Sunday, November 2, 2014

Daily Crime Reports 02-11-2014

ದೈನಂದಿನ ಅಪರಾದ ವರದಿ.

ದಿನಾಂಕ 02.11.201411:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-10-2014 ರಂದು ರಾತ್ರಿ 11-15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ವಿಜಯ್ ಕುಮಾರ್ ರವರ ಹೋಟೆಲ್ ನಲ್ಲಿ ಕೆಲಸ ಮಾಡುವ ದಯಾನಂದ ಸವಾರನಾಗಿ ಹಾಗೂ ಸಹಸವಾರನಾಗಿ ಯೋಗಿಶ ರವರು ಅಬುಬಕ್ಕರ್ ಸಿದ್ದಿಕ್ ಎಂಬವರ ಬಾಬ್ತು ಮೋಟಾರ ಸೈಕಲ್ ಕೆ 19 ಎಕ್ಸ್ 8116  ನೇಯದರಲ್ಲಿ ಹೋಟೆಲ್ ತ್ಯಾಜ್ಯಗಳನ್ನು ಹಿಡಿದುಕೊಂಡು ಬಿಸಾಡಲು ಹೋಗಿ ಮರಳಿ ಬರುವಾಗ ಕೂಳೂರು ಮಂಗಳೂರು ರಾ.ಹೆ 66 ರಲ್ಲಿ ಬರುತ್ತಾ ಕೋಡಿಕಲ್ ಕ್ರಾಸ್ ನಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಕೆ 01 ಎಎ 9805 ನೇ ನಂಬ್ರದ ರೇಡಿಮಿಕ್ಸ್ ವಾಹನವೊಂದನ್ನು ಅದರ ಚಾಲಕ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಹಿಂದಿನಿಂದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು ಸವಾರನು ಯಾವುದೆ ಗಾಯವಾಗದೆ, ರಸ್ತೆಯ ಪಕ್ಕಕ್ಕೆ ಎಸೆಯಲ್ಪಟ್ಟು ಮೋಟಾರ ಸೈಕಲ್ ಮತ್ತು ಸಹಸವಾರ ಯೋಗಿಶರವರನ್ನು ರೇಡಿಮಿಕ್ಸ್ ವಾಹನವು ಸುಮಾರು 50 ಅಡಿಗಳಷ್ಟು ದೂರ ಎಳೆದುಕೊಂಡು ಹೋಗಿದ್ದು, ಯೋಗಿಶರವರ ಸೊಂಟದ ಮೇಲೆ ಹರಿದು ಹೋದ ಪರಿಣಾಮ ಗಂಭೀರ ತರದಲ್ಲಿ ಗಾಯಗೊಂಡು ಮಂಗಳೂರು ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರೂ ಫಲಕಾರಿಯಾಗದೆ ದಿನಾಂಕ 01-11-2014 ರಂದು ಬೆಳಿಗ್ಗೆ 03-10 ಗಂಟೆಗೆ ಮೃತಪಟ್ಟಿರುವುದಾಗಿದೆ. ವಾಹನವನ್ನು ಚಾಲಕನು ಸ್ಥಳದಲ್ಲಿಯೇ ಬಿಟ್ಟು ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಸ್ಥಳದಿಂದ ಪರಾರಿಯಾಗಿರುತ್ತಾನೆ.

 

2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಲೋಕೇಶ್, ಪಣಂಬೂರು ಪೊಲೀಸ್ ಠಾಣೆ ರವರು ದಿನಾಂಕ 01-11-2014 ರಂದು ಠಾಣೆಯಲ್ಲಿರುವ ಸಮಯ ಸುಮಾರು 10-00  ಗಂಟೆಗೆ ಪೋನ್ ಕರೆಯೊಂದು ಬಂದಿದ್ದು ಆ ಕರೆಯಲ್ಲಿ  ಪಣಂಬೂರು ಬೀಚ್  ಬ್ರೇಕ್ ವಾಟರ್ ಬಳಿ ಯುವಕನೊಬ್ಬ ಕೈಯಲ್ಲಿ ಗಾಂಜಾದ ಕಟ್ಟೊಂದನ್ನು ಹಿಡಿದು ಗಿರಾಕಿಗಳಿಗೆ ಮಾರಾಟ ಮಾಡಲು ಕಾಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಅದರಂತೆ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ಠಾಣಾ ಸಿಬ್ಬಂಧಿಗಳು ಹಾಗೂ ಪಂಚರೊಂದಿಗೆ ಇಲಾಖಾ ಜೀಪಿನಲ್ಲಿ ಸ್ಥಳಕ್ಕೆ ಹೋಗಿ ಅಲ್ಲಿ ನಿಂತಿದ್ದ ಯುವಕನನ್ನು ಸುತ್ತುವರೆದು  ಹಿಡಿಯಲು ಪ್ರಯತ್ನಿಸಿದಾಗ ಆತನು ತನ್ನ ಕೈಯ್ಯಲಿದ್ದ ಗಾಂಜಾದ ಕಟ್ಟನ್ನು ಬಿಸಾಡಿ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾತನನ್ನು ಹಿಡಿದು ವಿಚಾರಿಸಿದಲ್ಲಿ ಆತನು ತನ್ನ ಹೆಸರು ಉದಯ ಕುಮಾರ್ ರೈ ಯಾನೆ ಉದಯ ಯಾನೆ ಬಾಬು ಎಂಬುದಾಗಿಯು ಕೈಯ್ಯಲಿದ್ದ ಬಿಸಾಡಿದ ಕಟ್ಟನ ಬಗ್ಗೆ ವಿಚಾರಿಸಿದಲ್ಲಿ ಇದು ಗಿರಾಕಿಗಳಿಗೆ ಮಾರಾಟ ,ಮಾಡಲು ತಂದಿರುವ ಗಾಂಜಾ ಎಂಬುದಾಗಿಯು ಪರವಾನಿಗೆ ಕೇಳಿದಲ್ಲಿ ಯಾವುದೇ ಪರವಾನಿಗೆ ಇಲ್ಲ ಎಂಬುದಾಗಿ ತಿಳಿಸಿದ ಮೇರೆಗೆ ಆತನನ್ನು ಮತ್ತು ಆತನ ವಶದಲ್ಲಿದ್ದ ಸುಮಾರು 10000/- ಮೌಲ್ಯದ 500 ಗ್ರಾಂ ಗಾಂಜಾವನ್ನು ಮಹಜರು ಮೂಲಕ  ಸ್ವಾದೀನ ಪಡಿಸಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

 

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-10-2014 ರಂದು ಮಧ್ಯಾಹ್ನ 14:30 ಗಂಟೆ ವೇಳೆಗೆ ಪಿರ್ಯಾದಿದಾರರಾದ ಶ್ರೀ ಹಸೈನಾರ್ ರವರು ಶುಕ್ರವಾರ ಮಸೀದಿಗೆ ಪ್ರಾರ್ಥನೆಗೆ ಹೋಗುವರೇ ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ನಡುಪದವು ಪಿ. ಕಾಲೇಜಿನ ಬಳಿ ರಿಕ್ಷಾಕ್ಕಾಗಿ ಕಾಯುತ್ತಿರುವಾಗ ನಡಪದವು ಕಡೆಯಿಂದ ಪಿ. ಕಾಲೇಜು ಕಡೆಗೆ ಆರೋಪಿಯು ಮೋಟಾರ್ ಸೈಕಲ್ ನಂಬ್ರ ಕೆಎ-19-ಇಸಿ-7294 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಕ್ಕೆ ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದು ಬೈಕನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ. ಬೈಕ್ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಎಡ ಕೋಲು ಕಾಲು ಕೀಲು ಮುರಿತದ ತೀವ್ರ ಗಾಯವಾಗಿರುತ್ತದೆ.

