ದೈನಂದಿನ ಅಪರಾದ ವರದಿ.
ದಿನಾಂಕ 20.11.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18.11.2014 ರಂದು ಸಂಜೆ ಸಮಯ 17.30 ಗಂಟೆಗೆ ಮಂಗಳೂರು ನಗರದ ಹ್ಯಾಮಿಲ್ಟನ್ – ರಾವ್ & ರಾವ್ ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಎಂಬಲ್ಲಿ ಆಟೋರಿಕ್ಷಾ ಕೆಎ.19.ಎ.2918ನೇದನ್ನು ಅದರ ಚಾಲಕರು ಹ್ಯಾಮಿಲ್ಟನ್ ಕಡೆಯಿಂದ ರಾವ್ & ರಾವ್ ವೃತ್ತದ ಕಡೆಗೆ ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಕಾಂಕ್ರೀಟು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೈಸೂರು ಜಿಲ್ಲೆಯವರಾದ 58 ವರ್ಷ ಪ್ರಾಯದ ಮಹಾದೇವಪ್ಪ ಎಂಬವರಿಗೆ ಡಿಕ್ಕಿ ಹೊಡೆದು ಮಹಾದೇವಪ್ಪ ರವರ ತಲೆಗೆ ಮತ್ತು ಮುಖಕ್ಕೆ ಗಾಯುಂಟಾಗಿದ್ದವರನ್ನು ಚಿಕಿತ್ಸೆ ಬಗ್ಗೆ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ : 19.11.2014 ರಂದು ಮಧ್ಯಾಹ್ನ ಸುಮಾರು 15.15 ಗಂಟೆಗೆ ಮಹಾದೇವಪ್ಪರವರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದ್ದು ಮಹಾದೇವಪ್ಪನ ಸಂಬಂಧಿಕರು ಮೈಸೂರಿನಿಂದ ಬಂದು ಬಳಿಕ ಮಾದೇಶಾ ಎಂಬವರು ಲಿಖಿತ ಪಿರ್ಯಾದಿ ನೀಡಿರುವುದಾಗಿದೆ.
2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದುದಾರರಾದ ಶ್ರೀ ಪ್ರಸಾದ್ ಕುಮಾರ್ ರವರು ಪಂಚಮಿ ಇಲೆಕ್ಟಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಶೋ ರೂಮಿನಲ್ಲಿ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಈ ಶೋ ರೂಮಿನಲ್ಲಿ ಸೋನಿ ಕಂಪೆನಿಗೆ ಸಂಬಂದಪಟ್ಟ ವಿವಿಧ ಬಗೆಯ ಇಲೆಕ್ತಾನಿಕ್ಸ್ ಸೊತ್ತುಗಳು ಇದ್ದು ದಿನಾಂಕ 17-11-2014 ರಂದು ಬೆಳಿಗ್ಗೆ 10-00 ಗಂಟೆಗೆ ಕಂಪನಿಯಲ್ಲಿ ಸ್ಟಾಕ್ ಚೆಕ್ ಮಾಡಿದಾಗ ಒಂದು ಸೋನಿ ಲ್ಯಾಪ್ಟಾಪ್ ಕಳವಾಗಿರುತ್ತದೆ. ಈ ಹಿಂದೆಯೂ ಕೂಡ ಕಂಪನಿಯಲ್ಲಿ ಲ್ಯಾಪ್ಟಾಪ್-1, ಮೊಬೈಲ್-2, ಕಾರು ಸ್ಟೀರಿಯೋ-1, ಎಲ್.ಇ.ಡಿ ಮೊನಿಟರ್-2, ಸ್ಟೆಬಿಲೈಸರ್-1 ಕಳವಾಗಿರುತ್ತದೆ. ಪದೇ ಪದೇ ಕಂಪನಿಯಲ್ಲಿ ಕಳವಾಗಿರುತ್ತಿರುವುದರಿಂದ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.
