ದೈನಂದಿನ ಅಪರಾದ ವರದಿ.
ದಿನಾಂಕ 11.11.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10/11/2014 ರಂದು 00:25 ಗಂಟೆಗೆ KA-09-MG-9999 ನೇ ವಾಹನದ ಅದರ ಚಾಲಕ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕುಲಶೇಖರ ಶಾಖೆಯ ಮೇಸ್ಕಾಂ ಕಚೇರಿಯ ಎದುರು ಮೆಸ್ಕಾಂಗೆ ಸಂಭಂದಿಸಿದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿ ಪರಾರಿಯಾಗಿರುವುದಾಗಿದೆ.
2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸುಧೀರ್ ರವರ ಮೇಲ್ವಿಚಾರಣೆಯಲ್ಲಿರುವ ಮಾನ್ಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ಮೂಡಬಿದ್ರೆ ಪೊಲೀಸ್ ಠಾಣಾ ಸರಹದ್ದಿಗೊಳಪಟ್ಟ ಮಾರ್ಪಾಡಿ ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲಿ ಆದಿತ್ಯ ಹರ್ಹತ್ ರೆಸಿಡೆನ್ಸಿ ಎಂಬ ಹೆಸರಿನಲ್ಲಿ ನಡೆಯುವ ಕಟ್ಟಡ ಕಾಮಗಾರಿಯ ಸ್ಥಳದ ಶೆಡ್ಡನ ಒಳಗೆ ಇಟ್ಟಿದ್ದ ಸುಮಾರು 24000/ ರೂಪಾಯಿ ಬೆಲೆಬಾಳುವ ಸುಮಾರು 4 ಅಡಿ ಉದ್ದದ 8 ಎಂ ಎಂ ನ ಕಬ್ಬಿಣದ ರಾಡ್ ಗಳನ್ನು ದಿನಾಂಕ:21-10-2014 ರ ಸಂಜೆ 06:00 ಗಂಟೆಯಿಂದ ದಿನಾಂಕ:09-11-2014 ರ 09:30 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಶೆಡ್ಡಿನ ಬಾಗಿಲಿನ ಬೀಗವನ್ನು ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿಜಯ ರವರು ಮೇಲ್ವಿಚಾರಣೆ ಕೆಲಸ ಮಾಡುತ್ತಿರುವ ಮಾನ್ಯ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ಮೂಡಬಿದ್ರೆ ಪೊಲೀಸ್ ಠಾಣಾ ಸರಹದ್ದಿಗೊಳಪಟ್ಟ ಮಾರ್ಪಾಡಿ ಗ್ರಾಮದ ನಾಗರಕಟ್ಟೆ ಎಂಬಲ್ಲಿ ರುಕ್ಮಿಣಿ ವಾಸುದೇವ್ ರೆಸಿಡೆನ್ಸಿ ಹೆಸರಿನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಶೆಡ್ಡಿನಲ್ಲಿ ಶೇಖರಿಸಿದ್ದ ಸುಮಾರು 15000/ ಬೆಲೆಬಾಳುವ 8 ಎಂ ಎಂ ನ 4 ಅಡಿ ಉದ್ದಗಳಿರುವ ಸುಮಾರು 275 ರಿಂದ 300 ಕೆಜಿಯಷ್ಟು ತೂಕದ ಕಬ್ಬಿಣದ ರಾಡುಗಳನ್ನು ದಿನಾಂಕ:21-10-2014 ರ ಬೆಳಿಗ್ಗೆ ಸುಮಾರು 10:00 ರಿಂದ ದಿನಾಂಕ:09-11-2014 ರ ಬೆಳಿಗ್ಗೆ 10:00 ರ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಶೆಡ್ಡಿನ ಬಾಗಿಲಿನ ಬೀಗವನ್ನು ಮುರಿದು ಕಳವುಮಾಡಿಕೊಂಡು ಹೋಗಿರುತ್ತಾರೆ.
