Saturday, November 8, 2014

Daily Crime Reports 08-11-2014

ದೈನಂದಿನ ಅಪರಾದ ವರದಿ.

ದಿನಾಂಕ 08.11.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

2

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-11-2014 ರಂದು ಕೋಲ್ನಾಡು ಜಂಕ್ಷನ್ ಬಳಿ ಮಧ್ಯಾಹ್ನ 02-30 ಗಂಟೆಗೆ ಮುಲ್ಕಿ ಕಡೆಯಿಂದ ಕೈನೆಟಿಕ್ ಹೊಂಡಾ ಕೆ 19 ಕೆ 1170 ನೇಯದನ್ನು ಕೋಲ್ನಾಡು ಜಂಕ್ಷನ್ ಬಳಿ ಸಿಗ್ನಲ್ ಹಾಕಿ "ಯು" ಟರ್ನ ತಿರುಗಿಸಲು ನಿಲ್ಲಿಸಿದ ಸಮಯ ಹಿಂದಿನಿಂದ ಅಂದರೆ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ಕೆ 20 ಎನ್ 1333 ನೇ ಸ್ಕಾರ್ಪಿಯೋ ವಾಹನದ ಅದರ ಚಾಲಕ ವಿನೋದ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ದ್ವಿಚಕ್ರ ವಾಹನದ ಸವಾರರಾದ ನಾರಾಯಣ ನಾಯರ್ ಎಂಬವರು ವಾಹನ ಸಮೇತ ರಸ್ತೆಗೆ ಬಿದ್ದು, ಹಣೆಗೆ, ತಲೆಗೆ, ಕೈಕಾಲುಗಳಿಗೆ ಗಂಭೀರ ತರದ ರಕ್ತಗಾಯವಾಗಿ ಹಾಗೂ ಮೂಳೆಮುರಿತದ ಗಾಯವಾಗಿ ಮುಕ್ಕಾ ಆಸ್ಪತ್ರೆಗೆ ದಾಖಲಿಸಲ್ಪಟ್ಟವರು ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 03-03 ಗಂಟೆಗೆ ಮೃತಪಟ್ಟಿರುವುದಾಗಿದೆ.

 

2.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-11-2014 ರಂದು ಬೆಳಿಗ್ಗೆ 07-00 ಗಂಟೆಗೆ ಕೊಟ್ಟಾರಚೌಕಿ ಬಳಿ ರಾ.ಹೆ 66 ನ್ನು ಕುಂಟಿಕಾನ್ ಕ್ರಾಸ್ ರಸ್ತೆ  ಕಡೆಯಿಂದ ಬಜಾಜ್ ಶೋರೂಮ್ ಕಡೆಗೆ ರಸ್ತೆ ದಾಟುತ್ತಿದ್ದ ಅಪ್ಪಣ್ಣ ಶೆಟ್ಟಿಗಾರ್ ಎಂಬವರಿಗೆ ಕೆ 20 ಸಿ 8720 ನೇಯದನ್ನು ಅದರ ಚಾಲಕ ಸಿರಾಜ್ ರವರು ಮಂಗಳೂರು ಕಡೆಯಿಂದ ಕೂಳೂರು ಕಡೆಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಚಲಾಯಿಸಿ ಡಿಕ್ಕಿಪಡಿಸಿದ್ದು ಅಪಘಾತದಿಂದ ತಲೆಗೆ ಗಂಭೀರ ಗಾಯಗೊಂಡು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಜ್ಯೋತಿ ಕೆ ಎಮ್ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.

