ದೈನಂದಿನ ಅಪರಾದ ವರದಿ.
ದಿನಾಂಕ 28.11.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 5 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27-11-2014 ರಂದು ಸುಮಾರು 03-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಯೆಯ್ಯಾಡಿ ಹರಿಪದವು ತಿರುವಿನ ಸ್ವಲ್ಪ ಹಿಂದೆ ಕೆಎ-19-ಇಡಿ-331 ನಂಬ್ರದ ಮೋಟಾರು ಸೈಕಲ್ ನ್ನು ಅದರ ಸವಾರ ಧೀರಜ್ ಎಂಬಾತನು ಸಹಸವಾರರಾಗಿ ಪಿರ್ಯಾದುದಾರರಾದ ಶ್ರೀ ಮಹೇಶ್ ರವರನ್ನು ಕುಳ್ಳಿರಿಸಿಕೊಂಡು ಕೆ.ಪಿ.ಟಿ ಕಡೆಯಿಂದ ಕಾವೂರು ಕಡೆಗೆ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಾಯಿಯೊಂದು ಬರುತ್ತಿರುವುದನ್ನು ಕಂಡು ನಿರ್ಲಕ್ಷತನದಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ಡಿವೈಡರ್ ಗೆ ತಾಗಿ ಬಿದ್ದು, ಸವಾರ ಧೀರಜ್ ಮತ್ತು ಸಹಸವಾರ ಪಿರ್ಯಾದುದಾರರು ರಸ್ತೆಗೆ ಬಿದ್ದು, ಧೀರಜ್ ನ ಮುಖಕ್ಕೆ, ತಲೆಗೆ, ಕೈಗೆ ಗಂಭೀರ ಸ್ವರೂಪದ ಗಾಯ ಮತ್ತು ಪಿರ್ಯಾದುದಾರರ ಹಣೆಯ ಬಲಬದಿ, ಮೂಗಿಗೆ, ಬಲಬದಿಗೆ ಕೆನ್ನೆಗೆ ತರಚಿದ ಗಾಯ ಮತ್ತು ಬಲಕಾಲಿನ ಮೊಣಗಂಟಿನ ಮೇಲ್ಬದಿ ಚರ್ಮಹರಿದ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ಏ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
2.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 27-11-2014 ರಂದು ರಾತ್ರಿ 00-30 ಗಂಟೆಗೆ ಫಿರ್ಯಾಧುದಾರರಾದ ಶ್ರೀ ಮೊಹಮ್ಮದ್ ಅರಾಫತ್ ರವರು ತನ್ನ ಅಕ್ಕನ ಮನೆಯಾದ ಕಾವೂರಿನ ಕುಂಜತ್ತಬೈಲಿನ ಮಿಲ್ಲತ್ ನಗರ ಎಂಬಲ್ಲಿ ತನ್ನ ಭಾವನರಾದ ಹುಸೈನ್ ಎಂಬವರನ್ನು ರಸ್ತೆ ಬದಿಯಲ್ಲಿ ಕಾದುಕೊಂಡಿರುವಾಗ ಅಲ್ಲಿಗೆ ಅವರ ಪರಿಚಯದ ಅಜರುದ್ದೀನ್ ಎಂಬವರು ಕೆಂಪು ಬಣ್ಣದ ಇನೋವಾ ಕಾರಿನಲ್ಲಿ ಬಂದು ಫಿರ್ಯಾಧುದಾರರಲ್ಲಿ ಈ ಮೊದಲು ಅಹಮ್ಮದ್ ಫೈಜಲ್ ಗಲಾಟೆಯಲ್ಲಿ ನೀನು ಬಾಗಿಯಾಗಿದ್ದೀಯಾ? ಎಂದು ಕಬ್ಬಿಣದ ಸಲಾಕೆಯಿಂದ ಫಿರ್ಯಾಧುದಾರರ ಬಲಕಾಲಿನ ಗಂಟಿಗೆ ಹೊಡೆದು, ನಿನ್ನನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಅಲ್ಲದೆ ಅವನ ಕಾರಿನಲ್ಲಿದ್ದ ಮಹಮ್ಮದ್ ಮುಸ್ತಾಫನು ಕಾರಿನಿಂದ ಇಳಿದು ಫಿರ್ಯಾಧುದಾರರಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮಾಡಿರುವುದಾಗಿದೆ.
