Saturday, December 6, 2014

Daily Crime Report 06-12-2014

ದಿನಾಂಕ 06.12.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

10

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  05-12-2014 ರಂದು ಮದ್ಯಾಹ್ನ ಪಿರ್ಯಾದಿದಾರರಾದ ಶ್ರೀ ಮುರಳಿ ಕೆ. ರವರ ಅಣ್ಣನವರಾದ ಶ್ರೀ ನಿರಂಜನ್ಕುಮಾರ್ರವರು ಆತನ ಮೋಟಾರು ಸೈಕಲ್ನಂಬ್ರ ಕೆ.-19-.ಎಫ್‌-3330 ನೇದರಲ್ಲಿ ಅತನ ಸಹದ್ಯೋಗಿಯಾದ ಓರ್ವ ಮಹಿಳೆಯನ್ನು ಹಿಂದುಗಡೆ ಕುಳ್ಳಿರಿಸಿಕೊಂಡು ಪಾಂಡೇಶ್ವರ ಪೋಸ್ಟ್ಆಫೀಸ್ನಿಂದ ಬೋಳಾರಕ್ಕೆ ಹೋಗುತ್ತಾ ಸಮಯ ಮದ್ಯಾಹ್ನ 2:30 ಗಂಟೆಗೆ ರೊಸಾರಿಯೋ ರಸ್ತೆಯಲ್ಲಿರುವ ರಾಜರಾಜೇಶ್ವರಿ ದೇವಸ್ಥಾನದ ಎದುರುಗಡೆ ತಲುಪಿದಾಗ, ಹೊಯ್ಗೆಬಜಾರ್ಕಡೆಯಿಂದ ಲಾರಿ ನಂಬ್ರ ಕೆ.-19-ಡಿ-3699 ನೇದನ್ನು ಅದರ ಚಾಲಕರು  ಅಜಾಗರೂಕತೆ ಮತ್ತು ತೀರಾ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಮೋಟಾರು ಸೈಕಲ್ಸವಾರರಾದ ಪಿರ್ಯಾದಿದಾರರ ಅಣ್ಣ ಶ್ರೀ ನಿರಂಜನ್ರವರಿಗೆ ಹಣೆಗೆ ಮತ್ತು ಗಲ್ಲಕ್ಕೆ ಹಾಗೂ ತಲೆಯ ಹಿಂಬದಿಗೆ ಗುದ್ದಿದ ನಮೂನೆಯ ಗಂಭೀರ ಗಾಯ ಉಂಟಾಗಿದಲ್ಲದೇ ಜೊತೆಯಲ್ಲಿ ಸಹಸವಾರಿಣಿಯಾಗಿದ್ದ ಮಹಿಳೆಗೂ ಸಹಾ ಸಣ್ಣಪುಟ್ಟ ಗಾಯಗೊಂಡವರನ್ನು  ಚಿಕಿತ್ಸೆ ಬಗ್ಗೆ  ಎಂ.ವಿ ಶೆಟ್ಟಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರ ಅಣ್ಣನನ್ನು ಇಂಡಿಯಾನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ  ನೀಡಿದ್ದು, ಅಣ್ಣನ ತಲೆಗೆ ಉಂಟಾಗಿರುವ ಗಂಬೀರ ಗಾಯದಿಂದಾಗಿ ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ. ಗಾಯಾಳು ಮಹಿಳೆಯನ್ನು .ಜೆ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿರುತ್ತಾರೆ.

