ದಿನಾಂಕ 01.12.2014 ರ 14:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 3 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 11 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29.11.2014 ರಂದು ಮದ್ಯಾಹ್ನ ಪಿರ್ಯಾದಿದಾರರಾದ ಶ್ರೀ ಲಕ್ಷ್ಮಣ ಜಿ. ರವರು ಲಾಲ್‌ಬಾಗ್ ಜಂಕ್ಷನ್ ಬಳಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಸಮಯ 13:30 ಗಂಟೆಗೆ ದ್ವಿಚಕ್ರ ವಾಹನ ನಂಬ್ರ ಕೆ.ಎ-19-ಇ.ಎಫ್-0247 ನೇದನ್ನು ಅದರ ಸವಾರರು ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಲಾಲ್‌ಬಾಗ್‌ನಿಂದಾಗಿ ಬಳ್ಳಾಲ್‌ಬಾಗ್ ಕಡೆಗೆ ಚಲಾಯಿಸುತ್ತಾ, ಲಾಲ್‌ಬಾಗ್‌ನ ಭಾರತ್ ಬೀಡಿ ಬಳಿ ತಲುಪಿದಾಗ, ಅವರ ಹಿಂದಿನಿಂದ ಅಂದರೆ ಕೆ.ಎಸ್.ಆರ್.ಟಿ.ಸಿ ಲಾಲ್‌ಬಾಗ್‌ನಿಂದಾಗಿ ಬಳ್ಳಾಲ್‌ಬಾಗ್ ಕಡೆಗೆ ಬಸ್ ನಂಬ್ರ ಕೆ.ಎ-21-ಎ-4460 ನೇದನ್ನು ಅದರ ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ಮೋಟಾರು ಸೈಕಲ್ ಸವಾರರು ರಸ್ತೆಗೆ ಎಸೆಯಲ್ಪಟ್ಟು, ಅವರ ದೇಹದ ಮೇಲೆ ಬಸ್ಸಿನ ಎಡಬದಿಯ ಮುಂದಿನ ಚಕ್ರ ಹಾದು ಹೋಗಿ ಗಾಯಗೊಂಡವರನ್ನು ಪಿರ್ಯಾದಿದಾರರು ಒಂದು ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಸದ್ರಿ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 29.11.2014 ರಂದು ಮದ್ಯಾಹ್ನ 13:50 ಗಂಟೆಗೆ ಸದ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಸದ್ರಿ ಅಪಘಾತದ ಬಳಿಕ ಬಸ್ನ ಚಾಲಕ ಸ್ಥಳದಿಂದ ಪರಾರಿಯಾಗಿರುತ್ತಾನೆ.
2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಿ. ಎಂ. ಕುಟ್ಟಪ್ಪ ರವರು ಮಂಗಳೂರು ನಗರದ ಕೊಟ್ಟಾರ ಇನ್‌ಪೋಸಿಸ್ ಸಂಸ್ಥೆಯ ಭದ್ರತಾ ಸಿಬ್ಬಂದಿಯಾಗಿದ್ದು, ದಿನಾಂಕ 01.12.2014 ರಂದು 00.32 ಗಂಟೆಗೆ ಮಂಗಳೂರು ನಗರದ ಕೊಟ್ಟಾರ ಇನ್‌ಪೋಸಿಸ್ ಸಂಸ್ಥೆಯ 3 ನೇ ಗೇಟಿನ ಬಳಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಆರೋಪಿ ಜಾನ್ ಮ್ಯಾಥ್ಯೂ ಮತ್ತು ಇತರ ಮೂವರು ತಮ್ಮ ಬಾಬ್ತು ಕಾರು KL-07 -BR- 4994 ನೇದರಲ್ಲಿ ಇನ್ಪೋಸಿಸ್‌ನ ಕಂಪೌಂಡ್ ಗೋಡೆಯ ಹೊರಗೆ ರಸ್ತೆಯಲ್ಲಿ ನಿಲ್ಲಿಸಿ ಪಟಾಕಿಯನ್ನು ಇನ್‌ಪೋಸಿಸ್ ಕಂಪೌಂಡ್ ಒಳಗೆ ಎಸೆದಿದ್ದು, ಇದನ್ನು ಪಿರ್ಯಾದಿ ಆಕ್ಷೇಪಿಸಿದಾಗ ಆರೋಪಿತನು ಇತರ 3 ಜನರೊಂದಿಗೆ ಸೇರಿ ಪಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಇನ್ನೊಂದು ಪಟಾಕಿಯನ್ನು ಕಂಪೌಂಡ್ ಒಳಗಡೆ ಎಸೆದಿದ್ದು ಅದು ಸಹಾ ಒಡೆದಿರುತ್ತದೆ. ನಂತರ ಪಿರ್ಯಾದಿ ತನ್ನ ಇನ್ನೋರ್ವ ಜತೆಯಲ್ಲಿದ್ದ ಭದ್ರತಾ ಸಿಬ್ಬಂದಿ ಸುರೇಶ್ ಶೆಟ್ಟಿಯವರೊಂದಿಗೆ ಸೇರಿ ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದಾಗ ಆರೋಪಿಗಳು ಬಂದಿದ್ದ ಕಾರಿನೊಂದಿಗೆ ತಪ್ಪಿಸಿಕೊಂಡಿರುತ್ತಾರೆ. ಈ ಕೃತ್ಯವು ಸಂಸ್ಥೆಯ ಸಿ.