Saturday, November 15, 2014

Daily Crime Reports 15-11-2014

ದೈನಂದಿನ ಅಪರಾದ ವರದಿ.

ದಿನಾಂಕ 15.11.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 13.11.2014 ರಂದು ಬೆಳಿಗ್ಗೆ  ಪಿರ್ಯಾದಿದಾರರಾದ ಶ್ರೀ ಅನಂತ ರೆಡ್ಡಿ ರವರ ಮಗಳು ಶ್ರೀಮತಿ ಚೈತ್ರಳು ಸ್ಕೂಟರ್ನಂಬ್ರ ಕೆ.-19-.ಎಚ್‌-5264 ನೇದನ್ನು ಮಂಗಳೂರು ನಗರದ ಶಾರದಾ ಸ್ಕೂಲ್ಕಡೆಯಿಂದ ಕಲಾಕುಂಜ ರಸ್ತೆಯಲ್ಲಿ ಚಲಾಯಿಸುತ್ತಾ, ಸಮಯ ಬೆಳಿಗ್ಗೆ 11:00 ಗಂಟೆಗೆ ಸ್ಟೇಟ್ಬ್ಯಾಂಕ್ಕಟ್ಟಡದ ಎದುರು ತಲುಪಿದಾಗ, ಅವರ ಎದುರುಗಡೆಯಿಂದ ಅಂದರೆ ಎಕ್ಸ್‌‌‌‌ ಪರ್ಟ್ಕಾಲೇಜ್ಕಡೆಯಿಂದ ಮೋಟಾರು ಸೈಕಲ್ನಂಬ್ರ ಕೆ.-19-ವಿ-666 ನೇದನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಮಗಳ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಮಗಳು ಶ್ರೀಮತಿ ಚೈತ್ರಳು ಸ್ಕೂಟರ್ಸಮೇತ ರಸ್ತೆಗೆ ಬಿದ್ದು, ಕತ್ತಿನ ಬಳಿ ನೋವು ಹಾಗೂ ಎಡಗೈ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ನಗರದ ಯೆನೆಪೋಯಾ  ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದು, ಆರೋಪಿತ ಮೋಟಾರು ಸೈಕಲ್ಸವಾರನಿಗೂ ಸಹಾ ಗಾಯವುಂಟಾಗಿ ಸದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಪಿರ್ಯಾದಿದಾರರಿಗೆ ಕಾನೂನಿನ ಸರಿಯಾದ ಮಾಹಿತಿ ಇಲ್ಲವಾದ್ದರಿಂದ ತಡವಾಗಿ ದೂರು ನೀಡಿದ್ದಾಗಿದೆ.

 

2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 13-11-2014 ರಂದು 17-30 ಗಂಟೆಗೆ ಮಂಗಳೂರು ತಾಲೂಕು, ಮೂಡುಶೆಡ್ಡೆ ಗ್ರಾಮದ ಮೂಡುಶೆಡ್ಡೆ ನಿಸರ್ಗಧಾಮದ ಬಳಿ ಫಿರ್ಯಾಧುದಾರರಾದ ಶ್ರೀ ನಝೀರ್ ರವರು ನಿರ್ವಾಹಕನಾಗಿ ಕೆಲಸ ಮಾಡುತ್ತಿರುವ ಕೆಎ-19-..-1115 ಕೊಲ್ಲೂರು ಮೂಕಾಂಬಿಕಾ ಬಸ್ಸನ್ನು ಆರೋಪಿತರಾದ ಅಪರಿಚಿತ 3 ಜನರು ಹಾಗೂ ಜೋನ್ಸಿ, ರೈಮಾನ್ ಎಂಬವರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ, ಟಿಕೇಟಿನ ವಿಚಾರದಲ್ಲಿ ತಡೆದು ನಿಲ್ಲಿಸಿ, ಫಿರ್ಯಾಧುದಾರರನ್ನು ಬಸ್ಸಿನಿಂದ ಕೆಳಗಿಳಿಸಿ ನೀನು ಬಾರಿ ದೊಡ್ಡ ಜನವಾ, ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆ ಒಡ್ಡಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದಿದ್ದು, ಕೈಯಲ್ಲಿದ್ದ ಪಂಚಿನಂತಹ ವಸ್ತುವಿನಿಂದ ಹಲ್ಲೆ ಮಾಡಿದ ಪರಿಣಾಮ ಬಲ ಕಣ್ಣಿನ ಬಳಿ ಗುದ್ದಿದ ಗಾಯವಾಗಿದ್ದು, ಅಲ್ಲದೇ ತುಟಿಗೆ ರಕ್ತಗಾಯವಾಗಿರುತ್ತದೆ. ಹಾಗೂ ಫಿರ್ಯಾಧುದಾರರ ಕೈಯಲ್ಲಿದ್ದ ಕಲೆಕ್ಷನ್ ಹಣ ರೂ. 5000/-ವನ್ನು ತೆಗೆದುಕೊಂಡು ಹೋಗಿರುತ್ತಾರೆ.

