ದಿನಾಂಕ 13.12.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-12-14 ರಂದು ಪಿರ್ಯಾಧಿದಾರರಾದ ಶ್ರೀ ಮೊಹಿದ್ದೀನ್ ಅನಾಸ್ ರವರು ತನ್ನ ಬಾಬ್ತು ಹೊಂಡಾ ಆಕ್ಟಿವಾ ಕೆಎ-19 ಇಎಫ್-7265 ನೇದರಲ್ಲಿ ತನ್ನ ಮನೆಯಾದ ಕೃಷ್ಣಾಪುರ ಕಡೆಯಿಂದ ಸುರತ್ಕಲ್ ಕಡೆಗೆ ಬರುತ್ತಾ ಚೊಕ್ಕಬೆಟ್ಟು ಫಿಜಾ ಗ್ರೌಂಡ್ ಬಳಿಗೆ ಮಧ್ಯಾಹ್ನ 2:30 ಗಂಟೆಗೆ ತಲುಪಿದಾಗ ಎದಿರಿನಿಂದ ಅಂದರೆ ಸುರತ್ಕಲ್ ಕಡೆಯಿಂದ ಮಾರುತಿ ರಿಟ್ಜ್ ಕೆಎ-19-ಎಮ್-ಡಿ-3412 ನಂಬ್ರದ ಕಾರನ್ನು ಅದರ ಚಾಲಕ ಮಹಮ್ಮದ್ ಮುಸ್ತಾಫ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದರರ ಬಲ ಕಾಲಿಗೆ ಮೂಳೆ ಮುರಿತದ ಗಾಯವಾಗಿ ತಲೆಗೆ, ಮುಖಕ್ಕೂ ಗಾಯವಾಗಿದ್ದು, ಕಾರಿನ ಚಾಲಕರ ಎಡ ಕೈಗೆ ಮತ್ತು ಕಾರಿನಲ್ಲಿದ್ದ ನಫೀಸಾ ಎಂಬವರ ಎಡ ಕಾಲಿಗೆ ಗಾಯವಾಗಿದ್ದು ಈ ಬಗ್ಗೆ ಚಿಕಿತ್ಸೆಗಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-12-2014 ರಂದು ಸಂಜೆ 19-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಇಸ್ಮಾಯಿಲ್ ಇರ್ಸಾದ್ ರವರು ತನ್ನ ಬಾಬ್ತು ಕೆ ಎ- 19 ಈ ಕೆ- 0403 ನೇ ನಂಬ್ರದ ಸ್ಕೂಟರನಲ್ಲಿ ಸುರತ್ಕಲ್ ನಿಂದ ಮಂಗಳೂರಿಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಪಣಂಬೂರು ಎಮ್ ಸಿ ಎಫ್ ದಾಟಿ ಕುದುರೆಮುಖ ಜಂಕ್ಷನ್ ತಲುಪಿದಾಗ ರಸ್ತೆಯಲ್ಲಿದ್ದ ಹೊಂಡದ ಬಳಿ ಹತೋಟಿ ತಪ್ಪಿ ಸ್ಕೂಟರ ಸಮೇತ ರಸ್ತೆಗೆ ಬಿದ್ದಾಗ ಹಿಂದಿನಿಂದ ಕೆ ಎ-19 ಬಿ- 4633 ನೇಯ ಬಸ್ಸನ್ನು ಅದರ ಚಾಲಕ ಮಹಮ್ಮದ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಎರಡೂ ಕಾಲುಗಳ ಮೇಲೆ ಬಸ್ಸಿನ ಚಕ್ರ ಹರಿದು ಹೋದ ಪರಿಣಾಮ ಕಾಲುಗಳೆರಡೂ ಮೂಳೆಮುರಿತದಿಂದ ಗಂಭೀರ ರೀತಿಯ ರಕ್ತ ಗಾಯವಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12/12/2014 ರಂದು ಸಮಯ ಸುಮಾರು ರಾತ್ರಿ 20:05 ಗಂಟೆಗೆ ಫಿರ್ಯಾದುದಾರರಾದ ಶ್ರೀ ದಾಮೋದರ ರವರು ಮಂಗಳೂರು ನಗರದ ಬಾರೆಬೈಲು ಕುಂಟಿಕಾನ್ ರಸ್ತೆಯ ಬದಿಯಲ್ಲಿ ನಡೆದುಕೊಂಢು ಹೊಗುತ್ತಿದ್ದಾಗ ಅವರ ಎದುರುಗಡೆ ಸುಮಾರು 30 ಅಡಿ ದೂರದಲ್ಲಿ ಪರಿಚಿತರಾದ ವಿಶ್ವನಾಥ ಅವರು ನಡೆದುಕೊಂಢು ಹೊಗುತ್ತಿದ್ದಾಗ ಕುಂಟಿಕಾನ ಕಡೆಯಿಂದ ಒಬ್ಬ ವ್ಯಕ್ತಿಯು ತನ್ನ ಬಾಬ್ತು ವಾಹನವನ್ನು ನಿರ್ಲಕ್ಷತನದಿಂಧ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಢು ಬಂದು ವಿಶ್ವನಾಥ ಅವರಿಗೆ ಡಿಕ್ಕಿ ಹೊಡೆದು ವಾಹನವನ್ನು ನಿಲ್ಲಿಸದೆ ಹೊಗಿರುತ್ತಾರೆ ರಸ್ತೆಯ ಬದಿಯಲ್ಲಿ ಬಿದ್ದಿದ್ದ ವಿಶ್ವನಾಥ ಅವರಿಗೆ ಉಪವರಿಸಿ ನೊಡಿದಲ್ಲಿ ವಿಶ್ವನಾಥ ಅವರ ತಲೆಗೆ ಗಂಬಿರ ಸ್ವರೂಪದ ಗಾಯವಾಗಿದ್ದು ಕೂಡಲೆ ಚಿಕಿತ್ಸೆಯ ಬಗ್ಗೆ ಎ ಜೆ ಆಸ್ತತ್ರೆಗೆ ತೆಗೆದುಕೊಂಢು ಹೊದಲ್ಲಿ ಪರಿಕ್ಷಿಸಿದ ವ್ಯದ್ಯರು ವಿಶ್ವನಾಥ ವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-09-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಕುಸುಮಾವತಿ ರವರ ಗಂಡ ನವೀಶ್ ಕುಮಾರ್ ಪ್ರಾಯ 35 ವರ್ಷ ಎಂಬವರು ಮದ್ಯಾಹ್ನ 3-00 ಗಂಟೆಗೆ ಮನೆಯಿಂದ ಸುರತ್ಕಲ್ ಕಡೆಗೆ ಹೋಗುವುದಾಗಿ ತಿಳಿಸಿ ಹೋದವರು ರಾತ್ರಿ 9-00 ಗಂಟೆ ಆದರೂ ವಾಪಾಸು ಮನೆಗೆ ಬಾರದೇ ಇದ್ದು ಅವರ ಮೊಬೈಲ್ ಗೆ ಪಿರ್ಯಾದಿದಾರರು ಕರೆಮಾಡಿದಾಗ ಬೈಕಂಪಾಡಿಯಲ್ಲಿ ಇರುವುದಾಗಿಯು ಮರುದಿನ ದಿನಾಂಕ 15-09-2014 ರಂದು ಉಡುಪಿಗೆ ಹೋಗುವುದಾಗಿ ತಿಳಿಸಿದ್ದು, ಮನೆಗೆ ಬಾರದೇ ಇದ್ದುದರಿಂದ ಅವರ ಮೊಬೈಲ್ ಗೆ ಪುನಃ ಕರೆ ಮಾಡಿದಾಗ ಸ್ವಿಚ್ ಆಪ್ ಆಗಿದ್ದು ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ವಿಚಾರಿಸಿದಾಗ ಪತ್ತೆಯಾಗದೇ ಇದ್ದು ಪಿರ್ಯಾದಿದಾರರ ಗಂಡನಿಗಿದ್ದ ಸಾಲದಿಂದಾಗಿ ಮನೆ ಬಿಟ್ಟು ಹೋಗಿರಬಹುದಾಗಿ, ಕಾಣೆಯಾದ ನವೀಶ್ ಕುಮಾರ್ ರವರ ವಿವರ: ಹೆಸರು: ನವೀಶ್ ಕುಮಾರ್, ಪ್ರಾಯ 35 ವರ್ಷ ಎಣ್ಣೆ ಕಪ್ಪು ಮೈಬಣ್ಣ, ಎತ್ತರ 5. 