ದೈನಂದಿನ ಅಪರಾದ ವರದಿ.
ದಿನಾಂಕ 25.11.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 1 |
1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-11-2014 ರಂದು ಮಧ್ಯಾಹ್ನ 2:15 ಗಂಟೆಗೆ ಮಂಗಳೂರು ತಾಲೂಕು ಬೋಳಿಯಾರ್ ಗ್ರಾಮದ ಬೋಳಿಯಾರ್ ಜಂಕ್ಷನ್ ಬಳಿಯಲ್ಲಿ ಅಬ್ದುಲ್ ಬಶೀರ್ ಎಂಬವರು ರಿಕ್ಷಾ ನಂಬ್ರ ಕೆಎ-19-ಸಿ-8543 ನೇದನ್ನು ಮುಡಿಪು ಕಡೆಯಿಂದ ಬೊಳ್ಳಾಯಿ ಕಡೆಗೆ ಅತೀವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ರಿಕ್ಷಾವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಲೈಟ್ ಕಂಬಕ್ಕೆ ಢಿಕ್ಕಿ ಹೊಡೆದು ಪಕ್ಕದಲ್ಲಿದ್ದ ಹೊಂಡಕ್ಕೆ ಮಗುಚಿ ಬಿದ್ದ ಪರಿಣಾಮ ರಿಕ್ಷಾದೊಳಗೆ ಇದ್ದ ಪಿರ್ಯಾದಿದಾರರಾದ ಶ್ರೀ ಇಲ್ಯಸ್ ರವರಿಗೆ ತುಟಿಗೆ, ತಲೆಗೆ ತರಚಿದ ಗಾಯವಾಗಿದ್ದು, ಪಿರ್ಯಾದಿದಾರರ ಸಂಬಂಧಿ ಕುಂಞ ಅಹಮ್ಮದ್ರವರಿಗೆ ತಲೆಗೆ, ಎಡ ಕಣ್ಣಿಗೆ, ಮೂಗಿಗೆ, ತುಟಿಗೆ, ಗಲ್ಲಕ್ಕೆ, ಕುತ್ತಿಗೆಗೆ ಗುದ್ದಿದ ಗಾಯ ಮತ್ತು ರಕ್ತ ಗಾಯ ಹಾಗೂ ಕಂಞ ಅಹಮ್ಮದ್ರವರರ ಹೆಂಡತಿ ನೆಬಿಸಾರವರಿಗೆ ಬಲಕಾಲಿನ ಸೊಂಟಕ್ಕೆ ಮತ್ತು ಬಲಭುಜಕ್ಕೆ ಗುದ್ದಿದ ಗಾಯವಾಗಿರುತ್ತದೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-11-2014 ರಂದು ಬೆಳಿಗ್ಗೆ 09:00 ಗಂಟೆಗೆ, ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಕೊಣಾಜೆ ಯುನಿವರ್ಸಿಟಿ ಬಾಯ್ಸ್ ಹಾಸ್ಟೆಲ್ಗೆ ಹೋಗುವ ಕಾಲುದಾರಿಯಲ್ಲಿ, ಪಿರ್ಯಾದಿದಾರರಾದ ಶ್ರೀ ದಿನೇಶ್ ರವರು ತನ್ನ ಹೆಂಡತಿ ಹೇಮಲತಾ ರವರೊಂದಿಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆಎ-19-ಇಡಿ-5232 ನೇದರಲ್ಲಿ ಗುಡ್ಡೆಪಾಲ್ ಕಡೆಯಿಂದ ಕಣಚೂರು ಶಾಲೆಗೆ ಹೋಗುತ್ತಿರುವಾಗ ಅಸೈಗೋಳಿ ಕಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ-19-ಇಎಂ-3071 ನೇದನ್ನು ಅದರ ಸವಾರ ಮೋಹನ್ ಎಂಬಾತನು ಅತೀವೇಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಹೇಮಲತಾರವರು ಬೈಕ್ನಿಂದ ಬಿದ್ದು, ಅವರ ಎಡಭುಜಕ್ಕೆ ರಕ್ತಗಾಯವಾಗಿದ್ದು, ಪಿರ್ಯಾದಿದಾರರಿಗೆ ಬಲಕಾಲಿಗೆ ಗಾಯವಾಗಿರುತ್ತದೆ.
