ದೈನಂದಿನ ಅಪರಾದ ವರದಿ.
ದಿನಾಂಕ 26.11.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 2 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-11-2014 ರಂದು ಸಂಜೆ 7-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಇಮ್ರಾನ್ ರವರು ಕೆಲಸ ಮುಗಿಸಿ ತನ್ನ ಮನೆಯಾದ ಕಸಬಾ ಬೆಂಗ್ರೆ ಕಡೆಗೆ ಫೇರಿ ಬೋಟ್ ಮೂಲಕ ಹೋಗುತ್ತಿದ್ದ ಸಮಯ ಅದೇ ಬೋಟಿನಲ್ಲಿ ಹೋಗುತ್ತಿದ್ದ ಕರಿ ಅಶ್ರಫನು ಆತನ ಜೊತೆಯಲ್ಲಿದ್ದ ಆತನ ಮಗ ಸಿದ್ದೀಕ, ಮುದಸ್ಸಿರ್ ಹಾಗೂ ಕೈಜಲ್ ರವರಲ್ಲಿ ಜುಬೈರನ ಮನೆಗೆ ಹೋಗಲು ಇದೆ ಎಂದು ಮಾತನಾಡುತ್ತಿರುವುದನ್ನು ಕೇಳಿ ಪಿರ್ಯಾದಿದಾರರು ಅವರಲ್ಲಿ ಯಾಕೇ ನೀವು ಜುಬೈರನ ಮನೆಗೆ ಬರುವುದು ಅವನು ನಮ್ಮ ಮನೆಯಲ್ಲಿ ಇಲ್ಲ ಅವನನ್ನು ನಾವು ಮನೆಯಿಂದ ಬಿಟ್ಟಿದ್ದೇವೆ ಎಂದು ಹೇಳಿ ತನ್ನ ಮನೆ ಕಡೆಗೆ ಹೋಗಿದ್ದು ಆರೋಪಿಗಳಾದ ಸಿದ್ದೀಕ್, ಮುದಸ್ಸಿರ್, ಕೈಜರ್ ಮತ್ತು ಇತರ ಎರಡು ಜನರು ರಾತ್ರಿ 20-15 ಗಂಟೆಗೆ ಪಿರ್ಯಾದಿದಾರರ ಮನೆಯ ಹತ್ತಿರದ ಓಣಿಯಲ್ಲಿ ಬಂದು ಜುಬೇರನ ಮನೆ ಯಾವುದು ಎಂದು ಜೋರಾಗಿ ಬೊಬ್ಬೆ ಹೊಡೆಯುತ್ತಿದ್ದು ಇದನ್ನು ಕೇಳಿ ಪಿರ್ಯಾದಿದಾರರು ಮನೆಯಿಂದ ಹೊರಗೆ ಬಂದು ಮನೆಯಲ್ಲಿ ಹೆಂಗಸರು ಮಕ್ಕಳು ಇದ್ದಾರೆ ಮನೆಗೆ ಬರಬೇಡಿ ಎಂಬು ಹೇಳಿದಾಗ ಆರೋಪಿ ಸಿದ್ದೀಕ್ ಎಂಬಾತನು ತನ್ನ ಕೈಯಲ್ಲಿದ್ದ ಚೂರಿಯಿಂದ ಪಿರ್ಯಾದಿದಾರರ ತಲೆಗೆ ಗೀರಿದನು ಪಿರ್ಯಾದಿದಾರರು ನೋವಿನಿಂದ ಬೊಬ್ಬೆ ಹೊಡೆಯುತ್ತಿರುವುದನ್ನು ಕೇಳಿ ಪಿರ್ಯಾದಿದಾರರ ಅಣ್ಣ ಅಸ್ಲಂ ರವರು ಮನೆಯಿಂದ ಹೊರಗೆ ಬಂದಾಗ ಆತನಿಗೆ ಕೂಡಾ ಸಿದ್ದೀಕ್ ನ ಜೊತೆಯಲ್ಲಿ ಬಂದಿದ್ದ ಇತರರು ಕೈಯಿಂದ ಹೊಡೆದು ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಒಡ್ಡಿರುತ್ತಾರೆ.
2.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25-11-2014 ರಂದು ಸಂಜೆ 5-30 ಗಂಟೆಗೆ ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ ಊರುಮನೆ ಎಂಬಲ್ಲಿ ಪ್ರಕರಣದ ಪಿರ್ಯಾದಿದಾರರಾದ ಮಹಮ್ಮದ್ ಸಹಾದ್ ರವರನ್ನು ಆರೋಪಿಯು ತಡೆದು ನಲ್ಲಿಸಿ "ನೀನು ನನ್ನ ವಿರುದ್ಧ ನಿನ್ನ ಮನೆಯವರಲ್ಲಿ ಹಾಗೂ ಮಸೀದಿಯ ಗುರುಗಳಲ್ಲಿ ಬಾರೀ ದೂರು ನೀಡುತ್ತೀಯಾ?" ಎಂದು ಅವಾಚ್ಯ ಶಬ್ಧಗಳಿಂದ ಬೈದು, ಕಲ್ಲಿನಿಂದ ತಲೆಗೆ ಹೊಡೆದುದಲ್ಲದೆ ಜೀವ ಬೆದರಿಕೆ ಕೂಡ ಒಡ್ಡಿರುತ್ತಾನೆ. ಈ ಘಟನೆಯಲ್ಲಿ ಗಾಯಗೊಂಡ ಪಿರ್ಯಾದಿದಾರರು ದೇರಳಕಟ್ಟೆ ಯೇನಪೋಯ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.
3.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 24-11-2014 ರಂದು ಫಿರ್ಯಾದಿದಾರರಾದ ಶ್ರೀ ಬೊನವೆಂಚರ್ ಡಿ'ಸೋಜಾ ರವರು ಬೆಳಿಗ್ಗೆ ತನ್ನ ಮನೆಯಿಂದ ಮಂಗಳೂರು ಕಡೆಗೆ ಹೋಗುವರೇ ತಾನು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಕೆಎ-19-ಇಎಂ-1496 ನೇ ಆ್ಯಕ್ಟಿವ್ ಹೋಂಡಾದಲ್ಲಿ ತನ್ನ ಹೆಂಡತಿ ನಿರ್ಮಲ ಡಿ ಸೋಜ ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಾ ಬೆಳಿಗ್ಗೆ 07-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಕಲ್ಲಾಪು ಮಸೀದಿ ಬಳಿ ತಲುಪುವಾಗ್ಗೆ ಅವರ ಹಿಂದಿನಿಂದ ಕೆಎ-19-6964 ನೇ ಆ್ಯಕ್ಟಿವ್ ಹೋಂಡಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿಯ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಸಹ ಸವಾರರೊಂದಿಗೆ ವಾಹನ ಸಮೇತ ರಸ್ತೆಗೆ ಬಿದ್ದು, ಫಿರ್ಯಾದಿದಾರರ ಎಡ ಕಾಲ ಪಾದಕ್ಕೆ, ಎಡ ಕೈಗೆ, ಬೆರಳಿಗೆ ಗಾಯವಾಗಿರುತ್ತದೆ. ಮತ್ತು ನಿರ್ಮಲ ಡಿ ಸೋಜ ರವರಿಗೆ ಸೊಂಟಕ್ಕೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳುಗಳು ಮಂಗಳೂರು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಬಂದು ಫಿರ್ಯಾದಿದಾರರು ಹೊರರೋಗಿಯಾಗಿಯೂ, ನಿರ್ಮಲ ಡಿ ಸೋಜ ರವರು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.
No comments:
Post a Comment