Tuesday, September 30, 2014

Daily Crime Reports 30-09-2014

ದೈನಂದಿನ ಅಪರಾದ ವರದಿ.

ದಿನಾಂಕ 30.09.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  29.09.2014 ರಂದು ಪಿರ್ಯಾದಿದಾರರಾದ ಶ್ರೀ ಹೆಚ್. ಗೋವಿಂದ ಪೈ ರವರು ಕಾರ್ಪೋರೆಶನ್  ಬ್ಯಾಂಕಿಗೆ ಸಂಬಂಧಿಸಿದ ಕಾರು ನಂಬ್ರ  ಕೆಎ.19.ಜೆಡ್.6402 ನೇದನ್ನು ನಗರದ ಪಾಂಡೇಶ್ವರ ಕಾರ್ಪೋರೆಶನ್  ಬ್ಯಾಂಕಿನಿಂದ  ಚಲಾಯಿಸಿಕೊಂಡು ಬಂದು ಕ್ಲಾಕ್ ಟವರ್ ಬಳಿ ತಲುಪಿದ ಸಮಯ 19.15 ಗಂಟೆಗೆ  ಕಾರಿನ ಹಿಂದುಗಡೆಯಿಂದ ನೀರಿನ ಟ್ಯಾಂಕರ್ ಚಾಲಕ ಟ್ಯಾಂಕರ್ ನಂಬ್ರ ಕೆಎ.19..8676 ನೇದನ್ನು ಸಾರ್ವಜನಿಕ ಕಾಂಕ್ರೀಟು ರಸ್ತೆಯಲ್ಲಿ  ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿನ ಬಲ ಬದಿಯ ಹಿಂದಿನ ಬಾಗಿಲಿಗೆ ಡಿಕ್ಕಿ ಹೊಡೆದ ಪರಿಣಾಮ ಜಖಂಗೊಂಡಿರುವುದಾಗಿದೆ.

 

2.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಶ್ರೀನು ಶೆಟ್ಟಿಯವರು ಎಂ.ಸಿ. ಉಪನ್ಯಾಸಕರಾಗಿಯೂ, ಇವರ ಸ್ನೇಹಿತ ರವಿಕುಡ್ತರ್ಕರ್ರವರು ಎಂ.ಬಿ.. ಉಪನ್ಯಾಸಕರಾಗಿ  ಕೋಟೆಕಾರು ಗ್ರಾಮದ ಮಾಡೂರು ಬೀರಿ ಎಂಬಲ್ಲಿರುವ ಅಲೋಶಿಯಸ್ ಇನ್ಸ್ಟಿಟ್ಯೂಟ್ಆಫ್ಮೆನೆಜ್ಮೆಂಟ್ಅಂಡ್ಇನ್ಫೋರ್ಮೇಶನ್ ಟೆಕ್ನಾಲಜಿಯಲ್ಲಿ ಕೆಲಸ ಮಾಡಿಕೊಂಡು ಅದೇ ವಿದ್ಯಾಸಂಸ್ಥೆಯ ಹಾಸ್ಟೇಲ್ನಲ್ಲಿ ಇಬ್ಬರೂ ಜೊತೆಯಾಗಿ ವಾಸವಾಗಿದ್ದು, ರವಿಕುಡ್ತರ್ಕರ್ರವರ ಸ್ನೇಹಿತ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಸಿ. ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ರವಿ ಗನ್ನ ಎಂಬವರಿಗೆ ವಿಪರೀತ ಜ್ವರ ಬಂದ ಕಾರಣ ದಿನಾಂಕ. 23-9-2014 ರಂದು ರಾತ್ರಿ ಸಮಯದಲ್ಲಿ ಫಿರ್ಯಾದಿದಾರರು ಮತ್ತು ರವಿಕುಡ್ತರ್ಕರ್ರವರ ವಾಸವಾಗಿರುವ ಹಾಸ್ಟೇಲಿಗೆ ಬಂದು ಅಂದು ರಾತ್ರಿ ಮಲಗಿದವರು ಮರುದಿನ ದಿನಾಂಕ. 24-9-2014 ರಂದು ಬೆಳಗಿನ ಜಾವ ಸುಮಾರು 5-15 ಗಂಟೆಯ ಸಮಯಕ್ಕೆ ರವಿಗನ್ನ ರವರು ಮಂಗಳೂರು ತಾಲೂಕು ಕೋಟೆಕಾರು ಗ್ರಾಮದ ಮಾಡೂರು ಬೀರಿ ಎಂಬಲ್ಲಿರುವ ಅಲೋಶಿಯಸ್ ಇನ್ಸ್ಟಿಟ್ಯೂಟ್ಆಫ್ಮೆನೆಜ್ಮೆಂಟ್ಅಂಡ್ಇನ್ಫೋರ್ಮೇಶನ್ ಟೆಕ್ನಾಲಜಿಯ ಹಾಸ್ಟೇಲಿನ 2ನೇ ಮಹಡಿಯಿಂದ ಕೆಳಗಡೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದು, ಪರಿಣಾಮ ರವಿಗನ್ನ ರವರ ಮೈಕೈಗೆ, ದೇಹಕ್ಕೆ ಗಂಭೀರ ಸ್ವರೂಪದ ಗಾಯವುಂಟಾಗಿರುತ್ತದೆ ಅಲ್ಲದೆ ಸದ್ರಿ ರವಿಗನ್ನ ರವರು ರಾತ್ರಿ ಸಮಯದಲ್ಲಿ ಕಾಲೇಜ್ಹಾಸ್ಟೇಲ್ ಮೇಲ್ಗಡೆಯ ಮಹಡಿಯಲ್ಲಿ ವಿದ್ಯುತ್ಸ್ವಿಚ್ಬೋರ್ಡ್ನ್ನು ಕಿತ್ತಿರುತ್ತಾರೆ ಮತ್ತು ತನ್ನ ಕೈಗೆ ತಾನೇ ಗಾಯಗೊಳಿಸಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿರುತ್ತಾರೆ.

