Friday, November 21, 2014

Daily Crime Report 21-11-2014

ದಿನಾಂಕ 21.11.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ        

:

2

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

5

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 17.11.2014 ರಂದು ಮಧ್ಯಾಹ್ನ 14.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅನ್ವರ್ ಹುಸೇನ್ ಎಂಬವರು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಕಡೆಯಿಂದ ಹಂಪನಕಟ್ಟೆ ಕಡೆಗೆ ತನ್ನ ಬಾಬ್ತು ಕಾರು ನಂಬ್ರ ಕೆಎ.20.ಎನ್ 6649ನೇದನ್ನು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಹಂಪನಕಟ್ಟೆ  ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ  ಹಂಪನಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಯುನಿವರ್ಸಿಟಿ ಕಾಲೇಜ್ ಎದುರು ತಲುಪುತ್ತಿದ್ದಂತೆ ಟ್ಯಾಂಕರ್ ನಂಬ್ರ ಕೆಎ.11.1786ನೇದನ್ನು ಅದರ ಚಾಲಕ ಹಿಮ್ಮುಖವಾಗಿ ನಿರ್ಲಕ್ಷ್ಯ ತನದಿಂದ ಚಲಾಯಿಸಿ ಪಿರ್ಯಾದಿದಾರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೋನೆಟ್ ಮತ್ತು  ಮುಂಭಾಗಕ್ಕೆ ಜಖಂ ಉಂಟಾಗಿರುತ್ತದೆ.

 

2.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20/11/2014 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಮುಲ್ಕಿ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಮಚಂದ್ರ ನಾಯಕ್ ರವರಿಗೆ ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿಯಂತೆ ಪಡುಪಣಂಬೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ, ಬೆಳಿಗ್ಗೆ ಸುಮಾರು 7-45 ಗಂಟೆಗೆ ಮುಲ್ಕಿ ಕಡೆಯಿಂದ ಬರುತ್ತಿದ್ದ ಆಕ್ಟೀವ್ ಹೋಂಡಾ KA 19R 2887ನೇದನ್ನು ನಿಲ್ಲಿಸಿ ಅದರ ಸವಾರ ಅಬ್ದುಲ್ ಜಬ್ಬರ್ ಈತನಲ್ಲಿ ಆಕ್ಟೀವ್ ಹೋಂಡಾದ ಎದುರಿನಲ್ಲಿ ಇಟ್ಟಿದ್ದ ಗೋಣಿ ಚೀಲದ ಬಗ್ಗೆ ವಿಚಾರಿಸಿದಾಗ ಸದ್ರಿ  ಗೋಣಿ ಚೀಲದಲ್ಲಿ ದನದ  ಕಡಿದ ಮಾಂಸ ಇರುವುದಾಗಿಯೂ, ಸದ್ರಿ ದನದ ಮಾಂಸದ ಬಗ್ಗೆ ಯಾವುದೇ ಪರವಾನಿಗೆ ಇದೆಯೇ ಎಂದು ಕೇಳಿದಾಗ ಯಾವುದೇ ದಾಖಲಾತಿ ಇಲ್ಲವೆಂದು ತಿಳಿಸಿ ಸದ್ರಿ  ದನದ ಮಾಂಸವನ್ನು  ಕಾರ್ನಾಡು  ಮಹಮ್ಮದ್ ಆಲಿ ಎಂಬವರ ಮನೆಯಿಂದ ಕಡಿದು ತಂದಿರುವುದಾಗಿ ತಿಳಿಸಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ  ಸುಮಾರು 5000/- ರೂ ಮೌಲ್ಯದ 36 ಕೆ.ಜಿ ದನದ ಮಾಂಸ ಮತ್ತು ಸಾಗಟಕ್ಕೆ ಬಳಸಿದ ಸ್ಕೂಟರ್ ನ್ನು ಮಹಜರು ಮುಖೇನಾ ಸ್ವಾಧೀನಪಡಿಸಿದ್ದಾಗಿದೆ.