4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-11-2014 ರಂದು 13-30 ಗಂಟೆ ಸಮಯಕ್ಕೆ ಫಿರ್ಯಾದುದಾರರಾದ ಶ್ರೀಮತಿ ಫ್ಲೋರೇನ್ಸ್ ಮೆಂಡಸ್ ರವರು ಮಂಗಳೂರು ನಗರದ ಅತ್ತಾವರದಲ್ಲಿರುವ ತನ್ನ ಬಾಬ್ತು SATCOM CABLE ಗೆ ಬಾಗಿಲಿಗೆ ಬೀಗ ಹಾಕಿ ಊಟಕ್ಕೆ ಹೋಗಿದ್ದ ಸಮಯದಲ್ಲಿ ಪ್ರಶಾಂತ್ ಮತ್ತು ಇತರ 3 ಜನರು ಸೇರಿ ಬಲತ್ಕಾರದಿಂದ ಬೀಗವನ್ನು ತೆಗೆದು ಅದರ ಒಳ ಪ್ರವೇಶಿಸಿ 2 ಟ್ರಾನ್ಸ್ ಮಿಟರ್, ಬ್ಯಾಟರಿ ಮತ್ತು ಅದರ ಸಂಬಂದ ವಸ್ತುಗಳಿಗೆ ಮತ್ತು V4 ಮೀಡಿಯಾದ ಸಿಗ್ನಲ್ ಗೆ ಹಾನಿ ಮಾಡಿರುವುದಲ್ಲದೇ ಕೆಲವು ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ, ತನ್ಮೂಲಕ ಸುಮಾರು 1200 ಗ್ರಾಹಕರಿಗೆ ತೊಂದರೆ ಉಂಟು ಮಾಡಿರುತ್ತಾರೆ.
5.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀಮತಿ ಸಾಲಿನಿ ಪ್ರಶಾಂತ್ ಸುವರ್ಣ ರವರು ಮಂಗಳೂರು ನಗರದ ಅತ್ತಾವರ ಬಿ.ವಿ ರಸ್ತೆಯಲ್ಲಿ ಸ್ಯಾಟ್ ವನ್ ಎಂಬ ಕೇಬಲ್ ನೆಟ್ ವರ್ಕ್ ನಡೆಸಿಕೊಂಡು ಬರುತ್ತಿದ್ದು, ದಿನಾಂಕ 09-11-2014 ರಂದು ಫಿರ್ಯಾದುದಾರರು ಮನೆಯಲ್ಲಿದ್ದಾಗ ಫಿರ್ಯಾದುದಾರರ ಕೆಲಸಗಾರರಾದ ಸುನೀಲ್ ಎಂಬವರು ಕರೆ ಮಾಡಿ ಫಿರ್ಯಾದುದಾರರ ಕಛೇರಿಗೆ ಮೆಂಡಿಸ್ ಮತ್ತು ಇತರರು ಬಂದಿರುವ ಬಗ್ಗೆ ತಿಳಿಸಿರುತ್ತಾರೆ. ಕೂಡಲೇ ಫಿರ್ಯಾದಿದಾರರು ತನ್ನ ಕಛೇರಿಗೆ ಬೆಳಿಗ್ಗೆ 9-10 ಗಂಟೆಗೆ ಬಂದಾಗ ಕಛೇರಿಯ ಹೊರಗಡೆ ಫಿರ್ಯಾದುದಾರರ ಪರಿಚಯದ ಸ್ಟೀಫನ್ ಮೆಂಡಿಸ್ ಅವರ ಪತ್ನಿ ಹಾಗೂ ಇತರ ಇಬ್ಬರು ಫಿರ್ಯಾದುದಾರರ ಕಛೇರಿಗೆ ಅಕ್ರಮ ಪ್ರವೇಶ ಮಾಡಿದ್ದು, ಫಿರ್ಯಾದುದಾರರನ್ನು ಉದ್ದೇಶಿಸಿ ಆರೋಪಿ ಸ್ಟೀಫನ್ ಮೆಂಡಿಸ್ ರವರು "ಇಂದಿನಿಂದ ಈ ಆಫೀಸ್ ನಿಮ್ಮದಲ್ಲ, ಇವತ್ತಿನಿಂದ ಇದನ್ನು ನಾವು ನಡೆಸಿಕೊಂಡು ಬರುತ್ತೇವೆ, ನೀವುಗಳು ಇಲ್ಲಿಂದ ಮರ್ಯಾದೆಯಿಂದ ಜಾಗ ಖಾಲಿ ಮಾಡಿ" ಎಂದು ಅವಾಚ್ಯ ಶಬ್ದಗಳಿಂದ ಬೈದು ಆರೋಪಿ 1 ನೇ ಸ್ಟೀಫನ್ ಮೆಂಡಿಸ್ ರವರೊಂದಿಗೆ ಇದ್ದ ಇಬ್ಬರು ಆಫೀಸ್ ನಲ್ಲಿ ಇದ್ದ ಕನೆಕ್ಷನ್ ಕೇಬಲನ್ನು ಕಟ್ ಮಾಡಿದ್ದು, ಅಲ್ಲದೇ ಆರೋಪಿ 1 ನೇ ಸ್ಟೀಫನ್ ಮೆಂಡಿಸ್ ರವರೊಂದಿಗೆ ಇದ್ದ ಇತರ ಇಬ್ಬರು ಕಛೇರಿಯಲ್ಲಿದ್ದ NODA, COMPUTER, T.V, & CPU ವನ್ನು ಎಳೆದು ಬಿಸಾಡಿ ಹುಡಿ ಮಾಡಿರುತ್ಥಾರೆ. ನಂತರ ಆರೋಪಿ 1 ನೇ ಸ್ಟೀಫನ್ ಮೆಂಡಿಸ್ ರವರು ಮತ್ತು ಅವರ ಹೆಂಡತಿ ಫಿರ್ಯಾದುದಾರರಲ್ಲಿ "ಇಲ್ಲಿಂದ ಮರ್ಯಾದೆಗೆ ಹೊರಗೆ ಹೋಗಬೇಕು, ಈ ಜಾಗ ಕೋರ್ಟಿನಲ್ಲಿ ನನ್ನ ಹೆಸರಿಗೆ ಆಗಿದೆ" ಎಂಬುದಾಗಿ ಹೇಳಿ "ಹೋಗದಿದ್ದರೆ ನಿಮ್ಮನ್ನು ಬಿಡುವುದಿಲ್ಲ" ಎಂದು ಜೀವ ಬೆದರಿಕೆ ನೀಡಿದ್ದು, ಆಗ ಫಿರ್ಯಾದುದಾರರ ಗಂಡ ಕೂಡಾ ಸ್ಥಳಕ್ಕೆ ಬಂದಿರುತ್ತಾರೆ. ಈ ಘಟನೆಯಿಂದ ಫಿರ್ಯಾದುದಾರರಿಗೆ ಒಟ್ಟು 60,000/- ರೂ ನಷ್ಟ ಉಂಟಾಗಿರುತ್ತದೆ. ಫಿರ್ಯಾದುದಾರರು ತನ್ನ ಕೇಬಲ್ ವ್ಯವಹಾರದಿಂದ ನಷ್ಟ ಉಂಟಾಗುತ್ತದೆ ಎಂದು ಕೇಬಲ್ ಕನೆಕ್ಷನನ್ನು ಏಶಿಯಾ ನೆಟ್ ಗೆ ಲಿಂಕ್ ಮಾಡಿಕೊಂಡಿದ್ದು, ಇದೇ ವಿಚಾರದಲ್ಲಿ ಆರೋಪಿ 1 ನೇ ಸ್ಟೀಫನ್ ಮೆಂಡಿಸ್ ಯವರು ಮತ್ತು ಪಿರ್ಯಾದಿದಾರರ ಮದ್ಯೆ ಉಂಟಾದ ಭಿನ್ನಾಭಿಪ್ರಾಯಗಳೇ ಈ ಘಟನೆಗೆ ಕಾರಣವಾಗಿರುತ್ತದೆ.