3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 18-11-2014 ರಂದು ರಾತ್ರಿ ಸುಮಾರು 8:15 ಗಂಟೆಗೆ ಮಂಗಳೂರು ನಗರದ ಮಂಗಳೂರು ನಗರದ ಕುಲಶೇಖರ ಇಂಚರ ಬಾರ್‌ನ ಎದುರುಗಡೆ ಮಂಗಳೂರಿನಿಂದ ಮೂಡಬಿದ್ರೆ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಪಿರ್ಯಾದಿದಾರರಾದ ಶ್ರೀ ಪ್ರಸನ್ನ ರವರು KA-19-EM-4344 ನಂಬ್ರದ ಮೋಟಾರು ಸೈಕಲಿನಲ್ಲಿ ಕುಲಶೇಖರ ನಂದಿನಿ ಹಾಲಿನ ಡೈರಿ ಕಡೆಗೆ ಹೋಗುತ್ತಿದ್ದಾಗ KA-19-MB-5861 ನಂಬ್ರದ ಕಾರನ್ನು ಅದರ ಚಾಲಕಿಯು ಶಕ್ತಿನಗರ ಕಡೆಯಿಂದ ಬರುವ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಮುನ್ನುಗ್ಗಿಸಿದ ಪರಿಣಾಮ ಪಿರ್ಯಾಧಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಕಿಬ್ಬೊಟ್ಟೆಗೆ ಗುದ್ದಿದ ನೋವುಂಟಾಗಿದ್ದು, ಮತ್ತು ಬಲಕೈ ಮೊಣಗಂಟಿಗೆ ತರಚಿದ ಗಾಯವಾಗಿದ್ದು, ಗಾಯಾಳುವು ಮಂಗಳೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ದಿನಾಂಕ 19-11-2014 ರಂದು ಡಿಸ್‌ಚಾರ್ಜ್ ಆಗಿ ಠಾಣೆಗೆ ಬಂದು ದೂರು ನೀಡಿದ್ದಾಗಿದೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 19-11-2014 ರಂದು ಸಂಜೆ 6:00 ಗಂಟೆಗೆ ಆರೋಪಿಗಳು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಪಿರ್ಯಾದಿದಾರರಾದ ಶ್ರೀಮತಿ ಜುಬೈದಾ ರವರ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಆರೋಪಿ 1ನೇ ಆಸಿಫ್ನು ಪಿರ್ಯಾದಿದಾರರನ್ನುದ್ದೇಶಿಸಿ, ಅವ್ಯಾಚ್ಯ ಶಬ್ದಗಳಿಂದ ಬೈದು, ಕೋಲಿನಿಂದ ಪಿರ್ಯಾದಿದಾರರ ತಲೆಗೆ, ಬೆನ್ನಿಗೆ ಕಾಲಿಗೆ ಹೊಡೆದು, "ಯಾರು ಬರುತ್ತಾರೆ ನೋಡುತ್ತೇನೆ. ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ" ಎಂದು ಜೀವ ಬೆದರಿಕೆ ಒಡ್ಡಿ ಮನೆಯ ಕಿಟಕಿ ಗ್ಲಾಸುಗಳನ್ನು ಪುಡಿ ಮಾಡಿದ್ದು, ಆರೋಪಿ 2ನೇ ಹಾಜಿರಾಳು, ಅವ್ಯಾಚ್ಯ ಶಬ್ದಗಳಿಂದ ಬೈದಿರುತ್ತಾಳೆ.
