Wednesday, November 12, 2014

Daily Crime Reports 12-11-2014

ದೈನಂದಿನ ಅಪರಾದ ವರದಿ.

ದಿನಾಂಕ 12.11.201417:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 11-11-2014 ರಂದು ರಾತ್ತಿ 8:15 ಗಂಟೆ ಸಮಯಕ್ಕೆ ..ಪಿ.ಎಮ್ .ಸಿ ಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ನಾಗ ರೆಡ್ಡಿ  @ ನಾಗರಾಜ ರೆಡ್ಡಿ  ಎಂಬವರು ತನ್ನ ಬಾಬ್ತು ಮೋಟಾರು ಸೈಕಲು ಕೆಎ.19.ಇಜೆ.6583 ನೇ ನಂಬ್ರದ ಬೈಕಿನಲ್ಲಿ ಚಿತ್ರಾಪುರ ಕಡೆಯಿಂದ ಚಿತ್ರಾಪುರ ತಣ್ಣೇರುಬಾವಿ ಕಡೆಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಪಶ್ಚಿಮ ದಿಕ್ಕಿಗೆ ತಿರುವು ಪಡೆದ ರಸ್ತೆಯ ಬಳಿ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಜಲ್ಲಿಲೋಡ್ ಮೇಲೆ ಬೈಕ್ ಹರಿದು ಸುಮಾರು 60 ಅಡಿಯಷ್ಟು ದೂರ ತಗ್ಗು ಪ್ರದೇಶಕ್ಕೆ ಬೈಕಿನೊಂದಿಗೆ ಬಿದ್ದು, ತಲೆಗೆ ಗಂಭೀರ ಗಾಯವಾಗಿ ಮೃತ ಪಟ್ಟಿರುವುದಾಗಿದೆ.

 

2.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ಪಿರ್ಯಾದಿದಾರರಾದ ಶ್ರೀಮತಿ ಲತಾ ರವರು ಸುಮಾರು 21 ವರ್ಷಗಳ ಹಿಂದೆ ರಮೇಶ್ ಎಂಬವರನ್ನು ಮದುವೆಯಾಗಿದ್ದು ,ಸುಮಾರು 10 ವರ್ಷಗಳ ನಂತರ ದಾಂಪತ್ಯ ಜೀವನದಲ್ಲಿ ವಿರಸ ಹೊಂದಿದ್ದು, ನಂತರ ತಾನು ತಂದೆಯ ಮನೆಯಲ್ಲಿ ವಾಸ್ತವ್ಯವಿದ್ದು ,ದಿನಾಂಕ 30-10-2014  ರಂದು ಬಗ್ಗೆ ಆಧಾಲತ್ ನಲ್ಲಿ ವಿಚಾರಣೆಯಾಗಿ  ಆಧಾಲತ್ ನ್ಯಾಯಾಲಯದಲ್ಲಿ  ಸಂಧಾನವಾಗಿ ದಿನಾಂಕ 15-11-2014 ರಂದು ದಿನಾಂಕ ನೀಡಿದ್ದು, ಬಗ್ಗೆ  ಮಾತನಾಡುವರೇ ತನ್ನ ಗಂಡನು ಮತ್ತು ಅವರ  ತಮ್ಮ ರಘುರವರೊಂದಿಗೆ ದಿನಾಂಕ 11-11-2014 ರಂದು ರಾತ್ರಿ 9-00 ಗಂಟೆಗೆ ಮನೆಗೆ ಬಂದಿದ್ದು ಮನೆಯಲ್ಲಿ ತನ್ನ ತಂದೆಯವರು ಅವರನ್ನು ಮನೆಯೊಳಗೆ ಕರೆದು ಅವರು ಮನೆಯೊಳಗೆ ಬಂದಿದ್ದು, ಕುಳಿತು  ಮಾತನಾಡುತ್ತಿರುವಾಗ ಅವರು ನನ್ನ ಜೊತೆಯಲ್ಲಿ ಚಿನ್ನ ಮತ್ತು ಹಣ ಕೊಡು ಎಂದು ನನ್ನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಬಂದಾಗ ತನ್ನ ತಂದೆಯವರು ತಡೆದಾಗ ತನ್ನ ಗಂಡನ ತಮ್ಮ ರಘುರವರು ತನ್ನ ತಂದೆಯವರನ್ನು ತಡೆದು ಕೈ ಯಿಂದ ಹೊಡೆದರು. ಅಷ್ಟರಲ್ಲಿ ಬೊಬ್ಬೆ ಕೇಳಿ ತನ್ನ ಅಣ್ಣ ಶೇಷಗಿರಿ ಮನೆಯ ಮಾಳಿಗೆಯಿಂದ ಕೆಳಗೆ ಬಂದಿದ್ದು ಅವರನ್ನು ನೋಡಿ ತನ್ನ ಗಂಡ ಮತ್ತು ಗಂಡನ ತಮ್ಮ ರಘುರವರು ಅಣ್ಣನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಇವನ ಧೈರ್ಯದಲ್ಲಿ ಇವಳು ಹೀಗೆ ಮಾಡುವುದು ಎಂದು ಹೇಳಿ ಹೊಡೆಯಲು ಮುಂದಾದಾಗ ಅಣ್ಣನು ತಪ್ಪಿಸಿಕೊಂಡಿದ್ದು, ವೇಳೆ ತನ್ನ ಗಂಡ ರಮೇಶ್ ಮತ್ತು ರಘುರವರು ತಮಗಿಬ್ಬರಿಗೂ ಕೊಲೆ ಬೆದರಿಕೆ ಹಾಕಿ ಮನೆಯ ಬಳಿ ನಿಲ್ಲಿಸಿದ್ದ. KA-19AA-3794 ಇನೋವಾ ಕಾರು ನಿಂತಿದ್ದು ಅದರಲ್ಲಿ ಎರಡು ಮೂರು ಜನ ಇದ್ದು ಅವರು ತನ್ನ ಗಂಡನನ್ನು ಕರೆದಿದ್ದು  ಇದನ್ನು ತಾನು ನೋಡಲಾಗಿ ಅವರೆಲ್ಲರೂ ಕಾರಿನಲ್ಲಿ ಹೋಗಿರುತ್ತಾರೆ.

