Thursday, November 6, 2014

Daily Crime Reports 06-11-2014

ದೈನಂದಿನ ಅಪರಾದ ವರದಿ.

ದಿನಾಂಕ 06.11.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-11-2014 ರಂದು ಮಧ್ಯಾಹ್ನ 01:30 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಶೇಖರ್ ರವರು ಹೊನ್ನಕಟ್ಟೆಯಿಂದ ಬೈಕಂಪಾಡಿ ಕಡೆಗೆ ತನ್ನ ಬಾಬ್ತು ಕೆಎ-19-ಡಿ-3449ನೇ ನಂಬ್ರದ ಆಟೋ ರಿಕ್ಷಾದಲ್ಲಿ ಬಾಡಿಗೆದಾರರೊಬ್ಬರನ್ನು ಬಿಟ್ಟು ಬರುವರೇ ರಾ.ಹೆ-66ರಲ್ಲಿ ಕುಳಾಯಿ ಬಳಿ ತಲುಪಿದಾಗ ರಸ್ತೆ ಬದಿಯಲ್ಲಿ ಮಧು ಎಂಬುದಾಗಿ ನಂತರ ಹೆಸರು ತಿಳಿದ ವ್ಯಕ್ತಿಯೊಬ್ಬರು ಯಾವುದೋ ಅಪರಿಚಿತ ಲಾರಿಯ ಅಡಿಯಲ್ಲಿ ಕುಳಿತಿದ್ದವರು, ಅದರ ಚಾಲಕ ಅವರನ್ನು ಗಮನಿಸದೆ ನಿರ್ಲಕ್ಷತನದ ಹಾಗು ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿದ ಪರಿಣಾಮ ಲಾರಿಯಡಿಯಲ್ಲಿ ಕುಳಿತಿದ್ದ ಮಧು ಎಂಬವರು  ತನ್ನ ಎರಡೂ ಕಾಲು ಹಾಗು ತೊಡೆಗಳಿಗೆ ಗಂಭೀರ ಸ್ವರೂಪದ ರಕ್ತ ಗಾಯವಾಗಿ ರಸ್ತೆಯಲ್ಲಿ ಹೊರಳಾಡುತ್ತಿದ್ದನ್ನು ನೋಡಿ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 3:30 ಗಂಟೆಗೆ ಮೃತ ಪಟ್ಟಿರುತ್ತಾರೆ ಹಾಗು ಅಪಘಾತ ಪಡಿಸಿದ ಲಾರಿ ಚಾಲಕ ತನ್ನ ಲಾರಿಯನ್ನು ನಿಲ್ಲಿಸದೆ ಪೋಲಿಸರಿಗೆ ವರ್ತಮಾನ ನೀಡದೆ ಸ್ಥಳದಿಂದ ಪರಾರಿಯಾಗಿರುತ್ತಾನೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 05.11.2014 ರಂದು ಪಿರ್ಯಾದಿದಾರರಾದ ಶ್ರೀ ರಾಜಗೋಪಾಲ್ ಹೆಗ್ಡೆ ರವರು  ತನ್ನ ಮನೆಯಿಂದ  ಪಿ ವಿ ಎಸ್ ಬಳಿ ಇರುವ  ತನ್ನ ಕಚೇರಿಗೆ ಹೋಗುವ ಬಗ್ಗೆ ನಗರದ ಸಾರ್ವಜನಿಕ ರಸ್ತೆಯಾದ ಕುದ್ರೋಳಿ ಗೋಕರ್ಣನಾಥೇಶ್ವರ  ಕಾಲೇಜು ರಸ್ತೆಯಿಂದ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್ ರಸ್ತೆಯ ಕಡೆಗೆ ರಸ್ತೆಯ ತೀರಾ ಬಲಬದಿಯಲ್ಲಿ ನಡೆದುಕೊಂಡು ಹೋಗುತ್ತಾ  ಸಮಯ ಬೆಳಿಗ್ಗೆ 08.15 ಗಂಟೆಗೆ ಮಣ್ಣಗುಡ್ಡ ದೇವಾಡಿಗ ಸಮಾಜದ ಬಳಿ ತಲುಪುತ್ತಿದ್ದಂತೆ ಆರೋಪಿ ಕಾರು ಚಾಲಕ ನಟರಾಜ್ ಎಂಬವರು ಕಾರು ನಂಬ್ರ ಕೆಎ 19 ಜೆಡ್ 8659ನೇಯದನ್ನು ಪಿರ್ಯಾದಿದಾರರ ಎದುರುಗಡೆಯಿಂದ ಅಂದರೆ ಮಣ್ಣಗುಡ್ಡ ಗುರ್ಜಿ ಕಡೆಯಿಂದ  ಗೋಕರ್ಣನಾಥೇಶ್ವರ ಕಾಲೇಜ್ ರಸ್ತೆ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ರಸ್ತೆಯ ತೀರಾ ಎಡ ಬದಿಯಲ್ಲಿ  ಚಲಾಯಿಸಿ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಎಡ ಕಾಲಿನ ಪಾದ ಹಾಗೂ ಗಂಟಿಗೆ ಮೂಳೆ ಮುರಿತದ ಗಾಯ, ತಲೆಯ ಬಲಭಾಗಕ್ಕೆ, ಬಲ ಕೈಗೆ ಹಾಗೂ ಬಲಕಾಲಿಗೆ ತರಚಿದ ಗಾಯವಾದವರನ್ನು  ನಗರದ ಉಳ್ಳಾಲ ನರ್ಸಿಂಗ್ ಹೋಂಗೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ  ನಗರದ ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿದೆ.

