Thursday, September 18, 2014

Daily Crime Reports 18-09-2014

 ದೈನಂದಿನ ಅಪರಾದ ವರದಿ.

ದಿನಾಂಕ 18.09.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ    

:

0

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

7

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ:.ದಿನಾಂಕ 16/09/2014 ರಂದು ರಾತ್ರಿ ಸುಮಾರು 11:30 ಗಂಟೆಗೆ ಪೀರ್ಯಾದುದಾರು   ಶರತ್ ರಾಜ್ ಭಂಡಾರಿ ತನ್ನ ಅಣ್ಣ ಬಾಬ್ತು ಬೈಕ್ ನಂಬ್ರ ಕೆ 19 ಇ ಜಿ 1040 ರಲ್ಲಿ ಹಿಂಬದಿ ಸವಾರರಾಗಿ ವಿಘ್ನೆಶ ಏಂಬುವರನ್ನು ಕುಳ್ಳಿರಿಸಿಕೊಂಡು ಮಂಗಳೂರು ಕಡೆಯಿಂದ ತನ್ನ ಮನೆಯಾದ ಸರಿಪಳ್ಯ ಕಡೆಗೆ ಹೋಗುವರೇ ಪ್ಲಾಮಾ ಬಿಲ್ಡಿಂಗ್ ಎದುರುಗಡೆ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಕುಲಶೇಖರ ಕಡೆಯಿಂದ ಬೈಕ್ ನಂಬ್ರ ಕೆ ಎ 19 ಇ ಜಿ 3636 ರ ಸವಾರನು ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಫಿರ್ಯಾದುದಾರ ಸವಾರಿ ಮಾಡುತ್ತಿದ್ದ ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಫಿರ್ಯಾದುದಾರು ಮತ್ತು ಸಹ ಸವಾರರಾದ ವಿಘ್ನೆಶ ಸುವರ್ಣ ಬೈಕು ಸಮೆತ ಡಾಮಾರು ರಸ್ತೆಗೆ ಬಿದ್ದು ಪೀರ್ಯಾದುದಾರರ ಬಲಕಣ್ಣಿಗೆ ಹಾಗೂ ಮುಖದ ಬಲಭಾಗಕ್ಕೆ ಗುದ್ದಿದ ನೋವು ಹಿಂಬದಿ ಸವಾರ ವಿಘ್ನೆಶ ಸುವರ್ಣ ಅವರಿಗೆ ಎಡಕಾಲನ ತೋಡೆಗೆ ಗಂಭಿರ ಸ್ವರೂಪದ ಗುದ್ದಿದ ನೋವು ಹಾಗೂ ಬಲಕಣ್ಣಿನ ಬಳಿ ರಕ್ತಗಯವಾಗಿದ್ದು ಕೆ ಎಂ ಸಿ ಅತ್ತಾವರ ಆಸ್ಪತ್ರೆಯ್ಲಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ.

 

2. ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 17/10/2014 ರಮದು 10:30 ಗಂಟೆಗೆ ಫೀರ್ಯಾದುದಾರಾದ ಉಮೆಶ ತನ್ನು ಬಾಬ್ತು ಮೋಟರ್ ಸೈಕಲ್ ನಂಬ್ರ ಕೆ ಎ 19 ಇ ಡಿ 1165 ರಲ್ಲಿ ಸವಾರರಾಗಿದ್ದುಕೊಂಡು ಕಂಕನಾಡಿ ಕಡೆಯಿಂದ ಬಲ್ಮಠ ಕಡೆಗೆ ಸವಾರಿ ಮಾಡಿಕೊಂಢು ಆವೆರಿ ಜಂಕ್ಷನ್ ಬಳಿಯ ಯಶ್ ರಾಜ್ ಬಾರ್ ಎದುರುಗಡೆ ತಲುಪುವಾಗ ಅಂಬೆಡ್ಕರ್ ವೃತ್ತದ ಕೆ ಎಂ ಸಿ ಒಳ ರಸ್ತೆಯಿಂದ ಒಂದು ಆಟೋ ರಿಕ್ಷಾ ನಂಬ್ರ ಕೆ ಎ 19 ಎ 2205 ನ್ನು ಅದರವ ಚಾಲಕ ಅತೀ ವೇಗ ಹಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪೀರ್ಯಾದುದಾರ ಮೋಟರ್ ಸೈಕಲಗೆ ಡಿಕ್ಕಿ ಮಾಡಿದ ಪರಿಣಾಮ ಪೀರ್ಯಾದುದಾರರು ರಸ್ತೆಗೆ ಬಿದ್ದು ಎರಡೂ ಕಾಲುಗಳಿಗೆ ತರಚಿದ ಗಾಯವಾಗಿದ್ದು ರಿಕ್ಷಾ ಚಾಲಕನ ತಲೆಗೆ ಗಂಭಿರ ಸ್ವರೂಪದ ರಕ್ತ ಗಾಯವಾಗಿರುತ್ತದೆ

 

3.ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ:  ದಿನಾಂಕ 17.09.2014  ರಂದು pirfyadidarru ಪಿರ್ಯಾದಿದಾರರು ತನ್ನ ಬಾಬ್ತು ಹೋಂಡಾ ಆಕ್ಟೀವಾ ನಂಬ್ರ ಕೆಎ.19.ಈಜಿ.4813ನೇದನ್ನು ಸ್ಟೇಟ್ ಬ್ಯಾಂಕ್ ಕಡೆಯಿಂದ ಬೀಬಿ ಅಲಾಬಿ ರಸ್ತೆಗೆ ಹೋಗುವರೇ ಮಿಷನ್ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಬೀಬಿಅಲಾಬಿ ರಸ್ತೆಗೆ ಎಂಟ್ರಿಯಾಗುವ ಸಮಯ ಮಧ್ಯಾಹ್ನ 12.15 ಗಂಟೆಗೆ ಆರೋಪಿ ಟೆಂಪೋ ಚಾಲಕ ರಾಕೇಶ್ ಎಂಬವರು ಟೆಂಪೋವನ್ನು  ಬಂದರ್ ರಸ್ತೆಯಿಂದ ರಾವ್ & ರಾವ್ ರಸ್ತೆಗೆ ಅತೀವೇಗ ಮತ್ತು ಅಜಾಗರುಕೆತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹೋಂಡಾ ಆಕ್ಟೀವಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ  ವಾಹನ ಸಮೇತ ರಸ್ತೆಗೆ ಬಿದ್ದುದರಿಂದ  ಪಿರ್ಯಾದಿದಾರರ ಎಡ ಭುಜಕ್ಕೆ ತರಚಿ ಗಾಯ ಮತ್ತು ಎಡ  ಬೆನ್ನಿಗೆ ಗುದ್ದಿ ಗಾಯವಾಗಿ ಚಿಕಿತ್ಸೆ ನಗರದ ಯುನಿಟಿ ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ.

 

4. ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಫಿರ್ಯಾದಿದಾರರಾದ ಮೇರಿನ್.ಪಿ.ಸಾಜಿ ದಿನಾಂಕ ತಾ 15-09-2014 ರಂದು ಬೆಳಿಗ್ಗೆ 08.00ಗಂಟೆಗೆ ರಾ.ಹೆ.66 ರಲ್ಲಿ ಕೊಟ್ಟಾರ ಬಳಿ ಮಹೇಂದ್ರ ಶೋರೂಮ್ ನ ಎದುರುಗಡೆ ತಾನು ಕಲಿಯುತ್ತಿರುವ ನರ್ಸಿಂಗ್ ಕಾಲೇಜಿನ ಲೇಡಿಸ್ ಹಾಸ್ಟೆಲ್ ನ ಸ್ಕೂಲ್  ಬಸ್ ಗೆ ಕಾಯುತ್ತಿದ್ದಾಗ ಅಮೃತಾ ವಿದ್ಯಾಲಯ ಬೋಳಾರ್ ಎಂದು ಬರೆದಿರುವ ಸ್ಕೂಲ್ ಬಸ್ ನಂಬ್ರ ಕೆಎ.19.ಸಿ.3905 ನೇದರ ಚಾಲಕ ಮಾಗುಂಡಯ್ಯ. ವಿ. ವಿಭೂತಿ ಎಂಬವರು ತನ್ನ ಬಸ್ಸನ್ನು ಫಿರ್ಯಾದಿದಾರರು  ಮತ್ತು ಅವರ ಕಾಲೇಜಿನ ಸಹಪಾಠಿಗಳೂಂದಿಗೆ ಪುಟ್ಪಾತ್ ನಲ್ಲಿ ನಿಂತಿದ್ದಲ್ಲಿಗೆ  ಕೊಟ್ಟಾರದಿಂದ ಕೆ.ಪಿ.ಟಿ ಕಡೆಗೆ ಚಲಾಯಿಸಿಕೊಂಡು ಬಂದು ನಿಲ್ಲಿಸಿ ಒಮ್ಮೆಲೇ ಹಿಂದಕ್ಕೆ ಯಾವುದೇ ಸೂಚನೆ ನೀಡದೇ ಚಲಾಯಿಸಿದಾಗ ಹಿಂದುಗಡೆಯಿದ್ದ ಫಿರ್ಯಾದಿದಾರರಿಗೆ ಢಿಕ್ಕಿಹೊಡೆದ ಪರಿಣಾಮ ಬಲಕೈಗೆ ಮೂಳೆಮುರಿತ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆ ದಾಖಲಿಸಿ ಚಿಕಿತ್ಸೆಯಲ್ಲಿರುತ್ತಾರೆ.