 

3.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ 10.11.2014 ರಂದು ಸಂಜೆ ಸುಮಾರು 05.30 ಗಂಟೆಗೆ ಮಂಗಳೂರು ನಗರದ ಕದ್ರಿ ಶಿವಭಾಗ್ ಎಂಬಲ್ಲಿ KA19-EM-767 ನಂಬ್ರದ ಸ್ಕೂಟರ್ ನ್ನು ಅದರ ಸವಾರ ಪಿರೋಜ್ ಎಂಬಾತನು ನಂತೂರು ಕಡೆಯಿಂದ ಆಗ್ನೇಸ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ರಸ್ತೆಯ ತೀರ ಎಡಬದಿಯಲ್ಲಿ  ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದುದಾರರಾದ ಶ್ರೀಮತಿ ಗಾಯತ್ರಿ ರವರ ತಾಯಿ ಶ್ರೀಮತಿ ಲಕ್ಷ್ಮಿ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀಮತಿ ಲಕ್ಷ್ಮಿ ರವರು ರಸ್ತೆಗೆ ಬಿದ್ದು, ತಲೆಗೆ ಗಂಭೀರ ಸ್ವರೋಫದ ಗಾಯಾವಾಗಿ SCS ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

4.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನಾಂಕ:10-11-2014 ರಂದು ರಾತ್ರಿ  10.00 ಗಂಟೆಗೆ ಫಿರ್ಯಾದುದಾರರಾದ ಶ್ರೀ ಪುನೀತ್ ಕೆ.ಪಿ. ರವರು ತನ್ನ ಮನೆಯ ಸಮೀಪ ಬಡಾವಣೆ ರಸ್ತೆಯಲ್ಲಿರುವಾಗ ಯಾರೋ ಇಬ್ಬರು ಅಪರಿಚಿತರು ಮೋಟಾರು ಸೈಕಲ್ ನಲ್ಲಿ ಕೊಂಚಾಡಿ ಕಡೆಯಿಂದ ಕೊಟ್ಟಾರ ಕಡೆಗೆ ಫಿರ್ಯಾದುದಾರರು ನಿಂತಿರುವ ಬಳಿಗೆ ಬಂದು, ಅವರಲ್ಲಿ ಒಬ್ಬರು ಫಿರ್ಯಾದುದಾರರಿಗೆ ಕಬ್ಬಿಣದ ರಾಡಿನಿಂದ ಹೊಡೆಯಲು ಬೀಸಿದಾಗ ತಪ್ಪಿಸಿರುತ್ತಾರೆ. ಸಮಯ ಪಿರ್ಯಾದುದಾರರ ಕಸಿನ್ ಹಿಮಾಯಶು ಫಿರ್ಯಾದುದಾರರನ್ನು ಓಡಲು ತಿಳಿಸಿದ ಪ್ರಕಾರ ಓಡಿದಾಗ ಅಪರಿಚಿತರು ಕೈಯಲ್ಲಿದ್ದ ರಾಡನ್ನು ಫಿರ್ಯಾದುದಾರರ ಕಡೆಗೆ ಬಿಸಾಡಿದಾಗ ರಾಢ್ ಫಿರ್ಯಾದುದಾರರ ಎಡಕೈಯ ಭುಜದ ಬಳಿ ತಾಗಿ ಗುದ್ದಿದ ಹಾಗೂ ರಕ್ತಗಾಯವಾಗಿರುತ್ತದೆ. ನಂತರ ಆರೋಪಿಗಳು ಫಿರ್ಯಾದುದಾರರ ಮನೆಯ ಗೇಟಿನ ಬಳಿ ಬಂದು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿರುತ್ತಾರೆ. ಸಮಯ ನೆರೆಕರೆಯವರು ಹೊರಗೆ ಬರುವುದನ್ನು ಕಂಡು ಅಲ್ಲಿಂದ ಹೋಗಿರುತ್ತಾರೆ. ಘಟನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ನಂತರ ಫಿರ್ಯಾದುದಾರರು .ಜೆ. ಆಸ್ಪತ್ರೆಯಲ್ಲಿ ತನಗಾದ ಗಾಯಕ್ಕೆ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.

 

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ಆರೋಪಿ  ಸ್ಮಿತಾಉದಯಕುಮಾರ್ ರವರು  ಮಂಗಳೂರು ತಾಲೂಕು ಬಡಗ ಮಿಜಾರ್  ಗ್ರಾಮದ ಸರಕಾರಿ ಸ್ಥಳ ಸರ್ವೆ ನಂಬ್ರ 218-1 ರಲ್ಲಿನ 15 ಸೆಂಟ್ಸ್ ಸರಕಾರಿ ಸ್ಥಳವನ್ನು ಅನಧಿಕತವಾಗಿ ಒತ್ತುವರಿ ಮಾಡಿ ಸುಮಾರು 100 ಲೋಡು ಅಗುವಷ್ಟು ಮಣ್ಣನ್ನು ತೆಗೆದು ತನ್ನ ಸ್ವಂತ ಬಳೆಕೆಗಾಗಿ ಉಪಯೋಗಿಸಿಕೊಂಡಿರುತ್ತಾರೆ. ಬಗ್ಗೆ ಯಾವುದೇ ಅನುಮತಿಯನ್ನು ಪಡೆದುಕೊಂಡಿರುವುದಿಲ್ಲ ಮತ್ತು ಪಂಚಾಯತಿಯ ರಸ್ತೆಯನ್ನು ವಿರೂಪಗೊಳಿಸಿರುತ್ತಾರೆ. ದಿನಾಂಕ 11-11-2014 ರಂದು ಪಿರ್ಯಾಧಿದಾರರಾದ ಶ್ರೀ ಸೋಮಶೇಖರ ಮಯ್ಯ ರವರು ಸರಕಾರಿ ಅಧಿಕಾರಿಗಳೊಂದಿಗೆ  ರಸ್ತೆ ತಕರಾರು ಬಗ್ಗೆ ಸ್ಥಳ ಪರೀಶಿಲಿಸಲಾಗಿ ಹಿಟಾಚಿ ಯಂತ್ರವು ಹಾಗೂ ಟಿಪ್ಪರ್ ಲಾರಿ ನಂ ಕೆಎಲ್ 14--4888 ಸದ್ರಿ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು  ಸದ್ರಿ ವಾಹನವನ್ನು ಸ್ವಾಧಿನ ಪಡಿಸಿಕೊಂಡು ಮುಂದಿನ ಕ್ರಮದ ಬಗ್ಗೆ ಠಾಣೆಗೆ ನೀಡಿರುವುದಾಗಿದೆ.

