ದೈನಂದಿನ ಅಪರಾದ ವರದಿ.
ದಿನಾಂಕ 19.11.2014 ರ 11:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 4 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 4 |
1.ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸಂಜಯ್ರವರು 2008ನೇ ಇಸವಿಯಲ್ಲಿ ಮಂಗಳೂರು ನಗರದ ಮಣ್ಣಗುಡ್ಡ ಎಂಬಲ್ಲಿ ವಾಸ್ತವ್ಯಕ್ಕೆಂದು ಮನೆಯನ್ನು ಕಟ್ಟಲು ಪ್ರಾರಂಬಿಸಿದ್ದು, ಸದ್ರಿ ಕಟ್ಟಡದ ಕಾಮಗಾರಿ ಮುಗಿಯುವ ಹಂತದಲ್ಲಿ ಪಿರ್ಯಾದಿಯ ತಂದೆ ಮೃತಪಟ್ಟಿದ್ದರಿಂದ ಕಾಮಗಾರಿ ತಾತ್ಕಾಲಿಕ ಸ್ಥಗಿತಗೊಳಿಸಿದ್ದು ನಂತರ ಕಾಮಗಾರಿಯನ್ನು ಪುನಃ ಪ್ರಾರಂಬಿಸಿದಾಗ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಆಪಾದಿತ ಸುಚಿಂದ್ರ ಬಿ ಅಮಿನ್ ಎಂಬುವರು ತನ್ನ ಪೈನಾನ್ಸನಿಂದ 7 ಲಕ್ಷ ರೂಪಾಯಿಗಳನ್ನು ಸಾಲವಾಗಿ ಕೊಟ್ಟಿದ್ದು ಈ ಸಾಲದ ಬಾಬ್ತು ರೂಪಾಯಿ 8ಲಕ್ಷವನ್ನು ಪಿರ್ಯಾದಿದಾರರು ಹಿಂತಿರುಗಿಸಿದರು ಕೂಡಾ ಹೆಚ್ಚಿನ ಹಣಕ್ಕಾಗಿ ಬೆದರಿಕೆ ಒಡ್ಡುತ್ತಿದ್ದು ಈತನ್ಮದ್ದೆ ಪಿರ್ಯಾದಿದಾರರು ಮನೆಯನ್ನು ಮಾರಾಟ ಮಾಡುವ ವಿಚಾರ ತಿಳಿದು ಆಪಾದಿತರು ದಿನಾಂಕ 24-06-2014ರಂದು ಬೆಳಿಗ್ಗೆ ಸುಮಾರು 10-00ಗಂಟೆಗೆ ತನ್ನ ಸಹಚರ ರಾಜು ಎಂಬಾತನನ್ನು ಪಿರ್ಯಾದಿಯ ಮನೆ ಇರುವ ಅಬ್ಬಾ ಗಾರ್ಡನ್ಗೆ ಕಳುಹಿಸಿ ಪಿರ್ಯಾದಿಗೆ ಬೆದರಿಸಿ ಆತನಿಂದ ಅಗ್ರಿಮೆಂಟ್ನ್ನು ಬಲವಂತವಾಗಿ ಪಡೆದುಕೊಂಡು ದಾಖಲಾತಿಗಳನ್ನು ನಕಲು ಮಾಡಿ ತಿರುಚಿ 03-07-2014ರಂದು ಭವಾನಿ ಶಂಕರ ಎಂಬುವರ ಹೆಸರಿನಲ್ಲಿ ಮಾಡಿಸಿಕೊಂಡು, ಪಿರ್ಯಾದಿಯ ತಮ್ಮ ಸಂಜಿತ್ ಮತ್ತು ತಂಗಿ ಸ್ವೀತಾರವರಿಗೆ ಜೀವ ಬೆದರಿಕೆ ಹಾಕಿ ಒತ್ತಾಯ ಪೂರ್ವಕವಾಗಿ ಸಹಿ ಹಾಕಿಸಿದ್ದು, ಬಳಿಕ ತದನಂತರ 02-08-2014ರಂದು ಪಿರ್ಯಾದಿಯು ಶ್ರೀಮತಿ ಪದ್ಮಜಾ ಎಂಬುವರ ಹೆಸರಿಗೆ ಮನೆ ನೊಂದಣಿ ಮಾಡಿದ್ದು ಪದ್ಮಜಾರವರು ರೂಪಾಯಿ 20ಲಕ್ಷ ಕೊಡುವ ಸಮಯದಲ್ಲಿ ಆರೋಪಿ ಸುಚಿಂದ್ರ ಬಿ ಅಮೀನ್‌ನು ತನ್ನ ಸಹಚರ ರಾಜು ಮತ್ತು ಭವಾನಿಶಂಕರ ಎಂಬುವರೊಂದಿಗೆ ಸೇರಿ ಸುಳ್ಳು ದಾಖಲೆಗಳನ್ನು ತೋರಿಸಿ ಪಿರ್ಯಾದಿಗೆ ಬಂದ 20ಲಕ್ಷದಲ್ಲಿ 17 ಲಕ್ಷ ರೂವನ್ನು ಮೊಸದಿಂದ ಪಡೆದುಕೊಂಡಿರುತ್ತಾರೆ. ಪಿರ್ಯಾದಿಯು ಆರೋಪಿತನೊಂದಿಗೆ ತಾನು ಮರು ಪಾವತಿಸಿದ ಹಣದ ದಾಖಲೆಗಳನ್ನು ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈಯ್ದು ಬೆದರಿಕೆ ಹಾಕಿದ್ದಲ್ಲದೇ ದಾಖಲೆಗಳನ್ನು ವಾಪಸ್ಸು ನೀಡದೇ ಮೊಸಮಾಡಿರುತ್ತಾರೆ. ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಉರ್ವಾ ಠಾಣೆಯಲ್ಲಿ ಅ ಕ್ರ 107/2014 ಕಲಂ 406 463 464 465 420 504 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ನೊಂದಾಯಿಸಿಕೊಂಡು ತಕ್ಷೀರು ಸ್ಥಳದ ಆಧಾರದಲ್ಲಿ ಪ್ರಕರಣವನ್ನು ಬರ್ಕೆ ಪೊಲೀಸ್ ಠಾಣೆಗೆ ವರ್ಗಾಯಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೊಂದಾಯಿಸಿಕೊಂಡಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18/11/2014 ರಂದು ಸಮಯ ಸುಮಾರು ಬೆಳಗ್ಗೆ 9:35 ಗಂಟೆಗೆ ಫಿರ್ಯಾದುದಾರರಾದ ಶ್ರೀ ಮಹೇಂದ್ರ ಕಲ್ಕುರಾ ರವರು ಕಾರು ನಂಬ್ರ KA-20-Z-0468 ನೇ ನಂಬ್ರದ ಕಾರಿನಲ್ಲಿ ಕಂಕನಾಡಿ ಕಡೆಯಿಂಧ ಉಡುಪಿ ಕಡೆಗೆ ಪ್ರಯಾಣಿಸಿತ್ತಿರುವ ವೆಳೆ ಪಂಪವೆಲ್ ವೃತ್ತ ತಲುಪುವಾಗ ಫಿರ್ಯಾಧುದಾರರ ಹಿಂದಿನಿಂದ ಲಾರಿ ನಂಬ್ರ KA-29-7936 ನೇ ದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದು ಫಿರ್ಯಾದುದಾರರ ಚಲಾಯಿಸುತ್ತಿದ್ದ ಕಾರಿನ ಬಲಭಾಗದಿಂದ ಬಂದು ಕಾರಿಗೆ ಡಿಕ್ಕಿ ಮಾಡಿದ್ದರ ಪರಿಣಾಮ ಫಿರ್ಯಾದುದಾರ ಕಾರು ಜಖಂಗೊಂಡಿರುತ್ತದೆ ಈ ಅಪಘಾತದ ಕುರಿತು ಯಾವುದೆ ಗಾಯಗಳಾಗಿರುವುದಿಲ್ಲ.