 

2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-12-2014 ರಂದು  ಬೆಳಿಗ್ಗೆ  ಸುಮಾರು 11:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಸಂದೀಪ್ ಕುಮಾರ್ ಜಲಾಲ್ ರವರ ಬಾಬ್ತು ಕೊಡಿಯಾಲಗುತ್ತು ಪೂರ್ವ ರಸ್ತೆಯಲ್ಲಿರುವ ಕಛೇರಿಗೆ ಆರೋಪಿ ಆಸ್ಲಾಮನು ತನ್ನ ಪತ್ನಿಯೊಂದಿಗೆ ಆಕ್ರಮ ಪ್ರವೇಶ ಮಾಡಿ, ಪಿರ್ಯಾಧಿದಾರನಿಗೂ ಆರೊಪಿತನಿಗೂ ಹಣದ ವಿಚಾರದಲ್ಲಿ ತಕರಾರು ತಗೆದು ಆರೋಪಿತನು ಪಿರ್ಯಾಧಿದಾರರ ಕಛೆರಿಯಲ್ಲಿದ್ದ ಲ್ಯಾಪಟಾಪ್, ಟಿ ವಿ, ಕಂಪ್ಯೂಟರ್ ಸಾಮಗ್ರಿಗಳನ್ನು ಹಾನಿ ಮಾಡಿ ಪಿರ್ಯಾಧಿದಾರರಿಗೆ ಲ್ಯಾಪಟಾಫ್ ನಿಂದ ಹೊಡೆದು ಹಲ್ಲೆ ಮಾಡಿದಲ್ಲದೆ ಸುಮಾರು 1,25,000/-ರೂ  ಗಳಷ್ಟು ನಷ್ಟವನ್ನುಂಟು ಮಾಡಿದಲ್ಲದೆ ಪಿರ್ಯಾಧಿದಾರರಿಗೆ ಆವಾಚ್ಯ ಶಬ್ದಗಳಿಂದ ಬೈದು, ಜೀವ ಬೇದರಿಕೆ ಹಾಕಿರುವುದಾಗಿದೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 04/12/2014 ರಂದು ಸಮಯ ಸುಮಾರು ರಾತ್ರಿ 23:30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಕಿಶೋರ್ ಕೊಟ್ಟಾರಿ ರವರು ತಮ್ಮ ಸದ್ರಿ ಆಟೋ ರಿಕ್ಷಾ ನಂಬ್ರ KA-19-B-453  ನೇ ದರಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಢು ಕಂಕನಾಡಿ ಕಡೆಯಿಂದ ನಂದಿಗುಡ್ಡೆ ಕಡೆಗೆ ಹೊಗುತ್ತ ವೆಲೆನ್ಸಿಯಾ ಸರ್ಕಲ್ ಬಳಿಯ ಫಾದರ್ ಮುಲ್ಲರ್ ಹಾಸ್ಟೆಲ್ ಕಟ್ಟಡದ ಬಳಿ ತಲುಪಿದಾಗ ಫೀರ್ಯಾದುದಾರರ ಹಿಂದಿನಿಂದ ಆರೋಪಿ ಚಂದನ್ ಎಂಬಾತನು KA-19-V-8505 ನೇ ನಂಬ್ರದ  ಮೋಟರ್ ಸೈಕಲ ನಲ್ಲಿ ಶಾಮನ ಗೌಡ ಎಂಬಾತನ್ಗನ್ನು  ಸಹ ಸವಾರನಾಗಿ ಕುಳ್ಳಿರಿಸಿಕೊಂಢು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಢು ಬಂಧು ಫಿರ್ಯಾದುದಾರರ ಆಟೋ ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಮಾಡಿದ ಪರಿಣಾಮ ಮೋಟರ್ ಸೈಕಲ್ ಸವಾರರು ರಸ್ತೆಗೆ ಬಿದ್ದು ಸವಾರ ಚಂದನನಿಗೆ ಎಡಕೈಗೆ ಹಾಗೂ ಸಹಸವಾರ ಶಾಮನ ಗೌಡನಿಗೆ ತಲೆಯ ಹಿಂಭಾಗಕ್ಕೆ ರಕ್ತಗಾಯ ಹಾಗೂ ಎಡಕೈ ಭುಜಕ್ಕೆ ಮೂಳೆ ಮುರಿತದ ಗಂಭಿರ ಸ್ವರೂಪದ ಗಾಯವಾಗಿದ್ದು, ಗಾಯಾಳುಗಳು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 05/12/2014 ರಂದು ಸಮಯ ಸುಮಾರು 13:45 ಗಂಟೆಗೆ ಮಂಗಳೂರು ನಗರದ ಟೌನ್ ಹಾಲ್ ಬಳಿಯ ಕ್ಲಾಕ್ ಟವರ್ ಬಳಿಯ KA-19-C-542  ನೇ ನಂಬ್ರದ ಮೂರು ಚಕ್ರದ ಗೂಡ್ಸ ಟೆಂಪೋವನ್ನು ಅದರ ಚಾಲಕ ಹಂಪನಕಟ್ಟೆ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ಮಾನವ ಜೀವಕ್ಕೆ ಹಾನಿಯಾಗುಚ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಾದ ಶ್ರೀ ರಿಷಿಕೇಶ್ ಶರ್ಮಾ ರವರು ಚಲಾಯಿಸುತ್ತದ್ದ ಮೋಟರ್ ಸೈಕಲ್ ನಂಬ್ರ KA- V-5369 ನೇ ದಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದುದಾದರು ರಸ್ತೆಗೆ ಬಿದ್ದು ಪಿರ್ಯಾದುದಾದರು ಎಡಕೈ ಕೋಲುಕೈಗೆ ಮೂಲೆ ಮುರಿತದ ಗಾಯವಾಗಿದ್ದು ಗಾಯಾಳು ಮಂಗಳೂರು ನಗರದ ಯೆನಪೊಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದು ಅಪಘಾತದ ನಂತರ ಆರೋಪಿ ವಾಹನದೊಂದಿಗೆ ಪರಾರಿಯಾಗಿರುತ್ತಾನೆ.