 

3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮುಖೇಶ್ ಕುಮಾರ್ ರವರು ಆಫೀಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡಿಕೊಂಡಿರುವ ಮಂಗಳೂರು ನಗರದ ಬಲ್ಮಠದಲ್ಲಿರುವ ವೈನ್ ಗೇಟ್ ಸಿಬ್ಬಂದಿಗಳು ಉಳಕೊಳ್ಳುವರೇ ಸದ್ರಿ Emjays Complex 2ನೇ ಮಹಡಿಯಲ್ಲಿ ಕೊಠಡಿಯೊಂದನ್ನು ನೀಡಿದ್ದು, ದಿನಾಂಕ: 27-10-2014ರಂದು ಸಿಬ್ಬಂದಿಗಳಾದ ಗಾಡ್ವಿನ್ ರವರು ತಮ್ಮ ಬಾಬ್ತು ನೋಕಿಯಾ ಕಂಪನಿಯ 206, ಇದರ IMEI.No. 358372056064729ನೇ, ಸಿಮ್ ಕಾರ್ಡ್ ಇದ್ದ ಮೊಬೈಲ್ ಫೋನ್-1, ಇದರ ಅಂದಾಜು ಮೌಲ್ಯ ರೂ.3,700/-, ಚಂದ್ರಶೇಖರ್ ರವರು ತಮ್ಮ ಬಾಬ್ತು ನೋಕಿಯಾ ಕಂಪನಿಯ Asha N 230, ಇದರ IMEI.No. 353041065860063ನೇ, ಸಿಮ್ ಕಾರ್ಡ್ ಇದ್ದ ಮೊಬೈಲ್ ಫೋನ್-1, ಇದರ ಅಂದಾಜು ಮೌಲ್ಯ ರೂ.3,300/-, ಪ್ರಕಾಶ್ ರವರು ತಮ್ಮ ಬಾಬ್ತು ನೋಕಿಯಾ ಕಂಪನಿಯ X2, ಇದರ IMEI.No. 356236049297278ನೇ, ಸಿಮ್ ಕಾರ್ಡ್ ಇದ್ದ ಮೊಬೈಲ್ ಫೋನ್-1, ಇದರ ಅಂದಾಜು ಮೌಲ್ಯ ರೂ.5,100/-, ಅಣ್ಣಪ್ಪ ರವರು ತಮ್ಮ ಬಾಬ್ತು ಸ್ಯಾಮ್ಸಂಗ್ ಕಂಪನಿಯ, ಸಿಮ್ ಕಾರ್ಡ್ ಇದ್ದ ಮೊಬೈಲ್ ಫೋನ್-1, ಇದರ ಅಂದಾಜು ಮೌಲ್ಯ ರೂ.4,500/- ಹಾಗೂ  ಪ್ರವೀಣ್ ರವರು ತಮ್ಮ ಬಾಬ್ತು Celkon ಕಂಪನಿಯ, ಸಿಮ್ ಕಾರ್ಡ್ ಇದ್ದ ಮೊಬೈಲ್ ಫೋನ್-1, ಇದರ ಅಂದಾಜು ಮೌಲ್ಯ ರೂ.3,000/-, ಇವುಗಳನ್ನು ಸದ್ರಿ ರೂಮಿನ ಟೇಬಲ್ ಮೇಲೆ ಇಟ್ಟು ದಿನಾಂಕ 27-10-2014 ರಂದು ತುಂಬಾ ಶೆಕೆ ಇದ್ದ ಕಾರಣ ಬಾಗಿಲ ಚಿಲಕವನ್ನು ಹಾಕದೇ ಬಾಗಿಲನ್ನು ಹಾಗೆಯೇ ತೆರೆದಿಟ್ಟು ಸಮಯ ಸುಮಾರು ರಾತ್ರಿ 00-30 ಗಂಟೆಗೆ ಎಲ್ಲರೂ ಮಲಗಿದ್ದು, ವಾಪಾಸು ಬೆಳಿಗ್ಗೆ ಸಮಯ ಸುಮಾರು 05-00 ಗಂಟೆಗೆ ಎದ್ದು ನೋಡಲಾಗಿ ಸದ್ರಿ ಟೇಬಲ್ ನಲ್ಲಿರಿಸಿದ್ದ ಎಲ್ಲಾ ಮೊಬೈಲ್ ಫೋನ್ ಗಳು ಇಲ್ಲದೇ ಇದ್ದು, ಯಾರೋ ಕಳ್ಳರು ಸದ್ರಿ ರೂಮಿಗೆ ಒಳಪ್ರವೇಶಿಸಿ ಮೊಬೈಲ್ ಫೋನ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಕಳವಾದ ದಿನದಿಂದ ಸದ್ರಿ ಮೊಬೈಲ್ ಫೋನ್ ಗಳನ್ನು ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗದೇ ಇದ್ದು ದಿನಾಂಕ 07-11-2014 ರಂದು ಠಾಣೆಗೆ ಬಂದು ಲಿಖಿತ ದೂರು ನೀಡಿರುವುದಾಗಿದೆ.

 

4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಮ್ ಪೂಲ್ ಬಬಾಜಿ ರವರು ಎಂ.ಎಸ್..ಝಡ್ ಕಂಪೆನಿಯ ಅಧೀನದಲ್ಲಿ ಕೆಲಸ ನಿರ್ವಹಿಸುವ  ಕೆ.. ಲಿ.ಎಂಬ ಹೆಸರಿನ ಕಂಪೆನಿಯಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದು ಕಂಪೆನಿ ಕೆಲಸದ ಬಾಬ್ತು ಕಾಪರ್ ಕೇಬಲ್ ಗಳನ್ನು ಕಳವಾರಿನ ಎಂ.ಎಸ್..ಝಡ್ ಕಂಪೆನಿಗೆ ಸಂಬಂದಿಸಿದ ಖಾಲಿ ಜಾಗದಲ್ಲಿ ಇಟ್ಟಿದ್ದು ದಿನಾಂಕ 04-11-2014 ರಂದು ರಾತ್ರಿ 8-00 ಗಂಟೆಯಿಂದ ದಿನಾಂಕ 05-11-2014 ಬೆಳಿಗ್ಗೆ 08-00 ಗಂಟೆ ಮದ್ಯೆ ಸದ್ರಿ ಜಾಗದಲ್ಲಿ ಇಟ್ಟಿದ್ದ ಕಾಪರ್ ಕೇಬಲ್ ಗಳ ಪೈಕಿ 50 ಮೀ ಉದ್ದದ 1 core*300 sq mm ಕೇಬಲ್ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವು ಆದ ಕಾಪರ್ ಕೇಬಲಿನ ಮೌಲ್ಯ ರೂ 1,20,000/- ಆಗಬಹುದು.

 

5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಯುವರಾಜ್ ಜಿ. ಸಾಲ್ಯಾನ್ ರವರು ಮುಕ್ಕ ಶ್ರೀನಿವಾಸ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಮೇನಜರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 06-11-2014 ರಂದು ಸಂಜೆ 6-00 ಗಂಟೆಗೆ ಸದ್ರಿ ಹಾಸ್ಟೆಲ್ ವಿದ್ಯಾರ್ಥಿ ತಮಿಳುನಾಡು ಮದುರೈ ನಿವಾಸಿ ತಿರುಪತಿ ರಾಜ್ (18) ಎಂಬಾತನು ಆತನ ಸಹಪಾಟಿಯಲ್ಲಿ ತಾನು ಅಜ್ಜಿ ಮನೆ ತಿರುಚಿಗೆ ಹೋಗುವುದಾಗಿ ತಿಳಿಸಿ ಹಾಸ್ಟೆಲ್ ನಿಂದ ಹೋಗಿದ್ದು, ಅಲ್ಲಿಗೂ ಹೋಗದೇ ವಾಪಾಸು ಹಾಸ್ಟೆಲ್ ಗೂ ಬಾರದೇ ಇದ್ದು ಅಲ್ಲದೇ ಆತನ ಮೊಬೈಲ್ ನಂಬ್ರ ಸ್ವಿಚ್ ಆಪ್ ಆಗಿದ್ದು, ಸದ್ರಿ ವಿದ್ಯಾಥಿಯು ಕಲಿಯುವಿಕೆಯಲ್ಲಿ ಆಸಕ್ತಿ ಇಲ್ಲದ ಕಾರಣ ಕಾಲೇಜು ಬಿಟ್ಟು ಹೋಗಿರಬಹುದಾಗಿದೆ. ಕಾಣೆಯಾದವರ ಚಹರೆ: ಹೆಸರು: ತಿರುಪತಿ ರಾಜ್ ಪ್ರಾಯ 18 ವರ್ಷ ಎತ್ತರ 5'4" ಬಣ್ಣ: ಕಪ್ಪು, ಬಟ್ಟೆ: ಕಪ್ಪು ಶರ್ಟ್‌, ಕಂದು ಬಣ್ಣದ ಪ್ಯಾಂಟ್ ಧರಿಸಿರುವುದಾಗಿದೆ.

