ ಗುದ್ದಿದ ಗಾಯವಾಗಿ ಒಂದು ಹಲ್ಲು ಹೋಗಿದ್ದು, ಬಲಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿರುತ್ತದೆ. ಅಲ್ಲದೇ ಪಿರ್ಯಾದಾರರ ಸ್ಕೂಟರ್‌‌ನಲ್ಲಿ ಸಹಸವಾರಳಾಗಿದ್ದ ಪಿರ್ಯಾದಿದಾರರ ತಂಗಿ ಕ್ರಿಸ್ಟಲ್ಪಿಂಟೋ( (20) ಎಂಬವರಿಗೂ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು, ಮೂಗಿಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುಗಳು ಮಂಗಳೂರು .ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.

 

5.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಸಂತೋಷ್ ಕುಮಾರ್ ಹೊಸಮನೆ ಎಂಬವರು ತನ್ನ ಅಗತ್ಯ ಕೆಲಸ ಮುಗಿಸಿ ಸಂಜೆ ಸುಮಾರು 4.00 ಗಂಟೆಯ ಸಮಯಕ್ಕೆ ತನ್ನ ತಮ್ಮಂದಿರುಗಳಾದ ಅಶೋಕ್ ಕುಮಾರ್, ಸಂಜೀವ ಕುಮಾರ್ ಹಾಗೂ ತಂದೆ ಬಸವರಾಜು ಎಂಬವರೊಂದಿಗೆ  ಲಿಂಗಪ್ಪಯ್ಯಕಾಡು ಎಂಬಲ್ಲಿ ಕುಳಿತು ಮಾತನಾಡುತ್ತಿರುವ ಸಮಯದಲ್ಲಿ ಆರೋಪಿಗಳಾದ ದವರಪ್ಪ ಸನದಿ, ಶ್ರೀಮತಿ ಪ್ರವತಿ ಸನದಿ, ಸುಬ್ರಮಣ್ಯ ಸನದಿ, ಹುಲೆಪ್ಪಾ ಮದರ, ಶ್ರೀಮತಿ ಭಾಗಮ್ಮ ಮದರ, ಮಂಜುನಾಥ ಸನದಿ, ಮಂಜುನಾಥ ರುದ್ರಪ್ಪ ಕುಲಕಮಟಗಿ ಎಂಬವರುಗಳು ಅಕ್ರಮ ಕೂಟ ಸೇರಿ ಪಿರ್ಯಾಧಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ 1ನೇ ಆರೋಪಿ ದವರಪ್ಪ ಸನದಿ ಮತ್ತು 2ನೇ ಆರೋಪಿ ಶ್ರೀಮತಿ ಪ್ರವತಿ ಸನದಿ ಗಳು ಅವ್ಯಾಚ್ಚ ಶಬ್ದಗಳಿಂದ  ಬೈದು ಪಿರ್ಯಾಧಿದಾರರ ಕುತ್ತಿಗೆ ಹಿಡಿದು ಅಂಗಿ ಹರಿದು ಹಾಕಿ ಬೆನ್ನಿಗೆ ಮತ್ತು ಮುಖಕ್ಕೆ ಕೈಯಿಂದ ಹೊಡೆದು ನಂತರ ಆರೋಪಿತರುಗಳು ನಿಮ್ಮನ್ನು ಸಂಸಾರ ಸಹಿತ ಕೊಲ್ಲದೇ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿರುತ್ತಾರೆ.

 

