Sunday, December 21, 2014

Daily Crime Reports 21 12 2014 :

ದಿನಾಂಕ 21.12.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

7

ವಂಚನೆ ಪ್ರಕರಣ        

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  20-12-2014 ರಂದು ಪಿರ್ಯಾದಿದಾರರಾದ ಶ್ರೀ ಅಬ್ದುಲ್ ಹಕೀಮ್ ರವರು ಯೂಸೂಫ್  ಎಂಬವರ ಕೆಎ,19.ಇಬಿ.5029 ನಂಬ್ರದ ದ್ವಿ-ಚಕ್ರ ವಾಹನದಲ್ಲಿ ಯೂಸೂಪ್ ರವರು ಸವಾರರಾಗಿ ಪಿರ್ಯಾದಿದಾರರು ಸಹ ಸವಾರರಾಗಿ ಕಾರ್ನಾಡ್ ಕಡೆಯಿಂದ ಅವರ ಮನೆ ಯಿರುವ ದರ್ಗಾ ರೋಡ್  ಕಡೆಗೆ ಹೋಗುತ್ತಾ ಸಂಜೆ 5-15 ಗಂಟೆಗ ಜೂನಿಯರ್ ಕಾಲೇಜು ಬಳಿಗೆ ತಲಪಿದಾಗ  ಗೇರುಕಟ್ಟೆ ಕಡೆಯಿಂದ ದರ್ಗಾ ರೋಡ್ ಜಂಕ್ಷನ್ ಕಡೆಗೆ ಕೆಎ.19.ಇ ಹೆಚ್ – 6706 ನೇ ನಂಬ್ರದ ಬ್ಯೆಕ್ ನ್ನು ಅದರ ಚಾಲಕ ಶರಣು  ಎಂಬವರು ಸಹಸವಾರ  ನಾಗರಾಜ ಎಂಬವರನ್ನು ಕುಳ್ಳಿರಿಸಿಕೊಂಡು ನಿಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾದಿದಾರರಿದ್ದ ವಾಹನಕ್ಕೆ ಢಿಕ್ಕಿ  ಪಡಿಸಿದ್ದು ಈ ಆಪಘಾತದಿಂದ ಪಿರ್ಯಾದಿದಾರರ ಹಣೆ ಕ್ಯೆಕಾಲುಗಳಿಗೆ  ಗಾಯಾವಾಗಿ ಹಲ್ಲು ಮುರಿದಿದ್ದು ಯೂಸೂಫ್ ರವರ ತಲೆ ಕ್ಯೆಕಾಲುಗಳಿಗೆ ಗಂಬೀರ ತರಹದ ಗಾಯವಾಗಿ ಬ್ಯೆಕ್ ಸವಾರ ಶರಣು ರವರಿಗೆ ಹಾಗೂ ಸಹ ಸವಾರ ನಾಗರಾಜರವರಿಗೂ ಗಾಯಾವಾಗಿ ಮುಕ್ಕ ಶೀನಿವಾಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಪಿರ್ಯಾದಿದಾರು ಯೂಸೂಫ್ ರವರೊಂದಿಗೆ ಮಂಗಳೂರು ಯೂನಿಟಿ ಆಸ್ಪತ್ರೆ ದಾಖಲಾಗಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯೂಸೂಪ್ ರವರು ರಾತ್ರಿ 08.35 ಗಂಟೆಗೆ ಮೃತ ಪಟ್ಟಿರುವುದಾಗಿದೆ.

 