7, ಲೈಟ್ ಪ್ರೆಂಚ್ ಗಂಡ ಹೊಂದಿರುತ್ತಾರೆ. ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಭಾರತ ಸರಕಾರದ ವಿದೇಶ ಮಂತ್ರಾಲಯಕ್ಕೆ ಶ್ರೀ ಚಾಂದ್ ಪಾಷಾ ಸಮಾಜ ಸೇವಕ, ಸರಕಾರೇತರ ಸಂಘ ಸಂಸ್ಥೆಗಳ ಮತ್ತು ವಿದೇಶದಿಂದ ಹಿಂತಿರುಗಿದ ನೊಂದಾಯಿತ ಸದಸ್ಯರ ಕಲ್ಯಾಣ ಸಂಘದ ಅಧ್ಯಕ್ಷ, ಕರೀಂ ನಗರ, ಆಂದ್ರಪ್ರದೇಶ ದ ನಿವಾಸಿ ರವರು ಠಾಣೆಗೆ ದೂರು ನೀಡಿದ್ದು, ಆರೋಪಿಗಳಾದ ಖಾದರ್ ಅಳಕೆ, ಹಾಗೂ ಹಸನ್ ಅನ್ವರ್ ಸೌಧಿ ಎಂಬವರು 2013 ನೇ ಸಾಲಿನಲ್ಲಿ M/s Anwar General Services Coporation, Mumbai ಇವರ ಸಬ್ಏಜೆಂಟ್ ಎಂಬುದಾಗಿ ತಿಳಿಸಿ ಹೈದರಬಾದ್ ಮೂಲದ ಒಟ್ಟು 19 ಮಂದಿ ಕಾರ್ಮಿಕರಿಗೆ ವಿವಿಧ ರೀತಿಯ ಕೆಲಸ ಆಮಿಷ ಒಡ್ಡಿ ಸೌಧಿ ರಾಷ್ಟ್ರದಲ್ಲಿ Afnan Al- Masshiriq Contracting and Cateerings Services Est. ಕಂಪೆನಿಯಲ್ಲಿ ಒಳ್ಳೆಯ ಕೆಲಸ ಕೊಡಿಸುವುದಾಗಿ ಸಬ್ ಏಜೆಂಟರ್ ಗಳಾದ ಪಲೆಪು ರಾಜಾ ಗಂಗರಾಮ್ ಒರುಗಂಟಿ ದೇವದಾಸ್ ಹಾಗೂ ರೆಂಜಿರ್ಲಾ ರವೀಂದರ್ @ ರಾಜೇಂದರ್ ಎಂಬವರು ತಲಾ ರೂ 85,000/-, 65,000/- ರಂತೆ ಪಡೆದುಕೊಂಡಿದ್ದು, ನಂತರ ದಿನಾಂಕ 20-07-2013 ರಂದು ಆರೋಪಿಗಳಾದ ಖಾದರ್ ಅಳಕೆ, ಹಾಗೂ ಹಸನ್ ಅನ್ವರ್ ಸೌಧಿ ರವರು ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ Al Rahaba Plazha, C-37 ನಲ್ಲಿರುವ ತಮ್ಮ ಒಡೆತನದ M/s Afifa Tours & Travels ಎಂಬ ಸಂಸ್ಥೆಯ ಮುಖಾಂತರ ವೀಸಾ ಸ್ಟ್ಯಾಂಪಿಂಗ್ ಹಾಗೂ ವಿಸಾ ಕ್ಲಿಯರೆನ್ಸ್ ಮಾಡಿಸಿ ಹೈದರಾಬಾದಿನಿಂದ ಸೌದಿ ಅರೇಬಿಯಾಕ್ಕೆ ಕಳುಹಿಸಿಕೊಟ್ಟಿರುತ್ತಾರೆ. ಸೌದಿ ಅರೇಬಿಯಾಕ್ಕೆ ತೆರಳಿದ್ದ 19 ಮಂದಿಗೆ ಇಖಾಮಾ ಹಾಗೂ ರೆಸಿಡೆನ್ಸಿ ಪರ್ಮಿಟ್ ಮಾಡಿಸಿಕೊಡದ ಕಾರಣ ಇವರ ಪೈಕಿ ಮುರುಗು ಚಿನ್ನ ನರ್ಸಯ್ಯ ಹಾಗೂ ರಗುಲ ಮಲ್ಲೇಶ ಎಂಬವರು ಸೌದಿಯಲ್ಲಿ ಬಂಧನಕ್ಕೊಳಗಾಗಿ ಜೈಲಿಗೆ ತಳ್ಳಲ್ಪಟ್ಟಿದ್ದು, ಉಳಿದವರು ಸರಿಯಾದ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ ಎಂಬುದಾಗಿಯೂ ಇದಕ್ಕೆ ಆರೋಪಿಗಳು ಕಾರಣರಾಗಿದ್ದು, ಸೌದಿ ಅರೇಬಿಯಾದಲ್ಲಿ ಕೆಲಸಕೊಡಿಸುವ ಆಮಿಷ ತೋರಿ ಹಣಪಡೆದು ಕೆಲಸ ಕೊಡಿಸದೇ ಮೋಸಮಾಡಿರುತ್ತಾರೆ. ಅಲ್ಲದೇ ಆರೋಪಿತರಿಗೆ ವಿಸಾ ಸ್ಟಾಂಪಿಗ್ ಮಾಡಲು ಪರವಾನಿಗೆ ಇಲ್ಲದೇ ಇದ್ದು, ಅನಧಿಕೃತವಾಗಿ ವಿಮಾನ ನಿಲ್ದಾಣದ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ವಿಸಾ ಸ್ಟಾಂಪಿಂಗ್ ಮಾಡಿಸಿ ವಂಚಿಸಿರುವುದಾಗಿದೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ ಶಾಂತಿ ಮಯ್ಯಾ ರವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ದಿನಾಂಕ 08-12-2014 ರಂದು ರಾತ್ರಿ ಸುಮಾರು 11-00 ಗಂಟೆಗೆ ಕಟೀಲು ದೇವಸ್ಥಾನದ ಗೋ ಶಾಲೆಯ ಬಳಿ ಹೋಗುತ್ತಿದ್ದಾಗ ನರಳುತ್ತಿದ್ದ ಹಸುವೊಂದನ್ನು ಕಂಡು ಗೋ ಶಾಲೆಯ ಬಳಿ ಇದ್ದ ಹಾಲು ಕರೆಯುವ ತಿಮ್ಮನಿಗೆ ಹಸುವಿಗೆ ಗಾಯವಾಗಿ ನೋವು ಅನುಭವಿಸುತ್ತಿದೆ ಅದಕ್ಕೆ ಏನಾದರೂ ವ್ಯವಸ್ಥೇ ಮಾಡಿ ಎಂದು ಹೇಳಿದ್ದಕ್ಕೆ ಕೋಪಗೊಂಡ ತಿಮ್ಮನು ಅಲ್ಲಿಗೆ ಬಂದ ಸಂತುವಿನ ಜೊತೆ ಸೇರಿ ಪಿರ್ಯಾದುದಾರರಿಗೆ ಕಟ್ಟಿಗೆಯಿಂದ ಹೊಡೆದು ಗಾಯಗೊಳಿಸಿರುತ್ತಾರೆ. ಘಟನೆ ನಡೆಯುವ ಸಮಯ ವಿನಯ ಎಂಬವರು ಸ್ಥಳದಲ್ಲಿದ್ದರು.