 

3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ವಿಸಾ ರಿಸೋರ್ಸಸ್ ಪಿಟಿಇ ಲಿಮಿಟೆಡ್ ಸಿಂಗಾಪುರ ಇವರಿಂದ ಕಲ್ಯಾಣಿ ಸ್ಟೀಲ್ ಲಿಮಿಟೆಡ್ ಪುಣೆ ಇವರು ಚೈನಾದಿಂದ ಖರೀದಿಸಿದ ಸುಮಾರು 43.249 ಮೆಟ್ರಿಕ್ ಟನ್ ಮೆಟ್ಲಾಜಿಕಲ್ ಕೊಕ್ ಮತ್ತು 10.600 (0 ದಿಂದ 10 ಎಮ್ ಎಮ್) ಮೆಟ್ರಿಕ್ ಟನ್ ಲ್ಯಾಮ್ ಕೊಕ್ ದಿನಾಂಕ 14-05-14 ರಂದು ಚೀನಾದಿಂದ ನವ ಮಂಗಳೂರು ಬಂದರಿಗೆ ಹಡಗಿನ ಮೂಲಕ ಬಂದಿದ್ದು ಅಲ್ಲಿ ಹಡಗಿನಿಂದ ಅನ್ ಲೋಡ್ ಮಾಡಿ ಬಂದರನ ಒಳಗಡೆ  ಕಲ್ಯಾಣಿ ಸ್ಟೀಲ್ ಗೆ ಸಂಬಂಧಪಟ್ಟ ಯಾರ್ಡ್ ನಲ್ಲಿ ಶೇಖರಿಸಿಟ್ಟಿದ್ದು, ನಂತರ ದಿನಾಂಕ 23-05-14 ರಿಂದ 27-05-14 ರವರೆಗೆ ಮೆಟ್ಲಾಜಿಕಲ್ ಕೊಕ್ ಮತ್ತು ಲ್ಯಾಮ್ ಕೊಕ್ ನ್ನು ಕಲ್ಯಾಣಿ ಸ್ಟೀಲ್ ಕಂಪನಿಗೆ ಸಂಬಂಧಿಸಿದ ಪ್ಲ್ಯಾಂಟ್ ಗಿಣಿಗೇರಿ ಕೊಪ್ಪಳ ಜಿಲ್ಲೆಗೆ ಡೆಲ್ಟಾ ಮತ್ತು ಎಮ್ ಟಿ ಸಿ ಹಾಗೂ ರೈಲ್ವೇ ಮುಖಾಂತರ ಸಾಗಾಟ ಮಾಡಲು ಗುತ್ತಿಗೆ ನೀಡಿದ್ದು ಇಲ್ಲಿಂದ ಸಾಗಾಟ ಮಾಡಿದ ಮೆಟ್ಲಾಜಿಕಲ್ ಕೊಕ್ ನಲ್ಲಿ ಸುಮಾರು 1550 ಮೆಟ್ರಿಕ್ ಟನ್ ಮೆಟ್ಲಾಜಿಕಲ್ ಕೊಕ್, ಮತ್ತು ಲ್ಯಾಮ್ ಕೊಕ್  ನಲ್ಲಿ  ಸುಮಾರು 755 ಮೆಟ್ರಿಕ್ ಟನ್ ಲ್ಯಾಮ್ ಕೊಕ್ ಕಡಿಮೆ ಕಂಡುಬಂದಿದ್ದು  ಒಟ್ಟು  3,12,00,426 /- ರೂಪಾಯಿ ಅಂದಾಜು ಮೌಲ್ಯದ ಸ್ವತ್ತು ಸಷ್ಟ ಉಂಟಾಗಿರುತ್ತದೆ.

