ದೈನಂದಿನ ಅಪರಾದ ವರದಿ.
ದಿನಾಂಕ 18.11.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 1 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 2 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15-11-2014 ರಂದು ಪಿರ್ಯಾದಿದಾರರಾದ ಕು. ದೀಪ್ತಿ ರವರು ತನ್ನ ಮನೆಯವರೊಂದಿಗೆ ಮಂಗಳೂರುನಿಂದ ಪಣಂಬೂರು ಬೀಚ್ ಗೆ ಹೋಗಲು ರೂಟ್ ನಂ 45 ಸಿ ಬರೆದಿರುವ ಸಿಟಿ ಬಸ್ ನಂಬ್ರ ಕೆಎ.25.ಡಿ.2799 ನೇದರಲ್ಲಿ ಮಧ್ಯಾಹ್ನ 14.00 ಗಂಟೆಗೆ ಫಣಂಬೂರು ತಲುಪಿದಾಗ ಪಿರ್ಯಾದಿದಾರರು ಬಸ್ ನಿಂದ ಇಳಿಯುವರೇ ಮುಂದಿನ ಬಾಗಿಲಿನ ಮೆಟ್ಟಿಲಿನಲ್ಲಿ ನಿಂತಿದ್ದಾಗ ಬಸ್ ಕಂಡಕ್ಟರ್ ಶಶಿ ಎನ್ನುವವರು ಗಮನಿಸದೇ ಬಸ್ ಹೊರಡಲು ಸೂಚನೆ ನೀಡಿದಾಗ ಬಸ್ ಚಾಲಕ ರಿಜ್ವಾನ್ ಎಂಬವರು ಬಸ್ಸನ್ನು ಒಮ್ಮಲೇ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ತನ್ನ ನಿಯಂತ್ರಣ ತಪ್ಪಿ ಬಸ್ಸಿನಿಂದ ಹೊರಕ್ಕೆ ರಸ್ತೆಗೆ ಬಿದ್ದು ಮುಖಕ್ಕೆ ,ದವಡೆಗೆ ಮತ್ತು ಎಡಗಾಲಿಗೆ ಗಂಭೀರ ರೀತಿಯ ಗಾಯವಾಗಿದ್ದು , ಚಿಕಿತ್ಸೆಗಾಗಿ ಎಜೆ ಆಸ್ಪತ್ರೆಗೆ ದಾಖಲಿಸಿದ್ದು ಬಸ್ಸನ್ನು ಚಾಲಕನು ಸ್ಧಳದಿಂದ ಕೊಂಡುಹೋಗಿದ್ದು ಆಪಘಾತದ ಬಗ್ಗೆ ಯಾವುದೇ ಮಾಹಿತಿ ನೀಡದೇ ಹೋಗಿರುತ್ತಾರೆ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 22-10-2014 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ನಿತಿನ್ ಚೆರಿಯನ್ ಮ್ಯಾಥ್ಯುವ್ ರವರು ತನ್ನ ಮೋಟಾರು ಸೈಕಲ್ ನಂಬ್ರ ಕೆ.ಎಲ್-66-867 ನೇದನ್ನು ಮಂಗಳೂರು ನಗರದ ಕಾಪಿಕಾಡ್ ಕಡೆಯಿಂದ ಚಲಾಯಿಸುತ್ತಾ, ಸಮಯ ರಾತ್ರಿ 7:30 ಗಂಟೆಗೆ ಪ್ಲಾಮಾ ರೆಸಿಡೆನ್ಸಿ ಎದುರುಗಡೆ ತಲುಪಿದಾಗ, ಅವರ ಎದುರುಗಡೆಯಿಂದ ಅಂದರೆ ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಬಿಜೈ ಕಾಪಿಕಾಡ್ ಕಡೆಗೆ ಏಕಮುಖ ರಸ್ತೆಯಲ್ಲಿ ಮೋಟಾರು ಸೈಕಲ್ ನಂಬ್ರ ಕೆ.ಎ-19-ಆರ್-7000 ನೇದನ್ನು ಅದರ ಸವಾರ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಬಲಕೈಯ ಕಿರು ಬೆರಳಿಗೆ ಮೂಳೆ ಮುರಿತದ ಗಾಯ ಹಾಗೂ ಬಲಕಾಲಿಗೆ ತರಚಿದ ಗಾಯ ಉಂಟಾದವರನ್ನು ಚಿಕಿತ್ಸೆಯ ಬಗ್ಗೆ ನಗರದ ಮಂಗಳಾ ಫೌಂಡೇಶನ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. .ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯ ಅಪಘಾತ ಉಂಟು ಮಾಡಿದ ಮೋಟಾರು ಸೈಕಲ್‌ನ ಸವಾರನ ಸ್ನೇಹಿತರಾದ ಪವನ್‌ರಾಜ್ ಎಂಬವರು ಆಸ್ಪತ್ರೆಗೆ ಬಂದು ಚಿಕಿತ್ಸೆಯ ವೆಚ್ಚವನ್ನು ಭರಿಸುವುದಾಗಿ ಒಪ್ಪಿದ್ದು, ಆದರೆ ಈಗ ನೀಡಲು ನಿರಾಕರಿಸಿರುವುದರಿಂದ ತಡವಾಗಿ ದೂರು ನೀಡಿದ್ದಾಗಿದೆ.