2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ದೇವಾನಂದ ಶೆಟ್ಟಿ ರವರು ಪಣಂಬೂರು ಗ್ರಾಮದ N.M.C. Complex ನಲ್ಲಿರುವ  M/s Dix Engineering Project Services Pvt.Ltd., A Company incorporated under Indian Companies Act, 1956 ರಂತೆ ನಡೆಸುವ ಸಂಸ್ಥೆಯಲ್ಲಿ ದಿನಾಂಕ: 01-01-2008 ರಂದು ಆರೋಪಿ ಹರಿದಾಸ್ ಸಾಲ್ಯಾನ್ ನನ್ನು ಎಕೌಂಟ್ ಹೆಡ್ ಆಗಿ ನೇಮಕ ಮಾಡಿ, ಸಂಸ್ಥೆಯ ಸಂಪೂರ್ಣ ಲೆಕ್ಕಾಚಾರವನ್ನು ನೋಡುತ್ತಿದ್ದು, ದಿನಾಂಕ: 08-08-10 ರಂದು ಪಿರ್ಯಾದಿ  M.R.P.L. Project ಗೆ ಸಂಬಂಧಿಸಿದ R.E.Wall for Pollypropylane Unit Face-III Refinary Project ನ್ನು KNR Construction Ltd., Hyderabad ರವರಿಂದ ಸಬ್ ಕಾಂಟ್ರಾಕ್ಟ್ ನ್ನು ದಾಖಲಾತಿಯೊಂದಿಗೆ ಪಡೆದು, ದಿನಾಂಕ: 04-02-11 ರಿಂದ ಕಾಮಗಾರಿ ಪ್ರಾರಂಭಿಸಿ, ಅಂದಿನಿಂದ ಕಂಪೆನಿಯ ಬಾಬ್ತು ನಡೆಯಬಲ್ಲ ಕೆಲಸ ಕಾರ್ಯಗಳ ಬಗ್ಗೆ  ಆರೋಪಿ ಹರಿದಾಸ್ ಸಾಲ್ಯಾನ್ ರವರು  ಕಂಪೆನಿಯ ಸಂಪೂರ್ಣ ಲೆಕ್ಕಾಚಾರ ಮತ್ತು ಕಾಮಗಾರಿಯ ಮೇಲ್ವಿಚಾರಣೆಯ ಲೆಕ್ಕಾಚಾರವನ್ನು ನೋಡಿಕೊಳ್ಳುತ್ತಿದ್ದು, ಕಾಮಗಾರಿಯ ಬಗ್ಗೆ ಪಿರ್ಯಾದಿ ಸಂಸ್ಥೆಯಿಂದ  KNR Construction ಸಂಸ್ಥೆಗೆ ನಿಗಧಿಯಂತೆ ಕಾಲಕಾಲಕ್ಕೆ  ಶೇಕಡಾ 6.5 ರಂತೆ KNR ಸಂಸ್ಥೆ ಪಿರ್ಯಾದಿಗೆ ನೀಡುವ ಹಣವನ್ನು ಕಡಿತಗೊಳಿಸಿ ರವಾನಿಸುತ್ತಿದ್ದುಈ ಮಧ್ಯೆ ಆರೋಪಿಯು ಯಾರಿಗೂ ತಿಳಿಯದಂತೆ ಪಿರ್ಯಾದಿಯ ಗಮನಕ್ಕೆ ಬಾರದೆ, KNR Construction ನಿಂದ ಪಿರ್ಯಾದಿಗೆ ಬರಬೇಕಾದ ಕಾಮಗಾರಿ ವೆಚ್ಚದಿಂದ 6.5% ಹೊರತುಪಡಿಸಿ ಹೆಚ್ಚುವರಿ ಅಂದಾಜು 3% ಮೊಬಲಗನ್ನು  ಆರೋಪಿಯು ತನ್ನದೇ ಆದ K.N.R. Enterprises ಎಂಬ ಅನಾಮಧೇಯ ನಕಲಿ ಸಂಸ್ಥೆಯ ಹೆಸರಿನಲ್ಲಿ, ದಿನಾಂಕ: 25-02-11 ರಂದು 51,16,692/- , ದಿನಾಂಕ: 18-04-2011 ರಂದು 5,35,316/- ರೂಪಾಯಿ, ದಿನಾಂಕ; 26-04-11 ರಂದು 