 

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03.11.2014 ರಂದು ಸಂಜೆ ಸುಮಾರು 5:15 ಗಂಟೆಗೆ ಬಂಟ್ವಾಳ ತಾಲೂಕು, ಕೈರಂಗಳ ಗ್ರಾಮದ ಡಿ.ಜಿ.ಕಟ್ಟೆ ಪಂಚಾಯತ್ಕಚೇರಿಯ ಬಳಿ ಓಮ್ನಿ ಕಾರ್ನಂಬ್ರ ಕೆಎ-04ಪಿ-0937 ನೇಯದನ್ನು ಅದರ ಚಾಲಕ ಆರೋಪಿ ಉಮೇಶ್ಎಂಬಾತನು ವಿದ್ಯಾನಗರ ಕಡೆಯಿಂದ ಧರ್ಮಕ್ಕಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಣ್ಣು ರಸ್ತೆಯಲ್ಲಿ ನಿಂತಿದ್ದ ಫಿರ್ಯಾದಿದಾರರಾದ ಶ್ರೀ ಕೆ. ಅಬ್ದುಲ್ ಹಮೀದ್ ರವರ ಮಗಳು ಆಯಿಷಾ ಶಬಾನಾ (04) ನೇಯವಳಿಗೆ ಢಿಕ್ಕಿ ಹೊಡೆದ ಪರಿಣಾಮ ಆಯಿಷಾ ಶಬಾನಳು ಮಣ್ಣು ರಸ್ತೆಗೆ ಬಿದ್ದು ಆಕೆಯ ಬೆನ್ನಿಗೆ ಚರ್ಮ ಸುಲಿದ ಗಾಯ, ಎಡಕೈ ಭುಜದಿಂದ ಕೋಲು ಕೈ ತನಕ ತರಚಿದ ಗಾಯ ಹಾಗೂ ಲತೆಗೆ ಗುದ್ದಿದ ನೋವು ಉಂಟಾಗಿದ್ದು, ಗಾಯಾಳು ಆಯಿಷಾ ಶಬಾನಳನ್ನು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲು ಮಾಡಿರುವುದಾಗಿದೆ.

 