 

6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 05-11-2014 ರಂದು ಫಿರ್ಯಾದುದಾರರಾದ ಕುಂಞರಾಮನ್ ರವರ ಭಾವನಾದ ನಾರಾಯಣನ್ ಪ್ರಾಯ 70 ವರ್ಷ ಎಂಬವರನ್ನು ಅಸೌಖ್ಯದ ಬಗ್ಗೆ ಚಿಕಿತ್ಸೆ ಪಡೆಯಲು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ದಿನಾಂಕ 10-11-2014 ರಂದು ಸಂಜೆ 03-00 ಗಂಟೆಗೆ ಇವರು ಸದ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಗೆ ಹೋಗುವ ತಯಾರಿಯಲ್ಲಿರುವಾಗ ಫಿರ್ಯಾದಿದಾರರು ಸಂಬಂದಪಟ್ಟ ಔಷದಿ ತರಲು ಮೆಡಿಕಲ್ ನಲ್ಲಿ ಇದ್ದು, ನಂತರ ಬಂದು ನೋಡಿದಾಗ ಆಸ್ಪತ್ರೆಯಲ್ಲಿದ್ದ ನಾರಾಯಣನ್ ರವರು ಕಾಣೆಯಾಗಿರುತ್ಥಾರೆ.

 

7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-11-2014 ರಂದು ಸಂಜೆ 4.10 ಗಂಟೆಗೆ  ಕೆಎ:19 ಎಂಎ:3398 ನಂಬ್ರದ ಜೀಪವನ್ನು ಅದರ ಚಾಲಕ  ಅತೀವೇಗ ಹಾಗೂ ಅಜಾಗರೂಕತೆಯಿಂದ  ಬಜಪೆ ಕಡೆಯಿಂದ ಕಾವೂರು ಕಡೆಗೆ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋದವನು  ಕರಂಬಾರು ಎಂಬಲ್ಲಿರುವ ರಸ್ತೆಯ ತಿರುವಿನಲ್ಲಿ  ವೇಗವಾಗಿದ್ದ ಜೀಪನ್ನು ನಿಯಂತ್ರಿಸಲಾಗದೆ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಪಿರ್ಯಾದುದಾರರಾದ ಶ್ರೀ ಯೋಗೀಶ್ ಎಂ. ಪುತ್ರನ್ ರವರ ಬಾವ ಪ್ರಶಾಂತ್ ಜಿ.ಕೆ. ಎಂಬವರು ಕಾವೂರು ಕಡೆಯಿಂದ ಬಜಪೆ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ನೊಂದಣಿ ನಂಬ್ರವಾಗದ  ಹೊಸ ಹೋಂಡಾ ಶೈನ್ ಮೋಟಾರು ಸೈಕಲಿಗೆ  ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟು  ತಲೆ, ಎದೆ, ಕೈ ಕಾಲುಗಳಿಗೆ ತೀವ್ರತರದ ಗಾಯಗೊಂಡು ಅಬೋಧಾವಸ್ಥೆಯಲ್ಲಿ .ಜೆ. ಆಸ್ಪತ್ರೆಗೆ ದಾಖಲಿಸಲ್ಪಟ್ಟವರು  ಚಿಕಿತ್ಸೆ ಫಲಕಾರಿಯಾಗದೆ ಸಂಜೆ 6.55 ಗಂಟೆಗೆ ಮೃತಪಟ್ಟದ್ದಾಗಿದೆ.

 

