Thursday, September 25, 2014

Daily Crime Reports 25-09-2014

ದೈನಂದಿನ ಅಪರಾದ ವರದಿ.

ದಿನಾಂಕ 25.09.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

4

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24-9-2014 ರಂದು ಬೆಳಿಗ್ಗೆ 08-30 ಗಂಟೆಗೆ  ಪಿರ್ಯಾದಿದಾರರಾದ ಶ್ರೀ ಮಯ್ಯದ್ದಿ ರವರು ನಿರ್ವಾಹಕರಾಗಿರುವ ಕೆಎ-19-ಬಿ-3629 ನ್ನು ಮಂಗಳೂರಿನಿಂದ ಉಡುಪಿ ಕಡೆಗೆ ಅದರ ಚಾಲಕನಾದ ಹರಿಶ್ಚಂದ್ರ ಇವರು ಚಲಾಯಿಸಿಕೊಂಡು ಬಂದು ಮಂಗಳೂರು ತಾಲೂಕು ಸುರತ್ಕಲ್‌‌ ಗ್ರಾಮದ ಮುಕ್ಕ ಬಸ್ ಸ್ಟಾಂಡ್‌‌ ಬಳಿಯಲ್ಲಿ ನಿಲ್ಲಿಸಿ ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸಿ ಹತ್ತಿಕೊಳ್ಳುತ್ತಿದ್ದ ಸಮಯ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆಎ-19-ಸಿ 5289 ನೇ ನಂಬ್ರದ ಬಸ್ಸನ್ನು ಅದರ ಚಾಲಕನಾದ ರಾಘವೇಂದ್ರ ಎಂಬಾತನು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಇದ್ದ ಬಸ್ಸು ನಂಬ್ರ ಕೆಎ-19-ಬಿ-3629 ನೇದಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಬಸ್ಸುಗಳು ಎರಡು ಜಖಂ ಗೊಂಡಿದ್ದು, ಪರಿಣಾಮ ಕೆಎ-19-ಬಿ-3629 ನೆದರ ಚಾಲಕ ಹರಿಶ್ವಂದ್ರ ರವರ ಕುತ್ತಿಗೆಗೆ ಹಾಗು ಪಿರ್ಯಾದಿದಾರರ ಬಸ್ಸಿನಲ್ಲಿದ್ದ ಪ್ರಯಾಣಿಕರಾದ ಇಬ್ರಾಹಿಂ, ಕಾದರ್‌‌, ಕೇರಪ್ಪ, ಶಿಲ್ಪಾ, ಇವರಿಗೆ ತಲೆಗೆ ಗುದ್ದಿದ ಸಾಮಾನ್ಯ ಗಾಯ ಆಗಿದ್ದು, ಅಪಘಾತ ಪಡಿಸಿದ ಬಸ್ಸಿನಲ್ಲಿದ್ದ ಶಿವಪ್ಪ ಮತ್ತು ಆದರ್ಶ ಕಾಮತ್ಇವರಿಗೆ ಮುಖಕ್ಕೆ ತೀವ್ರ ಗಾಯ ಆಗಿದ್ದು, ಹಲ್ಲು ಕಿತ್ತು ಹೋಗಿದ್ದು, ಅಲ್ಲದೇ ಅಪಘಾತ ಪಡಿಸಿದ ಇತರ ಪ್ರಯಾಣಿಕರಾದ ಜಸೀರ್‌, ವಿನೋದ್‌‌, ವಸಂತ, ರಾಜೀವ್ಶೆಟ್ಟಿ, ಹೆಚ್ಬಿಎಲ್‌‌ ರಾವ್‌‌, ಪ್ರಸಾದ್‌‌‌, ಸೇರಿನ್ಡಿ ಸೋಜ ಮತ್ತು ಇತರರಿಗೆ ಗುದ್ದಿದ ಗಾಯವಾಗಿದ್ದು, ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 24.09.2014 ರಂದು ಪಿರ್ಯಾದಿದಾರರಾದ ಕೀರ್ತನಾ ವಿ.ಬಿ. ರವರ ತಾಯಿ ಶ್ರೀಮತಿ  ರಾಜಲಕ್ಷ್ಮೀ ಪ್ರಾಯ 61 ವರ್ಷ ಎಂಬವರು ಸುರತ್ಕಲ್ ಕಡೆ ಹೋಗುವರೇ ತನ್ನ ಮನೆಯಿಂದ  ನಡೆದುಕೊಂಡು ಬಂದು ಬಳ್ಳಾಲ್ ಭಾಗ್ ಬಸ್ಸು ನಿಲ್ದಾಣದ ಕಡೆಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ  ಪಿ ಸಿ ಜ್ಯುವೆಲ್ಲರಿ ಎದುರು ತಲುಪಿದ  ಸಮಯ  ಬೆಳಿಗ್ಗೆ 11.00 ಗಂಟೆಗೆ  ಆರೋಪಿ  ಹೋಂಡಾ ಆಕ್ಟೀವಾ  ಕೆಎ.19.ಈಜಿ.6289 ನೇ ಸವಾರ  ರಮೀಝ್ ರಾಝ್ ಎಂಬವರು  ಪಿ ವಿ ಎಸ್ ಕಡೆಯಿಂದ  ಲಾಲ್ ಭಾಗ್ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ರಸ್ತೆಯ ತೀರಾ ಎಡ ಬದಿಗೆ ಪಿರ್ಯಾದಿದಾರರ ತಾಯಿಯ ಹಿಂದುಗಡೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ  ರಸ್ತೆಗೆ ಬಿದ್ದು  ಬಲ ಭುಜದ  ಮೂಳೆ ಮುರಿತ  ಹಾಗೂ ಹಣೆಗೆ ರಕ್ತ ಗಾಯ ಮತ್ತು ಎದೆಗೆ ಗುದ್ದಿದವಾಗಿರುತ್ತದೆ. ಅಲ್ಲದೆ ಆರೋಪಿ  ಆಕ್ಟೀವಾ ಹೋಂಡಾ ಸವಾರರಿಗೂ  ಸಣ್ಣ ಪುಟ್ಟ ಗಾಯವಾಗಿರುವುದಾಗಿದೆ. ಗಾಯಾಳು ರಾಜಲಕ್ಷ್ಮೀ ರವರು ನಗರದ ಯೆನೊಪಯ್ಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ.

