Monday, November 10, 2014

Daily Crime Reports 10-11-2014

ದೈನಂದಿನ ಅಪರಾದ ವರದಿ.

ದಿನಾಂಕ 10.11.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

6

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 08-11-2014 ರಂದು ಫಿರ್ಯಾದಿದಾರರಾದ ಶ್ರೀ ಬಾಬಾ ಅಲ್ಮಾಕರ್ ರವರು ತನ್ನ ಬಾಬ್ತು ಕೆ 19 ಎಮ್ 3731 ನೇ ನಂಬ್ರದ ಕಾರಿನಲ್ಲಿ ಕಾವೂರು ಕಡೆಯಿಂದ ಕೂಳೂರು ಕಡೆಗೆ ಹೋಗುತ್ತಾ ರಾತ್ರಿ 09-30 ಗಂಟೆಗೆ ವಿದ್ಯಾನಗರ ರೊಜಾರಿಯೋ ಮರದ ಮಿಲ್ಲಿನ ಹತ್ತಿರ ತಲುಪಿದಾಗ ಕೂಳೂರು ಕಡೆಯಿಂದ ಕಾವೂರು ಕಡೆಗೆ ಕೆ 19 ಡಿ 4404 ನೇ ನಂಬ್ರದ ಬೈಕನ್ನು ಅದರ ಸವಾರ ತೌಫಿಕ್ ಎಂಬಾತ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ತೀರ ಬಲಬದಿಗೆ ಚಲಾಯಿಸಿ ಫಿರ್ಯಾದಿದಾರರ ಕಾರಿಗೆ ಡಿಕ್ಕಿಪಡಿಸಿ ಬೈಕ್ ಸಮೇತ ರಸ್ತೆಗೆ ಬಿದ್ದು ಸವಾರರ ಬಲಕೋಲು ಕಾಲಿಗೆ, ಎದೆಗೆ ಗುದ್ದಿದ ಗಾಯವಾಗಿ ಸಹಸವಾರ ಶಕೀಲ್ ರವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 05.11.2014 ರಂದು ಪಿರ್ಯಾದಿದಾರರಾದ ಶ್ರೀ ರಮಾನಂದ ರವರು ತಾನು ಚಾಲಕನಾಗಿ ಕೆಲಸ ಮಾಡುತ್ತಿರುವ ಬಸ್ನಂಬ್ರ ಕೆ.-19-ಡಿ-8229 ನೇದನ್ನು ರಾತ್ರಿ ಮಂಗಳೂರು ನಗರದ ಸರ್ವಿಸ್ಬಸ್ನಿಲ್ದಾಣದ ಬದಿಯಲ್ಲಿ ಪಾರ್ಕ್ಮಾಡಿ, ಬಸ್ಸಿನ ಎಡಭಾಗದಲ್ಲಿ ನಿಂತುಕೊಂಡು ತನ್ನ ಸ್ನೇಹಿತ ಶ್ರೀ ಮನೋಜ್ಎಂಬವರೊಂದಿಗೆ ಮಾತನಾಡುತ್ತಿದ್ದ ವೇಳೆ ರಾತ್ರಿ ಸುಮಾರು 9:30 ಗಂಟೆಗೆ ಅವರ ಮುಂಭಾಗದಿಂದ ಬಸ್ನಂಬ್ರ ಕೆ.