 

3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-11-2014 ರಂದು ಮದ್ಯಾಹ್ನ 12-30 ರಿಂದ 13-00 ಗಂಟೆ ಮಧ್ಯೆ ಮಂಗಳೂರು ನಗರದ ಆರ್ಯ ಸಮಾಜ ಹಾಲ್ ನಲ್ಲಿ ಶ್ರೀರಾಮಸೇನೆಯ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ರವರು ಪತ್ರಿಕಾಗೋಷ್ಠಿ ನಡೆಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಅತ್ಯಾಚಾರಿಗಳ ಕೈ ಕಡಿಯಿರಿ ಅವರುಗಳ ನ್ಯಾಯಾಲಯದ ವೆಚ್ಚವನ್ನು ನಾವು ಭರಿಸುತ್ತೇವೆ ಎಂಬಿತ್ಯಾದಿಯಾಗಿ ಪ್ರಚೋದನಕಾರಿಯಾಗಿ ಮಾತನಾಡಿ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾದ್ಯತೆ ಗಳಿವೆ ಎಂಬುವುದಾಗಿ ಬಾತ್ಮೀದಾರರುಗಳಿಂದ ಮಾಹಿತಿಗಳು ಬಂದ ಕಾರಣ ದಿನಾಂಕ 17-11-2014 ರ ದಿನ ಪತ್ರಿಕೆಗಳಾದ ಉದಯವಾಣಿ, ವಿಜಯ ಕರ್ನಾಟಕ, ವಾರ್ತಾಬಾರತಿ ಇತ್ಯಾದಿ ದಿನ ಪತ್ರಿಕೆಗಳನ್ನು ನೋಡಿದಾಗ ಪ್ರತಿಯೊಂದರಲ್ಲಿ ಮೇಲೆ ತಿಳಿಸಿರುವ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿರುವ ವಿಚಾರ ತಿಳಿದು ಬಂದಿದ್ದು, ಗಮನಿಸಲಾಗಿ ಇದು ಒಂದು ಸಾರ್ವಜನಿಕರ ನೆಮ್ಮದಿಯನ್ನು ಕೆಡಿಸುವ ಹೇಳಿಕೆಯಾಗಿದ್ದು, ಇದರಿಂದ ಯುವ ಜನಾಂಗ ಮತ್ತು ಸಾರ್ವಜನಿಕರು ಕಾನೂನು ಕೈಗೆತ್ತಿಕೊಂಡು ಸಮಾಜದಲ್ಲಿ ಅಶಾಂತಿ  ಉಂಟು ಮಾಡುವ ಸಾದ್ಯತೆ ಕಂಡು ಬರುವ ಹಿನ್ನೆಯಲ್ಲಿ ಸದ್ರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ ಶ್ರೀರಾಮಸೇನೆ ಅಧ್ಯಕ್ಷರಾದ ಶ್ರೀ ಪ್ರಮೋದ್ ಮುತಾಲಿಕ್ ರವರ ವಿರುದ್ದ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ  ದಾಖಲಿಸಿರುವುದಾಗಿದೆ.

 

