Sunday, November 2, 2014

Daily Crime Reports 01-11-2014

ದೈನಂದಿನ ಅಪರಾದ ವರದಿ.

ದಿನಾಂಕ 01.11.201409:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

1

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

2

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-10-2014 ರಂದು ಮಧ್ಯಾಹ್ನ 02-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ಶೋಯೆಬ್ ರವರು ತನ್ನ ಬಾಬ್ತು ಮೋಟಾರ ಸೈಕಲ್ ಕೆ 19 ಎಕ್ಸ್ 3254 ನೇ ನಂಬ್ರದ ಹೀರೊಹೊಂಡಾ ಹಂಕ್ ನೇಯದರಲ್ಲಿ ಸಹಸವಾರರಾದ ಫಾರುಕ್ ನೊಂದಿಗೆ ಹೊರಟು ಕಾವೂರು ಕುಂಟಿಕಾನ ರಸ್ತೆಯ ಕಾವೂರು ಪೊಲೀಸ್ ಠಾಣೆಯ ಬಳಿಗೆ ತಲುಪಿದಾಗ ಡಿವೈಡರ್ ಕೊನೆಗೊಂಡ ಜಾಗದಲ್ಲಿ ಫಿರ್ಯಾದಿಯ ಮುಂದಿನಿಂದ ಕುಂಟಿಕಾನದ ಕಡೆಗೆ ಕೆ   19 ಎಎ 2469 ನೇ ನಂಬ್ರದ ಟಾಟಾ ಏಸ್ ವಾಹನವನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೆ ಏಕಾಏಕಿಯಾಗಿ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಒಮ್ಮೆಲೆ ಬಲಕ್ಕೆ ತಿರುಗಿಸಿ ಫಿರ್ಯಾದಿದಾರರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸಮೆತ ರಸ್ತೆಗೆ ಬಿದ್ದು ಫಿರ್ಯಾದಿದಾರನ ಬಲಕೈ ಮೂಳೆಮುರಿತದ, ಮುಖಕ್ಕೆ, ಗಲ್ಲಕ್ಕೆ, ಹಲ್ಲಿನ ದವಡೆಗೆ, ಗಂಭೀರ ತರದ ಗಾಯಗೊಂಡು ಮೇಲಿನ ಎರಡು ಹಲ್ಲುಗಳು ಕಿತ್ತು ಹೋಗಿರುತ್ತದೆ. ಹಾಗೂ ಸಹಸವಾರ ಫಾರೂಕನ ಹಣೆಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಎಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ಸದ್ರಿ ಅಪಘಾತಪಡಿಸಿದ ವಾಹನ ಚಾಲಕನು ಯಾವುದೇ ಚಿಕಿತ್ಸಾ ವೆಚ್ಚವನ್ನು ನೀಡದೆ ಪೊಲೀಸರಿಗೆ ಮಾಹಿತಿ ನೀಡದೆ ಸ್ಥಳದಿಂದ ಪರಾರಿಯಾಗಿರುತ್ತಾನೆ.

 