3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:17-11-2014 ರಂದು ಮಧ್ಯಾಹ್ಹ 3-00 ಗಂಟೆ ವೇಳೆಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಕೊಣಾಜೆ ವಿಶ್ವವಿದ್ಯಾನಿಲಯದ ಎಸ್ ಬಿ ಐ (ಎಟಿಎಂ) ಎದುರುಗಡೆ ಟಾರು ರಸ್ತೆಯಲ್ಲಿ ಕೊಣಾಜೆ ಕಡೆಯಿಂದ ಗ್ರಾಮಚಾವಡಿ ಕಡೆಗೆ ಆಟೋ ರಿಕ್ಷಾ ನಂಬ್ರ ಕೆಎ-19-ಎಎ-6470 ರ ಚಾಲಕ ಮಹಮ್ಮದ್ ಸಲೀಂ ಎಂಬವರು ರಿಕ್ಷಾವನ್ನು ಚಲಾಯಿಸಿಕೊಂಡು ಕೊಣಾಜೆ ವಿಶ್ವವಿದ್ಯಾನಿಲಯದ ಎಸ್ ಬಿ ಐ (ಎಟಿಎಂ) ಎದುರುಗಡೆ ತಲುಪುವಾಗ ಎದುಗಡೆಯಿಂದ ಗ್ರಾಮಚಾವಡಿ ಕಡೆಯಿಂದ -ಕೊಣಾಜೆ ಕಡೆಗೆ ತಾತ್ಕಾಲಿಕ ಕಾರು ನಂಬ್ರ ಕೆಎ-19-ಎನ್ ಟಿ:ಟಿಸಿಆರ್: 5663 ರ ಚಾಲಕ ಮಹಮ್ಮದ್ ಆಶ್ರಫ್ ಎಂಬವರು ಅತೀವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ, ರಸ್ತೆಯ ತೀರ ಬಲಗಡೆ ಬಂದು ರಿಕ್ಷಾಕ್ಕೆ ಎದುರುಗಡೆಯಿಂದ ಡಿಕ್ಕಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪಿರ್ಯಾದಿದಾರರಾದ ಮುಸ್ತಾಫ ರವರಿಗೆ ಮತ್ತು ಬದ್ರುದ್ದೀನ್ ರವರಿಗೆ ಹಾಗೂ ರಿಕ್ಷಾ ಚಾಲಕ ಮಹಮ್ಮದ್ ಸಲೀಂ ರವರಿಗೆ ಮೈ ಕೈಗೆ ಅಲ್ಲಲ್ಲಿ ರಕ್ತಗಾಯವಾಗಿರುತ್ತದೆ. ಗಾಯಾಳು ಮೂರು ಜನರು ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮುಸ್ತಾಫ್ ರವರು ಒಳ ರೋಗಿಯಾಗಿ ಹಾಗೂ ಬದ್ರುದ್ದೀನ್ ಮತ್ತು ಮಹಮ್ಮದ್ ಸಲೀಂ ರವರು ಹೊರ ರೋಗಿಯಾಗಿ ದಾಖಲಾಗಿರುತ್ತಾರೆ.