8.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ಫಿರ್ಯಾದುದಾರರಾದ ಶ್ರೀ ವೆಂಕಟೇಶ್ ರವರು ಹೊಸಬೆಟ್ಟುವಿನ ಲೀಲಾವತಿ ಕೆ ಶ್ರೀಯಾನ್ ಎಂಬವರ ಮತ್ಸ್ಯಶ್ರೀ ಎಂಬ ಹೆಸರಿನ IND-KA-01 MM 928 ನೇ ಮೀನಿನ ಬೋಟಿನಲ್ಲಿ ಮೀನುಗಾರಿಕಾ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 02-11-2014 ರಂದು ಮೀನು ಹಿಡಿಯಲು ಮತ್ಸ್ಯಶ್ರೀ ಬೋಟಿನಲ್ಲಿ, ಬೋಟಿನ ಥಂಡೇಲ್/ಅಪರೇಟರ್ ಆಗಿರುವ ಹೃದಯರಾಜ್ ರವರ ಜೊತೆ ಹೋದವರು ದಿನಾಂಕ 11-11-2014 ರಂದು ಬೆಳಿಗ್ಗೆ 10-15 ಗಂಟೆಗೆ ಮೀನು ಹಿಡಿದು ವಾಪಾಸು ಬೋಟಿನಲ್ಲಿ ಬರುತ್ತಿರುವ ಸಮಯ ಅಳಿವೆ ಬಾಗಿಲು ದಾಟಿ ದಕ್ಕೆಗೆ ತಲುಪಲು ಸುಮಾರು 500 ಮೀ ದೂರದಲ್ಲಿ ಗುರುಪುರ ಹೊಳೆಯ ನೀರಿನಲ್ಲಿ ಬೋಟ್ ಒಮ್ಮೆಲೆ ಬಂದ್ ಆಗಿದ್ದು, ಹೃದಯರಾಜ್ ರವರು ಬೋಟನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸಿದರು, ಬೋಟ್ ಸ್ಟಾರ್ಟ್ ಆಗಿರುವುದಿಲ್ಲ. ಆರೋಪಿ ಹೃದಯರಾಜ್ ರವರು ಬೋಟಿನಲ್ಲಿದ್ದ ಮೀನುಗಾರಿಕೆ ಕೆಲಸ ಮಾಡುತ್ತಿರುವ ವೆಂಕಟೇಶ್, ಗಾಯಾಳು ರಾಜೀವ್ ಗಾಂಧಿ ಹಾಗೂ ಇತರರನ್ನು ಬೋಟಿನ ಪಾರ್ಟೇಕ್ ಗೆ ಹಗ್ಗ ಕಟ್ಟಿ ಎಳೆದು ಬೋಟ್ ಸ್ಟಾರ್ಟ್ ಮಾಡುವರೇ ತಿಳಿಸಿದಂತೆ ಇವರುಗಳು ಹಗ್ಗ ಕಟ್ಟಿ ಎಳೆಯುತ್ತಿರುವ ಸಮಯ ರಾಜೀವ್ ಗಾಂಧಿ ಯವರು ಕಾಲು ಜಾರಿ ಇಂಜಿನ್ ಬೆಲ್ಟ್ ಗೆ ಬಿದ್ದು, ಕೆನ್ನೆಯ ಬಳಿ ರಬ್ಬಲ್ ಬೆಲ್ಟ್ ತಾಗಿ ಗಂಭೀರ ಗಾಯಗೊಂಡಿರುವುದು. ಬೋಟಿನ ಮಾಲಕಿಯಾದ ಲೀಲಾವತಿ ಶ್ರೀಯಾನ್ ಹಾಗೂ ಬೋಟಿನ ಥಂಡೇಲ್/ಅಪರೇಟರ್ ಆಗಿರುವ ಹೃದಯರಾಜ್ ರವರು ಬೋಟಿನಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ ಯಾವುದೇ ಸುರಕ್ಷಿತ ಕ್ರಮವನ್ನು ಕೈಗೊಳ್ಳದೇ ಹಾಗೂ ಬೋಟ್ ಸ್ಟಾರ್ಟ್ ಆಗದೇ ಇರುವ ಸಮಯ ಬೋಟಿನ ಕೆಲಸದಲ್ಲಿ ಅನುಭವ ಇಲ್ಲದ ರಾಜೀವ್ ಗಾಂದೀಯವರನ್ನು ಪಾರ್ಟೆಕ್ ಗೆ ಹಗ್ಗ ಕಟ್ಟಿ ಎಳೆಯಲು ಸೂಚಿಸಿರುವುದರಿಂದ ಘಟನೆ ಸಂಭವಿಸಿರುವುದಾಗಿದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ :  ಪಿರ್ಯಾದಿದಾರರಾದ ಶ್ರೀಮತಿ ಲಿಜ್ಜಿ ಗೋನ್ಸಾಲ್ವಿಸ್‌‌ ರವರ ಮಗ ಕೆವಿನ್ಸನ್‌‌ ಗೋನ್ಸಾಲ್ವಿಸ್‌‌ ಎಂಬವನಿಗೆ ಜೆಪ್ಪು ಸೆಮಿನರಿ ಕಂಪೌಂಡ್‌‌‌ ವಾಸಿ ಶಾಲ್ಚಿನ್‌‌ ಡಯಾಸ್‌‌ ಎಂಬವಳು ಪರಿಚಯವಾಗಿದ್ದು ಇಬ್ಬರು ಸ್ನೇಹಿತರಾಗಿದ್ದರು, ಶ್ವಾಲ್ವಿನ್‌‌ ಡಯಾಸ್‌‌ ಎಂಬಾಕೆಯು ಒಮ್ಮೊಮ್ಮೆ ಪಿರ್ಯಾದಿದಾರರ ಮಗನ ಜೊತೆಯಲ್ಲಿ ಮನೆಗೆ ಬರುತ್ತಿದ್ದು ಒಮ್ಮೊಮ್ಮೆ ಪಿರ್ಯಾದಿದಾರರ ಮನೆಯಲ್ಲಿ ತಂಗುತ್ತಿದ್ದಳು ಕಳೆದ ಸಪ್ಟೆಂಬರ್‌‌ ತಿಂಗಳಿನಲ್ಲಿ ಶಾಲ್ವಿನ್‌‌ ಡಯಾಸ್‌‌ ಳು ಪಿರ್ಯಾಧಿದಾರರ ಮನೆಯಲ್ಲಿ ಬಂದು ಉಳಿದು ಹೋದ ನಂತರ  ಮನೆಯೊಳಗೆ ಅಲ್ಮೆರಾದಲ್ಲಿದ್ದ ಸುಮಾರು 24 ಗ್ರಾಂ ತೂಕದ 2 ಬಳೆಗಳು  ಕಾಣೆಯಾಗಿತ್ತು ನಂತರ ದಿನಾಂಕ: 04.11.2014 ರಂದು ಶಾಲ್ವಿನ್‌‌ ಡಯಾಸ್‌‌ಳು ಪಿರ್ಯಾದಿದಾರರ ಮಗ ಸುಜಿತ್‌‌ನೊಂದಿಗೆ ಬಂದು ರಾತ್ರಿ ಮನೆಯಲ್ಲಿ ಉಳಿದುಕೊಂಡು ಮಾರನೇ ದಿನ ಬೆಳಿಗ್ಗೆ ಹೋದ ನಂತರ ಅದೇ ಅಲ್ಮೇರಾದಲ್ಲಿದ್ದ 2 ಬಳೆಗಳು ಕಾಣೆಯಾಗಿದ್ದವು , ಬಗ್ಗೆ ಪಿರ್ಯಾದಿದಾರರು ತನ್ನ ಮಗ ಸುಜಿತ್‌‌ನಲ್ಲಿ ಕೇಳಿದಾಗ ಆತನು ಬಗ್ಗೆ ಶಾಲ್ವಿನ್ಡಯಾಸ್‌‌ಳಿಗೆ  ಫೋನ್‌‌ ಮುಖಾಂತರ  ವಿಚಾರಿಸಿದಾಗ ಆಕೆಯು ನನಗೆ ತುಂಬಾ ಹಣದ ತೊಂದರೆ ಇದ್ದುದರಿಂದ  ದಿನಾಂಕ: 04.11.2014 ರಂದು 2 ಬಳೆಗಳನ್ನು ಹಾಗೂ ಕಳೆದ ಎರಡು ತಿಂಗಳ ಮೊದಲು 2 ಬಳೆಗಳನ್ನು ತಾನೇ ಕಳ್ಳತನ ಮಾಡಿ ತಂದಿರುವುದಾಗಿ ತಿಳಿಸಿರುತ್ತಾಳೆ.

