Friday, November 7, 2014

Daily Crime Reports 07-11-2014

ದೈನಂದಿನ ಅಪರಾದ ವರದಿ.

ದಿನಾಂಕ 07.11.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

3

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ಮಾಧವ ಮೆಂಡನ್ ರವರು ಅವರ ತಮ್ಮ ರೋಹಿತ್ @ ರೋಹಿತಾಕ್ಷರೊಂದಿಗೆ  ದಿನಾಂಕ 31-10-2014 ರಂದು ಸಂಜೆ 7:00 ಗಂಟೆಗೆ ಸುರತ್ಕಲ್ ಆದರ್ಶ ಮೆಡಿಕಲ್ ಬಳಿಯಿಂದ ನಡೆದುಕೊಂಡು ಬರುತ್ತಾ ಇರುವಾಗ ಅವರ ಹಿಂದುಗಡೆಯಿಂದ ಕೆಎ-19-ಎಮ್ ಡಿ-9296 ನಂಬ್ರದ ಕಾರಿನ ಚಾಲಕ ಫಾರೂಕ್ ಎಂಬಾತ ನಿರ್ಲಕ್ಷತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿ ರೋಹಿತಾಕ್ಷನಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದ್ರಿ ರೋಹಿತಾಕ್ಷನಿಗೆ ಬಲ ಕಾಲಿನ ಮಣಿಗಂಟಿಗೆ ಮೂಳೆ ಮುರಿತದ ಗಾಯವಾಗಿದ್ದು, ಬಗ್ಗೆ   ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿಯು ಗಾಯಾಳುವಿನ ಖರ್ಚು ವೆಚ್ವವನ್ನು ನೀಡುವುದಾಗಿ ಹೇಳಿ ಹೋದವರು ವೆಚ್ಚವನ್ನು ನೀಡದೇ ಇರುವುದರಿಂದ ದಿನಾಂಕ 06-11-2014 ರಂದು ತಡವಾಗಿ ನೀಡಿರುವುದಾಗಿದೆ.

 