2.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಯು.ಬಿ. ಅಹಮ್ಮದ್ ರವರು ಮಾಸ್ ಕ್ಯಾಟರಿಂಗ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಕ್ಯಾಟರಿಂಗ್ಗೆ ಸಂಬಂಧಿಸಿದ ಕಛೇರಿಯು ಮಂಗಳೂರು ಮೈದಾನ 4ನೇ ಅಡ್ಡರಸ್ತೆಯಲ್ಲಿರುವ ವಿವೇಕ್ ಕಾಂಪ್ಲೆಕ್ಸ್ ನಲ್ಲಿ ಇರುತ್ತದೆ.  ಫಿರ್ಯಾದಿದಾರರು ಮನೆಯಿಂದ ಕಛೇರಿಗೆ ಹೋಗಿ ಬರುವರೇ ಫಿರ್ಯಾದಿದಾರರ ಮಗ ಮೊಹಮ್ಮದ್ ಸೊಹೈಲ್ ಹೆಸರಿನಲ್ಲಿರುವ  KA-19 EB-0847 ನೇ ನಂಬ್ರದ  ಅಕ್ಟೀವಾ ಹೊಂಡಾ ಸ್ಕೂಟರನ್ನು ಹೊಂದಿರುತ್ತಾರೆ.  ದಿನಾಂಕ 30-10-2014 ರಂದು ರಾತ್ರಿ 8-00 ಗಂಟೆಯ ಸಮಯಕ್ಕೆ ಕಛೇರಿಯ ಬಳಿಯಲ್ಲಿ   ಸದ್ರಿ ಅಕ್ಟೀವಾ ಹೊಂಡಾ ಸ್ಕೂಟರನ್ನು ಪಾರ್ಕ್ ಮಾಡಿ ನಿಲ್ಲಿಸಿ ಮಂಗಳೂರಿನ ಕೋಡಿಕಲ್ ಎಂಬಲ್ಲಿಗೆ ಕ್ಯಾಟಿರಿಂಗ್ ಸರ್ವಿಸ್ ಬಗ್ಗೆ ಹೋಗಿದ್ದು, ಕ್ಯಾಟರಿಂಗ್ ಕೆಲಸ ಮುಗಿಸಿಕೊಂಡು ರಾತ್ರಿ ವಾಪಾಸು  12-30 ಗಂಟೆ ಸಮಯಕ್ಕೆ ಕಛೇರಿಗೆ ಬಂದು ಅಕ್ಟೀವಾ ಹೊಂಡಾ ಸ್ಕೂಟರ್   ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ, ಸ್ಕೂಟರ್  ಕಾಣೆಯಾಗಿರುತ್ತದೆ. ಬಳಿಕ ಯಾರಾದರೂ ದೂಡಿಕೊಂಡು ಅಲ್ಲಿ ಎಲ್ಲಿಯಾದರೂ ನಿಲ್ಲಿಸಿರಬಹುದೆಂದು ಸುತ್ತಮುತ್ತಲಿನ ಸ್ಥಳಗಳಲ್ಲಿ ಹಾಗು ಮಂಗಳೂರು ನಗರದಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಇದನ್ನು ಯಾರೋ ಕಳ್ಳರು ಕಳವು ಮಾಡಿದ್ದಾಗಿದೆ. ಕಳವಾದ ಅಕ್ಟೀವಾ ಹೊಂಡಾದ ಚಾಸೀಸ್ ನಂಬ್ರ ME4JC445BA8407368 ಇಂಜಿನ್ ನಂಬ್ರ JC44E0524146 ಮಾದರಿ 2010, ಬಣ್ಣ : ಬಿಳಿ, ಬೆಲೆ ಅಂದಾಜು ರೂ. 25,000/- ಆಗಬಹುದು.    ಸದ್ರಿ  ಸ್ಕೂಟರ್ ಡಿಕ್ಕಿಯೊಗಡೆ ಸಿಂಡಿಕೇಟ್ ಬ್ಯಾಂಕ್ ದೇರಳಕಟ್ಟೆ ಶಾಖೆಯ ಚಕ್ಪುಸ್ತಕ ಹಾಗೂ ಪಾಸ್ಪುಸ್ತಕ, ಕರ್ನಾಟಕ ಬ್ಯಾಂಕ್ ತೊಕ್ಕೊಟ್ಟು ಬ್ರಾಂಚ್ ಪಾಸ್ಪುಸ್ತಕ ಮತ್ತು ಮಗ ಮೊಹಮ್ಮದ್ ಸೊಹೈಲ್   ಸಿಂಡಿಕೇಟ್ ಬ್ಯಾಂಕ್ ದೇರಳಕಟ್ಟೆ ಶಾಖೆಯ ಪಾಸ್ ಪುಸ್ತಕ ಹಾಗೂ ಅಳಿಯ ಮೊಹಮ್ಮದ್ ಅಶ್ರಫ್ ಸಿಂಡಿಕೇಟ್ ಬ್ಯಾಂಕ್ ದೇರಳಕಟ್ಟೆ ಶಾಖೆಯ ಪಾಸ್ಪುಸ್ತಕವನ್ನು  ಇಟ್ಟಿರುತ್ತಾರೆ.

