Tuesday, December 9, 2014

Daily Crime Report 07-12-2014

ದಿನಾಂಕ 07.12.201412:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05/12/2014 ರಂದು ಸಮಯ ಸುಮಾರು 16:15 ಗಂಟೆಗೆ ಫಿರ್ಯಾದುದಾರರಾದ ಶ್ರೀ ಶೋಬಿನ್ ಶರಾವೋ ರವರು ತಮ್ಮ ಮೋಟರ್ ಸೈಕಲ್ ನಂಬ್ರ KA-19-EC-0936 ನೇ ದರಲ್ಲಿ ಸವಾರರಾಗಿದ್ದುಕೊಂಢು ಜ್ಯೋತಿ ವೃತ್ತದ ಕಡೆಯಿಂದ ಹಂಪನಕಟ್ಟೆ ಕಡೆಗೆ ಹೋಗುವರೇ CANARA JUWELLARY ಎದುರುಗಡೆ ತಲುಪಿದಾಗ ಬಸ್ಸು ನಂಬ್ರ KA-19-C-3367 ನೇದನ್ನು ಚಾಲಕ ನವೀನ್ ಎಂಬಾತನು ಜ್ಯೋತಿ ವೃತ್ತದ ಕಡೆಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಢು ಬಂದು ಫಿರ್ಯಾದುದಾರರ ಮೋಟರ್ ಸೈಕಲನ್ನು ಓವರ್ ಟೇಕ್ ಮಾಡುವ ವೇಳೆ ಮೋಟಾರು ಸೈಕಲಿನ ಬಲಬದಿಗೆ ಢಿಕ್ಕಿಪಡಿಸಿ ಅಪಘಾತವನ್ನು ಉಂಟುಮಾಡಿದ ಪರಿಣಾಮ ಫಿರ್ಯಾದುದಾರರು ರಸ್ತೆಗೆ ಬಿದ್ದು ಬಲಭಾಗದ ಪಕ್ಕೆಲುಬಿನ ಬಳಿ ಚರ್ಮ ಕಿತ್ತು ಹೊದಂತಹ ಹಾಗೂ ಹೊಟ್ಟೆಯ ಬಳಿ ಗುದ್ದಿದ ನೋವು ಉಂಟಾಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

2.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-12-2014 ರಂದು ಮಧ್ಯಾಹ್ಮ ಸುಮಾರು 2.15 ಗಂಟೆಗೆ ಮಂಗಳೂರು ನಗರದ ಪಿಲಿಕ್ಷ್ ಪೈ ಬಜಾರ್ ಎಂಬಲ್ಲಿನ ಪ್ಯಾಕ್ ಮಾನ್ ಪ್ಲಾಸ್ಟಿಕ್ ಅಂಗಡಿಯ ಎದುರು ಅಂಗಡಿಯ ಕೆಲಸಗಾರರಾದ ಶ್ರೀಮತಿ ಸೇವಂತಿ ಮತ್ತು ಶ್ರೀಮತಿ ಗಾಯಾತ್ರಿ ರವರು ಪ್ಯಾಕ್ ಮೆನ್ ಗೋಡಾನ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಸೇವಂತಿಯ ಗಂಡ ಕಲ್ಲೇಶ್ ಎಂಬವರು ಸೇವಂತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದು ಸೇವಂತಿಯ ಕುತ್ತಿಗೆಯನ್ನು ಕಡಿಯಲು ಪ್ರಯತ್ನಿಸಿದಾಗ ಗಾಯಾತ್ರಿಯು ಕಲ್ಲೇಶನನ್ನು ದೂಡಿ ತಡೆದಿದ್ದು ಕುತ್ತಿಗೆಯ ಮೇಲೆ ಬೀಳಬೇಕಾದ ಕತ್ತಿಯ ಏಟು ಸೇವಂತಿಯ ತಲೆಯ ಎಡಬಾಗಕ್ಕೆ ಬಿದ್ದು  ರಕ್ತಗಾಯಗೊಂಡು ಕುಸಿದು ಬೀಳುವಾಗ ಗಾಯಾತ್ರಿ ಮತ್ತು ಪ್ಯಾಕ್ ಮನ್ ಅಂಗಡಿಯ ಮೇನೆಜರ್ ಪ್ರಾನ್ಸಿಸ್ ರೋಡಿಗ್ರಸ್ ಆತನನ್ನು ಹಿಡಿದಿದ್ದು  ವೇಳೆ ಕಲ್ಲೇಶ ತನ್ನ ಹೆಂಡತಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾಗಿದೆ.  ಗಾಯಾಳುವನ್ನು ತಾರಾ ಕ್ಲೀನಿಕ್ ಆಸ್ಪತ್ರೆಗೆ ದಾಖಲಿಸಿದ್ದು ಗಾಯಾಳು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

3.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06/12/2014 ರಂದು ಸಂಜೆ 6-45 ಗಂಟೆಗೆ KA-19-ME-2376 ನಂಬ್ರದ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಳವೂರು ಗ್ರಾಮದ ಕರಂಬಾರು CAFS ಬಳಿ KA-20-ED-0030 ನಂಬ್ರದ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಸವಾರ ಮತ್ತು ಸಹ ಸವಾರ ಗಾಯಗೊಂಡಿದ್ದು ಸ್ಕೂಟರ್ ಎಸೆಯಲ್ಪಟ್ಟು ಫಿರ್ಯಾಧಿದಾರರಾದ ಶ್ರೀ ದರ್ಶನ್ ಇ.ಎ. ರವರ KA-19-MD-8804 ನಂಬ್ರದ ಕಾರಿಗೆ ಡಿಕ್ಕಿ ಹೊಡೆದುದರಿಂದ ಕಾರು ಕೂಡ ಜಖಂಗೊಂಡಿರುವುದಾಗಿದೆ.

 

No comments:

Post a Comment