ಪಾಂಡೇಶ್ವರ ಠಾಣಾ ಪೊಲೀಸರಿಂದ ಬೈಕ್ ಕಳ್ಳನ ಬಂಧನ
ದಿನಾಂಕ 06-11-2014 ರಂದು ಮಂಗಳೂರು ನಗರದ ಮಂಗಳಾದೇವಿ ಪರಿಸರದ ಎಮ್ಮೆಕರೆ ಕ್ರಾಸ್ ಬಳಿ ಮದ್ಯಾಹ್ನ ಸಮಯ 13-15 ಗಂಟೆಗೆ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವಾಗ್ಗೆ` ಒಂದು ದ್ಚಿಚಕ್ರ ವಾಹನದಲ್ಲಿ ಓರ್ವ ಯುವಕ ಹೆಲ್ಮೆಟ್ ಧರಿಸದೇ ಬಂದವನನ್ನು ತಡೆದು ನಿಲ್ಲಿಸಿ ವಾಹನಕ್ಕೆ ಸಂಬಂಧಿಸಿದ ದಾಖಲೆ ಪತ್ರ ಹಾಜರುಪಡಿಸುವಂತೆ ತಿಳಿಸಿದಾಗ ಆತನು ಹಾಜರುಪಡಿಸದೇ ಇದ್ದು ಆತನನ್ನು ಕೂಲಂಕುಷವಾಗಿ ವಿಚಾರಿಸಿದಾಗ ಸದ್ರಿ ದ್ಚಿಚಕ್ರ ವಾಹನವನ್ನು 2013ನೇ ಇಸವಿಯ ಜೂನ್ ತಿಂಗಳಲ್ಲಿ ದಕ್ಷಿಣ ದಕ್ಕೆಯಿಂದ ಕಳವು ಮಾಡಿರುವ ದ್ಚಿಚಕ್ರ ವಾಹನವಾಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಸದ್ರಿಯಾತನನ್ನು ದಸ್ತಗಿರಿ ಮಾಡಿ, ಕಳವಿಗೆ ಸಂಬಂಧಪಟ್ಟ KA 19 X 5386 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಕಂಪನಿಯ ಸ್ಲೈಂಡರ್ ಪ್ಲಸ್ ದ್ಚಿಚಕ್ರ ವಾಹನವನ್ನು ಸ್ವಾಧೀನಪಡಿಸಲಾಗಿದೆ ಸ್ವಾಧೀನಪಡಿಸಲಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ 25000/-ರೂಪಾಯಿ ಆಗಬಹುದು.
ಆರೋಪಿ ಹೆಸರು ವಿಳಾಸ ಹಾಗೂ ಪೋಟೊ
ಅಬ್ದುಲ್ ಖಾದರ್ @ ನವಾಜ್, (26)
ತಂದೆ-ಶೇಖಬ್ಬ, ವಾಸ-ಪಾಡಿ ಹೌಸ್, ಮಾರಿಪಳ್ಳ,
ಪರಂಗಿಪೇಟೆ, ಬಂಟ್ವಾಳ ತಾಲೂಕು. ದ. ಕ. ಜಿಲ್ಲೆ
ಪತ್ತೆ ಕಾರ್ಯಾಚಾರಣೆ :-
ಮಾನ್ಯ ಆರ್. ಹಿತೇಂದ್ರ IPS ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಾನ್ಯ ಉಪ ಪೊಲೀಸ್ ಆಯುಕ್ತರುಗಳಾದ ಡಾ| ಕೆ. ವಿ. ಜಗಧೀಶ್, ವಿಷ್ಣುವರ್ಧನ್, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪವನ್ ನೆಜ್ಜೂರು, ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ, ಠಾಣಾ ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಅನಂತ ಮುರ್ಡೇಶ್ವರ ಹಾಗೂ ಸಿಬ್ಬಂದಿಯವರು. ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು.
No comments:
Post a Comment