 

3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಕು. ಅಕ್ಷತಾ ರವರು ಸುರತ್ಕಲ್ ಕಾಂತೇರಿ ಧೂಮಾವತಿ ದೈವಸ್ಥಾನದ ಬಾಬ್ತು ವಾಣಿಜ್ಯ ಸಂಕೀರ್ಣ ಕಟ್ಟಡದ ಸುರಭಿ ಬ್ಯೂಟಿಪಾರ್ಲರ್ ನಲ್ಲಿ ಬ್ಯೂಟಿಷಿಯನ್ ಕೆಲಸ ಮಾಡುತ್ತಿದ್ದು ದಿನಾಂಕ: 31-10-14 ರಂದು ಬೆಳಿಗ್ಗೆ 10-00 ಗಂಟೆಗೆ ಫೇಶ್ಯಲ್ ಮಾಡಲು ಒಬ್ಬಳು ಹಿಂದಿ ಮಾತನಾಡುವ ಹೆಂಗಸು ಬಂದು ಫೇಶ್ಯಲ್ ಮಾಡಿಸಿ  ನನ್ನ ಗಂಡ ಹೊರಗೆ ಇದ್ದಾರೆ, ಹಣ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಹೊರಗೆ ಹೋಗಿ ಕೂಡಲೇ ಸದ್ರಿ ಹೆಂಗಸು ಹಾಗೂ ಗಂಡಸು ಒಳಗೆ ಬಂದು ಹೆಂಗಸು ಪಿರ್ಯಾದಿದಾರರನ್ನು ಹಿಡಿದುಕೊಂಡಿದ್ದು ಗಂಡಸು ಒಂದು ಕಬ್ಬಿಣದ ಪಟ್ಟಿಯಿಂದ ಪಿರ್ಯಾದಿದಾರರ ತಲೆಗೆ 2 ಬಾರಿ ಹೊಡೆದು ಬಳಿಕ ಸದ್ರಿ ಹೆಂಗಸು ಪಿರ್ಯಾದಿದಾರರ ಬಾಯಿ ಒತ್ತಿ ಹಿಡಿದಾಗ ಜೊತೆಯಲ್ಲಿದ್ದ ಗಂಡಸು ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ರೂ.20,000/- ಮೌಲ್ಯದ ಒಂದು ಪವನಿನ ಚೈನ್ ನ್ನು ಕಸಿದುಕೊಂಡು ದರೋಡೆಗೈದು ಹೋಗಿರುವುದಾಗಿದೆ.

 

