ದೈನಂದಿನ ಅಪರಾದ ವರದಿ.
ದಿನಾಂಕ 29.11.2014 ರ 07:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 1 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-11-2014 ರಂದು ಫಿರ್ಯಾದಿದಾರರಾದ ಶ್ರೀ ಮುಡಿಯಪ್ಪ ರವರು ತನ್ನ ಬಾಬ್ತು ಕೆ ಎ- 19 ಈ ಈ- 628 ನೇ ನಂಬ್ರದ ಬೈಕಿನಲ್ಲಿ ತಾನು ಸವಾರನಾಗಿ ಪತ್ನಿ ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಕಟೀಲು ಕಡೆಯಿಂದ ಮನೆಯ ಕಡೆಗೆ ಬರುತ್ತಾ ಮದ್ಯಾಹ್ನ 02-00 ಎನ್ ಐ ಟಿ ಕೆ ಇಂಜಿನೀಯರಿಂಗ್ ಕಾಲೇಜಿನಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಲಾರಿ ನಂಬ್ರ ಕೆ ಎ- 09 ಬಿ- 7689 ನೇಯದನ್ನು ಅದರ ಚಾಲಕ ಮಹಮ್ಮದ್ ಮುಸ್ತಾಕ್ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಬೈಕಿಗೆ ಡಿಕ್ಕಿಪಡಿಸಿದ್ದು. ಈ ಅಪಘಾತದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ಫಿರ್ಯಾದಿದಾರರ ಬಲಕೆನ್ನೆಗೆ, ಬಲಗೈಗೆ, ಬಲಭುಜಕ್ಕೆ, ಹೊಟ್ಟೆ, ಸೊಂಟಕ್ಕೆ ಗಾಯವಾಗಿದ್ದು, ಪತ್ನಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಆ ಮಾರ್ಗವಾಗಿ ಬಂದ ಅಂಬ್ಯೂಲೆನ್ಸ್ ಒಂದರಲ್ಲಿ ಚಿಕಿತ್ಸೆ ಬಗ್ಗೆ ಎ.ಜೆ. ಆಸ್ಪತ್ರೆಗೆ ಕೊಂಡು ಹೋದಲ್ಲಿ, ವೈದ್ಯರು ಪರೀಕ್ಷಿಸಿ ಫಿರ್ಯಾದಿದಾರರ ಪತ್ನಿಯು ದಾರಿ ಮಧ್ಯದಲ್ಲಿ ಮೃತಪಟ್ಟಿರುವುದಾಗಿ, ಪಿರ್ಯಾದಿದಾರರು ಒಳರೋಗಿಯಾಗಿ ದಾಖಲುಗೊಂಡಿರುವುದಾಗಿದೆ.
2.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-11-2014ರಂದು 15-00 ಗಂಟೆ ಸಮಯ ಆರೋಪಿತರುಗಳಾದ ದಿನೇಶ್ ಸಫಲ್ಯ, ಹಸೈನಾರ್ ಮೂಸಾ ಎಂಬವರುಗಳು ಮಂಗಳೂರು ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ವಠಾರದ ಪಾರ್ಕಿಂಗ್ ಸ್ಥಳದಲ್ಲಿ ಗಾಂಜಾ ಎಂಬ ಮಾದಕ ವಸ್ತುವನ್ನು ಯಾವುದೆ ಪರವಾನಿಗೆ ಇಲ್ಲದೇ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾಗ ಮಾಹಿತಿ ಪಡೆದ ಪಿರ್ಯಾದಿದಾರರಾದ ಬರ್ಕೆ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಶ್ರೀ ಶಿವರುದ್ರಪ್ಪ ಮೇಟಿ ರವರು ಆರೋಪಿತರುಗಳನ್ನು ದಸ್ತಗಿರಿಮಾಡಿ, ಅವರುಗಳಿಂದ ಒಟ್ಟು 260 ಗ್ರಾಂ ಗಾಂಜಾ, ರೂ. 350/- ನಗದು, ಹಾಗೂ 2 ಮೊಬೈಲ್ ಫೋನ್ಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿತರುಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 28-11-2014 ರಂದು 14-45 ಗಂಟೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಅಸೈಗೋಳಿ ಮಾನಸ ಫರ್ನೀಚರ್ ಬಳಿ ಆರೋಪಿ ಉಮಾನಾಥ್ ಎಂಬವರು ತನ್ನ ಬಾಬ್ತು ಲಾರಿ KL-14G-9011ನೇಯದನ್ನು ಕೊಣಾಜೆ ಕಡೆಯಿಂದ ನಾಟೆಕಲ್ ಕಡೆಗೆ ಅತೀ ವೇಗವಾಗಿ ಮತ್ತು ನಿರ್ಲಕ್ಷತದಿಂದ ಚಲಾಯಿಸಿ ನಾಟೆಕಲ್ ಕಡೆಯಿಂದ ಬರುತ್ತಿದ್ದ ಪಿರ್ಯಾದಿದಾರರಾದ ಶ್ರೀಮತಿ ಸುಕನ್ಯ ಹೆಚ್.ಆರ್. ರವರ ಬಾಬ್ತು ಡ್ರೈವಿಂಗ್ ತರಬೇತಿ ಕಾರು KA-19- MD-2345ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಸಂಪೂರ್ಣ ಜಖಂ ಆಗಿರುತ್ತದೆ. ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ನಂತರ ಲಾರಿ ನಂಬ್ರ KA-19-D 4026ಕ್ಕೆ ಕೂಡ ಡಿಕ್ಕಿ ಹೊಡೆದು ಸದ್ರಿ ಲಾರಿಯ ಬಾನೆಟ್ ಕೂಡ ಜಖಂ ಆಗಿರುತ್ತದೆ.