3.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.11.2014 ರಂದು ಸಂಜೆ 5-30 ಗಂಟೆಗೆ ಫಿರ್ಯಾದುದಾರರಾದ ಶ್ರೀಮತಿ ಮರಿಯಾ ಸೆರಾವೋ ರವರು ಅವರ ತಾಯಿ ಮನೆ ಕದ್ರಿಗೆ ಹೋಗಿದ್ದು ದಿನಾಂಕ 09-11-2014 ರಂದು ಸಂಜೆ 05-30 ಗಂಟೆಗೆ ತನ್ನ ಬಾಬ್ತು ಮಂಗಳೂರು ಅಶೋಕನಗರ ಶೇಡಿಗುರಿ ನಿಯರ್ ವಾಯ್.ಎಂ.ಕೆ. ಅಕಾಸಿಯಾ ಎಂಬ ಮನೆಗೆ ಬಂದು ಎದುರು ಬಾಗಿಲಿನ ಬೀಗ ತೆರೆಯಲು ನೋಡಿದಾಗ ಎದುರಿನ ಬಾಗಿಲಿಗೆ ಯಾರೋ ಹಾನಿಗೊಳಿಸಿ ಬೀಗ ಮುರಿಯಲು ಪ್ರಯತ್ನಿಸಿರುವುದು ಕಂಡು ಬಂತು. ಬೀಗ ತೆರೆದು ಒಳಗೆ ಹೋಗಿ ಮನೆಯ ಹಿಂಬದಿಗೆ ಹೋದಾಗ ವರ್ಕ್ ಏರಿಯದಲ್ಲಿರುವ ಕಬ್ಬಿಣದ ಗ್ರಿಲ್ಸ್ ನ್ನು ಯಾರೋ ಕಳ್ಳರು ಕಟ್ ಮಾಡಿ ಒಳಗೆ ಬಂದು ಅಲ್ಲೆ ವರ್ಕ್ ಏರಿಯದಲ್ಲಿದ್ದ ಕಬ್ಬಿಣದ ಬ್ಯೂರೋದ ಬೀಗ ಮುರಿದು ಅದನ್ನು ತೆರೆದಿರುವುದು ಕಂಡುಬಂದಿರುತ್ತದೆ. ಆದರೆ ಅದರೊಳಗಿರುವ ಯಾವುದೆಲ್ಲಾ ವಸ್ತುಗಳು ಕಳವಾಗಿರುತ್ತದೆ ಎಂಬುವುದು ಆಗ ಫಿರ್ಯಾದುದಾರರ ಗಮನಕ್ಕೆ ಬಂದಿರುವುದಿಲ್ಲ. ದಿನಾಂಕ 17-11-2014 ರಂದು ಮನೆಯ ಮೇಲೆ ಶೀಟ್ ಹಾಕುವಾಗ ಕೆಲಸಗಾರರು ಡ್ರಿಲಿಂಗ್ ಮೇಷಿನ್ ಬೇಕೆಂದು ಕೇಳಿದಾಗ ಫಿರ್ಯಾದುದಾರರು ವರ್ಕ್ ಏರಿಯದಲ್ಲಿರುವ ಕಪಾಟು ತೆರೆದು ನೋಡಿದಾಗ ಅಲ್ಲಿದ್ದ ಬ್ಲ್ಯಾಕ್ & ಡೆಕರ್ ಡ್ರಿಲಿಂಗ್ ಮೆಷಿನ್ ಮತ್ತು ಅದಕ್ಕೆ ಸಂಬಂಧಿಸಿದ ಬಿಟ್‌ಗಳಿರುವ ಸಣ್ಣ ಕಪ್ಪು ಬಣ್ಣದ ಬ್ಯಾಗನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇದರ ಅಂದಾಜು ಮೌಲ್ಯ ರೂ. 7,000/- ಆಗಬಹುದು.
