ದೈನಂದಿನ ಅಪರಾದ ವರದಿ.
ದಿನಾಂಕ 07.09.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0. |
ಸುಲಿಗೆ ಪ್ರಕರಣ | : | 1 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 5 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 2 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06.09.2014 ರಂದು ಪಿರ್ಯಾದಿದಾರರಾದ ಶ್ರೀ ಮೆಲ್ವಿನ್ ಪ್ರಶಾಂತ್ ಕರ್ಡೊಜಾ ರವರು ಅವರ ತಾಯಿಯವರಾದ ಶ್ರೀಮತಿ ಮೇರಿ ಕರ್ಡೋಜಾರವರ ಜೊತೆಯಲ್ಲಿ ಮಂಗಳೂರು ನಗರದ ಸೆಂಟ್ರಲ್ ಮಾರ್ಕೇಟಿಗೆ ತರಕಾರಿಯನ್ನು ಮಾರಲು ತಂದಿದ್ದು, ಸಮಯ ಬೆಳಿಗ್ಗೆ 07:30 ಗಂಟೆಗೆ ಲೇಡಿಗೋಶನ್ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದು ಸೆಂಟ್ರಲ್ ಮಾರ್ಕೇಟ್ ಕಡೆಗೆ ರಸ್ತೆಯ ತೀರಾ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಾ, ಲೇಡಿಗೋಶನ್ ಆಸ್ಪತ್ರೆಯ ಬಳಿ ತಲುಪಿದಾಗ, ಅವರ ಹಿಂಬದಿಯಿಂದ ಅಂದರೆ ರಾವ್ ಅಂಡ್ ರಾವ್ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ದ್ವಿಚಕ್ರ ವಾಹನ ನಂಬ್ರ ಕೆಎ-19-ಇ.ಸಿ-6576 ನೇದನ್ನು ಅದರ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರೊಂದಿಗೆ ಇದ್ದ ಅವರ ತಾಯಿ ಶ್ರೀಮತಿ ಮೇರಿ ಕರ್ಡೋಜಾರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ಕಾಂಕ್ರೀಟ್ ರಸ್ತೆಗೆ ಬಿದ್ದು, ತಲೆಯ ಎಡಭಾಗಕ್ಕೆ ಗಂಭೀರ ಸ್ವರೂಪದ ಗಾಯ ಹಾಗೂ ಸೊಂಟದ ಭಾಗಕ್ಕೆ ಹಾಗೂ ಎಡಕಾಲಿಗೆ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ರಿಯವರು ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ.
2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06-09-2014 ರಂದು ಬೆಳಿಗ್ಗೆ 8-30 ಗಂಟೆಗೆ ಮಂಗಳೂರು ನಗರದ ಬಲ್ಮಠ ವೃತ್ತದ ಬಳಿಯ ನಝರತ್ ಶಾಲೆಯ ಎದುರು ಕೆಎ-19-ಎಂ.ಇ-2580 ನಂಬ್ರದ ಕಾರನ್ನು ಅದರ ಚಾಲಕ ಆರೋಪಿ ಅನಿಲ್ ಎಂಬಾತನು ಬೆಂದೂರ್‌ವೆಲ್ ಕಡೆಯಿಂದ ನಝರತ್ ಶಾಲೆಯ ಕಡೆಗೆ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅಂದರೆ ನಝರತ್ ಶಾಲೆಯ ಕಡೆಯಿಂದ ಪಿರ್ಯಾದುದಾರರಾದ ಕು. ಮೈಮುನಾ ಸಮಿಹಾ ರವರ ತಂದೆ ಚಲಾಯಿಸಿಕೊಂಡು ಬರುತ್ತಿದ್ದ ಕೆಎ-19-ಎಎ-4237 ನಂಬ್ರದ ಅಟೋ ರಿಕ್ಷಾಕ್ಕೆ ಢಿಕ್ಕಿಪಡಿಸಿದ ಪರಿಣಾಮ ಅಟೋರಿಕ್ಷಾ ಚಾಲಕ ಉಳ್ಳಾಲ ಅಹಮ್ಮದ್ ಅಬ್ಬು ಎಂಬವರಿಗೆ ಬಲಕಾಲಿನ ಮೊಣಗಂಟಿಗೆ ಮತ್ತು ಹಣೆಯ ಬಲಬದಿಗೆ ಗುದ್ದಿದ ಗಾಯವಾಗಿದ್ದು, ಗಾಯಾಳು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.
