Monday, September 22, 2014

Daily Crime Reports 22-09-2014

ದೈನಂದಿನ ಅಪರಾದ ವರದಿ.

ದಿನಾಂಕ 22.09.201408:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-09-2014 ಪಿರ್ಯಾಧಿದಾರರಾದ ಶ್ರೀ ಉದಯ್ ಶೆಟ್ಟಿ ರವರು ತನ್ನ ಬಾಬ್ತು ಮೋಟಾರು ಸೈಕಲ್  ನಂಬ್ರ, KA-19-EA-2845 ನೇಯದರಲ್ಲಿ ತನ್ನ ಹೆಂಡತಿ ತಾರಾ ಶೆಟ್ಟಿ ಯವರನ್ನು ಸಹ ಸವಾರಳನ್ನಾಗಿ ಕುಳ್ಳಿರಿಸಿಕೊಂಡು ರಾತ್ರಿ 08-00 ಗಂಟೆಗೆ ಸಮಯಕ್ಕೆ ದೇರಬೈಲು ಪ್ರಶಾಂತ ನಗರ ಕ್ರಾಸ್ ಬಳಿ ಹೋಗುತ್ತಿದ್ದಾಗ ಎದರುನಿಂದ  ಕೆಎ 19-ಎಮ್ - 9419 ನೇ ಕಾರನ್ನು ಅದರ ಚಾಲಕ  ಪ್ರಶಾಂತ್ ನಗರ ಕ್ರಾಸ್ ಕಡೆಗೆ ತಿರುಗಿಸುವರೇ ಯಾವುದೇ ಸೂಚನೆ ನೀಡದೆ, ಒಮ್ಮೆಲೆ ತನ್ನ ಬಲಕ್ಕೆ ನಿರ್ಲಕ್ಷತನದಿಂದ, ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ಬೈಕಿಗೆ ಢಿಕ್ಕಿ ಹೊಡೆದುದರ ಪರಿಣಾಮ ಪಿರ್ಯಾಧಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಸಹಸವಾರಳಾಗಿದ್ದ ತಾರಾ ಶೆಟ್ಟಿ ರವರ ತಲೆಗೆ ಗುದ್ದಿದ ಗಂಭೀರ  ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರು ಜೆ, ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-09-2014 ಪಿರ್ಯಾಧಿದಾರರಾದ ಶ್ರೀ ಸುನೀಲ್ ಡಿ'ಸೋಜಾ ರವರು ರಾತ್ರಿ 09-00 ಗಂಟೆಗೆ ಪಣಂಬೂರು ಕೆಐಒಸಿಎಲ್ ಜಂಕ್ಷನ್ ಬಳಿ ಬರುತ್ತಿದ್ದಾಗ ತಣ್ಣೀರುಬಾವಿ ಕಡೆಯಿಂದ ಕೆಎ 19- ಜಿ-5703 ನೇಯ ನಂಬ್ರದ ಹೋಂಡಾ ಆಕ್ಟಿವಾ ದಲ್ಲಿ ಸವಾರರಾದ ರಾಖೇಶ್ ಪೇರಾವೂ ಮತ್ತು ಹಿಂಬದಿ ಸವಾರ  ಮೇಲ್ವಿನ್ ಡಿ ಸೋಜಾ ರವರು ಕೂಳೂರು ಕಡೆಗೆ ಹೋಗುವರೇ, ಎನ್ ಹೆಚ್ 66 ರಲ್ಲಿ  ನಿಂತ್ತಿದ್ದಾಗ ಹಿಂದುಗಡೆಯಿಂದ  KA-19-Z-7692  ನೇಯ ನಂಬ್ರದ ಕಾರನ್ನು ಅದರ ಚಾಲಕ ಆಭೀಜಿತ್ ಉಚ್ಚಿಲ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿ  ರೀತಿಯಲ್ಲಿ ಚಲಾಯಿಸಿಕೊಂಡು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ರಾಖೇಶ್ ಪೇರಾವೂ  ರವರ ಎರಡು ಕಾಲುಗಳಿಗೂ ಗಂಭೀರ ರೀತಿಯ ರಕ್ತ ಗಾಯವಾಗಿದ್ದು ಮೇಲ್ವಿನ್ ಡಿ ಸೋಜಾ ರವರಿಗೆ ಕಾಲು ಮತ್ತು ಕೈಗಳಿಗೆ ರಕ್ತ ಗಾಯವಾದ ಬಗ್ಗೆ ಮಂಗಳೂರು ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 20-09-2014 ರಾತ್ರಿ 22.45 ಗಂಟೆಯಿಂದ ದಿನಾಂಕ: 21-09-2014 ಸಮಯ 1.45 ಗಂಟೆಯ ಮದ್ಯ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಪಿರ್ಯಾದಿದಾರರಾದ ಶ್ರೀಮತಿ ಭಾರತಿ ಜಗದೀಶ್ ರವರ ಮನೆಯ ಮೇಲ್ಬಾಗದ ಕೋಣೆಯ ಹಿಂಭಾಗಿಲಿನಿಂದ ಒಳ ಪ್ರವೇಶಿಸಿ ಮಲಗಿದ್ದ ಪಿರ್ಯಾದಿದಾರರ ಗಂಡ ಶ್ರೀ ಜಗದೀಶ್  ಕೆ. (56)ರವರಿಗೆ ಯಾವುದೋ  ಆಯೂಧದಿಂದ  ಕುತ್ತಿಗೆಯ ಎಡ ಭಾಗಕ್ಕೆ ರಕ್ತ ಗಾಯಗೊಳಿಸಿ ಕೊಲೆ ಮಾಡಿ ರೂಮ್ ನಲ್ಲಿದ್ದ ಸುಮಾರು 3.5 ಪವನ್ ತೂಕದ ಚಿನ್ನದ ರೂಪ್ ಚೈನನ್ನು (ಇದರ ಬೆಲೆ ಅಂದಾಜು 70,000/- ರೂ) ಕಳ್ಳತನ ಮಾಡಿಕೊಂಡು ದುಷ್ಕರ್ಮಿಗಳು ಪರಾರಿಯಾಗಿರುತ್ತಾರೆ.