4.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-11-2014 ರಂದು ಸಂಜೆ 05:00 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಅನೀಶ್ ರವರು ಅವರ ಪೈಟಿಂಗ್ ಕೆಲಸ ಮುಗಿಸಿಕೊಂಡು ಮಂಗಳೂರು ನಗರದ ಉರ್ವಸ್ಟೋರ್ ನಲ್ಲಿರುವ ಕವಿತಾ ಬಾರ್ ನಲ್ಲಿ ಮಧ್ಯ ಸೇವಿಸಿ ರಾತ್ರಿ 07:00 ಗಂಟೆಗೆ ಹೊರಗಡೆ ಬರುವ ಸಮಯ ಮಾರ್ಗದಲ್ಲಿ ಗುರುತು ಪರಿಚಯವಿರುವ ರಂಜಿತ್ ಮತ್ತು ಸಚ್ಚು ಎಂಬವರು ಅವರ ಹತ್ತಿರ ಬಂದು ಅವರಿಬ್ಬರನ್ನು ಪಿರ್ಯಾಧಿದಾರರ ಬೈಕಿನಲ್ಲಿ ಮನೆಗೆ ಬಿಡುವಂತೆ ಕೇಳಿಕೊಂಡಂತೆ ಪಿರ್ಯಾಧಿದಾರರು ಅವರಿಬ್ಬರನ್ನು ತನ್ನ ಬೈಕಿನಲ್ಲಿ ರಂಜಿತನ ಕೋಡಿಕಲ್ ವ್ಯಾಯಾಮ ಶಾಲೆಯ ಬಳಿ ಇರುವ ಮನೆಗೆ ಬಿಟ್ಟು ಬರುವ ಸಮಯ ಅವರಿಗೆ ಸಿಗರೇಟ್ ಸೇದುವುದು ಬೇಡ, ಅದು ಆರೋಗ್ಯಕ್ಕೆ ಹಾನಿಕರ ಎಂದು ಪಿರ್ಯಾಧಿದಾರರು ಬುದ್ದಿ ಮಾತು ಹೇಳಿದಾಗ ಕೋಪಗೊಂಡ ರಂಜಿತನು ಅವನ ಮನೆಯ ಒಳಗಡೆ ಹೋಗಿ ತಲವಾರನ್ನು ಹಿಡಿದುಕೊಂಡು ಬಂದು ಪಿರ್ಯಾಧಿದಾರರ ಎಡಬದಿಯ ರಟ್ಟೆಗೆ, ಎಡಬದಿಯ ಕೈಯ ತಟ್ಟಿಗೆ, ಎಡಬದಿಯ ಕಾಲಿನ ಮಣಿಗಂಟಿಗೆ ಹಾಗೂ ಬಲಬದಿಯ ಕಿಬ್ಬೊಟ್ಟೆಗೆ ಕೊಲ್ಲುವ ಉದ್ದೇಶದಿಂದ ತಲವಾರಿನಿಂದ ಹೊಡೆದು ರಕ್ತ ಬರುವ ಗಾಯ ಉಂಟು ಮಾಡಿದ್ದು ಆಗ ಸಮಯ 09:00 ಗಂಟೆ ಆಗಿರಬಹುದು.