 

3.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-09-2014 ರಂದು ಬೆಳಿಗ್ಗೆ 07-15 ಗಂಟೆ ಸಮಯಕ್ಕೆ ಜಗನ್ನಾಥ್ ಶೆಣೈ ಎಂಬವರು ಪಿರ್ಯಾದಿದಾರರಾದ ಶ್ರೀ ಮನೋಜ್ ಕೆ. ರವರು ವಾಸಮಾಡಿಕೊಂಡಿರುವ ಮನೆಯ ಅಂಗಳಕ್ಕೆ ಬಂದು ತಮ್ಮ ಶನಿ ಗೃಹಚಾರವನ್ನು ಕೊರಗ ಸಮುದಾಯದವರಾದ ನಿಮಗೆ ವರ್ಗಾಹಿಸುವ ಸಲುವಾಗಿ ಹಳೆಯ ವಸ್ತ್ರವಾದ ಸೀರೆಯನ್ನು ತಂದು ತೆಗೆದುಕೊಳ್ಳುವಂತೆ ಒತ್ತಾಯಿಸಿ ಪಿರ್ಯಾದಿ ಮತ್ತು ಪಿರ್ಯಾದಿಯ ತಾಯಿ ಎಂ. ಮೀನ ರವರನ್ನು ಮಾನಸಿಕವಾಗಿ ನೋಯಿಸಿರುವುದಾಗಿದೆ.

 

4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22/09/2014 ರಂದು 16:00 ಗಂಟೆಗೆ ಪಿರ್ಯಾದುದಾರರಾದ ಶ್ರೀ ಸಲ್ವುಹಾನ್ ರವರು ಕುಲಶೆಖರ ಕಡೆಯಿಂದ ನಂತೂರು ಕಡೆಗೆ ಹೋಗುತ್ತಿದ್ದಾಗ ಮೇಲ್ ಸೆತುವೆ ಬಳಿ ನಂತೂರು ಕಡೆಯಿಂದ ಒಂದು ಮೋಟಾರು ಸೈಕಲ್ ಅನ್ನು ಅದರ ಚಾಲಕ ಸವಾರಿ ಮಾಡಿಕೊಂಡು ಬಂದು ಬೇರೆ ವಾಹನವನ್ನು ಓವರ್ ಟೆಕ್ ಮಾಡುವ ಸಮಯ ಸವಾರನ ನಿಯಂತ್ರಣ ತಪ್ಪಿ ಫಿರ್ಯಾದುದಾರರಿಗೆ ಡಿಕ್ಕಿಯಾದ ಪರಿಣಾಮ ಪಿರ್ಯಾದುದಾರರ ಕೈಗೆ ತಲೆಗೆ ಗಾಯವಾಗಿರುತ್ತದೆ ಅಪಘಾತ ಪಡಿಸಿದ ಮೋ, ಸೈಕಲ್ ನಂಬ್ರ ತಿಳಿಯದೆ ಇದ್ದು ಆರೋಪಿ ಅಫಘಾತ ಮಾಡಿದ ವಾಹನ ನಿಲ್ಲಿಸದೆ ಪರಾರಿಯಾಗಿರುತ್ತಾನೆ.