4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-11-2014 ರಂದು ಬೆಳಿಗ್ಗೆ ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಚಲುವರಾಜು ಬಿ. ರವರು ಠಾಣೆಯಲ್ಲಿರುವಾಗ ಪೊಲೀಸ್ ಬಾತ್ಮೀದಾರರೊಬ್ಬರು ಠಾಣಾ ಸರಹದ್ದಿನ ಉತ್ತರ ದಕ್ಕೆ ಬಳಿ ಇರುವ ಅಜೀಜ್ ಎಂಡ್ ಕೋ  ಗೋಡಾನ ಬಳಿ ನಿರ್ಮಾಣ ಹಂತದಲ್ಲಿರುವ ವಾಟರ್ ಟ್ಯಾಂಕ್ ನ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡಲು ನಿಂತಿರುವುದಾಗಿ ಮಾಹಿತಿ ಬಂದ ಮೇರೆಗೆ ತಾಲೂಕು ದಂಡಾಧಿಕಾರಿ ಮತ್ತು ಠಾಣಾ ಸಿಬ್ಬಂಧಿದಾರರ ಜೊತೆ ಸ್ಥಳಕ್ಕೆ ಹೋದಾಗಾ ಆರೋಪಿ ಗಳಲ್ಲಿ ಅನ್ಸಾರ್ @ ಭಂಗಿ ಅನ್ಸಾರ್ ಕೈಯಲ್ಲಿದ್ದ ಗಾಂಜಾ ಇರುವ ಕೈ ಚೀಲವನ್ನು ಸ್ಥಳದಲ್ಲಿ ಎಸೆದು ಹೋಗಿದ್ದು, 430 ಗ್ರಾಂ ತೂಕದ ಗಾಂಜಾ ಇರುತ್ತದೆ. ಹಾಗೂ  ಇನ್ನೋರ್ವ ವ್ಯಕ್ತಿಯಾದ ಕೆ ಪಿ ಸಂಶುದ್ದೀನ್ ರವರನ್ನು ದಸ್ತಗಿರಿ ಮಾಡಿ ಶೋಧನೆ ನಡೆಸಿದಾಗ ಆತನ ಬಳಿ 3 ಕಿಲೋ 400 ಗ್ರಾಂ ತೂಕದ ಗಾಂಜಾ ಇದ್ದುಮತ್ತು ಆತನ ವಶದಲ್ಲಿದ್ದ ಸ್ಯಾಮ್ ಸಂಗ್ ಕಂಪೆನಿಯ ಮೊಬೈಲ್ ಹ್ಯಾಂಡ್ ಸೆಟ್, ಚುನಾವಣಾ ಆಯೋಗದ ಗುರುತಿನ ಚೀಟಿ, ಮತ್ತು 500/- ರೂ ನಗದನ್ನು ಸ್ವಾಧೀನಪಡಿಸಲಾಗಿದೆ.

 

5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಆನಂದ ಮಥಾಯಿಸ್ ರವರು ಮಂಗಳೂರು ಶರವು ಗಣಪತಿ ದೇವಸ್ಥಾನ ರಸ್ತೆಯ ಬಳಿ "ಸಿಗ್ನೇಚರ್" ಎಂಬ ಬಟ್ಟೆ ಅಂಗಡಿಯ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದು, ಇದು ಮೆ. ಎಲ್ಜಯ್ ಎಂಟರ್ ಪ್ರೈಸಸ್ ಎಂಬ ಹೆಸರಿಗೆ ಒಳಪಟ್ಟಿದ್ದು, ಪಿರ್ಯಾದಿದಾರರು ಅಂಗಡಿಯ ಅಕೌಂಟ್ ಚೆಕ್ ಮಾಡುವ ಸಮಯ ಕಳೆದ 12 ತಿಂಗಳಲ್ಲಿ ಅಂಗಡಿ ಸ್ಟಾಕ್ ನಲ್ಲಿ ಬಹು ದೊಡ್ಡ ವ್ಯತ್ಯಾಸ ಕಂಡು ಬಂದಿದ್ದು, ಈ ಬಗ್ಗೆ ಅಂಗಡಿಯಲ್ಲಿ ಸುಮಾರು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಕೆಲಸ ಮಾಡಿಕೊಂಡಿದ್ದ ಅಂಗಡಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಿಬ್ಬಂದಿ ಸಂದೀಪ್ ಎಂಬವರಲ್ಲಿ ತೀವ್ರವಾಗಿ ವಿಚಾರಿಸಿದಾಗ ತಾನು ಅಂಗಡಿಯಲ್ಲಿದ್ದ ಬೆಲೆಬಾಳುವ ಶರ್ಟ್ ಮತ್ತು ಇತರೇ ಬಟ್ಟೆಬರೆಗಳನ್ನು ಅಂಗಡಿಯಿಂದ ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಕದ್ದ ವಸ್ತುವನ್ನು ತನ್ನ ಹತ್ತಿರದ ಸ್ನೇಹಿತರಿಗೆ ಮತ್ತು ಗ್ರಾಹಕರಿಗೆ ಮಾರಿರುವುದಾಗಿ, ಸುಮಾರು ರೂ. 55,000/- ಬೆಲೆಬಾಳುವ 15 ಶರ್ಟ್ ಮತ್ತು 9 ಟ್ರೌಸರ್ಸ್ ಬಟ್ಟೆಬರೆಗಳನ್ನು ಮನೆಯಲ್ಲಿ ಇರಿಸಿರುವುದಾಗಿ, ಒಟ್ಟಾರೆ ಅಂಗಡಿಯಿಂದ ಆರೋಪಿ ಸಂದೀಪನು ರೂ. 6 ರಿಂದ 7 ಲಕ್ಷ ಬೆಲೆಬಾಳುವ 300 ರಿಂದ 350 ಬಟ್ಟೆಬರೆಗಳನ್ನು ಕಳವು ಮಾಡಿರುವುದಾಗಿ ಅಲ್ಲದೇ ಇದೇ ರೀತಿ ಈ ಹಿಂದೆ ಸುಮಾರು 6 ತಿಂಗಳು ಅಂಗಡಿಯಲ್ಲಿ ಕೆಲಸ ಮಾಡಿದ್ದ ಸುರೇಶ್ ಎಂಬವರು ಆರೋಪಿ ಸಂದೀಪ್ ಜೊತೆಗೂಡಿ ಬಟ್ಟೆಬರೆಗಳನ್ನು ಕಳವು ಮಾಡಿ ಹೊರಗಿನ ಅವನ ಸ್ವಂತ ಗ್ರಾಹಕರಿಗೆ ಮಾರಿರುವುದು ಕೂಡ ವಿಚಾರಣೆ ಸಮಯ ಬೆಳಕಿಗೆ ಬಂದಿದ್ದು,  ಆರೋಪಿ ಸುರೇಶ್ ನು  ರೂ. 1 ರಿಂದ 1.5 ಲಕ್ಷ ಬೆಲೆಬಾಳುವ 50 ರಿಂದ 75 ಬಟ್ಟೆಬರೆಗಳನ್ನು ಕಳವು ಮಾಡಿರುವುದಾಗಿ, ಅಲ್ಲದೇ ಈ ಹಿಂದೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಆರೋಪಿ ಸಲೀಮ್ ಮಲ್ಲಿಕ್ ನು ಆರೋಪಿ ಸಂದೀಪ್ ನಿಗೆ ಕಳವು ಕೃತ್ಯಕ್ಕೆ ಟ್ರೀಕ್ಸ್ ನೀಡಿದ್ದು, ಆರೋಪಿ ಸಲಿಮ್ ಮಲ್ಲಿಕ್ ನು ಕೂಡ ಸುಮಾರು 200 ಸಂಖ್ಯೆಯ ಬಟ್ಟೆಬರೆಗಳನ್ನು ಪಿರ್ಯಾದಿದಾರರ ಅಂಗಡಿಯಿಂದ ಕಳವು ಮಾಡಿದ್ದು, ಆರೋಪಿಗಳು ನಂಬಿಕೆ ದ್ರೋಹವೆಸಗಿ, ಮೋಸದಿಂದ ವಂಚನೆ ಮಾಡಿರುವುದಾಗಿದೆ.