9,83,358/- ರೂಪಾಯಿ, ದಿನಾಂಕ: 08-07-2011 ರಂದು 8,59,102/-, ದಿನಾಂಕ: 29-02-2012 ರಂದು 12,17,641/- ರೂಪಾಯಿ, 03-03-2012 ರಂದು 3,81,024/- ರೂಪಾಯಿ ಮತ್ತು ದಿನಾಂಕ: 10-04-12 ರಂದು 3,88,792/- ರೂಪಾಯಿ ಹೀಗೆ ಒಟ್ಟು 94,81,925/- ರೂಪಾಯಿಯನ್ನು ಪಿರ್ಯಾದಿಯ ಬಾಬ್ತು ಪದವು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಬ್ರಾಂಚಿನಿಂದ ಆರ್.ಟಿ.ಜಿ.ಎಸ್ ಮೂಲಕ  ಪಿರ್ಯಾದಿಗೆ ತಿಳಿಯದಂತೆ ಮೋಸದಿಂದ ಪಿರ್ಯಾದಿಯ ಸಹಿ ಇರುವ ಚೆಕ್ ಗಳನ್ನು ಆರೋಪಿ ಪಿರ್ಯಾದಿಗೆ ಮತ್ತು ಸಂಸ್ಥೆಗೆ ತಿಳಿಯದಂತೆ ಕಛೇರಿಯ ಎಕೌಂಟ್ ಜವಾಬ್ದಾರಿ ಹೊತ್ತ ಆರೋಪಿ ಅನಾಮಧೇಯ K.N.R. Enterprises  ಸಂಸ್ಥೆ ಎಂದು ಹೆಸರಿಸಿ, ಪಿರ್ಯಾದಿಗೆ ಮೋಸದಿಂದ ಮತ್ತು ನಕಲಿ ದಾಖಲೆಯನ್ನು ಸೃಷ್ಟಿಸಿನಕಲಿ ಬ್ಯಾಂಕ್ ಖಾತೆ ತೆರೆದು, ಕಛೇರಿಯ ಸಿಬ್ಬಂದಿಯಾಗಿ ಪಿರ್ಯಾದಿಗೆ ಮೋಸ ಮಾಡಿರುವುದಾಗಿದೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19/12/2014 ರಂದು ಸಮಯ ಸುಮಾರು ಸಂಜೆ 6:00 ಗಂಟೆಗೆ ಫಿರ್ಯಾದುದಾರರಾದ ಶ್ರೀ ಗಿರೀಶ್ ವಿ.ಕೆ. ರವರು ಬಿಜೈ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದ ಎದುರುಗಡೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಫಿರ್ಯಾದುದಾರರ ಎದುರುಗಡೆಯಿಂದ ಅಂದರೆ ಬಿಜೈ ಕಡೆಯಿಂದ ಬೋಲೆರೊ ಕಾರ್ ನಂಬ್ರ KA-19-MC-6111 ನೇ ದನ್ನು ಅದರ ಚಾಲಕರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರ ಎಡಕೈ ತೊರು ಬೆರಳಿಗೆ ಹಾಗೂ ನಡುವಿನ ಬೆರಳಿಗೆ ಚರ್ಮ ಕಿತ್ತು ಹೋದಂತಹ ರಕ್ತ ಗಾಯವಾಗಿರುತ್ತದೆ ಡಿಕ್ಕಿ ಪಡಿಸಿದ ವಾಹನ ಚಾಲಕರು ವಾಹನವನ್ನು ಸ್ವಲ್ಪ ಮುಂದಕ್ಕೆ ನಿಲ್ಲಿಸಿ ಬಂದು ನೊಡಿರುತ್ತಾರೆ, ನಂತರ ಅಲ್ಲಿ ಸೆರಿದ್ದ ಜನರು ಆಟೋ ರಿಕ್ಷಾ ಒಂದರಲ್ಲಿ  ಫಿರ್ಯಾದುದಾರರನ್ನು  ನಗರದ ವೆನ್ಲಾಕ್ ಆಸ್ಪತ್ರೆಗೆ  ದಾಖಲು ಮಾಡಿರುತ್ತಾರೆ.