 

5.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24-09-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಆಶಲತಾ ಬಂಗೇರಾ ರವರು ಕೆಲಸ ಮುಗಿಸಿ ಸಂಜೆ ಮನೆ ಕಡೆಗೆ ನಡೆದುಕೊಂಡು ಬರುತ್ತಿದ್ದಂತೆ ಬೈಕಂಪಾಡಿ ಪೇಟೆ ದಾಟಿ ಮೀನಕಳಿಯ ರಸ್ತೆಯಲ್ಲಿ  ರೈಲ್ವೇ ಇಲಾಖೆಯ ಹಳೆಯ ವಸತಿಗೃಹದ ಹತ್ತಿರ ತಲುಪುತ್ತಿದ್ದಂತೆ ಮೀನಕಳಿಯ ಕಡೆಯಿಂದ ಆಕ್ಟಿವ್ ಹೋಂಡಾದಂತಹ ಸ್ಕೂಟರ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪಿರ್ಯಾದಿ ಬಳಿ ಸ್ಕೂಟರ್ನ್ನು ನಿಲ್ಲಿಸಿ ಪಣಂಬೂರು ಕಡೆಗೆ ಹೋಗುವ ದಾರಿ ಯಾವುದೆಂದು ಕೇಳಿದರು ಪಿರ್ಯಾದಿದಾರರು  ಪಣಂಬೂರು ಕಡೆಯ ದಿಕ್ಕು ತೋರಿಸುತ್ತಿದ್ದಂತೆ ಸ್ಕೂಟರ್  ಹಿಂಬದಿ ಕುಳಿತ್ತಿದ್ದ ವ್ಯಕ್ತಿ ಒಮ್ಮೆಲೆ ಪಿರ್ಯಾದಿಯ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಎಳೆದು ಅವರು ಬಂದ ಸ್ಕೂಟರ್ನಲ್ಲಿ ಸುರತ್ಕಲ್ ಕಡೆಯ ರಸ್ತೆಗೆ ಪರಾರಿಯಾದರು.  ಪಿರ್ಯಾದಿದಾರರು  ಸ್ಕೂಟರ್ನ್ನು ನೋಡಿದ್ದು ಅದು ಬಿಳಿಬಣ್ಣದ ಆಕ್ಟಿವ್ ಹೊಂಡಾದಂತಹ ವಾಹನವಾಗಿದ್ದು  ಅದರ ನಂಬ್ರ ಕೆ.. 19 – 7706  ಅಥವಾ 7760 ಆಗಿರುತ್ತದೆ.  ಎದುರುಗಡೆ ಕೂತಿದ್ದವನು ಕಪ್ಪು ಬಣ್ಣದ ಟಿ ಶರ್ಟ್ ಹಾಗೂ  ಹಿಂದುಗಡೆ ಕುಳಿತ್ತಿದ್ದವ ಬಿಳಿ ಬಣ್ಣದ ಟಿ ಶರ್ಟ್ ಹಾಕಿಕೊಂಡಿರುತ್ತಾನೆ. ಹಿಂದಿನವನು ಆತನ ತೊಡೆಯ ಮೇಲೆ  ಕಪ್ಪು ಬಣ್ಣದ ಹೆಲ್ಮೆಟ್ ಇಟ್ಟುಕೊಂಡಿದ್ದನು. ಘಟನೆ ಸಂಜೆ ಸುಮಾರು 5-00 ಗಂಟೆಗೆ ಆಗಿರುತ್ತದೆ.  ಅಪಹರಿಸಿದ ಕರಿಮಣಿ ಸರ ಬಂಗಾರದ್ದಾಗಿದ್ದು, 5 ಪವನು ತೂಕ ಇರುತ್ತದೆ. ಇದರ ಈಗಿನ ಮೌಲ್ಯ ರೂ. 1 ಲಕ್ಷ ಆಗಬಹುದು.