5.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17/11/2014 ರಂಧು ಫಿರ್ಯಾದುದಾರರಾದ ಶ್ರೀ ಶಾಹೀನ್ ಅಹಮ್ಮದ್ ಜಿಯಾಜ್ ರವರು ಗುರುಪುರದಿಂದ ಮಂಗಳೂರಿಗೆ ಬರುವರೇ KA-19-C-9498 ನೇ ನಂಬ್ರದ ಬಸ್ಸಿನಲ್ಲಿ ಪ್ರಯಾಣಿಸುತ್ತ ಬೆಳಗ್ಗೆ ಸುಮಾರು 8:00 ಗಂಟೆಗೆ ಬಸ್ಸು ಮಲ್ಲಿಕಟ್ಟೆ ಬಸ್ಸು ನಿಲ್ದಾಣಕ್ಕೆ ತಲುಪಿದಾಗ ಕದ್ರಿ ಶಿವಭಾಗ ಕಡೆಯಿಂಧ KA-19-B-2737 ನೇ ನಂಬ್ರದ ಬಸ್ಸನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ಪ್ರಯಾಣಿಸುತ್ತಿದ್ದ ಬಸ್ಸಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರು ಬಸ್ಸಿನೊಳಗೆ ಮುಗ್ಗರಿಸಿ ಬಿದ್ದು ತಲೆಯ ಹಿಂಬದಿಗೆ ರಕ್ತ ಗಾಯ ಮತ್ತು ಎಡಕಾಳಿನ ಮೋಣಗಂಟಿಗೆ, ಎಡಕೈ ಭುಜಕ್ಕೆ ಕುತ್ತಿಗೆಯ ಬಳಿ ಗುದ್ದಿದ ಗಾಯವಾಗಿದ್ದು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೂ ಗಾಯವಾಗಿರುತ್ತದೆ. ಈ ಅಪಘಾತದ ವೆಳೆ KA-19-C-9498 ನೆ ಬಸ್ಸು ಮುಂದಕ್ಕೆ ಚಲಿಸಿ KA-19-C-4441 ನೆ ದಕ್ಕೆ ಡಿಕ್ಕಿ ಪಡಿಸಿ ಜಖಂ ಗೊಂಡಿರುವುದಾಗಿದೆ.
6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 15/11/2014 ರಂದು 15:00 ಗಂಟೆಗೆ ಮಂಗಳೂರು ನಗರದ ಅತ್ತಾವರ ಬಾಭುಗುಡ್ಡೆ ಗ್ರಂಥಾಲಯದ ಬಳಿ KA-13-3989 ನೇ ನಂಬ್ರದ ಟಿಪ್ಪರ ಲಾರಿಯನ್ನು ಅದರ ಚಾಲಕ ಆರೋಪಿಯು ನಿರ್ಲಕ್ಷತನದಿಂದ ಹಿಮ್ಮುಖವಾಗಿ ತಲುಪಿ ಹಿಂದಿನಿಂದ ಫಿರ್ಯಾದುದಾರರಾದ ಮಮ್ತಾಜ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA-19-W-708 ನೇ ನಂಬ್ರದ ಸ್ಕೂಟರ್ ಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರರ ಸ್ಕೂಟರ್ ಜಖಂಗೊಂಡಿರುತ್ತದೆ.