5.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಪಾವೂರು ಗ್ರಾಮದ ಇನೋಳಿಪದವು ಸರ್ವೆ ನಂಬ್ರ 136 ರಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿ ಚೀಲಗಳಲ್ಲಿ ತುಂಬಿಸಿ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಫಿರ್ಯಾದಿದಾರರಾದ ಶ್ರೀ ಕೆ.ಎಸ್. ನಾಗೇಂದ್ರಪ್ಪ, ಜಿಯೋಜಿಸ್ಟ್, ಮೈನ್ಸ್ & ಜಿಯೋಲಜಿ, ಮಂಗಳೂರು ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಫಿರ್ಯಾದಿದಾರರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ತೆರಳಿ ಸುಮಾರು 66,000/- ರೂ. ಮೌಲ್ಯದ ಸುಮಾರು 1400 ಚೀಲಗಳಲ್ಲಿ (50 ಕೆ.ಜಿ) ತುಂಬಿಸಿಟ್ಟಿದ್ದ ಸುಮಾರು 15 ಲೋಡ್ಮರಳನ್ನು ಮಹಜರು ಮೂಲಕ ಸ್ವಾಧೀನ ಪಡಿಸಿಕೊಂಡಿದ್ದು ವಿಚಾರಿಸಲಾಗಿ 1)ಮುಬಾರಕ್ಹಾಗೂ 2)ವಲೇರಿಯನ್ಡಿಸೋಜಾ ಎಂಬವರು ಸರಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೇ, ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಕಳ್ಳತನದಿಂದ ಸಾಗಾಟ ಮಾಡಲು ದಾಸ್ತಾನು ಇರಿಸಿದನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ದ, ಸೂಕ್ತ ಕಾನೂನು ಕ್ರಮ ಜರುಗಿಸುವ ಬಗ್ಗೆ ವರದಿಯೊಂದಿಗೆ ಠಾಣೆಗೆ ಬಂದು ಫಿರ್ಯಾದಿ ನೀಡಿರುವುದಾಗಿದೆ.

 

6.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಪಾವೂರು ಗ್ರಾಮದ ಬದ್ರಿಯಾನಗರ  ಸರ್ವೆ ನಂಬ್ರ 114 ಬೀಪಾತುಮ್ಮ ಎಂಬವರ ಜಮೀನಿನಲ್ಲಿ  ಅಕ್ರಮವಾಗಿ ಮರಳು ದಾಸ್ತಾನು ಮಾಡಿ ಚೀಲಗಳಲ್ಲಿ ತುಂಬಿಸಿ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಫಿರ್ಯಾದಿದಾರರಾದ ಶ್ರೀ ಕೆ.ಎಸ್. ನಾಗೇಂದ್ರಪ್ಪ, ಜಿಯೋಜಿಸ್ಟ್, ಮೈನ್ಸ್ & ಜಿಯೋಲಜಿ, ಮಂಗಳೂರು ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಫಿರ್ಯಾದಿದಾರರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ತೆರಳಿ ಸುಮಾರು 12,000/- ರೂ. ಮೌಲ್ಯದ ಸುಮಾರು 4 ಲೋಡ್ಮರಳನ್ನು ಮಹಜರು ಮೂಲಕ ಸ್ವಾಧೀನ ಪಡಿಸಿಕೊಂಡಿದ್ದು ವಿಚಾರಿಸಲಾಗಿ ಆರೋಪಿಗಳು ಸರಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೇ, ಯಾವುದೇ ಪರವಾನಿಗೆಯನ್ನು ಪಡೆಯದೇ ನೇತ್ರಾವತಿ ನದಿಯಿಂದ ಮರಳನ್ನು ತೆಗೆದು ಅಕ್ರಮವಾಗಿ ಕೇರಳ ರಾಜ್ಯಕ್ಕೆ ಕಳ್ಳತನದಿಂದ ಸಾಗಾಟ ಮಾಡಲು ದಾಸ್ತಾನು ಇರಿಸಿದನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ದ, ಸೂಕ್ತ ಕಾನೂನು ಕ್ರಮ ಜರುಗಿಸುವ ಬಗ್ಗೆ  ವರದಿಯೊಂದಿಗೆ ಠಾಣೆಗೆ ಬಂದು ಫಿರ್ಯಾದಿ ನೀಡಿರುವುದಾಗಿದೆ.