4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 17-11-2014 ರಂದು ರಾತ್ರಿ 8-30 ಗಂಟೆಗೆ ಮಂಗಳೂರು ತಾಲೂಕು, ಮಂಜನಾಡಿ ಗ್ರಾಮದ, ಕಲ್ಕಟ್ಟ ಎಂಬಲ್ಲಿ ಕಚ್ಚಾರಸ್ತೆಯಲ್ಲಿ ಸುಲೈಮಾನ್ ರವರು ನಡೆದುಕೊಂಡು ಹೋಗುತ್ತಿರುವಾಗ ಹಿಂದು ಗಡೆಯಿಂದ ನಾಟೆಕಲ್ಲು ಕಡೆಯಿಂದ - ಮಂಜನಾಡಿ ಕಡೆಗೆ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನ ನಂಬ್ರ ಕೆಎ-19-ಇಎ-7294 ರ ಸವಾರ ಮಹಮ್ಮದ್ ಇಸ್ಮಾಯಿಲ್ ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಹಿಂದುಗಡೆಯಿಂದ ಸುಲೈಮಾನ್ ಗೆ ಡಿಕ್ಕಿ ಹೊಡೆದು ಆತನಿಗೆ ಬಲಕಾಲಿನ ಕೋಲು ಕಾಲು ಕೀಲು ಮುರಿತದ ತೀವ್ರ ಗಾಯವಾಗಿರುತ್ತದೆ. ಸದ್ರಿ ಗಾಯಾಳು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಲೋಯಿಸ್ ನಝರತ್ ರವರು ಮನೆಯಲ್ಲಿ ಇಬ್ಬರೇ ವಾಸವಾಗಿದ್ದು ದಿನಾಂಕ:17-11-2014 ರಂದು ಆರೋಪಿ ಶ್ರೀಮತಿ ನೆಲ್ಲಿ ಮೊನಿಸ್ ರವರು ಹಾಕಿದ ಸಿವಿಲ್ ಕೇಸ್ ತನಿಖೆಗೆ ಇದ್ದುದರಿಂದ ಪಿರ್ಯಾದಿದಾರರು ಬರುತ್ತಿರುವಾಗ ಬೆಳಿಗ್ಗೆ 10:00 ಗಂಟೆಗೆ ಆರೊಪಿಯು ಅವರ ಕೆಲಸಗಾರರಿಂದ ಪಿರ್ಯಾದಿದಾರರಿಗೆ ಸೇರಿದ ಹೊಸಬೆಟ್ಟು ಗ್ರಾಮದ ಸರ್ವೇ ನಂ 1/9 ಇದಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದುದಾರರ ಸ್ಥಳದ ಹುಲ್ಲನ್ನು ತೆಗೆಯುತ್ತಿದ್ದು ಈ ಬಗ್ಗೆ ಆರೋಪಿಗಳಲ್ಲಿ ಕೇಳಿದರೆ ಪಿರ್ಯಾದಿದಾರರ ಜೀವಕ್ಕೆ ಅಪಾಯವಿದೆ ಎಂದು ತಿಳಿದು ಅರೋಪಿಯಲ್ಲಿ ಏನು ಹೇಳದೆ ಆರೋಪಿಗಳು ಪಿರ್ಯಾದಿಯ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ಬಗ್ಗೆ ಪಿರ್ಯಾದಿ ನೀಡಿದ್ದು ಏಕೆಂದರೆ ಈ ಮೊದಲು ಸಹ ಆರೋಪಿಗಳು ಪಿರ್ಯಾದಿದಾರರಿಗೆ ತುಂಬಾ ತೊಂದರೆ ಕೊಟ್ಟಿದ್ದು ಈಗಲೂ ಅವರ ಕುಕೃತ್ಯವನ್ನು ಮುಂದುವರಿಸಿರುತ್ತಾರೆ.