4.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-10-2014 ರಂದು ಪಿರ್ಯಾದಿದಾರರಾದ ಶ್ರೀ ಬ್ರಿಜೇಶ್ ರಾಮ್ ರವರು ಅವರ ತಂದೆಯ ಬಾಬ್ತು ಕುಳಾಯಿ ನಾರಾಯಣ ಗುರು ಮಂದಿರ ಕಟ್ಟಡದ ಬಾಡಿಗೆ ಕೋಣೆಯಲ್ಲಿ ನಡೆಸುತ್ತಿದ್ದ ಜಿನಸಿ ಅಂಗಡಿಯಲ್ಲಿ ಇರುವಾಗ ಮಧ್ಯಾಹ್ನ ಸಮಯ ಸುಮಾರು 2:30 ಗಂಟೆ ಸುಮಾರಿಗೆ ಒಬ್ಬ ಹಿಂದಿ ಮಾತಾನಾಡುವ ಗಂಡಸು ಬಂದು ಅವರಲ್ಲಿ ಸಾಬೂನು ಬೇಕೆಂದು ಕೇಳಿದ , ಬಳಿಕ ½ ಕೆ.ಜಿ ಸಕ್ಕರೆಯನ್ನು 4 ಪ್ಯಾಕ್  ಮಾಡಿ ನೀಡುವಂತೆ ಕೇಳಿದ ಹಾಗೇ ಅವರು  ಸಕ್ಕರೆ ತೆಗೆಯಲು ಬಾಗಿದಾಗ ಸದ್ರಿ ಗಂಡಸು ಆತನ ಕೈಯಲ್ಲಿದ್ದ ಗ್ರನೈಟ್  ತುಂಡಿನಿಂದ ಪಿರ್ಯಾದಿದಾರರ ತಲೆಗೆ ಬಡಿದಾಗ ಅವರು ಆತನನ್ನು ದೂಡಿದ್ದು ಸದರಿ ಗಂಡಸು ಗ್ರನೈಟ್ ತುಂಡನ್ನು ಹಿಡಿದುಕೊಂಡು ಹತ್ತಿರ ಬಂದು ಹಿಂದಿ ಭಾಷೆಯಲ್ಲಿ ಹಣ ನೀಡುವಂತೆ ಹೇಳುತ್ತಿದ್ದು, ಆಗ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದರು. ಆಗ ಅಕ್ಕ ಪಕ್ಕದವರು ಅಲ್ಲಿಗೆ  ಬರುವುದನ್ನು ಕಂಡ ಆತ ಕುಳಾಯಿ ವಿಷ್ಣು ಮೂರ್ತಿ ದೇವಸ್ಥಾನದ ಕಡೆಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದು ಗಾಯಗೊಂಡ ಪಿರ್ಯಾದಿದಾರರನ್ನು ಅವರ ತಂದೆಯವರು ಚಿಕಿತ್ಸೆ ಬಗ್ಗೆ ಸುರತ್ಕಲ್ ವೀನಸ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಬಳಿಕ ಅವರು ಸದ್ರಿ ಹಿಂದಿ ಭಾಷೆ ಮಾತನಾಡುವ ಗಂಡಸಿನ ಬಗ್ಗೆ ಅಕ್ಕ ಪಕ್ಕದಲ್ಲಿ ವಿಚಾರಿಸಿದ್ದು, ಆತ ಯಾರೆಂದು ತಿಳಿಯದ ಕಾರಣ ಅವರು ಬಗ್ಗೆ ದೂರು ನೀಡದೇ ಇದ್ದು, ದಿನಾಂಕ 31-10-2014 ರಂದು ಸುರತ್ಕಲ್ ನಲ್ಲಿನ ಬ್ಯೂಟಿ ಪಾರ್ಲರ್ ನಲ್ಲಿ ಹುಡುಗಿಯೊಬ್ಬಳಿಗೆ ಹಿಂದಿ ಮಾತನಾಡುವ ಗಂಡಸು ಹಾಗೂ ಆತನ ಪತ್ನಿ ಹಲ್ಲೆ ಮಾಡಿ ಚಿನ್ನ ಕಸಿದಿದ್ದು ಆತನನ್ನು ಪೊಲಿಸರು ಸುರತ್ಕಲ್ ಠಾಣೆಗೆ ಕೊಂಡು ಹೋಗಿರುವ ವಿಚಾರ  ತಿಳಿದು ತಂದೆಯ ಜೊತೆ ಠಾಣೆಗೆ ಬಂದಾಗ ಆತನು ಅವರಿಗೆ ಹಲ್ಲೆ ಮಾಡಿದ ಗಂಡಸು ಆಗಿದ್ದು,. ಆತನ ಹೆಸರು ಸಂದೀಪ ಕುಮಾರ್ ಎಂದು ತಿಳಿಯಿತು.

 

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31/10/2014 ರಂದು ಪಿರ್ಯಾದಿದಾರರಾದ ಶ್ರೀ ವಿನ್ಸೆಂಟ್ ಎ. ಪಿಂಟೋ ರವರು ಮನೆಯಿಂದ ಬೀಗ ಹಾಕಿ ಸಂಜೆ 5-30 ಗಂಟೆಗೆ ಬಿಳ್ಕೋಡುವ ಸಮಾರಂಭಕ್ಕೆ ಪೂರೈಸಿದ ಫಲಹಾರದ ಬಿಲ್ಲು ಪಾವತಿಸುವೇ ಪತ್ನಿಯೊಂದಿಗೆ ಮನೆಗೆ ಭೀಗ ಹಾಕಿ ಬಜಪೆ ಪೇಟೆಗೆ ಹೋಗಿ ವಾಪಸು ಸಂಜೆ 7-30 ಗಂಟೆಗೆ ಮನೆಗೆ ಬಂದು ನೋಡುವಾಗ ಮನೆಗೆ ಹಾಕಿದ ಎದುರಿನ ಬಾಗಿಲಿನ ಬೀಗವು ಇರದೇ ಇದ್ದು ಮನೆಯ ಒಳಗೆ ಹೋಗಿ ನೋಡಿದಾಗ, ಒಳ ಭಾಗದ ಕೋಣೆಯಲ್ಲಿನ ಗೋಡೆಯಲ್ಲಿನ ಕಪಾಟಿನ ಬಾಗಿಲು ತೆರೆದು ಬಂಗಾದ ಒಡವೆಗಳಾದ 24 ಗ್ರಾಂ ಗುಂಡು ಚೈನು -1, 12 ಗ್ರಾಂ ತೂಕದ ಸಣ್ಣ ಹವಳದ ಮಣಿಗಳಿರುವ ಚೈನು-1, ಬಿಳಿ ಹರಳಿನ ಬೆಂಡೊಲೆ -1 ಜೊತೆ (4 ಗ್ರಾಂ) ಮತ್ತು ಇನ್ನೊಂದು ಕೋಣೆಯಲ್ಲಿ ಇರಿಸಿದ್ದ 12,000/ ವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇದರ ಅಂದಾಜು ಮೌಲ್ಯ ರೂಪಾಯಿ 90,000 ಅಗಿರಬಹುದು.

 