6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 18-12-2014 ರಾತ್ರಿ 20-30 ಗಂಟೆಯಿಂದ 21-15 ಗಂಟೆಯ ಮಧ್ಯೆ ಮಂಗಳೂರು ನಗರದ ಫಳ್ನೀರಿನಲ್ಲಿರುವ ಯುನಿಟಿ ಆಸ್ಪತ್ರೆಯ ಕಂಪೌಂಡ್ ಪಕ್ಕ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರಾದ ಶ್ರೀ ಕೆ.ಎಂ. ಹನೀಫ್ ರವರ ಬಾಬ್ತು ಚಾಸೀಸ್ ನಂಬ್ರ:MB8NF4BAH78133930,  ಇಂಜಿನ್ ನಂಬ್ರ:F479190590ನೇ KA 19X 0845ನೇ ನೋಂದಣಿ ಸಂಖ್ಯೆಯ ನೀಲಿ ಬಣ್ಣದ ಅಂದಾಜು ಮೌಲ್ಯ 14,000/- ರೂ ಬೆಲೆ ಬಾಳುವ Suzuki Heat ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ದ್ವಿಚಕ್ರ ವಾಹನವನ್ನು ಕಳವಾದ ದಿನದಿಂದ ಇಲ್ಲಿಯವರೆಗೆ ಸುತ್ತಮುತ್ತ ಹಾಗೂ ನಗರದ ಇತರ ಕಡೆಗಳಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು ದಿನಾಂಕ 23-12-2014 ರಂದು ಠಾಣೆಗೆ ಬಂದು ಲಿಖಿತ ದೂರು ನೀಡಿರುವುದಾಗಿದೆ.

 

7.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23-12-14 ರಂದು ಪಿರ್ಯಾಧಿದಾರರಾದ ಶ್ರೀ ಮೊಹಮ್ಮದ್ ಶರೀನ್ ರವರು ಮನೆಯಲ್ಲಿದ್ದ ಸಮಯ ಅವರ ನೆರೆಕರೆಯವರಾದ ಕೆ.ಎಂ ನಹೀಮ್ ಎಂಬವರು ಪಿರ್ಯಾದಿದಾರರಿಗೆ ಕರೆ ಮಾಡಿ ಅವರಲ್ಲಿದ್ದ ಸುಮಾರು 30 ಪವನ್ ಚಿನ್ನದ ಒಡವೆಗಳು ಹಾಗೂ ನಗದು ಹಣ ಸುಮಾರು 1.5 ಲಕ್ಷ ಹಣವನ್ನು ಮಂಗಳೂರಿನ ಬೋಂದೆಲ್ ನಲ್ಲಿರುವ ಅವರ ಅಣ್ಣನ ಅಂಗಡಿಗೆ ನೀಡಿ ಬರುವಂತೆ ತಿಳಿಸಿದಂತೆ ಪಿರ್ಯಾದಿದಾರರು ನಹೀಮ್ ರವರ ಅಂಗಡಿಗೆ ಹೋಗಿ ಒಡವೆ ಹಾಗೂ ನಗದು ಹಣವನ್ನಿರಿಸಿದ ಬ್ಯಾಗನ್ನು ತೆಗೆದುಕೊಂಡು ಪಿರ್ಯಾದಿದಾರರ ಬಾಬ್ತು  ಮೋಟಾರ್ ಸೈಕಲ್ ನಲ್ಲಿ ಬೋಂದೆಲ್ ಕಡೆಗೆ ಹೊರಟು ಚೊಕ್ಕಬೆಟ್ಟು ಜಂಕ್ಷನ್ ನಿಂದ ಸುರತ್ಕಲ್ ಕಡೆಗೆ ಹಾದು ಹೋಗುವ ಕಾಂಕ್ರೀಟ್ ರಸ್ತೆಯ ಮೂಲಕ ಚೊಕ್ಕಬೆಟ್ಟು ಬ್ರಿಡ್ಜ್ ನಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಕೆಎ-01-ಇಎಲ್-333 ನೇ ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ನಲ್ಲಿ ಬಂದು ಪಿರ್ಯಾದಿದಾರರ ಮೋಟಾರ್ ಸೈಕಲನ್ನು ಓವರ್ ಟೇಕ್ ಮಾಡಿಕೊಂಡು ಬಂದು ನಿಲ್ಲಿಸುವಂತೆ ಸೂಚಿಸಿ ಅದರಂತೆ ಪಿರ್ಯಾದಿದಾರರು ತನ್ನ  ಮೋಟಾರ್ ಸೈಕಲ್ ನ್ನು ನಿಲ್ಲಿಸಿದಾಗ ಸದ್ರಿ ಅಪರಿಚಿತ ವ್ಯಕ್ತಿಗಳು ಅವರ ಬಳಿ ಇದ್ದ ತಲವಾರಿನಿಂದ ಪಿರ್ಯಾದಿದಾರರಿಗೆ ಬೆದರಿಸಿ ಪಿರ್ಯಾದಿದಾರರ ಬಳಿ ಇದ್ದ ಒಡವೆ ಹಾಗೂ ನಗದು ಹಣ ಇದ್ದ  ಬ್ಯಾಗ್ ನ್ನು ಕಸಿದುಕೊಂಡು ಪರಾರಿಯಾಗಿರುತ್ತಾರೆ.

 

8.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22-12-14 ರಂದು ರಾತ್ರಿ ಸುಮಾರು 12-00 ಗಂಟೆಗೆ ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ 6ನೇ ಬ್ಲಾಕ್ ಪಿರ್ಯಾದಿದಾರರಾದ ಶ್ರೀ ಪಸ್ವೀನ್ ಅಲಿ ರವರ ಮನೆಯ ಗೇಟಿನ ಹೊರಗೆ ಕಾರನ್ನು ನಿಲ್ಲಿಸಿ ಗೇಟು ತೆಗೆಯುವರೇ ಮನೆಯ ಅಂಗಳದೊಳಗೆ ಪ್ರವೇಶಿಸಿದ ಸಮಯ ಇಬ್ಬರು  ನೀಲಿ ಹಾಗೂ ಸಿಲ್ವರ್ ಮಿಶ್ರಿತ ಬಣ್ಣದ ಬಜಾಜ್ ಕಂಪನಿಯ ಮೋಟಾರ್ ಸೈಕಲ್ ಒಂದರಲ್ಲಿ ಬಂದು ಹಿಂಬದಿ ಸವಾರನು ಬೈಕಿನಿಂದ ಇಳಿದು  ಪಿರ್ಯಾದಿದಾರರು ನಿಲ್ಲಿಸಿದ ಕಾರಿನ ಮುಂಭಾಗದ ಡ್ಯಾಷ್ ಬೋರ್ಡ್ ಮೇಲೆ ಇರಿಸಿದ್ದ  ರೂ. 5000/- ಬೆಲೆ ಬಾಳುವ ಸ್ಯಾಮ್ ಸಂಗ್ ಮೊಬೈಲ್ ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಸುರತ್ಕಲ್ ಪೊಲೀಸ್ ಠಾಣಾ ನಿರೀಕ್ಷಕರಾದ ಎಂ ನಟರಾಜ್ ರವರು ದಿನಾಂಕ 23-12-2014 ರಂದು  ಸಂಜೆ 5:30 ಗಂಟೆಗೆ ಠಾಣೆಯಲ್ಲಿರುವಾಗ ಮಂಗಳೂರು ತಾಲೂಕು ಸುರತ್ಕಲ್ ಗ್ರಾಮದ  ಎನ್ ಐಟಿ ಕೆ ಅಂಡರ್ ಪಾಸ್  ಅಡಿಯಲ್ಲಿ  ಒಬ್ಬ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ  ಅಲ್ಲಿಗೆ ಪಂಚರಾದ ರಾಜೇಶ್ ಕೋಟ್ಯಾನ್  ಮತ್ತು  ಪ್ರಸನ್ನ @ ಪ್ರವೀಣ್ ಮತ್ತು ಸಿಬ್ಬಂದಿಗಳನ್ನು ಕರೆದುಕೊಂಡು ಮೇಲಿನ ಸ್ಥಳಕ್ಕೆ ಸಂಜೆ 6:00 ಗಂಟೆಗೆ ತಲುಪಿದಾಗ ಅಲ್ಲಿ ಒಬ್ಬ ವ್ಯಕ್ತಿಯು ಟಿವಿಎಸ್  ಸ್ವಿಸ್  ದ್ವಿ ಚಕ್ರ ವಾಹನದಲ್ಲಿ ಕುಳಿತ್ತುಕೊಂಡು ಸವಾರಿ ಮಾಡುತ್ತಾ ಅನುಮಾನಸ್ಪದವಾಗಿ ಅಚೇ ಇಚೇ ತಿರುಗಾಡಿಕೊಂಡಿದ್ದು, ಆತನನ್ನು  