ಸಿ.ಕ್ಯಾಮರಾದಲ್ಲಿ ದಾಖಲಾಗಿರುವುದಾಗಿಯೂ, ನಂತರ ಪಿರ್ಯಾದಿ ನಡೆದ ವಿಚಾರವನ್ನು ಸಂಸ್ಥೆಯ ಮೇಲಾಧಿಕಾರಿಗಳಿಗೆ ತಿಳಿಸಿ ಅವರ ನಿರ್ಧೆಶನದಂತೆ ಠಾಣೆಗೆ ಬಂದು ದೂರು ನೀಡಿದ್ದು, ಸದ್ರಿ ಆರೋಪಿ ಜಾನ್ ಮ್ಯಾಥ್ಯೂ ಎಂಬಾತನು ಇನ್‌ಪೋಸಿಸ್ ಸಂಸ್ಥೆಯ ಉದ್ಯೋಗಿಯಾಗಿದ್ದು, ಸದ್ರಿಯವನನ್ನು ಕೆಲಸದಿಂದ ವಜಾ ಮಾಡಿರುವ ಕೋಪದಿಂದ ಇನ್‌ಪೋಸಿಸ್ ಸಂಸ್ಥೆಯವರನ್ನು ಹೆದರಿಸುವ ಉದ್ದೇಶದಿಂದ ನಿರ್ಲಕ್ಷ್ಯ ವರ್ತನೆ ತೋರಿ ಈ ಕೃತ್ಯವನ್ನು ಎಸಗಿರುವುದಾಗಿದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29-11-2014 ರಾತ್ರಿ ಸುಮಾರು 10:00 ಗಂಟೆ ಸಮಯಕ್ಕೆ ಮಂಗಳೂರು ನಗರದ ಕುಲಶೇಖರ ಕಲ್ಪನೆ ಪ್ರಫುಲ್ಲ ಮೆಡಿಕಲ್ ಬಳಿ ಕೆಎ-19-ಇಹೆಚ್-9555 ನಂಬ್ರದ ಮೊಟಾರು ಸೈಕಲನ್ನು ಅದರ ಸವಾರ ರಾಕೇಶ್ ಶೆಟ್ಟಿ ಎಂಬಾತನು ಬಿಕರ್ನಕಟ್ಟೆ ಕೈಕಂಬ ಕಡೆಯಿಂದ ಬೈಕ್‌ನಲ್ಲಿ ವೇಗವಾಗಿ ಬಂದು ಎದುರಿನಿಂದ ಬರುತ್ತಿದ್ದ ಯಾವುದೋ ವಾಹನವನ್ನು ಕಂಡು ತನ್ನ ಬೈಕ್‌ಗೆ ನಿರ್ಲಕ್ಷತನದಿಂದ ಬ್ರೇಕ್ ಹಾಕಿ ಎಡಕ್ಕೆ ತಿರುಗಿಸಿದ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆಯ ಬದಿಯ ಕಲ್ಲಿಗೆ ರಾಕೇಶನ ತಲೆಯು ತಾಗಿ ಆತನ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಕೊಲೊಸೋ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮದ್ಯೆ ಮೃತಪಟ್ಟಿರುತ್ತಾರೆ.
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29/11/2014 ರಂದು ಸಮಯ ಸುಮಾರು ರಾತ್ರಿ 21:30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಗಣೇಶ್ ರವರು ಸುರತ್ಕಲ್ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಟ್ಯಾಂಕರ್ ಅನ್ನು ಕೆ ಪಿ ಟಿ ಬಳಿಯ ಬಿ ಎಸ್ ಎನ್ ಎಲ್ ಕಛೆರಿಯ ಬಳಿ ನಿಲ್ಲಿಸಿ ಇತರೆ ಚಾಲಕರೋದಿಗೆ ರಸ್ತೆ ಬದಿಯಲ್ಲಿ ಊಟಕ್ಕೆಂದು ಹೋಗುವಾಗ ಕೆ ಪಿ ಟಿ ಕಡೆಯಿಂದ KA 19 N 6563 ನೇ ನಂಬ್ರದ ಮಾರುತಿ ಒಮ್ನಿ ಕಾರನ್ನು ಅದರ ಚಾಲಕ ಕೆ ಪಿ ಟಿ ಕಡೆಯಿಂದ ನಂತೂರು ಕಡೆಗೆ ಅತೀ ವೇಗ ಮತ್ತು ಅಜಾಗರೂಕತರಯಿಂದ ಮಾನವ ಜೀವಕ್ಕೆ ಹಾನಿಯಾಗುವ ರಿತಿಯಲ್ಲಿ ಚಲಾಯಿಸಿಕೊಂಡು ಬಂದು ಪಳನಿಸ್ವಾಮಿ ಎಂಬುವರಿಗೆ ಡಿಕ್ಕಿ ಪಡಿಸಿದ ಪರಿಣಾಮ ರಸ್ತೆಗ ಬಿದ್ದು ಗಂಭಿರ ಸ್ವರೂಪದ ಗಾಯಗೊಂಡು ಪಾಧರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29/11/2014 ರಂದು ಸಂಜೆ ಸುಮಾರು 6:15 ಗಂಟೆಗೆ ಪಿರ್ಯಾದುದಾರರಾದ ಶ್ರೀ ಪ್ರಶಾಂತ್ ಶೆಟ್ಟಿ ರವರು ಮಂಗಳೂರು ನಗರದ ಲ್ಯಾಂಡ್ ಮಾರ್ಕ್ ಕೆ ಪಿ ಟಿ ಕಡೆಯಿಂದ ಕೊಟ್ಟಾರಾ ಚೌಕಿ ಕಡೆಗೆ ತನ್ನ ಬಾಬ್ತು ಮೋ ಸೈ ನಂಬ್ರ KA-19 EF-2061 ನೇ ದರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಒಂದು ಅಪರಿಚಿತ ಮೋಟರ್ ಸೈಕಲ್‌ನ್ನು ಅದರ ಸವಾರ ಕೆ ಪಿ ಟಿ ಕಡೆಯಿಂದ ಕೊಟ್ಟಾಚೌಕಿ ಕಡೆಗೆ ಮಾನವ ಜಿವಕ್ಕೆ ಹಾನಿಯಾಗುವ ರೀತಿಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂಧ ಚಲಾಯಿಸಿಕೊಂಡು ಹೋಗಿ ಫಿರ್ಯಾದುದಾರರ ಮೋಟಾರ್ ಸೈಕಲ್ ಅನ್ನು ಒವರಟೆಕ್ ಮಾಡಿ ಸುಮಾರು 50 ಅಡಿ ಮುಂದೆ ಹೋಗಿ ಎದುರಿನಿಂದ ಹೋಗುತ್ತಿದ್ದ ರಾಘವ ನಾಯರ್ ಎಎಸ್‌ಐ. ಉರ್ವಾ ಪೊಲೀಸ್ ಠಾಣೆರವರು ಸವಾರಿ ಮಾಡುತ್ತಿದ್ದ ಕೆಎ-19-ಇಜಿ-1606 ನಂಬ್ರದ ಬುಲೆಟ್ ಬೈಕನ್ನು ಓವರ್‌ಟೇಕ್ ಮಾಡುವ ವೇಳೆ ಬುಲೆಟ್ ಬೈಕಿಗೆ ಡಿಕ್ಕಿ ಪಡಿಸಿ ಕೊಟ್ಟಾರ ಚೌಕಿ ಕಡೆಗೆ ಪರಾರಿಯಾಗಿದ್ದು, ಈ ಅಪಘಾತದಿಂದ ಬುಲೆಟ್ ಸವಾರ ರಾಘವ ನಾಯರ್ರವರು ರಸ್ತೆಗೆ ಬಿದ್ದು ಎಡಕಾಲಿಗೆ, ಮೋಣಗಂಟಿಗೆ, ಮುಖಕ್ಕೆ, ತರಚಿದ ಗಾಯವಾಗಿರುತ್ತದೆ. ಗಾಯಾಳುವು ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
6.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28.11.2014 ರಂದು ಫಿರ್ಯಾದಿದಾರರಾದ ಶ್ರೀ ಅಮೀರ್ ರವರು ಬೋಳಿಯಾರು ಮಸೀದಿಯಿಂದ ತನ್ನ ಮನೆಗೆ ಹೋಗುವರೇ ಆಟೋರಿಕ್ಷಾ ನಂಬ್ರ ಕೆಎ-19ಡಿ-2197 ನೇಯದರಲ್ಲಿ ಪ್ರಯಾಣಿಕನಾಗಿ ಹೋಗುತ್ತಿರುವಾಗ ಮದ್ಯಾಹ್ನ 13:30 ಗಂಟೆಗೆ ಮಂಗಳೂರು ತಾಲೂಕು, ಬೋಳಿಯಾರು ಗ್ರಾಮದ, ಪಲ್ಲಸೈಟ್ ಎಂಬಲ್ಲಿಗೆ ತಲುಪುತ್ತಿದ್ದಂತಯೇ ಆಟೋರಿಕ್ಷಾವನ್ನು ಅದರ ಚಾಲಕ ಹುಸೈನಾರ್ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ, ಫಿರ್ಯಾದಿದಾರರು ರಿಕ್ಷಾದಿಂದ ರಸ್ತೆಗೆ ಬಿದ್ದು, ಫಿರ್ಯಾದಿದಾರರ ಬಲಕಾಲಿನ ಕೋಲುಕಾಲಿನ ಮೇಲೆ ರಿಕ್ಷಾದ ಹಿಂದಿನ ಎಡಗಡೆಯ ಚಕ್ರ ಹರಿದು ಕೀಲು ಮುರಿತದ ಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿದಾರರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ.
8.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-11-2014 ರಂದು ಪಿರ್ಯಾದಿದಾರರಾದ ಶ್ರೀ ಕೀರ್ತನ್ ಶೆಟ್ಟಿ ರವರು ತನ್ನ ಅಣ್ಣ ಶರತ್ ಚಲಾಯಿಸುತ್ತಿದ್ದ, ಅವರ ತಂದೆಯವರ ಬಾಬ್ತು ಕೆಎ-19-ಇಎಲ್-5688ನೇ ಮೋಟಾರ್ ಸೈಕಲ್ ನಲ್ಲಿ ಸಹಸವಾರನಾಗಿ ಕುಳಿತು ತನ್ನ ಮನೆಯಿಂದ ಹೊರಟು ಬೋಳಿಯಾರಿಗೆ ಸಂಬಂಧಿಕರ ಮನೆಗೆ ಹೋಗುತ್ತಿರುವ ಸಮಯ ಬಂಟ್ವಾಳ ತಾಲೂಕು, ಕುರ್ನಾಡು ಗ್ರಾಮದ ಮುಡಿಪು ಸಮೀಪ ಕಾಯಾರ್ ಗೋಳಿ ಕ್ರಾಸ್ ಎಂಬಲ್ಲಿ ಮಧ್ಯಾಹ್ನ 3:30 ಗಂಟೆಗೆ ತಲಪುವಾಗ ಮುಂದಿನಿಂದ ಹೋಗುತ್ತಿದ್ದ ಲಾರಿಯೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ನನ್ನ ಅಣ್ಣ ಶರತ್ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕಿಡ್ ಆಗಿ ಆಯ ತಪ್ಪಿ ಡಾಮಾರು ರಸ್ತೆಗೆ ಮೋಟಾರ್ ಸೈಕಲ್ ಸಮೇತ ಬಿದ್ದ ಪರಿಣಾಮ ಪಿರ್ಯಾದಿಯ ಬಲಕಾಲಿನ ಬೆರಳಿಗೆ, ಮಣಿಗಂಟಿಗೆ ಗುದ್ದಿದ ಹಾಗೂ ರಕ್ತಗಾಯವಾಗಿರುವುದಾಗಿದೆ. ಈ ಅಪಘಾತಕ್ಕೆ ಶರತ್ ನ ಅತೀ ವೇಗ ಅಜಾಗರೂಕತೆಯ ಚಾಲನೆ ಆಗಿರುತ್ತದೆ.