 

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-11-2014 ಬೆಳಿಗ್ಗೆ 5-45 ಗಂಟೆಗೆ ಮಂಗಳೂರು ತಾಲೂಕಿನ ಬಜಪೆ ಪೊಲೀಸ್ ಠಾಣಾ ಸರಹದ್ದಿನ ಅಡ್ಡೂರು ಗ್ರಾಮದ ಅಳಕೆ ಮನೆ ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀ ಹಬೀಬುಲ್ಲಾ ರವರ ವಾಸದ ಮನೆಗೆ ಆರೋಪಿ ಅಬ್ದುಲ್ ಸತ್ತರ್ ಮತ್ತು ಇತರರು ತಕ್ಷೀರು ನಡೆಸುವ ಉದ್ದೇಶದಿಂದ ಅಕ್ರಮ ಕೂಟ ಸೇರಿ ಕೈಯಲ್ಲಿ ಮರದ ಸೊಂಟೆ ಹಿಡಿದು ಪಿರ್ಯಾದಿ ಮನೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ ಅಬ್ದುಲ್ ಸತ್ತರ್ ತಲವಾರಿನಿಂದ ತಲೆಗೆ ಕಡಿದು ಗಾಯಗೊಳಿಸಿರುವುದಲ್ಲದೆ, ರಿಯಾಜ್ ಮತ್ತು ಇತರರು ಮರದ ಸೊಂಟೆಯಿಂದ ಹೊಡೆದು ಪಿರ್ಯಾದುದಾರರ ಕೈಕಾಲುಗಳಿಗೆ ಗಾಯಗೊಳಿಸಿರುವುದಲ್ಲದೇ, ಈತನನ್ನು ಇಲ್ಲಿಯೇ ಇಡಲು ಬಿಡಬಾರದು, ಕೊಂದು ಬಿಡಿ ಎಂದು ಬೆದರಿಕೆ ಹಾಕಿ ನಿನಗೆ ಬುದ್ದಿ ಕಲಿಸುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಗೆ ಇಬ್ರಾಹಿಂ ಎಂಬವರು ಬಂದಾಗ ಆರೋಪಿಗಳೆಲ್ಲರೂ ಕಾರಿನಲ್ಲಿ ಓಡಿ ಪರಾರಿಯಾಗಿರುತ್ತಾರೆ.

 