ಸಿಬ್ಬಂದಿಗಳೊಂದಿಗೆ ಸುತ್ತುವರಿದು ನಿಲ್ಲಿಸಿ ಪರಿಶೀಲಿಸಿದಾಗ ಸದ್ರಿ ವಾಹನದಲ್ಲಿ  ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ಲಕೋಟೆಯಲ್ಲಿ  120 ಗ್ರಾಂ ತೂಕದ ಗಾಂಜಾದ ಸೊಪ್ಪು ಮತ್ತು ಮೊಗ್ಗುಗಳು ಹಾಗೂ   3 ಗ್ರಾಂ ತೂಕದ 10  ಚಿಕ್ಕ ಚಿಕ್ಕ  ಪ್ಲಾಸ್ಟೀಕ್ ಪ್ಯಾಕ್ ಗಳಲ್ಲಿ  ಗಾಂಜಾ ಸೊಪ್ಪು ಮತ್ತು ಮೊಗ್ಗುಗಳು ಇರುವುದು ಕಂಡು ಬಂದಿರುತ್ತದೆ. ಒಟ್ಟು 150 ಗ್ರಾಮ ತೂಕದ ಗಾಂಜಾದ ಸೊಪ್ಪು ಮತ್ತು ಮೊಗ್ಗುಗಳು ಇರುತ್ತದೆ ಅಲ್ಲದೇ ಚೀಲದಲ್ಲಿ ರೂ: 10 30 ನೋಟುಗಳು ಒಟ್ಟು 300 ರೂ ಗಳು ಇದ್ದು ಇದು ಗಾಂಜಾ ಮಾರಾಟ ಮಾಡಿ ಬಂದ ಹಣ ಎಂದು ಆತನು ತಿಳಿಸಿದ್ದು, ಸದ್ರಿ ಗಾಂಜಾವನ್ನು ವಶದಲ್ಲಿ ಇರಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡಲು ಇಟ್ಟುಕೊಂಡಿರುವುದಾಗಿ ತಿಳಿಸಿದನು.  ಆತನ ಹೆಸರು ಕೇಳಲಾಗಿ ಆತನು ತನ್ನ ಹೆಸರು ವರ್ಷ  ಕೇಶವ ಸನಿಲ್‌‌‌ @ ಕೇಶವ ಪೂಜಾರಿ , ಪ್ರಾಯ: 41 ವರ್ಷ , ತಂದೆ: ದಿ/ ಶೇಷಪ್ಪ ಕರ್ಕೆರ, ವಾಸ: ಸೈಟ್ನಂಬ್ರ 314, 5 ನೇ ಬ್ಲಾಕ್‌‌‌, ಕೃಷ್ಣಾಪುರ, ಕಾಟಿಪಳ್ಳ ಗ್ರಾಮ, ಮತ್ತು ಅಂಚೆ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿದನು. ಕೃತ್ಯಕ್ಕೆ ಉಪಯೋಗಿಸಿದ ಟಿವಿಎಸ್  ಸ್ವಿಸ್  ದ್ವಿ ಚಕ್ರ ವಾಹನದ ನೊಂದಣಿ ಸಂಖ್ಯೆ KA-19/ EL 4472 ಆಗಿರುತ್ತದೆ ಅಪಾದಿತನು ಯಾವುದೇ ದಾಖಲೆ ಪತ್ರಗಳು ಇಲ್ಲದೇ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಿರುವುದ್ದರಿಂದ ಅಪಾದಿತ ವಿರುದ್ದ ಪ್ರಕರಣ ದಾಖಲಿಸಿದ್ದಾಗಿದೆ.