6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-09-2014 ರಂದು ರಾತ್ರಿ 20-00 ಗಂಟೆಗೆ ಪಿರ್ಯಾದಿದಾರರಾದ ದ.ಕ. ಜಿಲ್ಲೆಯ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಎಸ್.ಎಂ. (ಐಪಿಎಸ್) ರವರು ಬಂಟ್ವಾಳ ಉಪ-ವಿಭಾಗದ ಸರಹದ್ದಿನಲ್ಲಿ ದಸರಾ ಹಾಗೂ ಬಕ್ಕ್ರೀದ್ ಹಬ್ಬದ ಬಂದೋಬಸ್ತು ಕುರಿತ ಸಭೆ ನಡೆಸುತ್ತಿದ್ದ ಸಮಯ ಮಂಗಳೂರು ಕಡೆಯಿಂದ ಹಾಸನ ಕಡೆಗೆ ಅನದಿಕೃತವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬುದಾಗಿ ದೂರವಾಣಿ ಮೂಲಕ ದೊರೆತ ಖಚಿತ ವರ್ತಮಾನದ ಮೇರೆಗೆ ಸಭೆಯಲ್ಲಿ ಹಾಜರಿದ್ದ ಬಂಟ್ವಾಳ ಸಿಪಿಐ, ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಪಿಎಸ್ಐ ಹಾಗೂ ಕಚೇರಿಯಲ್ಲಿ ಹಾಜರಿದ್ದ ಸಿಬ್ಬಂದಿಗಳನ್ನು ಕರೆದುಕೊಂಡು ರಾತ್ರಿ 20-30 ಗಂಟೆಗೆ ಮೆಲ್ಕಾರ್ ಸಮೀಪ ವಾಹನಗಳನ್ನು ತಪಾಸಣೆ ನಡೆಸಿದಾಗ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಸಾಗಾಟ ಮಾಡುತ್ತಿದ್ದ ನಡೆಸುತ್ತಿದ್ದಾಗ ಒಟ್ಟು 14 ಲಾರಿಗಳು ಬಂದಿದ್ದು, ಸದ್ರಿ ಲಾರಿಗಳು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಂಗಳೂರು ಅಡ್ಯಾರು ಕಡೆಯಿಂದ ಮರಳನ್ನು ತುಂಬಿಸಿಕೊಂಡು ಬಂದಿದ್ದು, ಸದ್ರಿ ಲಾರಿ ಚಾಲಕರು ಹಾಗೂ ಮಾಲಕರು ರಾಜ್ಯ ಸರಕಾರದ ಬೊಕ್ಕಸಕ್ಕೆ ಹಣವನ್ನು ಪಾವತಿಸದೇ ನಷ್ಟವನ್ನುಂಟು ಮಾಡಿ ಮರಳನ್ನು/ಖನಿಜ ಸೊತ್ತುಗಳನ್ನು ಕಳವು ಮಾಡಿಕೊಂಡು ಅನದೀಕೃತವಾಗಿ ಸಾಗಾಟ ಮಾಡಿರುವುದು ಖಚಿತವಾದುದರಿಂದ ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ 1] ಲಾರಿ ನಂಬ್ರ ಕೆಎ-19-ಬಿ-7008, ಚಾಲಕ ಮಹಮ್ಮದ್ ಕುಂಞ, 2] ಲಾರಿ ನಂಬ್ರ ಕೆಎ-19-ಡಿ-2215, ಚಾಲಕ ಅಬ್ದುಲ್ ಲತೀಫ್ ,3] ಲಾರಿ ನಂಬ್ರ ಕೆಎ-19-ಸಿ-9364, ಚಾಲಕ ಸೋಮಪ್ಪ,4] ಲಾರಿ ನಂಬ್ರ ಕೆಎ-19-ಎಎ-1600, ಚಾಲಕ ಪ್ರವೀಣ್, 5] ಲಾರಿ ನಂಬ್ರ ಕೆಎ-19-ಸಿ-9596, ಚಾಲಕ ಮಹಮ್ಮದ್ ನವಾಝ್ ,6] ಲಾರಿ ನಂಬ್ರ ಕೆಎ-19-ಡಿ-9364 ಚಾಲಕ ಅಬ್ದುಲ್ ಸತ್ತಾರ್, 7] ಲಾರಿ ನಂಬ್ರ ಕೆಎ-19-ಡಿ-8887 ಚಾಲಕ ಉಮ್ಮರಬ್ಬ, 8] ಲಾರಿ ನಂಬ್ರ ಕೆಎ-19-ಸಿ-7865 ಚಾಲಕ ಅಬ್ದುಲ್ ಹಕೀಂ ,9] ಲಾರಿ ನಂಬ್ರ ಕೆಎ-12--7969 ಚಾಲಕ ಕೆ ಜಯನ್, 10] ಲಾರಿ ನಂಬ್ರ 20-ಬಿ-7743 ಚಾಲಕ ಅಬ್ದುಲ್ ಲತೀಫ್, 11] ಲಾರಿ ನಂಬ್ರ ಕೆಎ-12-ಬಿ-0194 ಚಾಲಕ ಎಸ್.