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08-11-2014 ರಂದು 20.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶ್ರೀನಿವಾಸ ಗೌಡ ರವರು ಮಂಗಳೂರು ತಾಲೂಕಿನ, ತೆಂಕ ಎಡಪದವು ಗ್ರಾಮದ, ಪಿಲಿಚಂಡಿ ದೈವಸ್ಥಾನದ ಬಳಿ ತನ್ನ ಮನೆಯಾದ ಕುಂದೋಡಿ ಎಂಬಲ್ಲಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಫಿರ್ಯಾದಿದಾರರ ಹೆಂಡತಿಯನ ಅಕ್ಕನ ಮಗ ಗಿರೀಶ್ ಎಂಬವರು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂಧ ಬೈದು ಕುತ್ತಿಗೆಯನ್ನು ಹಿಡಿದು ಅಮುಕಿದ್ದಲ್ಲದೇ, ಎಡಕೈಯನ್ನು ಹಿಡಿದು ತಿರುಗಿಸಿದ ಪರಿಣಾಮ ಫಿರ್ಯಾದಿದಾರರ ಕೈ ನೋವಾಗಿರುವುದಾಗಿದೆ. ಫಿರ್ಯಾದಿದಾರರು ಕಾನೂನಿನ ತಿಳುವಳಿಕೆ ಇಲ್ಲದೇ ಮನೆಯಲ್ಲಿಯೇ ಇದ್ದು, ದಿನಾಂಕ: 10-11-2014 ರಂದು ಫಿರ್ಯಾದಿದಾರರಿಗೆ ನೋವು ಅಧಿಕವಾಗಿರುವುದರಿಂದ ತನ್ನ ಧನಿ ಐತಪ್ಪ ಎಂಬವರೊಂದಿಗೆ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-11-2014 ರಂದು 13-30 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಪ್ರದೀಪ್ ಕುಮಾರ್ ರವರು ಮಂಗಳೂರು ತಾಲೂಕು, ತಲಪಾಡಿ ಗ್ರಾಮದ ಸಿಟಿ ಬಸ್ಸು ನಿಲ್ದಾಣದ ಬಳಿ ತೊಕ್ಕೊಟ್ಟು ಕಡೆಗೆ ಹೋಗುವರೇ ಬಸ್ಸಿಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದಾಗ, ಮಂಜೇಶ್ವರ ಕಡೆಯಿಂದ ಕಲ್ಲೇಶಿ ಎಂಬವರು KA 19 X 8594 ನೇ ಮೋಟಾರು ಸೈಕಲ್ನ್ನು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು, ಹಿಂದಿನಿಂದ ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಪಿರ್ಯಾದಿಯ ಬಲ ಕಾಲಿನ ಕೋಲು ಕಾಲಿಗೆ ತೀವ್ರ ತರಹದ ಗಾಯವಾಗಿದ್ದು, ತೊಕ್ಕೊಟ್ಟು ಸಹಾರಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-11-2014 ರಂದು ವಿಶ್ವನಾಥ ಗಟ್ಟಿ ಎಂಬವರು ಸವಾರಿ ಮಾಡುತ್ತಿದ್ದ KA 19 L 9759 ಆಕ್ಟಿವ್ ಹೊಂಡಾ ದ್ವಿಚಕ್ರವಾಹನದಲ್ಲಿ ಪಿರ್ಯಾದುದಾರರಾದ ಶ್ರೀ ಗ್ರಾಸನ್ ಮೊಂತೆರೋ ರವರು ಸಹಸವಾರನಾಗಿ ಕುಳಿತುಕೊಂಡು ಕಲ್ಲಾಪುವಿನಿಂದ ಕುತ್ತಾರ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ, ಮುನ್ನೂರು ಗ್ರಾಮದ ರಾಣಿಪುರ ಚರ್ಚ್ ಬಳಿ 17-30 ಗಂಟೆ ಸಮಯಕ್ಕೆ ತಲುಪುತ್ತಿದ್ದಂತೆ ಮೈದಾನ ಕಡೆಯಿಂದ ಆಶ್ವಿನ್ ಎಂಬವರು KA 19 M 785 ನೇ ನಂಬ್ರದ ಓಮಿನಿ ಕಾರನ್ನು ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದನು. ಇದರಿಂದ ರಸ್ತೆಗೆ ಬಿದ್ದ ಪಿರ್ಯಾದುದಾರರ ಬಲಕೋಲು ಕಾಲಿಗೆ ತೀವ್ರತರಹದ ಗಾಯವಾಗಿರುತ್ತದೆ. ವಿಶ್ವನಾಥರವರ ಬಲಕಾಲಿಗೆ ಗುದ್ದಿದ ಗಾಯವಾಗಿರುತ್ತದೆ. ಅಲ್ಲಿ ಸೇರಿದ ಜನರು ಪಿರ್ಯಾದುದಾರರನ್ನು ಮತ್ತು ವಿಶ್ವನಾಥರವರನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ತಂದಾಗ ವೈದ್ಯಾಧಿಕಾರಿಯವರು ಪಿರ್ಯಾದುದಾರರನ್ನು ಒಳರೋಗಿಯಾಗಿ ದಾಖಲಿಸಿಕೊಂಡು, ವಿಶ್ವನಾಥರವರು ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ.
No comments:
Post a Comment