 

6.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಇಸ್ಮಾಯಿಲ್ ಬಶೀರ್ ರವರು ಮಂಗಳೂರು ಬಂದರ್ ನಲ್ಲಿ ಸ್ಕ್ರಾಫ್ ಸೆಂಟರ್ ಎಂಬ ಹೆಸರಿನ ಗುಜರಿ ಅಂಗಡಿಯನ್ನಿಟ್ಟು ವ್ಯಾಪಾರ ಮಾಡಿಕೊಂಡಿದ್ದು, ವ್ಯವಹಾರಕ್ಕೆ ಮಂಗಳೂರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಹಂಪನಕಟ್ಟಾ ಶಾಖೆ ಮಂಗಳೂರು ನಲ್ಲಿ ಓ.ಡಿ. ಖಾತೆ ನಂಬ್ರ 1189200610 ಮತ್ತು ಉಳಿತಾಯ ಖಾತೆ ನಂಬ್ರ 1189236171 ನೇಯದ್ದನ್ನು ಹೊಂದಿದ್ದು, ಇದರೊಂದಿಗೆ ಇನ್ನು ಎರಡೂ ಸಾಲದ ಖಾತೆಗಳಿದ್ದು, ವ್ಯವಹಾರದ ದೃಷ್ಟಿಯಿಂದ ಬ್ಯಾಂಕ್ ನಿಂದ ಚೆಕ್ ಪುಸ್ತಕಗಳನ್ನು ಪಡೆಯುತ್ತಿದ್ದು, ದೂರದ ಸಂಬಂಧಿ ಮಹಮ್ಮದ್ ಸಾದಿಕ್ ಎಂಬವರನ್ನು ಕೆಲಸಕ್ಕಿದ್ದು, ದಿನಾಂಕ 06-05-2014 ರಂದು ಪಿರ್ಯಾದಿದಾರರ ಮೊಬೈಲ್ ದೂವಾಣಿಗೆ ರೂ. 10,000/- ನಗದು ಪಡೆದುಕೊಂಡ ಬಗ್ಗೆ ಮೇಸೆಜ್ ಬಂದಿದ್ದು, ಈ ಬಗ್ಗೆ ಬ್ಯಾಂಕ್ ಗೆ ಹೋಗಿ ವಿಚಾರಿಸಿದ್ದಲ್ಲಿ ತಪ್ಪಿ ಮೇಸೆಜ್ ಬಂದಿರುವುದಾಗಿ ತಿಳಿಸಿದ್ದು, ಸಂಶಯ ಬಂದು ಪುನಃ ವಿಚಾರಿಸಿದಾಗ ಖಾತೆಯಿಂದ ಕಡಿತಗೊಳಿಸಿ ಬೇರೆ ಸಾಲದ ಖಾತೆಗೆ ಜಮಾ ಕೊಟ್ಟಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಬ್ಯಾಂಕ್ ನವರಲ್ಲಿ 2 ಖಾತೆಗಳ ಈ ಮೊದಲು ಪಡೆದ ಚೆಕ್ಕುಗಳ ವಿವರ ನೀಡುವಂತೆ ಕೇಳಿಕೊಂಡು, ಪರಿಶೀಲಿಸಿದ್ದಲ್ಲಿ ಚೆಕ್ ನ ಮೇಲಿರುವ ಸಹಿಗಳು, ಸ್ಪೆಸಿಮನ್ ಸಹಿಗೂ ತಾಳೆ ಹೊಂದದೇ ವ್ಯತ್ಯಾಸ ಕಂಡು ಬಂದಿದ್ದು, ದಿನಾಂಕ 07-02-2014 ರಂದು ಹಾಗೂ ದಿನಾಂಕ 07-02-2013 ರಂದು ಚೆಕ್ಕು ಪುಸ್ತಕ ನಂಬ್ರ 91491 ರಿಂದ 91500 ಹಾಗೂ 95601 ರಿಂದ 95650 ನೇ ಚೆಕ್ ಗಳಲ್ಲಿ ಪಿರ್ಯಾದಿದಾರರ ಸಹಿಯನ್ನು ಪೊರ್ಜರಿ ಮಾಡಿ ರೂ. 7,85,552/- ನಗದನ್ನು ಆರೋಪಿ ಮಹಮ್ಮದ್ ಸಾದಿಕ್ ಮತ್ತು ಬ್ಯಾಂಕಿನ ಸಿಬ್ಬಂದಿಯವರು ಮೋಸದಿಂದ ಪಡೆದು ವಂಚನೆ ಮಾಡಿರುವುದಾಗಿದೆ.

