Friday, September 26, 2014

Durga Prasad Shetty Murder Case: Four Arrested

ಪಾಂಡೇಶ್ವರ ಠಾಣಾ ಪೊಲೀಸರಿಂದ ಎಡಪದವು ದುರ್ಗಾ ಪ್ರಸಾದ್ ಶೆಟ್ಟಿ ಕೊಲೆ ಆರೋಪಿಗಳ  ಬಂಧನ

 

         ಮಂಗಳೂರು ನಗರದ  ವೆಲೆನ್ಶಿಯಾ ಗೋರಿಗುಡ್ಡೆ ರಸ್ತೆಯಲ್ಲಿ   ದಿನಾಂಕ 22-09-2014 ರಂದು ಮಧ್ಯಾಹ್ನ ಸುಮಾರು 2-45 ಗಂಟೆ ಸಮಯಕ್ಕೆ   ಬಡಗ ಎಡಪದವು ಗ್ರಾಮದ ಕುಂದೊಟ್ಟುವಿನ ದುರ್ಗಾ ಪ್ರಸಾದ್ ಶೆಟ್ಟಿ ಎಂಬವರನ್ನು ಮಾರಕಾಯುಧಗಳಿಂದ ಹೊಡೆದು ಗಂಭೀರ ಗಾಯಗೊಂಡವನನ್ನು   ಮಂಗಳೂರು ಯೂನಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ಧಾಖಲಿಸಿದ್ದು ಅಲ್ಲಿ ಅವರು ಚಿಕಿತ್ಸೆ ಯಲ್ಲಿರುವಾಗಲೇ ಮಧ್ಯಾಹ್ನ 03-55 ಗಂಟೆಗೆ ಮೃತಪಟ್ಟಿರುತ್ತಾರೆ ,ಈ ಬಗ್ಗೆ ಜೀವನ್ ಶೆಟ್ಟಿ ಎಂಬವರು  ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣವು  ದಾಖಲಾಗಿರುತ್ತದೆ.

 

    ದಿನಾಂಕ 26-09-2014 ರಂದು ಮಂಗಳೂರು ನಗರದ ನವಭಾರತ ಸರ್ಕಲ್ ಬಳಿಯಲ್ಲಿ ಪ್ರಕರಣದ ಪ್ರಧಾನ ಆರೋಪಿ ಯಾದ ಸಂತೋಷ್ ಕಾರ್ಕಳ @ ಸಂತೋಷ್ ಶೆಟ್ಟಿಗಾರ್ ಎಂಬವನನ್ನು ಮತ್ತು  ಉಡುಪಿಯಲ್ಲಿ ಸಂದೇಶ್ ಕೋಟಿಯಾನ್ , ಪವನ್ ಶೆಟ್ಟಿ,   ಹರ್ಷಿತ್ ಶೆಟ್ಟಿ  ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣಕ್ಕೆ ಸಂಬಂದಿಸಿ ಕೂಲಂಕುಷವಾಗಿ ವಿಚಾರಣೆ ಮಾಡಿದ್ದಲ್ಲಿ ಅವರುಗಳು    ಎಡಪದವಿನ  ದುರ್ಗಾ ಪ್ರಸಾದ್ ಶೆಟ್ಟಿ ಎಂಬವರನ್ನು ವೆಲೆನ್ಶಿಯಾ ಗೋರಿಗುಡ್ಡೆ ರಸ್ತೆಯಲ್ಲಿ ದಿನಾಂಕ 22-09-2014 ರಂದು  ಮಧ್ಯಾಹ್ನ ಸುಮಾರು 2-45 ಗಂಟೆ ಸಮಯಕ್ಕೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ. ಅರೋಪಿಗಳ ವಿಚಾರಣೆ ಮುಂದುವರಿದಿರುತ್ತದೆ. ಈ ಮೇಲಿನ ಎಲ್ಲಾ ಅರೋಪಿಗಳು ಈ ಹಿಂದೆ ಬೇರೆ ಬೇರೆ ಪ್ರಕರಣಗಳಲ್ಲಿ ಒಳಗೊಂಡಿರುವ ಬಗ್ಗೆ ಬೇರೆ ಬೇರೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುತ್ತದೆ.   

