Monday, November 3, 2014

Daily Crime Reports 03-11-2014

ದೈನಂದಿನ ಅಪರಾದ ವರದಿ.

ದಿನಾಂಕ 03.11.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

0

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

1.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಭರತೇಶ್ ರವರ ದೊಡ್ಡಮ್ಮನ ಮಗ ಹರೀಶ್ @ ಹರಿಪ್ರಸಾದ್ ಪ್ರಾಯ 42 ವರ್ಷ ಎಂಬವರು ಕುಳಾಯಿ ಗ್ರಾಮದ ಪ್ರೇಮ ನಗರ ಎಂಬಲ್ಲಿನ ಅವರ ಮನೆಯಿಂದ ದಿನಾಂಕ 31-10-2014 ರಂದು ಬೆಳಿಗ್ಗೆ 07-00 ಗಂಟೆಗೆ ಎಂದಿನಂತೆ ಅವರು ಕೆಲಸ ಮಾಡುತ್ತಿದ್ದ ಬೈಕಂಪಾಡಿ ಯು ಬಿ ಕಂಪನಿಗೆ ಹೋದವರು ವರೆಗೂ ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದು ಬಗ್ಗೆ ಸಂಬಂಧಿಕರ ಮನೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದ್ದು ಪತ್ತೆಯಾಗದೇ ಇದ್ದು, ಕಾಣೆಯಾದ ಹರೀಶ್ @ ಹರಿಪ್ರಸಾದ್ ರವರ ಚಹರೆ ವಿವರ: ಎತ್ತರ ಸುಮಾರು 5 ಅಡಿ 7 ಇಂಚು, ಬಣ್ಣ: ಎಣ್ಣೆ ಕಪ್ಪು ಮೈಬಣ್ಣ, ಭಾಷೆ: ತುಳು, ಕನ್ನಡ, ಬಟ್ಟೆ: ಬಿಳಿಗೆರೆಯ ಶರ್ಟ್ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ.

 

2.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು, ಉಳ್ಳಾಲ ಗ್ರಾಮದ, ಕೋಟೆಪುರ 'ಸೀ; ರೋಡ್ನಲ್ಲಿರುವ ಉಳ್ಳಾಲ್ಪಿಶ್ಮಿಲ್‌ & ಆಯಿಲ್ಕಂಪೆನಿಯಲ್ಲಿ ಪಿರ್ಯಾದುದಾರರಾದ ಅಹಮ್ಮದ್ ರವರು ಕೆಲಸ ಮಾಡುತ್ತಿದ್ದು, ದಿನಾಂಕ 02-11-2014 ರಂದು 00-30 ಗಂಟೆಗೆ ಪಿರ್ಯಾದುದಾರರು ಇತರ ಕೆಲಸಗಾರೊಂದಿಗೆ ಕೆಲಸ ಮಾಡುತ್ತಿದ್ದಾಗ ಪಿರ್ಯಾದಿಯ ಪರಿಚಯದ ಕೋಟೆಪುರ ನಿವಾಸಿ ಕಬೀರ್‌ @ ಚದ್ದಿ ಎಂಬಾತನು ಕೈಯಲ್ಲಿ ತಲ್ವಾರ್ಹಿಡಿದುಕೊಂಡು ಪಿಶ್ಮಿಲ್ಒಳಗಡೆ ನುಗ್ಗಿದವನನ್ನು ಪಿರ್ಯಾದಿಯು ಹೊರಗೆ ಹೋಗುವಂತೆ ತಿಳಿಸಿದಾಗ, ಅವಾಚ್ಯ ಶಬ್ದಗಳಿಂದ "ನನಗೆ ತಿಳಿಯದೆ ಫಿಶ್ಮಿಲ್ನಲ್ಲಿ ಯಾರು ಕೆಲಸ ಮಾಡಬಾರದು, ನನಗೆ ತಿಳಿಯದೆ ಇಲ್ಲಿ ಕೆಲಸ ಮಾಡುವವರನ್ನು ನಾನು ಕೊಲ್ಲದೆ ಬಿಡುವುದಿಲ್ಲ" ಎಂದು ಬ್ಯಾರಿ ಭಾಷೆಯಲ್ಲಿ ಹೇಳುತ್ತಾ ಪಿರ್ಯಾದುದಾರರನ್ನು ಕೊಲ್ಲುವ ಉದ್ದೇಶದಿಂದ ತಲೆಗೆ ತಲ್ವಾರ್ನ್ನು ಬೀಸಿದನು. ಪಿರ್ಯಾದುದಾರರು ಬೊಬ್ಬೆ ಹಾಕುತ್ತಾ ಕೆಳಗೆ ಬಗ್ಗಿದಾಗ ತಲ್ವಾರ್ಏಟು ತಪ್ಪಿ ಹೋಯಿತು. ನಂತರ ಆರೋಪಿಯ ಅಬೂಬಕ್ಕರ್ಎಂಬವರಿಗೂ ತಲ್ವಾರ್ಬೀಸುತ್ತಾ ಹೋದನು. ಆರೋಪಿತ ಕಬೀರ್‌ @ ಚದ್ದಿ ಪಿರ್ಯಾದಿಯನ್ನು ಮತ್ತು ಇತರ ಕೆಲಸಗಾರರನ್ನು ಉದ್ದೇಶಿಸಿ "ನನಗೆ ಗೊತ್ತಿಲ್ಲದೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡಬಾರದು ಎಂದು ಹೇಳಿದ್ದೇನೆ, ಇನ್ನು ಮುಂದಕ್ಕೆ ನೀವು ಕೆಲಸ ಮಾಡುವುದನ್ನು ನೋಡಿದರೆ ನಿಮ್ಮನ್ನು ಕಡಿದು ತುಂಡು ಮಾಡುತ್ತೇನೆ" ಎಂದು ಜೀವ ಬೆದರಿಕೆ ಹಾಕಿ ತಲ್ವಾರ್ನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾರೆ. ಆರೋಪಿತ ಮೊದಲು ಕೂಡಾ ಇದೇ ರೀತಿಯಲ್ಲಿ ನಡೆದುಕೊಂಡಿರುತ್ತಾನೆ.

No comments:

Post a Comment