ದೈನಂದಿನ ಅಪರಾದ ವರದಿ.
ದಿನಾಂಕ 12.09.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 1 |
ವಾಹನ ಕಳವು | : | 1 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-09-2014 ರಂದು ಮಧ್ಯಾಹ್ನ 03-45 ಗಂಟೆಗೆ ಫಿರ್ಯಾದಿದಾರರಾದ ಫ್ಲಾವಿಯಾ ಜ್ಯೋತಿ ಡಿ'ಸೋಜಾ ರವರು ಕೆ ಎ 19 ಇ ಎಲ್ 3592 ನೇಯ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಕಾಲೇಜಿನಿಂದ ಮನೆಯ ಕಡೆಗೆ ಸುರತ್ಕಲ್ ಎಮ್ ಆರ್ ಪಿ ಎಲ್ ರಸ್ತೆಯಲ್ಲಿ ಮೆಸ್ಕಾಂ ಕಛೇರಿ ಎದುರುಗಡೆಯಿಂದಾಗಿ ಹೋಗುತ್ತಿದ್ದಾಗ, ಎಮ್ ಆರ್ ಪಿ ಎಲ್ ಕಡೆಯಿಂದ ಸುರತ್ಕಲ್ ಕಡೆಗೆ ಕೆ ಎ 19 ಎಎ 387 ನೇಯ ಬಸ್ಸನ್ನು ಅದರ ಚಾಲಕ ಅಬ್ದುಲ್ ಖಾದರ್ ಎಂಬವರು ನಿರ್ಲಕ್ಷತನ ಮತ್ತು ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಮೇತ ಬಸ್ಸಿನ ಮುಂಭಾಗದ ಚಕ್ರದಡಿಗೆ ಸಿಲುಕಿಕೊಂಡು ಫಿರ್ಯಾದಿದಾರರ ಎಡಗಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆಗಾಗಿ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09.09.2014 ರಂದು ಸಮಯ ಸುಮಾರು ರಾತ್ರಿ 7.25 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹ್ಯಾರಿಯತ್ ಡಿ'ಸೋಜಾ ರವರು ತನ್ನ ಕಾರು ನಂಬ್ರ KA19-MD-7886 ರಲ್ಲಿ ಚಾಲಕರಾಗಿದ್ದುಕೊಂಡು ಕಾರನ್ನು ಬಂಟ್ಸ್ ಹಾಸ್ಟೆಲ್ ಕಡೆಯಿಂದ ಕದ್ರಿ ಶಾಸ್ತ್ರಿ ಕ್ಲಿನಿಕ್ ಕಡೆಗೆ ಚಲಾಯಿಸಿಕೊಂಡು ಬರುವರೇ ಶಾಸ್ತ್ರಿ ಕ್ಲಿನಿಕ್ ಎದುರುಗಡೆ ರಸ್ತೆ ತಲುಪುವಾಗ ಮಲ್ಲಿಕಟ್ಟೆ ಕಡೆಯಿಂದ ಮೋಟಾರ್ ಸೈಕಲ್ ನಂಬ್ರ KA19-EA-6826 ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದು ಫಿರ್ಯಾದುದಾರರ ಕಾರಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದಿ ಕಾರಿನ ಬಲಭಾಗದ ಬಂಪರ್ ಜಖಂಗೊಂಡಿರುತ್ತದೆ ಹಾಗೂ ಅಪಘಾತ ಮಾಡಿದ ಬೈಕು ಸವಾರನು, ಬೈಕು ಸಮೇತ ರಸ್ತೆಗೆ ಬಿದ್ದಿರುವುದಾಗಿದೆ.
