ದಿನಾಂಕ 10.12.2014 ರ 12:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 4 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-12-2014 ರಂದು ಫಿರ್ಯಾದಿದಾರರಾದ ಪಣಂಬೂರು ಪೊಲೀಸ್ ಠಾಣಾ ಎಎಸ್ಐ ದೇವ ಶೆಟ್ಟಿ ರವರು ಖಾಸಗಿ ಟಾಟಾ ಸುಮೋ ವಾಹನದಲ್ಲಿ ಚಾಲಕ ಶಿವ ಎಂಬವರೊಂದಿಗೆ ಸಮವಸ್ತ್ರದಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯ ದಲ್ಲಿರುತ್ತಾ ಮುಂಜಾನೆ 02.30 ಗಂಟೆಗೆ ಬ್ಯೆಕಂಪಾಡಿ ಬಳಿ ಮೀನಕಳಿಯ ರಸ್ತೆಯಿಂದ ಬ್ಯೆಕಂಪಾಡಿ ಕಡೆಗೆ ಮೋಟಾರ್ ಸ್ಯೆಕಲ್ ಕೆಎ.47 .ಹೆಚ್ 9184 ನೆಯದನ್ನು ಅದರ ಸವಾರ ಗುರುಕಿರಣ್ ಹಾಗೂ ಸಹಸವಾರ ಚೇತನ್ ರವರೊಂದಿಗೆ ಅಮಲು ಪದಾರ್ಥ ಸೇವಿಸಿ ನಿರ್ಲಕ್ಷತನ ಹಾಗೂ ಅತೀವೇಗ ಆಜಾಗರೂಕತೆಯಿಂದ ಚಲಾಯಿಸಿ ಸವಾರನಿಗೆ ವಾಹನದ ನಿಯಂತ್ರಣ ತಪ್ಪಿ ಬ್ಯೆಕ್ ಸಮೇತ ರಸ್ತೆಗೆ ಬಿದ್ದು ಬ್ಯೆಕ್ ಜಖಂಗೊಂಡಿದಲ್ಲಿ ಈ ಬಗ್ಗೆ ಸವಾರ ಹಾಗೂ ಸಹಸವಾರ ರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿ ಪೂರ್ವ ದ್ಯಢಕರಣಪತ್ರದೊಂದಿಗೆ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲು ಪಿರ್ಯಾದಿ ನೀಡಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07.11.2014 ರಂದು ಸಮಯ ಸುಮಾರು12.30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಸಂದೀಪ್ ರವರು ತಮ್ಮ ಬಾಬ್ತು ಆಟೋ ರಿಕ್ಷಾ ನಂಬ್ರ ಕೆ.ಎ-19-ಎಎ-2534ನ್ನು ಕೆಪಿಟಿ ಕಡೆಯಿದ ಕೂಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಕೆ.ಪಿ.