 

4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಜಗದೀಶ್ ಪಾಂಡೇಶ್ವರ ರವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿಜಿಸ್ಟರ್ [ಅಂಬೇಡ್ಕರ್ ವಾದ] ಮಂಗಳೂರು ತಾಲೂಕು ಶಾಖೆಯ ಸಂಚಾಲಕರಾಗಿದ್ದು, ದಿನಾಂಕ 20-12-2014 ರಂದು ಮದ್ಯಾಹ್ನ ಸುಮಾರು 12-45 ಗಂಟೆಗೆ ಸಂಘದ ಕಾರ್ಯಕರ್ತೆಯಾದ ಸರಿತಾ ರವರ ಜೊತೆ ಮಂಗಳೂರು ನಗರದ  ಪಾಂಡೇಶ್ವರದ ಮುಖ್ಯ ರಸ್ತೆಯಲ್ಲಿರುವ   ಅಲಹಬಾದ್ ಬ್ಯಾಂಕ್ ನ   ಪ್ರಭಂಧಕರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸ್ವ-ಉದ್ಯೋಗದ ಸಾಲದ ಬಗ್ಗೆ ಮಾಹಿತಿ ಕೇಳಲು ಹೋದಾಗ, ಬ್ಯಾಂಕಿನ ಮಹಾ ಪ್ರಭಂಧಕರು ಏಕಾಏಕಿಯಾಗಿ ನೀವು ಕೀಳು ಜಾತಿಯವರು ನಿಮ್ಮಂತಹವರಿಗೆ, ಈ ಬ್ಯಾಂಕಿನಲ್ಲಿ ಸಾಲ ಕೊಡುವುದಿಲ್ಲ, ಇಲ್ಲಿಂದ ಹೊರಗಡೆ ನಡೆಯಿರಿ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ಪಿರ್ಯಾದಿದಾರರು ತಾನು ಸಂಘದ ಪದಾಧಿಕಾರಿ ಎಂದು ಹೇಳಿದರೂ ಕೂಡಾ ಯಾವ ಸಂಘ ಆದರೆ ನಮಗೇನು, ನನ್ನಲ್ಲಿ ಅದೆಲ್ಲಾ ನಡೆಯುವುದಿಲ್ಲ ಎಂದು ಉತ್ತರ ನೀಡಿ ಸಂಘದ ಬಗ್ಗೆ ಅಗೌರವದಿಂದ ಮಾತನಾಡಿರುತ್ತಾರೆ.

 

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-12-2014 ರಂದು ಬೆಳಿಗ್ಗೆ 08-30 ಗಂಟೆ ಸಮಯಕ್ಕೆ ಕಟೀಲು-ಬಜಪೆ ಡಾಮಾರು ರಸ್ತೆಯಲ್ಲಿ ಅಶೋಕ ಎಂಬವರು ತನ್ನ ಬಾಬ್ತು ಸ್ಕೂಟರ್ ನಂ: ಕೆಎ 19 ಎಕ್ಷ್ 1350 ನೇದರಲ್ಲಿ ಕುಃ ನಯನ ಎಂಬವಳನ್ನು ಕುಳ್ಳಿರಿಸಿಕೊಂಡು ಬಜಪೆಗೆ ಬರುತ್ತಿದ್ದಾಗಮಂಗಳೂರು ತಾಲೂಕಿನ ಬಜಪೆ ಗ್ರಾಮದ, ಸ್ವಾಮಿಲ ಪದವು ಎಂಬಲ್ಲಿ ಅವರ ಹಿಂದಿನಿಂದ ಅಂದರೆ, ಕಟೀಲು ಕಡೆಯಿಂದ ಟಿಪ್ಪರ್ ಲಾರಿ ನಂ: ಟಿಎನ್ 66 ಜೆ 3723 ರ ಚಾಲಕ , ಟಿಪ್ಪರ್ ಲಾರಿಯನ್ನು ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ , ಸ್ಕೂಟರ್ ನ ಹಿಂದೆ ಕುಳಿತ್ತಿದ್ದ ಕುಃ ನಯನ ಡಾಮಾರು ರಸ್ತೆಗೆ ಬಿದ್ದು, ಟಿಪ್ಪರಿನ  ಟಯರು ಆಕೆಯ ತಲೆಯ ಮೇಲೆ ಹರಿದುತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತರಾಗಿರುವುದಾಗಿದೆ.