 

3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಂಜೀವ ಎಂಬವರು  ಕೊರಗ  ಜನಾಂಗದವರಾಗಿದ್ದು, ಅವರು ದಿನಾಂಕ 14.11.2014 ರಂದು ಬೆಳಿಗ್ಗೆ ಸುಮಾರು 9:00 ಗಂಟೆಯಿಂದ 10:00 ಗಂಟೆಯ ಮಧ್ಯದ ಅವದಿಯಲ್ಲಿ ಮೂಡಬಿದ್ರೆ ವಿದ್ಯಾಗಿರಿಯಲ್ಲಿ ನಡೆಯುತ್ತಿದ್ದ ನುಡಿಸಿರಿ  ಮೆರವಣಿಗೆಯನ್ನು ನೋಡುತ್ತಿರುವಾಗ ಮೆರವಣಿಗೆಯಲ್ಲಿ ಮೇಲ್ಜಾತಿಯವರಾದ ಆರೋಪಿ ಯೊಗೀಶ್  ತೀರ್ಥಹಳ್ಳಿ ಎಂಬವರು ಹಾಗೂ ಅವರ ತಂಡದವರು ಅವರ ಮೈಗೆ ಕಪ್ಪು  ಬಣ್ಣವನ್ನು  ಹಚ್ಚಿ  ಕೊರಗ  ಜನಾಂಗದವರು  ತಲೆಗೆ ಸಾಂಪ್ರಾದಾಯಕವಾಗಿ  ಧರಿಸುವ  ಮುಟ್ಟಾಲೆ ( ಟೋಪಿ)  ಯನ್ನು  ಧರಿಸಿ  ಸೊಂಟಕ್ಕೆ ಕಪ್ಪು ಬಣ್ಣದ ಬಟ್ಟೆ ಧರಿಸಿ ಸಾರ್ವಜನಿಕವಾಗಿ ಕೊರಗರ ಕುಣಿತದ ಪ್ರದರ್ಶನವನ್ನು ಮಾಡಿ ಕೊರಗರ  ಜನಾಂಗಕ್ಕೆ ಅವಮಾನ  ಪಡಿಸಿರುವುದಲ್ಲದೆ, ಅಜಲು  ಪದ್ದತಿಯನ್ನು  ಮಾಡಿರುತ್ತಾರೆ.    

 

4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 14/11/2014 ರಂದು 09.15 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಫಾಥುನ್ಹಿ ರವರು ತಮ್ಮ ಮಗ ಇಕ್ಬಾಲ್ ಅಹಮ್ಮದ್ ಎಂಬವರ ಬಾಬ್ತು ಸ್ಕಾರ್ಪಿಯೋ ವಾಹನ ನಂ. KA 19 MC 5005 ನೇದರಲ್ಲಿ ಬೆಂಜನಪದವಿನಿಂದ ಮೂಡಬಿದ್ರೆಯ ತೋಡಾರ್ ಕಡೆಗೆ ಹೋಗುತ್ತಾ ಮಂಗಳೂರು ತಾಲೂಕು ತೆಂಕ ಎಪಡದವು ಗ್ರಾಮದ ಎಡಪದವು ಕಾಲೇಜಿನ ಬಳಿ ಇರುವ ಬಸ್ ನಿಲ್ದಾಣದ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಟಿಪ್ಪರ್ ಲಾರಿ ನಂ. KA 19 C 2805 ನೇದ್ದನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಹತ್ತಿರ ಕುಳಿತ್ತಿದ್ದ ಪಿರ್ಯಾದಿದಾರರ ಮೊಮ್ಮಗ ಅಖಿಲ್ 10 ವರ್ಷ ಎಂಬಾತನು ಎದುರು ಮುಗ್ಗರಿಸಿ ಗ್ಲಾಸಿಗೆ ತಾಗಿದ್ದು, ಆತನ ಎಡ ಮತ್ತು ಬಲ ಬದಿಯ ಹಣೆಗೆ ರಕ್ತಗಾಯವಾಗಿರುವುದಲ್ಲದೇ, ಸ್ಕಾರ್ಪಿಯೋದ ಮುಂಭಾಗ ಸಂಫೂರ್ಣ ಜಖಂಗೊಂಡಿರುತ್ತದೆ.