 

5.ಸಂಚಾರ ಉತ್ತರ ಪೊಲೀಸ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಫಿರ್ಯಾದಿದಾರರಾದ ವೀರಭದ್ರ ಹೀರೆಮಠ ತಾರೀಖು 16-09-2014 ರಂದು ತಮ್ಮ ವ್ಹಿ.ಆರ್ ಎಲ್  ಕಂಪನಿಯ ಲಾರಿ KA 25 C  8202 ನೇಯದರಲ್ಲಿ ರಾ.ಹೆ.66 ರಲ್ಲಿ ಉಡುಪಿಯಿಂದ ಕೂಳೂರು  ಕಡೆಗೆ ಅದರ ಚಾಲಕ ಹೀರಾಲಾಲ್ ರವರು ಚಲಾಯಿಸುತ್ತಾ ಸಂಜೆ 06-15 ಗಂಟೆಗೆ ಮುಲ್ಕಿ ಶಾಂಭವಿ ಸೇತುವೆಯನ್ನು ದಾಟುತ್ತಿರುವಾಗ ಎದುರಿನಿಂದ ಅಂದರೆ ಮಂಗಳೂರಿನಿಂದ ಉಡುಪಿ ಕಡೆಗೆ KA - 06 B  2055 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಅಮೀರ್ ಜಾನ್ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ಫಿರ್ಯಾದಿದಾರರು ಇದ್ದ ಲಾರಿಗೆ ಡಿಕ್ಕಿ ಹೊಡೆದಿರುವ ಪರಿಣಾಮ ಎರಡೂ ಲಾರಿಗಳು ಜಖಂಗೊಂಡು ಚಾಲಕರಾದ ಹೀರಾಲಾಲ್ ಅವರ ಹೊಟ್ಟೆಗೆ ಗುದ್ದಿದ ಗಂಭೀರ ತರದ ಗಾಯವಾಗಿದ್ದು ಆಪಾದಿತ ಚಾಲಕ ಅಮೀರ್ ಜಾನ್ ರವರ ಹಣೆ ಮತ್ತು ಮುಖಕ್ಕೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿದೆ.

 

6.ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಫಿರ್ಯಾದಿದಾರಾದ ನವೀನ್ ಶೀಯಾನ್ ತಾರೀಖು 14-09-2014 ರಂದು ತನ್ನ ಬಾಬ್ತು  KA19 EK 7380 ನೇಯ ಬೈಕಿನಲ್ಲಿ ಮುಕ್ಕದ ಕಡೆಗೆ ಹೋಗುತ್ತಾ ಬೆಳಿಗ್ಗೆ 11-30 ಗಂಟೆಗೆ ಶ್ರೀರಾಮ ಭಜನಾ ಮಂದಿರದ ಬಳಿ; ಎದುರಿನಿಂದ ಆಪಾದಿತ ಚಾಲಕ ಯಶೋಧರ ಬಂಗೇರ ಎಂಬವರು ತನ್ನ ಬಾಬ್ತು KA19 MD 4485 ನೇ ನಂಬ್ರದ ಡಸ್ಟರ್ ಕಾರನ್ನು ಯಾವುದೇ ಸೂಚನೆ ನೀಡದೆ, ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯಲ್ಲಿ ನಿಲ್ಲಿಸಿ; ಬಲಭಾಗದ ಕಾರಿನ ಬಾಗಿಲನ್ನು ತೆರೆದಾಗ ಕಾರಿನ ಬಲಬದಿಯಿಂದ ಮುಂದಕ್ಕೆ ಚಲಾಯಿಸುತ್ತಿದ್ದ ಬೈಕ್ ಸವಾರರಿಗೆ ಕಾರಿನ ತೆರೆದ ಬಲಭಾಗದ ಬಾಗಿಲು ಬಡಿದು ಫಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು,ಎಡಗೈ ತಟ್ಟಿಗೆ ಮೂಳೆಮುರಿತದ ಗಂಭೀರ ತರದ ಗಾಯವಾಗಿ ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

 

7.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: . ದಿನಾಂಕ : 16.09.2014 ರಂದು  16.15 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಶಿರ್ತಾಡಿ ಗ್ರಾಮದ ಮಕ್ಕಿ ಎಂಬಲ್ಲಿ ಟಿಪ್ಪರ್ ನಂಬ್ರ: ಕೆಎ-21-6003 ನೇದನ್ನು, ಅದರ ಚಾಲಕ ಟೋನಿ ಪಾಯ್ಸ್ ಎಂಬವರು ಶಿರ್ತಾಡಿ ಕಡೆಯಿಂದ ಅತೀವೇಗ ಹಾಗೂ ನಿರ್ಲಕತನದಿಂದ ಚಲಾಯಿಸಿ ರಸ್ತೆ ಬದಿಯ ಎರಡೂ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಪಿರ್ಯಾದಿದಾರರ ಸಂಸ್ಥೆ Claiment Benjamine Brass Junior Engineer Mangalore Electricity Supply Company (L)  ಗೆ ರೂ. 41.436/ ರೂಪಾಯಿ ನಷ್ಟ  ಉಂಟು ಮಾಡಿದ್ದಾರೆ.

No comments:

Post a Comment