-19-ಸಿ-5926 ನೇದನ್ನು ಅದರ ಚಾಲಕನು ಒಮ್ಮೆಲೆ  ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಹಿಂದುಗಡೆಗೆ ಚಲಾಯಿಸಿ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದು ಬಸ್ನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದು, ಪಿರ್ಯಾದಿದಾರರನ್ನು ಸ್ನೇಹಿತರಾದ ಮನೋಜ್ರವರು ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಉಂಟಾದ ಗಾಯಕ್ಕೆ ಚಿಕಿತ್ಸೆ ನೀಡಿದ್ದು,, ಬಳಿಕ ಪಿರ್ಯಾದಿದಾರರು ಮನೆಗೆ ತೆರಳಿರುತ್ತಾರೆ. ಆದರೆ ಅಪಘಾತದಿಂದ ಪಿರ್ಯಾದಿದಾರರ ಬಲಭಾಗದ ಭುಜಕ್ಕೆ ಉಂಟಾದ ಮೂಳೆ ಮುರಿತದ ತೀವ್ರ ಗಾಯ ಹಾಗೂ ಬಲಕಾಲಿನ ಕೋಲು ಕಾಲಿಗೆ ಉಂಟಾದ ಗುದ್ದಿದ ನಮೂನೆಯ ಗಾಯದ ನೋವು ಉಲ್ಬಣಿಸಿದ್ದರಿಂದ, ದಿನಾಂಕ 08-11-2014 ರಂದು ಚಿಕಿತ್ಸೆಯ ಬಗ್ಗೆ ನಗರದ .ಜೆ ಆಸ್ಪತ್ರೆಯಲ್ಲಿ ಒಳ-ರೋಗಿಯಾಗಿ ದಾಖಲಾಗಿರುವುದಾಗಿದೆ. ಪಿರ್ಯಾದಿದಾರರಿಗೆ ಕಾನೂನಿನ ಸರಿಯಾದ ಮಾಹಿತಿ ಇಲ್ಲವಾದ್ದರಿಂದ ತಡವಾಗಿ ದೂರು ನೀಡಿದ್ದಾಗಿದೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09/11/2014 ರಂದು ಸಮಯ ಸುಮಾರು 17:50 ಗಂಟೆಗೆ ಮಂಗಳೂರು ನಗರದ ಸೆಂಟ್ ಆಗ್ನೆಸ್ ಬಳಿಯ ಮೋರ್ ಶಾಪ ಎದುರುಗಡೆ ಫಿರ್ಯಾದುದಾರರಾದ ಶ್ರೀ ಮಹೇಶ್ ಆರ್. ನಾಯಕ್ ರವರು ರಸ್ತೆ ದಾಟುವರೇ ರಸ್ತೆ ಬದಿಯ ಡಿವೈಡರ್ ಬಳಿ ನಿಂತಿದ್ದಾಗ KA-19-X-1878 ನೇ ನಂಬ್ರದ ಸ್ಕೂಟರ್ ಅನ್ನು ಅದರ ಸವಾರ ಸಹಸವಾರನನ್ನು ಕುಳ್ಳಿರಿಸಿಕೊಂಢು ಆಗ್ನೆಸ್ ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ಎಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಫಿರ್ಯಾದುದಾರರ ಮತ್ತು ಅವರ ಮಗ ವ್ಯಾಸ ಪ್ರಾಯ 10 ವರ್ಷ ಎಂಬಾತನಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರ ಬಲಕಾಲಿಗೆ ಮತ್ತು ಮಗನ ಬಲಕೈಗೆ ಗಾಯವಾಗಿರುತ್ತದೆ.