7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-11-2014 ಬೆಳಿಗ್ಗೆ 3-00 ಗಂಟೆಗೆ ಮಂಗಳೂರು ತಾಲೂಕಿನ ಬಜಪೆ ಪೊಲೀಸ್ ಠಾಣಾ ಸರಹದ್ದಿನ ಅಡ್ಡೂರು ಗ್ರಾಮದ ಅಳಕೆ ಮನೆ ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀ ಬಾಶೀರ್ ರವರ ಅತ್ತೆ ಲತೀಫಾ ಎಂಬವರ ಮನೆಗೆ 4 ಮಂದಿ ಆರೋಪಿಗಳು ಹೋಗಿ ಗಲಾಟೆ ಮಾಡಿ ಕಿಟಕಿ ಬಾಗಿಲುಗಳನ್ನು ಒಡೆದು ಹಾಗೆ ಮನೆಗೆ ಒಳಗಡೆ ಕೂಡ ಹಾನಿ ಮಾಡಿ ನಷ್ಟವುಂಟು ಮಾಡಿದ ಬಗ್ಗೆ ಪಿರ್ಯಾದಿದಾರರಿಗೆ ಲತೀಫಾ ಎಂಬವರು ತಿಳಿಸಿದಾಗ ಅಲ್ಲಿಗೆ ಹೋದ ಪಿರ್ಯಾದುದಾರರಿಗೆ ಆರೋಪಿಗಳು ತಲವಾರಿನಿಂದ ಕಡಿದು ಕೈಯಿಂದ ಹೊಡೆದು ನಿನ್ನನ್ನು ನೋಡಿಕೊಳ್ಳುತ್ತೇನೆ ಹಾಗೂ ನಿನ್ನನ್ನು ಕೊಂದು ಬಿಡುತ್ತೇನೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ 4 ಜನ ಆರೋಪಿಗಳು ಬೈದು ಬೆದರಿಕೆ ಹಾಕಿರುವುದಾಗಿದೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ನಗರದ ಅಡ್ಯಾರ್ನಲ್ಲಿರುವ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನೀಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಜುಲೈ 2014ನೇ ವರ್ಷದಿಂದ ಪ್ರಥಮ ವರ್ಷದ B.E in Computer Science & Engineering ವ್ಯಾಸಂಗ ಮಾಡುತ್ತಿರುವ ದಿಲ್ಲಿ ಮೂಲದ ಆಕಾಶ್ ತ್ರಿವೇದಿ ಎಂಬ ವಿದ್ಯಾರ್ಥಿಯು ಅಡ್ಯಾರ್ನಲ್ಲಿರುವ ಸದ್ರಿ ಕಾಲೇಜಿನ ಹಾಸ್ಟೆಲ್ನಲ್ಲಿ ದಿನಾಂಕ: 06.11.2014 ರಂದು ಮಧ್ಯರಾತ್ರಿಯಿಂದ ಕಾಣೆಯಾಗಿದ್ದು, ಇದುವರೆಗೂ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ವಿಧ್ಯಾರ್ಥಿ ಆಕಾಶ್ ತ್ರಿವೇದಿಯು ಹಾಸ್ಟೆಲ್ನಿಂದ ಹೊರ ಹೋಗುವ ಸಮಯ ತನ್ನ ತಂದೆಗೆ ಒಂದು ಕಾಗದದ ಪ್ರತಿಯನ್ನು ಬರೆದಿಟ್ಟು ಹೋಗಿರುವುದಾಗಿದೆ. ಕಾಣೆಯಾದ ವಿದ್ಯಾರ್ಥಿಯ ಚಹರೆ ಗುರುತು : 1. ಬಣ್ಣ : ಎಣ್ಣೆ ಕಪ್ಪು ಮೈ ಬಣ್ಣ 2. ಉದ್ಧ : 4 ಅಡಿ 9 ಇಂಚು 3. ಚಹರೆ: ಉದ್ಧ ಮುಖ, ಸಾಧರಣ ಮೈಕಟ್ಟು, ಕುತ್ತಿಗೆಯಲ್ಲಿ ಶಸ್ತ್ರಚಿಕಿತ್ಸೆಯ ಗುರುತು ಇರುತ್ತದೆ. 4. ಉಡುಪು: ಕಾಣೆಯಾದ ವಿದ್ಯಾರ್ಥಿಯು ನೀಲಿ ಬಣ್ಣದ T ಶರ್ಟ್ ಧರಿಸಿರುತ್ತಾನೆ. ಕೈಯಲ್ಲಿ ಹಸಿರು ಬಣ್ಣದ ಬ್ಯಾಗ್ ಮತ್ತು ಬಟ್ಟೆಗಳನ್ನು ಕೊಂಡೊಯ್ದಿರುತ್ತಾನೆ. ಮತ್ತು ಕಾಲಿನಲ್ಲಿ ಹಸಿರು ಬಣ್ಣದ ಚಪ್ಪಲಿ ಧರಿಸಿರುತ್ತಾನೆ. 5. ಮಾತನಾಡುವ ಭಾಷೆ : ಇಂಗ್ಲೀಷ್ ಮತ್ತು ಹಿಂದಿ.

No comments:

Post a Comment