 

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-12-2014 ರಂದು ಬೆಳಿಗ್ಗೆ 05-00 ಗಂಟೆಗೆ ಮಂಗಳೂರು ತಾಲೂಕಿನ ಬಜಪೆ ಠಾಣಾ ಸರಹದ್ದಿನ, ಬಡಗ ಎಡಪದವು ಗ್ರಾಮದ ಮಿಜಾರು ಶ್ರೀಗೋಪಾಲ ಕೃಷ್ಣ ದೇವಸ್ಥಾನದ ಎದುರುಗಡೆ ಫಿರ್ಯಾದಿದಾರರಾದ ಶ್ರೀ ಉಸ್ಮಾನ್ ರವರ ಬಾಬ್ತು 407 ಟೆಂಪೋ ನಂಬ್ರ ಕೆಎ 21-1233 ರ ಚಾಲಕ ಅಬ್ದುಲ್ ರಹಿಮಾನ್ ಎಂಬವರು ಟೆಂಪೋವನ್ನು ಎನ್.ಹೆಚ್. ರಸ್ತೆಯಲ್ಲಿ ಮೂಡಬದ್ರಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ ಅವರ ಎದುರುಗಡೆಯಿಂದ ಟಿಪ್ಪರ್ ಲಾರಿ ನಂ: ಕೆಎ 19 ಸಿ 9195 ನೇದರ ಚಾಲಕ ಟಿಪ್ಪರನ್ನು ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಹಾಗೂ ಟಿಪ್ಪರ್ ಲಾರಿ ಹೆಚ್ಚಿನ ಜಖಂಗೊಂಡಿರುವುದು.

 

7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಪ್ರದೀಪ್ ಮಾರ್ಟಿಸ್ ರವರು ಟಿಪ್ಪರ್ ಲಾರಿ ನಂ: ಕೆಎ 20  ಡಿ  9248 ರ ಮಾಲಕರಾಗಿದ್ದು, ದಿನಾಂಕ: 20-12-2014 ರಂದು ಫಿರ್ಯಾದಿದಾರರ ಟಿಪ್ಪರ್ ಲಾರಿಯನ್ನು ಅದರ ಚಾಲಕ ಪುರುಷೋತ್ತಮ ಎಂಬವರು ಮಚ್ಚಾರು ಕಡೆಯಿಂದ ನೀರುಡೆ ಕಡೆಗೆ ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಬೆಳಿಗ್ಗೆ 10-00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕಿನ, ಬಡಗ ಎಕ್ಕಾರು ಗ್ರಾಮದ ಮಚ್ಚಾರು ಸೇತುವೆಯ ಬಳಿ, ಟಿಪ್ಪರ್ ಲಾರಿ ಚಾಲಕನ ಹತೋಟಿ ತಪ್ಪಿ ಬಲಕ್ಕೆ ಹೋಗಿ ಆಳವಾದ ಪ್ರದೇಶಕ್ಕೆ ಬಿದ್ದ ಪರಿಣಾಮ ಚಾಲಕರಿಗೆ ಗಾಯವಾದುದಲ್ಲದೇ ಟಿಪ್ಪರ್ ಲಾರಿ ಜಖಂಗೊಂಡಿರುವುದಾಗಿದೆ. 

 