 

5.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-12-2014 ರಂದು ಸಂಜೆ 4-00 ಗಂಟೆ ಸಮಯಕ್ಕೆ ಆರೋಪಿ ಕೃಷ್ಣ ಎಂಬವರು ತನ್ನ ಬಾಬ್ತು ಅಟೋ ರಿಕ್ಷಾ ನಂಬ್ರ ಕೆಎ-19-ಡಿ-7159 ನೇದನ್ನು  ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಮಂಗಳೂರು ತಾಲೂಕು, ಹರೇಕಳ ಗ್ರಾಮದ, ಕಿಸನ್ ನಗರದ ಹೊಡ್ಡದ ಗುರಿ ಸಂಕದ ಬಳಿ ತಲುಪುವಾಗ ಎದುರಿನಿಂದ ಅಂದರೆ  ಕಿಸನ್ನಗರ ದಿಂದ ಎಲ್ಯಾರು ಪದವುಗೆ ಹೋಗುತ್ತಿದ್ದ ಮೋಟಾರು ಸೈಕಲ್ನಂಬ್ರ ಕಎ-19-ಇಎಂ-2434 ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮೋಟಾರು ಸೈಕಲ್ಸವಾರ ಮತ್ತು ಹಿಂಬದಿ ಸವಾರ ರಸ್ತೆಗೆ ಬಿದ್ದು, ಮೋಟಾರ್ ಸೈಕಲ್ ಸವಾರ ಇಮ್ರಾನ್ ರವರಿಗೆ ಬಲ ಕಾಲಿನ ಕೋಲು ಕಾಲಿಗೆ ಕೀಲು ಮುರಿದ ತೀವ್ರತರದ ಗಾಯ. ಹಿಂಬದಿ ಸವಾರ ಪಿರ್ಯಾದುದಾರರಾದ ಶ್ರೀ ಸಮದ್ ರವರಿಗೆ ಬಲ ಕಾಲಿನ ಮಂಡಿಗೆ ರಕ್ತಗಾಯವಾಗಿ, ಸಮದ್ ರವರು ದೇರಳಕಟ್ಟೆ ಕೆಎಸ್ಹೆಗ್ಡೆ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