 

7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ   20.11.2014  ರಂದು  ಸಂಜೆ ಸುಮಾರು  5:30 ಗಂಟೆ ಸಮಯಕ್ಕೆ  ಈ ಪ್ರಕರಣ  ಪಿರ್ಯಾದಿದಾರರಾದ ಶ್ರೀ ರತನ್ಕೆ. ಎಂಬವರು  ಮಂಗಳೂರು ತಾಲೂಕು  ಕಲ್ಲಮುಂಡ್ಕೂರು  ಗ್ರಾಮದ ಕಲ್ಲಮುಂಡ್ಕೂರು  ವ್ಯವಸಾಯ  ಸಹಕಾರಿ  ಸಂಘದ ಸ್ವಲ್ಪ  ಮುಮದಕ್ಕೆ ಮೇಘನಾಥ್ಎಂಬವರ ಟೈಲರ್ಅಂಗಡಿಗೆ  ಪ್ಯಾಂಟ್ಗೆ ಸ್ಟಿಚ್‌   ಹಾಕಲು  ಹೋಗಿದ್ದು  ಆ ಸಮಯ  ಪಕ್ಕದ ವೆಲ್ಡಿಂಗ್ಅಂಗಡಿಯ  ರಾಕೇಶ್‌  ( ಕ್ರಿಶ್ಚಿಯನ್ಎಂಬಾತನು  ವ್ಯಥಾ  ರೀತಿಯಲ್ಲಿ  ಪಿರ್ಯಾದಿದಾರರ ಬಳಿ  ಬಂದು ಏಕವಚನದಿಂದ ಜಾತಿ ನಿಂದನೆ ಮಾಡಿದ್ದು, ಪಿರ್ಯಾದಿದಾರರು ಪರಿಶಿಷ್ಟ ಜಾತಿಯ ಆದಿದ್ರಾವಿಡ ಪಂಗಡದವರಾಗಿದ್ದು, ತಮ್ಮ ಜಾತಿಯ  ಭಾವನೆಗಳಿಗೆ ದಕ್ಕೆ ಉಂಟಾಗುವ  ರೀತಿಯಲ್ಲಿ  ಆರೋಪಿ  ರಾಕೇಶ್‌  ಮಾತನಾಡಿರುವುದಾಗಿದೆ.

 