 

6.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಜುಬೈದಾ ರವರ ಮಗಳಾದ ಶ್ರೀಮತಿ ಶಮೀನಾ ಫಾತಿಮಾ ಎಂಬವರನ್ನು  ಮೊಹಮ್ಮದ್ ನಜೀಬ್ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು, ಇವರೊಳಗೆ ಸಂಸಾರದಲ್ಲಿ ಅನ್ಯೊನ್ಯತೆ ಇಲ್ಲದೇ ಇದ್ದು, ಪಿರ್ಯಾದಿದಾರರ ಮಗಳು  ಅತ್ತಾವರದ ಕಾಸಾಗ್ರಾಂಡ ಅಪಾರ್ಟ್ ಮೆಂಟ್ '' ಬ್ಲಾಕ್ ನಲ್ಲಿ ವಾಸವಾಗಿದ್ದವಳು, ದಿನಾಂಕ 21-09-2014 ರಂದು ಸದ್ರಿ ಪ್ಲಾಟ್ ವಾಚ್ ಮ್ಯಾನ್ ರವರಲ್ಲಿ 'ತನ್ನ ಗಂಡ ಹಿಂಸೆ ನೀಡಿದ್ದು, ಇದರಿಂದ ಬೇಸತ್ತು ದೂರ ಹೋಗುತ್ತಿದ್ದೇನೆ' ಎಂದು ಬರೆದ ಚೀಟಿಯನ್ನು ನೀಡಿ ಎಲ್ಲಿಯೋ ಹೋಗಿದ್ದು,  ಬಗ್ಗೆ  ಶ್ರೀಮತಿ ಶಮೀನಾ ಫಾತಿಮಾ ಕಾಣೆಯಾದ ಬಗ್ಗೆ  ಪಿರ್ಯಾದಿದಾರರು, ನೆರೆಕರೆಯವರಲ್ಲಿ ವಿಚಾರಿಸಿದ್ದಲ್ಲಿ ಆಕೆಯ ಇರುವಿಕೆಯ ಬಗ್ಗೆ ತಿಳಿದು ಬಾರದೇ ಇರುವುದಾಗಿದೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24.09.2014 ರಂದು ಮಧ್ಯಾಹ್ನ ಸುಮಾರು 1.00 ಗಂಟೆಯ ವೇಳೆಗೆ ಪಿರ್ಯಾಧಿದಾರರಾದ ಶ್ರೀ ಸಂತೋಷ್ ಕೊಟ್ಟಾರಿ ರವರು ವಾಮಂಜೂರು ಯಶೋದಾ ನಿಲಯ ಹೋಟೆಲ್‌‌ನಿಂದ ಊಟದ ಪಾರ್ಸೆಲನ್ನು ತೆಗೆದುಕೊಂಡು ತನ್ನ ಬೈಕ್‌‌ನಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಅವರ ಹಿಂಬದಿಯಿಂದ ಪವನ್‌‌ ಎಂಬವನು ಬಂದು ಆತನ ಕೈಯಲ್ಲಿದ್ದ ಚೂರಿಯಿಂದ ಪಿರ್ಯಾದಿದಾರರಿಗೆ ಹೊಡೆದು ಅವರ ಶರ್ಟ್ ಕಿಸೆಯಲ್ಲಿದ್ದ ಸುಮಾರು 8,000 ರೂಪಾಯಿ ಮೌಲ್ಯದ ನೋಕಿಯಾ 63 ಮೊಬೈಲನ್ನು ಬಲಾತ್ಕಾರವಾಗಿ ಕಿತ್ತುಕೊಂಡಿದ್ದು ವೇಳೆ ಇನ್ನೊರ್ವ ಆರೋಪಿ ಆರೀಫ್‌‌‌ ಎಂಬವನು ಆತನ ಕೈಯಲ್ಲಿದ್ದ ಇನ್ನೊಂದು ಚೂರಿಯಿಂದ ಪಿರ್ಯಾದಿದಾರರ ಕುತ್ತಿಗೆಗೆ ಕಡಿದಿದ್ದು ಅಪಾಯವನ್ನರಿತ ಪಿರ್ಯಾದಿದಾರರು ಅಲ್ಲಿಂದ ಶೀನ ಶೆಟ್ಟಿಯವರ ಅಂಗಡಿ ಕಡೆಗೆ ಓಡಿದಾಗ ಆರೋಪಿಗಳು ಬೆನ್ನಟ್ಟಿಕೊಂಡು ಬಂದು ಚೂರಿಯಿಂದ ಹೊಡೆದುದರಿಂದ ಪಿರ್ಯಾದಿದಾರರ ಕುತ್ತಿಗೆ ಬಳಿ, ಬೆನ್ನಿಗೆ ಗೀರಿದ ಗಾಯವಾಗಿದ್ದು ಅವರುಗಳನ್ನು ಶೀನ ಶೆಟ್ಟಿಯವರು ತಡೆದಾಗ ಆರೋಪಿಗಳು ಪಿರ್ಯಾಧಿದಾರರನ್ನು ಉದ್ದೇಶಿಸಿ ಇವತ್ತು ನೀನು ಬದುಕಿದೆ ಇನ್ನೊಮ್ಮೆ ನಿನ್ನನ್ನು ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಪರಾರಿಯಾಗಿರುತ್ತಾರೆ. ಪಿರ್ಯಾದಿದಾರರು