3.ಕಾವೂರು ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26-11-2014 ರಂದು ಫಿರ್ಯಾಧುದಾರರಾದ ಶ್ರೀ ಮಹಮ್ಮದ್ ಮುಸ್ತಾಫ ರವರು ತನ್ನ ಸ್ನೇಹಿತ ಜಾವೆದ್ ರವರನ್ನು ಕರೆದುಕೊಂಡು ಮಹಮ್ಮದ್ ಅಜರುದ್ದೀನ್ ರವರ ಕಾರಿನಲ್ಲಿ ಜಾವೆದ್ ರವರನ್ನು ಮಂಗಳೂರಿಗೆ ಬಿಡುವರೆ ಮರಕಡ ಜಂಕ್ಷನ್ ಸುಪರ್ ಮಾರ್ಕೆಟ್ ಎದುರು ತಲುಪುವಾಗ ರಾತ್ರಿ 10-30 ಗಂಟೆಗೆ ಕಾರಿನ ಸ್ಟೆಪಿನ್ ತುಂಡಾಗಿ ಕಾರನ್ನು ನಿಲ್ಲಿಸಿ ಮಹಮ್ಮದ್ ಅಜರುದ್ದೀನ್ ರವರು ಟಯರ್ ಸರಿ ಮಾಡುತ್ತಿದ್ದಾಗ ಹುಸೈನ್ ಎಂಬವರ ಭಾವ ಅರಾಫತ್ ಮತ್ತು ಫೈಜಲ್ ಎಂಬವರು ಅಲ್ಲಿಗೆ ಬಂದು ನೀವು ಯಾಕೆ ಇಲ್ಲಿಗೆ ಬಂದದ್ದು, ಇದು ನಮ್ಮ ಊರು ಎಂದು ಹೇಳಿ ಅರಾಫತ್ ಮತ್ತು ಫೈಜಲ್ ರವರು ಮಹಮ್ಮದ್ ಅಜರುದ್ದೀನ್ ಗೆ ದೊಣ್ಣೆಯಿಂದ ಹೊಡೆದರು. ಆಗ ಫಿರ್ಯಾಧುದಾರರು ಮತ್ತು ಜಾವೆದ್ ರವರು ಕಾರಿನಿಂದ ಇಳಿದಾಗ ಅಲ್ಲಿಯೇ ಇದ್ದ ಹುಸೈನ್, ಪವಾಜ್, ನೂರು, ಸುಹೈಲ್ ವರುಗಳು ಬಂದು ಫಿರ್ಯಾಧುದಾರರಿಗೆ ಮತ್ತು ಮಹಮ್ಮದ್ ಅಜರುದ್ದೀನ್ ರವರಿಗೆ ಕೈಯಿಂದ ಮತ್ತು ಕಾಲಿನಿಂದ ಹೊಡೆದರು. ಹುಸೈನ್ ರವರು ಫಿರ್ಯಾಧುದಾರರ ತಲೆಗೆ ಸೋಡಾದ ಟ್ರೇಯಿಂದ ಹೊಡೆದಿರುತ್ತಾರೆ. ನಂತರ ಅವರೆಲ್ಲರೂ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ಫಿರ್ಯಾಧುದಾರರು ಮತ್ತು ಮಹಮ್ಮದ್ ಅಜರುದ್ದೀನ್ ರವರು ಚಿಕಿತ್ಸೆಯ ಬಗ್ಗೆ ಮಂಗಳೂರು ಎಸ್.ಸಿ.ಎಸ್. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕೆ. ರತ್ನವರ್ಮ ಜೈನ್ ರವರು ತನ್ನ ಕಲ್ಲು ಗಣಿ ಗುತ್ತಿಗೆಯಲ್ಲಿನ ತನಿಖೆಯ ಬಗ್ಗೆ ಕಂದಾಯ ಮತ್ತು ಗಣಿ ಅಧಿಕಾರಿಗಳು ಸ್ಥಳ ತನಿಖೆಗೆ ಹಾಜರಿರುವಂತೆ ತಿಳಿಸಿದ ಮೇರೆಗೆ ದಿನಾಂಕ 27-11-2014 ರಂದು 13:00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಮಾಂಟ್ರಾಡಿ ಗ್ರಾಮದ ಮೆ!! ಶ್ರೀನಿವಾಸ ಕ್ರಷರ್ ಸಂಸ್ಥೆಯವರು ಹಾಕಿರುವ ಕಬ್ಬಿಣದ ಗೇಟಿನ ಬಳಿ ನಿಂತಿರುವಾಗ ಅಲ್ಲಿಗೆ ಬಂದ ಆರೋಪಿಗಳಾದ ರುಕ್ಮಯ್ಯ ಪೂಜಾರಿ, ಶಶಿ ಪೂಜಾರಿ, ಶಿವಪ್ಪ ಪೂಜಾರಿ, ಸುಧೀರ್, ರಾಜೇಶ್ ಮತ್ತು ಪ್ರದೀಪ್ ಎಂಬವರುಗಳು ಪಿರ್ಯಾದಿದಾರರ ಅಂಗಿಯ ಕಾಲರ್ ಹರಿದು, ಹೊಡೆದು ಅಂಗಿ ಕಿತ್ತೆಸೆದು ನೀನು ಕ್ರಷರ್ ಬಗ್ಗೆ ಅರ್ಜಿ ನೀಡುತ್ತೀಯಾ ನಿನ್ನನ್ನು ಈಗಲೇ ಮುಗಿಸಿ ಬಿಡುತ್ತೇವೆ ಎಂದು ಚರಂಡಿಗೆ ದೂಡಿ ಹಾಕಿ, ಹೊಡೆದು ಬೂಟುಗಳಿಂದ ಎದೆಗೆ, ತಲೆಗೆ ಹಾಗೂ ಬಲ ಹೊಟ್ಟೆಗೆ ಬಲವಾಗಿ ಬೂಟಿನಿಂದ ಒದ್ದು ಆರೋಪಿ ಪ್ರದೀಪ್ ಎಂಬುವನು ಕಾರಿನ ಅಡಿಗೆ ಹಾಕಿ ಮುಗಿಸಿ ಎಂದು ಜೀವ ಬೆದರಿಕೆ ಹಾಕಿರುತ್ತಾರೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27/11/2014 ರಂದು 14.00 ಗಂಟೆಗೆ ಮಾಂಟ್ರಾಡಿ ಕ್ರೆಶರ್ ನಲ್ಲಿರುವ ಶ್ರೀನಿವಾಸ್ ಪ್ರಸಾದ್ ಕ್ರಶರ್ ಗೆ ಸರಕಾರಿ ಅಧಿಕಾರಿಗಳಾದ ಗಣಿ ಇಲಾಖೆಯವರು, ಎಸಿರವರು, ಮೂಡಬಿದ್ರೆ ತಹಶೀಲ್ದಾರರು ಸ್ಥಳ ಪರಿಶೀಲನೆಯ ಬಗ್ಗೆ ಬಂದ ಸಮಯ ಶ್ರೀನಿವಾಸ್ ಕ್ರಶೆರ್ ನ ಮಾಲಿಕ ರವೀಂದ್ರ ಶೆಟ್ಟಿ ಎಂಬವರು ಪಿರ್ಯಾದಿದಾರರಾದ ಶ್ರೀ ರುಕ್ಮಯ್ಯ ಪೂಜಾರಿ ರವರಿಗೂ ಬರುವಂತೆ ತಿಳಿಸಿದ ಮೇರೆಗೆ ಪಿರ್ಯದಿದಾರರು ಸದ್ರಿ ಕ್ರೆಶರ್ ಗೆ ಬಂದು