2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಿ. ಸಂಜಯ್ ರವರು 2008 ನೇ ಇಸವಿಯಲ್ಲಿ ಮಂಗಳೂರು ನಗರದ ಮಣ್ಣಗುಡ್ಡೆ ಎಂಬಲ್ಲಿ ವಾಸ್ತವ್ಯಕ್ಕೆಂದು ಮನೆಯನ್ನು ಕಟ್ಟಲು ಪ್ರಾರಂಭಿಸಿದ್ದು ಸದ್ರಿ ಕಟ್ಟಡದ ಖಾಮಗಾರಿ ಮುಗಿಯುವ ಹಂತದಲ್ಲಿ ಪಿರ್ಯಾದಿಯ ತಂದೆ ಮೃತಪಟ್ಟಿದ್ದರಿಂದ, ಕಾಮಾಗಾರಿ ತಾತ್ಕಲಿಕ ಸ್ಥಗಿತಗೊಳಿಸಿದ್ದು ನಂತರ ಕಾಮಗಾರಿಯನ್ನು ಪುನರ್ ಪ್ರಾರಂಭಿಸಿದಾಗ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ,  ಆಪಾದಿತ ಸುಚಿಂದ್ರ ಬಿ ಅಮೀನ್ ಎಂಬವರು ಪಿ.ವಿ.ಎಸ್ ಕಲಾಕುಂಜ ದಲ್ಲಿ  ಹೊಂದಿರುವ ಫೈನಾನ್ಸ್ ನಿಂದ  2011 ನೇ ಫೇಬ್ರವರಿಯಿಂದ 2011 ನೇ ನವಂಬರ್ ನಿಂದ ಒಟ್ಟು 7 ಲಕ್ಷ  ರೂಪಾಯಿಗಳನ್ನು ತೆಗೆದುಕೊಂಡಿದ್ದು 2012-2013 ಅವಧಿಯಲ್ಲಿ ಸುಮಾರು 8 ಲಕ್ಷ ವಾಪಾಸು ಕೊಟ್ಟಿದ್ದರೂ ಹೆಚ್ಚಿನ ಹಣಕ್ಕಾಗಿ ಬೆದರಿಕೆ ಒಡ್ಡುತ್ತಿದ್ದು ಹೀಗಿರುತ್ತಾ ಪಿರ್ಯಾದಿ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡುವ ವಿಚಾರ ತಿಳಿದು ಆಪಾದಿತನು ದಿನಾಂಕ 24-06-2014 ರಂದು ಬೆಳಿಗ್ಗೆ  ಸುಮಾರು 10-00 ಗಂಟೆಗೆ ತನ್ನ ಸಹಚರ ರಾಜು ಎಂಬಾತನನ್ನು ಪಿರ್ಯಾದಿಯ ಮನೆ ಇರುವ ಅಬ್ಬ ಗಾರ್ಡನ್ ಸುಲ್ತಾನ್ ಬತ್ತೇರಿ ರೋಡ್ ಉರ್ವ ಎಂಬಲ್ಲಿಗೆ ಕಳುಹಿಸಿ ಬೆದರಿಸಿ, ಅಗ್ರಿಮೆಂಟ್ ನ್ನು ಬಲವಂತವಾಗಿ ಪಡೆದುಕೊಂಡು ಯಥಾವತ್ತಾಗಿ  ನಕಲು ಮಾಡಿ ಆರೋಪಿತನ ಅನುಕೂಲಕ್ಕೆ ತಕ್ಕಂತೆ ಸದ್ರಿ ದಾಖಲಾತಿಗಳನ್ನು ತಿರುಚಿ 03-07-2014 ರಂದು ಭವಾನಿ ಶಂಕರ್  ಎಂಬಾತನ ಹೆಸರಿನಲ್ಲಿ ಮಾಡಿಸಿಕೊಂಡು ಪಿರ್ಯಾದಿ, ಪಿರ್ಯಾದಿಯ ತಮ್ಮ ಸಂಜೀತ್, ಮತ್ತು ಪಿರ್ಯಾದಿಯ ತಂಗಿ ಸ್ಮಿತಾ ರವರಿಗೆ ಜೀವ ಬೆದರಿಕೆ ಹಾಕಿ ಒತ್ತಾಯ ಪೂರ್ವಕವಾಗಿ ಸಹಿ ಹಾಕಿಸಿದ್ದು, ತದನಂತರ 02-08-2014 ರಂದು ಪಿರ್ಯಾದಿಯು ಶ್ರೀಮತಿ ಪದ್ಮಜರವರ ಹೆಸರಿಗೆ ಮನೆ ನೊಂದಣಿ ಮಾಡಿದ್ದು ಪದ್ಮಜ ರು 20 ಲಕ್ಷ ರೂಪಾಯಿಗಳನ್ನು ಕೊಡುವ ಸಮಯದಲ್ಲಿ ಆರೋಪಿ ಸುಚೀಂದ್ರ ಬಿ ಅಮೀನ್ ತನ್ನ ಸಹಚರ ರಾಜು ಮತ್ತು ಭವಾನಿ ಶಂಕರ್ ಎಂಬವರೊಂದಿಗೆ ಸೇರಿ ಸುಳ್ಳು ದಾಖಲೆಗಳನ್ನು ತೋರಿಸಿ  ಪಿರ್ಯಾದಿಗೆ ಬಂದ 20 ಲಕ್ಷದಲ್ಲಿ 17 ಲಕ್ಷ ರೂ ನ್ನು ಮೋಸದಿಂದ ಪಡೆದುಕೊಂಡಿರುತ್ತಾರೆ. ಪಿರ್ಯಾದಿಯು ಆರೋಪಿತನೊಂದಿಗೆ ಮರು ಪಾವತಿಸಿದ ಹಣದ ದಾಖಲೆಗಳನ್ನು ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು  ಬೆದರಿಕೆ ಹಾಕಿದ್ದು ಅಲ್ಲದೇ ದಾಖಲೆಗಳನ್ನು ವಾಪಾಸು ನೀಡದೆ  ಮೋಸ ಮಾಡಿರುತ್ತಾರೆ.

 

