ದೈನಂದಿನ ಅಪರಾದ ವರದಿ.
ದಿನಾಂಕ 19.09.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 1 |
1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಫಿರ್ಯಾದುದಾರರು J Dgï ®QëãÁgÁAiÀÄt ದಿನಾಂಕ 03-09-2014 ರಂದು ರಾತ್ರಿ 19-00 ಗಂಟೆಗೆ ಮನೆಯಿಂದ ಹೈದರಬಾದಿಗೆ ಹೋಗಿದ್ದು ದಿನಾಂಕ 15-09-2014 ರಂದು ಬೆಳಿಗ್ಗೆ 09-30 ಗಂಟೆಗೆ ಹೈದರಬಾದಿನಲ್ಲಿದ್ದಾಗ ಅವರ ನರೆಕರೆಯವರಾದ ಶ್ರೀ ವೈ.ವಿ ಶೆಣೈ ರವರು ಫೋನ್ ಮಾಡಿ ನಿಮ್ಮ ಮನೆಯ ಬಾಗಿಲಿನ ಬೀಗ ಯಾರೋ ಮುರಿದಿದ್ದು ಕಳ್ಳರು ಮನೆಯಲ್ಲಿ ಕಳ್ಳತನ ನಡೆಸಿರುಬೇಕೆಂದು ಹೇಳಿರುತ್ತಾರೆ. ದಿನಾಂಕ 17-09-2014 ರಂದು ಬೆಳಿಗ್ಗೆ 11-00 ಮನೆಗೆ ವಾಪಾಸ್ಸು ಬಂದು ನೋಡಿದಾಗ ಮನೆಯ ಎದುರಿನ ಬಾಗಿಲನ್ನು ಯಾವುದೋ ಆಯುಧದಿಂದ ಬಲವಂತವಾಗಿ ಮುರಿದು ತೆರೆದುಕೊಂಡಿರುವುದು ಕಂಡು ಬಂದಿದ್ದು ಒಳಗೆ ಹೋಗಿ ನೋಡಲಾಗಿ ಬೆಡ್‌ರೂಮಿನಲ್ಲಿದ್ದ 2 ಕಪಾಟುಗಳು ನೆಲದ ಮೇಲೆ ಅಡ್ಡಲಾಗಿ ಬಿದ್ದಿದ್ದು ಅದನ್ನು ಯಾವುದೋ ಆಯುಧದಿಂದ ಬಲವಂತವಾಗಿ ತೆರೆದು ವಸ್ತುಗಳನ್ನೆಲ್ಲಾ ಚಲ್ಲಾಪಿಲ್ಲಿ ಮಾಡಿರುವುದು ಕಂಡು ಬಂದಿರುತ್ತದೆ.
2.sಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ ಶ್ರೀರವಿ ಕುಮಾರ್ ಎ.ಸಿ.ಪಿ ಮಂಗಳೂರು ಉತ್ತರ ಉಪವಿಭಾಗ ಮಂಗಳೂರುರವರು ಮದ್ಯ ಗ್ರಾಮದ ಮಠದ ಗುಡ್ಡೆ ಎಂಬಲ್ಲಿ ಖಾಲಿ ಜಾಗದಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ದೊರೆತಂತೆ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಈ ದಿನ ದಿನಾಂಕ 18-09-2014 ರಂದು ಸಂಜೆ 5-00 ಗಂಟೆಗೆ ದಾಳಿ ಮಾಡಿ ಸ್ಥಳದಲ್ಲಿ ಕೋಳಿ ಅಂಕ ಆಟವಡುತ್ತಿದ್ದವರ ಪೈಕಿ 5 ಜನ ಆಪಾದಿತರುಗಳನ್ನು,ಹಾಗೂ ಆಟವಾಡಲು ಉಪಯೋಗಿಸುತ್ತಿದ್ದ ಒಂದು ಕೋಳಿ, ಮತ್ತು ಅದರ ಕಾಲಿಗೆ ಕಟ್ಟಿದ ಒಂದು ಚಾಕು, ನಗದು ಹಣ ರೂ 1210/- ಹಾಗೂ ವಾಹನಗಳನ್ನು ಸ್ವತ್ತು ಸ್ವಾದೀನತಾ ಮಹಜರು ಮುಖೇನಾ ಸ್ವಾದಿನ ಪಡಿಸಿ, ಕೋಳಿಗಳನ್ನು ಹಿಂಸಾತ್ಮಕ ರೀತಿಯಲ್ಲಿ ಉಪಯೋಗಿಸಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ಎಂಬ ಜುಗಾರಿ ಆಟ ಆಡುತ್ತಿದ್ದರು.
3.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ: 18.09.2014 ರಂದು ಪಿರ್ಯಾದುದಾರರಾದ ಶ್ರುತೀಬ್ ತಮ್ಮ ಸಂಪತ್ ಕುಮಾರ್ ಎಂಬವರು KA-19-W-157ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ತನ್ನ ಅಕ್ಕ ಪಿರ್ಯಾದುದಾರಳನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಮಂಗಳೂರು ಕಡೆಗೆ ಹೋಗುತ್ತಾ ಬೆಳಿಗ್ಗೆ ಸುಮಾರು 08:45 ಗಂಟೆಗೆ ಯೆಯ್ಯಾಡಿ ಬಸ್ ಸ್ಟಾಫ್ ನಿಂದ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ರಸ್ತೆಯ ಬಲಬದಿಯ ತೆರೆದ ಡಿವೈಡರಿನ ಮೂಲಕ ನಂಬ್ರ ತಿಳಿಯದ ಒಂದು ಗ್ರೇ ಬಣ್ಣದ ಕಾರನ್ನು ಅದರ ಚಾಲಕರು ಸೂಚೆನೆಯನ್ನು ನೀಡದೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಸಿಕೊಂಡು ಬಂದು ಸದ್ರಿ ಮೊಟಾರ್ ಸೈಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮತ್ತು ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಕಾಲಿನ ಮೊಣಕಾಲಿಗೆ ತರಚಿದ ಮತ್ತು ಗುದ್ದಿದ ಗಾಯ ಅಲ್ಲದೇ ಸವಾರ ಸಂಪತ್ ಕುಮಾರನ ಬಲಕೈಗೆ ಮೂಳೆ ಮುರಿತದ ಗಾಯ, ಬಲಕಾಲಿನ ಬೆರಳುಗಳಿಗೆ ತರಚಿದ ಗಾಯಗೊಂಡು ನಗರದ ಎ.ಜೆ ಆಸ್ಪತ್ರೆಯಲ್ಲಿ ಪಿರ್ಯಾದುದಾರರು ಹೊರರೋಗಿಯಾಗಿ ಚಿಕಿತ್ಸೆ ಪಡೆದು ಸವಾರ ಸಂಪತ್ ಕುಮಾರನು ಒಳರೋಗಿಯಾಗಿ ದಾಖಲುಗೊಂಡಿರುವುದಲ್ಲದೇ ಸದ್ರಿ ಅಪಘಾತ ನಡೆದ ನಂತರ ಕಾರನ್ನು ಅದರ ಚಾಲಕರು ನಿಲ್ಲಿಸದೇ ಕಾರು ಸಮೇತ ಪರಾರಿಯಾಗಿರುವುದು.
No comments:
Post a Comment