ವಾಟ್ಸಪ್ ಮುಖಾಂತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಶೀರ್ಷಿಕೆಯನ್ನು ಪ್ರಕಟಿಸಿರುವ ಬಗ್ಗೆ ಆರೋಪಿ ದಸ್ತಗಿರಿ
ಮಂಗಳೂರು ಉತ್ತರ ಪೊಲೀಸ್ ಠಾಣಾ ಮೊ.ನಂ. 155/2014 ಕಲಂ 295 (ಎ) ಮತ್ತು ಕಲಂ 66 (ಎ) ಐಟಿ ಕಾಯಿದೆಯ ಪ್ರಕರಣದಲ್ಲಿ ಆರೋಪಿಯಾದ ಶ್ಯಾಮ್ ಪ್ರಸಾದ್ ಜಿ, ಪ್ರಾಯ: 37 ವರ್ಷ, ತಂದೆ: ಕೃಷ್ಣಮೂರ್ತಿ ಭಟ್, ವಾಸ: ನಂಬ್ರ 578, 15 ನೇ ಮೈನ್, 23 ನೇ ಕ್ರಾಸ್ ಜ್ಯುಡಿಷಿಯಲ್ ಲೇಔಟ್, ಬೆಂಗಳೂರು 65 ಎಂಬವರು ತನ್ನ ಮೊಬೈಲ್ ನಲ್ಲಿ ವಾಟ್ಸಪ್ ಮುಖಾಂತರ ದಿನಾಂಕ: 02-08-2014 ರಂದು ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದ ಬಗ್ಗೆ ಶೀರ್ಷಿಕೆಯನ್ನು ತಯಾರಿಸಿ ಅದನ್ನು ಸ್ನೇಹಿತರಿಗೆ ಪ್ರಸಾರ ಮಾಡಿದ್ದು ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 26-09-2014 ರಂದು ಮಾನ್ಯ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಉಪ ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ, ಪೊಲೀಸ್ ಉಪ ಆಯುಕ್ತರು ಅಪರಾಧ ಹಾಗೂ ಪೊಲೀಸ್ ಸಹಾಯಕ ಆಯುಕ್ತರು, ಕೇಂದ್ರ ಉಪವಿಭಾಗ ರವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ಠಾಣಾ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಬೆಂಗಳೂರು ನಗರದ ಜ್ಯುಡಿಷಿಯಲ್ ಲೇಔಟ್ನಿಂದ ವಶಕ್ಕೆ ತೆಗೆದುಕೊಂಡು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿರುತ್ತಾರೆ.
No comments:
Post a Comment