ದಿನಾಂಕ:08-12-2014 ರಂದು ರಾತ್ರಿ 9-40 ಗಂಟೆ ಸಮಯಕ್ಕೆ ಮಂಗಳೂರು ದಕ್ಷಿಣ ಧಕ್ಕೆಯ ಸದ್ಗುರು ಪತ್ರಿಕಾ ಮಾರಾಟದ ಅಂಗಡಿಯ ಮಾಲಕರಾದ ಯೋಗೀಶ್ ಕಾಂಚನ್ ಎಂಬವರಿಗೆ ಅಪರಿಚಿತ ಯುವಕರಿಬ್ಬರು ತಲವಾರು ಹಾಗೂ ಮಂಡೆ ಕತ್ತಿಗಳಿಂದ ಕೈಗೆ, ಮುಖಕ್ಕೆ, ಬೆನ್ನಿಗೆ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ, ತದ ನಂತರ ಮೋಟಾರ್ ಸೈಕಲ್ ನಲ್ಲಿ ಪರಾರಿಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ತನಿಖೆ ಕೈಗೊಂಡಿರುವ ದಕ್ಷಿಣ ಠಾಣೆಯ ಪೊಲೀಸರು ಈ ದಿನ ದಿನಾಂಕ:26-12-2014 ರಂದು ಈ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಸಲೀಮ್ ಪ್ರಾಯ: 36 ವರ್ಷ, ತಂದೆ: ದಿವಂಗತ ಅಬ್ದುಲ್ ಖಾದರ್ ವಾಸ: ತನ್ಸೀರಾ ಮಂಜಿಲ್, ಎಮ್. ಜೆ. ಎಮ್. ನಂಬರ್ 801, ಸಮುದ್ರ ಬದಿ, ಬೆಂಗ್ರೆ, ಕಸಬಾ ಬೆಂಗ್ರೆ ಗ್ರಾಮ ಮತ್ತು ಅಂಚೆ, ಮಂಗಳೂರು. ಎಂಬಾತನನ್ನು ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯ ಮಸೀದಿ ಬಳಿಯಲ್ಲಿ ಬಂಧಿಸಿ, ಆರೋಪಿತನಿಂದ ಕೃತ್ಯಕ್ಕೆ ಉಪಯೋಗಿಸಿದ ತಲವಾರು ಹಾಗೂ ಡಿಸ್ಕವರಿ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಆರೋಪಿ ಅಬ್ದುಲ್ ಸಲೀಮ್ ಎಂಬವನ ಜೊತೆಗೆ ಈ ಕೃತ್ಯದಲ್ಲಿ ಬೆಂಗ್ರೆಯ ಅಬ್ದುಲ್ ರಜಾಕ್ ಎಂಬವನು ಭಾಗಿಯಾಗಿರುವುದು ತನಿಖಾ ಸಮಯ ತಿಳಿದು ಬಂದಿರುತ್ತದೆ. ಅಬ್ದುಲ್ ರಜಾಕ್ ತಲೆಮರೆಸಿಕೊಂಡಿರುತ್ತಾನೆ. ಆರೋಪಿ ಅಬ್ದುಲ್ ಸಲೀಮ್ ಎಂಬಾತನು ರಹೀಮ್ ಉಚ್ಚಿಲ್ ಎಂಬವರ ಕೊಲೆ ಯತ್ನ ಪ್ರಕರಣದ ಆರೋಪಿಯಾಗಿರುತ್ತಾನೆ.
ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್ ಹಿತೇಂದ್ರ ಐಪಿಎಸ್, ಉಪ ಆಯುಕ್ತರುಗಳಾದ ಡಾ. ಕೆ.ವಿ. ಜಗದೀಶ್ ಮತ್ತು ಶ್ರೀ ವಿಷ್ಣು ವರ್ಧನ ಎನ್ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಪವನ್ ನೆಜ್ಜೂರು ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿರವರ ನೇತೃತ್ವದಲ್ಲಿ ದಕ್ಷಿಣ ಠಾಣೆಯ ಪಿಎಸ್ ಐ ಶ್ರೀ ಮಹಮ್ಮದ್ ಶರೀಫ್ ರವರು ಆರೋಪಿಯನ್ನು ದಸ್ತಗಿರಿ ಮಾಡಿರುತ್ತಾರೆ. ಸಿಬ್ಬಂಧಿಗಳು ಆರೋಪಿ ಪತ್ತೆಗೆ ಸಹಕರಿಸಿರುತ್ತಾರೆ.
No comments:
Post a Comment