ದೈನಂದಿನ ಅಪರಾದ ವರದಿ.
ದಿನಾಂಕ 14.11.2014 ರ 10:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 3 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08.11.2014 ರಂದು ಮದ್ಯಾಹ್ನ 3.30 ಗಂಟೆಗೆ ಫಿರ್ಯಾದುದಾರರಾದ ಶ್ರೀ ಅಬ್ದುಲ್ ರಝೀಕ್ ಹನೀಫ್ ರವರು ಕೆ.ಪಿ ಟಿ ಜಂಕ್ಷನ್ ಬಳಿ ಫಿರ್ಯದುದಾರರ ತಮ್ಮ ಅಬ್ದುಲ್ ರಹೀಮ್ ಹನೀಪ್ ಎಂಬುವರು ಬೈಕು ನಂಬ್ರ KA19-EM-3613 ಹೋಗುತ್ತಿದ್ದ ಸಮಯದಲ್ಲಿ ಹಿಂದಿನಿಂದ ಬಂದ KA19-MC-5090 ಸ್ವಿಪ್ಟ್ ಕಾರಿನ ಚಾಲಕರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಬೈಕಿಗೆ ಅಪಘಾತ ಪಡಿಸಿ ಹೋಗಿರುತ್ತಾರೆ. ದಿನಾಂಕ 10.11.2014 ರಂದು ಮರಿಯಮ್ ತಮೀಜ್ ಎಂಬುವರು ಆಸ್ಪತ್ರೆಯ ಖರ್ಚು ವೆಚ್ಚಗಳನ್ನು ಬರಿಸುತ್ತೇನೆಂದು ತಿಳಿಸಿ, ದಿನಾಂಕ 11.11.2014 ರಂದು ಅವರಿಗೆ ಪೋನ್ ಮಾಡಿದಾಗ ಖರ್ಚು ವೆಚ್ಚಗಳನ್ನು ಕೊಡಲು ನಿರಾಕರಿಸುತ್ತಾರೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13/11/2014 ರಂದು ಸಂಜೆ ಸುಮಾರು 5:00 ಗಂಟೆಗೆ ಮಂಗಳೂರು ನಗರದ ಬಿಜೈ ವೃತ್ತದಲ್ಲಿ ಕೆಎ-19-ಸಿ-6287 ನಂಬ್ರದ ರೂಟ್ ನಂಬ್ರ: 15ನೇ ಜಯಶ್ರೀ ಎಂಬ ಬಸ್ಸನ್ನು ಅದರ ಚಾಲಕ ಪರಂದರ ಎಂಬಾತನು ಕೆಪಿಟಿ ಕಡೆಯಿಂದ ಕೆಎಸ್ಆರ್ಟಿಸಿ ಕಡೆಗೆ ಸಾರ್ವಜನಿಕ ಕಾಂಕ್ರಿಟ್ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಲ್ಲಿ ಫಿರ್ಯಾದಿದಾರರಾದ ಶ್ರೀ ಉಮೇಶ್ ರವರು ಕೆಎಸ್ಆರ್ಟಿಸಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಕೆಎ-19-ಎ-1988 ನಂಬ್ರದ ಟಿಪ್ಪರ್ ಲಾರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರಾದ 1) ಶ್ರೀಮತಿ ಲೀಲಾ(71), 2) ನಿತೇಶ (21), 3) ಪ್ರಶಾಂತ (18), 4) ಜಯಂತಿ(37), 5) ಶಂಕರಿ(25), 6) ರತ್ನಮ್ಮ(26), 7) ಶ್ರಿಮತಿ ಕವಿತಾ, (43), 8) ಶ್ರೀಮತಿ ವಿನೋದ(58), 9) ಪ್ರಸಾದ್(25), 10) ಸೋಮರೀಸ್(27), 11) ಆಸೀಸ್(5), 12) ಸಂಗೀತಾ(32) ಎಂಬವರಿಗೆ ಗಾಯವಾಗಿದ್ದು, ಇವರುಗಳ ಪೈಕಿ ಪ್ರಶಾಂತ ಎಂಬಾತನಿಗೆ ಹಲ್ಲು ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಉಳಿದರಿಗೆ ಗುದ್ದಿದ ಹಾಗೂ ರಕ್ತಗಾಯವಾಗಿರುತ್ತದೆ. ಬಸ್ಸು ಚಾಲಕ ಪುರಂದರನಿಗೂ ಗಾಯವಾಗಿದ್ದು, ಗಾಯಾಳುಗಳು ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.