3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-09-2014 ರಂದು ಸಾಯಂಕಾಲ ಪಿರ್ಯಾಧಿದಾರರಾದ ಶ್ರೀ ಸುಂದರನಾಥ್ ಭಂಡಾರಿ ರವರು ತನ್ನ ಪತ್ನಿ ವಸಂತಿ ಮಗಳು ಸುಚಿತ್ರ ಎಂಬವರೊಂದಿಗೆ ಬಸವನಕಜೆಯಿಂದ ಮೂಡಬಿದ್ರೆ ಕಡೆಗೆ ಅಟೋರಿಕ್ಷಾ ನಂ ಕೆ ಎ 19 ಬಿ 8076 ರಲ್ಲಿ ಪ್ರಯಾಣಿಸುತ್ತ ಅಟೋ ರಿಕ್ಷಾ ಚಾಲಕನು ತನ್ನ ಬಾಬ್ತು ಅಟೋ ರಿಕ್ಷಾವನ್ನು ಅತೀ ವೇಗ ಹಾಗೊ ಅಜಾಗುರುಕತೆಯಿಂದ ಚಲಾಯಿಸಿಕೊಂಡು ಹೋಗಿ ಮೂಡಬಿದ್ರೆ ಠಾಣ ಸರಹದ್ದಿನ ಮರ್ಪಾಡಿ ಗ್ರಾಮದ ಅಲಂಗಾರು ಸೆನಿಟೋರಿಯಂ ಅಸ್ಪತ್ರಯ ಬಳಿಯ ಸಾರ್ವಜನಿಕ ರಸ್ತೆಯ ಸಮೀಪ ನಿಂತಿದ್ದ ಅಟೋರಿಕ್ಷಾ ನಂ ಕೆ 19 ಡಿ 3182 ನೇಯದಕ್ಕೆ 19.30 ಗಂಟೆಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಪ್ರಯಾಣಿಕರಾದ ಪಿರ್ಯಾದುದಾರರ ಮೊಣಕಾಲು ಮತ್ತು ಕೈಗೆ ,ಪಿರ್ಯಾದಿ ಮಗಳು ಸುಚಿತ್ರ ಎಂಬವರಿಗೆ ಹಲ್ಲು ಮತ್ತು ತುಟಿಗೆ ರಕ್ತಗಾಯ ಹಾಗೊ ಪಿರ್ಯಾದಿ ಪತ್ನಿ ಶ್ರೀಮತಿ ವಸಂತಿ ಕಾಲಿಗೆ ಮೂಳೆಮುರಿತದ ಬಾರಿ ಗಾಯವಾಗಿರುತ್ತದೆ.
4.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ ರವರಿಗೆ ದಿನಾಂಕ 06-09-2014ರಂದು ಸಮಯ ಬೆಳಿಗ್ಗೆ 08-20 ಗಂಟೆಗೆ ಠಾಣೆಯಲ್ಲಿರುವಾಗ್ಗೆ ಮಂಗಳೂರು ನಗರದ ಶಿವನಗರ ಒಳ ರಸ್ತೆಯಲ್ಲಿ ಕೆಎ 19 ಇ ಕೆ. 8707 ಎಂಬುದಾಗಿ ನಂಬರ್ ಪ್ಲೇಟ್ ಇರುವ ಯಮಹಾ F-Z ಬೈಕ್ ನಲ್ಲಿ ಇಬ್ಬರು ಯುವಕರು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದಾರೆ. ಎಂಬುದಾಗಿ ದೊರೆತ ಮಾಹಿತಿಯಂತೆ ಕೂಡಲೇ ಸಿಬ್ಬಂದಿಯವರನ್ನು ಜೊತೆಯಲ್ಲಿ ಕರೆದುಕೊಂಡು ಮಾಹಿತಿಯಲ್ಲಿ ದೊರೆತ ಶಿವನಗರ ಪರಿಸರಕ್ಕೆ ತಲುಪಿದಾಗ ಎದುರುಗಡೆಯಿಂದ ಮಾಹಿತಿಯಲ್ಲಿ ದೊರೆತ ಬೈಕ್ ನಲ್ಲಿ ಇಬ್ಬರು ಯುವಕರು ಬರುತ್ತಿರುವುದನ್ನು ಕಂಡು ಮಾಹಿತಿಯಲ್ಲಿ ದೊರೆತ ಯುವಕರು ಇವರುಗಳೇ ಆಗಿರುವುದನ್ನು ದೃಡಪಡಿಸಿ ಜೀಪನ್ನು