ಎಂ ಮಣೀಕಂಠ, 12] ಲಾರಿ ನಂಬ್ರ ಕೆಎ-19-ಡಿ-4460 ಚಾಲಕ ಮಾಧವ , 13] ಲಾರಿ ನಂಬ್ರ ಕೆಎ-19-ಸಿ-5549 ಚಾಲಕನು ಪರಾರಿಯಾಗಿರುತ್ತಾನೆ ,14] ಲಾರಿ ನಂಬ್ರ ಕೆಎ-19-ಸಿ-6775  ಚಾಲಕನು ಪರಾರಿಯಾಗಿರುತ್ತಾನೆ, ಒಟ್ಟು 14 ಲಾರಿಗಳನ್ನು ಹಾಗೂ ಚಾಲಕರನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31.10.2014 ರಂದು 10.00 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ಇಮ್ರಾನ್ ರವರ ತಮ್ಮ ಇಜ್ಜಾಜ್ಎಂಬವರು ಶೇವಿಂಗ್‌‌ ಮಾಡುವರೇ ಮನೆಯಿಂದ ಹೋಗಿದ್ದು ಬೆಳಿಗ್ಗೆ ಸುಮಾರು 11.00 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿದ್ದ  ಸಮಯ ಯಾರೋ ಕರೆ ಮಾಡಿ ಪಿರ್ಯಾದಿದಾರರ ತಮ್ಮ ಇಜ್ಜಾಜ್‌‌ ನನ್ನು  ಕಣ್ಣೂರು ರಾಜೇಶ್‌‌ ಮೈದಾನದ ಹತ್ತಿರವಿರುವ ಮೋಡೆಲಿಂಗ್‌‌ ಹೇರ್‌‌ಡ್ರೆಸರ್ಸ್ಸೆಲೂನ್ಅಂಗಡಿಯ ಒಳಗಡೆ ಯಾರೋ ತಲವಾರು ಮತ್ತು ಚೂರಿಯಿಂದ ಕಡಿದು ಕೊಲೆ ಮಾಡಿರುವುದಾಗಿ ವರ್ತಮಾನ ತಿಳಿಸಿದ್ದು ಅದನ್ನು ಕೇಳಿ ಪಿರ್ಯಾದಿದಾರರು  ಕೂಡಲೇ ಕಣ್ಣೂರು ರಾಜೇಶ್‌‌ ಮೈದಾನದ ಬಳಿ ಇರುವ ಮೋಡೆಲಿಂಗ್‌‌ ಹೇರ್‌‌‌ ಡ್ರೆಸ್ಸರ್ಸ್  ಅಂಗಡಿಗೆ ಬಂದು ನೋಡಿದಾಗ ತನ್ನ ತಮ್ಮ ಇಜಾಜ್‌‌ನನ್ನು ಯಾರೋ ದುಷ್ಕರ್ಮಿಗಳು ತಲವಾರು ಆಯುಧಗಳಿಂದ ಕಡಿದು ಕೊಲೆ ಮಾಡಿ ಹೋಗಿದ್ದು , ಪಿರ್ಯಾದಿದಾರರ ತಮ್ಮ ಇಜಾಜ್‌‌ನು 2012 ನೇ ಇಸವಿಯಲ್ಲಿ ನಡೆದ ಪುತ್ತನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು , ಸಣ್ಣ ಪುತ್ತನ ಸಹಚರರಾದ ಅಡ್ಯಾರಿನ ಜಿಯಾ, ಮುಸ್ತಾಕ್‌‌, ಅಜ್‌‌ಮಾನ್‌‌, ಅನೀಝ್‌‌, ಫಝಲ್‌‌ ಇನ್ನಿತರರು ಯಾವುದೋ ಒಂದು ಕಾರಿನಲ್ಲಿ ಮಾರಕಾಸ್ತ್ರಗಳೊಂದಿಗೆ ಬೆಳಿಗ್ಗೆ ಸುಮಾರು 10.50 ಗಂಟೆಗೆ ಸೆಲೂನ್ಗೆ ಬಂದು ಸೆಲೂನಿನ ಒಳಗಡೆ ಇದ್ದ ಪಿರ್ಯಾದಿದಾರರ ತಮ್ಮನನ್ನು ಹರಿತವಾದ ಆಯುಧಗಳಿಂದ ಕಡಿದು ಕೊಚ್ಚಿ ಕೊಲೆ ಮಾಡಿರುವುದಾಗಿಯೂ ಕೊಲೆ ಕೃತ್ಯಕ್ಕೆ ಸಣ್ಣ ಪುತ್ತನ ತಂದೆಯಾದ ಹಸನಬ್ಬ ಮತ್ತು ಪುತ್ತನ ಅಣ್ಣ ಮಜೀದ್‌‌ ಇವರುಗಳ ಕುಮ್ಮಕ್ಕಿನಿಂದ ನಡೆದಿರುವುದಾಗಿದೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಾಲಕೃಷ್ಣ ರೈ ರವರ ಮಗ ಭಗತ್‌‌‌ ಶಂಕರ್‌‌ ರೈ ಎಂಬವರು ವಾಮಂಜೂರು ಸೈಂಟ್‌‌ ಜೋಸೆಫ್ ಇಂಜಿನಿಯರಿಂಗ್‌‌ ಕಾಲೇಜಿನ ವಿಧ್ಯಾರ್ಥಿಯಾಗಿದ್ದು ಸದ್ರಿಯವರು ದಿನಾಂಕ: 31.10.2014 ರಂದು ಬೆಳಿಗ್ಗೆ ತನ್ನ ಸ್ನೇಹಿತ ಅನುರಾಗ್‌‌ ಎಂಬವರ ಜೊತೆ ಅವರ ಬಾಬ್ತು ಮೋಟಾರ್‌‌ ಸೈಕಲ್‌‌ನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು  ಮಂಗಳೂರಿಗೆ ಹೋಗಿ  ವಾಪಾಸು ಕಾಲೇಜಿಗೆ ಹೋಗುತ್ತಾ  ಕುಲಶೇಖರ ಚೌಕಿ ಬಳಿ ತಲುಪಿದಾಗ ಅಲ್ಲಿ ಅಡ್ಡ ರಸ್ತೆಯಿಂದ ಕೆಎ-14--6535 ನೇ ನಂಬ್ರದ ಪಿಕ್ಅಪ್‌‌ ಜೀಪನ್ನು  ಅದರ ಚಾಲಕನು ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ರಾಹೆ-169 ನೇದಕ್ಕೆ ಅತೀವೇಗ ಮತ್ತು ಅಜಾಗರೂಕತೆಯಿಂದ ಬಲಕ್ಕೆ ತಿರುಗಿಸಿ ಅನುರಾಗ್‌‌ ಹಾಗೂ ಪಿರ್ಯಾದಿದಾರರ ಮಗ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್‌‌ ಸೈಕಲ್‌‌ಗೆ ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರೂ ಬೈಕ್‌‌ ಸಮೇತ ರಸ್ತೆಗೆ ಬಿದ್ದು  ಅನುರಾಗ್‌‌  ರವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದು, ಪಿರ್ಯಾದಿದಾರರ ಮಗ ಭರತ್‌‌‌ ಶಂಕರ್‌‌ ರೈ ರವರ ತಲೆಗೆ ಗಂಭೀರ ಗಾಯಗೊಂಡು ಮಂಗಳೂರು AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀಮತಿ ಕೆ. ವೀಣಾ ಕುಮಾರಿ ರವರ ಗಂಡ ಪದ್ಮನಾಭ. ಟಿ ಎಂಬವರು ಪಿರ್ಯಾದುದಾರರಿಗೆ ಸುಮಾರು 6 ವರ್ಷಗಳಿಂದ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಕೊಡುತ್ತಾ ಬೆದರಿಸುತ್ತಿದ್ದುದಲ್ಲದೇ ಹಣವನ್ನು ತರಲು ಒತ್ತಡ ಹೇರುತ್ತಿದ್ದು, ದಿನಾಂಕ: 29.10.2014 ರಂದು ರಾತ್ರಿ 8:30 ಗಂಟೆ ಸುಮಾರಿಗೆ ಪಿರ್ಯಾದುದಾರರು ತನ್ನ ಮಗನ ಜೊತೆ ಮನೆಯಿಂದ ಹೊರಗಡೆ ಹೋಗಿ ವಾಪಾಸ್ಸು ಮನೆಗೆ ಬಂದ ಸಮಯದಲ್ಲಿ ಪಿರ್ಯಾದುದಾರರ ಗಂಡ ಪಿರ್ಯಾದುದಾರರ ಕೈ ಕಾಲುಗಳಿಗೆ ಮತ್ತು ಎದೆಗೆ ತುಳಿದು ಹೊಡೆದುದಲ್ಲದೇ  ತಲೆಗೆ ಗಾಯ ಮಾಡಿ ಮನೆಯಿಂದ ಹೊರಗಡೆ ಎಳೆದು ಹಾಕಿ ತೊಂದರೆ ನೀಡಿರುವುದಾಗಿದೆ.

No comments:

Post a Comment