ದೈನಂದಿನ ಅಪರಾದ ವರದಿ.
ದಿನಾಂಕ 27.11.2014 ರ 08:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 3 |
1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26-11-2014 ಬೆಳಿಗ್ಗೆ ಸುಮಾರು 08-00 ಗಂಟೆ ಸಮಯಕ್ಕೆ ಮಂಗಳೂರು ನಗರದ ನಂತೂರು ಜಂಕ್ಷನ್ ಬಳಿ ಕೆ.ಎಲ್-46-ಜಿ-4906 ನಂಬ್ರದ ಲಾರಿಯನ್ನು ಅದರ ಚಾಲಕ ನಸ್ರುದ್ದೀನ್ ಎಂಬಾತನು ಕೆ.ಪಿ.ಟಿ ಕಡೆಯಿಂದ ಪಂಪ್ವೆಲ್ ಕಡೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕೆಎ-19-ಸಿ-7825 ನಂಬ್ರದ ನಿಶ್ಮಿತಾ ಎಂಬ ಹೆಸರಿನ ಖಾಸಾಗಿ ಬಸ್ಸಿಗೆ ಢಿಕ್ಕಿಪಡಿಸಿದ ಪರಿಣಾಮ ಸದ್ರಿ ಬಸ್ಸು ಜಂಕ್ಷನ್ ನಲ್ಲಿ ಎಡಮಗ್ಗುಲಾಗಿ ಬಿದ್ದು, ಸದ್ರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉಮಾನಾಥ(19), ಗಣೇಶ(20), ಕಾರ್ತಿಕ್(19), ಉಮೇಶ(20), ಪ್ರವೀಣ್(20) ಎರಾಲ್ಡ್ ಡಿ'ಸೋಜ ಮತ್ತು ಪಿರ್ಯಾದುದಾರರಿಗೆ ಗಂಭೀರ ಸ್ವರೂಪದ ಗಾಯ ಹಾಗೂ ಇನ್ನಿತರ ಪ್ರಯಾಣಿಕರಿಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿದ್ದು, ಗಾಯಾಳುಗಳ ಪೈಕಿ ಉಮಾನಾಥ(19) ಮತ್ತು ಗಣೇಶ(20) ರವರು ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮದ್ಯೆ ಮೃತಪಟ್ಟಿರುತ್ತಾರೆ.
2.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ನಿತೇಶ್ ರವರು ಕಳೆದ ಒಂದು ತಿಂಗಳಿನಿಂದ ಕೊಟ್ಟಾರ ಚೌಕಿ ಬಳಿ ಇರುವ ಜಿಂಜರ್ ವಸತಿ ಗೃಹದಲ್ಲಿ ಎ.ಸಿ ಮೈಂಟೆನ್ಸ್ ಕೆಲಸ ಮಾಡುತ್ತಿದ್ದು, ದಿನಾಂಕ 25-11-2014 ರಂದು ಸಂಜೆ ಸಮಯ 7-30 ಗಂಟೆಗೆ ಬೆಂದೂರ್ ವೆಲ್ ನ ತನ್ನ ಮನೆಯಲ್ಲಿರುವ ಸಮಯ ಪಿರ್ಯಾದಿಯ ಮೊಬೈಲ್ ದೂರವಾಣಿಗೆ, 2 ಬೇರೆ ಬೇರೆ ಸಿಮ್ ನಂಬ್ರದ ಮೊಬೈಲ್ ದೂರವಾಣಿಯಿಂದ ಯಾರೋ ಓರ್ವ ವ್ಯಕ್ತಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಮುಂದಕ್ಕೆ ನೀನು ಈ ರೀತಿ ಮಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಮೊಬೈಲ್ ದೂರವಾಣಿಯಲ್ಲಿ ಜೀವ ಬೆದರಿಕೆ ಹಾಕಿರುತ್ತಾರೆ.
3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-11-2014 ಹಾಗೂ ಅದಕ್ಕೂ ಮುಂಚಿತವಾಗಿ ಆರೋಪಿ ಕರಣ್ ಮನ್ ಎಂಬವರು ತನ್ನ ಮೊಬೈಲ್ ದೂರವಾಣಿಯಿಂದ ಫಿರ್ಯಾದುದಾರರಾದ ಏರ್ ಇಂಡಿಯಾ ಲಿಮಿಟೆಡ್ ನ ಕ್ಯಾಪ್ಟನ್ ಸುಮೀತ್ ಡಿ.ಎಂ.ಆರ್. ರವರ ಬಾಬ್ತು ಮೊಬೈಲ್ ಫೋನ್ ಗೆ ಕರೆ ಮಾಡಿ ಜಾಗದ ವಿಚಾರದಲ್ಲಿ ಫಿರ್ಯಾದುದಾರರಿಗೆ ಹಾಗೂ ಅವರ ಕುಟುಂಬದವರಿಗೆ ಕೊಲ್ಲುವುದಾಗಿ ಕೊಲೆ ಬೆದರಿಕೆ ಒಡ್ಡುತ್ತಿರುವುದಾಗಿ ನೀಡಿದ ಫಿರ್ಯಾದಿಯನ್ನು ದಿನಾಂಕ 20-11-2014 ರಂದು ಠಾಣಾ ಎನ್.ಸಿ.ಆರ್ ನಂಬ್ರ 1007/2014 ರಂತೆ ನೊಂದಾಯಿಸಿಕೊಂಡು ಅಸಂಜ್ಞೆಯ ಅಪರಾಧವಾಗಿರುವುದರಿಂದ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಬಗ್ಗೆ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುವುದಾಗಿದೆ.
4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 26/11/2014 ರಂದು ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ನರಸಿಂಹಮೂರ್ತಿ ಪಿ. ಹಾಗೂ ಸಿಬ್ಬಂದಿಯವರು ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಕಜೆಪದವು, ಕೌಡೂರು ಕ್ರಾಸ್ ಎಂಬಲ್ಲಿ ವಾಹನ ತಪಾಸಣೆಯಲ್ಲಿದ್ದ ಸಮಯ ಮಧ್ಯಾಹ್ನ 1.30 ಗಂಟೆಗೆ ಕೆಎ 19 ಇಎಂ.0582 ನಂಬ್ರದ ಹೊಂಡಾ ಆಕ್ಟೀವಾ ವಾಹನದಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೇ ವಳಚ್ಚಿಲ್ ಎಂಬಲ್ಲಿಯ ನಿವಾಸಿ ಸಲೀಂ ಎಂಬಾತ ಗಾಂಜಾ ಎಂಬ ಮಾದಕ ದ್ರವ್ಯವನ್ನು ತನ್ನ ಸ್ಕೂಟರಿನ ಹ್ಯಾಂಡಲ್ ನಲ್ಲಿ ನೇತಾಡಿಸಿಕೊಂಡು ಸಾಗಿಸುತ್ತಿದ್ದುದನ್ನು ಪತ್ತೆ ಮಾಡಿ ಮುಂದಿನ ಕ್ರಮ ಕೈಗೊಂಡಿರುವುದಾಗಿದೆ.
No comments:
Post a Comment