ಅವರ ಬೈಕ್ ಗೆ ಅಡ್ಡ ಇಟ್ಟು ತಡೆದು ನಿಲ್ಲಿಸಿ ವಾಹದ ದಾಖಲೆ ಬಗ್ಗೆ ವಿಚಾರಿಸಿದಾಗ ಅವರುಗಳ ಪೈಕಿ ಬೈಕ್ ಚಾಲಕ ತನ್ನ ಶರ್ಟ್ ನ ಕಿಸೆಗೆ ಕೈ ಹಾಕಿ ಕಿಸೆಯಿಂದ ಒಂದು ಆರ್. ಸಿ. ಯ ಜೆರಾಕ್ಸ್ ಪ್ರತಿಯನ್ನು ತೆಗೆದು ಹಾಜರುಪಡಿಸಿರುತ್ತಾನೆ. ಅದನ್ನು ಪರಿಶೀಲಿಸಿ ನೋಡಿದಾಗ ಅದರಲ್ಲಿ ನಮೂದಿಸಿರುವ ನೊಂದಣಿ ಸಂಖ್ಯೆ KA 20 EF 4776 ಎಂಬುದಾಗಿ ಇದ್ದು ಸದ್ರಿ ಆರ್.ಸಿ.ಯ ಜೆರಾಕ್ಸ್ ಮತ್ತು ಅವರು ಚಲಾಯಿಸುತ್ತಿದ್ದ ಬೈಕ್ ಒಂದಕ್ಕೊಂದು ಹೊಂದಾಣಿಕೆಯಾಗಿರುವುದಿಲ್ಲ. ಅವರುಗಳ ಪೈಕಿ ಬೈಕ್ ಚಾಲಕ ಆತನ ಹೆಸರು ಮುನೀರ್, ಹಾಗೂ ಹಿಂಬದಿ ಸವಾರ ಆತನ ಹೆಸರು ಶೈರಾಜ್, ಎಂಬುದಾಗಿ ತಿಳಿಸಿರುತ್ತಾರೆ. ಅವರನ್ನು ಕೂಲಂಕುಷವಾಗಿ ವಿಚಾರಿಸಿದಾಗ ಈ ಮೊದಲು ನಾವಿಬ್ಬರು ಹಾಗೂ ಉಪ್ಪಿನಂಗಡಿ-ಕಡಬ ಕಡೆಯ ಇಬ್ರಾಹಿಂ ಹಾಗೂ ಕಸಬ ಬೆಂಗ್ರೆಯ ವಾಸಿ ಇಮ್ರಾನ್ ಇರ್ಫಾನ್ ಜೊತೆಯಾಗಿ 07/08-08-2014ರಂದು ರಾತ್ರಿ ವೇಳೆ ಕೋಣಾಜೆಯ ಪಜೀರ್ ಎಂಬಲ್ಲಿರುವ ಇಂಪೋಸಿಸ್ ಹತ್ತಿರದ ಒಂದು ಮನೆಯ ಹಂಚು ತೆಗೆದು ಒಳಗಡೆ ಹೋಗಿ ನಗದು ಹಣ ಹಾಗೂ ಹಿತ್ತಾಳೆಯ ಗಿಂಡೆ ಕಳವು ಮಾಡಿದ್ದು ಅಲ್ಲಿಂದ ಕಳವು ಮಾಡಿ ವಾಪಾಸು ಬರುವ ವೇಳೆ ನಾವು ನಾಲ್ಕು ಜನ ಜೊತೆಯಾಗಿ ಕೈರಂಗಳ ಎಂಬಲ್ಲಿರುವ BCM ಹಾಸ್ಟೇಲ್ ಕಂಪೌಂಡಿನಿಂದ ಬೈಕ್ ಕಳವು ಮಾಡಿದ್ದು, ಅಲ್ಲದೇ 18-08-2014 ರಂದು ಮಂಗಳೂರು ತಾಲೂಕಿನ ಸುರತ್ಕಲ್ ಕಾಟಿಪಳ್ಳದ 3ನೇ ಕ್ರಾಸ್ ನ ಒಳ ರಸ್ತೆಯಲ್ಲಿ ಎರಡು ಕಡೆಗಳಲ್ಲಿ ರಾತ್ರಿ ವೇಳೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ ಮಾಡಿತ್ತೇವೆ. ಇಲ್ಲಿ ಸರ ಸುಲಿಗೆ ಮಾಡುವ ವೇಳೆ ನಮ್ಮ ವಶಕ್ಕೆ ಬಂದಿರುವ ಸರಗಳ ತುಂಡುಗಳು ಕೂಡ ಈಗ ನಮ್ಮಲ್ಲಿ ಇರುತ್ತದೆ ಎಂಬುದಾಗಿ ಒಪ್ಪಿಕೊಂಡಿರುತ್ತಾರೆ. ಸದ್ರಿಯವರುಗಳಲ್ಲಿ ಇರುವ ಸೊತ್ತುಗಳು ಸುಲಿಗೆ ಹಾಗೂ ಕಳವಿಗೆ ಸಂಬಂಧಪಟ್ಟ ಸೊತ್ತುಗಳು ಎಂಬುದಾಗಿ ದೃಡಪಟ್ಟಿರುತ್ತದೆ.