6.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರಳಾದ ಶ್ರೀಮತಿ ದೀಪಾ ವಿಜಯೇಂದ್ರ ಶೇಟ್ ಎಂಬವರು 2007 ನೇ ಇಸವಿಯಲ್ಲಿ ವಿಜಯೇಂದ್ರ ಶೇಟ್ರೊಂದಿಗೆ ಗುರುಹಿರಿಯ ಸಂಮ್ಮುಖದಲ್ಲಿ ಮದುವೆಯಾಗಿದ್ದು,  ಸಮಯದಲ್ಲಿ ವಿಜಯೇಂದ್ರ ಶೇಟ್ ತಾಯಿ 50 ತೊಲೆ ಬಂಗಾರ ಹಾಕುವಂತೆ ತಿಳಿಸಿದ್ದು, ಪಿರ್ಯಾದಿದಾರರ ಮನೆಯವರ ಶಕ್ತಿಗನುಸಾರವಾಗಿ 25 ತೊಲೆ ಬಂಗಾರ ಹಾಕಿದ್ದು, ಪಿರ್ಯಾದಿದಾರರ ಗಂಡ ಮದುವೆಯಾಗಿ 06 ತಿಂಗಳ ಕಾಲ ಮಾತ್ರ ಪಿರ್ಯಾದಿದಾರಳ ಜೊತೆ ಅನ್ಯೋನ್ಯ ವಾಗಿದ್ದು, ನಂತರ ದಿನಾಲೂ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ಚಪ್ಪಲಿ, ಬೆಲ್ಟ್ನಿಂದ ಹೊಡೆದು ಹಿಂಸೆ ನೀಡುತ್ತಿದ್ದು, ಅಲ್ಲದೇ ಕಾದ ಸಟ್ಟುಗ ವನ್ನು ಕೂಡ ಬಿಸಿ ಮಾಡಿ ಕೈಗೆ ಇಟ್ಟಿದ್ದು, ಅಲ್ಲದೇ ಒಂದು ವರ್ಷದ ಮೊದಲು ಗಭೀಣಿಯಾಗಿದ್ದ ಸಮಯ ತನಗೆ ಮಗು ಬೇಡ ಎಂಬುದಾಗಿ ಪಿರ್ಯಾದಿದಾರಳ ಇಚ್ಚೆಗೆ ವಿರುದ್ಧವಾಗಿ ಅಬಾರ್ಸನ್  ಮಾಡಿಸಿದ್ದು,  ಅಲ್ಲದೇ ಬೇರೆ ಹುಡುಗಿಯನ್ನು ಮದುವೆಯಾಗುತ್ತಿದ್ದರೆ ಕಾರು, ಪ್ಲಾಟ್ ಕೊಡುತ್ತಿದ್ದರು ಎಂಬುದಾಗಿ ಹೀಯಾಲಿಸುತ್ತಿದ್ದು, ಪಿರ್ಯಾದಿದಾರಳ ಗಂಡನಿಗೆ ಬೇರೆ ಹುಡುಗಿಯರ ಅಕ್ರಮ ಸಂಬಂಧವಿದ್ದು, ಪಿರ್ಯಾದಿದಾರಳು ಸುಸಂಸ್ಕೃತಿ ಕುಟುಂಬದಿಂದ ಬಂದ ಹೆಂಗಸಾಗಿದ್ದು, ಕಳೆದ ಏಳು ತಿಂಗಳಿನಿಂದ ಪಿರ್ಯಾದಿದಾರಳ ಗಂಡ ಮನೆಗೆ ಬಾರದೇ ಮನೆಯ ಖರ್ಚು ವೆಚ್ಚವನ್ನು ಕೊಡದೇ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದು, ಮುಂದಕ್ಕೆ ಪಿರ್ಯಾದಿದಾರಳ ಮಕ್ಕಳನ್ನು ಕಿಡ್ನಾಪ್ ಮಾಡುತ್ತೇನೆಂದು ದೂರವಾಣಿಯಲ್ಲಿ ಬೆದರಿಕೆ  ಹಾಕಿರುವುದಾಗಿದೆ.