ಟಿ. ಬಳಿಯ ಲ್ಯಾಂಡ್ ಮಾರ್ಕ್ಸ್ ಕಟ್ಟಡದ ಬಳಿ ತಲುಪಿದಾಗ, ಹಿಂದಿನಿಂದ ಮಿನಿ ಟೆಂಪೋ ನಂಬ್ರ ಕೆಎ19-ಎಎ-5573 ನ್ನು ಅದರ ಚಾಲಕ ಆರೋಪಿಯು ಕೆಪಿಟಿ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಚಾಲಾಯಿಸುತ್ತಿದ್ದ ರಿಕ್ಷಾದ ಹಿಂಬದಿಗೆ ಡಿಕ್ಕಿ ಮಾಡಿದ ಪರಿಣಾಮ ರಿಕ್ಷಾದ ಹಿಂಬದಿಗೆ ಜಖಂ ಉಂಟಾಗಿರುತ್ತದೆ. ಆರೋಪಿಯು ರಿಕ್ಷಾಕ್ಕೆ ಆದ ಜಖಂನ ನಷ್ಟಪರಿಹಾರ ನೀಡುವುದಾಗಿ ಹೇಳಿ ಬಳಿಕ ನೀಡಲು ನಿರಾಕರಿಸಿದ್ದರಿಂದ ಪಿರ್ಯಾದಿದಾರರು ವಿಳಂಭವಾಗಿ ದೂರು ನೀಡಲು ಕಾರಣವಾಗಿರುತ್ತದೆ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಜಬ್ಬರ್ ರವರು ಹಾಗೂ ಅವರ ಸಹೊದ್ಯೋಗಿ ಮೊಹಮ್ಮದ್ ಹಫೀಜ್ ರವರು ದಿನಾಂಕ: 06-12-2014 ರಂದು ತಮ್ಮ ಕೆಲಸವನ್ನು ಕಣಚೂರು ಮಿಲ್ ನಲ್ಲಿ ಮುಗಿಸಿ ಮನೆಕಡೆಗೆ ಹೋಗುವರೇ ರಾತ್ರಿ ಸುಮಾರು 9-30 ಗಂಟೆ ಸಮಯಕ್ಕೆ ಮಂಜನಾಡಿ ಕಡೆಗೆ ಹೋಗುವರೇ ರಸ್ತೆ ಬದಿಯಲ್ಲಿ ಮಣ್ಣು ರಸ್ತೆಯಲ್ಲಿ ರಸ್ತೆ ದಾಟಲು ನಿಂತಿದ್ದಾಗ ನಾಟೆಕಲ್ ಕಡೆಯಿಂದ KA-19-EM-0109ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಅಶ್ರಫ್ ಎಂಬಾತನು ಅತೀವೇಗ ಹಾಗೂ ತೀರಾ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡಬದಿ ಮಣ್ಣು ರಸ್ತೆಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಹಾಗೂ ಅವರ ಸಹೊದ್ಯೋಗಿ ಮೊಹಮ್ಮದ್ ಹಫೀಜ್ ರವರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದಿದಾರರು ಮಣ್ಣು ರಸ್ತೆಗೆ ಎಸೆಯಲ್ಪಟ್ಟು ಅವರ ಬಲಕಾಲಿನ ಪಾದ ಹಾಗೂ ಕೈಗಳಿಗೆ ಹಾಗೂ ಹಣಿ ಮತ್ತು ಮೂಗಿಗೆ ರಕ್ತಗಾಯವಾಗಿರುವುದಲ್ಲದೆ, ಅವರ ಸಹೊದ್ಯೋಗಿ ಮೊಹಮ್ಮದ್ ಹಫೀಜ್ ರವರಿಗೆ ಕೂಡ ಎಡಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯ, ಬಲಕಾಲಿನ ಮೊಣಗಂಟಿಗೆ ರಕ್ತಗಾಯ ಹಾಗೂ ನೆತ್ತಿ,ಮುಖ ಹಾಗೂ ಎರಡೂ ಕೈಗಳಿಗೆ ರಕ್ತಗಾಯವಾಗಿದ್ದವರು ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಪದ್ಮನಾಭ ರವರು ಮುಲ್ಕಿ ನಗರ ಪಂಚಾಯತಿನಲ್ಲಿ ಕಿರಿಯ ಅಭಿಯಂತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 08.12.2014 ರಂದು ಬೆಳಿಗ್ಗೆ 10.00 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಕರ್ತವ್ಯ ನಿರ್ವಹಿಸುತ್ತಿರುವ ಸಮಯ ಜಾನ್ಸನ್ ಎಂಬ ವ್ಯಕ್ತಿ ಕಛೇರಿಗೆ ಬಂದು ತಾನು ಕ್ರೈಂ ನ್ಯೂಸ್ ಪತ್ರಿಕೆಯವನು ಎಂದು ಹೇಳಿ ಪತ್ರಿಕೆಯ ಪತ್ರಿಯನ್ನು ನೀಡಿ ದೆನಿಗೆ ಹಣ ಕೊಡಬೇಕು ಎಂದು ಹೇಳಿದ್ದು, ಆಗ ಪಿರ್ಯಾಧಿದಾರರು ತನ್ನಲ್ಲಿ ಹಣವಿಲ್ಲ ತಾನು ಕೆಲಸದಲ್ಲಿ ಬಿಸಿಯಾಗಿರುವುದು ಹೇಳಿ ಹೊರಗಡೆ ಬಂದಾಗ ಸದ್ರಿ ವ್ಯಕ್ತಿ ಹಿಂಬಾಲಿಸಿ ಹಣ ಕೊಡುವಂತೆ ತಡೆದು ಪಿಡಿಸಿ "ಹೇಗೆ ತೊಂದರೆ ಕೊಡಬೇಕು ನಮಗೆ ಗೊತ್ತಿದೆ" ಎಂದು ಹೇಳಿ ಹೋಗಿ ನಂತರ 12.38 ಕ್ಕೆ ಪಿರ್ಯಾಧಿದಾರರ ಮೊಬೈಲ್ ನಂಬ್ರ ಗೆ ಆರೋಪಿ ಜಾನ್ಸನ್ ಅವರ ಮೊಬೈಲ್ ನಂಬ್ರದಿಂದ ಪೋನ್ ಮಾಡಿ ನಿಮ್ಮ ಮಾನ ಕಳೆಯುತ್ತೇನೆ ನೋಡ್ತಾಯಿರಿ ಪತ್ರಿಕೆಯವರನ್ನು ಹೇಗೆ ನೋಡಬೇಕು ನಿಮಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪುತ್ತಿಗೆ ಗ್ರಾಮ ಪಂಚಾಯತ್ ಬಳಿಯ ದೀಪಾ ಪಾದೆ ಮನೆ ಮಿತ್ತಬೈಲು ಮೂಡಬಿದ್ರೆ ಎಂಬವರು ಮೂಡಬಿದ್ರೆ ಪ್ರಭು ಆಸ್ಪತ್ರೆಯಲ್ಲಿ ಶ್ರೀಮತಿ ಅಮೀನಾ, ಗಂಡ: ಮಹಮ್ಮದ್. ಎಂ, ಎಂ ಮೂಲಕುಡಿ ಮನೆ, ಎರ್ನಾಕುಲಂ, ಎಂಬ ಹೆಸರು ವಿಳಾಸದಡಿಯಲ್ಲಿ ಹೆರಿಗೆಯ ಬಗ್ಗೆ ದಾಖಲಾಗಿ ಹೆರಿಗೆಯಾದ ತನ್ನ ಹೆಣ್ಣು ಶಿಶುವನ್ನು 10 ದಿನದ ಬಳಿಕ ಸದ್ರಿ ಶ್ರೀಮತಿ ಅಮೀನಾರವರ ಜೊತೆ ಕೇರಳಕ್ಕೆ ಕೊಂಡು ಹೋಗಿ ಒಂದು ಲಕ್ಷ ರೂಪಾಯಿಗೆ ಶ್ರೀಮತಿ ಅಮೀನಾರವರಿಗೆ ಮಾರಾಟ ಮಾಡಿರುವ ಮಂಗಳೂರು ಚೈಲ್ಡ್ ಲೈನ್‌ನ ಟೀಂ ಮೆಂಬರ್ರವರಾದ ಅಸುಂತ, ಪವಿತ್ರ ಎಂಬವರು ಅಂಚೆಯ ಮೂಲಕ ಲಿಖಿತ ಫಿರ್ಯಾದಿ ನೀಡಿರುವುದಾಗಿದೆ.
