ದಿನಾಂಕ 20.12.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-12-2014 ರಂದು ಸಂಜೆ ಸಮಯ ಪಿರ್ಯಾದಿದಾರರಾದ ಶ್ರೀಮತಿ ಮೆಘನಾ ಡಿ'ಸೋಜಾ ರವರ ಅವರ ಬಾಬ್ತು ಕೆ.ಎ. 19.ಇ.ಡಿ 9082ನೇ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಅವರ ಮಕ್ಕಳನ್ನು ಪಕ್ಷಿಕರೆ -ತೋಕೂರು ಕಾನ್ವೆಂಟ್ ಬಳಿ ಟ್ಯೂಷನ್ ಗೆ ಬಿಟ್ಟು ವಾಪಾಸು ಹೋಗುತ್ತಿರುವಾಗ ಸಂಜೆ 5-10 ಗಂಟೆ ಸಮಯಕ್ಕೆ ಪಕ್ಷಿಕರೆ -ರಿಸೆಂಪ್ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಕೆ.ಎ 19.ಇ.ಎಂ 4594ನೇ ಮೋಟಾರು ಸೈಕಲ್ ಸವಾರ ನಿತಿನ್ ಎಂಬವನು ಅವರ ಬಾಬ್ತು ಸದ್ರಿ ಮೋಟಾರು ಸೈಕಲನ್ನು ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ವಾಹನ ಸಮೇತಾ ರಸ್ತೆಗೆ ಬಿದ್ದು 2 ಕಾಲುಗಳ ಪಾದಕ್ಕೆ ಮೂಳೆ ಮುರಿತದ ಗಾಯವಾಗಿ ಎರಡೂ ವಾಹನಗಳು ಜಖಂ ಆಗಿದ್ದು ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.
3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 25-11-2014 ರಂದು ಅಟೋ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಫಿರ್ಯಾದಿದಾರರಾದ ಶ್ರೀ ಹಸೈನಾರ್ ರವರು ಕೆಎ-19-ಎ-6590 ನೇ ಅಟೋ ರಿಕ್ಷಾದಲ್ಲಿ ಸಂಜೆಯ ಹೊತ್ತಿಗೆ ತೊಕ್ಕೊಟು ಒಳಪೇಟೆಯಿಂದ ಪಾಂಡೇಲ್‌ಪಕ್ಕ ಕಡೆಗೆ ಪ್ರಯಾಣಿಕರನ್ನು ಬಾಡಿಗೆಗೆ ಬಿಟ್ಟು ವಾಪಾಸು ತೊಕ್ಕೊಟು ಕಡೆಗೆ ಬರುತ್ತಾ ಸಂಜೆ 4-00 ಗಂಟೆಯ ಸಮಯಕ್ಕೆ ಅಲೇಕಳ 1ನೇ ಕ್ರಾಸ್ ತಲುಪುವಾಗ ಅವರ ಎದುರಿನಿಂದ ಕೆಎ-19-19-ಎಂಎ-3608 ನೇ ಮಾರುತಿ ಸ್ವಿಪ್ಟ್ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದ ಬಲ ಬದಿ ಇಂಡಿಕೇಟರ್, ಮಡ್‌ಗಾರ್ಡ್ ಮತ್ತಿತರ ಭಾಗಗಳಿಗೆ ಜಖಂಗೊಂಡಿರುತ್ತದೆ. ಅಪಘಾತದ ಪರಿಣಾಮ ಫಿರ್ಯಾದಿದಾರರ ಹಣೆಗೆ ರಿಕ್ಷಾದ ಸೈಡ್ ಮಿರರ್‌ನ ರಾಡ್ ತಾಗಿ ಅವರು ತಲೆತಿರುಗಿ ಬಿದ್ದಾಗ ಅವರಿಗೆ ಪಕ್ಕದ ಮನೆಯವರು ನೀರು ಚಿಮುಕಿಸಿದಾಗ ಎಚ್ಚರಗೊಂಡ ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಮಾರುತಿ ಸ್ವಿಪ್ಟ್ ಕಾರಿನ ಚಾಲಕ ಶಫಿಕ್ ರವರು ಫಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಮೈಕೈಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ನೋವುಂಟು ಮಾಡಿರುತ್ತಾರೆ. ಮತ್ತು ಶಫಿಕ್ ರವರು ಇಕ್ಬಾಲ್ ರವರನ್ನು ಬರಮಾಡಿಸಿಕೊಂಡಿದ್ದು, ಬಳಿಕ ಶಫಿಕ್ ಮತ್ತು ಇಕ್ಬಾಲ್ ರವರು ಕೈಯಿಂದ ಫಿರ್ಯಾದಿದಾರರ ಕೈಗೆ ಹೊಡೆದು, ಗುದ್ದಿ ಗಾಯ ಮಾಡಿದಲ್ಲದೆ, ಮರ್ಮಾಂಗಕ್ಕೆ ಕಾಲಿನಿಂದ ತುಳಿದು ನೋವುಂಟು ಮಾಡಿರುತ್ತಾರೆ. ಮತ್ತು ಈ ವಿಚಾರದಲ್ಲಿ ಕಂಪ್ಲೆಂಟ್ ಕೊಟ್ಟರೆ ಕೊಲ್ಲದೆ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿರುತ್ತಾರೆ. ಗಾಯಗೊಂಡ ಫಿರ್ಯಾದಿದಾರರು ಅದೇ ದಿನ ಚಿಕಿತ್ಸೆ ಪಡೆದುಕೊಳ್ಳದೇ ಇದ್ದು, ಗಾಯ ಉಲ್ಬಣಗೊಂಡು ದಿನಾಂಕ. 27-11-2014 ರಂದು ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಈ ವಿಚಾರದಲ್ಲಿ ಯಾವುದೇ ದೂರು ನೀಡಿರುವುದಿಲ್ಲ. ನಂತರ ಶಫಿಕ್ ಮತ್ತು ಇಕ್ಬಾಲ್ ರವರು ಆಗಾಗ ಫಿರ್ಯಾದಿದಾರರನ್ನು ಹೆದರಿಸಿ ತೊಂದರೆ ಕೊಡುತ್ತಿರುವುದರಿಂದ ಫಿರ್ಯಾದಿದಾರರು ತಡವಾಗಿ ದಿನಾಂಕ. 19-12-2014 ರಂದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
3. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19.12.2014 ರಂದು ಪಿರ್ಯಾದುದಾರರಾದ ಶ್ರೀ ಸಂತೋಷ್ ರವರು ರಿಯಾಜ್ ಎಂಬವರ ತಮ್ಮನ ಬಾಬ್ತು KA-19-ED-2930ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು, ಸದ್ರಿ ಮೋಟಾರ್ ಸೈಕಲ್ಲನ್ನು ರಿಯಾಜ್ ಎಂಬವರು ಸವಾರಿಮಾಡಿಕೊಂಡು ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಫರಂಗಿಪೇಟೆ ಕಡೆಗೆ ಹೋಗುತ್ತಾ ನಂತೂರು - ಪಡೀಲ್ ರಸ್ತೆಯಲ್ಲಿ ಮರೋಳಿ ಕೆಂಬಾರು ಗೌರವ್ ಹಿಲ್ಟಾಪ್ ಬಳಿ ರಸ್ತೆಯ ಡಿವೈಡರ್ ತೆರೆದಿರುವ ಸ್ಥಳದಲ್ಲಿ ಸುಮಾರು 11:20 ಗಂಟೆ ಸಮಯಕ್ಕೆ KA-01-AD-7981ನೇ ಲಾರಿಯನ್ನು ಅದರ ಚಾಲಕ ಜಲೀಲ್ ಅನ್ಸಾರಿ ಎಂಬವನು ಪಡೀಲ್ ಕಡೆಯಿಂದ ನಂತೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಸದ್ರಿಯನ್ನು ಲಾರಿಯನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೆ ಒಮ್ಮೆಲೆ ಬಲಬದಿಗೆ ತಿರುಗಿಸಿ ಮೋಟಾರ್ ಸೈಕಲ್ ಹೋಗುತ್ತಿದ್ದ ರಸ್ತೆಗೆ ಪ್ರವೇಶಿಸಿ ಸದ್ರಿ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಪಿರ್ಯಾದುದಾರರು ಹಾಗೂ ಸವಾರ ರಿಯಾಜ್ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಬೈಕ್ ಸವಾರ ರಿಯಾಜ್ ರವರ ತಲೆಗೆ, ಮುಖಕ್ಕೆ ರಕ್ತ ಗಾಯ ಹಾಗೂ ಎದೆಗೆ ಗುದ್ದಿದ ನೋವು ಮತ್ತು ಕೈಗೆ ತೆರಚಿದ ಗಾಯ ಅಲ್ಲದೇ ಪಿರ್ಯಾದುದಾರರ ಹಣೆಗೆ ರಕ್ತಗಾಯಗೊಂಡವರಲ್ಲಿ ರಿಯಾಜ್ ರವರು ಚಿಕಿತ್ಸೆ ಬಗ್ಗೆ ನಗರದ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಲ್ಲದೇ ಪಿರ್ಯಾದುದಾರರು ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿದೆ.
No comments:
Post a Comment