 

4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಅಕ್ಷಯ್ ರಾಜ್ ರವರು ಮಂಗಳೂರು ಬೈಕರ್ಸ್ ಸಂಸ್ಥೆಯ ಮ್ಯಾನೆಜರ್ ಆಗಿದ್ದು, ಫಿರ್ಯಾದಿಯಲ್ಲಿ 1 ನೇ ಆರೋಪಿಯಾದ ಸಂತೋಷ್ ಎ. ಕೊಟ್ಯಾನ್ ರವರು ದಿನಾಂಕ 03-09-2010 ರಿಂದ ಅಕೌಂಟ್ಸ್  ಮ್ಯಾನೆಜರ್ ಆಗಿದ್ದು,  ಆರೋಪಿಯು 2014 ನೇ ಇಸವಿಯ ಆಗಸ್ತ್ ತಿಂಗಳಿನಲ್ಲಿ ಕ್ಯಾಶ್ ಪುಸ್ತಕದಲ್ಲಿ ರೂ.22,00,000/- ಕ್ಯಾಶ್ ಇನ್ ಹ್ಯಾಂಡ್ ಎಂದು ನಮೂದಿಸಿರುತ್ತಾರೆ, ಆದರೆ ದಿನಾಂಕ 27-08-2014 ರಂದು ಆಫೀಸ್ ನಲ್ಲಿ ಪರಿಶೀಲಿಸಿದಾಗ ಕ್ಯಾಶ್ ಇನ್ ಹ್ಯಾಂಡ್ ಎಂದು ನಮೂದಿಸಲಾದ ನಗದು ಆಫೀಸ್ ನಲ್ಲಿ ಇರುವುದಿಲ್ಲ. ಬಳಿಕ ದಿನಾಂಕ 01-09-2014 ರಂದು ಆರೋಪಿ 1 ನೇ ಸಂತೋಷ್ ಎ. ಕೊಟ್ಯಾನ್ ರವರು ಬ್ಯಾಲನ್ಸ್ ಶೀಟ್ ಅನ್ನು ಸಲ್ಲಿಸಿದ್ದು, ಅದರಲ್ಲಿ ಆರೋಪಿಯು ರೂ.25,43,804.29 ಮತ್ತು ಡೆಟರ್ಸ್ ರೂ.99,52,079.90 ಎಂದು ನಮೂದಿಸಿರುತ್ತಾರೆ. ಆರೋಪಿ 1 ನೇ ಸಂತೋಷ್ ಎ. ಕೊಟ್ಯಾನ್ ರವರು ಕ್ಯಾಶ್ ಪುಸ್ತಕದಲ್ಲಿ ಸುಳ್ಳು ನಮೂದುಗಳನ್ನು ದಾಖಲಿಸಿರುವುದು ಕಂಡುಬಂದಿರುತ್ತದೆ. ಆರೋಪಿಯು ಶ್ರೀ ಸಾಯಿ ಮೋಟಾರ್ಸ್ ಐಬಿಸಿ ಪುತ್ತೂರು ಇವರಿಂದ ಒಟ್ಟು ರೂ. 1,81,66,470/- ಗಳನ್ನು ಪಡೆದುಕೊಂಡು ಸದ್ರಿ ಕಂಪೆನಿಗೆ ನಕಲಿ ರಿಸಿಪ್ಟ್ ಗಳನ್ನು ಕೇವಲ ರೂ.77,58,880/- ಮಾತ್ರಾ ತೋರಿಸಿ ರೂ.1,04,07,590/- ವಂಚಿಸಿರುವುದು ಅಡಿಟಿಂಗ್ ಸಮಯದಲ್ಲಿ ಕಂಡುಬಂದಿದ್ದು, ಬಳಿಕ ಆರೋಪಿ 1 ನೇ ಸಂತೋಷ್ ಎ. ಕೊಟ್ಯಾನ್ ರವರು ಆಫೀಸಿಗೆ ಬಂದು ಯಾವುದೇ ದೂರು ನೀಡದಂತೆ ಹಾಗೂ ಮೋಸ ಮಾಡಿರುವ ಹಣವನ್ನು ಹಿಂದಕ್ಕೆ ನೀಡುವುದಾಗಿ ತಿಳಿಸಿ ರೂ. 1,49,74,502/- ಕಾರ್ಪೋರೇಷನ್ ಬ್ಯಂಕ್ ಎಂ.ಜಿ. ರಸ್ತೆ. ಚೆಕ್ ನಂ 964659 ದಿನಾಂಕ 30-09-2014 ಚೆಕ್ಕನ್ನು ನೀಡಿದ್ದು, ಆದರೆ ಸದ್ರಿ ಚೆಕ್ ಡಿಸ್ ಹಾನರ್ ಆಗಿರುತ್ತದೆ. ಆರೋಪಿ 2 ರಿಂದ 7 ನೇ ವರೆಗಿನ ಆನಂದ, ಅಜಯ್, ಶ್ರೀಮತಿ ಸೌಮ್ಯ, ಶ್ರೀಮತಿ ರಜನಿ, ಶ್ರೀಮತಿ ಜೀವಿತಾ ಮತ್ತು ಭುಜಂಗ್ ಅಮೀನ್ ರವರು ಆರೋಪಿ 1 ನೇ ಸಂತೋಷ್ ಎ. ಕೊಟ್ಯಾನ್ ರವರು ನೀಡಬೇಕಾದ ಹಣವನ್ನು ಹಿಂದಕ್ಕೆ ನೀಡುವಂತೆ ತಿಳಿಸಿ ಸಂಸ್ಥೆಗೆ ಆಶ್ವಾಸನೆಗಳನ್ನು ನೀಡಿರುತ್ತಾರೆ. ಆರೋಪಿ 1 ನೇ ಸಂತೋಷ್ ಎ. ಕೊಟ್ಯಾನ್ ರವರು ನಕಲಿ ದಾಖಲೆ ಸೃಷ್ಠಿಸಿ, ನಂಬಿಕೆ ದ್ರೋಹ ಮಾಡಿ ಸಂಸ್ಥೆಗೆ ಒಟ್ಟು ರೂ.1,49,74,502/- ವನ್ನು ವಂಚಿಸಿರುವುದು ಸಂಸ್ಥೆಯ ದಾಖಲೆ ಪತ್ರಗಳಿಂದ ತಿಳಿದುಬಂದಿರುತ್ತದೆ.