8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 14-11-2014 ರಂದು ಪಿರ್ಯಾದುದಾರರಾದ ಶ್ರೀಮತಿ ಬೇಬಿ ರವರು ಮಂಗಳೂರು ತಾಲೂಕಿನ ಕೆಂಜಾರು ಗ್ರಾಮದ ವಿಮಾನ ನಿಲ್ದಾಣದ ಎದುರುಗಡೆ ತನ್ನ ಗಂಡನೊಂದಿಗೆ ಬರುತ್ತಿರುವಾಗ ಮಧ್ಯಾಹ್ನ ಸಮಯ 3-10 ರಿಂದ 3-15 ಒಳಗಿನ ಅವಧಿಯಲ್ಲಿ ಒಂದು ಹೆಂಗಸು ತನ್ನ ನಿರ್ಲಕ್ಷತನದಿಂದ ತನ್ನ ಲಗೇಜು ತುಂಬಿದ ಟ್ರಾಲಿಯನ್ನು ಹಿಂದಿನಿಂದ ಪಿರ್ಯಾದಿದಾರರ ಮೇಲೆ ಹರಿಸಿದ ಪರಿಣಾಮ ಪಿರ್ಯಾದಿದಾರರ ಕೈಕಾಲುಗಳಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ  14-11-2014 ರಂದು ಒಮೇಗಾ ಆಸ್ಪತ್ರೆಯಲ್ಲಿ ಎಕ್ಸರೇ ತೆಗೆಸಿ, ದಿನಾಂಕ 15-11-2014 ರಂದು ತೇಜಸ್ವಿನಿ ಆಸ್ಪತ್ರೆ ಮಂಗಳೂರಿನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸಾ ವೆಚ್ಚವನ್ನು ಪಿರ್ಯಾದಿದಾರರೇ ಭರಿಸಿರುವುದಾಗಿದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19.11.2014 ರಂದು ರಾತ್ರಿ ಪಿರ್ಯಾದುದಾರರಾದ ಶ್ರೀ ಅವಿಲ್ ಅರುಣ್ ಫರ್ನಾಂಡಿಸ್ ರವರು ತನ್ನ ಸ್ನೇಹಿತ ಹೆನ್ರಿ ಎಂಬವರ ಜೊತೆ ಮಂಗಳೂರು ನಗರದ ಜೆಪ್ಪಿನಮೊಗರು ಪೆಗಾಸಿಸ್ ಬಾರ್ & ರೆಸ್ಟೋರೆಂಟ್ನಲ್ಲಿ ಊಟ ಮುಗಿಸಿ ಪಿರ್ಯಾದುದಾರರ ಬಾಬ್ತು KA-19-P-9095ನೇ ನಂಬ್ರದ ವೇಗನಾರ್ ಕಾರಿನಲ್ಲಿ ತನ್ನ ಸ್ನೇಹಿತ ಹೆನ್ರಿಯವರನ್ನು ಕುಳ್ಳಿರಿಸಿಕೊಂಡು ಪೆಗಾಸಿಸ್ ಹೋಟೆಲಿನಿಂದ ಹೊರಟು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಮಾಡುವ ಸಮಯ ಸುಮಾರು 10:15 ಗಂಟೆ ಸಮಯಕ್ಕೆ ಪಂಪ್ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ KA-25-D-7785ನೇ ನಂಬ್ರದ ಲಾರಿಯನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯದುದಾರರ ಎದೆಗೆ ಗುದ್ದಿದ ಗಾಯ, ತಲೆಯ ಬಲಬದಿಗೆ ರಕ್ತ ಬರುವ ಗಾಯ, ಬಲಕೈ ಭುಜಕ್ಕೆ ಗುದ್ಧಿದ ಗಾಯ ಹಾಗೂ ಪಿರ್ಯಾದುದಾರರ ಸ್ನೇಹಿತ ಹೆನ್ರಿಯವರ ಎಡಕಾಲಿನ ಮಣಿಗಂಟಿಗೆ ಮೂಳೆ ಮುರಿತದ ಮತ್ತು ಬಲ ಹಲ್ಲೆಗೆ ಗುದ್ದಿದ ಗಾಯಗೊಂಡವರು ಚಿಕಿತ್ಸೆಯ ಬಗ್ಗೆ ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಲ್ಲದೇ ಸದ್ರಿ ಕಾರಿನ ಮುಂಭಾಗ ಪೂರ್ಣ ಜಖಂಗೊಂಡಿದ್ದು, ಅಪಘಾತ ಉಂಟುಮಾಡಿದ ಬಳಿಕ ಆರೋಪಿ ಲಾರಿ ಚಾಲಕ ಲಾರಿ ಸಮೇತ ಅಪಘಾತ ಸ್ಥಳದಿಂದ ಪರಾರಿಯಾಗಿರುವುದು.

 

No comments:

Post a Comment