3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಭಾಸ್ಕರ ಪೂಜಾರಿ ರವರು ಕಿನ್ನಿಗೋಳಿ ವಲಯದ ಚಾಲಕ ಮತ್ತು ನಿರ್ವಾಹಕರ ಸಂಘದ ಅಧ್ಯಕ್ಷರಾಗಿದ್ದು, ದಿನಾಂಕ:23-11-2014 ರಂದು ರಾತ್ರಿ ಸಮಯ ಸುಮಾರು 8-00 ಗಂಟೆಗೆ ಕಿನ್ನಿಗೋಳಿ ನೇಕಾರರ ಸೌಧದ ಆಪೀಸಿನಲ್ಲಿ ನಡೆಯುವ ಮೀಟಿಂಗ್ ನಲ್ಲಿ ಭಾಗವಹಿಸಿ ಮೀಟಿಂಗ್ ಮುಗಿದ ಬಳಿಕ ರಾತ್ರಿ 10-30 ಗಂಟೆಗೆ ತನ್ನ ಬಾಬ್ತು ಮೋಟಾರು ಸೈಕಲಿನಲ್ಲಿ ಮನೆಯಾದ ಉಳ್ಳಂಜೆಗೆ ಹೋಗುತ್ತಿರುವಾಗ್ಗ ರಾತ್ರಿ 10-45 ಗಂಟೆಗೆ ಕುಂಜಿರಾಯ ದೇವಸ್ಥಾನದ ದ್ವಾರದ ಬಳಿ ತಲುಪಿದಾಗ ಅಲ್ಲಿ ನಿಂತುಕೊಂಡಿದ್ದ ಫಿರ್ಯಾದಿದಾರರ ಪರಿಚಯದ ಕರುಣಾಕರ ಎಂಬಾತನು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನೀನು ಗಾಂಜಾದ ಬಗ್ಗೆ ಮಾಹಿತಿ ಕೊಡುತ್ತೀಯಾ ಎಂಬುದಾಗಿ ಬೊಬ್ಬೆ ಹಾಕಿ ಆತನ ಕೈಯಲ್ಲಿದ್ದ ಮೆಣಸಿನ ಹುಡಿಯನ್ನು ಫಿರ್ಯಾದಿದಾರರ ಮುಖಕ್ಕೆ ಬಿಸಾಡಿ ಕೈಯಲ್ಲಿದ್ದ ಸ್ಕ್ರೂ ಡೈವರ್ ನಿಂದ ಪಿರ್ಯಾದಿದಾರರನ್ನು ತಿವಿಯಲು ಬಂದಿರುವುದಾಗಿದೆ.