 

7.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ನಾಟೆಕಲ್  ಸರ್ವೆ ನಂಬ್ರ 1/1ಸಿ ಆರೋಪಿ  ಅಬ್ದುಲ್ರಹಿಮಾನ್  ಎಂಬವರ ಜಮೀನಿನಲ್ಲಿ  ಅಕ್ರಮವಾಗಿ ಮರಳು ದಾಸ್ತಾನು ಮಾಡಿ ಚೀಲಗಳಲ್ಲಿ ತುಂಬಿಸಿ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ಫಿರ್ಯಾದಿದಾರರಾದ ಶ್ರೀ ಕೆ.ಎಸ್. ನಾಗೇಂದ್ರಪ್ಪ, ಜಿಯೋಜಿಸ್ಟ್, ಮೈನ್ಸ್ & ಜಿಯೋಲಜಿ, ಮಂಗಳೂರು ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಫಿರ್ಯಾದಿದಾರರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ತೆರಳಿ ಸುಮಾರು 75,000/- ರೂ. ಮೌಲ್ಯದ ಸುಮಾರು 25 ಲೋಡ್ಮರಳನ್ನು ಮಹಜರು ಮೂಲಕ ಸ್ವಾಧೀನ ಪಡಿಸಿಕೊಂಡಿದ್ದು ವಿಚಾರಿಸಲಾಗಿ ಆರೋಪಿ ಅಬ್ದುಲ್ರಹಿಮಾನ್  ಸರಕಾರಕ್ಕೆ ಯಾವುದೇ ರಾಜಧನವನ್ನು ಪಾವತಿಸದೇ, ಯಾವುದೇ ಪರವಾನಿಗೆಯನ್ನು ಪಡೆಯದೇ ನೇತ್ರಾವತಿ ನದಿಯಿಂದ ಮರಳನ್ನು ತೆಗೆದು ಅಕ್ರಮವಾಗಿ ಕೇರಳ ರಾಜ್ಯಕ್ಕೆ ಕಳ್ಳತನದಿಂದ ಸಾಗಾಟ ಮಾಡಲು ದಾಸ್ತಾನು ಇರಿಸಿದನ್ನು ಪತ್ತೆ ಹಚ್ಚಿ ಆರೋಪಿಯ ವಿರುದ್ದ, ಸೂಕ್ತ ಕಾನೂನು ಕ್ರಮ ಜರುಗಿಸುವ ಬಗ್ಗೆ  ವರದಿಯೊಂದಿಗೆ ಠಾಣೆಗೆ ಬಂದು ಫಿರ್ಯಾದಿ ನೀಡಿರುವುದಾಗಿದೆ.

 

8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03-11-2014 ರಂದು ಮಧ್ಯಾಹ್ನ ಸಮಯ ಪಿರ್ಯಾದಿದಾರರಾದ ಶ್ರೀ ಪ್ರಶಾಂತ ಶಟ್ಟಿ ಎಂಬವರು ತನ್ನ  ಬಾಬ್ತು ಮೋಟಾರ್ ಸೈಕಲ್ ನಂ ಕೆಎ-19-ವಿ -1537 ನೇಯದರಲ್ಲಿ ಸಹ ಸವಾರ ಶ್ರೀ ಅಂಬರೀಶ್ ಶೆಟ್ಟಿ ಎಂಬವರ ಜೊತೆಯಲ್ಲಿ ಬಡಗ ಮಿಜಾರ್ ಕಡೆಯಿಂದ ಮೂಡಬಿದ್ರೆ ಕಡೆಗೆ ಸವಾರಿ ಮಾಡಿಕೊಂಡು ಪುತ್ತಿಗೆ ಗ್ರಾಮದ ರಾಹೆ  13 ವಿದ್ಯಾಗಿರಿ ಎಂಬಲ್ಲಿಯ  ನ್ಯೂಕಿರಣ್ ಗೇರುಬೀಜ ಪ್ಯಾಕ್ಟರಿಯ ಬಳಿ ಮಧ್ಯಾಹ್ನ ಸುಮಾರು 1.10 ಗಂಟೆಯ ಸಮಯಕ್ಕೆ ತಲುಪುವಾಗ ತನ್ನ  ಹಿಂದಿನಿಂದ ನೋಂದಣಿ ನಂಬ್ರ ತಿಳಿಯದ ಎಸ್ ಗೂಡ್ಸ್ ಟೆಂಪೋವನ್ನು ಅದರ ಚಾಲಕ  ಅತೀ ವೇಗ ಹಾಗೂ ಅಜಾಗೂರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಮೋಟಾರ್ ಸೈಕಲಿನ  ಹ್ಯಾಂಡಲ್ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸಹಸವಾರ ಅಂಬರೀಶ್ ಶೆಟ್ಟಿ ಎಂಬವರಿಗೆ ಸೊಂಟಕ್ಕೆ ತೀವ್ರ ರೀತಿಯ ಗಾಯವಾಗಿರುತ್ತದೆ. ಪಿರ್ಯಾಧಿದಾರರಿಗೆ ದೇಹಕ್ಕೆ ಗುದ್ದಿದ ನೋವುವಾಗಿರುತ್ತದೆ. ಅಪಘಾತ ಪಡಿಸಿದ ಏಸ್ ಟೇಂಪೋ ಚಾಲಕನು ಅಪಘಾತದ ಬಳಿಕ ವಾಹನವನ್ನು ನಿಲ್ಲಿಸದೇ ಗಾಯಳುವನ್ನು ಅಸ್ಪತ್ರಗೆ ಸಾಗಿಸುವಲ್ಲಿ ಸಹಕರಿಸದೇ ಪೋಲಿಸರಿಗೆ ಮಾಹಿತಿಯನ್ನು ನೀಡದೇ ಪರಾರಿಯಾಗಿರುವುದಾಗಿ ಅಪಘಾತ ಪಡಿಸಿದ ವಾಹನದ ನೋಂದಾಣಿ ನಂಬ್ರ ತಿಳಿದಿಲ್ಲವಾಗಿದೆ.