 

5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ ಮುಬೀನಾ ರವರ ಗಂಡ ಮಹಮ್ಮದ್ ಇಸಾಕ್ ಎಂಬವರು ಮದುವೆಯಾದಂದಿನಿಂದ ಮುಬೀನಾ ರವರ ಮೇಲೆ ಸಂಶಯಗೊಂಡು ವಿವಿಧ ರೀತಿಯಲ್ಲಿ ಕಿರುಕುಳ ಹಾಗೂ ಮಾನಸಿಕ ಹಿಂಸೆಯನ್ನು ಕೊಡುತ್ತಿದ್ದವರು ದಿನಾಂಕ: 14.11.2014 ರಂದು ಮಧ್ಯಾಹ್ನ ಸುಮಾರು 1:00 ಗಂಟೆ ಸಮಯಕ್ಕೆ ಮಹಮ್ಮದ್ ಇಸಾಕ್ನು ತನ್ನ ಹೆಂಡತಿ ಪಿರ್ಯಾದುದಾರರ ಮನಗೆ ಬಂದು ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದುದಾರರ ಮುಖಕ್ಕೆ, ಕೈಗಳಿಗೆ ಹೊಡೆದು ಪಿರ್ಯಾದುದಾರರ ಮಗುವನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋದವರು ಸ್ವಲ್ಪ ಹೊತ್ತಿನ ಬಳಿಕ ವಾಪಾಸ್ಸು ತನ್ನ ತಂಗಿ ಮಿಶ್ರೀಯಾ ರವರ ಜೊತೆ ಪಿರ್ಯಾದುದಾರರ ಮನೆಗೆ ಬಂದು ಅಣ್ಣ ತಂಗಿ ಇಬ್ಬರು ಸೇರಿ ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ಪಿರ್ಯಾದುದಾರರಿಗೆ ಯದ್ವಾತದ್ವಾ ಹೊಡೆದು, "ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಪಿರ್ಯಾದುದಾರರ ಕುತ್ತಿಗೆಯಲ್ಲಿದ್ದ ಚೈನನ್ನು ಎಳೆದು ತುಂಡುಮಾಡಿ ತೆಗೆದಿದ್ದು, ಪಿರ್ಯಾದುದಾರರಿಗೆ ಅವರ ಗಂಡ ಮಹಮ್ಮದ್ ಇಸಾಕ್ ಮತ್ತು ಅವರ ತಂಗಿ ಮಿಶ್ರೀಯಾ ರವರು ಪಿರ್ಯಾದುದಾರರಿಗೆ ಹೊಡೆದ ಪರಿಣಾಮ ಪಿರ್ಯಾದುದಾರರ ಮುಖದ ಭಾಗಕ್ಕೆ, ಎಡಕಿವಿಯ ಭಾಗಕ್ಕೆ, ಕೈಗೆ, ಬೆನ್ನಿಗೆ ಹಾಗೂ ಹೊಟ್ಟೆಗೆ ಗುದ್ಧಿದ ಗಾಯಗೊಂಡವರನ್ನು ಪಿರ್ಯಾದುದಾರರ ಮಾವನ ಮಗನಾದ ಅಬ್ದುಲ್ ರಝಾಕ್ ಎಂಬವರು ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಮಾಡಿರುವುದಲ್ಲದೇ ಪಿರ್ಯಾದುದಾರರ ಮಗ ಮಹಮ್ಮದ್ ಇಸ್ಮಾಯಿಲ್ ಮರ್ಜೂಕ್ನು ಪಿರ್ಯಾದುದಾರರ ಗಂಡ ಆರೋಪಿ ಮಹಮ್ಮದ್ ಇಸಾಕ್ ವಶದಲ್ಲಿದ್ದು, ಮಗನನ್ನು ಪಿರ್ಯಾದುದಾರರ ವಶಕ್ಕೆ ಒಪ್ಪಿಸಬೇಕು ಎಂಬುದಾಗಿ ಪಿರ್ಯಾದಿ ನೀಡಿರುವುದಾಗಿದೆ.

No comments:

Post a Comment