3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಅಸ್ಲಾಂ ಹುಸೈನ್ ಸಾಹೇಬ್ ರವರು ಕೊಲ್ಲಾಪುರದ ಗೋಡ್ಕೆ ಪಾಟೀಲ್ ಮಾಲಿಕತ್ವದ ಎಂ.ಹೆಚ್.09-ಸಿಯು-6644ನೇ ಲಾರಿಯಲ್ಲಿ ಚಾಲಕನಾಗಿದ್ದು, ದಿನಾಂಕ. 20-10-14ರಂದು ನಿಪ್ಪಾಣಿಯಿಂದ ಹೆಸರು ಬೇಳೆ ಲೋಡ್ ಮಾಡಿಕೊಂಡು ಮನೆ ಹತ್ತಿರದ  ಕಿರಣ್ ರಾಮಚಂದ್ರ ಕಾಂಬ್ಳೆ ಎಂಬವರನ್ನು ಕಂಡಕ್ಟರ್ ಆಗಿ ನೇಮಿಸಿಕೊಂಡು  ಹೊರಟು ದಿನಾಂಕ. 23-10-14ರಂದು ಮಂಗಳೂರು ತಲುಪಿ ಮಂಗಳೂರು ಬಂದರ್ನಲ್ಲಿ ಹೆಸರು ಬೇಳೆ ಅನ್ಲೋಡ್ ಮಾಡಿ ನಂತರ ಬೈಕಂಪಾಡಿ ಜೋಕಟ್ಟೆ ಕ್ರಾಸ್ ಬಳಿ ರೈಲ್ವೇ ಟ್ರಾಕ್ ಹತ್ತಿರ ಲಾರಿಯನ್ನು ಬೆಳಿಗ್ಗೆ ನಿಲ್ಲಿಸಿ ಕಂಡಕ್ಟರ್ಕಿರಣ್ ರಾಮಚಂದ್ರ ಕಾಂಬ್ಳೆ ರವರನ್ನು ಲಾರಿಯಲ್ಲಿ ನಿಲ್ಲಲು ಹೇಳಿ ಪಿರ್ಯಾದಿ ಕೋಕ್ನ್ನು ಕೊಂಡುಹೋಗಲು ಟ್ರಾನ್ಸಪೋರ್ಟ್  ಕಂಪೆನಿಯವರನ್ನು  ಸಂಪರ್ಕಿಸಲು ಬಂದಿದ್ದು ನಂತರ ಸಮಯ ಸುಮಾರು 11-00 ಗಂಟೆಗೆ ವಾಪಾಸು ಲಾರಿಯ ಬಳಿ ಬಂದು  ನೋಡಲಾಗಿ ಕಂಡಕ್ಟರ್ ಕಿರಣ್ ರಾಮಚಂದ್ರ ಕಾಂಬ್ಳೆ ಕಾಣೆಯಾಗಿರುತ್ತಾನೆ. ಬಗ್ಗೆ ಎಲ್ಲಾ ಕಡೆ ಹುಡುಕಾಡಿ ನಂತರ ದಿನಾಂಕ. 01-11-2014 ರಂದು ಪಿರ್ಯಾದಿ ಇಲ್ಲಿಂದ ಕೋಕ್ ಲೋಡ್ ಮಾಡಿ ಕೊಲ್ಲಾಪುರ ತಲುಪಿ ಅಲ್ಲಿ ದಿನಾಂಕ. 04-11-2014ರಂದು ನಿಪ್ಪಾಣಿಯಲ್ಲಿರುವ ಕಿರಣ್ ರಾಮಚಂದ್ರ ಕಾಂಬ್ಳೆ ರವರ ಮನೆಯಲ್ಲಿ ವಿಚಾರಿಸಿದ್ದಲ್ಲಿ ಅಲ್ಲಿಗೆ ಕೂಡಾ ಆತನು ಬಂದಿಲ್ಲವಾಗಿ ತಿಳಿಸಿದಂತೆ ಪಿರ್ಯಾದಿ ಮತ್ತು ಆತನ ಮನೆಯವರೆಲ್ಲಾ ಸೇರಿ ಹುಡುಕಾಡಿದರೂ ಪತ್ತೆಯಾಗದೇ ಇರುವುದರಿಂದ ದಿನಾಂಕ. 06-11-2014 ರಂದು ಠಾಣೆಗೆ ಬಂದು ಕಿರಣ್ ರಾಮಚಂದ್ರ ಕಾಂಬ್ಳೆ ಕಾಣೆಯಾದ ಬಗ್ಗೆ ದೂರು ನೀಡಿರುವುದಾಗಿದೆ. ಕಾಣೆಯಾದವನ ಚಹರೆ ಗುರುತು ಕೆಳಗಿನಂತಿದೆ. 1)ಹೆಸರು: ಕಿರಣ್ ರಾಮಚಂದ್ರ ಕಾಂಬ್ಳೆ 2)ತಂದೆಯ ಹೆಸರು: ರಾಮಚಂದ್ರ ಲಾಹು ಕಾಂಬ್ಳೆ 3)ಪ್ರಾಯ: 24 ವರ್ಷ 4)ಎತ್ತರ: 5 ಅಡಿ 5)ಮೈಬಣ್ಣ: ಎಣ್ಣೆಕಪ್ಪು 6)ವಿದ್ಯಾಭ್ಯಾಸ: 8ನೇ ತರಗತಿ 7)ಧರಿಸಿರುವ ಬಟ್ಟೆಬರೆಗಳು: ಹಸಿರು ಬಣ್ಣದ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ 8)ತಲೆಕೂದಲು: ಸಣ್ಣ ಕುರುಚಲು ಕೂದಲು.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05-11-2014 ರಂದು ಸಂಜೆ ಸುಮಾರು 5-30 ಗಂಟೆಗೆ ಮಂಗಳೂರು ನಗರದ ಕಂಕನಾಡಿ ಸರ್ಕಲ್ ಬಳಿ ಕೆಎ-19-ಸಿ-9748 ನಂಬ್ರದ ಪಿಕಪ್ ವಾಹನವನ್ನು ಅದರ ಚಾಲಕ ಆರೋಪಿ ರಾಜು ಡಿ ನಾಯಕ್ ಎಂಬಾತನು ಪಂಪ್ವೆಲ್ ಕಡೆಯಿಂದ ಕಂಕನಾಡಿ ಕಡೆಗೆ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಂಕನಾಡಿಯಿಂದ ವೆಲೆನ್ಸಿಯಾ ಕಡೆಗೆ ಝಾಯಿನ್ ಎಂಬವರು ಪಿರ್ಯಾದುದಾರರಾದ ಶ್ರೀ ಮೊಹಮ್ಮದ್ ಅಶ್ಫಕ್ ರವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಸವಾರಿಮಾಡಿಕೊಂಡು ಹೋಗುತ್ತಿದ್ದ ಕೆಎ-19-.