6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಸುರತ್ಕಲ್ ಪೊಲೀಸ್ ಠಾಣೆ ಅಪರಾಧ ವಿಭಾಗದ ಪೊಲಿಸ್ ಉಪ ನಿರೀಕ್ಷಕ ಕುಮಾರೇಶ್ವರನ್ ಎಂ ರವರಿಗೆ ದಿನಾಂಕ 18-11-2014 ರಂದು 11-00 ಗಂಟೆಯ ಸಮಯಕ್ಕೆ ಠಾಣೆಯಲ್ಲಿರುವಾಗ ಕಾಟಿಪಳ್ಳ ಗ್ರಾಮದ ಚೊಕ್ಕಬೆಟ್ಟು 6 ನೇ ಬ್ಲಾಕ್‌ನ ಚಕ್ರವರ್ತಿ ಮೈದಾನದ ಬಳಿ ಒಬ್ಬ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಪಂಚರನ್ನು ಮತ್ತು ಠಾಣಾ ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಬೆಳಿಗ್ಗೆ 11-45 ಗಂಟೆಗೆ ತಲುಪಿದಾಗ ಜಾವೇದ್ ಅಖ್ತಾರ್ @ ಜಾವಿ @ ಜಾವೀದ್ ಪ್ರಾಯ: 27 ವರ್ಷ ತಂದೆ: ಅಬ್ದುಲ್ ಅಜೀಜ್, ವಾಸ: ಸಲಾಪಿ ಮಸೀದಿ ಬಳಿ ಚೊಕ್ಕಬೆಟ್ಟು 8ನೇ ಬ್ಲಾಕ್ ಕಾಟಿಪಳ್ಳ ಗ್ರಾಮ ಮಂಗಳೂರು ತಾಲೂಕು ಎಂಬಾತನು ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಅಮಾನುಸ್ಪದವಾಗಿ ಸುತ್ತಾಡುತ್ತಿದ್ದು ಆತನ ಕೈಯಲ್ಲಿದ್ದ ಕಪ್ಪು ಪ್ಲಾಸ್ಟಿಕ್ ಲಕೋಟೆಯನ್ನು ಪರಿಶೀಲಿಸಿದಾಗ ಅದರೋಳಗೆ ಗಾಂಜಾ ವಾಸನೆ ಬರುತ್ತಿದ್ದು, ಅದರೋಳಗೆ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಲಕೋಟೆಯಲ್ಲಿ ಗಾಂಜಾದ ಸೊಪ್ಪು ಮತ್ತು ಮೊಗ್ಗುಗಳು ಇದ್ದು ಮತ್ತು 17 ಚಿಕ್ಕ ಚಿಕ್ಕ ಗಾಂಜಾ ಸೊಪ್ಪು ಮತ್ತು ಮೊಗ್ಗುಗಳು ಇರುವ ಪ್ಯಾಕೆಟ್‌ಗಳು ಇರುವುದು ಕಂಡು ಬಂದಿದ್ದು, ಅಲ್ಲದೇ ಚೀಲದಲ್ಲಿ ರೂ: 100 ರ 4 ನೋಟುಗಳು ಒಟ್ಟು 400 ರೂ ಗಳು ಇದ್ದು ಇದು ಗಾಂಜಾ ಮಾರಾಟ ಮಾಡಿ ಬಂದ ಹಣ ಎಂದು ಆತನು ತಿಳಿಸಿದ್ದು, ಆತನು ಯಾವುದೇ ದಾಖಲೆ ಪತ್ರಗಳು ಇಲ್ಲದೇ ಅಕ್ರಮವಾಗಿ ಗಾಂಜಾ ಮರಾಟ ಮಾಡುತ್ತಿರುವುದಾಗಿದೆ.
7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 16.11.2014 ರಂದು ಪಿರ್ಯಾದಿದಾರರಾದ ಶ್ರೀ ಸುಧಾಕರ ಸಾಲ್ಯಾನ್ ರವರು ತನ್ನ ಬಾಬ್ತು KA19EF0350 ನೇ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಾ ಕುಡುಪು ಎಂಬಲ್ಲಿ ತಲುಪಿದಾಗ ಸಮಯ ಮಧ್ಯಾಹ್ನ ಸುಮಾರು 3.00 ಗಂಟೆಗೆ ವಾಮಂಜೂರು ಕಡೆಯಿಂದ KA19AC33 ನೇ ಸಿಟಿ ಬಸ್ಸನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್‌ಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರ ಬೈಕ್‌ನ ಹಿಂದಿನ ಚಕ್ರ, ಗೇರ್ ವೀಲ್, ಸೈಲೆನ್ಸರ್‌ಗಳಿಗೆ ತುಂಬಾ ಜಖಂ ಆಗಿರುತ್ತದೆ.