5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 06-09-14 ರಂದು ಪಿರ್ಯಾದಿದಾರರಾದ ಶ್ರೀಮತಿ ವೀಣಾ ಬಿ. ಮಯ್ಯಾ ರವರು ಅವರ ಮನೆಯಲ್ಲಿ ಕೆಲಸದಲ್ಲಿ ನಿರತರಾಗಿರುವಾಗ ಒಬ್ಬ ಯುವಕನು ಮನೆಯ ಬಳಿ ಬಂದು ಕುಡಿಯಲು ನೀರು ಕೇಳಿದ್ದು ಪಿರ್ಯಾದಿದಾರರು ಮನೆಯೊಳಗೆ ಹೋಗಿ ನೀರು ತಂದು ಆತನಿಗೆ ಕೊಟ್ಟಾಗ ಆತನು ನೀರು ಕುಡಿದ ನಂತರ ಪಿರ್ಯಾದಿಯು ಗ್ಲಾಸನ್ನು ಹಿಂದಕ್ಕೆ ಪಡೆಯುವ ಸಮಯ ಸದ್ರಿ ಯುವಕನು ಏಕಾಏಕಿ ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಸುಮಾರು 42 ಗ್ರಾಂ ತೂಕದ 2 ಎಳೆಯ ಕರಿಮಣಿ ಸರವನ್ನು ಎಳೆದುಕೊಂಡು ಹೈವೆ ಕಡೆಗೆ ಕಡೆಗೆ ಹೋಗುವ ಡಾಮಾರು ರಸ್ತೆಯಲ್ಲಿ ಸುಮಾರು 100 ಮೀಟರ್ ಓಡಿ ಹೋಗಿ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್ ನ ಹಿಂಬದಿಯಲ್ಲಿ ಕುಳಿತು ಇಬ್ಬರು ಸ್ಕೂಟರ್ ನಲ್ಲಿ ಹೈವೆ ಕಡೆಗೆ ಪರಾರಿಯಾಗಿರುತ್ತಾರೆ.
6.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05/06-09-14 ರ ರಾತ್ರಿ ವೇಳೆಯಲ್ಲಿ ಸುರತ್ಕಲ್ ಸೆಕ್ರೆಡ್ ಹಾರ್ಟ್ ಚರ್ಚ್ ನ ಒಳಗೆ ಯಾರೋ ಕಳ್ಳರು ನುಗ್ಗಿ ಆಫೀಸು ಕೋಣೆ ಹಾಗೂ ಇನ್ನಿತರ ಕೋಣೆಗಳ ಬೀಗಗಳನ್ನು ಹೊಡೆದು ಕಪಾಟುಗಳನ್ನು ತೆರೆದು ಆಫೀಸು ಕೋಣೆಯನ್ನು ಜಾಲಾಡಿ ಆಫೀಸು ಕೋಣೆಯ ಕಪಾಟುಗಳನ್ನು ಹೊಡೆದು ಕಳ್ಳತನ ಮಾಡಲು ಪ್ರಯತ್ನಿಸಿದ್ದು ಯಾವುದೇ ವಸ್ತುಗಳು ಕಳ್ಳತನವಾಗಿರುವುದಿಲ್ಲ ಎಂಬುದಾಗಿ ಶ್ರೀ ಪೀಟರ್ ಅಲೇಕ್ಸ್ ಡಿ'ಸೋಜಾ ರವರು ದೂರು ನೀಡಿರುವುದಾಗಿದೆ.