 

4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ರಮೇಶ್ ಭಗೀರಥ್ ಪಾಸಿ ರವರು ಮುಂಬಯಿ ನಿವಾಸಿಯಾಗಿದ್ದು, "ಸ್ವೆಟಂ ಕಂಬಯಿನ್" ಎಂಬ ಸೋಪ್ಟರಿ ಸ್ಟಾಫ್ ಬೊರ್ಡು ತಯಾರು ಮಾಡುವ ಖಾಸಗೀ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ 14-09-2014 ರಂದು ಪಿರ್ಯಾದಿದಾರರು ಶರಬ್ ಜೀತ್ ಫಾಸಿ ಮತ್ತು ವಿಶ್ವಾಸ್ ಬರವಟ್ ಕರ್ ಜೊತೆಗೆ ಮುಂಬಯಿಯಿಂದ ಮಂಗಳೂರು ಗೆ ಬಂದು ಶ್ರೀನಿವಾಸ್ ಹೋಟೇಲ್ ನಲ್ಲಿ ಉಳಕೊಂಡು ದಿನಾಂಕ 14-09-2014 ರಿಂದ ಮಂಗಳೂರು ಫೀಜಾ ಮಹಲ್ ನಲ್ಲಿ ಬೊರ್ಡು ತಯಾರು ಮಾಡುವ ಕೆಲಸ ಮಾಡುತ್ತಿದ್ದು, ದಿನಾಂಕ 20-09-2014 ರಂದು ಕೆಲಸ ಮುಗಿದಿರುತ್ತದೆ. ದಿನಾಂಕ 20-09-2014 ರಂದು ರಾತ್ರಿ ಸುಮಾರು 8:30 ಗಂಟೆಗೆ ಶ್ರೀನಿವಾಸ್ ಹೋಟೇಲ್ ರೂಮ್ ನಲ್ಲಿ ನಲ್ಲಿ ಊಟ ಮಾಡುವ ಮೊದಲು ಮೂವರು ಅಮಲು ಪದಾರ್ಥ ಸೇವಿಸಿ, ರಾತ್ರಿ ಸುಮಾರು 10:00 ಗಂಟೆಗೆ ಶರಬ್ ಜೀತ್ ನು ಊಟ ಪಾರ್ಸೆಲ್ ತರುವುದಾಗಿ ಹೇಳಿ ರೂಮ್ ನಿಂದ ಹೊರಗೆ ಹೋಗಿದ್ದು, ವಾಪಾಸ್ಸು ಬಾರದ ಕಾರಣ ಪಿರ್ಯಾದಿದಾರರು ಮತ್ತು ವಿಶ್ವಾಸ್ ಬರವಟ್ ಕರ್ ರೂಮ್ ನಲ್ಲೇ ನಿದ್ರೆ ಮಾಡಿದ್ದು, ರಾತ್ರಿ ಸುಮಾರು 01:00 ಗಂಟೆಗೆ ಪಿರ್ಯಾದಿದಾರರು ಶರಭ್ ಜೀತ್ ಗೆ ಫೋನ್ ಮಾಡಿದಾಗ ಯಾರೋ ಹಿಂದಿ ಭಾಷೆಯಲ್ಲಿ "ನಿಮ್ಮ ಶರಭ್ ಜೀತ್ ಗೆ ಯಾರೋ ಹೊಡೆದು ಹೋಗಿದ್ದು, ಅವರು ಇಲ್ಲಿ ಬಿದ್ದಿದ್ದಾರೆ, ನೀವು ಇಲ್ಲಿಗೆ ಬನ್ನಿ" ಎಂಬುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಮತ್ತು ವಿಶ್ವಾಸ್ ಬರವಟ್ ಕರ್ ಹೋಟೆಲ್ ನಿಂದ ನಡೆದುಕೊಂಡು ಹೋಗಿ ಕೆ.ಬಿ. ಸರ್ಕಲ್ ಬಳಿ ಶರಭ ಜೀತ್ ನು ಬಿದ್ದು ಕೊಂಡಿದ್ದವನನ್ನು ಚಿಕಿತ್ಸೆಯ ಬಗ್ಗೆ ಆಟೋರಿಕ್ಷಾವೊಂದರಲ್ಲಿ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಯಾರೋ ಅಪರಿಚಿತ ವ್ಯಕ್ತಿಯು ಶರಭಜೀತ್ ಹಣೆಗೆ, ತಲೆಯ ಎಡ ಮತ್ತು ಬಲ ಬದಿ ಹಾಗೂ ಮುಖಕ್ಕೆ ಹಲ್ಲೆ ನಡೆಸಿದ್ದು, ಆತನ ಬಳಿಯಲ್ಲಿದ್ದ ಮೊಬೈಲ್ ಫೋನ್ ಮತ್ತು ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ ಕಾರ್ಡ್, ಪಾನ್ ಕಾರ್ಡ್ ನಾಪತ್ತೆಯಾಗಿರುವುದಾಗಿದೆ.

 