7.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17.11.2014ರಂದು ಪಿರ್ಯಾಧಿದಾರರಾದ ಶ್ರೀ ಮೋಹನ್ ಹೆಗ್ಡೆ ಪ್ರಾಯ 63 ವರ್ಷ ಎಂಬವರು ಮಧ್ಯಾಹ್ನ 12.30 ಗಂಟೆಗೆ ಊಟ ಮಾಡಲೇಂದು ಏಳಿಂಜೆ ಪಟ್ಟೆ ಕ್ರಾಸ್ ಬಳಿಯ ಹೊಟೇಲ್ ಗೆ ಹೋಗುತ್ತಿರುವಾಗ ತನ್ನ ಜಾಗದಲ್ಲಿ 4 ಜನರು ಹುಲ್ಲು ಕಿತ್ತುತ್ತಿದ್ದುದನ್ನು ಕೇಳುತ್ತಿದ್ದಾಗ ಅದಕ್ಕೆ ಅವರು ಜಲಜ ಹೆಂಗಸು ಹುಲ್ಲು ತೆಗೆಯಲು ಹೇಳಿದ್ದು, ಎಂಬುದಾಗಿ ತಿಳಿಸಿದಾಗ ಸದ್ರಿ ಹೆಂಗಸು ಅಲ್ಲಿಗೆ ಬಂದು ಪ್ರಸಾದನಿಗೆ ಹುಲ್ಲಿಗೆ ಹಣ ನೀಡಿದ್ದಾಗಿ ತಿಳಿಸಿದರು. ಅದಕ್ಕೆ ಪಿರ್ಯಾಧಿದಾರರು ಇದು ನನ್ನ ಜಾಗ ಎಂದು ನಿಮಗೆ ಗೊತ್ತಿಲ್ಲವಾ ಎಂದು ಹೇಳಿ ಹುಲ್ಲು ತೆಗೆಯಬಾರದಾಗಿ ಹೇಳಿ ಊಟ ಮಾಡಲು ಹೋಗಿ ಊಟ ಮಾಡುತ್ತಿರುವ ಸಮಯ ಮಧ್ಯಾಹ್ನ 1.20 ಗಂಟೆಗೆ ಪ್ರಸಾದ ಎಂಬವರು ಹೊಟೇಲ್ ಬಳಿಗೆ ಬಂದು ಕರೆದಾಗ ಪಿರ್ಯಾಧಿದಾರರು ಹೊರಗೆ ಬರುವಷ್ಟರಲ್ಲಿ ಪ್ರಸಾದನು ಯಾವುದೋ ಒಂದು ವಸ್ತುವಿನಿಂದ ಪಿರ್ಯಾಧಿದಾರರ ತಲೆಯ ಹಿಂಬದಿಗೆ ಹೊಡೆದು ರಕ್ತ ಗಾಯಗೊಳಿಸಿದ್ದಲ್ಲದೆ ಕಾಲಿನಿಂದ ತುಳಿದಿರುವುದಾಗಿದೆ.
8.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಆನಂದ ಶೆಟ್ಟಿ ಅಡ್ಯಾರ್ ರವರು ಕರ್ನಾಟಕ ಶ್ರೀರಾಮ ಸೇನೆಯ ವಿಭಾಗ ಅಧ್ಯಕ್ಷರಾಗಿದ್ದು, ದಿನಾಂಕ 15-12-2014ರ ಸೋಮವಾರ ಬೆಳಿಗ್ಗೆ 10-00 ರಿಂದ ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಆಗಮಿಸಿ ಕೊಟ್ಟ ಮಾತು ಇಟ್ಟ ಹೆಜ್ಜೆ ಎಂಬ ಘೋಷಣೆಯಡಿಯಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಾಗಬೇಕು, ಗೋವನ್ನು ರಾಷ್ಟೀಯ ಪ್ರಾಣಿ ಎಂದು ಘೋಷಿಸಬೇಕು, ಅಕ್ರಮ ಗೋ ಸಾಗಾಣಿಕೆಯನ್ನು ತಡೆ ಹಿಡಿಯಬೇಕು ಎಂಬ ಚಿಂತನೆಯಿಂದ ನನ್ನನ್ನು ಉಳಿಸಿ ನಾಮದ್ಯೇಯದಡಿಯಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳ ಸನ್ನಿದಾನಕ್ಕೆ ನೀಡಲು ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ ಶ್ರೀರಾಮಸೇನೆಯ ಹಾಗೂ ಸಾರ್ವಜನಿಕರು ಸದ್ರಿ ಕಾರ್ಯಕ್ರಮಕ್ಕೆ ಪೂರಕವಾಗಿ ಇಂಟರ್ ನೆಟ್ ಮೂಲಕ ಯಾವುದೇ ವ್ಯಕ್ತಿ ಅಥವಾ ಜಾತಿಗೆ ವಿರುದ್ದ ಹೇಳಿಕೆಗಳನ್ನು ಹಾಕದೇ ನನ್ನನ್ನು ಉಳಿಸಿ ಎಂಬ ಆಂದೋಲನದ ಬಗ್ಗೆ ಪ್ರಚಾರ ಮಾಡುತ್ತಿದ್ದು, ಆದರೆ ಆರೋಪಿಗಳಾದ ಇಕ್ಬಾಲ್ ಬಾಯ್, ಜುನಾಲಿದ್ ಶೇಕ್, ನಾಸೀರ್ ನಾಝಿ, ರೊಲೆಕ್ಸ್ ಜೊನಮನ್, ಸರ್ಫರಾಜ್, ರೆಹಮಾನ್ ಮಿತ್ತೂರು, ಶಮೀರ್ ಅಹಮ್ಮದ್, ಅಶ್ರಫ್ ಅಶು, ಅಉಳ್ಯ ಅಮಯ್, ಹ್ಯಾರಿಸ್ ಮೊಹಮ್ಮದ್, ಅಬ್ದುಲ್ ಲತೀಫ್ ಎಂಬವರುಗಳು ದಿನಾಂಕ 13-11-2014 ರಾತ್ರಿ 11-00 ಗಂಟೆ ಸಮಯಕ್ಕೆ ಕರಾವಳಿ ಫ್ರೆಂಡ್ಸ್ ಕ್ಲಬ್ ಎಂಬ ಖಾತೆಯಿಂದ ನನ್ನನ್ನು ಉಳಿಸಿ ಎಂಬ ಕಾರ್ಯಕ್ರಮಕ್ಕೆ ಧಕ್ಕೆ ತರುವ ಉದ್ದೇಶದಿಂದ ಜಾತಿಗೆ ವಿರುದ್ದವಾದ ಅವಹೇಳನಕಾರಿ ಹೇಳಿಕೆಗಳನ್ನು ಇಂಟರ್ ನೆಟ್ ಮೂಲಕ ಫೇಸ್ ಬುಕ್,ಲೈಕ್ ಪೇಜ್ ನಲ್ಲಿ ಕಮೆಂಟ್ ಮಾಡಿ ಗಲಭೆ ಸೃಷ್ಠಿಸಲು ಪ್ರೋತ್ಸಾಹಿಸುತ್ತಿರುವುದಾಗಿದೆ.
9.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸೂರಜ್ ಸಾಲ್ಯಾನ್ ಕೆ. ರವರು ಸುರತ್ಕಲ್ ಗ್ರಾಮದ ಮುಕ್ಕ ಶ್ರೀನಿವಾಸ ಇನ್ಸಿಟಿಟ್ಯೂಟ್ ಆಪ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ನ ಕೋಆರ್ಡಿನೇಟರ್ ಆಗಿ ಕೆಲಸ ಮಾಡಿಕೊಂಡಿದ್ದು ಸದ್ರಿ ಕ್ಯಾಂಪಸ್ ನ ಕಟ್ಟಡ ಕಾಮಗಾರಿ ಬಗ್ಗೆ ದಿನಾಂಕ 14-07-2010 ರಂದು 215 ಹೆಚ್. ಡಿ.ಪಿ.ಇ ಪೈಪುಗಳನ್ನು ತರಿಸಿ ಕ್ಯಾಂಪಸ್ ನ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಟೀನ್ ನ ಮುಂಭಾಗದ ತೆರೆದ ಸ್ಥಳದಲ್ಲಿ ಇಟ್ಟಿದ್ದು ನಂತರ ಅದರಲ್ಲಿ 12 ಹೆಚ್ ಡಿ ಪಿ ಇ ಪೈಪುಗಳನ್ನು ಕಾಮಗಾರಿಗೆ ಬಳಸಿ ಉಳಿದವುಗಳು ಅಲ್ಲೆ ಇದ್ದು ದಿನಾಂಕ 15-11-2014 ರಂದು ಬೆಳಿಗ್ಗೆ ನೋಡಿದಾಗ 14 ಹೆಚ್ ಡಿ ಪಿ ಇ ಪೈಪುಗಳು ಇಲ್ಲದೇ ಇದ್ದು ಯಾರೋ ಕಳ್ಳರು ದಿನಾಂಕ 14-07-2014 ರಿಂದ ದಿನಾಂಕ 15-11-2014 ರ ಮದ್ಯೆ ಸದ್ರಿ ಪೈಪುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳವಾದ 14 ಹೆಚ್ ಡಿ ಪಿ ಇ ಪೈಪುಗಳ ಅಂದಾಜು ಮೌಲ್ಯ ಸುಮಾರು 45000/- ರೂ ಆಗಬಹುದು.
