Thursday, November 27, 2014

3 Daciots Arrested : Gold, Cash and Other Items Seized

ಪಾಂಡೇಶ್ವರ ಠಾಣಾ ಪೊಲೀಸರಿಂದ ಮೂರು ಜನ  ದರೋಡೆಕೋರರ ಬಂಧನ

ಚಿನ್ನಾಭರಣ, ನಗದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಚೂರಿ ಮತ್ತು ಸರಪಳಿ ಇತ್ಯಾದಿ ಸೊತ್ತುಗಳು ಪೊಲೀಸರ ವಶಕ್ಕೆ

  

   ಕೇರಳ ರಾಜ್ಯದ ಕೊಟ್ಟಾಯಂ ವಾಸಿ ಸಾಜನ್ ಎನ್. ಬಿ. ಎಂಬವರು ಕೇರಳದಿಂದ ಮಂಗಳೂರಿಗೆ ರೈಲ್ ನಲ್ಲಿ ಪ್ರಯಾಣಿಸಿ ದಿನಾಂಕ 27-08-2014ರಂದು ರಾತ್ರಿ ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ರೈಲ್ ನಿಂದ ಇಳಿದು ರೈಲ್ವೆ ಸ್ಟೇಷ್ಸನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಒಂದು ಬಿಳಿ ಬಣ್ಣದ ಮಾರುತಿ ಓಮ್ನಿ  ಕಾರಿನಲ್ಲಿ ಬಂದ ಐದು ಜನ ಯುವಕರು ಸಾಜನ್ ಎಂಬವರನ್ನು ಬಲತ್ಕಾರವಾಗಿ ಓಮ್ನಿಯೊಳಗಡೆ ಎಳೆದು ಹಾಕಿ ಅವರಿಗೆ ಸರಿಯಾಗಿ ಹೊಡೆದು ಕುತ್ತಿಗೆಗೆ ಚೈನ್ ನಿಂದ ಕಟ್ಟಿ ಚೂರಿಯನ್ನು ತೋರಿಸಿ ಅವರಲ್ಲಿದ್ದ ಚಾರ್ಜರ್ ಸಹಿತ ಲ್ಯಾಪ್ ಟಾಪ್-1, ಎರಡು ಪವನ್ ಚಿನ್ನದ  ಉಂಗುರ-1, ಇವುಗಳನ್ನು ಬಲತ್ಕಾರವಾಗಿ ಪಡೆದು ನಂತರ ಪ್ಯಾಂಟ್ ನ ಕಿಸೆಯಲ್ಲಿದ್ದ ಹಣದ ಪರ್ಸನ್ನು ಕೊಡಲು ಕೇಳಿದಾಗ ಸಾಜನ್ ರವರು ಕೊಡಲು ನಿರಾಕರಿಸಿದರು ಆಗ ಐದು ಜನ ಆರೋಪಿಗಳು ಸಾಜನ್ ರವರ ಕುತ್ತಿಗೆಯನ್ನು  ಚೂರಿ ಹಿಡಿದು ಪ್ಯಾಂಟ್ ನ ಹಿಂದಿನ ಕಿಸೆಗೆ ಕೈಹಾಕಿ ಹಣದ ಪರ್ಸನ್ನು ತೆಗೆದು ಅದರಲ್ಲಿ ಇದ್ದ ನಗದು ಹಣ, ICICI ATM ಕಾರ್ಡ್ ತೆಗೆದು ಹಿಂಸೆ ಕೊಟ್ಟು ಒತ್ತಾಯದಿಂದ ಎ.ಟಿ.ಎಂ. ಕಾರ್ಡ್ ನ ಪಾಸ್ ವರ್ಡನ್ನು ಪಡೆದುಕೊಂಡು ಅಪಹರಿಸಿಕೊಂಡು ಹೋಗುವ ದಾರಿಯಲ್ಲಿ ICICI ATM ಕಾರ್ಡ್ ಬಳಸಿ ATM ನಿಂದ ರಾತ್ರಿ 1 ರಿಂದ 2 ಗಂಟೆಯ ಮಧ್ಯಾವಧಿಯಲ್ಲಿ ಸುಮಾರು ರೂ. 27,000-00 ವನ್ನು ನಗದೀಕರಣ ಮಾಡಿ, ದರೋಡೆ ಮಾಡಿರುತ್ತಾರೆ ಎಂಬುದಾಗಿ, ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುತ್ತದೆ.

 

       ದಿನಾಂಕ 26-11-2014ರಂದು ಮಂಗಳೂರು ನಗರದ ಕೇಂದ್ರ ರೈಲ್ವೆ ನಿಲ್ದಾಣ ಬಳಿಯಲ್ಲಿ ಮೂರು ಜನ ಯುವಕರು ಸಂಶಯಾಸ್ಪದ ರೀತಿಯಲ್ಲಿರುವುದಾಗಿ ದೊರೆತ ಮಾಹಿತಿಯಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿಯವರು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿ ಸಂಶಯಾಸ್ಪದ ರೀತಿಯಲ್ಲಿದ್ದ ಯುವಕರನ್ನು ವಶಕ್ಕೆ ಪಡೆದು ಕೂಲಂಕುಷಾಗಿ ವಿಚಾರಿಸಿದಾಗ ಅವರುಗಳು ಕೇರಳ ಮೂಲದ ವ್ಯಕ್ತಿಯನ್ನು ಮಾರುತಿ ಓಮ್ನಿ ಕಾರಿನಲ್ಲಿ ಬಲತ್ಕಾರವಾಗಿ ಒಳಗಡೆ ಹಾಕಿ ದರೋಡೆ ನಡೆಸಿರುವ ಮೇಲಿನ ವಿಚಾರವನ್ನು ತಪ್ಪೊಪ್ಪಿಕೊಂಡ ಪ್ರಕಾರ ಅವರನ್ನು ಅರೆಸ್ಟ್ ಮಾಡಿ ಅವರಿಂದ ದರೋಡೆ ಮಾಡಲಾಗಿದ್ದ 16 ಗ್ರಾಂ ತೂಕದ ಚಿನ್ನದ ಉಂಗುರ ಹಾಗೂ ನಗದು ಹಣದ 10,100/-ರೂಪಾಯಿ ಹಾಗೂ ದರೋಡೆಗೆ ಉಪಯೋಗಿಸಿದ ಚೂರಿ, ಮತ್ತು ಸರಪಳಿ ಇವುಗಳನ್ನು ಸ್ವಾಧೀನಪಡಿಸಲಾಗಿದೆ.