ಡಿ-7795 ನಂಬ್ರದ ಮೋಟಾರು ಸೈಕಲಿಗೆ ಢಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲ್ ಸವಾರ ಝಾಯಿನ್ ರವರ ಎಡಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಾಳು ಝಾಯಿನ್ ರವರು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06-11-2014 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣಾ ಉಪನಿರೀಕ್ಷಕರಾದ ರಫೀಕ್.ಕೆ.ಎಂ ರವರು ಇಲಾಖಾ ಜೀಪು ನಂಬ್ರ ಕೆಎ 19 ಜಿ 240ನೇದರಲ್ಲಿ ಚಾಲಕರಾಗಿ ಪಿಸಿ 2194 ನೇಯವರು ಹಾಗೂ ಸಿಬ್ಬಂದಿಗಳಾದ ಹೆಚ್ ಸಿ 954, ಹೆಚ್ ಸಿ 1987ನೇಯವರ ಜೊತೆಯಲ್ಲಿ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಸುಮಾರು 10-00 ಗಂಟೆಗೆ ಮಂಗಳೂರು ನಗರದ ಬಾರೇಬೈಲ್ ಎನ್.ಎಚ್-75 ರಸ್ತೆಯ ಕಡೆ ರೌಂಡ್ಸ್ ನಲ್ಲಿರುವಾಗ ರಸ್ತೆಯ ಬದಿಯಲ್ಲಿ ಇಬ್ಬರು ವ್ಯಕ್ತಿಗಳು ಕೆಎ 19 ಇಜೆ 8920ನೇ ಬಿಳಿ ಬಣ್ಣದ ಆಕ್ಟಿವ್ ಹೊಂಡಾದ ಬಳಿ ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡಿರುವುದನ್ನು ದೂರದಿಂದ ಗಮನಿಸಿ ಅವರ ಬಳಿ ಹೋಗಿ ಇಲಾಖಾ ವಾಹನವನ್ನು ನಿಲ್ಲಿಸಿದಾಗ ಸದ್ರಿ ಇಬ್ಬರು ವ್ಯಕ್ತಿಗಳು ಓಡಿ ಹೋಗಲು ಪ್ರಯತ್ನಿಸಿದ್ದು, ಅವರನ್ನು ಹಿಡಿದು ಸದ್ರಿ ಸ್ಥಳದಲ್ಲಿ ನಿಂತಿರುವ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದು ಹಾಗೂ ಅವರ ಹೆಸರು ವಿಳಾಸ ಕೇಳಲಾಗಿ ತಡವರಿಸುತ್ತಾ ಒಬ್ಬನು ಪ್ರಜ್ವಲ್ ಮತ್ತು ಇನ್ನೊಬ್ಬನು ಗಣೇಶ್ ಎಂಬುದಾಗಿ ತಿಳಿಸಿರುತ್ತಾರೆ. ಸದ್ರಿ ಇಬ್ಬರು ವ್ಯಕ್ತಿಗಳು ನಿಂತುಕೊಂಡಿದ್ದ ಬಗ್ಗೆ ಸಂಶಯಗೊಂಡ ಪೊಲೀಸ್ ಉಪನಿರೀಕ್ಷಕರು ಹೆಚ್ ಸಿ 954ನೇಯವರ ಮುಖಾಂತರ ಪಂಚಾಯತುದಾರರನ್ನು ಕರೆಯಿಸಿ ಇವರುಗಳ ಸಮಕ್ಷಮ ಸದ್ರಿ ಇಬ್ಬರು ವ್ಯಕ್ತಿಗಳ ಅಂಗ ಜಪ್ತಿ ಮಾಡಲಾಗಿ ಸದ್ರಿ ಇಬ್ಬರ ಬಳಿ ಇದ್ದ 10 ಪ್ಯಾಕೇಟ್ ಸುಮಾರು 44 ಗ್ರಾಂ ತೂಕದ ಗಾಂಜಾ ಮತ್ತು  ಹೊಂಡಾ ಆಕ್ಟಿವ್ ಬೈಕ್ ಸಿಟಿನ ಅಡಿಯಲ್ಲಿದ್ದ 72 ಗ್ರಾಂ ತೂಕದ ಗಾಂಜಾ ವನ್ನು ಹಾಗೂ ಅವರ ಬಳಿಯಿದ್ದ ಮೊಬೈಲ್ ಪೋನ್ ಮತ್ತು 660 ರೂ ವನ್ನು ಪಂಚರ ಸಮಕ್ಷಮ ವಶಪಡಿಸಿಕೊಂಡು ವರದಿಯನ್ನು ತಯಾರಿಸಿ  ಪ್ರಕರಣ ದಾಖಲಿಸಿರುವುದಾಗಿದೆ.