4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಪಿ. ನಾರಾಯಣ ಆಚಾರ್ಯ ರವರು ಚೀನಿವಾರನಾಗಿ ಕೆಲಸ ಮಾಡಿಕೊಂಡಿದ್ದು, ಮಂಗಳೂರು ನಗರದ ಮಲ್ಲಿಕಟ್ಟೆಯ ನಲಪಾಡ್ ಕಟ್ಟಡದ ತಳ ಅಂತಸ್ತಿನಲ್ಲಿ ಶಿಲ್ಪಾ ಜುವೆಲ್ಲರಿ ಎಂಬ ಚಿನ್ನಾಭರಣ ರಿಪೇರಿ ಹಾಗೂ ಮಾರಾಟದ ಅಂಗಡಿಯ ನಡೆಸಿಕೊಂಡಿರುವುದಾಗಿದೆ. ಪಿರ್ಯಾದಿದಾರರು ಎಂದಿನಂತೆ ದಿನಾಂಕ: 22-11-2014 ರಂದು ರಾತ್ರಿ 8-00 ಗಂಟೆ ಸಮಯಕ್ಕೆ ತನ್ನ ಬಾಬ್ತು ಜುವೆಲ್ಲರಿ ಅಂಗಡಿಯನ್ನು ಬಂದ್ ಮಾಡಿ ಬೀಗ ಹಾಕಿ ಹೋಗಿದ್ದು, ದಿನಾಂಕ 23-11-2014 ರಂದು ಭಾನುವಾರವಾಗಿದ್ದು ಸದ್ರಿಯವರ ಅಂಗಡಿಗೆ ರಜೆಯಾಗಿದ್ದುದಾಗಿದೆ. ದಿನಾಂಕ 24-11-2014 ರಂದು ಬೆಳಿಗ್ಗೆ 7-30 ಗಂಟೆಗೆ ತಮ್ಮ ಜುವೆಲ್ಲರಿ ಅಂಗಡಿಯ ಪಕ್ಕದಲ್ಲಿರುವ ಸೆಲೂನ್ ಅಂಗಡಿಯ ಸುಭಾಷ್ ಎಂಬಾತನು ದೂರವಾಣಿ ಕರೆ ಮಾಡಿ ತಾನು ನಿನ್ನೆ ದಿನ ದಿನಾಂಕ: 23-11-2014ರಂದು ರಾತ್ರಿ ಕೆಲಸ ಮುಗಿಸಿ ತನ್ನ ಸೆಲೂನ್ ಅಂಗಡಿಗೆ ಬೀಗ ಹಾಕಿ ಹೋಗಿದ್ದು ಈ ದಿನ ಬೆಳಿಗ್ಗೆ ಸೆಲೂನ್ ತೆರೆಯಲು ಬಂದಾಗ ಯಾರೋ ತನ್ನ ಸೆಲೂನ್ ಗೆ ಹಾಕಿದ್ದ ಬೀಗವನ್ನು ಮುರಿದು ಆ ಮೂಲಕ ಒಳಪ್ರವೇಶಿಸಿ ತನ್ನ ಸೆಲೂನ್ ನಲ್ಲಿರಿಸಿದ್ದ ಸುಮಾರು 8,000/- ರೂ ಬೆಲೆ ಬಾಳುವ ಟಿ.ವಿಯನ್ನು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಸೆಲೂನ್ ನ ಒಳಗಿನ ಪಿರ್ಯಾದಿದಾರರ ಜುವೆಲ್ಲರಿಗೆ ತಾಗಿಕೊಂಡಿರುವ ಗೋಡೆಯನ್ನು ಕೊರೆದು ಯಾರೋ ಕಳ್ಳರು ಜುವೆಲ್ಲರಿಯ ಒಳಗೆ ಒಳಪ್ರವೇಶಿಸಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ತನ್ನ ಜುವೆಲ್ಲರಿಗೆ ಬಂದು ಬಾಗಿಲು ತೆರೆದು ಒಳಪ್ರವೇಶಿಸಿ ನೋಡಲಾಗಿ ಯಾರೋ ಕಳ್ಳರು ಸದ್ರಿ ಸೆಲೂನ್ ನ ಗೋಡೆಯನ್ನು ಡ್ರಿಲ್ ಮೆಶಿನ್ ಉಪಯೋಗಿಸಿ ಸುಮಾರು 2*1 ಅಡಿ ಎತ್ತರ-ಅಗಲದಷ್ಟು ಕೊರೆದು ಆ ಮೂಲಕ ಒಳಪ್ರವೇಶಿಸಿ ಸದ್ರಿ ಜುವೆಲ್ಲರಿಯ ಒಳಗೆ ಇರುವ ಲಾಕರನ್ನು ವೆಲ್ಡಿಂಗ್ ಮೆಶಿನ್ ನಿಂದ ಸುಮಾರು ಒಂದು ಕೈ ಹೋಗುವಷ್ಟು ತೂತು ಕೊರೆದು ಸದ್ರಿ ಲಾಕರಿನಲ್ಲಿದ್ದ ಸುಮಾರು 365 ಗ್ರಾಂ ತೂಕದ ಅಂದಾಜು ಮೌಲ್ಯ ರೂ. 