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  20.09.2014 ರಂದು  ಮದ್ಯಾಹ್ನ 2:00  ಗಂಟೆ ಸಮಯಕ್ಕೆ ಮಂಗಳೂರು ತಾಲೂಕು   ಪಡುಮಾರ್ನಾಡು  ಗ್ರಾಮದ ಬನ್ನಡ್ಕ್ಸೋನ್ಸ್  ಫಾರ್ಮ್  ಬಳಿ ತಾಲೂಕು  ಪಿರ್ಯಾದಿದಾರರಾದ ಶ್ರೀ ಗಣೇಶ್  ಎಂಬವರು  ತನ್ನ  ಮಾವನ  ಮನೆಗೆ ಹೋಗುವರೇ  ರಸ್ತೆ ದಾಟಲು  ನಿಂತಿದ್ದ ಸಮಯ  ಕಾರ್ಕಳ  ಕಡೆಯಿಂದ  ಬಂದ ಕೆ,  02. ಎಂಎಫ್‌ 906  ನೇ ರಿಟ್ಸ್ಕಾರನ್ನು  ಅದರ ಚಾಲಕ ರಸ್ತೆಯ ತೀರಾ ಎಡಕಡೆಗೆ ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು  ರಸ್ತೆಗೆ ಒಮ್ಮಲೆ  ಎಸೆಯಲ್ಪಟ್ಟು,   ಪಿರ್ಯಾದಿಯ  ಕಣ್ಣಿನ  ಹುಬ್ಬಿನ ಭಾಗಕ್ಕೆ, ಬಲ ಬದಿಯ  ಕೆನ್ನೆಯ  ಭಾಗಕ್ಕೆ, ಎಡಕೈಗೆ,  ಹಾಗೂ  ಎಡಬದಿ  ಸೊಂಟದ ಭಾಗಕ್ಕೆ  ಗುದ್ದಿದ ಗಾಯವಾಗಿದ್ದು, ಅಲ್ಲಿ ಸೇರಿದ ಜನ  ಗಾಯಾಳು  ಪಿರ್ಯಾದಿಯವರನ್ನು  ಮೂಡಬಿದ್ರೆ ಆಳ್ವಾಸ್  ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು  ನಂತರ ಹೆಚ್ಚಿನ  ಚಿಕಿತ್ಸೆಯ ಬಗ್ಗೆ ಮಂಗಳೂರಿನ  ಇಂಡಿಯಾನ  ಆಸ್ಪತ್ರೆಗೆ ಒಳರೋಗಿಯಾಗಿ  ದಾಖಲಿಸಿರುತ್ತಾರೆ.  

 