ಆರೋಪಿ ಪವನ್‌‌ ತಂದೆ ವಾಮಂಜೂರು ರೋಹಿ ಎಂಬವನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಇದೇ ದ್ವೇಷದಿಂದ ಆರೋಪಿಯು ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಪಿರ್ಯಾದಿದಾರರ ಮೇಲೆ ಹಲ್ಲೆನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾಗಿದ್ದು, ಪಿರ್ಯಾದಿದಾರರು .ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20.09.2014 ರಂದು 8.30 ಗಂಟೆಗೆ ನೀತಿನಗರ ಶಕ್ತಿನಗರ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀಮತಿ ಶಾಂತಿ ರವರ ಗಂಡ ಅಶೋಕ ಎಂಬವರು ಮನೆಯಿಂದ ಕೆಲಸಕ್ಕೆಂದು ಹೋದವರು ವರೆಗೂ ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ, ಅವರ ಬಗ್ಗೆ ಸಂಬಂಧಿಕರಲ್ಲಿ ಮತ್ತು ನೆರೆಕರೆಯವರಲ್ಲಿ ವಿಚಾರಿಸಿದಲ್ಲಿ ವರೆಗೆ ಯಾವುದೇ ಮಾಹಿತಿ  ತಿಳಿದು ಬಂದಿರುವುದಿಲ್ಲ. ಕಾಣೆಯಾದ ಅಶೋಕ ರವರ ಚಹರೆ: ಹೆಸರು : ಅಶೋಕ, ಎತ್ತರ 5 ಅಡಿ 8 ಇಂಚು, ದುಂಡು ಮುಖ, ದೃಡಕಾಯ ಶರೀರ, ತುಳು, ಕನ್ನಡ, ಮತ್ತು ತಮಿಳು ಬಾಷೆ ಮಾತನಾಡುತ್ತಾರೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24-09-2014 ರಂದು ಪಿರ್ಯಾದಿದಾರರಾದ ಶ್ರೀ ರಾಜನ್ ಕುಲಾಲ್ ರವರು ತನ್ನ ಬಾಬ್ತು KA-19-EF-8643 ನೇ ನಂಬ್ರದ ಹೊಂಡಾ ಡಿಯೊ ಸ್ಕೂಟರ್ನ್ನು ಅಡ್ಯಾರ್ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ 73 ರಲ್ಲಿ ಚಲಾಯಿಸಿಕೊಂಡು ಬರುತ್ತಾ ಬೆಳಗ್ಗೆ ಸುಮಾರು 9:30 ಗಂಟೆ ಸಮಯಕ್ಕೆ ಕೊಡಕ್ಕಲ್ ರಮಾನಾಥ ಮಿಲ್ ಸಮೀಪ ತಲುಪುತ್ತಿದ್ದಂತೆ ಸದ್ರಿ ಸ್ಕೂಟರ್ ಎದುರುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ಅಡ್ಯಾರ್ಕಡೆಗೆ KA-19-M-6952 ನೇ ನಂಬ್ರದ ಸ್ಯಾಂಟ್ರೋ ಕಾರನ್ನು ಅದರ ಚಾಲಕ ರಾಂಗ್ಸೈಡ್ನಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸದ್ರಿ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ಸಮೇತ ರಸ್ತೆಗೆ ಬಿದ್ದು ಅವರ ಎಡಕೈಗೆ ಹಾಗೂ ಬೆನ್ನಿಗೆ ಗುದ್ದಿದ ಗಾಯಗೊಂಡಿರುವುದಲ್ಲದೇ ಪಿರ್ಯಾದಿದಾರರ ಸ್ಕೂಟರ್ಕೂಡ ಜಖಂಗೊಂಡಿರುವುದಾಗಿದೆ.

No comments:

Post a Comment