8,94,250 ಬೆಲೆ ಬಾಳುವ ವಿವಿಧ ನಮೂನೆಯ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನಾಭರಣಗಳ ನಿಖರವಾದ ಮಾಹಿತಿ ಇಲ್ಲದೇ ಇದ್ದು, ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸಿ ನಿಖರವಾದ ವಿವರವನ್ನು ಮುಂದಕ್ಕೆ ನೀಡುವುದಾಗಿ ತಿಳಿಸಿದ್ದು, ಸದ್ರಿ ಜುವೆಲ್ಲರಿ ಅಂಗಡಿಯಲ್ಲಿ ಅಳವಡಿಸಿದ್ದ ಸಿ.ಸಿ. ಕೆಮರಾ ಯೂನಿಟ್ ಬಾಕ್ಸನ್ನು ನಾಶಪಡಿಸಿರುತ್ತಾರೆ. ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ. 9,02,250/- ಆಗಬಹುದು.
5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀಮತಿ ನಸೀಬಾ ಎಂಬವರನ್ನು ಒಂದನೆ ಆರೋಪಿ ಎಸ್.ಇರ್ಫಾನ್ ಎಂಬವರು ದಿನಾಂಕ. 1-8-2003 ರಂದು ಮದುವೆಯಾಗಿದ್ದು, ಒಂದು ತಿಂಗಳ ತನಕ ಆರೋಪಿಯು ಫಿರ್ಯಾದಿಯನ್ನು ಅನೋನ್ಯತೆಯಲ್ಲಿ ನೋಡಿದ್ದು, ಆದರೆ ನಂತರದ ದಿನಗಳಲ್ಲಿ ವಿನಾಃ ಕಾರಣ ಫಿರ್ಯಾದಿದಾರರಿಗೆ ಬೈದು, ಹೊಡೆದು ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದುದಲ್ಲದೆ. ದಿನಾಂಕ. 15-11-2014 ರಂದು ರಾತ್ರಿ ಫಿರ್ಯಾದಿದಾರರು ತನ್ನ ಮಕ್ಕಳೊಂದಿಗೆ ಕೋಣೆಯಲ್ಲಿ ಮಲಗಿದ್ದು, ರಾತ್ರಿ 2-00 ಗಂಟೆಯ ಸುಮಾರಿಗೆ ಕಿಟಿಕಿಯ ಬಾಗಿಲನ್ನು ಯಾರೋ ತೆಗೆದು ಫಿರ್ಯಾದಿದಾರರ ಕಾಲನ್ನು ಎಳೆದಾಗ ಅವರಿಗೆ ಎಚ್ಚರವಾಗಿ ನೋಡಿದಾಗ ಹೊರಗಡೆ ಕಬೀರ್ ಮತ್ತು ಜಬ್ಬರ್ @ ಬೊಡ್ಡ ಜಬ್ಬಾರ್ ಎಂಬವರು ಇದ್ದು ಕಬೀರನು ಜಬ್ಬಾರನಿಗೆ ನೀನು ಏನು ಮಾಡುತ್ತಿದ್ದು ಎಂದು ಬೈಯ್ದಾಗ ಜಬ್ಬಾರ್ ಅಲ್ಲಿಂದ ಹೊರಟು ಹೋದ ಬಳಿಕ ಕಬೀರನು ಫಿರ್ಯಾದಿದಾರರನ್ನು ಮನೆಯ ಹಾಲ್ಗೆ ಎಳೆದುಕೊಂಡು ಬಂದು ಫಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ಹೊಟ್ಟೆಗೆ ತುಳಿದು ದೂಡಿ ಹಾಕಿರುತ್ತಾರೆ. ಮರುದಿನ ದಿನಾಂಕ 16-11-2014 ರಂದು ಫಿರ್ಯಾದಿದಾರರನ್ನು ಅವರ ಮಕ್ಕಳ ಸಮೇತ ಅವರ ಮಾವ ಇಬ್ರಾಹಿಂ ರವರು ತಾಯಿ ಮನೆಗೆ ಒತ್ತಾಯದಲ್ಲಿ ಕರೆದುಕೊಂಡು ಬಂದು ಬಿಟ್ಟು ಹೋದ ನಂತರ ವಾಪಾಸು ಕರೆದುಕೊಂಡು ಹೋಗದೇ ಇದ್ದು, ನಂತರ ಫಿರ್ಯಾದಿದಾರರು ಅವರ ಗಂಡನ ಮನೆಗೆ ಪೋನ್ ಮಾಡಿ ಗಂಡನ ಮನೆಗೆ ಕರೆದುಕೊಂಡು ಹೋಗುವ ಬಗ್ಗೆ ತಿಳಿಸಿದಾಗ ಫಿರ್ಯಾದಿದಾರರನ್ನು ಗಂಡನ ಮನೆಗೆ ಬರಬಾರದಾಗಿಯೂ, ಬಂದರೆ ಜೀವತ ಸಹಿತ ಕೊಲ್ಲದೆ ಬಿಡುವುದಿಲ್ಲವಾಗಿ ಮತ್ತು ಫಿರ್ಯಾದಿದಾರರ ಅಣ್ಣ ಹನೀಫ್ನಿಗೆ ಕೂಡಾ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲದೆ ಫಿರ್ಯಾದಿದಾರರ ಗಂಡ ವಿದೇಶದಿಂದ ಊರಿಗೆ ಬಂದ ನಂತರವೂ ಫಿರ್ಯಾದಿದಾರರನ್ನು ಕರೆದುಕೊಂಡು ಹೋಗಲು ಬಂದಿರುವುದಿಲ್ಲ ಮತ್ತು ಫಿರ್ಯಾದಿದಾರರ ಖರ್ಚಿಗೆ ಹಣ ಕೊಟ್ಟಿರುವುದಿಲ್ಲ. ಅಲ್ಲದೆ ಫಿರ್ಯಾದಿದಾರರ ಗಂಡನ ತಂಗಿಗೆ ಹೊಸ ಮನೆ ಕಟ್ಟಿದ ಸಮಯದಲ್ಲಿ ಫಿರ್ಯಾದಿದಾರರ ತವರು ಮನೆಯವರು ಮದುವೆಯ ಸಮಯದಲ್ಲಿ ಉಡುಗೊರೆಯಾಗಿ ನೀಡಿದ ಸುಮಾರು 50 ಪವನ್ ಚಿನ್ನಾಭರಣಗಳನ್ನು ತೆಗೆದು ಖರ್ಚು ಮಾಡಿರುತ್ತಾರೆ. ಫಿರ್ಯಾದಿದಾರರಿಗೆ ಅವರ ಗಂಡ ಇರ್ಫಾನ್, ಮಾವ ಇಬ್ರಾಹಿಂ, ಅತ್ತೆ ಶ್ರೀಮತಿ. ಅಜರಾ, ಮತ್ತು ಕಬೀರ್ ಹಾಗೂ ಜಬ್ಬಾರ್ @ ಬೊಡ್ಡ ಜಬ್ಬಾರ್ ರವರು ಫಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಒಡ್ಡಿರುತ್ತಾರೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 22/11/2014 ರಂದು ಬೆಳಿಗ್ಗೆ 11:30 ಗಂ0ಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಜಯಕರ ರವರ ತಂದೆಯವರಾದ 80 ವರ್ಷ ಪ್ರಾಯದ ಸುಂದರ ಭಂಡಾರಿ ಎಂಬವರು ತನ್ನ ಅಕ್ಕನ ಮನೆಯಾದ ಬಂಟ್ವಾಳ ತಾಲ್ಲೂಕಿನ ಬಜ ಎಂಬಲ್ಲಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಅಕ್ಕನ ಮನೆಗೆ ಹೋಗದೇ ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿರುವುದಾಗಿದೆ. ಕಾಣೆಯಾದ ಸುಂದರ ಭಂಡಾರಿ ರವವರ ಚಹರೆ ಗುರುತುಗಳು : 1. ಧರಿಸಿದ ಬಟ್ಟೆ ಬರೆಗಳು : ತಿಳಿ ಹಸಿರು ಬಣ್ಣದ ಅಂಗಿ 2. ಮೈಮಣ್ಣ : ಎಣ್ಣೆ ಕಪ್ಪು 3. ಎತ್ತರ : 5 ಅಡಿ 4. ಶರೀರ : ಸಪೂರ ಶರೀರ 5. ತಲೆಗೂದಲು : ಬಿಳಿ 6. ಮಾತನಾಡುವ ಭಾಷೆ : ತುಳು
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23.11.2014 ರಂದು ಸಂಜೆ 6.30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಆರ್ಚಿಬಾಲ್ಡ್ ಆಸ್ಟಿನ್ ಮಿಸ್ಖಿತ್ ರವರು ಮತ್ತು ಅವರ ತಾಯಿ ಮನೆಯಲ್ಲಿರುವ ಸಮಯ ಪಿರ್ಯಾದಿದಾರರ ನೆರೆಮನೆಯ ಸಚ್ಚಿದಾನಂದ ಶೆಣೈ ಮತ್ತು ಅವರ ಮಗ ಸುಧೀಂದ್ರ ಶೆಣೈ ಎಂಬವರು ಪಿರ್ಯಾದಿದಾರರ ಮನೆಯ ಬಳಿ ಬಂದು ಪಿರ್ಯಾದಿದಾರರನ್ನು ಮನೆಯಿಂದ ಹೊರಗೆ ಕರೆದು ನೀನು ನಮ್ಮ ಮೇಲೆ ಪೊಲೀಸರಿಗೆ ದೂರು ನೀಡುತ್ತಿಯಾ ಎಂದು ಕೇಳಿ ಸಚ್ಚಿದಾನಂದ ಶೆಣೈ ರವರು ಮರದ ಸೋಂಟೆಯಿಂದ ನನ್ನ ಬಲಕೈ ಹಾಗೂ ಬೆನ್ನಿಗೆ ಬಡಿದು ಅವರ ಸುಧೀಂದ್ರ ಶೆಣೈ ರವರು ಕೂಡಾ ಪಿರ್ಯಾದಿದಾರರ ಎರಡೂ ಕಾಲುಗಳಿಗೆ ಸೋಂಟೆಯಿಂದ ಬಡಿದು ಬಳಿಕ ಆರೋಪಿಗಳಿಬ್ಬರು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನೀನು ಬಾರಿ ಪೊಲೀಸರಿಗೆ ದೂರು ಕೊಡುತ್ತಿ ಇನ್ನೂ ಮೇಲೆ ನೀನು ಪೊಲೀಸರಿಗೆ ದೂರು ನೀಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಬೆದರಿಕೆ ಹಾಕಿರುವುದಲ್ಲದೆ ಆರೋಪಿಗಳು ಪಿರ್ಯಾದಿದಾರರಿಗೆ ಸೋಂಟೆಯಿಂದ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕೈ ಹಾಗೂ ಎರಡೂ ಕಾಲುಗಳ ಮಣಿಗಂಟಿನ ಬಳಿ ಮತ್ತು ಮೈ ಕೈಗಳಿಗೆ ಗುದ್ದಿದ ಹಾಗೂ ತರಚಿದ ರೀತಿಯ ಗಾಯಗಳಾಗಿರುತ್ತದೆ.
No comments:
Post a Comment