 

9.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಮನ್ ರವರು ಅಟೋ ರಿಕ್ಷಾ ಚಾಲಕರಾಗಿದ್ದು, ದಿನಾಂಕ 05-11-2014  ರಂದು ತನ್ನ ಬಾಬ್ತು ರಿಕ್ಷಾವನ್ನು ಮಂಗಳೂರಿನ ಸೆಂಟ್ರಲ್ರೈಲ್ವೇ ನಿಲ್ದಾಣದ ಬಳಿಯ ಪ್ರಿಪೈಡ್‌‌ ಪಾರ್ಕಿಂಗ್ನಲ್ಲಿ ಬಾಡಿಗೆ ಮಾಡುವ ಸಲುವಾಗಿ ನಿಲ್ಲಿಸಿದ್ದಾಗ ಸಮಯ  ಸಂಜೆ 5-15 ಗಂಟೆಯ ವೇಳೆಗೆ ಪಿರ್ಯಾದಿದಾರರ ಪರಿಚಯದ ಕೆಎ 19 ಸಿ 2076 ನೇ ನಂಬ್ರದ ಅಟೋ ರಿಕ್ಷಾ ಚಾಲಕ ಪ್ರದೀಪ್ಎಂಬಾತನು ಪಿರ್ಯಾದಿದಾರರ ಬಳಿಗೆ ಬಂದು ಅವರನ್ನು ತಡೆದು ನಿಲ್ಲಿಸಿ , "ದಾನೆಂಬೆ, ಭಾರಿ ಮಲ್ಲ ಜನನಾ " "ಯಾನ್ರಿಕ್ಷಾಗ್ಗ್ಯಾಸ್ಪಾಡ್ಯೆರೆ ಬನ್ನಗಾ ಏರ್ಂದ್   ಕೇನುವನಾ, ಎನ್ನ ವಿಷಯ ನಿಕ್ಕ್‌‌ ಗೊತ್ತಿಜ್ಜಿ" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಿಂದ ಪಿರ್ಯಾದಿದಾರರ ಬೆನ್ನಿಗೆ ಮತ್ತು ಮುಖಕ್ಕೆ ಹೊಡೆದು ನೋವುಂಟು ಮಾಡಿರುವುದಲ್ಲದೇ, ಅದೇ ವೇಳೆಗೆ ಪಿರ್ಯಾದಿದಾರರು "ಎಂಕ್ದಾಯೆಗ್ಹಾಕುವಾ" ಎಂಬುದಾಗಿ ಕೇಳಿದಾಗ  ಆರೋಪಿಯು "ನಿನನ್ದೀಪುಜೀ, ರಿಕ್ಷಾಡ್ಬೆನಂದಿಲೆಕ್ಕ ಮಲ್ಪರೆ ಗೊತ್ತುಂಡು" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ನೀಡಿ ಅಲ್ಲಿಂದ ಪರಾರಿಯಾಗಿರುವುದಾಗಿದೆ. ರಿಕ್ಷಾಕ್ಕೆ ಗ್ಯಾಸ್ತುಂಬುವ ವಿಚಾರದಲ್ಲಿ ಪಿರ್ಯಾದಿ ಹಾಗೂ ಆರೋಪಿತ ನಡುವೆ ಇದೇ ದಿನ ಬೆಳಿಗ್ಗೆ ಮಾತುಕತೆಯಾಗಿದ್ದು, ಇದೇ ಕಾರಣವನ್ನು ನೆಪವಾಗಿ ಇಟ್ಟುಕೊಂಡು ಹಲ್ಲೆ ನಡೆಸಿರುವುದಾಗಿದೆ.

 

10.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಜಯಚಂದ್ರ ರವರ ಮಗ ಪ್ರಸಾದ್ ಪ್ರಾಯ 16 ವರ್ಷ ಎಂಬವರು ರಾವ್ & ರಾವ್ ಸರ್ಕಲ್ ಬಳಿ ಇರುವ ಮಾತಾ ಎಜುಕೇಶನ್ ಸಂಸ್ಥೆಯಲ್ಲಿ SSLC ವಿಧ್ಯಾಭ್ಯಾಸ ಮಾಡಿಕೊಂಡಿದ್ದರು. ದಿನಾಂಕ  04-11-2014 ರಂದು ಶಾಲೆಗೆ ರಜೆ ಇದ್ದುದರಿಂದ ಪ್ರಸಾದ್ ಮಂಗಳೂರು ಬೋಳಾರ ಮಾರಿಗುಡಿ ದೇವಸ್ಥಾಣದ ಬಳಿ ಇರುವ ಲಕ್ಷ್ಮೀಯಮ್ಮ ಕಂಪೌಂಡ್ ಮನೆಯಲ್ಲಿಯೇ ಇದ್ದನು. ಫಿರ್ಯಾದುದಾರರು ಕೆಲಸಕ್ಕೆಂದು ಹೋದವರು ವಾಪಾಸು ಸಂಜೆ 4-30 ಗಂಟೆಗೆ ಮನೆಗೆ ಬಂದಾಗ ಮಗ ಪ್ರಸಾದ್ ಎಂಬಾತನು ಮನೆಯಲ್ಲಿ ಇರಲಿಲ್ಲ. ಬಗ್ಗೆ ತನ್ನ ಹೆಂಡತಿ, ನೆರೆಕೆರಯವರಲ್ಲಿ, ಸಂಬಂದಿಕರಲ್ಲಿ ಹಾಗೂ ಆತನ ಗೆಳೆಯರಲ್ಲಿ ವಿಚಾರಿಸಿ ಎಲ್ಲಾ ಕಡೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ನೀರಜ್ ಕುಮಾರ್ ಸಿಂಗ್ ರವರು ಮಂಗಳೂರಿನ ವಿಲ್ಸನ್‌‌ ಪಿರೇರಾ ರವರ ಬಾಭ್ತು ಕ್ರೇನ್‌‌ನಲ್ಲಿ ಚಾಲಕನಾಗಿ, ಪಿರ್ಯಾದಿದಾರರು ಮತ್ತು ಅವರ ಜೊತೆಯಲ್ಲಿ ರಾಜು ಎಂಬವರು ಕೂಡಾ ಕ್ರೇನ್ಚಾಲಕರಾಗಿ ದುಡಿಯುತ್ತಿದ್ದು  ಜೋಕಟ್ಟೆಯಲ್ಲಿ ವಾಸವಾಗಿರುವುದಾಗಿದೆ.  ದಿನಾಂಕ  04.11.2014 ರಂದು  ಬೆಳಿಗ್ಗೆ 11.00 ಗಂಟೆ ಸಮಯಕ್ಕೆ ಕಣ್ಣೂರಿನಲ್ಲಿರುವ  ಎಂಪಾಯರ್‌‌ ಸಂಸ್ಥೆಯ ಬಾಬ್ತು ಕ್ರೇನ್‌‌ನಲ್ಲಿ ಕೆಲಸ ಮಾಡುವರೇ ಕ್ರೇನ್‌‌ ನಂಬ್ರ: ಕೆಎ-20-ಪಿ-407 ನೇದನ್ನು ರಾಜು ಎಂಬವರು ಚಲಾಯಿಸಿಕೊಂಡು ನಂತೂರು ಮಾರ್ಗವಾಗಿ  ಪಡೀಲ್‌‌ ಕಡೆಗೆ ಹೋಗುತ್ತಾ ಮಧ್ಯಾಹ್ನ ಸುಮಾರು 12.00 ಗಂಟೆಗೆ ಮರೋಳಿ ಎಂಬಲ್ಲಿ ಇಳಿಜಾರು ರಸ್ತೆಯಲ್ಲಿ ಹೋಗುತ್ತಿದ್ದಂತೆ ಕ್ರೇನ್‌‌‌ನನ್ನು ಚಾಲಕ ರಾಜು ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಕ್ರೇನ್‌‌ ರಸ್ತೆಯ ಎಡಭಾಗದ ಧರೆಯೊಂದಕ್ಕೆ ಡಿಕ್ಕಿ ಹೊಡೆಯಿತು ಇದರಿಂದ ಪಿರ್ಯಾದಿದಾರರು ಮತ್ತು ಚಾಲಕರು  ಕ್ರೇನ್ನಿಂದ ಕೆಳಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ತಲೆಯ ಎಡಭಾಗಕ್ಕೆ ರಕ್ತಬರುವ ಗಾಯ, ಸೊಂಟದ ಹಿಂಭಾಗಕ್ಕೆ ಗುದ್ದಿದ ಗಾಯಾವಾಗಿದ್ದು ಚಾಲಕ ರಾಜು ರವರ  ಹಣೆಯ ಭಾಗಕ್ಕೆ ರಕ್ತ ಬರುವ ಗಾಯ ಉಂಟಾಗಿರುತ್ತದೆ.