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಡಾ. ಕರೇನ್ ಮಾರಿಯಾ ಡಿ'ಸೋಜಾ ರವರು ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜ್‌ನಲ್ಲಿ ಎಲುಬು ಮತ್ತು ಕೀಲು ವಿಭಾಗದಲ್ಲಿ ಅಸೋಸಿಯೇಟ್ ಫ್ರೋಫೆಸರ್ ಆಗಿದ್ದು ದಿನಾಂಕ 17-11-2014 ರಂದು ಆರ್ಥೋ ಓಪಿಡಿಯಲ್ಲಿ ರೋಗಿಗಳ ತಪಾಸಣೆಗೈಯುತ್ತಿದ್ದು ಮಧ್ಯಾಹ್ನ ಸುಮಾರು 3-25 ಗಂಟೆಗೆ ಕೈತೊಳೆಯುವರೇ ಹೋದವರು ವಾಪಾಸು 3-30 ಗಂಟೆಗೆ ಬಂದಾಗ ಓಪಿಡಿಯಲ್ಲಿ ಫಿರ್ಯಾದಿದಾರರು ಇಟ್ಟಿದ್ದ ಹ್ಯಾಂಡ್‌ಬ್ಯಾಗ್ ಕಳುವಾಗಿದ್ದು ಅದರಲ್ಲಿ ನೋಕಿಯಾ ಮತ್ತು ಸ್ಯಾಮಸಂಗ್ ಮೊಬೈಲ್‌ಗಳು, 2000 ರೂ ನಗದು ಹಣ ಹಾಗೂ ಅವರ ಡ್ರೈವಿಂಗ್ ಲೈಸನ್ಸ್, ವೋಟರ್ ಐಡಿ ಕಾರ್ಡ್, ಡಾಕ್ಟರ್ ಐಡಿ ಕಾರ್ಡ, ಹೆಚ್ಡಿಎಫ್ಸಿ ಮತ್ತು ಸಿಂಡಿಕೇಟ್ ಬ್ಯಾಂಕ್‌ನ ಎರಡು ಡೆಬಿಟ್ ಕಾರ್ಡಗಳು, ಮನೆಯ ಕೀಗಳು ಇದ್ದು ಅದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇದರ ಅಂದಾಜು ಮೌಲ್ಯ 32,000/- ರೂ ಆಗಬಹುದು.
11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17.11.2014 ರಂದು ಬೆಳಿಗ್ಗೆ 9.30 ಗಂಟೆಗೆ ಪಿರ್ಯಾದಿದಾರರ ಪರಿಚಯದ ನಾರಾಯಣ ಪೂಜಾರಿ ಎಂಬವರು ರಸ್ತೆಯನ್ನು ಅಡ್ಡ ದಾಟುವರೇ ಪಡೀಲ್ ಕೊಡಕ್ಕಲ್ ಅರ್ನಾಪು ಜನರಲ್ ಸ್ಟೋರ್ ಬಳಿ ನಿಂತಿದ್ದ ಸಮಯ ಮಂಗಳೂರು ಕಡೆಯಿಂದ KA-19-F-2177 ನೇ KSRTC ಬಸ್ಸನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುವರೇ ನಿಂತಿದ್ದ ನಾರಾಯಣ ಪೂಜಾರಿ ರವರಿಗೆ ಡಿಕ್ಕಿಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರೆ ತಲೆಯ ಮುಂಭಾಗ ಹಿಂಭಾಗ ರಕ್ತ ಬರುವ ಗಾಯವಾಗಿರುವುದಲ್ಲದೆ ಎಡಭುಜದಲ್ಲಿ ರಕ್ತ ಸುರಿದ ಗಾಯವಾಗಿರುತ್ತದೆ.
No comments:
Post a Comment