3.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 13-11-2014 ರಂದು ಫಿರ್ಯಾದಿದಾರರಾದ ಶ್ರೀ ಖಾಲಿದ್ ಎಂಬವರು ತನ್ನ ಮಾವನ ಮೋಟಾರು ಸೈಕಲ್ ನಂ: ಕೆಎ 19 ಇಹೆಚ್ -3485 ನೇದರಲ್ಲಿ ಮಹಮ್ಮದ್ ತೌಫೀಕ್ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಜೋಕಟ್ಟೆ ಕಡೆಯಿಂದ ಕೈಕಂಬದ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಮಂಗಳೂರು ತಾಲೂಕಿನ ಬಜಪೆ ಗ್ರಾಮದ, ತಾರಿಕಂಬಳ ಚಕ್ ಪೋಸ್ಟ್ ಬಳಿ ಎದುರಿನಿಂದ ಹೋಗುತ್ತಿದ್ದ ಕಾರು ನಂ: ಕೆಎ 19 ಎಂಎ 3064 ನೇದ್ದನ್ನು ಕಾರಿನ ಚಾಲಕ ಅತೀವೇಗ ಮತ್ತು ನಿರ್ಲಕ್ಷ್ಯತನದಿಂದ ಒಮ್ಮೆಲೇ ಬಲಕ್ಕೆ ತಿರುಗಿಸಿದ ಪರಿಣಾಮ, ಮೋಟಾರು ಸೈಕಲ್ ಕಾರಿನ ಬೋನೆಟ್ ಗೆ ಡಿಕ್ಕಿಯಾಗಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಸವಾರ ಫಿರ್ಯಾದಿದಾರರಿಗೆ ಮತ್ತು ಸಹ ಸವಾರರಿಗೆ ಗಾಯಗಳಾಗಿದ್ದು, ಚಿಕಿತ್ಸೆಯ ಕುರಿತು ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಾಗಿರುತ್ತಾರೆ.
4.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು, ಕೋಟೆಕಾರು ಗ್ರಾಮದ ಕುಮಾರಂಗಳ ಎಂಬಲ್ಲಿರುವ ಪಿರ್ಯಾದುದಾರರಾದ ಶ್ರೀ ಅಬ್ಬಾಸ್ ರವರ ಬಾಬ್ತು ಮನೆಯಲ್ಲಿ ಪಿರ್ಯಾದುದಾರರು ಮತ್ತು ಮನೆ ಮಂದಿ ದಿನಾಂಕ 12/11/2014 ರಂದು ರಾತ್ರಿ 11-00 ಗಂಟೆಗೆ ಟಿವಿ ನೋಡಿ ಮಲಗಿದ್ದು, ದಿನಾಂಕ 13/11/2014 ರಂದು ಪಿರ್ಯಾದುದಾರರ ಮಗ ಯೂಸೂಪ್ ಸಲೀಂ ಎಂಬವರು ಬೆಳಿಗ್ಗೆ 05-00 ಗಂಟೆಗೆ ಮಸೀದಿಗೆ ಹೋಗುವರೇ ಎದ್ದಾಗ ರೂಮ್‌ನಲ್ಲಿರುವ ಗಾದ್ರೇಜ್‌ನ ಡೋರ್ ತೆರೆದಿರುವುದನ್ನು ಕಂಡು ಅದರೊಳಗೆ ನೋಡಿದಾಗ ಲಾಕರ್ನಲ್ಲಿದ್ದ ರೂಪಾಯಿ 2,40,000/- ನಗದು ಹಣ ಮತ್ತು ಇನ್ನೊಂದು ಮರದ ಕಪಾಟಿನಲ್ಲಿದ್ದ ರೋಲ್ಡ್ ಗೋಲ್ಡ್ ಜೈನುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಮನೆಯ ಅಡಿಗೆ ಕೊಣೆಯ ಬಾಗಿಲನ್ನು ಮೀಟಿ ಒಳಪ್ರವೇಶಿಸಿ ಯಾರೋ ಕಳ್ಳರು ಈ ಕೃತ್ಯ ಮಾಡಿರುವುದಾಗಿದೆ.
No comments:
Post a Comment