 

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 01.11.02014 ರಂದು ಬೆಳಿಗ್ಗೆ 08.00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಎಂ.ಎ. ಅಚ್ಚಬ್ಬ ಹಾಜಿ ರವರು ಮಂಗಳೂರು ತಾಲೂಕು ತೋಡಾರು ಗ್ರಾಮದ ತೋಡಾರು ಜಂಕ್ಷನ್ ಎಂಬಲ್ಲಿ ತನ್ನ ಪತ್ನಿ ಶ್ರೀಮತಿ ಮರಿಯಮ್ಮ ಎಂಬವರೊಂದಿಗೆ ಪ್ರಣಾಮ್ ಎಂಬ ಬಸ್ಸಿಗೆ ಹತ್ತಿದ್ದು, ಟಿಕೆಟ್ ತೆರೆಯುವರೇ ಹಂಡೇಲು ಎಂದು ಹೇಳಿದಾಗ ತೋಡಾರು ಜಂಕ್ಷನ್ ಸ್ಪಲ್ಪ ಮುಂದೆ ಪೋಸ್ಟ್ಆಪಿಸ್ ಎದುರು ಬಸ್ ನಿಲ್ಲಿಸಿ ಸದ್ರಿ ಬಸ್ಸಿನ ನಿರ್ವಾಹಕ ಆರೋಪಿ ಕಲಂದರ್ ಎಂಬವನು ಪಿರ್ಯಾದಿದಾರರ  ಹಾಗೂ  ಪಿರ್ಯಾದಿದರರ  ಪತ್ನಿಯನ್ನು ಬಸ್ಸಿನಿಂದ ಕೆಳಗಿಳಿಸಿ ಆರೋಪಿ ಅವರನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಎರಡೂ ಕೆನ್ನೆಗೆ ಕೈಯಿಂದ ಹೊಡೆದು ಎದೆಗೆ ಕೈ ಹಾಕಿ ದೂಡಿ ಹಾಕಿ ಇನ್ನೊಮ್ಮೆ ನಮ್ಮ ಬಸ್ಸಿನಲ್ಲಿ ಬಂದರೆ ಕೊಂದು ಹಾಕುತ್ತೇನೆ ಎಂಬುದಾಗಿ ಜೀವ ಬೆದರಿಕೆಯನ್ನು ಒಡ್ಡಿರುತ್ತಾರೆ.

No comments:

Post a Comment