9.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ರಘುಥಮನ್ ಇವರು ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿ ಸಾಗರ್ ಲಾಡ್ಜ್ ಎಂಬ ಪ್ರಾಪರ್ಟಿಯನ್ನು ಹೊಂದಿದ್ದು, 2013 ನೇ ಇಸವಿಯಲ್ಲಿ ಅತ್ತಾವರ ನಿವಾಸಿ ಶ್ರೀ ಅಬುಬಕ್ಕರ್ ಎಂಬವರು ಸದ್ರಿ ಸಾಗರ್ ಲಾಡ್ಜ್ ನ್ನು ರೂ 75 ಲಕ್ಷಕ್ಕೆ ಕೇಳಿರುತ್ತಾರೆ, ಆದರೆ ಸದ್ರಿ ಮಾತುಕತೆ ವಿಫಲವಾಗಿರುತ್ತದೆ. ಈಗ ಪ್ರಸ್ತುತ ಸಾಗರ್ ಲಾಡ್ಜ್ ನ ಮಾರುಕಟ್ಟೆ ಮೌಲ್ಯ ರೂ. 1.50 ಕೋಟಿ ಇದ್ದು, ದಿನಾಂಕ 25-11-2014 ರಂದು ಅಬುಬಕ್ಕರ್ ರವರು ಇತರ 3 ಜನರೊಂದಿಗೆ ಸೇರಿ ಫಿರ್ಯಾದಿದಾರರ ಕರಂಗಲಪಾಡಿ ಪತ್ರಾವೋ ಲೇನ್ ನಲ್ಲಿರುವ ಮನೆಯ ಆವರಣಕ್ಕೆ ಸಂಜೆ ಸುಮಾರು 4:15 ಗಂಟೆಗೆ ಅಕ್ರಮವಾಗಿ ಪ್ರವೇಶಮಾಡಿ ಸದ್ರಿ ಸಾಗರ್ ಲಾಡ್ಜ್ ನ್ನು ತನಗೆ ಮಾರುವಂತೆ ಒತ್ತಾಯ ಮಾಡಿ ಜೀವ ಬೆದರಿಕೆ ಒಡ್ಡಿದ್ದು, ಈ ಸಮಯ ಫಿರ್ಯಾದಿದಾರರು ಪೊಲೀಸರಿಗೆ ಫೋನ್ ಮಾಡಿದಾಗ ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿಗಳು ಸ್ಥಳದಿಂದ ಓಡಿ ಹೋಗಿರುತ್ತಾರೆ. ಆರೋಪಿ ಫಿರ್ಯಾದಿದಾರರಲ್ಲಿ ರೂ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಅಲ್ಲದೇ ಫಿರ್ಯಾದಿದಾರರಿಗೆ ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಒಡ್ಡಿರುವುದಾಗಿದೆ.
10.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕಮಲ್ ದಾಸ್ ರವರು ಸುಮಾರು 1 ತಿಂಗಳಿನಿಂದ ಮಂಗಳೂರು ಬಾವಟಗುಡ್ಡ ಬಳಿ ನಿರ್ಮಾಣ ಹಂತದಲ್ಲಿರುವ ಅಲೇಕ್ಸಾಂಡರ್ ಎಂಬ ಕಟ್ಟಡದಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 30-11-2014 ರಂದು ರಾತ್ರಿ ವಿಶ್ರಾಂತಿಯಲ್ಲಿದ್ದು, ರಾತ್ರಿ ಸಮಯ 9 ಗಂಟೆಗೆ ಮೂತ್ರ ವಿಸರ್ಜನೆ ಮಾಡುವರೇ ಬಂದು ಕಟ್ಟಡದ 1 ನೇ ಮಹಡಿಯ ಮೇಲಿನಿಂದ ಕೆಳಗೆ ಟಾರ್ಚ್ ಬೆಳಕಿನಿಂದ ಕೆಳಗಡೆ ನೋಡಿದಾಗ ಯಾರೋ ಬಿದ್ದಿರುವುದನ್ನು ನೋಡಿ, ತಕ್ಷಣ ನಿಮಾಯಿ ಗಟಂ ಎಂಬವರೊಂದಿಗೆ ಕೆಳಗಡೆ ಬಂದು ನೋಡಲಾಗಿ ಪಿರ್ಯಾದಿದಾರರೊಂದಿಗೆ ಕೆಲಸ ಮಾಡುತ್ತಿದ್ದ ಮಾಣಿಕ್ಯದತ್ತ ಎಂಬವರು ಕುತ್ತಿಗೆಗೆ ಗಾಯವಾಗಿ ಬಿದ್ದಿದ್ದು, ತಕ್ಷಣ ತುರ್ತು ಚಿಕಿತ್ಸೆಗೆ ಒಯ್ಯಲು ಪಕ್ಕದಲ್ಲಿದ್ದ ಖಾಲಿ ಜಾಗಕ್ಕೆ ತಂದು ಸೈಟ್ ಫೋರ್ ಮನ್ ಅಂಜನ್ ಸಾಹುಗೆ ವಿಷಯ ತಿಳಿಸಿದಂತೆ 108 ಅಂಬುಲೇನ್ಸ್ ವಾಹನಕ್ಕೆ ವಿಷಯ ತಿಳಿಸಿದ್ದಲ್ಲಿ ಅವರು ಸ್ಥಳಕ್ಕೆ ಬಂದು ನೋಡಿ ಮೃತಪಟ್ಟಿರುವುದಾಗಿ, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಣಿಕ್ಯದತ್ತ ರವರು ದಿನಾಂಕ 30-11-2014 ರಂದು ಕೆಲಸ ಮುಗಿಸಿ ವಿಶ್ರಾಂತಿಯಲ್ಲಿದ್ದ ಸಮಯ ರಾತ್ರಿ 8:00 ಗಂಟೆಯಿಂದ 9:00 ಗಂಟೆಯ ಮಧ್ಯ ಸಮಯದಲ್ಲಿ ಮೂತ್ರ ವಿಸರ್ಜಿಸಲು ಅಥವಾ ಇನ್ಯಾವುದೇ ಕಾರಣದಿಂದ 1 ನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು ಅಲ್ಲಿಯೇ ಇದ್ದ ಕಲ್ಲಿನಿಂದ ಮಾಣಿಕ್ಯದತ್ತ ರವರ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿದ್ದು, ಈ ಘಟನೆಗೆ ನಿರ್ಮಾಣ ಹಂತದ ಅಲೇಕ್ಸಾಂಡರ್ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿರುವ ಮೆನೋವರ್ ರಿಯಲಿಟಿಸ್ ಪ್ರೈ.ಲಿ. ಕಂಪೆನಿ ಮಾಲಕರಾದ ಡೇವಿಡ್ ಅಸ್ಟಾಮ್ಕರ್, ಪ್ರಾಜೆಕ್ಟ್ ಇನ್ ಚಾರ್ಜ್ ಶವನ್ ಅಸ್ಟಾಮ್ಕರ್, ಸೀನಿಯರ್ ಸೈಟ್ ಸೂಪರ್ ವೈಸರ್ ಸುರೇಶ್ ನಾಯಕ್ ಮತ್ತು ಗುತ್ತಿಗೆದಾರರಾದ ಬಪ್ಪಿ ಜಾನ್ ರವರು ನಿರ್ಮಾಣ ಹಂತದ ಕಟ್ಟಡದಲ್ಲಿ ಯಾವುದೇ ಮುನ್ನೆಚ್ಚರಿಕೆ ಮತ್ತು ಸುರಕ್ಷತೆಯ ವಿಧಾನವನ್ನು ಅಳವಡಿಸಿದೇ ನಿರ್ಲಕ್ಷತನ ತೋರಿರುವುದೇ ಕಾರಣವಾಗಿರುವುದಾಗಿದೆ.
11.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-11-2014 ರಿಂದ ಫಿರ್ಯಾದುದಾರರಾದ ಶ್ರೀ ಅಬ್ದುಲ್ ಮಜೀದ್ ರವರ ತಾಯಿಯವರು ಮಂಗಳೂರು ನಗರದ ಫಳ್ನೀರ್ ಹೈಲ್ಯಾಂಡ್ ಅಸ್ಪತ್ರೆಯ ರೂಮ್ ನಂ 106 ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 29-11-2014 ರಂದು ಸಂಜೆ ಸುಮಾರು 4-00 ಗಂಟೆ ಸಮಯಕ್ಕೆ ಫಿರ್ಯಾದುದಾರರು ಅಸ್ಪತ್ರೆಯ 106 ನೇ ರೂಮ್ ನ ಹೊರಗಡೆ ನಿಂತಿದ್ದ ಸಮಯ ಅಸ್ಪತ್ರೆ ರೂಮ್ ನಂ 103 ರಲ್ಲಿ ದಾಖಲಾದ ರೋಗಿಯ ಕಡೆಯವರಾದ ಶಬ್ಬೀರ್ ಹಾಗೂ ಇತರ ಮೂವರು ವ್ಯಕ್ತಿಗಳು ಪದೇ ಪದೇ ಬಂದು 106 ನೇ ರೂಮನ್ನು ಇಣುಕಿ ನೋಡುತ್ತಿದ್ದು, ಈ ಬಗ್ಗೆ ಪಿರ್ಯಾಧಿದಾರರು ಅವರಲ್ಲಿ ನಮ್ಮ ರೂಮನ್ನು ಯಾಕೆ ಇಣುಕಿ ನೋಡುತ್ತಿದ್ದೀರಿ ಎಂಬುದಾಗಿ ಕೇಳಿದಾಗ ಆರೋಪಿಗಳು ಪಿರ್ಯಾಧಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ನೀನು ಯಾರು ನಮ್ಮನ್ನು ಕೇಳಲಿಕ್ಕೆ? ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈಯ್ದು, ಕೈಗಳಿಂದ ಮುಖಕ್ಕೆ ಬೆನ್ನಿಗೆ ಕುತ್ತಿಗೆಗೆ ಹೊಡೆದು ಕಾಲಿನಿಂದ ತುಳಿದಿರುತ್ತಾರೆ, ಅಲ್ಲದೇ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ, ಫಿರ್ಯಾದುದಾರರ ಸಂಬಂದಿಕರಾದ ಲತೀಫ್ ಹಾಗೂ ಶಮಾಯಿಲ್ ರವರು ಬರುವುದನ್ನು ಕಂಡು ಆರೋಪಿಗಳು ಅಲ್ಲಿಂದ ಹೋಗಿರುತ್ತಾರೆ.