 

10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-12-2014 ರಂದು ಸಮಯ ಸುಮಾರು 10-00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಮಾಧವ ಪೂಜಾರಿ ರವರು ತನ್ನ ಬಾಬ್ತು ರಿಕ್ಷಾದಲ್ಲಿ  ಬಾಡಿಗೆ ಮಾಡಿಕೂಂಡು ಹೋಗುವ ಸಮಯ ಮಂಗಳೂರು ತಾಲೂಕು ತೆಂಕುಳಿಪಾಡಿ ಗ್ರಾಮದ ನಾಲುಪಾಲು ದೂಡ್ಡ ಕೆರೆ ಎಂಬಲ್ಲಿ ರಸ್ತೆಯ ಎಡಭಾಗದ ಕೆರೆಯ ಬಳಿ ನೀರಿನ  ಬದಿಯಲ್ಲಿ ರಿಕ್ಷಾವನ್ನು ನಿಲ್ಲಿಸಿ ನೋಡಲಾಗಿ ಒಂದು ಬಿಳಿ ಬಣ್ಣದ ದನವು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅಲ್ಲಿಂದ ಸುಮಾರು 300 ಮೀಟರ್ ದೂರದಲ್ಲಿ ಇನ್ನೂಂದು ಕಂದು ಬಣ್ನದ ದನವು ಮೃತ ಪಟ್ಟ ಸ್ಥತಿಯಲ್ಲಿ ಕಂಡು ಬಂದಿದ್ದು,  ದನಗಳನ್ನು ಯಾರೋ ತಂದು ಎಸೆದಿರುವರೊ ಅಥವಾ ಅವುಗಳು ನೈರ್ಸಗಿಕವಾಗಿ ಮೃತ ಪಟ್ಟಿರಬಹುದೂ  ಎಂಬುದಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪಿರ್ಯಾದಿ ನೀಡಿರುವುದಾಗಿದೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:18.12.2014 ರಂದು ಪಿರ್ಯಾದಿದಾರರಾದ ಶ್ರೀ ಪರಮೇಶ್ವರ ಪೂಜಾರಿ ರವರು ಪಡೀಲ್‌‌ ಕರ್ಮಾರ್ನಲ್ಲಿರುವ ತನ್ನ ಅಕ್ಕನ ಮನೆಗೆ  ಹೋಗಿ ವಾಪಾಸು ಸಂಜೆ  ಪಿರ್ಯಾದಿದಾರರು ತನ್ನ ಮನೆಗೆ ವಾಪಾಸು ಹೋಗುವರೇ  ಅವರ ಮನೆಯಿಂದ ಪಡೀಲ್‌‌ ಬಸ್ಸು ತಂಗುದಾಣಕ್ಕೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಾ ಸಂಜೆ ಸುಮಾರು 4.15 ಗಂಟೆ ವೇಳೆಗೆ ಪಡೀಲ್ನಲ್ಲಿ ಪಡೀಲ್‌‌ ಟೊಯೋಟಾ ಶೋರೂಮಿನ ಎದುರುಗಡೆ ತಲುಪಿದಾಗ  ಬಿ.ಸಿ ರೋಡ್‌‌ ಕಡೆಯಿಂದ ಮಂಗಳೂರು ಕಡೆಗೆ KA-21-Q-8611 ನೇ ಸ್ಕೂಟರ್‌‌ ನ್ನು ಅದರ ಸವಾರ ಸುಧಾಕರ ರವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸಮೀಪ ಬಂದಾಗ ಸದ್ರಿ ಸ್ಕೂಟರ್ ಮೇಲಿನ ಹತೋಟಿಯನ್ನು ಕಳೆದುಕೊಂಡು  ರಸ್ತೆ ಬದಿಒಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಪಿರ್ಯಾದಿದಾರರಿಗೆ ಡಿಕ್ಕಿಹೊಡೆದ ಪರಿಣಾಮದ ಅವರ ಬಲಕಾಲಿಗೆ ತೀವ್ರಸ್ವರೂಪದ ಜಖಂ ಉಂಟಾಗಿರುತ್ತದೆ.