 

     ಮೇಲಿನ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ದಿನಾಂಕ 25-10-2014 ಸಂತೋಷ್ ಕುಮಾರ್ ಡಿಸಿಲ್ವ (19), ತಂದೆ: ಜಗದೀಶ್ ಸಾಲ್ಯಾನ್, ವಾಸ: ಸೈಂಟ್ ಜೋಸೆಫ್ ನಗರ ಕಂಪೌಂಡ್, ನಂದಿಗುಡ್ಡ ಮಂಗಳೂರು. ಎಂಬಾತನನ್ನು ದಸ್ತಗಿರಿ ಮಾಡಿ ದರೋಡೆಗೆ ಉಪಯೋಗಿಸಿದ್ದ ಬಿಳಿ ಬಣ್ಣದ ಕೆಎ-19-ಎಂ-8806 ನೇ ನಂಬ್ರದ ಮಾರುತಿ ಓಮ್ನಿ ಕಾರನ್ನು  ಸ್ವಾಧೀನಪಡಿಸಲಾಗಿರುತ್ತದೆ.  ಹಾಗೂ ಸದ್ರಿಯಾತನು ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

 

ದಿನಾಂಕ 26-11-2014ರಂದು ದಸ್ತಗಿರಿ ಮಾಡಿದ ಆರೋಪಿಗಳ ಹೆಸರು ವಿಳಾಸ

 

1.     ಸರ್ಪ್ರಾಜ್ @ ಚಪ್ಪ @ ಇಬ್ರಾಹಿಂ ಸರ್ಪ್ರಾಜ್, ಪ್ರಾಯ 29 ವರ್ಷ, ತಂದೆ ಅಹಮ್ಮದ್ ಬಾವ, ಪ್ಲಾಡ್ ನಂಬ್ರ 301, ಎನ್ ಕ್ಲೇವ್ ಅಪಾರ್ಟ್ ಮೆಂಟ್, ಹಳೆ ಮೆಸ್ಕಾಂ ಆಫೀಸ್ ಹತ್ತಿರ, ಬೋಳಾರ, ಮಂಗಳೂರು.

2.    ಎ. ಕೆ. ಹಫೀಜ್ ಪ್ರಾಯ 24 ವರ್ಷ, ತಂದೆ-ಅಬ್ಬಾಸ್, ವಾಸ 301, ಮಿಫ್ತಾ ಅಪಾರ್ಟ್ ಮೆಂಟ್, ಜೆಪ್ಪು ಕುಡುಪ್ಪಾಡಿ,  ಮಂಗಳೂರು.

3.   ಶಾರೂಕ್, ಪ್ರಾಯ 19 ವರ್ಷ, ತಂದೆ-ಶಬೀರ್ ಅಹಮ್ಮದ್, ವಾಸ-ಅಂಚೆ ಇಲಾಖೆ ವಸತಿ ಗ್ರಹ ಹತ್ತಿರ ಬೋಳಾರ  ಮಂಗಳೂರು.

 

  ಪತ್ತೆ ಕಾರ್ಯಾಚರಣೆ :-

    ಮಾನ್ಯ ಆರ್. ಹಿತೇಂದ್ರ IPS ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಾನ್ಯ ಉಪ ಪೊಲೀಸ್ ಆಯುಕ್ತರುಗಳಾದ ಡಾ| ಕೆ. ವಿ. ಜಗಧೀಶ್, ಹಾಗೂ ವಿಷ್ಣುವರ್ಧನ್, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪವನ್ ನೆಜ್ಜೂರು, ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ರವರು ಆರೋಪಿಗಳನ್ನು ದಸ್ತಗಿರಿ ಮಾಡಿ ಸೊತ್ತುಗಳನ್ನು ಸ್ವಾಧೀನಪಡಿಸಿದ್ದು ಪಾಂಡೇಶ್ವರ ಠಾಣಾ ಪೊಲೀಸ್ ಉಪನಿರೀಕ್ಷಕರುಗಳಾದ ಮೊಹಮ್ಮದ್ ಶರೀಪ್ ಹಾಗೂ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಅನಂತ ಮುರ್ಡೇಶ್ವರ, ಹಾಗೂ ಸಿಬ್ಬಂದಿಗಳಾದ ಕೇಶವ, ವಿಶ್ವನಾಥ ಮಂಜೇಶ್ವರ ಗಂಗಾಧರ, ದಾಮೋದರ, ಶಾಜು ಕೆ ನಾಯರ್, ಪ್ರಕಾಶ್ ನಾಯ್ಕ ಇವರುಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು.

No comments:

Post a Comment