6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಸುರತ್ಕಲ್ ಪೊಲೀಸ್ ಠಾಣೆ ಅಪರಾಧ ವಿಭಾಗದ ಪೊಲಿಸ್ ಉಪ ನಿರೀಕ್ಷಕ ಕುಮಾರೇಶ್ವರನ್ ರವರಿಗೆ ದಿನಾಂಕ 09-12-2014 ರಂದು 10-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಇಡ್ಯಾ ಗ್ರಾಮದ ಸುರತ್ಕಲ್ -ಬಜ್ಪೆ ರಸ್ತೆಯ ಕಾನ ಜನತಾ ಕಾಲೋನಿ ಕ್ರಾಸ್ ರಸ್ತೆಯ ಬಳಿ ಇರುವ ಬಸ್ ನಿಲ್ದಾಣದ ಬಳಿ ಒಬ್ಬ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಪಂಚರು ಹಾಗೂ ಠಾಣಾ ಸಿಬ್ಬಂದಿಗಳನ್ನು ಕರೆದುಕೊಂಡು ಮೇಲಿನ ಸ್ಥಳಕ್ಕೆ ಬೆಳಿಗ್ಗೆ 11-15 ಗಂಟೆಗೆ ತಲುಪಿದಾಗ ವಿಕ್ರಮ್ ವಿವಿಯಾನ್ ಡಿ ಮೆಲ್ಲೋ ಪ್ರಾಯ: 24 ವರ್ಷ ತಂದೆ: ವಿನ್ಸೆಂಟ್ ಡಿ ಮೆಲ್ಲೋ, ವಾಸ: ಡೋರ್ ನಂಬ್ರ: 158, 3 ನೇ ಬ್ಲಾಕ್, ಕಾಟಿಪಳ್ಳ ಮಂಗಳೂರು ತಾಲೂಕು ಎಂಬಾತನು ಒಂದು ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಅಮಾನುಸ್ಪದವಾಗಿ ತಿರುಗಾಡಿಕೊಂಡಿದ್ದು, ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಲಕೋಟೆಯನ್ನು ಪರಿಶೀಲಿಸಿದಾಗ ಅದರೊಳಗೆ ಗಾಂಜಾ ವಾಸನೆ ಬರುತ್ತಿದ್ದು, ಅದರೊಳಗೆ ಸುಮಾರು 100 ಗ್ರಾಂ ನಷ್ಟು ಗಾಂಜಾ ಸೊಪ್ಪು ಮತ್ತು ಮೊಗ್ಗುಗಳು ಇರುವುದು ಕಂಡು ಬಂದಿದ್ದು, ಅಲ್ಲದೇ ಚೀಲದಲ್ಲಿ ರೂ: 100 ರ 2 ನೋಟುಗಳು ಒಟ್ಟು 200 ರೂ ಗಳು ಇದ್ದು ಇದು ಗಾಂಜಾ ಮಾರಾಟ ಮಾಡಿ ಬಂದ ಹಣ ಎಂದು ಆತನು ತಿಳಿಸಿದ್ದು, ಆತನು ಯಾವುದೇ ದಾಖಲೆ ಪತ್ರಗಳು ಇಲ್ಲದೇ ಅಕ್ರಮವಾಗಿ ಮಾರಾಟ ಮಾಡುತ್ತಿದ್ದವನನ್ನು ಸೊತ್ತುಗಳೊಂದಿಗೆ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿರುವುದಾಗಿದೆ.
7.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಸುರೇಶ್ ದೇವಾಡಿಗ ರವರ ಮಾವ ಸುಧಾಕರ ಪ್ರಾಯ 35 ವರ್ಷ ಎಂಬವರು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿ ಫುಟ್ ಬಾತ್ ನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿರುತ್ತಾರೆ. ದಿನಾಂಕ 29-11-2014 ರಂದು ಬೆಳಿಗ್ಗೆ 07-30 ಗಂಟೆಗೆ ಎಂದಿನಿಂದ ನಗರದ ಸ್ಟೇಟ್ ಬ್ಯಾಂಕ್ ಗೆ ಬಂದು ತರಕಾರಿ ಮಾಡುತ್ತಿದ್ದವರು ವ್ಯಾಪಾರ ಮುಗಿಸಿ ಮಧ್ಯಾಹ್ನ 2-00 ಗಂಟೆಗೆ ಊಟಕ್ಕೆಂದು ಹೋದವರು ವಾಪಾಸು ಬಂದಿರುವುದಿಲ್ಲವಾಗಿ ಸ್ಟೇಟ್ ಬ್ಯಾಂಕ್ ಬಳಿ ಫುಟ್ ಬಾತ್ ನಲ್ಲಿ ವ್ಯಾಪಾರ ಮಾಡುವ ಮಹಮ್ಮದ್ ಯಾಕೂಬ್ ರವರು ತಿಳಿಸಿರುತ್ತಾರೆ. ಫಿರ್ಯಾದುದಾರರು ಸುಧಾಕರ ರವರ ಮೊಬೈಲ್ ಫೋನಿಗೆ ಕರೆ ಮಾಡಿದಾಗ ನಾಟ್ ರಿಚೇಬಲ್ ಆಗಿರುತ್ತದೆ. ಫಿರ್ಯಾದುದಾರರು ಸುಧಾಕರ ರವರ ಬಗ್ಗೆ ಸಂಬಂಧಿಕರಲ್ಲಿ, ಮಂಗಳೂರು ನಗರದಲ್ಲಿ ವಿಚಾರಿಸಿ ಈ ದಿನದವರೆಗೂ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಸುಧಾಕರ ರವರನ್ನು ಈವರೆಗೂ ಹುಡುಕಾಡಿದ್ದರಿಂದ ದೂರು ನೀಡಲು ವಿಳಂಭವಾಗಿರುತ್ತದೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಲತೀಶ್ ಕುಮಾರ್ ರವರು ಸ್ವಂತ ಆಟೋರಿಕ್ಷಾ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದು, ದಿನಾಂಕ 07-12-2014 ರಂದು ತಮ್ಮ ಅಣ್ಣನ ಮದುವೆ ಇದ್ದುದರಿಂದ ತಮ್ಮ ಕುಟುಂಬ ಸಮೇತ ಮರೋಳಿ ಎಂಬಲ್ಲಿಗೆ ದಿನಾಂಕ 05-12-2014 ರಂದು ಸಂಜೆ 5-00 ಗಂಟೆ ಸಮಯ ಮನೆಯ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಂಡು ತೆರಳಿದ್ದು ದಿನಾಂಕ 09-12-2014 ರಂದು ಮಧ್ಯಾಹ್ನ 2-00 ಗಂಟೆಗೆ ಫಿರ್ಯಾದಿದಾರರು ವಾಪಾಸು ಮನೆಗೆ ಬಂದು ನೋಡಿದಾಗ ಮನೆಯ ಹಿಂಬದಿ ಬಾಗಿಲು ಹಾಗೂ ಮುಂದಿನ ಕಿಟಕಿ ತೆರೆದಂತೆ ಕಂಡಿದ್ದು ಒಳಗೆ ಹೋಗಿ ನೋಡಿದಾಗ ಮನೆಯ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಪಾಟಿನಲ್ಲಿದ್ದ 20,000 ರೂ ಹಣ ಹಾಗೂ ದೇವರ ಮಂಟಪದಲ್ಲಿದ್ದ ಬೆಳ್ಳಿಯ 2 ದೀಪಗಳು, ಕುಂಕುಮ ಹಾಕುವ ಬೆಳ್ಳಿಯ ಕರಡಿಗೆ ಇವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳುವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ 24,000 ರೂ ಆಗಬಹುದು.