 

7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05-12-2014 ರಂದು ಸುಮಾರು 07-45 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಶ್ರೀ ಸೋಮಯ್ಯ ಗೌಡರವರು ತನ್ನ ತಂದೆಯವರಾದ ಲಿಂಗಪ್ಪ ಗೌಡ ಎಂಬವರೊಂದಿಗೆ ಕೆಲಸಕ್ಕೆಂದು ಮಂಗಳೂರು ತಾಲೂಕಿನ, ಪೆರ್ಮುದೆ ಗ್ರಾಮದ, ಪೆರ್ಮುದೆ ಬಸ್ ನಿಲ್ದಾಣದ ಕಡೆಯಿಂದ ಕಟೀಲು ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಅವರ ಎದುರಿನಿಂದ ಅಂದರೆ ಕಟೀಲು ಕಡೆಯಿಂದ ಬಜಪೆ ಕಡೆಗೆ ಕೆಎ 19 ಯು 7446 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರರು ಸಹಸವಾರನ್ನೊಬ್ಬನನ್ನು ಕುಳ್ಳಿರಿಸಿಕೊಂಡು, ಅತೀವೇಗ ಮತ್ತು ದುಡುಕುತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಂದೆ ಲಿಂಗಪ್ಪ ಗೌಡ, 60 ವರ್ಷ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಯ ಹಿಂಬದಿಗೆ ಮತ್ತು ಎರಡೂ ಕೈಗಳ ಮೊಣಗಂಟಿಗೆ ಗಾಯವಾದುದ್ದಲ್ಲದೇ ಎಡ ಕೋಲು ಕಾಲಿನ ಮೂಳೆ ಮುರಿತವಾಗಿದ್ದು, ಸದ್ರಿಯವರು ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05/12/2014 ರಂದು ಬೆಳಿಗ್ಗೆ 11-00 ಗಂಟೆ ಸಮಯಕ್ಕೆ, ಮಂಗಳೂರು ತಾಲೂಕು, ಕೋಟೆಕಾರು ಗ್ರಾಮದ ನಡುಕುಮೇರು ಎಂಬಲ್ಲಿ ಎಸ್ಸಿ ಕಾಲೋನಿಗೆ ಹೋಗುವ ರಸ್ತೆ ಬದಿಯಲ್ಲಿರುವ ಮೆಸ್ಕಾಂನ ಬಾಬ್ತು ವಿದ್ಯುತ್ತ್ಕಂಬಕ್ಕೆ KA 34 3294 ನೇ ಲಾರಿಯನ್ನು ಅದರ ಚಾಲಕ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದುದರಿಂದ,  ವಿದ್ಯತ್ಕಂಬಕ್ಕೆ ಹಾನಿಯಾಗಿ ಸುಮಾರು 10,000/- ನಷ್ಟ ಸಂಭವಿಸಿರುತ್ತದೆ.

 