 

4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಕಾಂತ ರವರು ದಲಿತ ಜಾತಿಗೆ ಸೇರಿದವರಾಗಿದ್ದು, ದಿನಾಂಕ 09-11-2014 ರಂದು ರಾತ್ರಿ ಸುಮಾರು 22-00 ಗಂಟೆಗೆ ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಮಲ್ಲಿಕಾರ್ಜುನ ಮಠದ ಬಳಿ ಇರುವ  ಪಿರ್ಯಾದಿದಾರರ ಮನೆಯ ಬಳಿ ಬಂದ ಆರೋಪಿಗಳಾದ ಜಗ್ಗು/ಜಗದೀಶ, ಅಭಿ, ರಾಜು ಮತ್ತು ಇತರರು ಸೇರಿ ಪಿರ್ಯಾದಿದಾರರಿಗೆ ಜಾತಿನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ರಾಡ್ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆ.

 

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  08.11.2014  ರಂದು  ಪಿರ್ಯಾದಿದಾರರಾದ ಶ್ರೀ ಹರೀಶ್  ಕೋಟ್ಯಾನ್ಎಂಬವರು ಮಾರ್ಪಾಡಿ  ಗ್ರಾಮದ ಮೂಡಬಿದ್ದೆ ಮುನ್ಸಿಪಾಲಿಟಿಯ  ಬಾಬ್ತು  ಮೂಡಬಿದ್ರೆ ಮಾರ್ಕೆಟ್  ಕಟ್ಟಡದ ಉತ್ತರ ಬದಿಯಲ್ಲಿರುವ  ತನ್ನ  ಅಂಗಡಿಯಲ್ಲಿ  ವ್ಯಾಪಾರದಲ್ಲಿ  ನಿರತರಾಗಿದ್ದ ಸಂದರ್ಭ ರಾತ್ರಿ ಸುಮಾರು  9:50  ಗಂಟೆ ಸಮಯಕ್ಕೆ ರತ್ತು  @  ರತ್ನಕಾರ್ಎಂಬವರು ಅಂಗಡಿಗೆ ಬಂದು  ಬಾಳೆ ಹಣ್ಣಿನ  ಗೊಣೆಗೆ ಎಷ್ಟು  ಎಂದು  ಕೇಳಿ  ಪಿರ್ಯಾದಿದಾರರು  ಬಾಳೆ ಹಣ್ಣಿನ  ಕೆ.ಜಿ    35  ಎಂದಾಗ  "ಅದು  ಜಾಸ್ತಿಯಾಯ್ತು" ಎಂದು ಹೇಳಿ ಅವಾಚ್ಯ  ಶಬ್ದದಿಂದ ಬೈದು  ಅವಮಾನ  ಪಡಿಸಿ  ಬಾಳೆಗೊಣೆಯ  ದಂಡಿನಿಂದ ಪಿರ್ಯಾದಿಯ ತಲೆಗೆ ಎರಡು  ಬಾರಿ  ಹೊಡೆದು  ನೋವು  ಉಂಟು  ಮಾಡಿದ್ದಲ್ಲದೆ,  ಅಂಗಡಿಯ ತಿಂಡಿ  ತಿನಸಿನ ಡಬ್ಬಿಯನ್ನಿ ಚಲ್ಲಾ ಪಿಲ್ಲಿ  ಮಾಡಿ ಪಿರ್ಯಾದಿದಾರರಿಗೆ 150  ರಷ್ಟು  ನಷ್ಟ ಉಂಟು  ಮಾಡಿರುತ್ತಾರೆ.

 

6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಪ್ರಭಾವತಿ ರವರಿಗೆ ಮತ್ತು ಆರೋಪಿಗಳಾದ ಪದ್ಮ ಪೂಜಾರಿ, ಆನಂದ ಪೂಜಾರಿ, ವೇದಾವತಿ, ಸುಜಾತಾ ರವರುಗಳಿಗೆ ನಡೆದುಕೊಂಡು ಹೋಗುವ ದಾರಿಯ ಬಗ್ಗೆ ತಕರಾರು ಇದ್ದು, ದಿನಾಂಕ: 09.11.2014 ರಂದು ಬೆಳಿಗ್ಗೆ 09.00 ಗಂಟೆಗೆ ಆರೋಪಿಗಳಾದ ಪದ್ಮಪೂಜಾರಿ, ಆನಂದ ಪೂಜಾರಿ, ವೇದಾವತಿ, ಸುಜಾತ ಎಂಬವರುಗಳು ಪಿರ್ಯಾದಿದಾರರ ಜಾಗದ ಬೇಲಿಯನ್ನು ತೆಗೆದು ಅವರುಗಳು ಗದ್ದೆಗೆ ಗೊಬ್ಬರವನ್ನು ಕೊಂಡು ಹೋಗುವ ಸಮಯ ಪಿರ್ಯಾದಿದಾರರು ಅವರುಗಳಲ್ಲಿ "ನೀವು ಯಾಕೆ ನಮ್ಮ ಜಾಗದಲ್ಲಿ ಬೇಲಿ ತೆಗೆದು ಗೊಬ್ಬರ ತೆಗೆದುಕೊಂಡು ಹೋಗುತ್ತೀರಾ" ಎಂದು ಕೇಳಿದಾಗ ಆರೋಪಿಗಳೆಲ್ಲರೂ ಪಿರ್ಯಾದಿಯ ಅಂಗಳಕ್ಕೆ ಬಂದು ಪಿರ್ಯಾದಿಯನ್ನು  ತಡೆದು ನಿಲ್ಲಿಸಿ ಅವಾಚ್ಯ ಶಬ್ದದಿಂದ ಬೈದು, ಆರೋಪಿ ಗಳಾದ ಪದ್ಮಪೂಜಾರಿ, ಆನಂದ ಪೂಜಾರಿ, ವೇದಾವತಿ, ಸುಜಾತ ಎಂಬವರುಗಳು ಪಿರ್ಯಾದಿಯ ಮೈ, ಕೈಗೆ ಹೊಡೆದುದಲ್ಲದೆ ಆರೋಪಿ ಪದ್ಮಪೂಜಾರಿ ಹಾರೆಯಿಂದ ಪಿರ್ಯಾದಿಯ ಬೆನ್ನಿಗೆ ಗುದ್ದಿ ದೂಡಿ ಹಾಕಿರುವುದಲ್ಲದೆ, ಇದನ್ನು ತಡೆಯಲು ಬಂದ  ಪಿರ್ಯಾದಿಯ ಗಂಡನಿಗೆ ಮತ್ತು ಪಿರ್ಯಾದಿಗೆ ದಾರಿಯ ವಿಚಾರದಲ್ಲಿ ತೊಂದರೆ ಮಾಡಿದರೆ ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವಬೆದರಿಕೆಯನ್ನು ಒಡ್ಡಿರುವುದಾಗಿದೆ.

 

7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09.11.2014  ರಂದು  09:00  ಗಂಟೆ ಸಮಯಕ್ಕೆ ಮಂಗಳೂರು  ತಾಲೂಕು  ಮಾರ್ಪಾಡಿ  ಗ್ರಾಮದ ಮೂಡಬಿದ್ರೆ ಪೇಟೆಯ  ಹಳೆ ಬಸ್ನಿಲ್ದಾಣದ ನವಮಿ  ಹೋಟೆಲ್ನಿಂದ  ರಸ್ತೆಯ  ದಕ್ಷಿಣ  ಬದಿಯಲ್ಲಿರುವ  ಗಣೇಶ್  ಹೊಟೇಲ್ಕಡೆ  ಪಿರ್ಯಾದಿದಾರರಾದ ಶ್ರೀ ನಿಲಯ ಪೂಜಾರಿ ರವರು  ರಸ್ತೆ ದಾಟುತ್ತಿರುವ  ಸಮಯ ಕಾರ್ಕಳ ಕಡೆಯಿಂದ ಮಂಗಳೂರು ಕಡೆಗೆ ಸಾರ್ವಜನಿಕ  ರಸ್ತೆಯಲ್ಲಿ  ಮೋಟಾರ್  ಸೈಕಲ್ನಂಬ್ರ  KA  19 W 5555 ನೇದನ್ನು  ಅದರ  ಸವಾರರು  ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ ಸವಾರಿ  ಮಾಡಿಕೊಂಡು  ಬಂದು  ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದು  ಎಡಕಾಲಿನ  ಕೋಲು  ಕಾಲಿಗೆ ರಕ್ತ ಗಾಯ  ಉಂಟಾಗಿದ್ದು,  ಬಲ ಕಾಲಿನ  ಮಣಿಗಂಟಿಗೆ ಹಾಗೂ  ಎಡ ಪಕ್ಕೆಲುಬಿಗೆ ಗುದ್ದಿದ ನೋವು  ಉಂಟು  ಮಾಡಿದ್ದು,  ಪಿರ್ಯಾದಿದಾರರು  ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಸಮುದಾಯ  ಆರೋಗ್ಯ  ಕೇಂದ್ರದಲ್ಲಿ  ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.

 

8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09.11.2014  ರಂದು ಮಧ್ಯಾಹ್ನ 12:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಗೀರೀಶ್ ಪೂಜಾರಿ ರವರು ತನ್ನ ಬಾಬ್ತು ಕಾರು ನಂಬ್ರ PY 01 BN 21 ನೇಯದನ್ನು ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಕಡಲಕೆರೆ ಕಡೆಯಿಂದ ಮೂಡಬಿದ್ರೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಮಾರ್ಪಾಡಿ ಗ್ರಾಮದ ಅಲಂಗಾರು ಜಂಕ್ಷನ್ ಬಳಿಕ ರಾ.ಹೆ.ಯಲ್ಲಿ ತಲುಪಿದಾಗ ಹಿಂದುಗಡೆಯಿಂದ ಅಂದರೆ ರಾ.ಹೆ.ಯಲ್ಲಿ ಮೋಟಾರು ಸೈಕಲ್ ನಂಬ್ರ KA 19 X 3148 ನೇಯದನ್ನು ಅದರ ಸವಾರ ಯೋಗೀಶ್ ಪೂಜಾರಿ ಎಂಬುವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟರು ಸೈಕಲ್ ಸವಾರ ಯೋಗೀಶ್ ಪೂಜಾರಿಯವರ ತಲೆಗೆ ಗಾಯವಾಗಿದ್ದು ಪಿರ್ಯಾದಿದಾರರು ಮತ್ತು ಇತರರು ಸೇರಿ ಅಪಘಾತವನ್ನುಂಟು ಮಾಡಿದ ಮೋಟಾರು ಸೈಕಲ್ ಸವಾರ ಯೋಗೀಶ್ ಪೂಜಾರಿಯವರನ್ನು ಮೂಡಬಿದ್ರೆ ಆಳ್ವಾಸ ಆಸ್ಪತ್ರೆಗೆ ಕರೆದುಕೋಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ.

 

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 9-11-2014 ರಂದು ಬೆಳಗ್ಗೆ ಸುಮಾರು 8.30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸಿಂತಿಯಾ ರವರು ತನ್ನ ಮಗಳಾದ ಅಶ್ಮಿತಾಳ ಜೊತೆಗೆ ತನ್ನ ಮನೆಯಿಂದ ಪನಿರ್ ಚರ್ಚ್ಗೆ ತನ್ನ ಬಾಬ್ತು ದ್ವಿ ಚಕ್ರ ವಾಹನ ನಂಬ್ರ  ಕೆಎ 19 ಇಎಫ್ 3236 ರಲ್ಲಿ ತೆರಳುತ್ತಿದ್ದ ಸಮಯ ದೇಳಕಟ್ಟೆಯಿಂದ ಪನೀರ್ ಚರ್ಚ್ಗೆ ಹೋಗುವ ರಸ್ತೆಯ ತಿರುವಿನಲ್ಲಿ ಹೋಗುತ್ತಿದ್ದಂತೆ ಎದುರುಕಡೆಯಿಂದ ಅಂದರೆ ಕೋಟೆಕಾರು ಕಡೆಯಿಂದ ಕಾರು ನಂಬ್ರ ಕೆಎ19ಎಂ ಸಿ 8523 ನೇ ದನ್ನು ಅದರ ಚಾಲಕ ಇಲ್ಯಾಸ್ ಎಂಬಾತನು ಅತೀ ವೆಗ ಹಾಗೂ ನಿರ್ಲಕ್ಷತನದಿಂದ ಚಾಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡು, ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಬಲ ಕೈ ಭುಜದ ಬಳಿ ಗುದ್ದಿದ, ತರಚಿದ ರಕ್ತ ಗಾಯವಾಗಿದ್ದು ಬಲ ಕಣ್ಣಿನ ಬದಿಗೆ ಗುದ್ದಿದ ಹಾಗೂ ತಲೆಯ ಬದಿಗೆ ಗುದ್ದಿದ ತರಚಿದ ಗಾಯವಾಗಿದ್ದು ಅವರನ್ನು ರೊನಾಲ್ಡ್ ಎಂಬವರು ಚಿಕಿತ್ಸೆಯ  ಬಗ್ಗೆ ದೇರಳಕಟ್ಟೆಯ ಕೆಎಸ್ಹೆಗ್ಡೆ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.

No comments:

Post a Comment