12.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧಿದಾರರಾದ ಶ್ರೀ ಕೃಷ್ಣ ಪ್ಪ ಪೂಜಾರಿ ರವರು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 29-11-2014 ರಂದು ಮನೆಯಿಂದ ಕೆಲಸಕ್ಕೆ ನಡೆದುಕೊಂಡು ದಾರಿಯಲ್ಲಿ ಎಕ್ಕಾರು ಪೇಟೆಯ ಸ್ವಲ್ಪ ದೂರದಲ್ಲಿ ಅಂದರೆ ಬಜಪೆ ಕಡೆಗೆ ಹೋಗುವ ದಾರಿಯಲ್ಲಿ ಕಲ್ಯಾಣಿ ಪೂಜಾರ್ತಿ ಎಂಬವರ ಮನೆಯ ಬಳಿ ನಡೆದುಕೊಂಡು ಹೊಗುತ್ತಿರುವಾಗ ಕಟೀಲು ಕಡೆಯಿಂದ ಬಜಪೆ ಕಡೆಗೆ ಮೊಟಾರು ಸೈಕಲ್ ನಂಬ್ರ KA-20-EB-3880 ನೇದರ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದು ಫಿರ್ಯಾಧಿದಾರರಿಗೆ ಬೆಳಿಗ್ಗೆ 9-45 ಗಂಟೆಗೆ ಡಿಕ್ಕಿ ಹೊಡೆದಿದ್ದು ಫಿರ್ಯಾಧಿದಾರರು ರಸ್ತೆಗೆ ಬಿದ್ದುದರ ಪರಿಣಾಮ ಎಡಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯ, ಬಲ ಕಾಲಿನ ಮೊಣಗಂಟಿಗೆ, ಬಲ ಕಾಲಿನ ಬೆರಲಿಗೆ ಮತ್ತು ತಲೆಗೆ ಸಣ್ಣಪುಟ್ಟಗಾಯವಾಗಿದ್ದು ಮೊಟಾರು ಸೈಕಲ್ ಸವಾರನು ಫಿರ್ಯಾಧಿದಾರರನ್ನು ಅರೈಕೆ ಮಾಡದೇ ಯಾರಿಗೂ ಹೇಳದೇ ಪರಾರಿಯಾಗಿರುವುದಾಗಿದೆ.
13.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧಿದಾರರಾದ ಶ್ರೀ ಹೂವಯ್ಯ ರವರು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 29-11-2014 ರಂದು ಸಮಯ ಸುಮಾರು ರಾತ್ರಿ 8-00 ಗಂಟೆಗೆ ಕೆಲಸ ಮುಗಿಸಿಕೊಂಡು ಗುರುಪುರಕ್ಕೆ ಹೋಗುವರೇ ಕೈಕಂಬದಲ್ಲಿ ರಸ್ತೆ ದಾಟಲು ಕೈಕಂಬ ಜಂಕ್ಷನ್ ಎಂಬಲ್ಲಿ ನಿಂತಿದ್ದು, ಆ ಸಮಯ ಕೈಕಂಬದಿಂದ ಬಜಪೆ ಕಡೆಗೆ ಬರುತ್ತಿರುವ ಲಾರಿ ನಂಬ್ರ KA-20-C- 5692 ನೇದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೇಲೆ ಲಾರಿ ಚಲಾಯಿಸಿದರ ಪರಿಣಾಮ ಫಿರ್ಯಾಧಿದಾರರ ಬಲ ಕಾಲಿನ ಪಾದ ತೀವ್ರ ತರವಾಗಿ ಜಖಂ ಆಗಿದ್ದು, ಚಾಲಕ ಹಾಗೂ ಇತರರು ಸೇರಿ ಚಿಕಿತ್ಸೆ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಸದ್ರಿ ಅಪಘಾತಕ್ಕೆ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು, ಚಾಲಕನ ಹೆಸರು ನಂದಕೀಶೊರ್ ಎಂಬುದಾಗಿ ತಿಳಿದು ಬಂದಿರುವುದಾಗಿದೆ.
14.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾಧಿದಾರರಾದ ಶ್ರೀಮತಿ ದೇಜಮ್ಮ ರವರು ಮಂಗಳೂರಿನ ವಿಜಯ ಕ್ಲಿನಿಕನಲ್ಲಿ ಆಯಾ ಕೆಲಸ ಮಾಡಿಕೊಂಡಿದ್ದು ದಿನಾಂಕ; 29-11-2014 ರಂದು ಸಂಜೆ ಸುಮಾರು 07-30 ಗಂಟೆಗೆ ಕೆಲಸ ಮುಗಿಸಿ ಮನೆ ಕಡೆಗೆ ಜಂಗಮ ಮಠಕ್ಕೆ ಹೋಗುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಜಂಗಮ ಮಠದ ಕಡೆಗೆ ಮೊಟಾರು ಸೈಕಲ್ ನಂಬ್ರ KA-19-EH- 0725 ನೇದರ ಸವಾರನು ಅತೀ ವೇಗ ಹಾಗೂ ಅಜಾಗರೂಕತೆಯಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದುದರ ಪರಿಣಾಮ ಫಿರ್ಯಾಧಿದಾರರು ರಸ್ತೆಗೆ ಬಿದ್ದು ಬಲ ಭುಜದ ಮೂಳೆಗೆ ಏಟಗಿರುತ್ತದೆ, ಮೊಟಾರು ಸೈಕಲ್ ಸವಾರ ಹಾಗೂ ಗಿರಿಜಾ ಎಂಬುವರು ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಮೊಟಾರು ಸೈಕಲ್ ಸವಾರನ ಹೆಸರು ಸ್ಟೀವನ್ ಎಂದು ಎಂಬುದಾಗಿ ತಿಳಿದು ಬಂದಿರುವುದಾಗಿದೆ.