8.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 18-11-2014 ರಂದು ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಚಲುವರಾಜು ಬಿ. ರವರು ಠಾಣೆಯಲ್ಲಿರುವ ಸಮಯ ಸಂಜೆ ಸುಮಾರು 16:35 ಗಂಟೆಗೆ ಮಂಗಳೂರು ನಗರದ ಕುದ್ರೋಳಿ ಕಸಬಾ ಬೆಂಗರೆಯ ಟಿಪ್ಪು ಸುಲ್ತಾನ ನಗರದ ಸಲಾಫಿ ಮಸೀದಿ ಬಳಿ ಇರುವ ಗುರುಪುರ ನದಿ ಕಿನಾರೆಯ ಮೈದಾನದಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ ಎಂಬುದಾಗಿ ಖಚಿತ ವರ್ತಮಾನ ಸಿಕ್ಕಿದ ಮೇರೆಗೆ ಮೇಲಾಧಿಕಾರಿಗಳಿಗೆ ತಿಳಿಸಿ ಠಾಣಾ ಸಿಬ್ಬಂಧಿಗಳಾದ ಪಿ.ಎಸ್.ಐ ಕ್ರೈಂ ಮದನ್ ಪಿಸಿ 329 ನೇ ರಾಜೇಶ್ ಆಳ್ವಾ, ಹೆಚ್ ಸಿ 672 ನೇ ಸುಜನ್, ಪಿಸಿ 378 ನೇ ಶ್ರೀ ಶೈಲ್ ಹಾಗೂ ಪಂಚರೊಂದಿಗೆ ಇಲಾಖಾ ವಾಹನ ನಂಬ್ರ ಕೆಎ-19-ಜಿ-596 ರಲ್ಲಿ ಠಾಣೆಯಿಂದ ಹೊರಟು ಟಿಪ್ಪು ಸುಲ್ತಾನ್ ನಗರ ಸಲಾಫಿ ಮಸೀದಿ ಬಳಿ ಒರ್ವ ವ್ಯಕ್ತಿಯೂ ಕೆಂಪು ಬಣ್ಣದ ಬಿಳಿ ಗೆರೆಗಳಿರುವ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಗಾಂಜಾದಂತ ವಸ್ತು ಇಟ್ಟುಕೊಂಡಿದ್ದು, ಆತನ ಹೆಸರು ವಿಳಾಸ ಕೇಳಿದಾಗ ಆತನ ಹೆಸರು ಸಾದೀಕ್ @ ಸಾಜಿ ಪ್ರಾಯ 29 ವರ್ಷ,ತಂದೆ: ಇಬ್ರಾಹಿಂ, ವಾಸ: ಮೊಹಿದ್ದೀನ್ ಪಳ್ಳಿಯ ಬಳಿ ಕುದ್ರೋಳಿ ಎಂಬುದಾಗಿ ತಿಳಿಸಿದ್ದು, ಆತನ ಅಂಗ ಜಫ್ತಿ ಮಾಡಲಾಗಿ ಪ್ಯಾಂಟ್ ನ ಕಿಸೆಯಲ್ಲಿದ್ದ ಆರು ಸಣ್ಣ ಗಾಂಜಾ ಪ್ಯಾಕೇಟ್ ಕೈಯಲ್ಲಿದ್ದ ಕೆಂಪು ತೊಟ್ಟೆಯನ್ನು ಪರಿಶೀಲಿಸಿದಾಗ ಅದರಲ್ಲಿ ಗಾಂಜಾದ ದೊಡ್ಡ ಪ್ಯಾಕೇಟ್ ಇದ್ದು, ಆತನ ಅಂಗಿಯ ಕಿಸೆಯಲ್ಲಿ ರೂ. 250/- ನಗದು, ಅದರ ಜೊತೆ ಒಂದು ಹಳೆಯ ನೋಕಿಯೋ ಮೊಬೈಲ್ ಕಂಡು ಬಂದಿದ್ದು, ತೂಕ ಮಾಡಿದಾಗ ಸಣ್ಣ ಗಾಂಜಾ ಪ್ಯಾಕೇಟ್ ತಲಾ ನಾಲ್ಕು ಗ್ರಾಂ ಇದ್ದು, ಕೆಂಪು ತೊಟ್ಟೆಯಲ್ಲಿದ್ದ ಗಾಂಜಾದ ತೂಕವು 250 ಗ್ರಾಂ ಇದ್ದು, ಇದರ ಬೆಲೆ ಸುಮಾರು 8000/- ಆಗಬಹುದು ಸ್ಥಳದಲ್ಲಿಯೇ ಪಂಚನಾಮೆಯನ್ನು ಬರೆದು ಆರೋಪಿ ಜಫ್ತಿ ಮಾಡಿದ ಗಾಂಜಾ ಮೊಬೈಲ್ ಮತ್ತು ರೂಪಾಯಿ 250/- ನಗದನ್ನು ಠಾಣೆಗೆ ತಂದು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿದೆ.
No comments:
Post a Comment