ಕೇಂದ್ರ ಸರಕಾರದ ಪ್ರವಾಸೋದ್ಯಮ ಮಂತ್ರಾಲಯ ಇವರಿಂದ ಸ್ವೀಕೃತವಾದ ಪತ್ರದಲ್ಲಿ ತಿಳಿಸಿರುವಂತೆ E.C.R. Country [ Emigration Check required ] ಅಂದರೆ ಮಲೇಶಿಯಾ, ಜೋರ್ಡಾನ್, ಯು.ಎ.ಇ., ಯೆಮೆನ್, ಲೆಬನಾನ್, ಕತಾರ್, ಓಮನ್, ಕುವೈಟ್, ಇರಾಕ್, ಬಹ್ರೈನ್, ಸೌದಿ ಅರೇಬಿಯಾ, ಅಫಘಾನಿಸ್ತಾನ್, ಇಂಡೋನೇಷಿಯಾ, ಲಿಬಿಯಾ, ಸೂಡಾನ್, ಸಿರಿಯಾ, ಹಾಗೂ ಥಾಯ್ಲೆಂಡ್ ರಾಷ್ಟ್ರಗಳಲ್ಲಿರುವ ಭಾರತೀಯ ಪ್ರಜೆಗಳು ಮೃತಪಟ್ಟಾಗ ಅವರ ಮೃತ ದೇಹವನ್ನು ಭಾರತಕ್ಕೆ ತರುವ ಸಲುವಾಗಿ ಮೃತರ ಸಂಬಂಧಿಕರು/ ವಾರೀಸುದಾರರಿಗೆ ಸಹಾಯಕವಾಗುವಂತೆ ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 12-08-2014 ರಿಂದ ಜ್ಯಾರಿಗೆ ಬರುವಂತೆ www.moia.gov.in ಎಂಬ ವೆಬ್-ಸೈಟನ್ನು ತೆರೆದಿದ್ದು, ಅಗತ್ಯ ಸಂದರ್ಭಗಳಲ್ಲಿ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ಸಾರ್ವಜನಿಕ ಹಿತದೃಷ್ಠಿಯಿಂದ ಪತ್ರಿಕೆಗಳಲ್ಲಿ ಪ್ರಕಟಿಸಲು ಕೋರಲಾಗಿದೆ.
No comments:
Post a Comment