8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-12-2014 ರಂದು ಬೆಳಿಗ್ಗೆ ಪಿರ್ಯಾದುದಾರ ಶ್ರೀ. ಜಯಪ್ರಕಾಶ್ಎಂಬವರು ತನ್ನ ಬಾಬ್ತು ಮೋಟಾರು ಸೈಕಲ್ನಂಬ್ರ KA 21 L 2772 ನೇಯದರಲ್ಲಿ ವಿಶ್ವನಾಥ ಎಂಬವರನ್ನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಮಡ್ಯಾರು ಎಂಬಲ್ಲಿಂದ ಕಂಕನಾಡಿಗೆ ಹೋಗುವರೇ ಮೋಟಾರು ಸೈಕಲ್ನಲ್ಲಿ ಸವಾರಿ ಮಾಡುತ್ತಾ, ಮಂಗಳೂರು ತಾಲೂಕು, ಕೊಲ್ಯ, ಗಟ್ಟಿ ಸಮಾಜ ಭವನದ ಎದುರು ರಾ.ಹೆ. 66 ರಲ್ಲಿ ಬೆಳಿಗ್ಗೆ 05-30 ಗಂಟೆ ಸಮಯಕ್ಕೆ ತಲುಪುತ್ತಿದ್ದಂತೆ ಅವರ ಎದುರುಗಡೆಯಿಂದ ಅಂದರೆ ತೊಕ್ಕೊಟ್ಟು  ಕಡೆಯಿಂದ KA 19 E 9297 ನೇ ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡುತ್ತಾ ಬಂದು ಪಿರ್ಯಾದುದಾರರ ಬೈಕಿಗೆ ಡಿಕ್ಕಿ ಹೊಡೆದನು. ಇದರಿಂದ ಬೈಕ್ಸಮೇತ ರಸ್ತೆಗೆ ಬಿದ್ದ ಪಿರ್ಯಾದುದಾರರ ಬಲಕೈತಟ್ಟಿಗೆ, ಮುಖಕ್ಕೆ ಬಲಕಣ್ಣಿಗೆ ಗುದ್ದಿದ ರಕ್ತಗಾಯವಾಗಿರುತ್ತದೆ. ಬಲಕಾಲಿನ ತೊಡೆಯ ಮೂಳೆ ಮುರಿತವಾಗಿರುತ್ತದೆ. ಸಹ ಸವಾರ ವಿಶ್ವನಾಥರವರ ಮುಖಕ್ಕೆ, ಮೇಲ್ತುಟಿಗೆ ಗುದ್ದಿದ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದುದಾರರು ಮತ್ತು ವಿಶ್ವನಾಥರವರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಅಥೆನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುತ್ತಾರೆ.

 

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-12-2014 ರಂದು ಪಿರ್ಯಾದುದಾರ ಶ್ರೀ. ಆಶೋಕ್ಎಂಬವರು ತನ್ನ ತಮ್ಮನ ಬಾಬ್ತು KA 19 EC 2723 ನೇ ನಂಬ್ರದ ಮೋಟಾರು ಸೈಕಲ್‌‌ನಲ್ಲಿ ತನ್ನ ತಂಗಿ ಅನಸೂಯಳನ್ನು ಸಹಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಸಾಲೆತ್ತೂರು ಕಡೆಗೆ ಪನೀರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸುಮಾರು 10-50 ಗಂಟೆ ಸಮಯಕ್ಕೆ, ಮಂಗಳೂರು ತಾಲೂಕು, ಕೋಟೆಕಾರು ಗ್ರಾಮದಪನೀರು, ಪಾದರ್ಮುಲ್ಲರ್ಆರ್ಯುವೇದ ಆಸ್ಪತ್ರೆಯ ಎದುರು ತಲುಪುತ್ತಿದ್ದಂತೆ, ಅವರ ಎದುರುಕಡೆಯಿಂದ ಅಂದರೆ ದೇರಳಕಟ್ಟೆ ಕಡೆಯಿಂದ KA 19 MB 1014 ನೇ ನಂಬ್ರದ ಬಿಳಿ ಬಣ್ಣದ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದನು. ಈ ಅಪಘಾತದಿಂದ ಪಿರ್ಯಾದುದಾರರ ತಂಗಿ ರಸ್ತೆಗೆ ಎಸೆಯಲ್ಪಟ್ಟರು. ಪಿರ್ಯಾದುದಾರರು ಬೈಕ್ಸಮೇತ ರಸ್ತೆಗೆ ಬಿದ್ದು, ಅವರ ಬಲಕಾಲಿನ ಪಾದದ ಬಳಿ ಹಾಗು ಕೋಲು ಕಾಲಿಗೆ ರಕ್ತಗಾಯವಾಗಿರುತ್ತದೆ. ಪಿರ್ಯಾದುದಾರರ ತಂಗಿ ಅನಸೂಯರವರ ಸೊಂಟಕ್ಕೆ ಗುದ್ದಿದ ಗಾಯ, ಕೈಕಾಲುಗಳಿಗೆ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದುದಾರರನ್ನು ಮತ್ತು ಅವರ ತಂಗಿ ಅನಸೂಯರವರನ್ನು ಅಲ್ಲಿ ಸೇರಿದವರು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

No comments:

Post a Comment