ದೈನಂದಿನ ಅಪರಾದ ವರದಿ.
ದಿನಾಂಕ 28.09.2014 ರ 06:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 1 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26.09.2014 ರಂದು ಪಿರ್ಯಾದಿದಾರರಾದ ಶ್ರೀಮತಿ ವಿಕ್ಟೋರಿಯಾ ಡಿ'ಕೊಸ್ತಾ ರವರ ಗಂಡನವರಾದ ಶ್ರೀ ಪೀಟರ್ ತಾವ್ರೋ (62) ವರ್ಷ ಎಂಬವರು ಎಂದಿನಂತೆ ಸಂಜೆ ವಾಕಿಂಗ್ಗೆಂದು ಮಂಗಳೂರು ನಗರದ ಉರ್ವಾಸ್ಟೋರ್-ಲೇಡಿಹಿಲ್ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಚಿಲಿಂಬಿ ಬಳಿ ಸಮಯ ಸಂಜೆ ಸುಮಾರು 6:30 ಗಂಟೆಗೆ ತಲುಪಿದಾಗ, ಲೇಡಿಹಿಲ್ ಕಡೆಯಿಂದ ಉರ್ವಾಸ್ಟೋರ್ ಕಡೆಗೆ ಮೋಟಾರು ಸೈಕಲ್ ನಂಬ್ರ ಕೆ.ಎ-18-ಡಬ್ಲ್ಯು-8706 ನೇದನ್ನು ಅದರ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಗಂಡನವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ ತೀವ್ರ ರಕ್ತ ಗಾಯ, ಎಡಕೈಗೆ, ಎಡಕಾಲಿಗೆ ಗಾಯವಾದ್ದವರನ್ನು ಚಿಕಿತ್ಸೆಯ ಬಗ್ಗೆ ನಗರದ ಎ.ಜೆ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ.
2.ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 26.09.2014 ರಂದು ಪಿರ್ಯಾದುದಾರರಾದ ಶ್ರೀ ಅಬ್ದುಲ್ ಮಜೀದ್ ರವರು ತಮ್ಮ ಬಾಬ್ತು BMW ಕಾರು ನಂಬ್ರ KA-19 -MC- 6177 ನೇದನ್ನು ಮಂಗಳೂರು ನಗರದಲ್ಲಿ ಚಲಾಯಿಸುತ್ತಾ ರಾತ್ರಿ ಸಮಯ ಸುಮಾರು 7 ಗಂಟೆ ಸಮಯಕ್ಕೆ ಹಂಪನಕಟ್ಟೆಯಲ್ಲಿರುವ ವಿಜಯ ಪೆನ್ ಮಾರ್ಟ್ ಬಳಿ ತಲುಪಿದಾಗ ಕ್ಲಾಕ್ ಟವರ್ ಕಡೆಯಿಂದ ಹಂಪನಕಟ್ಟೆ ಕಡೆಗೆ ಕಾರು ನಂಬ್ರ KA- 21-N -5789 ನೇಯದನ್ನು ಅದರ ಚಾಲಕ ಆತೀ ವೇಗ ಹಾಗೂ ಅಜಾಕರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಜಖಂ ಗೊಂಡಿರುತ್ತದೆ.
3.ಕಾವೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ವಿ. ಕೃಷ್ಣಮೂರ್ತಿ ರವರು ದಿನಾಂಕ 23/08/2014 ರಂದು ಕುಟುಂಬದೊಂದಿಗೆ ಬಳ್ಳಾರಿಗೆ ಹೋಗಿದ್ದು, ದಿನಾಂಕ 25/09/2014 ರಂದು ಹೊಸಪೇಟೆಯಲ್ಲಿರುವ ಸಮಯ ಬೋಂದೆಲ್ ನ ನೆರೆಯ ವಾಸಿಯಾದ ಶ್ರೀ ನಾಗರಾಜಪ್ಪ ಎಂಬವರು ಫೋನ್ ಮಾಡಿ ಮನೆಯ ಎದುರಿನ ಬಾಗಿಲು ತೆರೆದಿದ್ದು, ಯಾರೋ ಮನೆಯ ಒಳಗೆ ಪ್ರವೇಶಿಸಿ ಸ್ವತ್ತುಗಳನ್ನು ಕಳವು ಮಾಡಿ ಹೋಗಿರುವಂತೆ ಕಂಡು ಬರುತ್ತದೆ ಎಂದು ಹೇಳಿದ ಪ್ರಕಾರ ಫಿರ್ಯಾದಿದಾರರು ದಿನಾಂಕ 26-09-2014 ರಂದು ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ಬಲಾತ್ಕಾರವಾಗಿ ಒಡೆದು ಬಾಗಿಲನ್ನು ಜಖಂಗೊಳಿಸಿ ಮನೆಯ ಒಳಗೆ ಹೋಗಿ ಮನೆಯ ಒಳಗಿದ್ದ ಸೋನಿ ಟಿ.ವಿ, ಒಂದು ಇನ್ವರ್ಟರ್ ಮತ್ತು ಬ್ಯಾಟರಿಗಳನ್ನು ಕಳವುಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಮೌಲ್ಯ ಒಟ್ಟು ರೂ. 20,000/- ಆಗಬಹುದು.
No comments:
Post a Comment