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 04-09-2014 ರಂದು ಸಮಯ ಸುಮಾರು ಬೆಳಿಗ್ಗೆ 09-30 ಗಂಟೆಯಿಂದ ಸಂಜೆ ಸಮಯ 19-00 ಗಂಟೆಯ ಮಧ್ಯೆ ಮಂಗಳೂರು ನಗರದ ಎಂ.ಜಿ.ರಸ್ತೆಯಲ್ಲಿರುವ ಎಸ್ಸೆಲ್ ಸೆಂಟರ್ ನ ಪಾರ್ಕಿಂಗ್ ಸ್ಥಳದಲ್ಲಿ ಪಿರ್ಯಾದಿದಾರರಾದ ಶ್ರೀ ನಿತಿನ್ ಆರ್. ಭಟ್ ರವರು ಪಾರ್ಕ್ ಮಾಡಿಟ್ಟಿದ್ದ ತನ್ನ ಬಾಬ್ತು ಚಾಸೀಸ್ ನಂಬ್ರ: ME4JF211B98073503, ಇಂಜಿನ್ ನಂಬ್ರ:JF21E0094634ರ KA 19Y 7515ನೇ ನೊಂದಣಿ ಸಂಖ್ಯೆಯ 2009ನೇ ಮೊಡೆಲಿನ ಕಪ್ಪು ಬಣ್ಣದ ಅಂದಾಜು ಮೌಲ್ಯ ಸುಮಾರು 15,000/- ರೂ ಬೆಲೆ ಬಾಳುವ Honda Aviator ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ, ಸದ್ರಿ ದ್ವಿ-ಚಕ್ರ ವಾಹನವನ್ನು ಕಳವಾದ ದಿನದಿಂದ ಇಲ್ಲಿಯವರೆಗೆ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು ದಿನಾಂಕ 11-09-2014 ರಂದು ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ.
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀಮತಿ ಮಲ್ಲಿಕಾ ಬಿ ರಾವ್ ರವರು ದಿನಾಂಕ 11-09-2014 ರಂದು ಮನೆಗೆ ಸಾಮಾನು ತರುವರೇ ಕಿನ್ನಿಗೋಳಿ ಮಾರುಕಟ್ಟೆಗೆ ಹೋಗಿದ್ದು, ಸಾಮಾನು ಖರೀದಿಸಿ ಕಿನ್ನಿಗೋಳಿಯಿಂದ ಬಸ್ಸಿನಲ್ಲಿ ಬಂದು ಹೊಸಕಾಡು ಬಸ್ಸು ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಮನೆಯ ಕಡೆಗೆ ರಸ್ತೆ ದಾಟಿ ಸ್ವಲ್ಪ ಮುಂದೆ ನಡೆದುಕೊಂಡು ಹೋಗುತ್ತಿದ್ದಂತೆ ಬೆಳಿಗ್ಗೆ ಸುಮಾರು 11-15 ರ ವೇಳೆಗೆ ಅವರ ಹಿಂದಿನಿಂದ ಒಂದು ಮೋಟಾರ್ ಸೈಕಲ್ ನಲ್ಲಿ ಹೆಲ್ಮೆಟ್ ಧರಿಸಿಕೊಂಡಿದ್ದ ಇಬ್ಬರು ಸವಾರರು ಸವಾರಿ ಮಾಡಿಕೊಂಡು ಬಂದು ಸ್ವಲ್ಪ ಮುಂದೆ ಹೋಗಿ ಮೋಟಾರ್ ಸೈಕಲನ್ನು ತಿರುಗಿಸಿ ಪುನಃ ಸವಾರಿ ಮಾಡಿಕೊಂಡು ಹತ್ತಿರ ಬಂದು ಮೋಟಾರ್ ಸೈಕಲಿನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ನೀಲಿ ಬಣ್ಣದ ಟೀ ಶರ್ಟನ್ನು ಹಾಕಿದ್ದ ಯುವಕ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಎಳೆದಿದ್ದು, ಈ ಸಮಯ ಕರಿಮಣಿ ಸರ ತುಂಡಾಗಿದ್ದು, ಅಪರಿಚಿತರು 32 ಗ್ರಾಂ ತೂಕದ ಕರಿಮಣಿ ಸರದ ತುಂಡು ಮತ್ತು ಹವಳವನ್ನು ಎಳೆದುಕೊಂಡು ಬಂದಿದ್ದ ಮೋಟಾರ್ ಸೈಕಲ್ ಸಮೇತ ಎಸ್.ಕೋಡಿ ಕಡೆಗೆ ಪರಾರಿಯಾಗಿರುತ್ತಾರೆ. ಸದ್ರಿ ಕರಿಮಣಿ ಸರದ ಅಂದಾಜು ಮೌಲ್ಯ ರೂ 80,000/- ಆಗಬಹುದು.