7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 05/09/2014 ರಂದು 16.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಅಶ್ರಫ್ ಖಾನ್ ರವರು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA 19 EL 0294 ನೇದ್ದನ್ನು ಮಂಗಳೂರು ತಾಲೂಕು ಮೂಡಪೆರಾರ ಗ್ರಾಮದ ಪೆರಾರ ಅಯ್ಯಪ್ಪ ಗುಡಿಯ ಬಳಿ ನಿಲ್ಲಿಸಿದ್ದು, ಅಲ್ಲಿಂದ ಹೊರಡುವರೇ ಮೋಟಾರು ಸೈಕಲ್ ನಲ್ಲಿ ಕುಳಿತು ಹೊರಟಾಗ ಅವರ ಮೋಟಾರು ಸೈಕಲಿನ ಎದುರಿನಲ್ಲಿ ನಿಂತಿದ್ದ ಪಿಕ್ ಅಪ್ ವಾಹನ ನಂಬ್ರ NO. KA 19 C 8814ನೇದ್ದನ್ನು ಅದರ ಚಾಲಕ ಯಾವುದೇ ಸೂಚನೆಯನ್ನು ನೀಡದೇ ಒಮ್ಮಲೇ ಅತೀವೇಗ ಹಾಗೂ ಅಜಾಗರೂಕತೆಯಿಂದ ಹಿಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದು ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಅವರ ಎಡ ಕೈಗೆ ಮತ್ತು ಎಡ ಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯವುಂಟಾಗಿದ್ದು, ಬಲ ಕಾಲಿನ ಪಾದಕ್ಕೆ ತರಚಿದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಇಂಡಿಯಾನ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
8.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 06-09-2014 ರಂದು ಬೆಳಿಗ್ಗೆ 10-10 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಶ್ರೀ ಯೋಗೀಶ್ ರವರು, ಮಂಗಳೂರು ತಾಲೂಕು, ಸೋಮೇಶ್ವರ ಗ್ರಾಮದ 2 ನೇ ಕೊಲ್ಯ ಎಂಬಲ್ಲಿರುವ ತನ್ನ ಬೇಕರಿ ಹೊರಗಡೆ ನಿಂತು ರಾ.ಹೆ. 66 ರನ್ನು ನೋಡುತ್ತಿದ್ದ ಸಮಯ, ಕೆಎ 19 ಯು 4244 ನೇ ಆಕ್ಟಿವ್ ಹೊಂಡಾ ಸವಾರರು ಮಂಗಳೂರು ಕಡೆಯಿಂದ ಕೋಟೆಕಾರು ಬೀರಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸಮಯ ಅವರ ಹಿಂದಿನಿಂದ ಹೆಚ್ಆರ್ 55 ಎಮ್ 9449 ನೇ ನಂಬ್ರದ ಮೋಟಾರು ಸೈಕಲ್ಗಳನ್ನು ಸಾಗಾಟ ಮಾಡುವ ದೊಡ್ಡ ಲಾರಿಯೊಂದನ್ನು ಅದರ ಚಾಲಕ ಅತೀವೇಗ ಹಾಗು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆಕ್ಟಿವ್ ಹೊಂಡಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಕ್ಟಿವ್ ಹೊಂಡಾ ಸವಾರರು ವಾಹನ ಸಮೇತ ರಸ್ತೆಗೆ ಬಿದ್ದಾಗ ಪಿರ್ಯಾದುದಾರರು ಮತ್ತೀತರರು ಅಪಘಾತ ಸ್ಥಳಕ್ಕೆ ಹೋಗಿ ನೋಡಿ ಗಾಯಾಳುವನ್ನು ಅರೈಕೆ ಮಾಡಿದ್ದು, ಈ ಅಪಘಾತದಿಂದ ಆಕ್ಟಿವ್ ಹೊಂಡಾ ಸವಾರ ಗಾಯಾಳು ಜಯಪ್ರಕಾಶ್ರವರು ಗಂಭೀರ ಗಾಯದಿಂದ ಮೃತಪಟ್ಟಿರುವುದಾಗಿದೆ.
No comments:
Post a Comment