 

ಸಂತೋಷ್ ಕಾರ್ಕಳ @ ಸಂತೋಷ್ ಶೆಟ್ಟಿಗಾರ್ (38) ತಂದೆ ದಿ ಗಂಗಾಧರ ವಾಸ ಪಾಂಚಜನ್ಯ ತಂದೊಳಿಗೆ ಜಪ್ಪಿನಮೊಗರು

ಸಂದೇಶ್ ಕೋಟಿಯಾನ್ (21) ತಂದೆ:- ಸಂದೀಪ್ ಕೋಟ್ಯಾನ್ ವಾಸ:- ಪೆಗಸಿಸ್ ಬಳಿ ಎಕ್ಕೂರು ಮಂಗಳೂರು

ಪವನ್ ಶೆಟ್ಟಿ,(20) ತಂದೆ:- ಅನಿಲ್ ಶೆಟ್ಟಿ ವಾಸ:- ಮಾ ಕೀರ್ತಿ ನಿಲಯ ಮೊಗರೋಡಿ ಶಕ್ತಿನಗರ ಮಂಗಳೂರು

ಹರ್ಷಿತ್ ಶೆಟ್ಟಿ (21) ತಂದೆ:- ದಿವಾಕರ ಶೆಟ್ಟಿ ವಾಸ:- ನಿಡ್ಡೆಲ್ ಗೋಕರ್ಣ ಮರೋಳಿ ಮಂಗಳೂರು

 

       ಪತ್ತೆ ಕಾರ್ಯಾಚಾರಣೆ :-

    ಮಾನ್ಯ ಆರ್. ಹಿತೇಂದ್ರ IPS  ಪೊಲೀಸ್ ಆಯುಕ್ತರು, ಮಂಗಳೂರು ನಗರ, ಮಾನ್ಯ ಉಪ ಪೊಲೀಸ್ ಆಯುಕ್ತರುಗಳಾದ ಡಾ| ಕೆ. ವಿ. ಜಗಧೀಶ್, ವಿಷ್ಣುವರ್ಧನ್, ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪವನ್ ನೆಜ್ಜೂರು, ಇವರ  ಮಾರ್ಗದಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ದಿನಕರ್ ಶೆಟ್ಟಿ   ನಗರ ಅಪರಾಧ ಪತ್ತೆ ವಿಭಾಗದ  ಪೊಲೀಸು ನಿರೀಕ್ಷಕರಾದ ವೆಲೆಂಟೈನ್ ಡಿ' ಸೋಜಾ ಹಾಗೂ ಸಿಬ್ಭಂಧಿಗಳು ಮತ್ತು ಮಂಗಳೂರು ದಕ್ಷಿಣ ಪೊಲೀಸ್  ಠಾಣಾ ಕಾನೂನು ಮತ್ತು ಶಿಸ್ತು ವಿಭಾಗದ ಪೊಲೀಸು ಉಪ ನಿರೀಕ್ಷಕರಾದ ಮೊಹಮ್ಮದ್ ಶರೀಫ್, ಅಪರಾಧ ಪತ್ತೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಅನಂತ ಮುರ್ಡೇಶ್ವರ ಹಾಗೂ, ಕೇಶವ ಪರಿವಾರ, ಸುಭಾಶ್ಚಂದ್ರ,  ಜನಾರ್ದನ ಗೌಡ ಸಂತೋಷ್ ಪಡೀಲ್ ,ವಿಶ್ವನಾಥ, ಸತ್ಯನಾರಾಯಣ,  ಗಂಗಾಧರ, ದಾಮೋದರ್ ,  ಜಯಪ್ರಕಾಶ್ , ಪ್ರಕಾಶ್, ಪ್ರದೀಪ್ ಕುಮಾರ್,  ಶರತ್ ಕುಮಾರ್  ಇವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದರು.

No comments:

Post a Comment