9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08.12.2014 ರಂದು ಮುಂಜಾನೆ ಎಂದಿನಂತೆ ಮಂಗಳೂರಿನ ಪದವು ಗ್ರಾಮದ ಮೇರಿಹಿಲ್ ಗುರುನಗರದಿಂದ ನವೀನ್ ಆಚಾರ್ಯ ರವರು ಎಂದಿನಂತೆ ಮಂಗಳೂರಿನ ಕಾರ್‌ಸ್ರ್ಟೀಟ್‌ನಲ್ಲಿರುವ ತನ್ನ ಬಾಬ್ತು ದೀಪಶ್ರೀ ಎಂಬ ಜುವೆಲ್ಲರಿ ಅಂಗಡಿಗೆ ತನ್ನ ಬಾಬ್ತು ಮಾರುತಿ ರಿಟ್ಜ್ ಕಾರ್ ನಂಬ್ರ: ಕೆಎ-19-ಎಂಡಿ-2635 ರಲ್ಲಿ ಹೋದವರು ರಾತ್ರಿ 9.00 ಗಂಟೆಗೆ ಮನೆಗೆ ಬಾರದೆ ಇದ್ದವರನ್ನು ಅವರ ಮೊಬೈಲ್ ಫೋನ್ಗೆ ಸಂಪರ್ಕಿಸಿದರೂ ಕರೆಯನ್ನು ಸ್ವೀಕರಿಸದೇ ಇದ್ದು ದಿನಾಂಕ 09.12.2014 ರಂದು ಬೆಳಿಗ್ಗೆ ಸುಮಾರು 9.00 ಗಂಟೆಗೆ ನವೀನ್ ಆಚಾರ್ಯ ರವರು ತನ್ನ ಮನೆಯ ಬಳಿ ಕಾರ್ ಪಾರ್ಕ್ ಮಾಡುವ ಸ್ಥಳಕ್ಕೆ ಹೋಗಿ ನೋಡುವಾಗ ಕಾರ್ ಪಾರ್ಕ್ ಮಾಡಿಕೊಂಡಿರುವುದನ್ನು ನೋಡಿ ಆ ಸ್ಥಳಕ್ಕೆ ಹೋಗಿ ನೋಡಿದಾಗ ಪಿರ್ಯಾದಿದಾರರಾದ ಶ್ರೀಮತಿ ಶ್ವೇತಾ ರವರ ಗಂಡ ಕಾರಿನೊಳಗಡೆ ಚಾಲಕರ ಸೀಟಿನಲ್ಲಿ ಕುಳಿತುಕೊಂಡಿದ್ದಂತೆ ಇದ್ದುದನ್ನು ಗಮನಿಸಿ ಕಾರಿನ ಬಾಗಿಲು ತೆರೆದು ನೋಡಿದಾಗ ತನ್ನ ಗಂಡ ಮೃತಪಟ್ಟಿರುವುದಾಗಿಯೂ ಅವರ ಅಂಗಿಯ ಕಿಸೆಯನ್ನು ಪರಿಶೀಲಿಸಿದಾಗ ಅದರಲ್ಲಿ ಚೀಟಿಯೊಂದು ದೊರೆತ್ತಿದ್ದು ಅದರಲ್ಲಿ ತನ್ನ ಗಂಡನ ಹಸ್ತಾಕ್ಷರದಲ್ಲಿ ನನ್ನ ಸಾವಿಗೆ ಕಾರಣರಾದವರು ಶಿವಾನಂದ ಕೇತ್ಲಿ ಮೆಸ್ಕಾಂ, ನಾರಾಯಣ ಬೋಂದೆಲ್, ಟೋನಿ ಕಾಂಟ್ರ್ರಕ್ಟರ್ಸ್, ಪುತ್ತೂರು ರಾಮಚಂದ್ರ ಆಚಾರ್ಯ ಎಂಬುದಾಗಿಯೂ ಅವರುಗಳ ಮೊಬೈಲ್ ನಂಬ್ರಗಳನ್ನು ಮತ್ತು ಒಟ್ಟು 13,35000 ಎಂಬುದಾಗಿ ಬರೆದಿರುವುದರಿಂದ, ತನ್ನ ಗಂಡನಿಗೆ ಬರಬೇಕಾದ ಹಣವನ್ನು ವಾಪಾಸು ನೀಡದೇ ಇದ್ದುದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
No comments:
Post a Comment