15.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 29-11-2014 ರಂದು ಬೆಳಿಗ್ಗೆ 10.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಜಿ. ಸುಧಾಕರ ರವರು ಯೆನಪೋಯ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಸೂಪರ್ವೈಸರ್ ಕರ್ತವ್ಯ ನಿರ್ವಹಿಸುತ್ತಿರುವ ಸಮಯ ಆಸ್ಪತ್ರೆಯ ಲಿಪ್ಟ್ ನ ಬಳಿ ಜೋರಾಗಿ ಬೊಬ್ಬೆ ಹೊಡೆಯುತ್ತಿರುವುದನ್ನು ಕಂಡು ಅಲ್ಲಿಗೆ ಹೋಗಿ ನೋಡಲಾಗಿ ರಶೀದ್ ಎಂಬಾತನು ಸೆಕ್ಯುರಿಟಿ ಗಾರ್ಡ್ಗಳೊಂದಿಗೆ ಪಾಸ್‌ನ ಬಗ್ಗೆ ಚರ್ಚೆ ಮಾಡುತ್ತಿದ್ದುದನ್ನು ಕಂಡು ಫಿರ್ಯಾದಿದಾರರು ಸದ್ರಿ ರಶೀದ್ಗೆ ಪಾಸ್ನ ಬಗ್ಗೆ ಮಾಹಿತಿಯನ್ನು ನೀಡುತ್ತಿರುವಾಗ ಸದ್ರಿ ರಶೀದ್ ಏಕಾಏಕಿ ಫಿರ್ಯಾದಿದಾರರನ್ನು ಮುಂದಕ್ಕೆ ಹೋಗಲು ಬಿಡದೆ ಅವರು ಹಾಕಿದ ಸಮವಸ್ತ್ರದ ಶರ್ಟ್ನ ಕಾಲರಿಗೆ ಕೈಯನ್ನು ಹಾಕಿ ಹಿಡಿದೆಳೆದು ಫಿರ್ಯಾದಿದಾರರ ಎಡ ಕೆನ್ನೆಗೆ ಕೈಯಿಂದ ಹೊಡೆದುದಲ್ಲದೆ ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿರುವುದಲ್ಲದೆ ಬೆದರಿಕೆ ಒಡ್ಡಿರುವುದಾಗಿದೆ.
16.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಯಶವಂತ ರವರು ಫೈಬರ್ ಬೋಟ್ ತಯಾರಿಸುವ ಕೆಲಸಕ್ಕಾಗಿ ಹಣದ ಅವಶ್ಯಕತೆಯಿದ್ದುದರಿಂದ ಬಾಲಕೃಷ್ಣ ಸುವರ್ಣ ಎಂಬವರಿಂದ ದಿನಾಂಕ 28-03-2014 ರಂದು ತನ್ನ ವಾಸ್ತವ್ಯದ ಮನೆಯಾದ ಉಳಿಯ ಎಂಬಲ್ಲಿ ಬೆಳಿಗ್ಗೆ ಸಮಯ ಸುಮಾರು 10.00 ಗಂಟೆಗೆ ತಾನು ತನ್ನ ಹೆಂಡತಿ, ಮಗಳು ಮನೆಯಲ್ಲಿರುವಾಗ 1,50,000/- ಹಣದಲ್ಲಿ ಬಡ್ಡಿ ಹಣ 24,000/- ಹಣವನ್ನು ಕಡಿತಗೊಳಿಸಿ ಉಳಿದ ಹಣ 1,26,000/- ವನ್ನು ಬಾಲಕೃಷ್ಣ ಸುವರ್ಣ ರವರು ಪಿರ್ಯಾದಿದಾರರಿಗೆ ಕೊಟ್ಟಿದ್ದು, ಈ ಸಮಯದಲ್ಲಿ ಭದ್ರತೆಗಾಗಿ 500 ರೂ. ಮುಖ ಬೆಲೆಯ ಈಸ್ಟಾಂಪ್ ಪೇಪರ್ನಲ್ಲಿ ಸಹಿ ಮಾಡಿದ್ದನ್ನು ಮತ್ತು ಕರ್ನಾಟಕ ಬ್ಯಾಂಕಿನ 4 ಚೆಕ್ಗಳು, ಕೆನರಾ ಬ್ಯಾಂಕಿನ 5 ಚೆಕ್ಗಳು, ಎಸ್.ಎಂ.ಇ. ಬ್ಯಾಂಕಿನ 5 ಚೆಕ್ಗಳು ಹಾಗೂ ಮಗಳು ರಕ್ಷಿತಾಳ ಕಾರ್ಪೋರೇಶನ್ ಬ್ಯಾಂಕ್‌ನ 1 ಚೆಕ್‌ನ್ನು ಮತ್ತು ಪತ್ನಿಯಿಂದ ಖಾಲಿ ಪತ್ರಕ್ಕೆ ಸಹಿಯನ್ನು ಬಲವಂತವಾಗಿ ಪಡೆದುಕೊಂಡಿರುತ್ತಾರೆ. ಫಿರ್ಯಾದಿದಾರರು ಬಡ್ಡಿ ಸಮೇತ ಈಗಾಗಲೇ ಒಟ್ಟು 6 ಲಕ್ಷದಷ್ಟು ಹಣವನ್ನು ಆರೋಪಿತನಿಗೆ ನೀಡಿದ್ದರೂ ಸಹಾ ಫಿರ್ಯಾದಿಯ ಮೊಬೈಲ್ಗೆ ಕರೆ ಮಾಡಿ ಹಾಗೂ ಮುಖತ: ಭೇಟಿ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಉಳಿದ 5,60,000/- ಹಣ ಕೊಡ ಬೇಕು ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿರುತ್ತಾರೆ. ಇದೇ ವಿಚಾರದಲ್ಲಿ ಮಂಗಳೂರಿನ ಗೋರಿಗುಡ್ಡೆ ನಿವಾಸಿ ಶ್ರೀಮತಿ ಐರಿನ್ ವೇಗಸ್ ರವರು ತನ್ನ ಬಾಬ್ತು 2 ಮೊಬೈಲ್ ನಂಬ್ರಗಳಿಂದ ಪಿರ್ಯಾದಿದಾರರ ಮೊಬೈಲ್ ನಂಬರ್ ಗೆ ಕರೆ ಮಾಡಿ ಐರಿನ್ ವೇಗಸ್ ರವರು ಪಿರ್ಯಾದಿದಾರರನ್ನು ಉದ್ದೇಶಿಸಿ ಒಳ್ಳೆ ಮಾತಿನಲ್ಲಿ ಬಾಲಕೃಷ್ಣ ಸುವರ್ಣ ರವರಿಂದ ಪಡೆದುಕೊಂಡಿರುವ ಸಾಲವನ್ನು ಪೂರ್ತಿ ಸಂದಾಯ ಮಾಡು ಇಲ್ಲದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ದಿನಾಂಕ 15-11-2014 ರಂದು ಬೆಳಿಗ್ಗೆ ಸುಮಾರು 11.00 ಗಂಟೆಗೆ ಫಿರ್ಯಾದಿದಾರರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದು, ತನ್ನ ಹೆಂಡತಿ ಮತ್ತು ಮಗಳು ಮನೆಯಲ್ಲಿರುವಾಗ ಹಣ ವಸೂಲಿಗಾಗಿ ಉಳ್ಳಾಲದ ರಾಹುಲ್, ಶ್ರೀಮತಿ ಐರಿನ್ ವೇಗಸ್ ಮತ್ತು ಇತರರು ಮೋಟಾರ್ ಬೈಕ್ ಮತ್ತು ಕಾರಿನಲ್ಲಿ ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿರುತ್ತಾರೆ. ಆರೋಪಿ ಬಾಲಕೃಷ್ಣ ಸುವರ್ಣ ರವರು ಫಿರ್ಯಾದಿದಾರರು ಪಡೆದ ಸಾಲಕ್ಕೆ ಅಧಿಕ ಬಡ್ಡಿ ವಿಧಿಸಿ ಅನ್ಯಾಯ ಮಾಡಿದ್ದುದಲ್ಲದೆ ಕೆಲವು ಖಾಲಿ ದಾಖಲೆಗಳನ್ನು ಪಡೆದುಕೊಂಡಿರುತ್ತಾರೆ.