 

12.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05.11.2014 ರಂದು ಪಿರ್ಯಾದುದಾರರಾದ ಶ್ರೀ ರವೀಂದ್ರ ಸಪಲ್ಯ ರವರ ಬಾವ ಚಂದ್ರಶೇಖರ ಎಂಬವರು ಅವರ ಬಾಬ್ತು KA-19-EB-9045 ನೇ ನಂಬ್ರದ ಮೋಟಾರ್ ಸೈಕಲ್ಲನ್ನು ತನ್ನ ಮನೆಯ ಕಡೆಯಿಂದ ಮಂಗಳೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಬೆಳಿಗ್ಗೆ ಸುಮಾರು 08:15 ಗಂಟೆ ಸಮಯಕ್ಕೆ ಪರಾರಿಯಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಅವರ ಮುಂದುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ಗುರುಪುರ ಕಡೆಗೆ KA-19-C-5017 ನೇ ನಂಬ್ರದ ಬಸ್ಸನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಚಂದ್ರಶೇಖರ ರವರು ಸವಾರಿಮಾಡಿಕೊಂಡು ಹೋಗುತ್ತಿದ್ದ ಸದ್ರಿ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರ ಬಾವ ಚಂದ್ರಶೇಖರ ರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಅವರ ಕೈ-ಕಾಲು ಮತ್ತು ದೇಹದ ಇತರ ಭಾಗಗಳಿಗೆ ಗುದ್ದಿದ ಹಾಗೂ ತರಚಿದ ಗಾಯ ಮತ್ತು ಮೂಳೆ ಮುರಿತದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ನಗರದ SCS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖುಲುಗೊಂಡಿರುವುದಾಗಿದೆ.

No comments:

Post a Comment