ದೈನಂದಿನ ಅಪರಾದ ವರದಿ.
ದಿನಾಂಕ 03.12.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 3 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 4 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 02.12.2014 ರಂದು ಪಿರ್ಯಾದಿದಾರರಾದ ಡಾ. ಗಂಗಾಧರ ರವರ ಬಾಬ್ತು ಕಾರು ನಂಬ್ರ ಕೆಎ.19.ಎಂಎ.9875ನೇದನ್ನು ಮಣ್ಣ ಗುಡ್ಡೆ ಕಡೆಯಿಂದ ಕೋಡಿಕಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಮಧ್ಯಾಹ್ನ ಸಮಯ 12.00 ಗಂಟೆ ಸಮಯಕ್ಕೆ ಭಟ್ ನರ್ಸಿಂಗ್ ಹೋಂ ಎದುರುಗಡೆ ತಲುಪಿದಾಗ ಬರ್ಕೆ ಪೊಲೀಸ್ ಠಾಣೆ ರಸ್ತೆ ಕಡೆಯಿಂದ ಕಾರು ನಂಬ್ರ ಕೆಎ.19.ಎಂಬಿ.4402ನೇದನ್ನು ಅದರ ಚಾಲಕಿ ಅತೀವೇಗ ಹಾಗೂ ನಿರ್ಲಕ್ಷ್ಯ ತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಕಾರುಗಳು ಜಖಂಗೊಂಡಿರುವುದಾಗಿದೆ.
2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಂದೇಶ್ ಪ್ರಸಾದ್ ರವರು ಕೆಲಸ ಮಾಡುವ ಆರ್ ಜೆ ಸಿ ಕಾಂಕ್ರೇಟ್ ಮಿಕ್ಸ್ (ಇ) ಪ್ರ್ಯೈ. ಲಿಮಿಟೆಡ್ ಎಂಬ ಸಂಸ್ಥೆಯಲ್ಲಿ ಪ್ರತಾಪ್ ಭಂಡಾರಿ ಎಂಬುವವರು ಕೆಲಸ ಮಾಡುತ್ತಿದ್ದು ಪ್ರತಾಪ್ ಭಂಡಾರಿಯವರಿಗೆ ಸಂಸ್ಥೆಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳ ಮೇಲ್ವೀಚಾರಣೆಯನ್ನು ನೋಡಿಕೊಳ್ಳಲು ಜವಾಬ್ದಾರಿಯನ್ನು ಸಂಸ್ಥೆಯ ಮುಖ್ಯಸ್ಥರು ವಹಿಸಿದ್ದು ಅವರ ಮೇಲೆ ಸಂಪೂರ್ಣ ನಂಬಿಕೆ ಇರಿಸಿದ್ದರು. ಆದರೆ ಪ್ರತಾಪ್ ಭಂಡಾರಿಯವರು ಸಂಸ್ಥೆಗೆ ಸೇರಿದ ವ್ಯವಹಾರಗಳಲ್ಲಿನ ಹಾಗೂ ಹೊರ ವ್ಯವಹಾರಗಳಲ್ಲಿನ ಕಾಂಟ್ರಾಕ್ಟ್ ದಾರರಿಂದ ಕಮಿಷನ್ ಪಡೆಯುತ್ತಿದ್ದು ಮಾತ್ರವಲ್ಲದೆ ಸಂಸ್ಥೆಯ ಸೇಲ್ಸ್ ಆಫಿಸರ್ ಗಳಿಗೆ ಯಾವುದೇ ಮಾಹಿತಿ ನೀಡದೆ ಸುಳ್ಳು ಬಿಲ್ಲುಗಳನ್ನು ಹಾಜರುಪಡಿಸಿ ಸಂಸ್ಥೆಯಿಂದ ಹಣವನ್ನು ಪಡೆದು ಸುಮಾರು 40,00,000/ - ರೂಗಳ ನಷ್ಟವನ್ನು ಉಂಟು ಮಾಡಿ ಸಂಸ್ಥೆಗೆ ನಂಬಿಕೆ ದ್ರೋಹ ಕೃತ್ಯ ಎಸಗಿರುತ್ತಾರೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-12-2014 ರಂದು 14:30 ಗಂಟೆಗೆ ಮಂಗಳೂರು ನಗರದ ನಂತೂರು ಜಂಕ್ಷನ್‌ನಿಂದ ಸ್ವಲ್ಪ ಮುಂದಕ್ಕೆ ಕೆಎ-19-2692 ನಂಬ್ರದ ಗೂಡ್ಸ್ ಟೆಂಪೋವನ್ನು ಅದರ ಚಾಲಕನು ನಂತೂರು ಕಡೆಯಿಂದ ಶಿವಭಾಗ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಾದ ಶ್ರೀ ರಾಕೇಶ್ ರವರು ತನ್ನ ಹೆಂಡತಿಯನ್ನು ಸಹಸವಾರಳಾಗಿ ಕುಳ್ಳಿರಿಸಿಕೊಂಡು ಶಿವಭಾಗ್ ಕಡೆಗೆ ಹೋಗುತ್ತಿದ್ದ ಕೆಎ-19-ಇಎಫ್-8394 ನಂಬ್ರದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿ ನಿಲ್ಲಿಸದೇ ಪರಾರಿಯಾಗಿದ್ದು, ಈ ಅಪಘಾತದಿಂದ ಮೋಟಾರು ಸೈಕಲ್ ಸವಾರ ಪಿರ್ಯಾದಿದಾರರ ಎಡಕಾಲಿಗೆ ಗುದ್ದಿದ ನೋವುಂಟಾಗಿದ್ದು, ಮೋಟಾರು ಸೈಕಲ್ ಸಹಸವಾರೆ ಪಿರ್ಯಾದಿದಾರರ ಗರ್ಭೀಣಿ ಹೆಂಡತಿ ಶ್ರೀಮತಿ ವನಿತಾರವರ ಮುಖಕ್ಕೆ, ಕಾಲಿಗೆ ರಕ್ತ ಗಾಯವಾಗಿದ್ದು, ಗಾಯಾಳು ವನೀತರವರು ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22-11-2014 ರಂದು ರಾತ್ರಿ ಸುಮಾರು 9.00 ಗಂಟೆಗೆ ಮಂಗಳೂರು ಬಂದರು ಜೆ.ಎಂ. ರಸ್ತೆಯಲ್ಲಿರುವ ನಾರಾಣ್.ಜಿ.ಪೆರಾಜೀ ಟ್ರಾನ್ಸ್ ಪೋರ್ಟ್ ಕಂಪನಿಯ ಮ್ಯಾನೇಜರ್ ಆದ ಮಹೇಂದ್ರ ಬಾಯಿ ಲಾಲ್ ವಡೋರ್ ಎಂಬವರು ಲಾರಿ ನಂಬ್ರ GJ -12Y-8131 ನೇದರಲ್ಲಿ ಸದ್ರಿ ಟ್ರಾನ್ಸ್ ಪೋರ್ಟ್ ಕಂಪನಿಯಿಂದ ಒಟ್ಟು 251 ಚೀಲ ಒಣ ಅಡಿಕೆಯನ್ನು ತುಂಬಿಸಿ ಗುಜರಾತ್ ರಾಜ್ಯದ ಅಹಮ್ಮದಬಾದ್ ನಲ್ಲಿರುವ ನಾರಾಣ್ ಜಿ ಪೆರಾಜೀ ಟ್ರಾನ್ಸ್ ಪೋರ್ಟ್ ಕಂಪನಿಗೆ ತಲುಪಿಸುವಂತೆ ಸಂಬಂದಪಟ್ಟ ದಾಖಲಾತಿಗಳೊಂದಿಗೆ ಸದ್ರಿ ಲಾರಿಯ ಚಾಲಕ ಮೋಹನ್ ಲಾಲ್ ರಾಜ್ ಗೋರ್ ನಲ್ಲಿ ಕ್ಯಾಶ್ ಅಡ್ವಾನ್ಸ್ ನೊಂದಿಗೆ ಕಳುಹಿಸಿಕೊಟ್ಟಿದ್ದು ಸದ್ರಿ ಲಾರಿ ಚಾಲಕ ಲಾರಿಯನ್ನು ಅಡಿಕೆಯೊಂದಿಗೆ ತಲುಪಿಸದೇ ಲಾರಿ ಮತ್ತು ಅಡಿಕೆಯೊಂದಿಗೆ ಪರಾರಿಯಾಗಿರುತ್ತಾನೆ. ಒಣ ಅಡಿಕೆಯ ಒಟ್ಟು ಮೌಲ್ಯ ರೂ 44,14,990/- ಆಗಿದ್ದು ಲಾರಿ ಚಾಲಕ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುತ್ತಾನೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02.12.2014 ರಂದು ಫಿರ್ಯಾದಿದಾರರಾದ ಮಂಗಳೂರು ನಗರ ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶ್ರೀ ವೆಲೆಂಟೈನ್ ಡಿ'ಸೋಜಾ ರವರಿಗೆ ದೊರೆತ ಖಚಿತ ವರ್ತಮಾನದ ಆಧಾರದ ಮೇಲೆ ಸಿಬ್ಬಂದಿಗಳೊಂದಿಗೆ ಮದ್ಯಾಹ್ನ 12:00 ಗಂಟೆಯ ಸಮಯಕ್ಕೆ ಮೂಡಬಿದ್ರೆ ಠಾಣಾ ಸರಹದ್ದಿನ ಮಾರ್ಪಾಡಿ ಗ್ರಾಮದ ಮುಖ್ಯ ಬಸ್ ನಿಲ್ದಾಣ ಬಳಿಯಲ್ಲಿರುವ ಸಾಗರ್ ಹೊಟೇಲ್ ಬಳಿಯಲ್ಲಿ ದಾಳಿ ನಡೆಸಿ ಹೊಟೇಲ್ ಬಳಿ ಇದ್ದ ಬಿಳಿ ಬಣ್ಣದ KA 19 MD 5035 ನೇ ನೊಂದಣಿಯ ಮಾರುತಿ ಓಮಿನಿ ಕಾರಿನಲ್ಲಿದ್ದ, ಆರೋಪಿಗಳಾದ ಮೊಹಮ್ಮದ್ ವಾಸೀರ್, ಫಿರೋಜ್ ಖಾನ್ ಮತ್ತು ಗಿರೀಶ್ ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು ದಸ್ತಗಿರಿ ಕ್ರಮ ಜರುಗಿಸಿ ಕಾರಿನಲ್ಲಿ ಪ್ಲಾಸ್ಟೀಕ್ ಗೋಣಿ ಚೀಲದಲ್ಲಿ ಇದ್ದ, ತಲೆ ಭಾಗ ಇರುವ ಜಿಂಕೆ ಕೊಂಬುಗಳು-2 ( 1-ಜೊತೆ ) , ಕೊಂಬುಗಳು -6, ಮೊಬೈಲ್ ಪೋನ್ -4, ಗೋಣಿ ಚೀಲ -1 ಹಾಗೂ KA 19 MD 5035 ನೇ ನಂಬ್ರದ ಕಾರನ್ನು ಪಂಚನಾಮೆಯ ಮುಖಾಂತರ ಸ್ವಾದೀನಪಡಿಸಿಕೊಂಡಿರುವುದಾಗಿ, ಸ್ವಾದೀನಪಡಿಸಿಕೊಂಡ ಸೊತ್ತುಗಳ ಪೈಕಿ ಕಾರಿನ ಮೌಲ್ಯ 2,50,000/-, ರೂಪಾಯಿ ಹಾಗೂ ಮೊಬೈಲ್ ಪೋನ್ ಅಂದಾಜು ಮೌಲ್ಯ 10000/- ರೂಪಾಯಿ ಆಗಬಹುದೆಂದು ಜಿಂಕೆಯ ಕೊಂಬುಗಳ ಬೆಲೆಯನ್ನು ನಿಗದಿಪಡಿಸಬೇಕಾಗಿದೆ ಎಂದು, ಆರೋಪಿಗಳು ವನ್ಯ ಜೀವಿಯಾದ ಜಿಂಕೆಯ ಕೊಂಬುಗಳನ್ನು ದಾವಣಗೆರೆಯ ಉಬ್ರಾಣಿ ಎಂಬಲ್ಲಿಂದ ಯಾವುದೇ ಪರವಾನಿಗೆ ಇಲ್ಲದೆ ಸದ್ರಿ ಕಾರಿನಲ್ಲಿ ಸಾಗಾಟ ಮಾಡಿಕೊಂಡು ಬಂದು ಮಾರಾಟ ,ಮಾಡಲು ಗಿರಾಕಿಗಳಿಗಾಗಿ ಕಾಯುತ್ತಿದ್ದುದ್ದಾಗಿ ಆರೋಪಿಗಳು ನುಡಿದಿರುತ್ತಾರೆ.
6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-12-2014 ರಂದು ಮಾನ್ಯ ಪೊಲೀಸ್ ಉಪ ಆಯುಕ್ತರು (ಕಾ&ಸು), ಮಂಗಳೂರು ನಗರ ರವರಿಗೆ ಮಂಗಳೂರು ತಾಲೂಕು ಸುರತ್ಕಲ್ ಪೊಲೀಸ್ ಠಾಣಾ ಸರಹದ್ದಿನ ಕುಳಾಯಿ ಗ್ರಾಮದ ಕಾನ ಜೋಕಟ್ಟೆ ರಸ್ತೆ ಬಳಿಯ ರೆಮಿ ಡಿಸೋಜ ಎಂಬವರ ಖಾಲಿ ಜಾಗದಲ್ಲಿ ಅಕ್ರಮವಾಗಿ ಡೀಸಿಲ್/ಸೀಮೆ ಎಣ್ಣೆಯನ್ನು ಮಾರಾಟ ಮಾಡುತ್ತಿರುವುದಾಗಿ ಖಚಿತ ವರ್ತಮಾನ ಬಂದ ಮೇರೆಗೆ ಸದ್ರಿಯವರು ಪಿರ್ಯಾದಿದಾರರಾದ ಮಂಗಳೂರು ಉತ್ತರ ಉಪವಿಭಾಗ ಸಹಾಯಕ ಪೊಲೀಸ್ ಅಯುಕ್ತರಾದ ಶ್ರೀ ರವಿಕುಮಾರ್ ಎಸ್. ರವರಿಗೆ ಮಾಹಿತಿ ನೀಡಿದಂತೆ ಪಿರ್ಯಾದಿದಾರರು ಸುರತ್ಕಲ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಪಂಚರೊಂದಿಗೆ ಸಂಜೆ 16-30 ಗಂಟೆಗೆ ದಾಳಿ ನಡೆಸಲಾಗಿ ರಸ್ತೆ ಬದಿಯಲ್ಲಿ ದೊಡ್ಡ ದೊಡ್ಡ ಗಾತ್ರದ ತಗಡು ಶೀಟ್ ಗಳನ್ನು ಅಡ್ಡವಾಗಿ ಕಟ್ಟಿದ್ದು ಮದ್ಯೆ ಒಳ ಹೋಗಲು ರಸ್ತೆ ಇದ್ದು ಒಳಗೆ ಹೋಗಿ ನೋಡಲಾಗಿ ಅಲ್ಲಿನ ದಕ್ಷಿಣ ಬದಿಯಲ್ಲಿ ದೊಡ್ಡ ಗಾತ್ರದ ಬ್ಯಾರಲ್ ಗಳು ಹಾಗೂ ಸಣ್ಣ ಕ್ಯಾನ್ ಗಳು, ಪೈಪ್ ಗಳು, ಕಬ್ಬಿಣದ ಜೋಲೆ ಗಳಿದ್ದು ಅಲ್ಲಿದ್ದ ವ್ಯಕ್ತಿಯ ಬಳಿ ಸದ್ರಿ ಡೀಸಲ್ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲಾಗಿ ಯಾವುದೇ ದಾಖಲಾತಿ ಇಲ್ಲವಾಗಿ ತಿಳಿಸಿದಂತೆ ಇದೊಂದು ಅಕ್ರಮವಾಗಿ ಡೀಸಲ್ ಹಾಗೂ ಸೀಮೆ ಎಣ್ಣೆಯನ್ನು ದಸ್ತಾನು ಇರಿಸಿ ಮಾರಾಟ ಮಾಡುತ್ತಿರುವುದಾಗಿ ಖಚಿತ ಪಡಿಸಿ, ಪರಿಶೀಲಿಸಲಾಗಿ ಒಟ್ಟು 7 ಬ್ಯಾರಲ್ ಗಳಲ್ಲಿ ಒಟ್ಟು ಸುಮಾರು 800 ಲೀಟರ್ ಡೀಸಲ್ (ಅಂದಾಜು ಮೌಲ್ಯ ರೂ 25000/-) ಇದ್ದು ಮತ್ತು ಸದ್ರಿ ಸ್ಥಳದಲ್ಲಿ ಡಿಸೇಲ್ ತೆಗೆಯಲು ಉಪಯೋಗಿಸಿದ ದೊಡ್ಡ ಪೀಲೆ ( ಆಲಿಕೆ ) -1, ಕಬ್ಬಿಣದ ಜೋಲೆ ( ಜ್ಯೂಲಿ)-1, ನೀಲಿ ಬಣ್ಣದ 1 ಇಂಚಿನ ಪೈಪ್ ಗಳು -3, ಸುಮಾರು 20 ಅಡಿ ಉದ್ದ , ಮತ್ತು 20 ಲೀಟರ್ ನ ಖಾಲಿ ಕ್ಯಾನ್ -3 ಇದ್ದು ಹಾಗೂ ಸ್ಥಳದಲ್ಲಿದ್ದ 2 ಜನ ಆರೋಪಿಗಳಾದ ರೇಮಿ ಡಿ ಸೋಜಾ , ಸಚಿನ್ ಡಿ ಅಮಿನ್, ಇವರನ್ನು ವಶಕ್ಕೆ ಪಡೆದು ಸೂಕ್ತ ಕಾನೂನು ಕ್ರಮಕ್ಕಾಗಿ ಕೋರಿರುವುದಾಗಿದೆ.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಜಯಪ್ರಕಾಶ್ ಡಿ.ಕೆ. ರವರು ಮಂಗಳೂರು ನಗರದ .ಬಿ ಶೆಟ್ಟಿ ವೃತ್ತದ ಬಳಿ ಇರುವ ಪೆರಡಿಗಂ ಪ್ಲಾಜ್ಹಾದ 2 ನೇ ಮಹಡಿಯಲ್ಲಿರುವ ಸಮೃದ್ದ ಜೀವನ್ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೊ ಅಪರೇಟಿವ್ ಸೊಸೈಟಿಯಲ್ಲಿ ಮ್ಯಾನೆಜರ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ದಿನಾಂಕ 02-12-2014 ರಂದು ಬೆಳಿಗ್ಗೆ 10-30 ಗಂಟೆಗೆ ಆರೋಪಿ ಇಮ್ತಿಯಾಜ್ ಮತ್ತು ಸಂತೋಷ್ ಬಜಾಲ್ ಹಾಗೂ ಇತರರು ಅಕ್ರಮ ಕೂಟ ಸೇರಿಕೊಂಡು ಅಕ್ರಮ ಪ್ರವೇಶ ಮಾಡಿ, ಇವರುಗಳಲ್ಲಿ ಆರೋಪಿ ಸಂತೋಷ್ ಬಜಾಲ್ ಮತ್ತು ಇಮ್ತಿಯಾಜ್ ರವರು ಫಿರ್ಯಾದುದಾರರ ಚೇಂಬರ್ ಗೆ ನುಗ್ಗಿ ಫಿರ್ಯಾದುದಾರರಲ್ಲಿ "ನಿಮ್ಮ ಸಂಸ್ಥೆಯು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದೆ, ಇದನ್ನು ನಾಳೆಯಿಂದ ನಿಲ್ಲಿಸಬೇಕು ಎಂದು ಹೇಳಿ, ಇಲ್ಲವಾದರೆ ಕಚೇರಿಯನ್ನು ಮುಚ್ಚಿಸುತ್ತೇವೆ ಎಂದು ಬೆದರಿಕೆ ನೀಡಿದ್ದಲ್ಲದೆ, ಇವರುಗಳು ಸಂಸ್ಥೆಯ ಒಳಾಂಗಣದಲ್ಲಿ ಇತರ ಆರೋಪಿಗಳೊಂದಿಗೆ ಸೇರಿಕೊಂಡು ಇನ್ಕಿಲಾಬ್ ಜಿಂದಾಬಾದ್, ಧಿಕ್ಕಾರ, ಧಿಕ್ಕಾರ, ಸಂಮೃದ್ದ ಜೀವನಕ್ಕೆ ಧಿಕ್ಕಾರ ಎಂಬುದಾಗಿ ಘೋಷಣೆ ಕೂಗುತ್ತಾ ಅಲ್ಲಿಂದ ತೆರಳಿರುತ್ತಾರೆ.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲ್ಲೂಕಿನ ಬಜಾಲ್ ರೈಲ್ವೇ ಕ್ರಾಸ್ ಗೇಟಿನ ಪಕ್ಕದಲ್ಲಿ ವಿಜಯಾ ಇನ್ಫ್ರಾ ಪ್ರೋಜೆಕ್ಟ್ ಪ್ರೈ. ಲಿ. ಎಂಬ ಕಂಪನಿಯವರು ವಾಹನಗಳು ನೆಲಮಾರ್ಗದಲ್ಲಿ ಸಾಗುವಂತೆ ಅಂಡರ್ಪಾಸ್ ಕಾಮಗಾರಿಯನ್ನು ನಡೆಸುವ ಸಮಯ ದಿನಾಂಕ: 01.12.2014 ರಂದು ರಾತ್ರಿ ಸುಮಾರು 08:30 ಗಂಟೆ ಸಮಯಕ್ಕೆ ಸದ್ರಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಮಣ್ಣು ಕುಸಿದು ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದು, ಅದರಲ್ಲಿ ಮಂಗಲ್ ಎಂಬವನು ಮಣ್ಣಿನ ಅಡಿಗೆ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿರುವುದಲ್ಲದೇ ನಾಮದೇವ ಎಂಬಾತನ ಕಾಲುಗಳಿಗೆ ಸಣ್ಣಪುಟ್ಟ ತರಚು ಗಾಯಗಳಾಗಿರುತ್ತವೆ. ಸದ್ರಿ ಕಾಮಗಾರಿಯ ಗುತ್ತಿಗೆದಾರರಾದ ವಿಜಯ ಇನ್ಫ್ರಾ ಪ್ರೊಜೆಕ್ಟ್ ಪ್ರೈ.ಲಿ ನ ಮಾಲೀಕರಾದ ಕುಮಾರ್ ಎಂಬವರು ಕೆಲಸಗಾರರು ಕೆಲಸ ಮಾಡುವ ಸ್ಥಳದಲ್ಲಿ ಮಣ್ಣು ನೀರಿನಿಂದ ನೆನೆದು ಕುಸಿಯುತ್ತಿದೆ ಎಂಬುದನ್ನು ತಿಳಿದಿದ್ದರೂ ಸಹ ಈ ಬಗ್ಗೆ ಯಾವುದೇ ಸುರಕ್ಷತಾ ಕ್ರಮವನ್ನು ಕೈಗೊಳ್ಳದೇ ನಿರ್ಲಕ್ಷವಹಿಸಿ ತನ್ನ ಸೈಟ್ ಇಂಜಿನೀಯರ್ ಹಾಗೂ ಸೈಟ್ ಸೂಪರ್ವೈಸರ್ ರವರಿಂದ ಕೆಲಸಗಾರರು ಸದ್ರಿ ಸ್ಥಳದಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿರುವುದೇ ಈ ಘಟನೆಗೆ ಕಾರಣವಾಗಿರುತ್ತದೆ.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-12-2014 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾಧಿದಾರರಾದ ಮಂಗಳೂರು ನಗರ ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶ್ರೀ ವೆಲೆಂಟೈನ್ ಡಿ'ಸೋಜಾ ರವರು ಕಚೇರಿಯಲ್ಲಿರುವಾಗ್ಯೆ ಮಂಗಳೂರು ನಗರದ ಪಂಪುವೆಲ್ ನಲ್ಲಿರುವ ಪದ್ಮಶ್ರೀ ಹೋಟೆಲ್ ನ ಬಳಿ ಒಬ್ಬ ವ್ಯಕ್ತಿಯು ಗಾಂಜಾವನ್ನು ಮಾರಾಟ ಮಾಡುವರೇ ತನ್ನ ವಶದಲ್ಲಿಟ್ಟುಕೊಂಡಿದ್ದಾನೆ ಎಂಬುದಾಗಿ ದೊರೆತ ಖಚಿತ ವರ್ತಮಾನದ ಮೇರೆಗೆ ಸದ್ರಿಯವರು ಪಂಚಾಯತುದಾರರು ಹಾಗೂ ಸಿಬ್ಬಂದಿಯವರೊಂದಿಗೆ ಮಧ್ಯಾಹ್ನ 3-50 ಗಂಟೆಗೆ ಸ್ಥಳಕ್ಕೆ ದಾಳಿ ನಡೆಸಿದಾಗ ಮಾಹಿತಿದಾರರು ತಿಳಿಸಿದಂತಹ ಒಬ್ಬ ವ್ಯಕ್ತಿಯು ಪಿರ್ಯಾಧಿದಾರರನ್ನು ಹಾಗೂ ಸಿಬ್ಬಂದಿಯನ್ನು ಕಂಡು ಓಡಲು ಪ್ರಯತ್ನಿಸಿದಾಗ ಆತನನ್ನು ಸುತ್ತುವರೆದು ಹಿಡಿದು ನಂತರ ತಾಲೂಕು ದಂಡಾಧಿಕಾರಿಯವರ ಸಮಕ್ಷಮದಲ್ಲಿ ಸದ್ರಿಯವನನ್ನು ತಪಾಸಣೆ ನಡೆಸಿದಾಗ ಆತನ ವಶದಲ್ಲಿ ಒಟ್ಟು 455 ಗ್ರಾಂ ಗಾಂಜಾ ಎಂಬ ಮಾದಕ ವಸ್ತು ದೊರೆತಿದ್ದು ಅದನ್ನು ಹಾಗೂ ಸದ್ರಿ ಯವರನ ವಶದಲ್ಲಿದ್ದ 3 ಮೊಬೈಲ್ ಪೋನ್ ಗಳನ್ನು ಮಹಜರು ಮುಖೇನ ಸ್ವಾಧೀನ ಪಡಿಸಲಾಗಿದ್ದು ಸದ್ರಿ ಆರೋಪಿಯ ವಿಚಾರಣೆ ವೇಳೆ ಆತನು ಸದ್ರಿ ಗಾಂಜಾವನ್ನು ಬಳ್ಳಾರಿ ಕೇಂದ್ರ ಕಾರಗೃಹದಲ್ಲಿರುವ ಆಕಾಶ್ ಭವನದ ಶರಣ್ ಎಂಬವನಿಗೆ ತಲುಪಿಸುವರೇ ದಿನೇಶ್ ಮತ್ತು ಕೆನನ್ ಎಂಬವರು ತನಗೆ ನೀಡಿದನ್ನು ತಾನು ಸಾಗಾಟಮಾಡುವ ಸಲುವಾಗಿ ಇಟ್ಟುಕೊಂಡಿದ್ದಾಗಿ ತಿಳಿಸಿರುತ್ತಾನೆ.
No comments:
Post a Comment