 

6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03-11-2014ರಂದು ಸಂಜೆ ಸಮಯ ಸುಮಾರು 5-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ತಾಜುದ್ದೀನ್ ಅಬಿದ್ ರವರ ಮಗಳು ಕುಮಾರಿ ನುಹಾ ಅಬಿದ್(8) ರವರು ಮಂಗಳೂರು ನಗರದ ಆರ್ಯ ಸಮಾಜ ರಸ್ತೆಯಲ್ಲಿರುವ ಪಿರ್ಯಾದಿದಾರರು ವಾಸ ಮಾಡಿಕೊಂಡಿರುವ ಒರ್ಚಾರ್ಡ್  ಅಪಾರ್ಟಮೆಂಟ್ ತಳ ಅಂತಸ್ತಿನಲ್ಲಿರುವ ಪಾರ್ಕಿಂಗ್ ಪ್ಯಾಸೇಜನ್ನು ದಾಟಿಕೊಂಡು ಬರುತ್ತಿದ್ದ ವೇಳೆ KA 19 AA5387ನೇ ನೋಂದಣಿ ಸಂಖ್ಯೆಯ ಕಾರು ಚಾಲಕ, ತನ್ನ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸದ್ರಿಯವರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಮಗಳ ಬಲ ಕಾಲಿನ ಮೂಳೆ ಮುರಿದಿದ್ದು, ಫಳ್ನೀರಿನ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಪಿರ್ಯಾದಿದಾರರು ತಮ್ಮ ಮಗಳಿಗೆ ಅಪಘಾತ ಸಂಭವಿಸಿದಂದಿನಿಂದ ಅವರೊಂದಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನಿಮಿತ್ತ ಉಳಕೊಂಡಿದ್ದು ಹಾಗೂ ಘಟನೆ ಸಂಭವಿಸಿದ ದಿನ ಸದ್ರಿ ಘಟನೆಯನ್ನು ಲಘುವಾಗಿ ಪರಿಗಣಿಸಿದ್ದು, ದಿನಾಂಕ 06-11-2014 ರಂದು ಠಾಣೆಗೆ ಬಂದು ಲಿಖಿತ ದೂರು ನೀಡಿರುವುದಾಗಿದೆ.