ಪರಿಶೀಲನೆ ನಡೆಸಿ ವಾಪಾಸು ಹೋಗಿರುವುದಾಗಿ ತಿಳಿಸಿದ ಮೇರೆಗೆ ವಾಪಾಸು ಬರುತ್ತಿರುವ ಸಮಯ ಕ್ರೆಶರ್ ನ ಗೇಟಿನ ಬಳಿ ಆರೋಪಿ ರತ್ನವರ್ಮ ಜೈನ್ ಎಂಬವರು ಪಿರ್ಯಾದಿಯನ್ನು ತಡೆದು ನಿಲ್ಲಿಸಿ, ನೀನು ಯಾಕೆ ಈ ಕ್ರೆಶರ್ ಒಳಗೆ ಬರುತೀ , ಇಲ್ಲಿಗೆ ಬರಲು ನಿನಗೆ ಏನು ಹಕ್ಕು ಇದೆ ಎಂದು ಹೇಳಿ ಇಲ್ಲಿಂದ ಹೊರಗೆ ಹೋಗು ಎಂದು ಅವ್ಯಾಚ್ಚ ಶಬ್ದದಿಂದ ಬೈದು ಆರೋಪಿಯು ಕೈಯಿಂದ ಮುಷ್ಥಿ ಹಿಡಿದು ಪಿರ್ಯಾದಿಯ ಎದೆಗೆ ಹೊಡೆದ ಸಮಯ ತಕ್ಷಣಕ್ಕೆ ಪಿರ್ಯಾದಿಯ ಉಸಿರಾಟಕ್ಕೆ ತೊಂದರೆಯಾಗಿದ್ದು, ಆ ಸಮಯ ಅಲ್ಲೆ ಹತ್ತಿರದಲ್ಲಿದ್ದ ಶಶಿಧರ್ ಮಾಂಟ್ರಾಡಿ, ಶಿವಪ್ಪ ಪೂಜಾರಿ, ಸನತ್ ಕುಮಾರ್ ಬಲಿಪ ನಾರಾಯಣ ಪೂಜಾರಿ ಹತ್ತಿರಕ್ಕೆ ಬರುವುದನ್ನು ಕಂಡು ಆರೋಪಿಯು ಅವಾಚ್ಯ ಶಬ್ದಗಳಿಂದ ಈ ಕ್ರಶರ್ ನ ದಾರಿಯ ವಿಚಾರದಲ್ಲಿ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಅಲ್ಲಿಂದ ಓಡಿ ಹೋಗಿದ್ದು, ಪಿರ್ಯಾದಿಯು ಶಿರ್ತಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು ಮಾಂಟ್ರಾಡಿ ಗ್ರಾಮದಲ್ಲಿರುವ ರವಿಶೆಟ್ಟಿ ಎಂಬುವರ ಕೋರೆಯಲ್ಲಿ ಕಲ್ಲು ಒಡೆಯುವ ಮತ್ತು ಕಂಪ್ರೆಷರ್ ಕೆಲಸ ಮಾಡುತ್ತಿರುವ ಪಿರ್ಯಾದಿದಾರರಾದ ಶ್ರೀ ಸುಭಾಷ್ ರಾಮಪ್ಪ ಲಮಾಣಿ ರವರು ಲಂಬಾಣಿ ಜಾತಿಗೆ ಸೇರಿದವರಾಗಿದ್ದು, ದಿನಾಂಕ 27-11-2014 ರಂದು ಮಧ್ಯಾಹ್ನ ಕೆಲಸಬಿಟ್ಟು ಊಟಕ್ಕೆಂದು ಕ್ರಷರ್ ನ ಗೇಟಿನ ಬಳಿ 14:00 ತಲುಪುವಾಗ ಅಲ್ಲಿಗೆ ಬಂದ ಆರೋಪಿ ರತ್ನವರ್ಮ್ ಜೈನ್ ಪಿರ್ಯಾದಿದಾರರನ್ನು ಉದ್ದೇಶಿಸಿ ಎಲ್ಲಿಂದಲೋ ಬಂದು ಇಲ್ಲಿ ಕೊರೆಯಲ್ಲಿ ಕೆಲಸ ಮಾಡುತ್ತಿದ್ದಿರಿ, ಕೋರೆಗೆ ಹೊಗುವ ಗೇಟನ್ನು ಹಾಕಬೇಡಿ ಎಂದರೂ ಕೇಳುವುದಿಲ್ಲ, ನೀನು ಲಂಬಾಣಿ ಕೀಳು ಜಾತಿ, ಕೋರೆಯನ್ನು ಬಿಟ್ಟು ಹೋಗು ಎಂದರೂ ಕೇಳುವುದಿಲ್ಲ ಎಂಬಿತ್ಯಾದಿ ಬೈದು ಅಂಗಿಯ ಕಾಲರ್ ಹಿಡಿದು ಕೈಯಿಂದ ಕೆನ್ನೆಗೆ ಹೊಡೆದು, ಹೊಟ್ಟೆಗೆ ಕಾಲಿನಿಂದ ತುಳಿದು ದೂಡಿಹಾಕಿದ್ದು, ಈ ಸಮಯ ಇತರ ಇಬ್ಬರು ಆರೋಪಿಗಳು ಪಿರ್ಯಾದಿದಾರರನ್ನು ಹಿಡಿದು ಕೊಂಡಿರುತ್ತಾರೆ. ಆರೋಪಿ ರತ್ನವರ್ಮ್ ಜೈನ್ ಮತ್ತು ಕೋರೆಯ ಮಾಲೀಕರಿಗೆ ಕೋರೆಯ ಬಗ್ಗೆ ಮತ್ತು ಕೋರೆಗೆ ಹೋಗುವ ದಾರಿಯ ಬಗ್ಗೆ ತಕರಾರು ಇದ್ದು ,ಸದ್ರಿ ಕೋರೆಯಲ್ಲಿ ಪಿರ್ಯಾದಿದಾರರು ಕೆಲಸ ಮಾಡುವುದನ್ನು ಸಹಿಸದ ರತ್ನವರ್ಮ್ ಜೈನ್ ಪಿರ್ಯಾದಿದಾರರ ಜಾತಿ ಕೀಳು ಜಾತಿ ಎಂದು ಜಾತಿ ನಿಂದನೆ ಮಾಡಿ ಇತರ ಇಬ್ಬರರೊಂದಿಗೆ ಈ ಕೃತ್ಯ ಮಾಡಿರುತ್ತಾರೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26.11.2014 ರಂದು ಸಂಜೆ ಸುಮಾರು 4.20 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಫಿಲೋಮಿನಾ ರವರು ಉಜ್ಜೋಡಿ ಮಹಕಾಳಿ ದೇವಸ್ಥಾನದ ಬಸ್ಸ್ ಸ್ಟಾಪಿನಲ್ಲಿ ಬೆಂದೂರ್‌ವೆಲ್‌ಗೆ ಹೋಗುವರೇ ಬಸ್ಸಿಗಾಗಿ ಕಾಯುತ್ತಿದ್ದಾಗ ತೊಕ್ಕೊಟ್ಟು ಕಡೆಯಿಂದ ಬಂದ ರೋಟ್ ನಂ:51 ಕೆಎ19ಎಎ675 ನೇ ಸಿಟಿ ಬಸ್ಸು ಬಂದು ನಿಂತಿದ್ದು ಸದ್ರಿ ಬಸ್ಸಿನ ಮುಂದಿನ ಬಾಗಿಲು ಮೂಲಕ ಪಿರ್ಯಾದಿದಾರರು ಹತ್ತುತಾ ಇರುವಾಗಲೇ ಸದ್ರಿ ಬಸ್ಸಿನ ನಿರ್ವಾಹನು ನಿರ್ಲಕ್ಷ್ಯತನದಿಂದ ಬಸ್ಸನ್ನು ಚಲಾಯಿಸುವಂತೆ ಸೀಟಿ ಊದಿ ರೈಟ್ ಹೇಳಿದ್ದು ಅದರಂತೆ ಸದ್ರಿ ಬಸ್ಸಿನ ಚಾಲಕನು ನಿರ್ಲಕ್ಷ್ಯತನದಿಂದ ಒಮ್ಮೆಲೇ ಅತೀವೇಗವಾಗಿ ಬಸ್ಸನ್ನು ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ಆಯತಪ್ಪಿ ಮುಂದಿನ ಬಾಗಿಲಿನಿಂದ ರಸ್ತೆಗೆ ಬಿದ್ದು ಅವರ ತಲೆಯ ಹಿಂಭಾಗಕ್ಕೆ ರಕ್ತಗಾಯ, ಬೆನ್ನಿಗೆ ಗುದ್ದಿದ ನೋವು, ದೇಹದ ಎಡಭಾಗಕ್ಕೆ ನೋವು ಉಂಟಾಗಿರುತ್ತದೆ. ಈ ಅಪಘಾತಕ್ಕೆ ಕಾರಣರಾದ ಚಾಲಕನ ಹೆಸರು ಹಸನ್ ಶರೀಫ್ ಎಂದೂ ನಿರ್ವಾಹಕನ ಹೆಸರು ಹರ್ಷಕುಮಾರ್ ಎಂದು ತಿಳಿದು ಬಂದಿರುತ್ತದೆ.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26.11.2014 ರಂದು ಪಿರ್ಯಾದಿದಾರರಾದ ಶ್ರೀ ಚಂದ್ರಶೇಖರ್ ಶೆಟ್ಟಿ ರವರು ಕೆಎ-25-ಎ-9685 ನೇ VRL ಕಂಪೆನಿಯ ಲಾರಿಯಲ್ಲಿ ಬೆಳ್ತಂಗಡಿಯಿಂದ ಪಾರ್ಸೆಲ್ ತೆಗೆದುಕೊಂಡು ಮಂಗಳೂರು ಕಡೆಗೆ ಲಾರಿಯನ್ನು ಚಲಾಯಿಸಿಕೊಂಡು ಬರುತ್ತಾ ರಾತ್ರಿ 11.00 ಗಂಟೆಗೆ ಅಡ್ಯಾರ್ ಸಂತೋಷ್ ಸೆಲೂನ್ ಬಳಿ ತಲುಪಿದಾಗ ಲಾರಿ ಕೆಟ್ಟು ಮುಂದಕ್ಕೆ ಚಲಾಯಿಸಲಾಗದೇ ನಿಂತಿದ್ದು ಲಾರಿಯ ಎರಡೂ ಬದಿಯಲ್ಲಿ ಸೊಪ್ಪುಗಳನ್ನು ರಸ್ತೆಯಲ್ಲಿ ಹಾಕಿ ವಾಹನವು ನಾದುರಸ್ಥಿಯಾಗಿರುವ ಬಗ್ಗೆ ಇತರ ವಾಹನದಾರರಿಗೆ ತಿಳಿಯುವಂತೆ ಮಾಡಿದ್ದು, ದಿನಾಂಕ: 27.11.2014 ರಂದು ಮಧ್ಯಾಹ್ನ ಸುಮಾರು 12.30 ಗಂಟೆಗೆ KA19EM6182 ನೇ ಮೋಟಾರ್ ಸೈಕಲನ್ನು ಅದರ ಸವಾರ ನರೇಶ್ ಭಟ್ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆತನ ಮುಖಕ್ಕೆ, ಕುತ್ತಿಗೆಗೆ, ಎಡಕೈ ಭುಜಕ್ಕೆ ಗುದ್ದಿದ ರಕ್ತಗಾಯವಾಗಿರುತ್ತದೆ.
No comments:
Post a Comment