 

10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.11.2014 ರಂದು  ಮಧ್ಯಾಹ್ನ 3.45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ರಾಮಕೃಷ್ಣ ರವರು ತನ್ನ ಅಜ್ಜಿ ಪಾರ್ವತಿ ರಾವ್‌‌ ರವರ ಬಾಬ್ತು ಕೆಎ-19-ಎಂಡಿ-3997 ನೇ ಕಾರನ್ನು ಚಲಾಯಿಸಿಕೊಂಡು ಕುಡುಪು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ವಾಪಾಸು ಮನೆ ಕಡೆಗೆ ಸದ್ರಿ ಕಾರಿನಲ್ಲಿ ನೀರುಮಾರ್ಗ ವಳಚ್ಚಿಲ್‌‌ ಮಾರ್ಗವಾಗಿ ಹೋಗುತ್ತಾ ಮೋಟೆಮಾರ್‌‌ ಡೌನ್‌‌ ಬಳಿ ತಲುಪಿದಾಗ  ಕೆಎ-19-ಇಜೆ-3461 ನೇ ದ್ವಿಚಕ್ರ ವಾಹನವನ್ನು ಒಬ್ಬ ಮಹಿಳೆಯು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಯ ಎಡಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಹಿಂಬದಿಯ ಬಂಪರ್ಗೆ ಜಖಂ ಆಗಿರುತ್ತದೆ.

No comments:

Post a Comment