4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 28-11-2014 ರಂದು ಮಂಗಳೂರು ನಗರದ ಫುಟ್ ಬಾಲ್ ಮೈದಾನದ ಪಶ್ಚಿಮ ಬದಿಯ ಗ್ಯಾಲರಿಯಲ್ಲಿ ಕುಳಿತುಕೊಂಡು ಇಬ್ಬರು ಯುವಕರು ತನ್ನ ಸ್ವಾಧೀನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗಾಂಜಾವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ವರ್ತಮಾನದಂತೆ ಫಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ದಿನಕರ ಶೆಟ್ಟಿ ರವರು ಮಾನ್ಯ ಪೊಲೀಸ್ ಆಯುಕ್ತರಿಗೆ ಫೋನ್ ಮೂಲಕ ತಿಳಿಸಿ ಅವರಿಂದ ಮೌಖಿಕ ಅನುಮತಿಯನ್ನು ಪಡೆದುಕೊಂಡು, ಪತ್ರಾಂಕಿತ ಅಧಿಕಾರಿ, ಪಂಚರು ಹಾಗೂ ಸಿಬ್ಬಂದಿ ಜೊತೆ ಖಚಿತ ವರ್ತಮಾನ ಬಂದ ಸ್ಥಳಕ್ಕೆ 17-35 ಗಂಟೆಗೆ ತಲುಪಿ ಆ ಯುವಕರಿಬ್ಬರನ್ನು ಸುತ್ತುವರಿಯುತ್ತಿದ್ದಂತೆ ಕಣ್ಣೂರಿನ ರಮೀಝ್ ಎಂಬಾತನು ಸ್ಥಳದಿಂದ ತನ್ನ ಕೈಯಲ್ಲಿದ್ದ ಗಾಂಜಾ ತುಂಬಿದ ಪ್ಲಾಸ್ಟಿಕ್ ತೊಟ್ಟೆಯನ್ನು ಬಿಸಾಡಿ ಓಡಿ ಹೋಗಿದ್ದು, ಇನ್ನೋರ್ವ ಆರೋಪಿ ಸಾದತ್ ಆಲಿ @ ಅನ್ಸಾರ್ ಎಂಬಾತನ ವಶದಿಂದ ಒಟ್ಟು 200 ಗ್ರಾಂ ತೂಕದ ಒಟ್ಟು 60 ಗಾಂಜಾ ತುಂಬಿದ ಪ್ಯಾಕೆಟ್ ಗಳನ್ನು (ಅಂದಾಜು ಮೌಲ್ಯ 6000/) ಹಾಗೂ ಗಾಂಜಾ ಮಾರಾಟ ಮಾಡಿ ಬಂದ ಹಣ ರೂ 490/- ನ್ನು, ರಮೀಜ ನು ಬಿಸಾಡಿ ಹೋದ ಒಟ್ಟು 165 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ 4000/-) ವನ್ನು, ಒಟ್ಟು 365 ಗ್ರಾಂ ತೂಕದ ರೂ 10,000/- ಮೌಲ್ಯದ ಗಾಂಜಾ ಹಾಗೂ ನಗದು ಹಣ 490/- ರೂ ಹಣವನ್ನು ಪಂಚರ ಸಮಕ್ಷಮ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕಿನ ತೆಂಕೆಡಪದವು ಗ್ರಾಮದ ಶಿಬ್ರಿಕೆರೆ ಅಂಚೆ ಬ್ರಿಂಡೆಲು ಮನೆ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಸೆಸಪ್ಪ ಗೌಡ ರವರ ಹೆಂಡತಿ ಶ್ರೀಮತಿ ಸಾವಿತ್ರಿರವರು ದಿನಾಂಕ 16-11-2014 ರಂದು ಸಂಜೆ ಸುಮಾರು 5-00 ಗಂಟೆಗೆ ತಾನು ಧರಿಸುವ ಚಿನ್ನಗಳಿರುವ ಬಾಕ್ಸನ್ನು ಕಪಾಟಿನಲ್ಲಿರಿಸಿ, ಲಾಕ್ ಹಾಕಿ ಅದರ ಕೀಯನ್ನು ಮಲಗುವ ಕೋಣೆಯಲ್ಲಿರಿಸಿದ್ದವರು. ದಿನಾಂಕ:28-11-2014ರಂದು ಮಧ್ಯಾಹ್ನ ಸುಮಾರು 12-00 ಗಂಟೆಗೆ ನೆರೆಮನೆಯಲ್ಲಿ ನಡೆಯುವ ಮದುವೆಗೆ ಹೋಗಲೆಂದು ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ತೆಗೆಯಯಲೆಂದು ಕಪಾಟಿನ ಬಳಿ ಹೋದಾಗ ಕಪಾಟಿನ ಲಾಕ್ ಹಾಕಿದ ಸ್ಥಿತಿಯಲ್ಲಿಯೇ ಇದ್ದು, ಅದನ್ನು ತೆರೆದು ಅದರೊಳಗಿನ ಲಾಕರನ್ನು ತೆರೆದು ನೋಡಿದಾಗ ಅದರೊಳಗಿದ್ದ ಚಿನ್ನಾಭರಣಗಳಿದ್ದ ಬಾಕ್ಸ್ ಇಲ್ಲದಿರುವುದು ಕಂಡು ಬಂದಿದ್ದು, ಲಾಕ್ ಮಾಡಿ ಮಲಗುವ ಕೋಣೆಯಲ್ಲಿರಿಸಿದ್ದ ಕಪಾಟಿನ ಕೀಯನ್ನು ತೆಗೆದು ಕಪಾಟನ್ನು ತೆರೆದು ಅದರಲ್ಲಿದ್ದ ಸುಮಾರು 95,000 ಸಾವಿರ ರೂಪಾಯಿ ಬೆಲೆಯ) 14 ಗ್ರಾಂ ಚಿನ್ನದ ನಕ್ಲೇಸ್-1, 2) 16 ಗ್ರಾಂ ಚಿನ್ನದ ಬಳೆ-2, 3)6 ಗ್ರಾಂ ಚಿನ್ನದ ಚೈನ್-1, 4) 4 ಗ್ರಾಂ ಚಿನ್ನದ ಉಂಗುರ-02 ಸಮೇತ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27.11.2014 ರಂದು ಪಿರ್ಯಾದುದಾರರಾದ ಶ್ರೀ ಗಂಗಾಧರ ಮೂಲ್ಯ ರವರ ಅಣ್ಣ ಗಣೇಶ್ ಎಂಬವರು ಬೆಳಿಗ್ಗೆ 11:00 ಗಂಟೆ ಸಮಯಕ್ಕೆ ತನ್ನ ಮನೆಯಿಂದ ಗ್ಯಾರೇಜ್ನಲ್ಲಿ ರಿಪೇರಿ ಬಗ್ಗೆ ಇಟ್ಟ ಆಟೋರಿಕ್ಷಾ ರಿಪೇರಿಯಾಗಿದೆಯೇ ಎಂದು ನೋಡಲು ಹೋದವರು ದಿನಾಂಕ: 28.11.2014 ರಂದು ಬೆಳಿಗ್ಗೆ 09:00 ಗಂಟೆಯ ವರೆಗೂ ವಾಪಾಸ್ಸು ಮನೆಗೆ ಬಾರದೇ ಸಂಬಂಧಿಕರ ಮತ್ತು ಸ್ನೇಹಿತರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ. ಕಾಣೆಯಾದ ಗಣೇಶ್ ರವರ ಚಹರೆ ಗುರುತು : ಮೈ ಬಣ್ಣ - ಎಣ್ಣೆ ಕಪ್ಪು, ದೃಢ ಕಾಯ ಶರೀರ ಪ್ರಾಯ- 36 ವರ್ಷ, ಎತ್ತರ - 5.8 ಅಡಿ, ವಿದ್ಯಾಭ್ಯಾಸ – SSLC, ಉದ್ಯೋಗ - ರಿಕ್ಷಾ ಚಾಲಕ, ಧರಿಸಿದ್ದ ಉಡುಪು - ಕಪ್ಪು ಬಣ್ಣದ ಪ್ಯಾಂಟ್, ಕಪ್ಪು ಗೆರೆ ಇರುವ ಕಾಫಿ ಬಣ್ಣದ ಶರ್ಟ್, ತಲೆ ಕೂದಲು - ಗಿಡ್ಡ ಕಪ್ಪು ಕೂದಲು ಹೊಂದಿರುವುದಾಗಿದೆ.
No comments:
Post a Comment