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಗೋಪಾಲ ಕೃಷ್ಣ ರವರು ಪಡೀಲ್ನಿಂದ ಕುಂಪಲದ ತಮ್ಮ ಮನೆಗೆ ದ್ವಿಚಕ್ರ ವಾಹನ(ಆಕ್ಟಿವ್ಹೊಂಡಾ) ನಂಬ್ರ ಕೆಎ-19-ವಿ-9099ನೇದರಲ್ಲಿ ಕುದ್ರು ಶಾಲೆಯ ಬಳಿ ಬರುತ್ತಿದ್ದಾಗ ಸಾಯಂಕಾಲ ಸುಮಾರು 19-20 ಗಂಟೆಗೆ ಹಿಂದುಗಡೆಯಿಂದ ಬರುತ್ತಿದ್ದ ಕೆಎ-19-ಎಎ-1115 ನೇ ಬಸ್ಸನ್ನು ಅದರ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಪಿರ್ಯಾದುದಾರರ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಕೈ ಮುಂಗೈ ರಕ್ತ ಬರುವ ಗಾಯ, ಸೊಂಟದ ಬದಿಗೆ ಗುದ್ದಿದ ತರಹದ ಗಾಯಗಳುಂಟಾಗಿದ್ದು ಅದೇ ರೀತಿ ಎದುರಿನಿಂದ ಬರುತ್ತಿದ್ದ ಮೊ.ಸೈಕಲ್ಕೆಎ-19-ಇಎಮ್‌-2989ನೇದರ ಸವಾರ ಆಸಿಫ್ಎಂಬುವರಿಗೂ ಅದೇ ಬಸ್ಸ ಡಿಕ್ಕಿಯಾಗಿ ಎಡಕಾಲಿನ ಮೊಣಗಂಟಿಗೆ, ಹಾಗೂ ಹೆಬ್ಬೆರಳಿಗೆ ಗುದ್ದಿದ ರಕ್ತಗಾಯಗಳಾಗಿದ್ದು ನಂತರ ಅಲ್ಲಿ ಸೇರಿದ್ದ ಜನರು ಚಿಕಿತ್ಸೆಯ ಬಗ್ಗೆ ನೇತಾಜಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ, ಅಪಘಾತದಲ್ಲಿ ಎರಡೂ ದ್ವಿಚಕ್ರ ವಾಹನಗಳು ಜಖಂಗೊಂಡಿರುತ್ತವೆ.

 

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04.12.2014 ರಂದು ಪಡೀಲ್ ಅಜಿತ್ ಬಾರ್ನಲ್ಲಿ ಕ್ಲೀನರ್ ಕೆಲಸ ಮಾಡಿಕೊಂಡಿರುವ ಪಿರ್ಯಾದುದಾರರಾದ ಶ್ರೀ ರವೀಂದ್ರ ಎಂಬವರು ಎಂದಿನಂತೆ ಕೆಲಸ ಮಾಡಿ ರಾತ್ರಿ ಬಾರ್ ಕಸವನ್ನು ಬಿಸಾಡುವರೇ ಪಡೀಲ್ ಪೆಟ್ರೋಲ್ ಬಂಕ್ ಬಳಿ ಬಂದು ಕಸವನ್ನು ಬಿಸಾಡಿ ವಾಪಾಸ್ಸು ಅಜಿತ್ ಬಾರ್ ಕಡೆಗೆ ಹೋಗುವರೇ ಪೆಟ್ರೋಲ್ ಬಂಕ್ಕಡೆಯಿಂದ ರಸ್ತೆಯ ಆಚೆ ಬದಿಗೆ ಅಂದರೆ ಮಸೀದಿ ಇರುವ ಕಡೆಗೆ ರಸ್ತೆ ದಾಟುತ್ತಿದ್ದಂತೆ ರಾತ್ರಿ ಸುಮಾರು 10:30 ಗಂಟೆ ಸಮಯಕ್ಕೆ ಬಿ.ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ KA-18-P-1030ನೇ ನಂಬ್ರದ ಕಾರನ್ನು ಅದರ ಚಾಲಕ ನಬೀಲ್ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು, ಅವರ ತಲೆಯ ಹಿಂಭಾಗಕ್ಕೆ, ಗಲ್ಲಕ್ಕೆ, ಕೈಗೆ ಮತ್ತು ಎಡಕಾಲಿನ ಹೆಬ್ಬೆರಳಿಗೆ ರಕ್ತ ಬರುವ ಗಾಯ ಮತ್ತು ಶರೀರಕ್ಕೆ ಗುದ್ದಿದ ಗಾಯಗೊಂಡವರನ್ನು ಆರೋಪಿ ಕಾರು ಚಾಲಕ ಚಿಕಿತ್ಸೆ ಬಗ್ಗೆ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಳಿಸಿರುವುದಾಗಿದೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05.12.2014 ರಂದು ಪಿರ್ಯಾದುದಾರರಾದ ಶ್ರೀ ಶಿವರಾಜು. ಎಸ್ ಹಾಗೂ ಮನು ಕುರಿಯನ್ ಎಂಬವರು KA-18-P-5145ನೇ ನಂಬ್ರದ ಮಹೀಂದ್ರ ಬೊಲೆರೋ ವಾಹನದಲ್ಲಿ ಮಂಗಳೂರು ನಗರದ ಕೊಟ್ಟಾರ ಚೌಕಿ ಕಡೆಯಿಂದ ಕಡಬ ಕಡೆಗೆ ಹೋಗುತ್ತಿರುವ ಸಮಯ ಮಧ್ಯಾಹ್ನ 12:45 ಗಂಟೆ ಸಮಯಕ್ಕೆ ಪಡೀಲ್ ಬ್ರಿಡ್ಜ್ ಬಳಿ KA-19-C-1129ನೇ ನಂಬ್ರದ ಬಸ್ಸನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಸದ್ರಿ ಬೊಲೆರೋ ವಾಹನದ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿಯ ಬಾಗಿಲು, ಫೆಂಡರ್, ನಾಲ್ಕನೇ ವ್ಹೀಲರ್ ಸಂಪೂರ್ಣ ಜಖಂಗೊಂಡಿರುವುದಾಗಿದೆ.