5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಧರ್ಮಾ ರವರು ಕಂಪ್ರೆಸ್ಸರ್ ಆಪರೇಟರ್ ಆಗಿದ್ದು ದಿನಾಂಕ: 19.11.2014 ರಂದು ಪಿರ್ಯಾಧಿದಾರರು ಕೆಲಸದ ಬಗ್ಗೆ ವಾಮಂಜೂರಿಗೆ ಹೋಗಿದ್ದು ಕೆಲಸದಲ್ಲಿದ್ದಂತೆ ಬೆಳಿಗ್ಗೆ ಸುಮಾರು 10.00 ಗಂಟೆಗೆ ಪಿರ್ಯಾಧಿದಾರರ ತಮ್ಮ ರಾಜು ಎಂಬವರು ಕರೆ ಮಾಡಿ ಪಿರ್ಯಾಧಿದಾರರ ಮಗ ಅಯ್ಯಪ್ಪ (3 ವರ್ಷ) ಮನೆಯ ಹತ್ತಿರದಲ್ಲಿರುವ ಗ್ರೇಸಿ ಪಿಂಟೋ ರವರಿಗೆ ಸೇರಿದ ನೀರು ನಿಂತಿರುವ ಕಪ್ಪುಕಲ್ಲಿನ ಕೋರೆಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದವನನ್ನು ಚಿಕಿತ್ಸೆ ಬಗ್ಗೆ AJ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದನೆಂದು ತಿಳಿಸಿದ ಮೇರೆಗೆ ಪಿರ್ಯಾಧಿದಾರರು ಕೂಡಲೇ AJ ಆಸ್ಪತ್ರೆಗೆ ಹೋಗಿ ವಿಚಾರಿಸಿದಾಗ ಪಿರ್ಯಾಧಿದಾರರ ಮಗ ಅಯ್ಯಪನು ಮನೆಯ ಬಳಿ ಆಟವಾಡುತ್ತಿದ್ದವನು ಮನೆಯ ಬಳಿ ಕಾಣಿಸದೇ ಇದ್ದುದರಿಂದ ಆತನನ್ನು ಎಲ್ಲಾ ಕಡೆ ಹುಡುಕಾಡಿ ಕೊನೆಗೆ ಮನೆಯ ಬಳಿ ಇದ್ದ ಕಪ್ಪುಕಲ್ಲಿನ ಕೋರೆಯಲ್ಲಿರುವ ಹುಡುಕಿದಾಗ ನೀರಿನಲ್ಲಿ ಮುಳುಗಿದ್ದು ಆತನನ್ನು ನೀರಿನಿಂದ ಮೇಲಕ್ಕೆತ್ತಿ ಚಿಕಿತ್ಸೆ ಬಗ್ಗೆ AJ ಆಸ್ಪತ್ರೆಗೆ ದಾಖಲಿಸಿದಲ್ಲಿ ವೈದ್ಯರು ಪರೀಕ್ಷಿಸಿ ಅಯ್ಯಪ್ಪನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಜೆಸ್ಸಿ ಪಿಂಟೋ ಎಂಬವರು ಅವರಿಗೆ ಸೇರಿದ ಜಾಗದಲ್ಲಿರುವ ಕಪ್ಪುಕಲ್ಲಿನ ಕೋರೆಯನ್ನು ಕೆಲಸಮುಗಿಸಿ ಹಲವು ವರ್ಷಗಳಾದರೂ ಮುಚ್ಚದೇ ಇದ್ದುದರಿಂದ ಪಿರ್ಯಾಧಿದಾರರ ಮಗನು ಸದ್ರಿ ಕೋರೆಯಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿರುವುದಾಗಿದೆ.
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19.11.2014 ರಂದು ಪಿರ್ಯಾಧಿದಾರರಾದ ಶ್ರೀ ಕಿಶೋರ್ ರವರು ಮಂಗಳೂರಿಗೆ ಹೋಗುವರೇ ತನ್ನ ಬಾಬ್ತು ಮೋಟಾರ್ ಸೈಕಲ್‌ನಲ್ಲಿ ಮನೆಯಿಂದ ಹೊರಟಿದ್ದು ಬೆಳಿಗ್ಗೆ ಸುಮಾರು 9.10 ಗಂಟೆಗೆ ನೀರುಮಾರ್ಗ ಎಂಬಲ್ಲಿರುವ ಮೂರು ಮಾರ್ಗ ಸೇರುವ ಜಂಕ್ಷನ್ ತಲುಪಿದಾಗ ಕರಾವಳಿ ಕಾಲೇಜು ಕಡೆಯಿಂದ ಕೆಎ-19-ವೈ-1469 ನೇ ಮೋಟಾರ್ ಸೈಕಲನ್ನು ಅದರ ಸವಾರ ಮಹಮ್ಮದ್ ನವಾಜ್ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನೀರುಮಾರ್ಗ ಕಡೆಯಿಂದ ಬರುತ್ತಿದ್ದು ಕೆಎ-60-ಎಚ್-1338 ನೇ ಮೋಟಾರ್ ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ ಅದರ ಸವಾರ ಸಂದೀಪ್ ರತ್ನಾಕರ್ ರವರ ಬಲಕಾಲಿಗೆ ರಕ್ತಬರುವ ಗಾಯವಾಗಿರುವುದಲ್ಲದೆ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ಸುಜಯ್ ವಿವಿಯನ್ ಸಿಕ್ವೇರಾ ರವರಿಗೆ ಇಸ್ಮಾಯಿಲ್ ಅಳಪೆ ಎಂಬವರು ವಿಸಾ ಕೊಡಿಸುವುದಾಗಿ ಹೇಳಿ ಪಿರ್ಯಾದುದಾರರ ಕೈಯಿಂದ 40,000 ರೂ. ಹಣವನ್ನು ಮತ್ತು ಹೊರದೇಶಕ್ಕೆ ಹೋಗಲು ಟಿಕೇಟ್ ಕೊಡಿಸುತ್ತೇನೆಂದು 25,000 ರೂ. ಹಣವನ್ನು ಹಾಗೂ ಮಗಳ ಮದುವೆಗೆಂದು 1,00,000 ರೂ ಹಣವನ್ನು ಸಾಲವಾಗಿ ಪಡೆದು ವಾಪಾಸ್ಸು ಕೊಡದೇ ಮೋಸ ಮಾಡಿದುದಲ್ಲದೇ ಆರೋಪಿ ಇಸ್ಮಾಯಿಲ್ ಅಳಪೆ ರವರು ಪಿರ್ಯಾದುದಾರರಿಗೆ ನೀಡಿದ 25,000 ರೂ. ಮತ್ತು 1,40,000 ರೂ. ಹಾಗೂ 50,000 ರೂ. ಮೌಲ್ಯದ ಚೆಕ್ ಅಮಾನ್ಯಗೊಂಡಿರುವುದಾಗಿದೆ.
8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19.11.2014 ರಂದು ರಾತ್ರಿ ಪಿರ್ಯಾದುದಾರರಾದ ಶ್ರೀ ಅವಿಲ್ ಅರುಣ್ ಫರ್ನಾಂಡಿಸ್ ರವರು ತನ್ನ ಸ್ನೇಹಿತ ಹೆನ್ರಿ ಎಂಬವರ ಜೊತೆ ಮಂಗಳೂರು ನಗರದ ಜೆಪ್ಪಿನಮೊಗರು ಪೆಗಾಸಿಸ್ ಬಾರ್ & ರೆಸ್ಟೋರೆಂಟ್ನಲ್ಲಿ ಊಟ ಮುಗಿಸಿ ಪಿರ್ಯಾದುದಾರರ ಬಾಬ್ತು KA-19-P-9095ನೇ ನಂಬ್ರದ ವೇಗನಾರ್ ಕಾರಿನಲ್ಲಿ ತನ್ನ ಸ್ನೇಹಿತ ಹೆನ್ರಿಯವರನ್ನು ಕುಳ್ಳಿರಿಸಿಕೊಂಡು ಪೆಗಾಸಿಸ್ ಹೋಟೆಲಿನಿಂದ ಹೊರಟು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಮಾಡುವ ಸಮಯ ಸುಮಾರು 10:15 ಗಂಟೆ ಸಮಯಕ್ಕೆ ಪಂಪ್ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ KA-25-D-7785ನೇ ನಂಬ್ರದ ಲಾರಿಯನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯದುದಾರರ ಎದೆಗೆ ಗುದ್ದಿದ ಗಾಯ, ತಲೆಯ ಬಲಬದಿಗೆ ರಕ್ತ ಬರುವ ಗಾಯ, ಬಲಕೈ ಭುಜಕ್ಕೆ ಗುದ್ಧಿದ ಗಾಯ ಹಾಗೂ ಪಿರ್ಯಾದುದಾರರ ಸ್ನೇಹಿತ ಹೆನ್ರಿಯವರ ಎಡಕಾಲಿನ ಮಣಿಗಂಟಿಗೆ ಮೂಳೆ ಮುರಿತದ ಮತ್ತು ಬಲ ಹಲ್ಲೆಗೆ ಗುದ್ದಿದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಲ್ಲದೇ ಸದ್ರಿ ಕಾರಿನ ಮುಂಭಾಗ ಪೂರ್ಣ ಜಖಂಗೊಂಡಿದ್ದು, ಅಪಘಾತ ಉಂಟುಮಾಡಿದ ಬಳಿಕ ಆರೋಪಿ ಲಾರಿ ಚಾಲಕ ಲಾರಿ ಸಮೇತ ಅಪಘಾತ ಸ್ಥಳದಿಂದ ಪರಾರಿಯಾಗಿರುವುದಾಗಿದೆ.
No comments:
Post a Comment