 

7.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31-10-2014ರಂದು ರಾತ್ರಿ 9-30 ಗಂಟೆಯಿಂದ ದಿನಾಂಕ: 01-11-2014 ಬೆಳಿಗ್ಗೆ 06-00 ಗಂಟೆಯ ಮಧ್ಯೆ ಪಿರ್ಯಾದಿದಾರರಾದ ಶ್ರೀ ಇಸಾಕ್ ರವರು ವಾಸವಾಗಿರುವ ಮಂಗಳೂರು ನಗರದ ಬೆಂದೂರುವೆಲ್ ವಾಸನ್ ಕೇರ್ ಹಿಂಬದಿ ಇರುವ ಮನೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿಟ್ಟಿದ್ದ ಅಸ್ಗರ್ ಆಲಿ ರವರ ಆರ್.ಸಿ ಮಾಲಕತ್ವದ ಪಿರ್ಯಾದಿದಾರರು ಉಪಯೋಗಿಸಿಕೊಂಡಿರುವ ಚಾಸೀಸ್ ನಂಬ್ರ:ME4KC09CED8491496, ಇಂಜಿನ್ ನಂಬ್ರ:KC09E86500296ನೇ KL 14N 4062ನೇ ನೋಂದಣಿ ಸಂಖ್ಯೆಯ 2013ನೇ ಮೊಡೆಲಿನ ಕಪ್ಪು ಬಣ್ಣದ, ಸುಮಾರು 48,988/- ರೂ ಬೆಲೆ ಬಾಳುವ  ಹೋಂಡಾ ಕಂಪನಿಯ ಯುನಿಕಾರ್ನ್ ದ್ವಿ-ಚಕ್ರ ವಾಹವನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಕಳವಾದ ದ್ವಿಚಕ್ರ ವಾಹನವನ್ನು ಕಳವಾದ ದಿನದಿಂದ ಇಲ್ಲಿಯವರೆಗೆ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು ದಿನಾಂಕ 06-11-2014 ರಂದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

 

8.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಾಜೇಶ್ ಕೆ.ಕೆ. ರವರು ಅಳಕೆಯಲ್ಲಿರುವ ಬಿ.ಕೆ ಟ್ರಾನ್ಸ್ಪೋರ್ಟ್ಎಂಬ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಕಛೇರಿಗೆ ಹೋಗಿ ಬರುವರೇ ಕಂಪನಿಯ ವತಿಯಿಂದ  ಕಂಪೆನಿ ಮಾಲಕರಾದ ಕೆ.ಪಿ. ಸುದರ್ಶನ್ ರಾವ್ ರವರ ಹೆಸರಿನಲ್ಲಿರುವ KA-19 U-9944   ನೇ ಚಾಸೀಸ್ ನಂಬ್ರ ME4KC092K58000899  ಇಂಜಿನ್ ನಂಬ್ರ KC09E9000839 ಮಾದರಿ 2005, ಬಣ್ಣ : ಡೈಮಂಡ್ ನೇ ಹೊಂಡಾ ಯೂನಿಕಾರ್ನ್ ಮೊಟಾರು ಸೈಕಲನ್ನು ಕೊಟ್ಟಿದ್ದು, ದಿನಾಂಕ 05-11-2014 ರಂದು ರಾತ್ರಿ ವೈಯಕ್ತಿಕ ಕೆಲಸ ಮುಗಿಸಿಕೊಂಡು ಮನೆಗೆ ಹೊರಟು ಬರುವಾಗ ಹಂಪನಕಟ್ಟೆ ಜಂಕ್ಷನ್ನಲ್ಲಿ ಮೊಟಾರು ಸೈಕಲ್ ಹಾಳಾಗಿದ್ದು, ಸಮಯ ಇಬ್ಬರು ಅಪರಿಚಿತರು ಬೈಕ್ ದೂಡಿ ಸ್ಟಾರ್ಟ್ಮಾಡಿಸಿಕೊಟ್ಟ ಬಳಿಕ ತಮ್ಮನ್ನು ದಕ್ಕೆಗೆ ಬಿಡುವಂತೆ ಕೋರಿಕೊಂಡ ಮೇರೆಗೆ ಅವರನ್ನು ದಕ್ಕೆಯಲ್ಲಿ ಬಿಟ್ಟು ಮನೆಗೆ ಹೋಗುವಾಗ ಅನ್ಸಾರಿ ರಸ್ತೆಯಲ್ಲಿ ಬೈಕ್ ಸ್ಕಿಡ್ಆಗಿ ಬಿದ್ದು, ಬಳಿಕ ಅಲ್ಲಿಂದ ಹೊರಟು ರಾತ್ರಿ  ಸುಮಾರು 12-00 ಗಂಟೆಗೆ ಉತ್ತರ ದಕ್ಕೆಯ 2ನೇ ಗೇಟ್ ಬಳಿ ಬರುವಾಗ ಪಿರ್ಯಾದಿದಾರರ ಮೊಬೈಲ್ ಪೋನ್ ಇಲ್ಲದೇ ಇದ್ದು, ಬೈಕ್ ಸ್ಕಿಡ್ ಆದ ಬಳಿಕ ರಸ್ತೆಯಲ್ಲಿ  ಮೊಬೈಲ್ ಬಿದ್ದಿರಬಹುದು ಎಂದು ತಿಳಿದು ಬೈಕನ್ನು ನಿಲ್ಲಿಸಿ, ನಡೆದುಕೊಂಡು ರಸ್ತೆಯಲ್ಲಿ ಮೊಬೈಲ್ ಪೋನನ್ನು ಹುಡುಕುತ್ತಾ ಬಂದ ದಾರಿಯಲ್ಲಿ ಹೋಗಿದ್ದು, ವಾಪಾಸ್ಸು ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದಾಗ ಬೈಕ್ ಕಾಣೆಯಾಗಿದ್ದು, ಬಳಿಕ ಯಾರಾದರೂ ದೂಡಿಕೊಂಡು ಅಲ್ಲಿ ಎಲ್ಲಿಯಾದರೂ ನಿಲ್ಲಿಸಿರಬಹುದೆಂದು ಸುತ್ತಮುತ್ತಲಿನ ಸ್ಥಳಗಳಲ್ಲಿ ಹಾಗು ಮಂಗಳೂರು ನಗರದಲ್ಲಿ ಹುಡುಕಾಡಿದರೂ ಪತ್ತೆಯಾಗದೇ ಇದ್ದು, ಬೈಕ್ ನಿಲ್ಲಿಸುವ ಸಮಯ ಬೈಕ್ ಕೀಯನ್ನು ಮರೆತು ಅದರಲ್ಲಿಯೇ ಬಿಟ್ಟಿರುವುದಾಗಿ, ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ  ಹೊಂಡಾ ಯೂನಿಕಾರ್ನ್ ಬೆಲೆ ಅಂದಾಜು ರೂ. 26,000/- ಆಗಬಹುದು.