5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-09-2014 ರಂದು ಮದ್ಯಾಹ್ನ 12.00 ಗಂಟೆ ಸಮಯಕ್ಕೆ ಪಿರ್ಯಾಧಿದಾರರಾದ ಶ್ರೀ ಪರೇಶ್ ಗಿರಿ ರವರು ಮೂಡಬಿದ್ರೆ ನವಮಿ ಟವರ್ಸನ ಎಸ್ ಟಿ ಡಿ ಬೂತ್ ಗೆ ಹೋಗಿ ಮೊಬೈಲ್ ಗೆ ರಿಚಾರ್ಜ ಮಾಡಿ ನಂತರ ವಾಪಸ್ ಪಂಚರತ್ನ ಹೋಟೇಲ್ ಗೆ ಹೋಗುವರೇ ರಸ್ತೆಯ ಬದಿಯಲ್ಲಿ ನಿಂತಿರುವ ಸಮಯ ಮೂಡಬಿದ್ರೆ ಕಡೆಯಿಂದ ಅ್ಯಕ್ಟೀವ್ ಹೊಂಡ ನಂ ಕೆ ಎ 19 ಇಕೆ 4731 ಅದರ ಚಾಲಕ ಸಪಜ್ ಎಂಬವನು ವಾಹನದಲ್ಲಿ ಇಬ್ಬರು ಸಹ ಸವಾರನು ಕುಳಿರಿಸಿಕೊಂಡು ಅತೀವೇಗ ಹಾಗೊ ಆಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲ ಕೈಗೆ, ಸೊಂಟಕ್ಕೆ, ಮಂಡಿಗೆ ,ಪಾದಕ್ಕೆ ಗುದ್ದಿದ ಗಾಯ ಹಾಗೂ ಬಲ ಹಣೆಗೆ ತರಚಿದ ಗಾಯ ವಾಗಿರುತ್ತದೆ, ಗಾಯಾಳುಗಳು ಮೂಡಬಿದ್ರೆ ಆಳ್ವಾಸ್ ಅಸ್ಪತ್ರಗೆ ಪ್ರಥಮ ಚಿಕಿತ್ಸೆ ಪಡೆದು ನಂತರ ಇಂಡಿಯನಾ ಅಸ್ಪತ್ರೆಗೆ ದಾಖಲಾಗಿರುವುದಾಗಿದೆ.
6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-09-2014 ರಂದು 18:15 ಘಂಟೆಯ ವೇಳೆಗೆ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ನಝೀರ್ ರವರು ಮೂಡಬಿದ್ರೆ ಮಹಾವೀರ ಕಾಲೇಜು ಬಳಿಯ ರಿಕ್ಷಾ ಪಾರ್ಕ್ನಿಂದ ತನ್ನ ಪರಿಚಯದ ಇಮ್ತಿಯಾಜ್ ಎಂಬಾತನ ಅಟೋರಿಕ್ಷಾವನ್ನು ಬಾಡಿಗೆಗೆ ಗೊತ್ತು ಮಾಡಿ ಹೋಗುತ್ತಾ ಪ್ರಾಂತ್ಯ ಗ್ರಾಮದ ಕೋಡಂಗಲ್ಲು ರಸ್ತೆಗೆ ತಲುಪಿದಾಗ ಆರೋಪಿಗಳಾದ ರಹಿಮಾನ್ ಮತ್ತು ಇಲ್ಯಾಸ್ ಎಂಬವರು ಮೋಟಾರು ಸೈಕಲ್ಲಿನಲ್ಲಿ ಬಂದು ಸಮಾನ ಉದ್ಧೇಶದಿಂದ ಸದ್ರಿ ಅಟೋರಿಕ್ಷಾವನ್ನು ಮುಂದೆ ಹೋಗದಂತೆ ಅಡ್ಡಗಟ್ಟಿ, ಇಲ್ಯಾಸ್ ಎಂಬಾತನು ಮೋಟಾರು ಸೈಕಲ್ಲಿನಿಂದ ಇಳಿದು ಬಂದು ಪಿರ್ಯಾದುದಾರರಲ್ಲಿ, "ನೀನು ಯಾರಿಂದ ನನ್ನ ಮೊಬೈಲ್ಗೆ ಫೋನ್ನಲ್ಲಿ ಮಾತಾಡಿಸಿದ್ದಿ" ಎಂದು ಕೇಳಿ ಕೈಯಿಂದ ಕೆನ್ನೆಗೆ ಹೊಡೆದು, ಟೀ-ಶರ್ಟನ್ನು ಹರಿದು ಹಾಕಿದಲ್ಲದೇ, ಇದನ್ನು ತಡೆದ ರಿಕ್ಷಾ ಚಾಲಕ ಇಮ್ತಿಯಾಜನಿಗೆ ಕೂಡಾ ಇಲ್ಯಾಸ್ ಕೈಯಿಂದ ತಲೆಗೆ ಹಾಗೂ ಕೆನ್ನೆಗೆ ಹೊಡೆದಿದ್ದು, ಈ ಸಮಯ ರಹಿಮಾನನು ಪಿರ್ಯಾದುದಾರರ ಎಡ ಭುಜದ ಕೆಳಗೆ ತೋಳಿಗೆ ಹ್ಯಾಕ್ಸೋ ಬ್ಲೇಡ್ನಿಂದ ನಾಲ್ಕೈದು ಸಲ ಗೀರಿ ರಕ್ತ ಗಾಯ ವನ್ನುಂಟು ಮಾಡಿದ್ದು, ಈತನು ಕೂಡಾ ರಿಕ್ಷಾ ಚಾಲಕನಿಗೆ ಕೈಯಿಂದ ಹಲ್ಲೆ ಮಾಡಿದ್ದು, ಈ ವೇಳೆಗೆ ಅಲ್ಲಿಗೆ ಬಂದ ಕೆಲವರನ್ನು ನೋಡಿ ಈರ್ವರಿಗೂ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದು, ಗಾಯಾಳಾದ ಪಿರ್ಯಾದುದಾರರು ಮೂಡುಬಿದ್ರಿ ಆಳ್ವಾಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.
7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಪಿ. ಸುನೀಲ್ ಭಂಡಾರಿ ರವರು ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿರುವ ಸ್ಕೂಲ್‌ಬುಕ್ ಕಂಪನಿಯನ್ನು ನಡೆಸಿಕೊಂಡು ಬರುತ್ತಿದ್ದು, ಅಂಗಡಿಯ ಎರಡು ಕಡೆಯಲ್ಲಿ ರಾತ್ರಿ ವೇಳೆಯಲ್ಲಿ ವಾಚ್‌ಮ್ಯಾನ್ ಇರುತ್ತಾರೆ. ದಿನಾಂಕ 08-09-2014 ರಂದು ರಾತ್ರಿ 12-30 ಗಂಟೆಗೆ ಅಂಗಡಿಯನ್ನು ಬಂದ್ ಮಾಡಿ ಹೋಗಿದ್ದು, ದಿನಾಂಕ 09-09-2014 ರಂದು ಬೆಳಿಗ್ಗೆ ಸುಮಾರು 08-15 ಗಂಟೆಗೆ ಅಂಗಡಿಗೆ ಬಂದು ಬಾಗಿಲು ತೆರೆದು ಒಳಪ್ರವೇಶಿಸಿದಾಗ ಗ್ರಾಹಕರಿಂದ ಆರ್ಡರ್ ಬುಕಿಂಗ್ ಪಡೆಯುವ ಟೇಬಲ್‌ನ ಡ್ರಾವರ್ ಹಾಗೂ ಬಾಗಿಲು ತೆರೆದುಕೊಂಡಿದ್ದು, ಅದರಲ್ಲಿದ್ದ ದಾಖಲಾತಿಗಳು ಚಲ್ಲಾಪಿಲ್ಲಿಯಾಗಿತ್ತು. ಬಳಿಕ ಒಳಗಡೆ ಹೋಗುವ ಶಟರ್ ಬೀಗ ತೆರೆದು ಹೋಗಿ ಕ್ಯಾಶ್ ಕೌಂಟರ್ ಟೇಬಲ್ ನೋಡಿದಾಗ ರಾತ್ರಿ ಅಂಗಡಿ ಬಂದ್ ಮಾಡುವ ಸಮಯ ಮೇಜಿನ ಮೇಲ್ಭಾಗದಲ್ಲಿ ಟ್ರೇನಲ್ಲಿ ಇಟ್ಟಿದ್ದ ವಿವಿಧ ಮುಖ ಬೆಲೆಯ ಹೊಸ ನೋಟುಗಳು ಹಾಗೂ ನಾಣ್ಯಗಳು ಕಾಣೆಯಾಗಿತ್ತು. ಇದರಲ್ಲಿ ಅಂದಾಜು ಸುಮಾರು 40,000/- ದಿಂದ 45,000/- ಹಣ ಇತ್ತು. ಕ್ಯಾಶ್ ಕೌಂಟರ್ನಿಂದ ಒಳಗಡೆ ಪೇಪರ್ ಕೌಂಟರ್‌ಗೆ ಹೋಗುವ ಬಾಗಿಲನ್ನು ಬಲಾತ್ಕಾರದಿಂದ ಮುರಿದಿರುವುದು ಕಂಡು ಬಂದಿದ್ದು, ಅಂಗಡಿಗೆ ಯಾರೋ ಕಳ್ಳರು ಬಂದಿರುವುದಾಗಿ ತಿಳಿದು ಅಂಗಡಿಯ ಸಿಬ್ಬಂದಿಗಳಿಗೆ ವಿಷಯ ತಿಳಿಸಿ ಅವರ ಮೂಲಕ ಸ್ಕೂಲ್ ಬುಕ್ ಕಂಪನಿಯ ಎಲ್ಲಾ ಕೋಣೆಗಳನ್ನು ಪರಿಶೀಲಿಸಿಕೊಂಡಲ್ಲಿ ಜನರೇಟರ್ ರೂಮಿನ ಬೇಸಿನ್ ಪಕ್ಕದ ಕಿಟಕಿಯ ಸರಳನ್ನು ಎಕ್ಸೋ ಬ್ಲೇಡ್ನಿಂದ ತುಂಡರಿಸಿದ್ದು ಕಂಡು ಬಂದಿರುತ್ತದೆ. ರಾತ್ರಿ ಅಂಗಡಿಯನ್ನು ಬಂದ್ ಮಾಡಿ ಹೋದ ಬಳಿಕ ಯಾರೋ ಕಳ್ಳರು ಅಂಗಡಿ ಮಹಡಿಯ ಮೇಲ್ಚಾವಣಿಯ ಮುಖೇನ ಸ್ಕೂಲ್ ಬುಕ್ ಕಂಪನಿಯ ಒಳಗಡೆ ಪ್ರವೇಶಿಸಿ ಕಿಟಕಿಯ ಕಬ್ಬಿಣದ ರಾಡನ್ನು ಎಕ್ಸೋಬ್ಲೇಡ್ನಿಂದ ತುಂಡರಿಸಿ ಒಳಪ್ರವೇಶಿಸಿ ಕ್ಯಾಶ್ ಟೇಬಲ್ ಮೇಲಿಟ್ಟಿದ್ದ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಬಗ್ಗೆ ಸ್ಕೂಲ್ ಬುಕ್ ಕಂಪನಿಯಲ್ಲಿ ಕೆಲಸ ಮಾಡುವ ಕೆಲಸಗಾರರನ್ನು ವಿಚಾರಿಸಿಕೊಂಡು ಬಳಿಕ ತಡವಾಗಿ ದಿನಾಂಕ 11-09-2014 ರಂದು ದೂರು ನೀಡಿರುವುದಾಗಿದೆ.
8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ನರಸಿಂಹ ಗೌಡ ರವರು ಕೆಎ 19 ಡಿ 7239 ನೇ ಅಟೋ ರಿಕ್ಷಾದ ಚಾಲಕನಾಗಿದ್ದು, ಸದ್ರಿ ಅಟೋ ರಿಕ್ಷಾದಲ್ಲಿ ದಿನಾಂಕ 11-9-2014 ರಂದು ಬಾಡಿಗೆ ನಿಮಿತ್ತ ಪೆರ್ಮುದೆ ಎಂಬಲ್ಲಿಂದ ಕಟೀಲಿಗೆ ಹೋಗಿ ಅಲ್ಲಿ ಪ್ರಯಾಣಿಕರನ್ನು ಇಳಿಸಿ ವಾಪಾಸು ಪೆರ್ಮುದೆ ಬರುತ್ತಾ ಬೆಳಿಗ್ಗೆ ಸುಮಾರು 10-00 ಗಂಟೆಗೆ ಎಕ್ಕಾರು ದುರ್ಗಾನಗರ ಎಂಬಲ್ಲಿಗೆ ತಲಪುವಾಗ ಎದುರಿನಿಂದ ಒಂದು ಬಸ್ಸನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾ ಸಂಪೂರ್ಣ ಜಖಂಗೊಂಡು, ಪಿರ್ಯಾದುದಾರರ ಎಡಕೈಗೆ, ಬಲಕಾಲಿಗೆ ಮತ್ತು ತಲೆಗೆ ತರಚಿದ ರೀತಿಯ ಗಾಯವಾಗಿರುತ್ತದೆ. ಡಿಕ್ಕಿ ಹೊಡೆದ ಬಸ್ಸಿನ ನಂಬ್ರ ಕೆಎ 19 ಡಿ 6759 ಆಗಿದ್ದು ಅದರ ಚಾಲಕನ ಹೆಸರು ಅಹಮ್ಮದ್ ಬಾವಾ ಎಂಬುದಾಗಿರುತ್ತದೆ.
9.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ತಾಲೂಕು, ದೇರಳಕಟ್ಟೆ, ಕೋಟೆಕಾರು ಗ್ರಾಮದ ಕೆಎಸ್ ಹೆಗ್ಡೆ ಆಸ್ಪತ್ರೆಯ ಇಎನ್ಟಿ ವಿಭಾಗದಲ್ಲಿ ಕೆಲಸ ಮಾಡುವ ಪಿರ್ಯಾದುದಾರರಾದ ಅಮೂಲ್ಯಾ ರವರು ದಿನಾಂಕ 10-09-2014 ರಂದು 15-00 ಗಂಟೆ ಸಮಯಕ್ಕೆ ಕೆಎಸ್ ಹೆಗ್ಡೆ ಆಸ್ಪತ್ರೆಯ ಇಎನ್ಟಿ ಹೊರರೋಗಿ ವಿಭಾಗದಲ್ಲಿ ತನ್ನ ಬಾಬ್ತು 2 ಎಟಿಎಮ್ ಕಾರ್ಡ್, ಡಿ.ಎಲ್., ವೋಟರ್ ಐಡಿ ಇದ್ದ ಬ್ಯಾಗ್ನ್ನು ಇಟ್ಟು ತುರ್ತುಚಿಕಿತ್ಸಾ ಅಪಘಾತ ವಿಭಾಗಕ್ಕೆ ಹೋಗಿ 16-00 ಗಂಟೆ ಸಮಯಕ್ಕೆ ವಾಪಾಸು ಬಂದು ನೋಡಿದಾಗ ಬ್ಯಾಗ್ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
10.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 11.09.2014 ರಂದು ಪಿರ್ಯಾದಿದಾರರಾದ ಶ್ರೀ ಶಶಿಕಿರಣ್ ರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ: ಕೆಎ-19-ಡಬ್ಲ್ಯು-2600 ನೇದರಲ್ಲಿ ಪಂಪ್ವೆಲ್ನಿಂದ ನಾಗೂರಿ ಕಡೆಗೆ ಹೋಗುತ್ತಾ ರೆಡ್‌ಬಿಲ್ಡಿಂಗ್ ಬಳಿ ತಲುಪಿದಾಗ ಪಡೀಲ್ ಕಡೆಯಿಂದ ಪಂಪ್ವೆಲ್ ಕಡೆಗೆ ಮೊಟಾರ್ ಸೈಕಲ್ ನಂಬ್ರ: ಕೆಎ-19-ಡಬ್ಲ್ಯು-2488 ನೇದನ್ನು ಅದರ ಸವಾರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರ ಮೋಟಾರ್ ಸೈಕಲ್ಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾಧಿದಾರರು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಬಲಕೈ ಮಣಿಕಂಟಿನಿಂದ, ಕೋಲು ಕೈಗೆ ತೀವ್ರತರದ ಗುದ್ದಿದ ಜಖಂ ಆಗಿ ರಕ್ತಬರುವ ಮತ್ತು ಮೂಳೆ ಮುರಿತದ ಗಾಯವಾಗಿರುತ್ತದೆ.
No comments:
Post a Comment