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-12-2014 ರಂದು ಬೆಳಿಗ್ಗೆ 10.00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಜೆಸಿಂತಾ ಡಿ'ಸೋಜಾ ರವರ 4-163/2 ಜೋಯ್ ವಿಲ್ಲಾ ಆಡಂಕುದ್ರುವಿನಲ್ಲಿರುವ ಜಾಗದ ಸರ್ವೆ ನಂಬರ್ 119-243ಕ್ಕೆ ಆರೋಪಿಗಳಾದ 1) ಶ್ರೀ ವಾಲ್ಟರ್ ಡಿ'ಸೋಜ 2) ನತಾಲಿಯ 3) ಮೆಲ್ವಿನ್ 4) ಸೆಲೆಸ್ತಿನ್ ಡಿ'ಸೋಜ ಇವರುಗಳು ಅಕ್ರಮಪ್ರವೇಶ ಮಾಡಿ ಕಟ್ಟಡವನ್ನು ಕಟ್ಟಿದ್ದಲ್ಲದೆ ಫಿರ್ಯಾದಿದಾರರಿಗೆ ಪದೇ ಪದೇ ಮಾನಸಿಕ ಹಿಂಸೆಯನ್ನು ಕೊಟ್ಟಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ನಿನ್ನನ್ನು ಕೊಂದು ನಾವು ಕೂಡಾ ನಿನ್ನ ಎದುರಿಗೆ ಹಗ್ಗ ತೆಗೆದುಕೊಳ್ಳುತ್ತೇವೆ ಎಂದು ಹೆದರಿಸಿದ್ದು, ಅಲ್ಲದೆ ಇನ್ನು ಮುಂದಕ್ಕೆ ನೀನು ಜಾಗದ ವಿಚಾರದಲ್ಲಿ ಬಂದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಆರೋಪಿಗಳು ಹೊಡೆದ ಪರಿಣಾಮ ಮೈ ಕೈಗೆ ಗಾಯವಾಗಿದ್ದು, ಯಾವುದೇ ಚಿಕಿತ್ಸೆಯನ್ನು ಪಡೆದುಕೊಂಡಿರುವುದಿಲ್ಲ. ಅಲ್ಲದೆ ಆರೋಪಿಗಳು ದಿನಾಂಕ 12-12-2014 ರಂದು ಬೆಳಿಗ್ಗೆ 09.00 ಗಂಟೆಗೆ ಮತ್ತೆ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿರುತ್ತಾರೆ. ಆರೋಪಿಗಳು ಪಿರ್ಯಾದಿದಾರರ ಸಂಬಂಧಿಕರಾಗಿರುವುದರಿಂದ ಇವರ ಮೇಲೆ ಕೇಸು ಕೊಡುವುದು ಬೇಡ ಎಂದು ಸುಮ್ಮನಿದ್ದು, ಅವರುಗಳು ಪದೇ ಪದೇ ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿರುವುದರಿಂದ ತಡವಾಗಿ ಅವರ ಮೇಲೆ ಫಿರ್ಯಾದು ನೀಡಿರುವುದಾಗಿದೆ.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.12.2014 ರಂದು ಪಿರ್ಯಾದಿದಾರರಾದ ಶ್ರೀ ನಾರಾಯಣ ನಾಯಕ್ ರವರು ತನ್ನ ಮನೆಯಿಂದ ಪಾಂಡೇಶ್ವರಕ್ಕೆ ಹೋಗುವರೆ ತನ್ನ ಬಾಬ್ತು ಕೆಎ-19-ಇಇ-7609 ನೇ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಪಡೀಲ್-ಪಂಪ್ವೆಲ್ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ನಾಗೂರಿ ತಲುಪಿದಾಗ ಬಿ.ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ ಕೆಎ-19-ಎಫ್-3040 ನೇ ಕ.ರಾ.ರ.ಸಾ.ಸಂ ಬಸ್ಸನ್ನು ಅದರ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರಿನ ಹಿಂಭಾಗಕ್ಕೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಮಗುಚಿಬಿದ್ದ ಪರಿಣಾಮ ಪಿರ್ಯಾದಿದಾರರ ಬಲಕೈಗೆ, ಮೊಣಗಂಟಿಗೆ, ರಕ್ತಗಾಯ ಬಲಭುಜಕ್ಕೆ ಗುದ್ದಿದ ನೋವು, ಬಲಕಾಲಿನ ತೊಡೆ ಸಂದಿಗೆ ಗುದ್ದಿದ ನೋವು ಹಾಗೂ ಎರಡೂ ಕಾಲುಗಳ ಮೊಣಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ. ಕೆ. ಸುಬ್ರಾಯ ನಾಯಕ್ ರವರು ಶ್ರೀ.ವೆಂಕಟ್ರಮಣ ದೇವಸ್ಥಾನದ ಪದವಿನಂಗಡಿ ಕೊಂಚಾಡಿ ಇದರ ಉಪಾಧ್ಯಕ್ಷರಾಗಿದ್ದು ದಿನಾಂಕ: 11.12.2014 ರಂದು ಎಂದಿನಂತೆ ರಾತ್ರಿ 8.45 ಗಂಟೆಗೆ ದೇವಸ್ಥಾನದ ಅರ್ಚಕರಾದ ಶ್ರೀ. ಎಸ್.ಗಣೇಶ್ ಭಟ್ ರವರು ದೇವಸ್ಥಾನದಲ್ಲಿ ಪೂಜೆ ಮುಗಿಸಿ ದೇವಸ್ಥಾನದ ಹಿಂಭಾಗಿಲು ಮತ್ತು ಮುಂಭಾಗಿಲು ಭದ್ರಪಡಿಸಿ ಬಾಗಿಲಿಗೆ ಬೀಗ ಹಾಕಿ ನಂತರ ರಾತ್ರಿ 11.30 ಗಂಟೆಯವರೆಗೆ ದೇವಸ್ಥಾನದ ಹಿಂಭಾಗದ ಸಭಾಂಗಣದಲ್ಲಿ ಶ್ರೀ ಪ್ರವೀಣ ಕಾಮತ್ ಮತ್ತು ಶ್ರೀ. ಅಶ್ವಿನ್ ಭಟ್ ಇತರರೊಂದಿಗೆ ಶಟಲ್ ಕಾಕ್ ಆಡಿ ಮನೆಗೆ ಹೋಗಿದ್ದು, ದಿನಾಂಕ: 12.12.2014 ರಂದು ಬೆಳಿಗ್ಗೆ 5.30 ಗಂಟೆ ಹೊತ್ತಿಗೆ ಸದ್ರಿಯವರು ಎಂದಿನಂತೆ ದೇವಸ್ಥಾನದ ಹಿಂಭಾಗಿಲಿನ ಬೀಗವನ್ನು ತೆಗೆದು ನೋಡಿದಾಗ ಬಾಗಿಲು ತೆರೆಯಲು ಆಗದೆ ಇದ್ದುದರಿಂದ ಮತ್ತು ಮುಂಭಾಗಿಲ ಬೀಗವು ಹಾಕಿದಂತೆಯೇ ಇದ್ದುದರಿಂದ ಒಳಗಡೆಯಿಂದ ಚಿಲಕ ಹಾಕಿದ್ದರಿಂದ ಅರ್ಚಕರು ಪಿರ್ಯಾದಿದಾರರಿಗೆ ಮತ್ತು ದೇವಸ್ಥಾನಕ್ಕೆ ಸಂಬಂಧಪಟ್ಟ ವ್ಯಕ್ತಿಗಳಿಗೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಹಾಗೂ ಸಂಬಂಧಪಟ್ಟವರು ದೇವಸ್ಥಾನಕ್ಕೆ ಬಂದು ಕೆಲಸದವರನ್ನು ಕರೆಯಿಸಿ ದೇವಸ್ಥಾನದ ಮೇಲೆ ಹತ್ತಿಸಿ ದೇವಸ್ಥಾನದ ಒಳಗಡೆ ನೋಡಲಾಗಿ ದೇವಸ್ಥಾನದ ಗರ್ಭಗುಡಿಯ ಹೊರ ವರಾಂಡಕ್ಕೆ ಸಂಬಂಧಪಟ್ಟ ಛಾವಣಿಯ ಹೆಂಚನ್ನು ತೆಗೆದಿರುವುದು ಕಂಡು ಬಂದಿರುವುದರಿಂದ ಯಾರೋ ಕಳ್ಳರು ದಿನಾಂಕ: 11.12.2014 ರಂದು ರಾತ್ರಿ ಛಾವಣಿ ತೆರೆಯಲ್ಪಟ್ಟ ಜಾಗದಿಂದ ತೆರೆದು ಒಳಗೆ ಪ್ರವೇಶಿಸಿ ಒಳಗಿನಿಂದ ದೇವಸ್ಥಾನದ ಬಾಗಿಲಿಗೆ ಚಿಲಕ ಹಾಕಿ ದೇವಸ್ಥಾನದ ಒಳಗಡೆ ಇದ್ದ 6 ಹುಂಡಿ ಡಬ್ಬಗಳ ಬೀಗವನ್ನು ಮುರಿದು ಅದರೊಳಗಿದ್ದ ಸುಮಾರು 20000 ರೂಪಾಯಿ ಮತ್ತು ಸುಮಾರು 70,000 ರೂಪಾಯಿ ಬೆಲೆಬಾಳುವ ಸುಮಾರು 3 ಕೆಜಿ ತೂಕದ ದ್ವಾರಪಾಲರಾದ ಜಯವಿಜಯ ವಿಗ್ರಹಗಳಿಗೆ ಹಾಕಿದ್ದ ಬಳ್ಳಿ ಕವಚವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12.12.2014 ರಂದು ಬೆಳಿಗ್ಗೆ 6.00 ಗಂಟೆಗೆ ಮಂಗಳೂರು ತಾಲೂಕು ತಹಶೀಲ್ದಾರರು ಕಂದಾಯ ಇಲಾಖೆ ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳೊಂದಿಗೆ ಮಂಗಳೂರು ತಾಲೂಕು ಅಡ್ಯಾರು ಗ್ರಾಮದ ವಳಚ್ಚಿಲ್ ಎಂಬಲ್ಲಿ ನೇತ್ರಾವತಿ ನದಿ ತೀರದ ಮರಳು ದಕ್ಕೆಗೆ ದಾಳಿನಡೆಸುವ ವೇಳೆ ನದಿ ತೀರದಲ್ಲಿ 18 ದೋಣಿಗಳು ಲಂಗರು ಹಾಕಿ ನಿಂತಿದ್ದು ತೀರದ ಉದ್ದಕ್ಕೂ ಅಲ್ಲಲ್ಲಿ ಮರಳು ರಾಶಿ ಹಾಕಿರುವುದು ಕಂಡು ಬಂದಿದ್ದು ಸದ್ರಿ ಉಳಿಯ ಗ್ರಾಮದ (ಕುದ್ರು) 1 ಕಿಮೀ ಸುತ್ತಳತೆಯಲ್ಲಿ ಮರಳುಗಾರಿಕೆಯನ್ನು ನಿಷೇದಿಸಲಾಗಿದೆ ಎಂಬುದಾಗಿ ಫಲಕವನ್ನು ಹಾಕಿದ ನಂತರವೂ ಸದ್ರಿ ಸ್ಥಳದಿಂದ ಯಾರೋ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ನದಿ ದಡಕ್ಕೆ ದೋಣಿಗಳ ಮೂಲಕ ತಂದು ಹಾಕಿರುವುದನ್ನು ಸದ್ರಿ ಅಕ್ರಮ ಮರಳು ಸಾಗಾಟಕ್ಕೆ ಉಪಯೋಗಿಸಿದ ದೋಣಿ ಹಾಗೂ ಸೊತ್ತುಗಳೊಂದಿಗೆ ವಶಪಡಿಸಿಕೊಂಡಿರುವುದಾಗಿದೆ. ವಶಪಡಿಸಿಕೊಂಡಿರುವ ಸೊತ್ತುಗಳ ಅಂದಾಜು ಮೌಲ್ಯ ಸುಮಾರು ರೂಪಾಯಿ 20 ಲಕ್ಷ ಆಗಬಹುದು.
No comments:
Post a Comment