 

3.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀಮತಿ ಸುಮಾ ರವರ ಗಂಡ ಕಿಶೋರ್‌‌ ಪೂಜಾರಿ ಎಂಬವರು ದಿನಾಂಕ: 28.09.2014 ರಂದು ಬೆಳಿಗ್ಗೆ 9.30 ಗಂಟೆಗೆ ನನಗೆ ಸ್ವಲ್ಪ ಹಣಕಾಸಿನ ವ್ಯವಹಾರ ಇದೆ ಎಂದು ಪಿರ್ಯಾಧಿದಾರರಲ್ಲಿ ಹೇಳಿ ತನ್ನ ಮನೆಯಾದ ಮಂಗಳೂರು ಅಳಪೆ ವಿಜಯನಗರ ಕಂಕನಾಡಿ ರೈಲ್ವೇ ಸ್ಟೇಷನ್ ಬಳಿಯ ನೋರೊನ್ಹಾ ಕಂಪೌಂಡ್ ನ ಮನೆಯಿಂದ ಹೊರಗೆ ಹೋದವರು ರಾತ್ರಿಯಾದರೂ ಮನೆಗೆ ಬಾರದೇ ಇದ್ದು ಬಗ್ಗೆ ನೆರೆಕಯವರಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಅವರ ಬಗ್ಗೆ ಯಾರಿಗೂ ತಿಳಿಯದೇ ಇರುವುದಾಗಿದೆ. ಕಾಣೆಯಾದ ಕಿಶೋರ್‌‌ ಪೂಜಾರಿ ರವರ ಚಹರೆ: ಎತ್ತರ ಸುಮಾರು 5.6 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಪೂರ ಶರೀರ, ತುಳು, ಕನ್ನಡ, ಹಿಂದಿ, ಮಲಯಾಳಂ ಬಾಷೆ ಮಾತನಾಡುತ್ತಾರೆ, ಗ್ರೇ ಕಲರ್‌‌ ಪ್ಯಾಂಟ್ಮತ್ತು ಕ್ರೀಮ್‌‌ ಕಲರ್‌‌ ಶರ್ಟ್ಧರಿಸಿರುತ್ತಾರೆ.

 

4.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 27.09.2014 ರಂದು ಸಂಜೆ 7.00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಬಶೀರ್ ರವರು ತನ್ನ ಬಾಬ್ತು ಕಾರು ನಂಬ್ರ: KA19MD7825 ನೇದನ್ನು  ಮಂಗಳೂರು ಕಡೆಯಿಂದ  ವಿಟ್ಟ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಅಡ್ಯಾರ್‌‌ ಕಟ್ಟೆ ಬಳಿ ತಲುಪಿದಾಗ  ಪಿರ್ಯಾದಿದಾರರ ಕಾರಿನ ಹಿಂಬದಿಯಿಂದ  ಲಾರಿ ನಂಬ್ರ: KA19A9491 ನೇದನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಭಾಗಕ್ಕೆ ಡಿಕ್ಕಿಹೊಡೆದ ಪರಿಣಾಮ ಕಾರಿನ ಹಿಂಬಾಗದ ಬಾಡಿ ಸಂಪೂರ್ಣ ಜಖಂಗೊಂಡಿರುತ್ತದೆ. ಪಿರ್ಯಾಧಿದಾರರ ಕಾರಿನ ಹಿಂಭಾಗಕ್ಕೆ ಡಿಕ್ಕಿಹೊಡೆದ ಲಾರಿಯ ಚಾಲಕನಲ್ಲಿ  ಮಾತುಕತೆ ಮಾಡಿ ಕಾರಿಗೆ ಜಖಂ ಆದ ಬಗ್ಗೆ ಖರ್ಚುವೆಚ್ಚ ಭರಿಸುವುದಾಗಿ ತಿಳಿಸಿದ್ದು, ದಿನಾಂಕ 29-09-2014 ರಂದು ವಿಚಾರಿಸಿದಾಗ ಖರ್ಚುವೆಚ್ಚ ನೀಡಲು ನಿರಾಕರಿಸಿರುವುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

No comments:

Post a Comment