6.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ  21 .09.2014 ರಂದು ಪಿರ್ಯಾದಿ ರವೀಂದ್ರ, ಸುಭ್ರಮಣ್ಯ  ತಂತ್ರಿ, ವಿಜೇತ್ಭಟ್‌, ಕಿರಣ್ರಾವ್ಹಾಗೂ ಚಾಲಕರಾಗಿ  ಸತ್ಯಮೂರ್ತಿಭಟ್  ರವರು ಆಲ್ಟೋ 800 ಮಾರುತಿ  ಕೆ.  19 ಎಂಡಿ  9246  ನೇದನ್ನು  ಚಲಾಯಿಸುತ್ತಾ ಕಟೀಲು  ಕಡೆಯಿಂದ ಬರುತ್ತಾ ರಾತ್ರಿ ಸಮಯ ಸುಮಾರು 8:45 ಗಂಟೆಗೆ ಮಂಗಳೂರು ತಾಲೂಕು ನಿಡ್ಡೋಡಿ ಗ್ರಾಮದ ಕುದ್ರಿ ಪದವು ಬಳಿ ತಲುಪಿದಾಗ ಮೂಡಬಿದ್ರೆ  ಕಡೆಯಿಂದ  ಬಂದ ಕೆ.  19 ಎಂಡಿ  9254 ನೇ ಸ್ವಿಫ್ಟ್  ಕಾರನ್ನು  ಅದರ ಚಾಲಕ ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಕೆ.  19 ಎಂಡಿ  9246  ನೇದಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಯ  ಎಡ ಭುಜಕ್ಕೆ,  ಗುದ್ದಿದ ಗಾಯ, ಕಿರಣ್  ರಾವ್ರವರಿಗೆ  ಎಡ ಹಣೆಗೆ ರಕ್ತ  ಬರುವ ಗಾಯ,  ಹಾಗೂ  ಚಾಲಕ  ಸತ್ಯಮೂರ್ತಿಯವರ ಹಣೆಗೆ ತರಚಿದ ಗಾಯ,  ಮತ್ತು ಸುಭ್ರಮಣ್ಯ  ತಂತ್ರಿಯವರಿಗರ  ತಲೆಯ  ಹಿಂದೆ ಗುದ್ದಿದ ಗಾಯವಾವಿರುತ್ತದೆ.  ಮತ್ತು  ಎರಡು  ಕಾರಿನ  ಮುಂಬಾಗ ಜಖಂಗೊಂಡಿದ್ದು  ಗಾಯಗೊಂಡವರನ್ನು  ವಿಜೇತ್ರವರು  ಮೂಡಬಿದ್ರೆ ಆಳ್ವಾಸ್  ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 21-09-2014 ರಂದು ಮಧ್ಯಾಹ್ನ ಸುಮಾರು 14-30 ಗಂಟೆಗೆ ಪಿರ್ಯಾದುದಾರರಾದ ಶ್ರೀ ಅಲ್ವಿನ್ ಕಮಿಲ್ ಪಾಯಸ್ ರವರು ತಮ್ಮ ಜೀಪಿನಲ್ಲಿ  ವಳಚಿಲ್ ಪದವಿನ ಕಡೆಹೋಗುತ್ತಿದ್ದಾಗ  ಮೇರ್ಲಪದವು ಶಾಲೆಯಿಂದ ಸ್ವಲ್ಪ ಮುಂದಕ್ಕೆ ತಲುಪಿದಾಗ ಅವರ ಮುಂದಿನಿಂದ ಆಟೋರಿಕ್ಷಾವೊಂದು ಹೋಗುತ್ತಿದ್ದು ತಿರುವು ರಸ್ತೆಯಲ್ಲಿ ವಳಚಿಲ್ ಕಡೆಯಿಂದ ನೀರುಮಾರ್ಗ ಕಡೆಗೆ ಒಂದು  ಮೋಟಾರು ಸೈಕಲ್ ನ್ನು  ಅದರ ಸವಾರ ಸಂದೀಪನು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA-19-EF-5590 ನೇ ಮೋಟಾರು ಸೈಕಲ್ ನಲ್ಲಿ ತನ್ನ ಹೆಂಡತಿ ಯಶೋಧ ಎಂಬುವರನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ತಿರುವು ರಸ್ತೆಯಲ್ಲಿ ಆಟೋ ರಿಕ್ಷಾವನ್ನು ನೋಡಿ  ಗಾಬರಿಗೊಂಡು ತಾನು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಮೇಲೆ ನಿಯಂತ್ರಣವನ್ನು ಕಳೆದುಕೊಂಡು ಬೈಕ್ ಸಮೇತ ರಸ್ತೆಗೆ ಅಡ್ಡಬಿದ್ದಿದ್ದು ಗಾಯಗೊಂಡ ಇಬ್ಬರನ್ನು ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ್ದ ಕೆಲವರು ಸೇರಿ ಪಿರ್ಯಾಧಿದಾರರ ಜೀಪಿನಲ್ಲಿ ಕುಳ್ಳಿರಿಸಿ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲು ಮಾಡಿದ್ದು ಅವರನ್ನು ಪರೀಕ್ಷಿಸಿದ ವೈಧ್ಯರು ಬೈಕ್ ಸವಾರ ಸಂದೀಪನನ್ನು ಹೋರ ರೋಗಿಯಾಗಿ ಮತ್ತು ಆತನ್ ಪತ್ನಿ ಯಶೋಧಳನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಂತೆ ಗಾಯಾಳು ಯಶೋಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಂಜೆ 18-50 ಗಂಟೆಗೆ ಮೃತಪಟ್ಟಿದ್ದು, ಈ ಅಪಘಾತಕ್ಕೆ ಬೈಕ್ ಸವಾರ ಸಂದೀಪನು ತನ್ನ ಬಾಬ್ತು ಮೋಟಾರು ಬೈಕ್ KA-19. EF-5590. ನೇ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ತಿರುವ ರಸ್ತೆಯಲ್ಲಿ ಎದುರಿನಿಂದ ಬಂದ ಆಟೋ ರಿಕ್ಷಾವನ್ನು ಕಂಡು ಗಾಬರಿಗೊಂಡು ಬೈಕಿನ ಮೇಲೆ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಗೆ ಬಿದ್ದಿರುವುದೇ ಕಾರಣವಾಗಿರುತ್ತದೆ.

No comments:

Post a Comment