 

12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 15.12.2014 ರಂದು ಪಿರ್ಯಾದಿದಾರರಾದ ಶ್ರೀ ರಂಜಿತ್ ಎಂ. ರವರು ತನ್ನ ಬಾಬ್ತು  KA19-EM-4886 ನೇದರಲ್ಲಿ  ಪಿರ್ಯಾದಿದಾರರ ತಮ್ಮ ಮೋಟಾರ್ಸೈಕಲನ್ನು ಚಲಾಯಿಸುತ್ತಾ  ಪಿರ್ಯಾದಿದಾರರು ಹಿಂಬದಿ ಸವಾರನಾಗಿ ಕುಳಿತುಕೊಂಡು ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಬೆಳಿಗ್ಗೆ ಸುಮಾರು 8.30 ಗಂಟೆಗೆ ರಾಹೆ-66 ರಲ್ಲಿ ಜಪ್ಪಿನಮೊಗರು ಕಂರ್ಬಿಸ್ಥಾನದ್ವಾರದ ಬಳಿ  ತಲುಪಿದಾಗ ಮಂಗಳೂರು ಕಡೆಯಿಂದ KA-42-2282 ನೇ ಮಹೇಶ್‌‌ ಬಸ್ಸನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ  ತನ್ನ ಮುಂದಿನಿಂದ ಹೋಗುತ್ತಿದ್ದ ಒಂದು ಕಾರನ್ನು ಓವರ್‌‌ಟೇಕ್‌‌ ಮಾಡುವ ಪ್ರಯತ್ನದಲ್ಲಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌‌ ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ತಮ್ಮ  ಮೋಟಾರ್‌‌ ಸೈಕಲ್‌‌ ಸಮೇತ ರಸ್ತೆಗೆ ಬಿದ್ದು  ಪಿರ್ಯಾದಿದಾರರ ಬಲಕಾಲಿನ ತೊಡೆಗೆ ಮೂಳೆ ಮುರಿತದ ಗಾಯ ಮತ್ತು ಬಲಕೈಗೆ ತರಚಿದ ಗಾಯವಾಗಿರುತ್ತದೆ ಹಾಗೂ ದೀಪಕ್‌‌ ರವರ  ಬಲಕಾಲು ಹಾಗೂ ಬಲಭುಜಕ್ಕೆ ಗುದ್ದಿದ ಹಾಗೂ ತರಚಿದ ರಕ್ತಬರುವ ಗಾಯವಾಗಿರುತ್ತದೆ.

 

13.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22.12.2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ಸಂತೋಷ್ ರವರು ತನ್ನ  ಬಾಬ್ತು ಕೆಎ-19-ಆರ್‌‌-6293 ನೇ ಮೋಟಾರ್‌‌ ಸೈಕಲನ್ನು ಚಲಾಯಿಸಿಕೊಂಡು ಶಕ್ತಿನಗರದಿಂದ ಕಂಡೆಟ್ಟು ಮಾರ್ಗವಾಗಿ ಮಂಗಳೂರು ಕಡೆಗೆ ಹೋಗುತ್ತಾ  ಬೆಳಿಗ್ಗೆ ಸುಮಾರು 07.30 ಗಂಟೆಗೆ ಶಕ್ತಿನಗರ ಭಾರತ್‌‌ ಗ್ಯಾಸ್‌‌ ಕಂಪೆನಿ ಬಳಿ ತಲುಪಿದಾಗ  ಪಿರ್ಯಾದಿದಾರರ ಮೋಟಾರ್‌‌ ಸೈಕಲ್‌‌ ಮುಂದುಗಡೆಯಿಂದ ಅಂದರೆ ಕಂಡೆಟ್ಟು ಕಡೆಯಿಂದ ಶಕ್ತಿನಗರ ಕಡೆಗೆ ಕೆಎ-19-ಎಂಬಿ-7258 ನೇ ಮಾರುತಿ ಸ್ವಿಫ್ಟ್‌‌ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್‌‌ ಸೈಕಲ್‌‌ಗೆ ಡಿಕ್ಕಿಹೊಡೆದ ಪರಿಣಾಮ  ಪಿರ್ಯಾದಿದಾರರ ಬಲಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತದಗಾಯ, ಬಲಕೈ ಮೊಣಗಂಟಿನ ಬಳಿ ರಕ್ತಗಾಯ ಹಾಗೂ ತಲೆಯ ಹಿಂಬದಿಗೆ ಜಜ್ಜಿದ ಗಾಯವಾಗಿರುತ್ತದೆ.

No comments:

Post a Comment