 

9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-11-2014 ರಂದು ಪಿರ್ಯಾದಿದಾರರಾದ ಶ್ರೀ ಎಂ.ಎಂ. ರಾಜಕೃಷ್ಣನ್ ರವರು ಕೆಲಸ ಮಗಿಸಿ ಮನೆಗೆ ತೆರಳುತ್ತಿದ್ದ ಸಮಯ ಸುಮಾರು 19-00 ಗಂಟೆಗೆ ಕುಂಪಲ ಬೈಪಾಸ್ಕೋಳಿ ಅಂಗಡಿ ಬಳಿ ನಡೆದುಕೊಂಡು ಹೋಗುವಾಗ ಚೇತನ ನಗರ ಕಡೆಯಿಂದ ಮೋಟಾರ್ಬೈಕ್ಸವಾರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತ್ರಿಬಲ್ರೈಡ್ನಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ನಂತರ ಎದ್ದು ನೋಡಲಾಗಿ ಮೊಟಾರ್ಸೈಕಲ್ನಂಬ್ರ KA-19-Y-1225 ಆಗಿದ್ದು ಮೊಟಾರ್ಸೈಕಲ್ಸವಾರರು ಪಿರ್ಯಾದುದಾರರನ್ನು ಆಸ್ಪತ್ರೆಗೆ ಸೇರಿಸದೇ ವಾಹನದೊಂದಿಗೆ ಪರಾರಿಯಾಗಿರುತ್ತಾರೆ. ನಂತರ ಸಾರ್ವಜನಿಕರು ಪಿರ್ಯಾದುದಾರರನ್ನು ತೊಕ್ಕೊಟ್ಟುವಿನ ನೇತಾಜಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಪಿರ್ಯಾದುದಾರರ ಬಲಕಾಲಿಗೆ ರಕ್ತಗಾಯ ಹಾಗೂ ತಲೆಗೆ ಗುದ್ದಿದ ಗಾಯವಾಗಿರುತ್ತದೆ.