17.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.11.2014 ರಂದು ಪಿರ್ಯಾದಿದಾರರಾದ ಶ್ರೀ ಜಿಸನ್ ಮೊದೀನ್ ಬಾವಾ ರವರು ತನ್ನ ಬಾಬ್ತು KA19EE9991 ನೇ ಮೋಟಾರ್ ಸೈಕಲ್‌ನಲ್ಲಿ ಗುರುಪುರ ಕೈಕಂಬದಲ್ಲಿರುವ ತನ್ನ ದೊಡ್ಡಪನ ಅಂಗಡಿಗೆ ಹೋಗಿ ಅಲ್ಲಿಂದ ವಾಪಾಸು ಸದ್ರಿ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ತನ್ನ ಮನೆ ಕಡೆಗೆ ಬರುತ್ತಾ ಸಂಜೆ ಸುಮಾರು 6.00 ಗಂಟೆ ಸಮಯಕ್ಕೆ ವಾಮಂಜೂರು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಪಿರ್ಯಾದಿದಾರರ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ವಾಮಂಜೂರು ಕಡೆಗೆ KA 19D 3899 ನೇ ಬಸ್ಸನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತನ್ನ ಎದುರಿನಿಂದ ಹೋಗುತ್ತಿದ್ದು ಜೀಪೊಂದನ್ನು ಓವರ್ಟೇಕ್ ಮಾಡುವರೇ ಪ್ರಯತ್ನಿಸಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ನೊಂದಿಗೆ ರಸ್ತೆಗೆ ಬಿದ್ದ ಪರಿಣಾಮ ಅವರ ಎಡಕಾಲಿನ ಬೆರಳುಗಳಿಗೆ , ಬೆನ್ನಿಗೆ, ಎಡಕೈ ಹಾಗೂ ಬಲಕೈಗಳಿಗೆ ಹಾಗೂ ಕುತ್ತಿಗೆಯ ಬಲಬದಿ ಗುದ್ದಿದ ರೀತಿಯ ಹಾಗೂ ತರಚಿದ ರೀತಿಯ ರಕ್ತಗಾಯ ಉಂಟಾಗಿರುತ್ತದೆ.
18.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 30-11-2014 ರಂದು ಪಿರ್ಯಾದುದಾರರಾದ ಶ್ರೀ ಸ್ಟೀವನ್ ಕೆನೆಟ್ ಫರ್ನಾಂಡಿಸ್ ರವರು ಅವರ ಮಾವ ಅನೀಲ್ ಡಿ' ಸೋಜಾರವರ ಬಾಬ್ತು KA 19. S 8983 ನೇ ಮೋಟಾರು ಸೈಕಲ್ ನಲ್ಲಿ ಅನೀಲ್ ಡಿ'ಸೋಜಾರವರನ್ನು ಹಿಂಬದಿ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಬೈಕಿಗೆ ಪೆಟ್ರೋಲ್ ಹಾಕಲು ಮನೆಕಡೆಯಿಂದ ನೀರುಮಾರ್ಗದ ಪೆಟ್ರೋಲ್ ಪಂಪ್ ಗೆ ಹೋಗುವಾಗ ಸಮಯ ಸುಮಾರು ಸಂಜೆ 6-00 ಗಂಟೆಗೆ ಮೇರ್ಲಪದವು ಕುಟ್ಟಿಕಲ ಎಂಬಲ್ಲಿ ಎದುರಿನಿಂದ ಅಂದರೆ ನೀರುಮಾರ್ಗದಿಂದ ವಳಚಿಲ್ ಕಡೆಗೆ KA 19. ED 1690 ನೇ ಮೋಟಾರು ಸೈಕಲ್ ನ್ನು ಅದರ ಸವಾರರು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ KA 19 S 8983 ನೇ ಮೋಟಾರು ಸೈಕಲ್ ಗೇ ಡಿಕ್ಕಿಹೊಡೆದ ಪರಿಣಾಮ ಎರಡು ಮೋಟಾರು ಸೈಕಲ್ ಗಳು ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡ ಕಣ್ಣಿನ ಬಳಿ ಗುದ್ದಿದ ಗಾಯ, ಎಡ ಕೈ ಯ ಕೋಲು ಕೈಗೆ ಮೂಳೆ ಮುರಿತದ ಗಾಯ, ಕೆನ್ನೆಗೆ ಗುದ್ದಿದ ರೀತಿಯ ರಕ್ತಗಾಯವಾಗಿರುತ್ತದೆ.
No comments:
Post a Comment