 

12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-12-2014 ರಂದು ರಾತ್ರಿ 10-30 ಗಂಟೆಗೆ ಸಹ್ಯಾದ್ರಿ ಕಾಲೇಜಿನ ಮುಂಭಾಗ KL 07 BE 6278 ನೇ ಮೋಟಾರು ಸೈಕಲ್ ಸವಾರ  ಜೋಲ್ಬಿನ್ ಜಾರ್ಜ್ ಎಂಬವರು ಅವರ ಬಾಬ್ತು ಮೋಟಾರು ಸೈಕಲನ್ನು ಒಮ್ಮೆಲೆ ಎಡ ಬದಿಯಿಂದ ಮುಖ್ಯ ರಸ್ತೆಗೆ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರಾದ ಶ್ರೀ ಮೊಹಮ್ಮದ್ ರಫೀಕ್ ರವರು ಚಲಾಯಿಸುತ್ತಿದ್ದ KA 19 EJ 2225 ನೇ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದಿರುವುದರಿಂದ ಪಿರ್ಯಾದಿದಾರ ಮಹಮ್ಮದ್ ರಫೀಕ್ ಎಂಬವರಿಗೆ ಬಲತೊಡೆಗೆ ಗುದ್ದಿದ ಹಾಗೂ ತರಚಿದ ರೀತಿಯ ಗಾಯಗಳುಂಟಾಗಿದ್ದು ಹಿಂಬದಿ ಸವಾರ ಮಹಮ್ಮದ್ ರವರಿಗೆ ಪಿರ್ಯಾಧಿದಾರರು ಧರಿಸಿದ್ದ ಹೆಲ್ಮೇಟ್ ಮುಖಕ್ಕೆ ತಾಗಿ ಅವರ ಮೂಗು ಹಾಗೂ ಬಾಯಿ ಯಿಂದ ರಕ್ತ ಸುರಿಯುತ್ತಿದ್ದು ಪಿರ್ಯಾಧಿದಾರರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಮಹಮ್ಮದ್ ರವರು ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದು ಆರೋಪಿ ಚಾಲಕನು ಚಿಕಿತ್ಸಾ ವೆಚ್ಚ ನೀಡುತ್ತೇನೆ ಎಂದು ತಿಳಿಸಿದ್ದು ನೀಡದ ಕಾರಣ ತಡವಾಗಿ ದೂರು ನೀಡಿರುವುದಾಗಿದೆ.

No comments:

Post a Comment