 

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 31.10.2014 ರಂದು ರಾತ್ರಿ 8.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಪುಷ್ಪರಾಜ್ ರವರು ಎಂದಿನಂತೆ ಕೆಲಸಮುಗಿಸಿಕೊಂಡು ಬಂದು ತನ್ನ ಬಾಭ್ತು ಕೆಎ-19-ಎಲ್‌‌-3561 ನೇ Hero honda splender ಮೋಟಾರ್‌‌ ಸೈಕಲನ್ನು ಅವರ ಮನೆಯ ಮುಂಭಾಗದ ಅಂಗಳದಲ್ಲಿ ನಿಲ್ಲಿಸಿ ರಾತ್ರಿ ಮನೆಯಲ್ಲಿ ನಿದ್ರೆ ಮಾಡಿ ದಿನಾಂಕ: 01.11.2014 ರಂದು ಮುಂಜಾನೆ 6 ಗಂಟೆಗೆ ಗೆ ಎದ್ದು ನೋಡುವಾಗ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಮೋಟಾರ್‌‌ ಸೈಕಲ್‌‌‌ ಕಾಣೆಯಾಗಿದ್ದು  ಸದ್ರಿ ಮೋಟಾರ್‌‌ ಸೈಕಲ್‌‌ ಪತ್ತೆಯ ಬಗ್ಗೆ  ನೆರೆಕರೆಯಲ್ಲಿ, ಮತ್ತು ಇತರ ಕಡೆಗಳಲ್ಲಿ ವರೆಗೆ ಪತ್ತೆಯಾಗಿರುವುದಿಲ್ಲ. ಸದ್ರಿ ಮೋಟಾರ್‌‌ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು  ಕಳವಾದ  ಮೋಟಾರ್‌‌ ಸೈಕಲ್‌‌ ಅಂದಾಜು ಮೌಲ್ಯ ಸುಮಾರು ರೂ 10,000/-  ಆಗಿರುತ್ತದೆ.

 

11.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06.11.2014 ರಂದು ಬೆಳಿಗ್ಗೆ ಸುಮಾರು 07:50 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಲೋಹಿತ್ ರವರ ತಾಯಿ 52 ವರ್ಷ ಪ್ರಾಯದ ಶ್ರೀಮತಿ. ಶೋಭಾ ಎಂಬವರು ಮಂಗಳೂರು ನಗರದ ವಾಮಂಜೂರು ಬಸ್ ನಿಲ್ದಾಣದ ಮುಂಭಾಗ ನಿಂತಿದ್ದ KA-19-AA-5099ನೇ ನಂಬ್ರದ ರೂಟ್ ನಂಬ್ರ 12B ರಾಜಶ್ರೀ ಹೆಸರಿನ ಬಸ್ಸಿಗೆ ಬಸ್ಸಿನ ಎಡಭಾಗದ ಮುಂಭಾಗದ ಬಾಗಿಲು ಮೂಲಕ ಹತ್ತುತ್ತಿದ್ದಂತೆ ಬಸ್ಸಿನ ನಿರ್ವಾಹಕರು ಶೋಭಾ ರವರು ಬಸ್ಸು ಹತ್ತುತ್ತಿರುವುದನ್ನು ಗಮನಿಸದೇ ಚಾಲಕರಿಗೆ ಬಸ್ಸು ಚಲಾಯಿಸುವರೇ ಸೂಚನೆ ನೀಡಿದ ಮೇರೆಗೆ ಸದ್ರಿ ಬಸ್ಸಿನ ಚಾಲಕ ಯಶವಂತ ಎಂಬವರು ಬಸ್ಸನ್ನು ಒಮ್ಮೇಲೆ ಅತೀವೇಗ ಮತ್ತು ನಿರ್ಲಕ್ಷತನದಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದುದಾರರ ತಾಯಿ ಶ್ರೀಮತಿ ಶೋಭಾ ರವರು ರಸ್ತೆಗೆ ಬಿದ್ದು ಬಸ್ಸಿನ ಎಡಭಾಗದ ಹಿಂಭಾಗದ ಚಕ್ರವು ಶೋಭಾ ರವರ ಎರಡೂ ಕಾಲುಗಳ ಮೇಲೆ ಹರಿದು ಎರಡೂ ಕಾಲುಗಳಿಗೂ ತೀವ್ರ ತರಹದ ರಕ್ತ ಗಾಯ ಮತ್ತು ಮೂಳೆ ಮುರಿತದ ಜಖಂಗೊಂಡವರು ಚಿಕಿತ್ಸೆ ಬಗ್ಗೆ ನಗರದ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುವುದಾಗಿದೆ.

No comments:

Post a Comment